Apple ಖಾತೆ ಮತ್ತು ಗೌಪ್ಯತೆ

ನಿಮ್ಮ ಸಾಧನದಲ್ಲಿರುವ ಡೇಟವನ್ನು ನೀವು ಬದಲಾಯಿಸಬೇಕಾದ ಅಥವಾ ರೀಸ್ಟೋರ್ ಮಾಡಬೇಕಾದ ಸಂದರ್ಭದಲ್ಲಿ ಅದನ್ನು ಸ್ವಯಂಚಾಲಿತವಾಗಿ ಬ್ಯಾಕಪ್ ಮಾಡುವ iCloud ಬ್ಯಾಕಪ್ ಸೇರಿದಂತೆ ಇತರೆ Apple ಸೇವೆಗಳನ್ನು ಸಕ್ರಿಯಗೊಳಿಸಲು ನೀವು ಸೈನ್ ಇನ್ ಮಾಡಿದಾಗ ನಿಮ್ಮ Apple ಖಾತೆಯ ಮಾಹಿತಿಯನ್ನು ಬಳಸಲಾಗುತ್ತದೆ. ಸೇವಾ ಕೊಡುಗೆಗಳಿಗೆ ಅರ್ಹತೆಯನ್ನು ಪರಿಶೀಲಿಸಲು ನಿಮ್ಮ ಸಾಧನದ ಕ್ರಮ ಸಂಖ್ಯೆಯನ್ನು ಬಳಸಬಹುದು.
 

ನಿಮ್ಮ ಮಾಹಿತಿಯನ್ನು ಕಾಪಾಡಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎಂಬುದನ್ನು ಆಯ್ಕೆ ಮಾಡಲು ನಿಮಗೆ ಅನುವು ಮಾಡಿಕೊಡಲು Apple ಖಾತೆಯನ್ನು ವಿನ್ಯಾಸಗೊಳಿಸಲಾಗಿದೆ.


Privacy Icon

  • ನಿಮ್ಮ Apple ಖಾತೆಯ ಮೂಲಕ ನೀವು ಸೈನ್ ಇನ್ ಮಾಡಿದಾಗ, ಈ iPhoneನಲ್ಲಿ iCloud, App Store, iMessage ಮತ್ತು ಹುಡುಕಿ ಎಂಬಂತಹ ಸೇವೆಗಳನ್ನು ನೀವು ಸಕ್ರಿಯಗೊಳಿಸುತ್ತೀರಿ.
  • ನಿಮ್ಮ ಸಂಪರ್ಕಗಳು, ಕ್ಯಾಲೆಂಡರ್‌ಗಳು, ಫೋಟೋಗಳು, ಡಾಕ್ಯುಮಂಟ್‌ಗಳು, ಆರೋಗ್ಯ, ಚಟುವಟಿಕೆ ಮತ್ತು ಇತರ ಆ್ಯಪ್ ಡೇಟವನ್ನು ಒಳಗೊಂಡಂತೆ ಕೆಲವು ಡೇಟವನ್ನು ನಿಮ್ಮ ಪರವಾಗಿ ಸಂಗ್ರಹಿಸಲು ಮತ್ತು ಬ್ಯಾಕಪ್ ಮಾಡಲು Appleಗೆ ಕಳುಹಿಸಲಾಗುತ್ತದೆ.
  • ಇದಷ್ಟೇ ಅಲ್ಲದೇ, ನಿಮಗೆ ಉತ್ತಮ ಸೇವೆ ಹಾಗೂ ಬೆಂಬಲವನ್ನು ಒದಗಿಸಲು ನಿಮ್ಮ ಸಾಧನವನ್ನು ನಿಮ್ಮ Apple ಖಾತೆಯ ಜೊತೆಗೆ ಸಂಯೋಜಿಸಲಾಗುತ್ತದೆ.

ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ನಿಮ್ಮ Apple ಖಾತೆ ಮತ್ತು ಎಲ್ಲಾ Apple ಸೇವೆಗಳನ್ನು ಮೂಲದಿಂದ ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅನುಭವವನ್ನು ಉತ್ತಮಗೊಳಿಸಲು ನಮಗೆ ಅಗತ್ಯವಿರುವ ಡೇಟವನ್ನು ಮಾತ್ರ ಸಂಗ್ರಹಿಸಲು ನಾವು ಶ್ರಮಿಸುತ್ತೇವೆ. ನಾವು ಡೇಟವನ್ನು ಸಂಗ್ರಹಿಸಿದಾಗ, ನಾವು ಏನನ್ನು ಸಂಗ್ರಹಿಸುತ್ತೇವೆ ಮತ್ತು ನಮಗೆ ಅದು ಏಕೆ ಬೇಕು ಎಂಬುದನ್ನು ನೀವು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ನಾವು ಭಾವಿಸುತ್ತೇವೆ, ಇದರಿಂದ ನೀವು ವಿವೇಚನಾಪೂರ್ಣ ಆಯ್ಕೆಗಳನ್ನು ಮಾಡಬಹುದು.

Apple ಖಾತೆಯು iCloud, App Store ಮತ್ತು ಇತರ Apple ಆನ್‌ಲೈನ್ ಸ್ಟೋರ್‌ಗಳು, iMessage ಮತ್ತು FaceTimeನಂತಹ Apple ಸೇವೆಗಳನ್ನು ಆ್ಯಕ್ಸೆಸ್ ಮಾಡಲು ಮತ್ತು ನಿಮ್ಮ ಸಾಧನಗಳಾದ್ಯಂತ ಮತ್ತು ವೆಬ್‌ನಲ್ಲಿ ನಿಮ್ಮ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಲು ನೀವು ಬಳಸುವ ವೈಯಕ್ತಿಕ ಖಾತೆಯಾಗಿದೆ. ನಿಮ್ಮ Apple ಖಾತೆಯು ನೀವು ಸೈನ್ ಇನ್ ಮಾಡಲು ಬಳಸುವ ಮಾಹಿತಿಯನ್ನು ಒಳಗೊಂಡಿರುತ್ತದೆ, ಹಾಗೆಯೇ ಎಲ್ಲಾ ಸಂಪರ್ಕ, ಪಾವತಿ ಮತ್ತು ಸುರಕ್ಷತೆ ವಿವರಗಳನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ವಿಶ್ವಾಸಾರ್ಹ ಫೋನ್ ಸಂಖ್ಯೆಗಳು ಅಥವಾ ನೀವು Apple ಸೇವೆಗಳಾದ್ಯಂತ ಬಳಸುವ ಭದ್ರತಾ ಪ್ರಶ್ನೆಗಳು. ನಿಮ್ಮ ಸಾಧನದ ವಾರೆಂಟಿಯ ಸ್ಟೇಟಸ್ ಅನ್ನು ಪ್ರದರ್ಶಿಸುವುದು ಮತ್ತು ನೀವು ಸಾಧನವೊಂದನ್ನು ಸಕ್ರಿಯಗೊಳಿಸಿದಾಗ ಸೇವೆಗೆ ಸಂಬಂಧಿಸಿದ ಆಫರ್‌ಗಳಿಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸುವುದು ಸೇರಿದಂತೆ ನಿಮಗೆ ಉತ್ತಮ ಸೇವೆ ಮತ್ತು ಬೆಂಬಲವನ್ನು ಒದಗಿಸಲು ಮತ್ತು ನಿಮ್ಮ ಸಾಧನದ ಹೆಸರು, ಕ್ರಮ ಸಂಖ್ಯೆ ಮತ್ತು ಇತರ ಹಾರ್ಡ್‌ವೇರ್ ಐಡೆಂಟಿಫೈಯರ್‌ಗಳನ್ನು Apple ಉಳಿಸಿಕೊಳ್ಳುತ್ತದೆ. ನಿಮ್ಮ Apple ಖಾತೆ ಪುಟವಾದ account.apple.com ಎಂಬಲ್ಲಿ ನೀವು ನಿಮ್ಮ Apple ಖಾತೆ ಮಾಹಿತಿಯನ್ನು ಎಡಿಟ್ ಮಾಡಬಹುದು ಹಾಗೂ ನಿಮ್ಮ ಸಾಧನಗಳು ಮತ್ತು ಫೋನ್ ಸಂಖ್ಯೆಗಳ ಪಟ್ಟಿಯನ್ನು ನೋಡಬಹುದು.

ನಿಮ್ಮ Apple ಖಾತೆಯ ಮೂಲಕ ನೀವು ಸೈನ್ ಇನ್ ಮಾಡಿದಾಗ, ನೀವು ಈ iPhoneನಲ್ಲಿ iCloud, App Store, iMessage, FaceTime ಮತ್ತು ಹುಡುಕಿ ಎಂಬಂತಹ ಸೇವೆಗಳನ್ನು ಸಕ್ರಿಯಗೊಳಿಸುತ್ತೀರಿ. ನಿಮ್ಮ ಸಂಯೋಜಿತ ಫೋನ್ ಸಂಖ್ಯೆಯನ್ನು ಒಳಗೊಂಡಂತೆ ನಿಮ್ಮ Apple ಖಾತೆಯ ಮಾಹಿತಿಯನ್ನು ಪ್ರತಿ ಸೇವೆಯ ಜೊತೆಗೆ ಬಳಸಲಾಗುತ್ತದೆ, ಇದು ಆ ಸೇವೆಗಳನ್ನು ನಿರ್ವಹಿಸಲು ಮತ್ತು ಸುಧಾರಿಸಲು ಬಳಸಬಹುದಾದ ಅನಾಲಿಟಿಕ್ಸ್ ಮಾಹಿತಿಯನ್ನು ರಚಿಸುತ್ತದೆ. ಹೆಚ್ಚುವರಿಯಾಗಿ, ನಿಮ್ಮ ಆಯ್ಕೆಮಾಡಿದ ಪ್ರೊಫೈಲ್ ಫೋಟೋ, ನಿಮ್ಮ ಸಂಪರ್ಕಗಳು, ಕ್ಯಾಲೆಂಡರ್‌ಗಳು, ಫೋಟೋಗಳು, ಡಾಕ್ಯುಮಂಟ್‌ಗಳು, ಆರೋಗ್ಯ, ಚಟುವಟಿಕೆ, Safari ಟ್ಯಾಬ್‌ಗಳು ಮತ್ತು ಇತರ ಆ್ಯಪ್ ಡೇಟ ಸೇರಿದಂತೆ ನಿಮ್ಮ ಸಾಧನದಿಂದ ಕೆಲವು ಡೇಟವನ್ನು ನಿಮ್ಮ ಪರವಾಗಿ ಸಂಗ್ರಹಿಸಲು ಮತ್ತು ಬ್ಯಾಕಪ್ ಮಾಡಲು Appleಗೆ ಕಳುಹಿಸಲಾಗುತ್ತದೆ.

ನಿಮ್ಮ ಸಾಧನವು ಇರುವ ದೇಶ ಅಥವಾ ಪ್ರದೇಶವನ್ನು ಆಧರಿಸಿ ಕಾನೂನುಬದ್ಧವಾಗಿ ಅಗತ್ಯವಿರುವ ಕೆಲವು ಫೀಚರ್‌ಗಳು ಮತ್ತು ಸೇವೆಗಳಿಗೆ ನಿಮ್ಮ ಸಾಧನ ಅರ್ಹವಾಗಿದೆಯೇ ಎಂಬುದನ್ನು ನಿರ್ಧರಿಸಲು Apple ನಿಮ್ಮ Apple ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುತ್ತದೆ. ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾದ ನೀವು ಇನ್‌ಸ್ಟಾಲ್ ಮಾಡುವ ಆ್ಯಪ್‌ಗಳ ಕುರಿತು, ನೀವು ಅವುಗಳನ್ನು ಎಲ್ಲಿ ಇನ್‌ಸ್ಟಾಲ್ ಮಾಡುತ್ತೀರಿ (ಉದಾಹರಣೆಗೆ, ವೆಬ್‌ಸೈಟ್ ಅಥವಾ ಆ್ಯಪ್ ಮಾರ್ಕೆಟ್‌ಪ್ಲೇಸ್) ಎಂಬುದನ್ನು ಒಳಗೊಂಡ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ, ಈ ಮಾಹಿತಿಯನ್ನು ಲೆಕ್ಕಪತ್ರ ನಿರ್ವಹಣೆ, ವರದಿ ಮಾಡುವಿಕೆ, ಅನಾಲಿಟಿಕ್ಸ್ ಮತ್ತು ವಂಚನೆ ಪತ್ತೆ ಉದ್ದೇಶಗಳಿಗಾಗಿ, ಈ ಕಾನೂನಾತ್ಮಕವಾಗಿ ಅಗತ್ಯವಿರುವ ಫೀಚರ್‌ಗಳು ಮತ್ತು ಸೇವೆಗಳ ಸಕ್ರಿಯಗೊಳಿಸುವಿಕೆಗೆ ಸಂಬಂಧಿಸಿದಂತೆ ಸಂಗ್ರಹಿಸಲಾಗುತ್ತದೆ. ಹೆಚ್ಚುವರಿಯಾಗಿ, ಕೆಲವು ಸಂದರ್ಭಗಳಲ್ಲಿ ನಿಮ್ಮ ಗೌಪ್ಯತೆಯ ಹಕ್ಕುಗಳ ಕುರಿತಾದ ವಯಸ್ಸಿಗೆ ಸೂಕ್ತವಾದ ಮಾಹಿತಿಯನ್ನು ಒದಗಿಸುವುದು ಸೇರಿದಂತೆ ನಮ್ಮ ಬಾಧ್ಯತೆಗಳನ್ನು ಅನುಸರಿಸುವುದಕ್ಕಾಗಿ ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾದ ವಯಸ್ಸನ್ನು ನಾವು ಬಳಸುತ್ತೇವೆ.

ಕೆಲವು ದೇಶಗಳು ಅಥವಾ ಪ್ರದೇಶಗಳಲ್ಲಿ ನೀವು ವಯಸ್ಕರೇ ಎಂಬುದನ್ನು ಖಚಿತಪಡಿಸಲು ಕ್ರೆಡಿಟ್ ಕಾರ್ಡ್ ಅಥವಾ ಸರ್ಕಾರ ಒದಗಿಸುವ ಗುರುತಿನ ಚೀಟಿಯಂತಹ ಹೆಚ್ಚುವರಿ ಮಾಹಿತಿಯನ್ನು ನೀವು ಒದಗಿಸಬೇಕಾಗಬಹುದು. ನೀವು ಈ ಅವಶ್ಯಕತೆಗಳಿರುವ ದೇಶ ಅಥವಾ ಪ್ರದೇಶದಲ್ಲಿದ್ದೀರಾ ಎಂಬುದನ್ನು ನಿರ್ಧರಿಸಲು, ನಾವು ಖಾತೆಯ ಮಾಹಿತಿ ಮತ್ತು ಆನ್-ಡಿವೈಸ್ ತಂತ್ರಜ್ಞಾನದ ಸಂಯೋಜನೆಯನ್ನು ಬಳಸುತ್ತೇವೆ ಮತ್ತು ಕೆಲವು ಸಂದರ್ಭಗಳಲ್ಲಿ, ನಿಮ್ಮ ಇಂಟರ್ನೆಟ್ ಕನೆಕ್ಷನ್‌ನ IP ವಿಳಾಸವನ್ನು ಬಳಸುತ್ತೇವೆ. App Storeನಲ್ಲಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವುದು, ವೆಬ್ ಕಂಟೆಂಟ್ ಫಿಲ್ಟರ್‌ಗಳು ಮತ್ತು ಸಂವಹನಗಳ ಸುರಕ್ಷತೆಯಂತಹ ಆನ್‌ಲೈನ್ ಸುರಕ್ಷತೆಯ ಫೀಚರ್‌ಗಳನ್ನು ನಿಷ್ಕ್ರಿಯಗೊಳಿಸುವುದು ಮತ್ತು ಅಪ್ರಾಪ್ತ ವಯಸ್ಕರಿಗಾಗಿ Apple ಖಾತೆಯನ್ನು ರಚಿಸುವಂತಹ ಕೆಲವು ಕ್ರಿಯೆಗಳನ್ನು ಮಾಡುವುದಕ್ಕೆ ನಿಮಗೆ ಅನುಮತಿಸಲು ಕಾನೂನುಬದ್ಧವಾಗಿ ಅಗತ್ಯವಿರುವಲ್ಲಿ ನಾವು ಹೆಚ್ಚುವರಿ ವಯಸ್ಸಿನ ದೃಢೀಕರಣದ ಮಾಹಿತಿಯನ್ನು ವಿನಂತಿಸುತ್ತೇವೆ. ನೀವು ನಿಮ್ಮ ಸರ್ಕಾರದಿಂದ ನೀಡಲಾದ IDಯ ಚಿತ್ರವನ್ನು ಸಲ್ಲಿಸಿದಾಗ, ನೀವು ವಯಸ್ಕರು ಎಂಬುದನ್ನು ದೃಢೀಕರಿಸಲು ಮತ್ತು ವಂಚನೆಯನ್ನು ತಡೆಯಲು Apple ಮತ್ತು ಅದರ ಸೇವಾ ಪೂರೈಕೆದಾರರು ನಿಮ್ಮ IDಯ ಚಿತ್ರ ಮತ್ತು ನಿಮ್ಮ Apple ಖಾತೆಯ ಮಾಹಿತಿಯನ್ನು ಬಳಸುತ್ತಾರೆ. ಮೌಲ್ಯಮಾಪನವನ್ನು ಪೂರ್ಣಗೊಳಿಸಲು Appleನ ಸೇವಾ ಪೂರೈಕೆದಾರರು ಚಿತ್ರವನ್ನು ಅಲ್ಪಾವಧಿಯವರೆಗೆ ಇಟ್ಟುಕೊಳ್ಳುತ್ತಾರೆ, ಅದರ ನಂತರ ಚಿತ್ರವನ್ನು ಡಿಲೀಟ್ ಮಾಡಲಾಗುತ್ತದೆ. ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿರುವ ವಯಸ್ಸಿನ ದೃಢೀಕರಣದ ಮಾಹಿತಿಗೆ ಸಂಬಂಧಿಸಿದ ದಿನಾಂಕ, ವಿಧಾನ ಮತ್ತು ದೇಶ ಅಥವಾ ಪ್ರದೇಶದ ಮಾಹಿತಿಯನ್ನು Apple ಸಂಗ್ರಹಿಸುತ್ತದೆ. ನೀವು IDಯನ್ನು ಒದಗಿಸಿದಾಗ, ವಂಚನೆಯನ್ನು ತಡೆಗಟ್ಟುವ ಮತ್ತು ಪತ್ತೆಹಚ್ಚುವ ಉದ್ದೇಶಗಳಿಗಾಗಿ ನಾವು ಆ ಡಾಕ್ಯುಮಂಟ್‌ನಲ್ಲಿನ ನಿರ್ದಿಷ್ಟ ಮಾಹಿತಿಯ ಒನ್-ವೇ ಹ್ಯಾಶ್ ಅನ್ನು ಸೀಮಿತ ಅವಧಿಯವರೆಗೆ ಸಂಗ್ರಹಿಸುತ್ತೇವೆ. ಖರೀದಿಗಳಿಗಾಗಿ ಅಥವಾ ವಾಲೆಟ್ ಆ್ಯಪ್‌ನಲ್ಲಿ ಡಿಜಿಟಲ್ ರುಜುವಾತುಗಳನ್ನು ಬಳಸುವಂತಹ ಇತರ ಉದ್ದೇಶಗಳಿಗಾಗಿ ನೀವು ಕ್ರೆಡಿಟ್ ಕಾರ್ಡ್ ಅಥವಾ ID ಡಾಕ್ಯುಮಂಟ್ ಅನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಆಯ್ಕೆಮಾಡದ ಹೊರತು ನಾವು ಅದನ್ನು ಸಂಗ್ರಹಿಸುವುದಿಲ್ಲ.

iCloud ಮತ್ತು ಗೌಪ್ಯತೆ

iCloudಗೆ ಸೈನ್-ಇನ್ ಮಾಡಲಾಗುತ್ತಿದೆ
ನೀವು iCloud ಅನ್ನು ಬಳಸುವಾಗ, ನಿಮ್ಮ ಸಾಧನದಲ್ಲಿ ನೀವು ಸಂಗ್ರಹಿಸುವ ಕೆಲವು ಡೇಟವನ್ನು ಸ್ವಯಂಚಾಲಿತವಾಗಿ Appleಗೆ ಕಳುಹಿಸಲಾಗುತ್ತದೆ ಮತ್ತು ಸಂಗ್ರಹಿಸಲಾಗುತ್ತದೆ. ನಿಮ್ಮ ಎಲ್ಲಾ iCloud-ಸಕ್ರಿಯಗೊಳಿಸಿದ ಸಾಧನಗಳು ಅಥವಾ ಕಂಪ್ಯೂಟರ್‌ಗಳಲ್ಲಿ (“ಸಾಧನಗಳು”) ಸ್ವಯಂಚಾಲಿತವಾಗಿ ನಿಮ್ಮ ಡೇಟವನ್ನು ಆ್ಯಕ್ಸೆಸ್ ಮಾಡಲು ಇದು ನಿಮಗೆ ಅವಕಾಶ ನೀಡುತ್ತದೆ. ಈ ಡೇಟ ಇವುಗಳನ್ನು ಒಳಗೊಂಡಿರಬಹುದು:

  • ಸಂಪರ್ಕ
  • ಕ್ಯಾಲೆಂಡರ್‌‌‌ಗಳು
  • ರಿಮೈಂಡರ್ಸ್
  • ಬುಕ್‌ಮಾರ್ಕ್‌ಗಳು
  • Safari ಟ್ಯಾಬ್‌ಗಳು
  • ಆರೋಗ್ಯ ಮಾಹಿತಿ
  • ಮನೆ ಡೇಟ
  • ಟಿಪ್ಪಣಿ
  • Freeform
  • ಫೋಟೋಸ್
  • Apple Vision Pro ಆ್ಯಪ್
  • ಡಾಕ್ಯುಮಂಟ್‌ಗಳು
  • ವಾಲೆಟ್ ಡೇಟ
  • ಕೀಚೇನ್ ಮತ್ತು ಪಾಸ್‌ವರ್ಡ್‌ಗಳು
  • ನಿಮ್ಮ ಸಾಧನದಲ್ಲಿರುವ ಫೋನ್ ಸಂಖ್ಯೆ
  • ಸಾಧನ ಮತ್ತು ಖಾತೆ ಸೆಟ್ಟಿಂಗ್ಸ್
  • iCloud ಅನ್ನು ಬಳಸುವ ಇತರ Apple ಆ್ಯಪ್‌ಗಳಿಂದ ಪಡೆದ ಡೇಟ
  • iCloud ಅನ್ನು ಬಳಸುವ ಥರ್ಡ್-ಪಾರ್ಟಿ ಆ್ಯಪ್‌ಗಳಿಂದ ಪಡೆದ ಡೇಟ

ನಿಮ್ಮ ಸಾಧನವನ್ನು ಬದಲಾಯಿಸಬೇಕಿದ್ದರೆ ಅಥವಾ ಅದನ್ನು ರಿಸ್ಟೋರ್ ಮಾಡಬೇಕಿದ್ದರೆ, ಡೇಟದ ಪ್ರಸ್ತುತ ಬ್ಯಾಕಪ್ ಅನ್ನು ನೀವು ಹೊಂದಿರುವಿರಿ ಎಂದು ಖಚಿತಪಡಿಸಿಕೊಳ್ಳಲು ಸಹಾಯಕ್ಕಾಗಿ iCloud ಬ್ಯಾಕಪ್ ಅನ್ನು ಸಹ ಸಕ್ರಿಯಗೊಳಿಸಲಾಗಿದೆ.

ಯಾವ iCloud ಫೀಚರ್‌ಗಳನ್ನು ಸಕ್ರಿಯಗೊಳಿಸಲಾಗುತ್ತದೆ ಮತ್ತು iCloudಗೆ ಯಾವ ಡೇಟವನ್ನು ಕಳುಹಿಸಲಾಗುತ್ತದೆ ಎಂಬುದನ್ನು ನಿಮ್ಮ ಸಾಧನದಲ್ಲಿನ ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ ನೀವು ಯಾವುದೇ ಸಮಯದಲ್ಲಿ ಅಡ್ಜಸ್ಟ್ ಮಾಡಬಹುದು.

iCloud ಡೇಟ ಭದ್ರತೆ
iCloud ನಿಮ್ಮ ಮಾಹಿತಿಯು ಟ್ರಾನ್ಸಿಟ್‌ನಲ್ಲಿರುವಾಗ ಅದನ್ನು ಎನ್‌ಕ್ರಿಪ್ಟ್ ಮಾಡುವ ಮೂಲಕ, ಎನ್‌ಕ್ರಿಪ್ಟ್ ಮಾಡಿದ ಫಾರ್ಮ್ಯಾಟ್‌ನಲ್ಲಿ iCloudನಲ್ಲಿ ಸಂಗ್ರಹಿಸುವ ಮೂಲಕ ಮತ್ತು ದೃಢೀಕರಣಕ್ಕಾಗಿ ಸುರಕ್ಷಿತ ಟೋಕನ್‌ಗಳನ್ನು ಬಳಸುವ ಮೂಲಕ ರಕ್ಷಿಸುತ್ತದೆ. ನಿರ್ದಿಷ್ಟ ಮಾಹಿತಿಗಾಗಿ, ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು Apple ಬಳಸುತ್ತದೆ. ಇದರರ್ಥ, ವಿನ್ಯಾಸದ ಪ್ರಕಾರ, ಈ ಮಾಹಿತಿಯನ್ನು ನೀವು ಮಾತ್ರ ಮತ್ತು ನೀವು iCloudಗೆ ಸೈನ್ ಇನ್ ಮಾಡಿರುವ ಸಾಧನಗಳಲ್ಲಿ ಮಾತ್ರ ಆ್ಯಕ್ಸೆಸ್ ಮಾಡಬಹುದು. Apple ಸೇರಿದಂತೆ ಬೇರೆ ಯಾರಿಗೂ, ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಮಾಹಿತಿಯನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಾಗುವುದಿಲ್ಲ. iCloud ಡೇಟ ಭದ್ರತೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, support.apple.com/en-in/102651 ಎಂಬಲ್ಲಿಗೆ ಭೇಟಿ ನೀಡಿ.

ನಿಮ್ಮ ಡೇಟವನ್ನು ಸಂಗ್ರಹಿಸಲು ಮತ್ತು ಪ್ರಕ್ರಿಯೆಗೊಳಿಸಲು Apple ಮತ್ತು ಥರ್ಡ್ ಪಾರ್ಟಿ ಡೇಟ ಸೆಂಟರ್‌ಗಳನ್ನು ಬಳಸಬಹುದು. ಥರ್ಡ್ ಪಾರ್ಟಿಯ ಡೇಟ ಸೆಂಟರ್‌ನಲ್ಲಿ ಸಂಗ್ರಹಿಸಲಾದ ಡೇಟವನ್ನು ಪ್ರಕ್ರಿಯೆಗೊಳಿಸುವಾಗ, ಎನ್‌ಕ್ರಿಪ್ಶನ್‌ ಕೀಗಳನ್ನು ಸುರಕ್ಷಿತ ಸರ್ವರ್‌ಗಳಲ್ಲಿ ರನ್ ಆಗುತ್ತಿರುವ Apple ಸಾಫ್ಟ್‌ವೇರ್‌ನಿಂದ ಮಾತ್ರ ಆ್ಯಕ್ಸೆಸ್ ಮಾಡಲಾಗುತ್ತದೆ ಮತ್ತು ಅಗತ್ಯ ಪ್ರಕ್ರಿಯೆಯನ್ನು ನಡೆಸುವಾಗ ಮಾತ್ರ ಇದನ್ನು ಮಾಡಲು ಸಾಧ್ಯವಾಗುತ್ತದೆ.

iCloud ಕೀಚೇನ್
iCloud ಕೀಚೇನ್ ನಿಮ್ಮ Safari ವೆಬ್‌ಸೈಟ್ ಯೂಸರ್‌ನೇಮ್‌ಗಳು ಮತ್ತು ಪಾಸ್‌ವರ್ಡ್‌ಗಳು, ಕ್ರೆಡಿಟ್ ಕಾರ್ಡ್ ಮಾಹಿತಿ ಮತ್ತು Wi-Fi ನೆಟ್‌ವರ್ಕ್ ಮಾಹಿತಿಯನ್ನು ಅಪ್ ಟು ಡೇಟ್ ಆಗಿರಿಸುತ್ತದೆ ಮತ್ತು ಅವುಗಳನ್ನು ನಿಮ್ಮ ಎಲ್ಲಾ ಸಾಧನಗಳಲ್ಲಿ ಲಭ್ಯವಾಗಿಸುತ್ತದೆ. ಅದು Mail, ಸಂಪರ್ಕ, ಕ್ಯಾಲೆಂಡರ್, ಸಂದೇಶ, Facebook, X, LinkedIn ಮತ್ತು ಇತರೆ ಇಂಟರ್ನೆಟ್ ಖಾತೆಗಳಿಗಾಗಿ ನೀವು ಬಳಸುವ ಖಾತೆಯ ಮಾಹಿತಿಯನ್ನು ಸಂಗ್ರಹಿಸಬಹುದು ಮತ್ತು ಈ ಮಾಹಿತಿಯನ್ನು ನಿಮ್ಮ ಎಲ್ಲಾ ಸಾಧನಗಳಿಗೆ ಸ್ವಯಂಚಾಲಿತವಾಗಿ ಸೇರಿಸಬಹುದು.

iCloud ಕೀಚೇನ್ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಬಳಸುತ್ತದೆ ಮತ್ತು ಈ ಮಾಹಿತಿಯನ್ನು ನೀವು ಮಾತ್ರ ಮತ್ತು ನೀವು iCloudಗೆ ಸೈನ್ ಇನ್ ಮಾಡಿರುವ ಸಾಧನಗಳಲ್ಲಿ ಮಾತ್ರ ಆ್ಯಕ್ಸೆಸ್ ಮಾಡುವ ರೀತಿಯಲ್ಲಿ ಅದನ್ನು ವಿನ್ಯಾಸಗೊಳಿಸಲಾಗಿದೆ. ನಿಮ್ಮ iCloud ಕೀಚೇನ್ ಡೇಟವನ್ನು, Apple ಸೇರಿದಂತೆ ಬೇರೆ ಯಾರಿಗೂ ಆ್ಯಕ್ಸೆಸ್ ಮಾಡಲು ಸಾಧ್ಯವಿಲ್ಲ. ನೀವು ಯಾವುದೇ ಸಮಯದಲ್ಲಿ ನಿಮ್ಮ iCloud ಸೆಟ್ಟಿಂಗ್ಸ್‌ನಲ್ಲಿ iCloud ಕೀಚೇನ್ ಅನ್ನು ಆಫ್ ಮಾಡಲು ಆಯ್ಕೆ ಮಾಡಬಹುದು.

iCloud ಬ್ಯಾಕಪ್
ನೀವು iCloud ಬ್ಯಾಕಪ್ ಅನ್ನು ಬಳಸಿದಾಗ, ನಿಮ್ಮ ಬ್ಯಾಕಪ್ ಫೋಟೋಗಳು, ವೀಡಿಯೊಗಳು, ಸಂದೇಶಗಳು (iMessage, SMS ಮತ್ತು MMS), ಆರೋಗ್ಯ ಆ್ಯಪ್ ಮತ್ತು ಇತರ ಆ್ಯಪ್ ಡೇಟ, ಸ್ಥಳ ಸೆಟ್ಟಿಂಗ್ಸ್ (ನೀವು ಸೆಟಪ್ ಮಾಡಿರುವ ಸ್ಥಳ-ಆಧಾರಿತ ರಿಮೈಂಡರ್‌ಗಳು), ವಿಷುವಲ್ ವಾಯ್ಸ್‌ಮೇಲ್, ಸಾಧನ ಸೆಟ್ಟಿಂಗ್ಸ್, ಸಾಧನದ ಗುಣಲಕ್ಷಣಗಳು ಮತ್ತು ನಿಮ್ಮ ಸೆಟ್ಟಿಂಗ್ಸ್ ಆಧರಿಸಿದ ನಿಮ್ಮ iOS ಅಥವಾ iPadOS ಸಾಧನದಲ್ಲಿನ ಇತರ ಡೇಟವನ್ನು ಒಳಗೊಂಡಿರಬಹುದು.

ನಿರ್ದಿಷ್ಟ ಆ್ಯಪ್‌ಗಾಗಿ iCloud ನಿಮ್ಮ ಆ್ಯಪ್ ಡೇಟವನ್ನು ಬ್ಯಾಕಪ್‌ ಮಾಡುವುದನ್ನು ನಿಲ್ಲಿಸಲು, ಸೆಟ್ಟಿಂಗ್ಸ್ > [ನಿಮ್ಮ ಹೆಸರು] > iCloud > ಸಂಗ್ರಹಣೆ > ಬ್ಯಾಕಪ್‌ಗಳು ಎಂಬಲ್ಲಿಗೆ ಹೋಗಿ, ಬ್ಯಾಕಪ್‌ಗಳು ವಿಭಾಗದಲ್ಲಿ ನಿಮ್ಮ iOS ಅಥವಾ iPadOS ಸಾಧನವನ್ನು ಆಯ್ಕೆಮಾಡುವ ಮೂಲಕ, ನೀವು ಬ್ಯಾಕಪ್‌ಗಳನ್ನು ನಿಷ್ಕ್ರಿಯಗೊಳಿಸಲು ಬಯಸುವ ಆ್ಯಪ್‌ಗಳನ್ನು ಟ್ಯಾಪ್ ಮಾಡಿ ಆಫ್ ಮಾಡಬಹುದು.

ನೀವು iCloud ಸೆಟ್ಟಿಂಗ್ಸ್‌ನಲ್ಲಿ ಸಂಪೂರ್ಣವಾಗಿ iCloud ಬ್ಯಾಕಪ್ ಅನ್ನು ಆಫ್ ಮಾಡಬಹುದು ಮತ್ತು ನಿಮ್ಮ ಕಂಪ್ಯೂಟರ್‌ಗೆ ನಿಮ್ಮ iOS ಅಥವಾ iPadOS ಸಾಧನವನ್ನು ಬ್ಯಾಕಪ್ ಮಾಡಲು Finder (macOS Catalina 10.15 ಅಥವಾ ನಂತರದ ಆವೃತ್ತಿ) ಅಥವಾ iTunes (macOS Mojave 10.14 ಅಥವಾ ಹಿಂದಿನ ಆವೃತ್ತಿ) ಬಳಸಬಹುದು. ನಿಮ್ಮ ಬ್ಯಾಕಪ್ ಡೇಟವನ್ನು iCloudನಿಂದ ಸಂಪೂರ್ಣವಾಗಿ ತೆಗೆದುಹಾಕಲು, iCloud ಬ್ಯಾಕಪ್ ಅನ್ನು ಆಫ್ ಮಾಡುವ ಮೊದಲು ನಿಮ್ಮ ವೈಯಕ್ತಿಕ ಬ್ಯಾಕಪ್‌ಗಳನ್ನು ನೀವು ಡಿಲೀಟ್ ಮಾಡಬಹುದು. ಇಲ್ಲದಿದ್ದರೆ, ಬ್ಯಾಕಪ್ ಡೇಟವನ್ನು 180 ದಿನಗಳವರೆಗೆ ಉಳಿಸಿಕೊಳ್ಳಲಾಗುತ್ತದೆ.

iCloud ಜೊತೆಗೆ ಡೇಟವನ್ನು ಹಂಚಿಕೊಳ್ಳುವುದು
ಟಿಪ್ಪಣಿ, Pages, Numbers, Keynote, Freeform ಮತ್ತು ಕೆಲವು ಥರ್ಡ್ ಪಾರ್ಟಿ ಆ್ಯಪ್‌ಗಳಲ್ಲಿ ಫೈಲ್‌ಗಳನ್ನು ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಹಂಚಿಕೊಳ್ಳಲು ನೀವು iCloud ಬಳಸಿದರೆ, ಹಂಚಿಕೊಂಡ ಫೈಲ್ ಅನ್ನು Apple ಸಂಗ್ರಹಿಸುತ್ತದೆ ಮತ್ತು ಅದಕ್ಕೆ ಆ್ಯಕ್ಸೆಸ್ ಹೊಂದಿರುತ್ತದೆ. ನಿಮ್ಮ ಖಾತೆಯೊಂದಿಗೆ ಸಂಯೋಜಿತವಾಗಿರುವ ಮೊದಲ ಮತ್ತು ಕೊನೆಯ ಹೆಸರು (ಅನ್ವಯವಾಗುವುದಾದರೆ), ನಿಮ್ಮ ಸಾಧನದಲ್ಲಿನ ಫೋನ್ ಸಂಖ್ಯೆ ಮತ್ತು ಫೈಲ್ ಹೆಸರು, ನೀವು ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಹಂಚಿಕೊಂಡಿದ್ದರೂ, ಹಂಚಿಕೊಳ್ಳುವಿಕೆ ಲಿಂಕ್‌ಗೆ ಆ್ಯಕ್ಸೆಸ್ ಅನ್ನು ಹೊಂದಿರುವ ಯಾರಿಗಾದರೂ ಲಭ್ಯವಿರುತ್ತದೆ. ಖಾಸಗಿ ಹಂಚಿಕೊಳ್ಳುವಿಕೆಗೆ ಆಹ್ವಾನಿಸದಿರದ ಮತ್ತು ಅದನ್ನು ಸ್ವೀಕರಿಸದ ಯಾರಿಗಾದರೂ ಖಾಸಗಿ ಹಂಚಿಕೊಳ್ಳುವಿಕೆಯಲ್ಲಿ ಭಾಗವಹಿಸುವವರ ಐಡೆಂಟಿಫೈಯರ್‌ಗಳು ಲಭ್ಯವಾಗುವುದಿಲ್ಲ.

ನೀವು ಹಂಚಿಕೊಂಡ ಲೈಬ್ರರಿಯನ್ನು ರಚಿಸಿದರೆ ಅಥವಾ ಅದಕ್ಕೆ ಸೇರಿಕೊಂಡರೆ, ಎಲ್ಲಾ ಭಾಗವಹಿಸುವವರು iCloud ಮೂಲಕ ಹಂಚಿಕೊಂಡ ಲೈಬ್ರರಿಯಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಸೇರಿಸಬಹುದು, ಎಡಿಟ್ ಮಾಡಬಹುದು ಅಥವಾ ಡಿಲೀಟ್ ಮಾಡಬಹುದು. ಹಸ್ತಚಾಲಿತ ಅಥವಾ ಸ್ವಯಂಚಾಲಿತ ಹಂಚಿಕೊಳ್ಳುವಿಕೆ ಸೇರಿದಂತೆ ಹಂಚಿಕೊಂಡ ಲೈಬ್ರರಿಗೆ ಕಂಟೆಂಟ್ ಅನ್ನು ಸೇರಿಸಲು ಹಲವಾರು ವಿಧಾನಗಳಿವೆ. ನಿಮ್ಮ iOS ಅಥವಾ iPadOS ಸಾಧನದಲ್ಲಿ, ಸೆಟ್ಟಿಂಗ್ಸ್ > ಫೋಟೋಸ್ > ಹಂಚಿಕೊಂಡ ಲೈಬ್ರರಿ > ಕ್ಯಾಮರಾದಿಂದ ಹಂಚಿಕೊಳ್ಳಿ ಎಂಬಲ್ಲಿಗೆ ಹೋಗುವ ಮೂಲಕ ನೀವು ಕಂಟೆಂಟ್ ಅನ್ನು ಹೇಗೆ ಹಂಚಿಕೊಳ್ಳಲು ಬಯಸುತ್ತೀರಿ ಎಂಬುದನ್ನು ನೀವು ನಿಯಂತ್ರಿಸಬಹುದು.

iCloud ಮತ್ತು ಆ್ಯಪ್‌ಗಳು
ಕೆಲವು ಆ್ಯಪ್‌ಗಳು ನೀವು ಆ್ಯಪ್‌ಗೆ ಒದಗಿಸುವ ಡೇಟ ಮತ್ತು ಕಂಟೆಂಟ್ ಅನ್ನು ಸಂಗ್ರಹಿಸಲು iCloud ಅನ್ನು ಬಳಸುತ್ತವೆ, ಇದರಿಂದ ನಿಮ್ಮ ಎಲ್ಲಾ iCloud-ಸಕ್ರಿಯಗೊಳಿಸಿದ ಸಾಧನಗಳಲ್ಲಿ ನೀವು ಡೇಟವನ್ನು ಆ್ಯಕ್ಸೆಸ್ ಮಾಡಬಹುದು. iCloudನಲ್ಲಿ ನಿಮ್ಮ ಕೆಲವು ಅಥವಾ ಎಲ್ಲಾ ಡೇಟವನ್ನು ಸಂಗ್ರಹಿಸಲು ಆ್ಯಪ್ ಆಯ್ಕೆ ಮಾಡಬಹುದು. ಥರ್ಡ್ ಪಾರ್ಟಿ ಆ್ಯಪ್‌ಗಳು ನಿಮ್ಮನ್ನು ಹುಡುಕಲು ವಿನಂತಿಸಬಹುದು, ಇದರಿಂದ ಆ ಅಪ್ಲಿಕೇಶನ್‌ನ ಇತರ ಬಳಕೆದಾರರು Apple ಖಾತೆಯನ್ನು ಬಳಸಿ ಹುಡುಕಿದಾಗ ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನೋಡಬಹುದು.

iCloudಗೆ ಆ್ಯಕ್ಸೆಸ್ ಅನ್ನು ಆಫ್ ಮಾಡುವ ಮೂಲಕ ಒಂದು ಆ್ಯಪ್ iCloudನಲ್ಲಿ ಡೇಟವನ್ನು ಸಂಗ್ರಹಿಸುವುದನ್ನು ನೀವು ನಿಲ್ಲಿಸಬಹುದು. ಇದನ್ನು ಮಾಡಲು, ಸೆಟ್ಟಿಂಗ್ಸ್ > [ನಿಮ್ಮ ಹೆಸರು] > iCloudಗೆ ಹೋಗಿ ಮತ್ತು ಪಟ್ಟಿಯಲ್ಲಿ ಗೋಚರಿಸುವ ಆ್ಯಪ್‌ಗಳನ್ನು ಆಫ್ ಮಾಡಲು ಟ್ಯಾಪ್ ಮಾಡಿ.

iCloud ಅಗತ್ಯವಿರುವ Apple ಸೇವೆಗಳು
Apple Pay, ಚಟುವಟಿಕೆ ಹಂಚಿಕೊಳ್ಳುವಿಕೆ, ಹೋಮ್, Handoff, ಯುನಿವರ್ಸಲ್ ಕ್ಲಿಪ್‌ಬೋರ್ಡ್ ಮತ್ತು Apple Watch ಮೂಲಕ ಅನ್‌ಲಾಕ್ ಮಾಡುವಂತಹ Apple ಸೇವೆಗಳನ್ನು ಬಳಸಲು, ನೀವು ನಿಮ್ಮ ಸಾಧನದಲ್ಲಿ iCloudಗೆ ಸೈನ್ ಇನ್ ಆಗಿರಬೇಕು. ಮನೆ ಆ್ಯಪ್‌ನಲ್ಲಿ ಸುರಕ್ಷಿತ ಕ್ಯಾಮರಾ ರೆಕಾರ್ಡಿಂಗ್ ಅನ್ನು ಸೆಟಪ್ ಮಾಡಲು ಮತ್ತು ಬಳಸಲು ನಿಮ್ಮ ಅರ್ಹತೆಯನ್ನು ಪರಿಶೀಲಿಸುವುದಕ್ಕಾಗಿ Apple ನಿಮ್ಮ iCloud ಪ್ಲಾನ್ ಅನ್ನು ಬಳಸುತ್ತದೆ. ನಿಮ್ಮ ಕ್ಯಾಮರಾ ರೆಕಾರ್ಡಿಂಗ್‌ಗಳ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಲು Appleಗೆ ಸಾಧ್ಯವಾಗುವುದಿಲ್ಲ. ನೀವು ಎಲ್ಲಾ iCloud ಫೀಚರ್‌ಗಳನ್ನು ಬಳಸುವ ಅಗತ್ಯವಿಲ್ಲ ಮತ್ತು ನಿಮ್ಮ ಸಾಧನದಲ್ಲಿನ iCloud ಸೆಟ್ಟಿಂಗ್ಸ್‌ನಲ್ಲಿ ನೀವು ಬಳಸಲು ಬಯಸದ ಯಾವುದೇ iCloud ಫೀಚರ್‌ಗಳನ್ನು ಆಫ್ ಮಾಡಬಹುದು.

iCloudನಿಂದ ಸೈನ್ ಔಟ್ ಮಾಡಲಾಗುತ್ತಿದೆ
ನಿಮ್ಮ iOS ಅಥವಾ iPadOS ಸಾಧನ ಮತ್ತು ಯಾವುದೇ ಪೇರ್ ಮಾಡಲಾದ Apple Watchನಲ್ಲಿ iCloud ಬಳಸುವುದನ್ನು ನಿಲ್ಲಿಸಲು ನೀವು ಬಯಸಿದರೆ, ನೀವು ಸೆಟ್ಟಿಂಗ್ಸ್ > [ನಿಮ್ಮ ಹೆಸರು] ಎಂಬಲ್ಲಿಗೆ ಹೋಗಿ ಮತ್ತು ಸೈನ್ ಔಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡುವ ಮೂಲಕ iCloudನಿಂದ ಸೈನ್ ಔಟ್ ಮಾಡಬಹುದು. ನಿಮ್ಮ Macನಲ್ಲಿ iCloud ಬಳಸುವುದನ್ನು ನಿಲ್ಲಿಸಲು, ಸಿಸ್ಟಂ ಸೆಟ್ಟಿಂಗ್ಸ್ > [ನಿಮ್ಮ ಹೆಸರು] ಎಂಬಲ್ಲಿಗೆ ಹೋಗಿ ಮತ್ತು ಸೈನ್ ಔಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ. ನಿಮ್ಮ Apple ಖಾತೆಯ ಪಾಸ್‌ವರ್ಡ್ ಅಗತ್ಯವಿರಬಹುದು.

ನಿಮ್ಮೊಂದಿಗೆ ಸಂವಹನ ನಡೆಸುವುದು

Apple ನೀವು ಹೊಂದಿರುವ Apple ಉತ್ನನ್ನಗಳು, ನೀವು ಡೌನ್‌ಲೋಡ್ ಮಾಡುವ ಆ್ಯಪ್‌ಗಳು, ನಿಮ್ಮ ಖಾತೆಗೆ ನೋಂದಾಯಿಸಲಾಗಿರುವ ಸಾಧನಗಳು ಹಾಗೂ Apple ಸೇವೆಗಳಿಗೆ ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳಂತಹ ನಿಮ್ಮ ಖಾತೆಯ ಬಗೆಗಿನ ಮಾಹಿತಿಯನ್ನು ಬಳಸಬಹುದು. ಹಾಗೆಯೇ, Apple One ಸೇರಿದಂತೆ iCloud ಮತ್ತು ನಿಮಗೆ ಆಸಕ್ತಿಯಿರಬಹುದಾದ ಇತರೆ Apple ಉತ್ಪನ್ನಗಳು, ಸೇವೆಗಳು ಮತ್ತು ಆಫರ್‌ಗಳ ಕುರಿತ ಸಂವಹನಗಳನ್ನು ಕಳುಹಿಸಲು ನಿಮ್ಮನ್ನು ಒಬ್ಬ ವಿದ್ಯಾರ್ಥಿಯಾಗಿ ದೃಢೀಕರಿಸಲಾಗಿದೆಯೇ ಎಂಬ ಮಾಹಿತಿಯನ್ನು ಬಳಸಬಹುದು. ಸೇವಾ ಆಫರ್‌ಗಳಿಗೆ ಅರ್ಹತೆಯನ್ನು ಪರಿಶೀಲಿಸಲು ನಿಮ್ಮ ಸಾಧನದ ಕ್ರಮ ಸಂಖ್ಯೆಯನ್ನು ಬಳಸಬಹುದು. ನೀವು ಕುಟುಂಬ ಹಂಚಿಕೊಳ್ಳುವಿಕೆ ಗುಂಪಿನಲ್ಲಿದ್ದರೆ, ಕುಟುಂಬ ಹಂಚಿಕೊಳ್ಳುವಿಕೆಯ ಮೂಲಕ ನಿಮಗೆ ಲಭ್ಯವಿರುವ ಉತ್ಪನ್ನಗಳು, ಸೇವೆಗಳು ಮತ್ತು ಆಫರ್‌ಗಳ ಕುರಿತಾದ ಸಂವಹನಗಳನ್ನು Apple ಕಳುಹಿಸಬಹುದು. ನೀವು Apple One ಸಬ್‌ಸ್ಕ್ರಿಪ್ಶನ್ ಅನ್ನು ಖರೀದಿಸಿದರೆ, ನೀವು ಸಬ್‌ಸ್ಕ್ರೈಬ್ ಮಾಡಿರುವ ಪ್ರತಿಯೊಂದು ಸೇವೆಗಳ ಫೀಚರ್‌ಗಳ ಕುರಿತು ನಾವು ನಿಮಗೆ ಸಂವಹನಗಳನ್ನು ಕಳುಹಿಸಬಹುದು. ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾದ, ನಮ್ಮ Apple One ಸಂವಹನ ವಿಧಾನಗಳ ಜೊತೆ ನೀವು ನಡೆಸುವ ಸಂವಹನಗಳನ್ನು Apple ಸಂಗ್ರಹಿಸುತ್ತದೆ. ಈ ಸಂವಹನಗಳು ಮತ್ತು ನಮ್ಮ ಸೇವೆಗಳನ್ನು ಸುಧಾರಿಸುವುದು ಇದರ ಉದ್ದೇಶವಾಗಿರುತ್ತದೆ.

ಈಮೇಲ್ ಮಾರ್ಕೆಟಿಂಗ್
ಈಮೇಲ್ ಮಾರ್ಕೆಟಿಂಗ್ ಸ್ವೀಕರಿಸಲು ನೀವು ಸಮ್ಮತಿಸಿದರೆ, ನೀವು ಈಮೇಲ್ ಮೂಲಕ ಈ ಸಂವಹನಗಳನ್ನು ಸ್ವೀಕರಿಸಬಹುದು. ನೀವು account.apple.com/in ಎಂಬಲ್ಲಿಗೆ ಹೋಗುವ ಮೂಲಕ ಅಥವಾ ನಿಮ್ಮ iOS ಅಥವಾ iPadOS ಸಾಧನದಲ್ಲಿ ಸೆಟ್ಟಿಂಗ್ಸ್ > [ನಿಮ್ಮ ಹೆಸರು] > ವೈಯಕ್ತಿಕ ಮಾಹಿತಿ ಎಂಬಲ್ಲಿಗೆ ಹೋಗುವ ಮೂಲಕ ನಿಮ್ಮ ಈಮೇಲ್ ಆದ್ಯತೆಗಳನ್ನು ನೀವು ಬದಲಾಯಿಸಬಹುದು ಮತ್ತು ಈ ಈಮೇಲ್‌ಗಳನ್ನು ಸ್ವೀಕರಿಸುವುದರಿಂದ ಹೊರಗುಳಿಯಬಹುದು.

ನೋಟಿಫಿಕೇಷನ್‌ಗಳು
ನೀವು ಈ ಸಂವಹನಗಳನ್ನು ನೋಟಿಫಿಕೇಷನ್ಸ್ ಮೂಲಕವೂ ಸ್ವೀಕರಿಸಬಹುದು. ನಿಮ್ಮ ನೋಟಿಫಿಕೇಷನ್ ಆದ್ಯತೆಗಳನ್ನು ಅಪ್‌ಡೇಟ್ ಮಾಡಲು ಅಥವಾ ನಿಮ್ಮ iOS ಅಥವಾ iPadOS ಸಾಧನದಲ್ಲಿ ನೋಟಿಫಿಕೇಷನ್‌ಗಳಿಂದ ಹೊರಗುಳಿಯಲು, ಸೆಟ್ಟಿಂಗ್ಸ್ > ನೋಟಿಫಿಕೇಷನ್‌ಗಳು ಎಂಬಲ್ಲಿಗೆ ಹೋಗಿ.

ಕುಟುಂಬ ಹಂಚಿಕೆ

ಕುಟುಂಬ ಹಂಚಿಕೊಳ್ಳುವಿಕೆಯು ನಿಮಗೆ ಮತ್ತು ನಿಮ್ಮ ಕುಟುಂಬದ ಗುಂಪಿಗೆ ಸಬ್‌ಸ್ಕ್ರಿಪ್ಶನ್‌ಗಳು, ಖರೀದಿಗಳು ಹಾಗೂ ಸ್ಥಳವನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಕುಟುಂಬ ವ್ಯವಸ್ಥಾಪಕರು ಕುಟುಂಬ ಗುಂಪಿನಲ್ಲಿರುವ ಮಕ್ಕಳು ಮತ್ತು ಹದಿಹರೆಯದವರಿಗಾಗಿ ಖರೀದಿಸಲು ಕೇಳಿ ಮತ್ತು ಸ್ಕ್ರೀನ್ ಟೈಮ್‌ ರೀತಿಯ ಪೋಷಕರು ಹೇರುವ ನಿಯಂತ್ರಣಗಳನ್ನು ಸೆಟ್ ಮಾಡಬಹುದು. ನಿಮ್ಮ ಕುಟುಂಬದ ಗುಂಪಿನ ಸದಸ್ಯರೊಬ್ಬರು Apple TVಯಂತಹ ಕೆಲವು Apple ಸಾಧನಗಳಿಗೆ ಸೈನ್ ಇನ್ ಮಾಡಿದರೆ, ಸಾಧನವು ಅವರ ನಿಮ್ಮ ಕುಟುಂಬದ ಇತರ ಸದಸ್ಯರ Apple ಖಾತೆಯ ಹೆಸರು ಮತ್ತು ಪ್ರೊಫೈಲ್ ಚಿತ್ರವನ್ನು ತೋರಿಸುವ ಮೂಲಕ ಅವರನ್ನು ಸೇರಿಸುವ ಸಲಹೆಯನ್ನು ನೀಡಬಹುದು. ಕುಟುಂಬ ಹಂಚಿಕೊಳ್ಳುವಿಕೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, www.apple.com/in/legal/privacy/data/en/family-sharing ಎಂಬುದಕ್ಕೆ ಭೇಟಿ ನೀಡಿ.

tvOS ಮತ್ತು ಥರ್ಡ್ ಪಾರ್ಟಿ ಟಿವಿಗಳಲ್ಲಿ Apple TV ಆ್ಯಪ್ ಪ್ರೊಫೈಲ್‌ಗಳು

tvOS ಮತ್ತು ಕೆಲವು ಥರ್ಡ್ ಪಾರ್ಟಿ ಟಿವಿಗಳಲ್ಲಿರುವ Apple TV ಆ್ಯಪ್‌ನಲ್ಲಿನ ನಿಮ್ಮ Apple ಖಾತೆಗೆ ಸಂಬಂಧಿಸಿದಂತೆ ಮಕ್ಕಳ ಪ್ರೊಫೈಲ್‌ಗಳು ಸೇರಿದಂತೆ ನೀವು ಪ್ರೊಫೈಲ್‌ಗಳನ್ನು ರಚಿಸಬಹುದು. ಈ ಪ್ರೊಫೈಲ್‌ಗಳನ್ನು ಆ ಪ್ಲ್ಯಾಟ್‌ಫಾರ್ಮ್‌ಗಳಲ್ಲಿರುವ Apple TV ಆ್ಯಪ್‌ನಲ್ಲಿ ಬಳಸಬಹುದು ಮತ್ತು Apple TV ಆ್ಯಪ್‌ನಲ್ಲಿ ವೈಯಕ್ತೀಕರಿಸಿದ ಅನುಭವಗಳನ್ನು ಅನುಮತಿಸಬಹುದು. ಪ್ರೊಫೈಲ್‌ಗಳಿಗೆ ಸಂಬಂಧಿಸಿರುವ Apple ಖಾತೆಯು ನಿರ್ವಹಿಸುವ ಪ್ರೊಫೈಲ್ ಆಗಿದೆ. ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿರುವ ಪ್ರೊಫೈಲ್ ಅನ್ನು ರಚಿಸಲು, ನಿಮಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ನೀವು ಪ್ರೊಫೈಲ್‌ಗಾಗಿ ಹೆಸರನ್ನು ಮತ್ತು ಚಿತ್ರವನ್ನು ಆರಿಸುತ್ತೀರಿ ಮತ್ತು ಆ ಪ್ರೊಫೈಲ್ ಮಗುವಿಗಾಗಿ ಆಗಿದೆಯೇ ಎಂಬುದನ್ನು ನಿರ್ದಿಷ್ಟಪಡಿಸುತ್ತೀರಿ. ಪ್ರೊಫೈಲ್ ಸೆಟಪ್ ಮಾಡುವ ಸಮಯದಲ್ಲಿ ಮತ್ತು ಸೆಟ್ಟಿಂಗ್ಸ್‌ನಲ್ಲಿ ಯಾವುದೇ ಸಮಯದಲ್ಲಿ, ನಿಮ್ಮ Apple ಖಾತೆಯನ್ನು ಬಳಸಿಕೊಂಡು ಖರೀದಿಸುವ ಮತ್ತು ಬಾಡಿಗೆಗೆ ಪಡೆಯುವ ಪ್ರೊಫೈಲ್‌ನ ಸಾಮರ್ಥ್ಯವನ್ನು ನೀವು ನಿಯಂತ್ರಿಸಬಹುದು. ನೀವು Apple TV ಆ್ಯಪ್‌ಗಾಗಿ ಕಂಟೆಂಟ್ ನಿರ್ಬಂಧಗಳನ್ನು ಸಹ ಸೆಟಪ್ ಮಾಡಬಹುದು. tvOSನಲ್ಲಿ, ಸೆಟ್ಟಿಂಗ್ಸ್ > ಆ್ಯಪ್‌ಗಳು > TV > ಕಂಟೆಂಟ್ ನಿರ್ಬಂಧಗಳು ಎಂಬಲ್ಲಿಗೆ ಹೋಗಿ, ಪ್ರೊಫೈಲ್ ಅನ್ನು ಆಯ್ಕೆಮಾಡಿ ಮತ್ತು ಹಂತಗಳನ್ನು ಅನುಸರಿಸಿ.

ನೀವು ಆರಿಸುವ ಕಂಟೆಂಟ್ ರೇಟಿಂಗ್‌ಗಳಿಗೆ ಒಳಪಟ್ಟಿದ್ದು, ನೀವು Appleನಿಂದ ಖರೀದಿಸಿದ ಅಥವಾ ಬಾಡಿಗೆಗೆ ಪಡೆದ ಕಂಟೆಂಟ್ ಮತ್ತು ನಿಮ್ಮ Apple TV ಸಬ್‌ಸ್ಕ್ರಿಪ್ಶನ್ ಹಾಗೂ Apple TV ಚಾನಲ್‌ಗಳನ್ನು ಪ್ರೊಫೈಲ್ ಆ್ಯಕ್ಸೆಸ್ ಮಾಡಬಹುದು ಮತ್ತು ವೀಕ್ಷಿಸಬಹುದು. ಪ್ರೊಫೈಲ್ ನಿಮ್ಮ ಕನೆಕ್ಟ್ ಮಾಡಲಾದ ಥರ್ಡ್ ಪಾರ್ಟಿ ವೀಡಿಯೊ ಆ್ಯಪ್‌ಗಳನ್ನು ಸಹ ಆ್ಯಕ್ಸೆಸ್ ಮಾಡಬಹುದು, ಆದರೆ ಕಂಟೆಂಟ್ ನಿರ್ಬಂಧಗಳು Apple TV ಆ್ಯಪ್‌ಗೆ ಮಾತ್ರ ಅನ್ವಯಿಸುತ್ತವೆ.

ಪ್ರೊಫೈಲ್‌ಗಳ ಕುರಿತು Apple ಸಂಗ್ರಹಿಸುವ ಮತ್ತು ಶೇಖರಿಸುವ ಮಾಹಿತಿಯು ನಿರ್ವಹಿಸುವ ಪ್ರೊಫೈಲ್‌ನ Apple ಖಾತೆಯೊಂದಿಗೆ ಸಂಯೋಜಿತವಾಗಿರುತ್ತದೆ. ಇದು ಪ್ರೊಫೈಲ್ ಏನನ್ನು ನೋಡುತ್ತದೆ, ಅದನ್ನು ಯಾವಾಗ ನೋಡಿದೆ, ಯಾವ ಸಾಧನದಲ್ಲಿ ನೋಡಿದೆ ಮತ್ತು ಕಂಟೆಂಟ್‌ನಲ್ಲಿ ಪ್ರೊಫೈಲ್‌ನ ಪ್ರಗತಿಯ ಕುರಿತು ವಿವರವಾದ ಪ್ಲೇಬ್ಯಾಕ್ ಚಟುವಟಿಕೆಯಂತಹವುಗಳನ್ನು ಒಳಗೊಂಡಿರುತ್ತದೆ. Apple TV ಆ್ಯಪ್ ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತದೆ ಮತ್ತು ಬಳಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಲು, www.apple.com/legal/privacy/data/en/apple-tv-app ಎಂಬಲ್ಲಿಗೆ ಭೇಟಿ ನೀಡಿ.

ಮಕ್ಕಳ ಪ್ರೊಫೈಲ್‌ಗಳಿಗೆ ಸಂಬಂಧಿಸಿದಂತೆ, ಆ ಪ್ರೊಫೈಲ್‌ನ ಬಳಕೆದಾರರಿಗೆ Apple TV ಆ್ಯಪ್‌ನಲ್ಲಿ ವಯಸ್ಸಿಗೆ ಸೂಕ್ತವಾದ ಅನುಭವವನ್ನು ಒದಗಿಸಲು ನಾವು ಮಕ್ಕಳ ಪ್ರೊಫೈಲ್‌ಗೆ ಸಂಬಂಧಿಸಿದ ನಿರಂತರ ಐಡೆಂಟಿಫೈಯರ್ ಅನ್ನು ಸಂಗ್ರಹಿಸುತ್ತೇವೆ. ನಾವು ಐಡೆಂಟಿಫೈಯರ್ ಮತ್ತು ಮಗುವಿನ ಪ್ರೊಫೈಲ್‌ನ ಚಟುವಟಿಕೆಯ ಡೇಟವನ್ನು (ಹುಡುಕಾಟ ಮತ್ತು ವೀಕ್ಷಣೆಯ ಇತಿಹಾಸದ ರೀತಿಯ) ಆ ಪ್ರೊಫೈಲ್‌ನ ಬಳಕೆದಾರರಿಗೆ Apple TV ಆ್ಯಪ್ ಅನ್ನು ಒದಗಿಸಲು, ಪ್ರೊಫೈಲ್‌ಗಳ ಫೀಚರ್ ಮತ್ತು Apple TV ಆ್ಯಪ್ ಅನ್ನು ಸುಧಾರಿಸಲು ಮತ್ತು ವಂಚನೆ ತಡೆಗಟ್ಟಲು ಹಾಗೂ ಭದ್ರತಾ ಉದ್ದೇಶಗಳಿಗಾಗಿ ಬಳಸುತ್ತೇವೆ. ಸಂಬಂಧವಿಲ್ಲದ ಉದ್ದೇಶಗಳಿಗಾಗಿ ಐಡೆಂಟಿಫೈಯರ್ ಮತ್ತು ಸಂಬಂಧಿತ ಮಾಹಿತಿಯನ್ನು ಬಳಸಲಾಗುವುದಿಲ್ಲ ಅಥವಾ ಬಹಿರಂಗಪಡಿಸಲಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು Apple ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

ಸೆಟ್ಟಿಂಗ್ಸ್ ಆ್ಯಪ್‌ನಲ್ಲಿನ ನಿರ್ವಹಿಸುವ ಪ್ರೊಫೈಲ್‌ನ ಅನುಮೋದನೆಯೊಂದಿಗೆ ಪ್ರೊಫೈಲ್‌ವೊಂದನ್ನು Apple ಖಾತೆಗೆ ಅಪ್‌ಗ್ರೇಡ್ ಮಾಡಬಹುದು. tvOSನಲ್ಲಿ, ಸೆಟ್ಟಿಂಗ್ಸ್ > ಪ್ರೊಫೈಲ್‌ಗಳು ಮತ್ತು ಖಾತೆಗಳು ಎಂಬಲ್ಲಿಗೆ ಹೋಗಿ, ಪ್ರೊಫೈಲ್ ಅನ್ನು ಆಯ್ಕೆಮಾಡಿ, Apple ಖಾತೆಗೆ ಅಪ್‌ಗ್ರೇಡ್ ಮಾಡಿ ಎಂಬುದನ್ನು ಆಯ್ಕೆಮಾಡಿ ಮತ್ತು ಹಂತಗಳನ್ನು ಅನುಸರಿಸಿ. ಪ್ರೊಫೈಲ್ ಅನ್ನು ಅಪ್‌ಗ್ರೇಡ್ ಮಾಡಿದಾಗ, ಆ ಪ್ರೊಫೈಲ್ ವೀಕ್ಷಿಸಿರುವುದರ ಕುರಿತಾದ ಮಾಹಿತಿ ಮತ್ತು ವೀಕ್ಷಣೆ ಇತಿಹಾಸಕ್ಕೆ ಸಂಬಂಧಿಸಿದ ವಿವರಗಳನ್ನು ಹೊಸ Apple ಖಾತೆಗೆ ವರ್ಗಾಯಿಸಲಾಗುತ್ತದೆ ಮತ್ತು ಇನ್ನು ಮುಂದೆ ನಿರ್ವಹಿಸುವ ಪ್ರೊಫೈಲ್‌ನೊಂದಿಗೆ ಸಂಯೋಜಿತವಾಗಿರುವುದಿಲ್ಲ. ಆದರೂ, ಪ್ರೊಫೈಲ್ ಅನ್ನು ಅಪ್‌ಗ್ರೇಡ್ ಮಾಡಿದಾಗ, ಖರೀದಿಗಳು, ಸಬ್‌ಸ್ಕ್ರಿಪ್ಶನ್‌ಗಳು ಮತ್ತು ಬಾಡಿಗೆಗಳು ನಿರ್ವಹಿಸುವ ಪ್ರೊಫೈಲ್‌ನೊಂದಿಗೆ ಸಂಯೋಜಿತವಾಗಿರುತ್ತವೆ ಮತ್ತು ಪ್ರೊಫೈಲ್‌ನ ಹೊಸ Apple ಖಾತೆಗೆ ವರ್ಗಾಯಿಸಲಾಗುವುದಿಲ್ಲ ಅಥವಾ ಅದಕ್ಕೆ ಸಂಯೋಜಿಸಲಾಗುವುದಿಲ್ಲ. ಸೆಟ್ಟಿಂಗ್ಸ್ ಆ್ಯಪ್‌ನಲ್ಲಿನ ನಿರ್ವಹಿಸುವ ಪ್ರೊಫೈಲ್‌ನ ಮೂಲಕ ಪ್ರೊಫೈಲ್‌ವೊಂದನ್ನು ಯಾವುದೇ ಸಮಯದಲ್ಲಿ ಸಹ ಡಿಲೀಟ್ ಮಾಡಬಹುದು. tvOSನಲ್ಲಿ, ಸೆಟ್ಟಿಂಗ್ಸ್ > ಪ್ರೊಫೈಲ್‌ಗಳು ಮತ್ತು ಖಾತೆಗಳು ಎಂಬಲ್ಲಿಗೆ ಹೋಗಿ, ಪ್ರೊಫೈಲ್ ಅನ್ನು ಆಯ್ಕೆಮಾಡಿ ಮತ್ತು ಪ್ರೊಫೈಲ್ ಅನ್ನು ಡಿಲೀಟ್ ಮಾಡಿ ಎಂಬುದನ್ನು ಆಯ್ಕೆಮಾಡಿ. ಡಿಲೀಟ್ ಮಾಡಿದ ನಂತರ, ಪ್ರೊಫೈಲ್ ಮತ್ತು ಅದರ ವೀಕ್ಷಣೆಯ ಇತಿಹಾಸವು ಅದನ್ನು ನಿರ್ವಹಿಸುವ ಪ್ರೊಫೈಲ್‌ನ Apple ಖಾತೆಗೆ ಇನ್ನು ಮುಂದೆ ಲಭ್ಯವಿರುವುದಿಲ್ಲ.

iMessage, FaceTime ಮತ್ತು iCloud

ನಿಮ್ಮ iPhoneನಲ್ಲಿ ನಿಮ್ಮ Apple ಖಾತೆಯ ಮೂಲಕ ನೀವು ಸೈನ್ ಇನ್ ಮಾಡಿದಾಗ, ನೀವು ಸ್ವಯಂಚಾಲಿತವಾಗಿ iMessage, FaceTime, iCloud ಮತ್ತು ಇತರ Apple ಸೇವೆಗಳಿಗೆ ಸೈನ್ ಇನ್ ಆಗುತ್ತೀರಿ. ನಿಮ್ಮ ಸಾಧನದಲ್ಲಿರುವ ಫೋನ್ ಸಂಖ್ಯೆಯನ್ನು ಪರಿಶೀಲಿಸಲಾಗುತ್ತದೆ ಮತ್ತು ನಿಮ್ಮ Apple ಖಾತೆಯ ಜೊತೆಗೆ ಸಂಯೋಜಿಸಲಾಗುತ್ತದೆ. ನಿಮ್ಮ Apple ಖಾತೆ ಅಥವಾ ಫೋನ್ ಸಂಖ್ಯೆಗಳನ್ನು ನೀವು ಸಂಪರ್ಕಿಸುವ ಅಥವಾ ಡೇಟವನ್ನು ಹಂಚಿಕೊಳ್ಳುವ ಜನರಿಗೆ ತೋರಿಸಲಾಗುತ್ತದೆ ಮತ್ತು ಜನರು ನಿಮ್ಮ Apple ಖಾತೆ ಮತ್ತು ನಿಮ್ಮ ಖಾತೆಯಲ್ಲಿರುವ ಈಮೇಲ್ ವಿಳಾಸಗಳು ಅಥವಾ ಫೋನ್ ಸಂಖ್ಯೆಗಳನ್ನು ಬಳಸಿ ನಿಮ್ಮನ್ನು ಸಂಪರ್ಕಿಸಬಹುದು. ಸೆಟ್ಟಿಂಗ್ಸ್ > [ನಿಮ್ಮ ಹೆಸರು] > ವೈಯಕ್ತಿಕ ಮಾಹಿತಿ ಎಂಬಲ್ಲಿಗೆ ಹೋಗುವ ಮೂಲಕ ಜನರು ನಿಮ್ಮನ್ನು ಹೇಗೆ ಸಂಪರ್ಕಿಸಬೇಕು ಎಂಬುದನ್ನು ನೀವು ಆಯ್ಕೆ ಮಾಡಬಹುದು. ನೀವು ಸೆಟ್ಟಿಂಗ್ಸ್ > ಸಂದೇಶ ಮತ್ತು iMessage ಮತ್ತು FaceTime ಹಾಗೂ ಗೌಪ್ಯತೆಯ ಕುರಿತು ಎಂಬುದನ್ನು ಟ್ಯಾಪ್ ಮಾಡುವ ಮೂಲಕ iMessage ಮತ್ತು FaceTime ಮತ್ತು ಗೌಪ್ಯತೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಬಹುದು.

iTunes, App Store ಮತ್ತು ಸಂಗೀತ

ನಿಮ್ಮ iPhoneನಲ್ಲಿ ನಿಮ್ಮ Apple ಖಾತೆಯೊಂದಿಗೆ ನೀವು ಸೈನ್ ಇನ್ ಮಾಡಿದಾಗ, ನೀವು iTunes Store, App Store ಮತ್ತು Apple Musicಗೆ ಸ್ವಯಂಚಾಲಿತವಾಗಿ ಸೈನ್ ಇನ್ ಆಗುತ್ತೀರಿ ಇದರಿಂದ ನೀವು ಖರೀದಿಗಳನ್ನು ಮಾಡಬಹುದು ಅಥವಾ Apple Music ಅನ್ನು ತ್ವರಿತವಾಗಿ ಮತ್ತು ಸುಲಭವಾಗಿ ಬಳಸಲು ಪ್ರಾರಂಭಿಸಬಹುದು. ನೀವು ಮಾಡುವ ಯಾವುದೇ ಖರೀದಿಗಳನ್ನು ನಮ್ಮ ಸಿಸ್ಟಂನಲ್ಲಿ ರೆಕಾರ್ಡ್ ಮಾಡಲಾಗುತ್ತದೆ ಇದರಿಂದ ನೀವು ಅವುಗಳನ್ನು ಯಾವುದೇ ಸಮಯದಲ್ಲಿ ಮರು-ಡೌನ್‌ಲೋಡ್ ಮಾಡಬಹುದು.ನೀವು ಮಾಡುವ ಯಾವುದೇ ಖರೀದಿಗಳನ್ನು ನಮ್ಮ ಸಿಸ್ಟಂನಲ್ಲಿ ರೆಕಾರ್ಡ್ ಮಾಡಲಾಗುತ್ತದೆ ಇದರಿಂದ ನೀವು ಅವುಗಳನ್ನು ಯಾವುದೇ ಸಮಯದಲ್ಲಿ ಮರು-ಡೌನ್‌ಲೋಡ್ ಮಾಡಬಹುದು. ನೀವು Apple Music ಅನ್ನು ಬಳಸಿದರೆ, ನಿಮ್ಮ ಆಲಿಸುವಿಕೆಯ ಇತಿಹಾಸವನ್ನು ಉಳಿಸಿಕೊಳ್ಳಬಹುದು ಮತ್ತು ವೈಯಕ್ತೀಕರಿಸಿದ ಶಿಫಾರಸುಗಳನ್ನು ಒದಗಿಸಲು ಸಹಾಯ ಮಾಡಲು ಬಳಸಬಹುದು. Apple Music ಸೆಟ್ಟಿಂಗ್ಸ್‌ನಿಂದ ನಿಮ್ಮ ಆಲಿಸುವಿಕೆಯ ಇತಿಹಾಸವನ್ನು ಹಂಚಿಕೊಳ್ಳದಿರಲು ನೀವು ಆಯ್ಕೆ ಮಾಡಬಹುದು.

ನಿಮ್ಮ ಪ್ರದೇಶದಲ್ಲಿ iTunes Match ಲಭ್ಯವಿದ್ದರೆ ಮತ್ತು ನೀವು iTunes Match ಅನ್ನು ಬಳಸುತ್ತಿದ್ದರೆ, iCloud ನಿಮ್ಮ iTunes ಲೈಬ್ರರಿಯಲ್ಲಿರುವ ಮೀಡಿಯಾದ ಕುರಿತು ಮಾಹಿತಿಯನ್ನು ಸಂಗ್ರಹಿಸುತ್ತದೆ ಹಾಗೂ iTunes Store‌ನಲ್ಲಿ ಪ್ರಸ್ತುತ ಲಭ್ಯವಿರುವ ಹಾಡುಗಳಿಗೆ ಮೀಡಿಯಾವನ್ನು ಹೊಂದಿಸುತ್ತದೆ ಅಥವಾ ಹೊಂದಿಸಲು ಸಾಧ್ಯವಾಗದ ಹಾಡುಗಳನ್ನು ಅಪ್‌ಲೋಡ್ ಮಾಡುತ್ತದೆ, ನಂತರ ಆ ಹಾಡುಗಳನ್ನು ನಿಮ್ಮ ಅರ್ಹ ಸಾಧನಗಳ ಮೂಲಕ ಆ್ಯಕ್ಸೆಸ್ ಮಾಡಬಹುದು.

ಸ್ವಯಂಚಾಲಿತ ಸೈನ್ ಇನ್

ನಿಮ್ಮ Apple ಖಾತೆ ಬಳಸಿ ನೀವು ಯಾವುದೇ iPhone, iPad ಅಥವಾ Apple TVಗೆ ಸೈನ್ ಇನ್ ಮಾಡಿದ್ದರೆ, ಅವುಗಳಲ್ಲಿನ ಬೆಂಬಲಿತ ಥರ್ಡ್-ಪಾರ್ಟಿ ಆ್ಯಪ್‌ಗಳಿಗೆ, ನಿಮ್ಮ ಅನುಮತಿಯೊಂದಿಗೆ, Apple ನಿಮ್ಮನ್ನು ಸ್ವಯಂಚಾಲಿತವಾಗಿ ಸೈನ್ ಇನ್ ಮಾಡಬಲ್ಲದು. Apple ನಿಮ್ಮ ಸಾಧನಗಳಾದ್ಯಂತ ಸೈನ್ ಇನ್ ಅನ್ನು ಸಕ್ರಿಯಗೊಳಿಸಲು ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾದ ಬೆಂಬಲಿಸುವ ಆ್ಯಪ್ ಒದಗಿಸಿದ ಸೈನ್ ಇನ್ ಟೋಕನ್ ಅನ್ನು ಸಂಗ್ರಹಿಸುತ್ತದೆ. ನಿಮ್ಮ Apple ಖಾತೆ ಸೆಟ್ಟಿಂಗ್ಸ್‌ನಲ್ಲಿ, ಪ್ರತಿಯೊಂದು ಬೆಂಬಲಿಸುವ ಆ್ಯಪ್‌ನ ಸ್ವಯಂಚಾಲಿತ ಸೈನ್ ಇನ್ ಸಾಮರ್ಥ್ಯವನ್ನು ನೀವು ನಿರ್ವಹಿಸಬಹುದು. ನಿಮ್ಮ iOS ಅಥವಾ iPadOS ಸಾಧನದಲ್ಲಿ, ಸೆಟ್ಟಿಂಗ್ಸ್ > [ನಿಮ್ಮ ಹೆಸರು] > ಮೀಡಿಯಾ ಮತ್ತು ಖರೀದಿಗಳು > ಕನೆಕ್ಟ್ ಆಗಿರುವ ಖಾತೆಗಳು ಎಂಬುದಕ್ಕೆ ಹೋಗಿ.

ಪಾಲುದಾರರ ಮೂಲಕ Apple ಸಬ್‌ಸ್ಕ್ರಿಪ್ಶನ್‌ಗಳು

ನಿಮ್ಮ ಮೊಬೈಲ್ ನೆಟ್‌ವರ್ಕ್ ಪೂರೈಕೆದಾರರು ಅಥವಾ ಬೇರೊಬ್ಬ Apple ಪಾಲುದಾರರು Apple ಸೇವೆಗಳಿಗೆ (ಉದಾಹರಣೆಗೆ, Apple One, Apple Music ಅಥವಾ Apple TV) ಸಬ್‌ಸ್ಕ್ರಿಪ್ಶನ್‌ಗಳು ಮತ್ತು ಉಚಿತ ಟ್ರಯಲ್‌ಗಳನ್ನು ಒದಗಿಸಿದರೆ, ಆ ಉಚಿತ ಟ್ರಯಲ್ ಅಥವಾ ಸಬ್‌ಸ್ಕ್ರಿಪ್ಶನ್‌ ಅನ್ನು ಗುರುತಿಸಲು, ಸೈನ್ ಇನ್ ಮಾಡುವಾಗ ನಿಮ್ಮ ಖಾತೆಯನ್ನು ದೃಢೀಕರಿಸಲು, ತದನಂತರ ನಿಮ್ಮ Apple ಖಾತೆಗೆ ನಿಮ್ಮ Apple ಸಬ್‌ಸ್ಕ್ರಿಪ್ಶನ್ ಅಥವಾ ಉಚಿತ ಟ್ರಯಲ್ ಅನ್ನು ಕನೆಕ್ಟ್ ಮಾಡಲು, Apple ನಿಮ್ಮ ಫೋನ್ ಸಂಖ್ಯೆ ಅಥವಾ ಪಾಲುದಾರರು ಹಂಚಿಕೊಂಡಿರುವ ವಿಶಿಷ್ಟ ಖಾತೆ ಐಡೆಂಟಿಫೈಯರ್ ಅನ್ನು ಬಳಸುತ್ತದೆ. ನಿಮ್ಮ ಉಚಿತ ಟ್ರಯಲ್ ಅಥವಾ ಸಬ್‌ಸ್ಕ್ರಿಪ್ಶನ್ ಅನ್ನು ನೀವು ಸಕ್ರಿಯಗೊಳಿಸಿದ್ದೀರಿ ಎಂದು ಮೊಬೈಲ್ ನೆಟ್‌ವರ್ಕ್ ಒದಗಿಸುವವರು ಅಥವಾ ಪಾಲುದಾರರಿಗೆ ತಿಳಿಸಲು ನಾವು ಫೋನ್ ಸಂಖ್ಯೆ ಅಥವಾ ಅನನ್ಯ ಖಾತೆಯ ಐಡೆಂಟಿಫೈಯರ್ ಅನ್ನು ಸಹ ಬಳಸುತ್ತೇವೆ.

ಪಾವತಿ ವಿಧಾನಗಳು, ಉಡುಗೊರೆ ಕಾರ್ಡ್‌ಗಳು ಮತ್ತು Apple ಖಾತೆಯ ಬ್ಯಾಲೆನ್ಸ್‌ಗೆ ಹಣವನ್ನು ಸೇರಿಸುವುದು

App Store, iTunes, ಸಂಗೀತ ಆ್ಯಪ್ ಮತ್ತು ಇತ್ಯಾದಿಗಳಿಂದ ಖರೀದಿಗಳನ್ನು ಮಾಡಲು, ನಿಮ್ಮ Apple ಖಾತೆಗೆ ನೀವು ಮಾನ್ಯವಾದ ಪಾವತಿ ವಿಧಾನವನ್ನು ಸೇರಿಸಬೇಕು. iOSನಲ್ಲಿ ಪಾವತಿ ವಿಧಾನವನ್ನು ಸೇರಿಸಲು, ಸೆಟ್ಟಿಂಗ್ಸ್ > [ನಿಮ್ಮ ಹೆಸರು] > ಪಾವತಿ ಮತ್ತು ಷಿಪ್ಪಿಂಗ್‌ಗೆ ಹೋಗಿ, ಪಾವತಿ ವಿಧಾನವನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ ಹಾಗೂ ಸೂಕ್ತ ಪಾವತಿ ವಿವರಗಳನ್ನು ಸೇರಿಸಿ. ಮಾಹಿತಿಯನ್ನು ಹಸ್ತಚಾಲಿತವಾಗಿ ನಮೂದಿಸುವ ಮೂಲಕ ಅಥವಾ ನಿಮ್ಮ ಪಾವತಿ ಕಾರ್ಡ್‌ನ ಫೋಟೋವನ್ನು ತೆಗೆದುಕೊಳ್ಳುವ ಮೂಲಕ ನೀವು ಪಾವತಿ ವಿವರಗಳನ್ನು ಸೇರಿಸಬಹುದು. ನಿಮ್ಮ ಪಾವತಿ ಕಾರ್ಡ್‌ನ ಫೋಟೋವನ್ನು ತೆಗೆದುಕೊಳ್ಳುವ ಮೂಲಕ ಪಾವತಿಯ ವಿವರಗಳನ್ನು ಸೇರಿಸುವ ಆಯ್ಕೆಯನ್ನು ನೀವು ಮಾಡಿದರೆ, ಅಗತ್ಯವಿರುವ ಫೀಲ್ಡ್‌ಗಳನ್ನು ಭರ್ತಿಮಾಡಲು ನಿಮ್ಮ ಸಾಧನವು ಆ ಚಿತ್ರದಿಂದ ಸೂಕ್ತವಾದ ಮಾಹಿತಿಯನ್ನು ತೆಗೆದುಕೊಳ್ಳುತ್ತದೆ; ಚಿತ್ರವನ್ನು Apple ನೋಡುವುದಿಲ್ಲ ಅಥವಾ ಸಂಗ್ರಹಿಸುವುದಿಲ್ಲ. ನೀವು ಹೊಸ ಪಾವತಿ ಕಾರ್ಡ್ ಅನ್ನು ಸೇರಿಸಿದಾಗ, ಆ ಪಾವತಿ ಕಾರ್ಡ್ ಬೇರೊಂದು Apple ಖಾತೆಗೆ ಸಂಯೋಜಿಸಿದೆಯೇ ಎಂದು Apple ಪರಿಶೀಲಿಸುತ್ತದೆ. ಹಾಗೆ ಆಗಿದ್ದರೆ, ಅದಾಗಲೇ ದಾಖಲಾಗಿರುವ ಆ ಪಾವತಿ ಕಾರ್ಡ್ ಹೊಂದಿರುವ Apple ಖಾತೆಯ ಮಾಲೀಕರಿಗೆ ‘ಕಾರ್ಡ್ ಅನ್ನು ಹೊಸ Apple ಖಾತೆಯೊಂದಕ್ಕೆ ಸೇರಿಸಲಾಗಿದೆ’ ಎಂದು Apple ಸೂಚಿಸಬಹುದು. ನಿಮ್ಮ ವೈಯಕ್ತಿಕ ಮಾಹಿತಿ ಮತ್ತು Apple ಖಾತೆ ಮಾಹಿತಿಯನ್ನು ಈ ನೋಟಿಫಿಕೇಷನ್ ಭಾಗವಾಗಿ ಹಂಚಿಕೊಳ್ಳಲಾಗುವುದಿಲ್ಲ. ನೀವು ವಯಸ್ಕರೆಂದು ನಾವು ಖಚಿತಪಡಿಸಬೇಕಾದ ದೇಶ ಅಥವಾ ಪ್ರದೇಶದಲ್ಲಿ ನೀವು ಇದ್ದರೆ ಮತ್ತು ಈ ವಯಸ್ಸಿನ ದೃಢೀಕರಣದ ಅಗತ್ಯವನ್ನು ಪೂರೈಸುವ ಪಾವತಿ ವಿಧಾನವನ್ನು ನೀವು ಸೇರಿಸಿದರೆ ಅಥವಾ ಈ ಹಿಂದೆ ಸೇರಿಸಿದ್ದರೆ, ನಿಮ್ಮ Apple ಖಾತೆಯನ್ನು ವಯಸ್ಕರ ಖಾತೆಯೆಂದು ಗುರುತಿಸಲು ನಾವು ಆ ಪಾವತಿ ವಿಧಾನವನ್ನು ಬಳಸುತ್ತೇವೆ.

Apple ನಿಮ್ಮ ಖರೀದಿಗಳನ್ನು ಪೂರ್ಣಗೊಳಿಸಲು, ಕಾನೂನನ್ನು ಅನುಸರಿಸಲು ಮತ್ತು ವಂಚನೆಯನ್ನು ತಡೆಗಟ್ಟಲು ಖಾತೆ ಸಂಖ್ಯೆ ಮತ್ತು ಅವಧಿ ಮುಕ್ತಾಯ ದಿನಾಂಕ ಸೇರಿದಂತೆ ನೀವು ಒದಗಿಸುವ ಪಾವತಿ ವಿಧಾನದ ವಿವರಗಳನ್ನು ಪಡೆಯುತ್ತದೆ, ಸಂಗ್ರಹಿಸುತ್ತದೆ ಮತ್ತು ವರ್ಗಾಯಿಸುತ್ತದೆ. ಕಾನೂನಾತ್ಮಕವಾಗಿ ಅಗತ್ಯವಿರುವಲ್ಲಿ, ನಿಮ್ಮ ವಹಿವಾಟನ್ನು ಪ್ರಕ್ರಿಯೆಗೊಳಿಸಲು ಮತ್ತು ಕಾನೂನನ್ನು ಅನುಸರಿಸಲು Apple ಅಥವಾ ನಮ್ಮ ಪಾವತಿ ಪಾಲುದಾರರು (ಉದಾಹರಣೆಗೆ, ಬ್ಯಾಂಕ್‌ಗಳು ಅಥವಾ ಪಾವತಿಗಳನ್ನು ಪ್ರಕ್ರಿಯೆಗೊಳಿಸುವಲ್ಲಿ ಭಾಗಿಯಾಗಿರುವ ಇತರ ಘಟಕಗಳು) ಸರ್ಕಾರದಿಂದ ನೀಡಲಾಗುವ ವೈಯಕ್ತಿಕ ಐಡೆಂಟಿಫೈಯರ್‌ನಂತಹ ಹೆಚ್ಚುವರಿ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಬಹುದು, ಶೇಖರಿಸಬಹುದು ಮತ್ತು ವರ್ಗಾಯಿಸಬಹುದು. ನೀವು Appleಗೆ ಬಿಲ್ಲಿಂಗ್ ಮತ್ತು ಷಿಪ್ಪಿಂಗ್ ವಿಳಾಸವನ್ನು ಸಹ ಒದಗಿಸಬಹುದು, ಇದನ್ನು ಮಾರ್ಕೆಟಿಂಗ್ ಮತ್ತು ಅನಾಲಿಟಿಕ್ಸ್ ಉದ್ದೇಶಗಳಿಗಾಗಿ ಬಳಸಬಹುದು, ಜೊತೆಗೆ ಕಾನೂನನ್ನು ಅನುಸರಿಸಲು ಮತ್ತು ವಂಚನೆಯನ್ನು ತಡೆಯಲು ಸಹ ಬಳಸಬಹುದು.

ನೀವು ಒಂದು ಪಾವತಿ ಕಾರ್ಡ್ ಅನ್ನು ಬಳಸಿದಾಗ, ನಿಮ್ಮ ಕಾರ್ಡ್ ಸಂಖ್ಯೆ ಹಾಗೂ ಬಿಲ್ಲಿಂಗ್ ಮಾಹಿತಿಯನ್ನು Apple ಭವಿಷ್ಯದ ಖರೀದಿಗಳಿಗಾಗಿ, ಪುನರಾವರ್ತನೆಗೊಳ್ಳುವ ವಹಿವಾಟುಗಳಿಗಾಗಿ ಅಥವಾ ನೀವು ದೃಢೀಕರಿಸುವ ಇತರ ಬಳಕೆಗಳಿಗಾಗಿ ಇರಿಸಿಕೊಳ್ಳಬಹುದು ಹಾಗೂ ಸ್ವಯಂಚಾಲಿತವಾಗಿ ಅಪ್‌ಡೇಟ್ ಮಾಡಬಹುದು. Apple ಈ ಮಾಹಿತಿಯನ್ನು ನಿಮ್ಮ ಹಣಕಾಸು ಸಂಸ್ಥೆ ಅಥವಾ ಪಾವತಿಯ ನೆಟ್‌ವರ್ಕ್ ಮೂಲಕ ಪಡೆಯಬಹುದು, ಹಾಗೂ ಇದನ್ನು ವಂಚನೆಯ ತಡೆಗಟ್ಟುವಿಕೆ ಹಾಗೂ ದೃಢೀಕರಣಗಳಿಗಾಗಿ ಕೂಡ ಬಳಸಬಹುದು.

ನೀವು Apple Pay ಅನ್ನು ಸಕ್ರಿಯಗೊಳಿಸಿದ್ದರೆ, ಯಾವುದಾದರೂ Apple Pay ಪಾವತಿ ವಿಧಾನಗಳು ನಿಮ್ಮ Apple ಖಾತೆಯಲ್ಲಿನ ಫೈಲ್‌ನಲ್ಲಿ ಪಾವತಿ ವಿಧಾನವಾಗಿ ಸೇರಿಸಲು ಅರ್ಹವಾಗಿವೆಯೇ ಎಂಬುದನ್ನು ಸಹ Apple ಪರಿಶೀಲಿಸುತ್ತದೆ ಮತ್ತು ಆ ಪಾವತಿ ವಿಧಾನಗಳನ್ನು “ವಾಲೆಟ್‌ನಲ್ಲಿ ಕಂಡುಬಂದಿದೆ” ಎಂಬುದರ ಕೆಳಗೆ ಡಿಸ್‌ಪ್ಲೇ ಮಾಡುತ್ತದೆ. ನಿಮ್ಮ Apple ಖಾತೆಯೊಂದಿಗೆ ನೀವು ವಹಿವಾಟು ನಡೆಸಿದಾಗ, ಫೈಲ್‌ನಲ್ಲಿರುವ ಯಾವುದೇ Apple ಖಾತೆ ಪಾವತಿ ವಿಧಾನಗಳು Apple Payಗೆ ಅರ್ಹವಾಗಿವೆಯೇ ಎಂಬುದನ್ನು ಸಹ Apple ಪರಿಶೀಲಿಸಬಹುದು. ಹಾಗಿದ್ದಲ್ಲಿ, ನಿಮ್ಮ ಪಾವತಿ ಮಾಹಿತಿಯನ್ನು ರಕ್ಷಿಸಲು ಸಹಾಯ ಮಾಡಲು, Apple ಆ ಪಾವತಿ ವಿಧಾನಕ್ಕಾಗಿ Apple Pay ಅನ್ನು ಸಕ್ರಿಯಗೊಳಿಸಬಹುದು. ಸೆಟ್ಟಿಂಗ್ಸ್ > [ನಿಮ್ಮ ಹೆಸರು] > ಪಾವತಿ ಮತ್ತು ಷಿಪ್ಪಿಂಗ್‌ಗೆ ಹೋಗುವ ಮೂಲಕ ನೀವು ಯಾವುದೇ ಸಮಯದಲ್ಲಿ ನಿಮ್ಮ ಪಾವತಿ ವಿಧಾನಗಳನ್ನು ಮಾರ್ಪಡಿಸಬಹುದು.

ನಿಮ್ಮ Apple ಖಾತೆಗೆ ಸಂಬಂಧಿಸಿದ ಪಾವತಿ ವಿಧಾನವನ್ನು ಬಳಸಿಕೊಂಡು ನೀವು Apple gift card ಅನ್ನು ಖರೀದಿಸಬಹುದು ಮತ್ತು Appleಗೆ ಸ್ವೀಕೃತದಾರರ ಈಮೇಲ್ ವಿಳಾಸ, ನಿಮ್ಮ ಹೆಸರು ಹಾಗೂ ಗಿಫ್ಟ್ ಕಾರ್ಡ್ ಮೊತ್ತವನ್ನು ಒದಗಿಸುವ ಮೂಲಕ ಅವರ ಜೊತೆಗೆ ಗಿಫ್ಟ್ ಕಾರ್ಡ್ ಅನ್ನು ಹಂಚಿಕೊಳ್ಳಬಹುದು. ನೀವು ಆಯ್ಕೆ ಮಾಡಿದರೆ ನೀವು ಸಂದೇಶವನ್ನು ಸಹ ನಮೂದಿಸಬಹುದು. ಉಡುಗೊರೆ ಕಾರ್ಡ್ ಮಾರಾಟ ಮತ್ತು ರಿಡೆಂಪ್ಶನ್‌ಗಳ ಉದ್ದೇಶಗಳಿಗಾಗಿ, ಕಾನೂನನ್ನು ಅನುಸರಿಸಲು ಮತ್ತು ವಂಚನೆಯನ್ನು ತಡೆಗಟ್ಟಲು Apple ಸ್ವೀಕೃತದಾರರ ಮಾಹಿತಿಯನ್ನು ಬಳಸುತ್ತದೆ.

ನಿಮ್ಮ Apple ಖಾತೆಯ ಬ್ಯಾಲೆನ್ಸ್‌ಗೆ ಗಿಫ್ಟ್ ಕಾರ್ಡ್ ಮೌಲ್ಯವನ್ನು ಅನ್ವಯಿಸುವ ಮೂಲಕ ನೀವು Apple gift card ಅನ್ನು ರಿಡೀಮ್ ಸಹ ಮಾಡಬಹುದು. ನೀವು Apple gift card ಅನ್ನು ರಿಡೀಮ್ ಮಾಡಿದಾಗ, ಗಿಫ್ಟ್ ಕಾರ್ಡ್ ಕುರಿತ ಮಾಹಿತಿಯನ್ನು ನಿಮ್ಮ Apple ಖಾತೆಯ ಬ್ಯಾಲೆನ್ಸ್ ಜೊತೆಗೆ ಸೇರಿಸಲಾಗುತ್ತದೆ ಹಾಗೂ ಕಾನೂನಿಗೆ ಅನುಗುಣವಾಗಿರಲು ಮತ್ತು ವಂಚನೆ ತಡೆಗಟ್ಟಲು Apple ಅದನ್ನು ಬಳಸಬಹುದು. ನೀವು ರಿಡೀಮ್ ಮಾಡಿದ ಉಡುಗೊರೆ ಕಾರ್ಡ್‌ಗಳ ಸಂಖ್ಯೆಯಂತಹ ನಿಮ್ಮ ಉಡುಗೊರೆ ಕಾರ್ಡ್ ರಿಡೆಂಪ್ಶನ್ ಕುರಿತಾದ ಕೆಲವು ಮಾಹಿತಿಯನ್ನು ನಿಮ್ಮ ರಿಡೆಂಪ್ಶನ್ ಅನುಭವ ಮತ್ತು Appleನಿಂದ ನಿಮಗೆ ದೊರೆಯುವ ಸಂವಹನಗಳನ್ನು ವೈಯಕ್ತೀಕರಿಸಲು ಸಹ ಬಳಸಬಹುದು. iTunes Storeಗೆ ಹೋಗಿ, ಕೆಳಗೆ ಸ್ಕ್ರೋಲ್ ಮಾಡುವ ಮೂಲಕ, Apple ಖಾತೆಯನ್ನು ಟ್ಯಾಪ್ ಮಾಡಿ > Apple ಖಾತೆಯನ್ನು ವೀಕ್ಷಿಸಿ, ನಂತರ ವೈಯಕ್ತೀಕರಿಸಿದ ಶಿಫಾರಸುಗಳನ್ನು ಆಫ್ ಮಾಡುವ ಮೂಲಕ ಉಡುಗೊರೆ ಕಾರ್ಡ್ ಮಾಹಿತಿಯನ್ನು ವೈಯಕ್ತೀಕರಿಸುವುದರಿಂದ ನೀವು ಹೊರಗುಳಿಯಬಹುದು.

ಫೈಲ್‌ನಲ್ಲಿ ನಿಮ್ಮ ಪಾವತಿ ವಿಧಾನವನ್ನು ಬಳಸಿಕೊಂಡು ನೀವು ನೇರವಾಗಿ ನಿಮ್ಮ Apple ಖಾತೆಯ ಬ್ಯಾಲೆನ್ಸ್‌ಗೆ ಹಣವನ್ನು ಸೇರಿಸಬಹುದು. ನಿಮ್ಮ Apple ಖಾತೆಯ ಬ್ಯಾಲೆನ್ಸ್‌ಗೆ ನೀವು ಹಣವನ್ನು ಸೇರಿಸಿದಾಗ, ಮರುಕಳಿಸುವ ಫಂಡ್‌ಗಳ ಹೆಚ್ಚಳಕ್ಕಾಗಿ ಸ್ವಯಂಚಾಲಿತ ಮೊತ್ತ ಅಥವಾ ಸಮಯದ ಇಂಟರ್ವಲ್‌ಗಳನ್ನು ಸೆಟ್ ಮಾಡುವ ಆಯ್ಕೆಯನ್ನು ನೀವು ಹೊಂದಿರಬಹುದು. ನೀವು ಸ್ವಯಂಚಾಲಿತ ಫಂಡ್ ಹೆಚ್ಚಳವನ್ನು ಸೆಟಪ್ ಮಾಡಿದಾಗ, ನಿಮ್ಮ ಬ್ಯಾಲೆನ್ಸ್ ಅಥವಾ ಮರುಕಳಿಸುವ ಫಂಡ್‌ಗಳ ಹೆಚ್ಚಳಗಳ (ನೀವು ನೋಂದಾಯಿಸಿದ ನಂತರ ದೃಢೀಕರಣ ಸೂಚನೆಗಳು, ರಶೀದಿಗಳು ಮತ್ತು ರಿಮೈಂಡರ್‌ಗಳು) ಕುರಿತು ನಿಮ್ಮ ಸಾಧನದಲ್ಲಿ ಅಥವಾ ಈಮೇಲ್ ಮೂಲಕ ನಿಮಗೆ Appleನಿಂದ ಸಂವಹನಗಳನ್ನು ಕಳುಹಿಸಲಾಗುತ್ತದೆ. ನಿಮ್ಮ Apple ಖಾತೆ ಸೆಟ್ಟಿಂಗ್ಸ್‌ನಲ್ಲಿ ನೀವು ಯಾವುದೇ ಸಮಯದಲ್ಲಿ ಫಂಡ್‌ಗಳ ಸ್ವಯಂಚಾಲಿತ ಹೆಚ್ಚಳವನ್ನು ಅಪ್‌ಡೇಟ್ ಮಾಡಬಹುದು ಅಥವಾ ನಿಲ್ಲಿಸಬಹುದು.

ನೀವು ಗಿಫ್ಟ್ ಕಾರ್ಡ್ ಒಂದನ್ನು ರಿಡೀಮ್ ಮಾಡಿದ ನಂತರ ಅಥವಾ ನಿಮ್ಮ Apple ಖಾತೆಯ ಬ್ಯಾಲೆನ್ಸ್‌ಗೆ ಹಣವನ್ನು ಸೇರಿಸಿದ ನಂತರ, ನಿಮ್ಮ ಅಪ್‌ಡೇಟ್ ಮಾಡಿದ Apple ಖಾತೆಯ ಬ್ಯಾಲೆನ್ಸ್ ವಾಲೆಟ್‌ನಲ್ಲಿ ಗೋಚರಿಸುತ್ತದೆ. ಇದರಿಂದ ನೀವು Apple Store ಖರೀದಿಗಳಿಗಾಗಿ ನಿಮ್ಮ Apple ಖಾತೆಯ ಬ್ಯಾಲೆನ್ಸ್ ಅನ್ನು ಸುಲಭವಾಗಿ ಬಳಸಬಹುದು.

ಪಾವತಿ ವಿಧಾನಗಳು, ಉಡುಗೊರೆ ಕಾರ್ಡ್‌ಗಳು ಮತ್ತು ನಿಮ್ಮ Apple ಖಾತೆಗೆ ಹಣವನ್ನು ಸೇರಿಸುವುದಕ್ಕೆ ಸಂಬಂಧಿಸಿದಂತೆ ನಿಮ್ಮ ಅನುಭವವನ್ನು ಸುಧಾರಿಸಲು, ನಿಮ್ಮ Apple ಖಾತೆ ಪಾವತಿ ಸೆಟ್ಟಿಂಗ್ಸ್‌ನೊಂದಿಗೆ ನೀವು ಮಾಡುವ ಕ್ಲಿಕ್‌ಗಳು ಮತ್ತು ಟ್ಯಾಪ್‌ಗಳು ಸೇರಿದಂತೆ ನಿಮ್ಮ ಸಂವಹನಗಳ ಕುರಿತು Apple ಕೆಲವು ಡೇಟವನ್ನು ಸಂಗ್ರಹಿಸಬಹುದು.

ಸಬ್‌ಸ್ಕ್ರಿಪ್ಶನ್ ನಿರ್ವಹಣೆ

ನಿಮ್ಮ Apple ಖಾತೆ ಸೆಟ್ಟಿಂಗ್ಸ್‌ನಲ್ಲಿ Appleನ ಆ್ಯಪ್‌ನಲ್ಲಿನ ಖರೀದಿ ಸಿಸ್ಟಂನ ಮೂಲಕ ಖರೀದಿಸಿದ Apple ಸೇವೆಗಳು ಮತ್ತು ಥರ್ಡ್ ಪಾರ್ಟಿ ಸೇವೆಗಳಿಗೆ ನೀವು ಮಾಡಿರುವ ಸಬ್‌ಸ್ಕ್ರಿಪ್ಶನ್‌ಗಳನ್ನು ನೀವು ವೀಕ್ಷಿಸಬಹುದು ಮತ್ತು ನಿರ್ವಹಿಸಬಹುದು. ನಿಮ್ಮ iOS ಸಾಧನದಲ್ಲಿ, ಸೆಟ್ಟಿಂಗ್ಸ್ > [ನಿಮ್ಮ ಹೆಸರು] > ಸಬ್‌ಸ್ಕ್ರಿಪ್ಶನ್‌ಗಳು ಎಂಬುದಕ್ಕೆ ಹೋಗಿ. ಸಕ್ರಿಯವಾಗಿರುವ ಅಥವಾ ಇತ್ತೀಚೆಗೆ ಸಕ್ರಿಯವಾಗಿದ್ದ ಸಬ್‌ಸ್ಕ್ರಿಪ್ಶನ್‌ನ ವಿವರಗಳನ್ನು ವೀಕ್ಷಿಸಲು, ನಿರ್ವಹಿಸಲು ಮತ್ತು ರದ್ದು ಮಾಡಲು, ಸಬ್‌ಸ್ಕ್ರಿಪ್ಶನ್ ಅನ್ನು ಟ್ಯಾಪ್ ಮಾಡಿ. ನೀವು iCloud ಕುಟುಂಬದಲ್ಲಿದ್ದರೆ, ನಿಮ್ಮ ಕುಟುಂಬದೊಂದಿಗೆ ಸಬ್‌ಸ್ಕ್ರಿಪ್ಶನ್ ಹಂಚಿಕೆ ಮತ್ತು ನಿಮ್ಮ ನವೀಕರಣ ರಶೀದಿ ಆದ್ಯತೆಗಳನ್ನು ನೀವು ನಿರ್ವಹಿಸಬಹುದು. ನಿಮ್ಮ Apple ಖಾತೆಯ ಮೂಲಕ ನಿಮ್ಮ ಸಬ್‌ಸ್ಕ್ರಿಪ್ಷನ್ ಅನ್ನು ನೀವು ನೋಡಿದಾಗ ಮತ್ತು ನಿರ್ವಹಿಸಿದಾಗ, Apple ನಿಮಗಾಗಿ ಡಿಸ್‌ಪ್ಲೇ ಮಾಡಬೇಕೆಂದು ಡೆವಲಪರ್ ಬಯಸುವ ಯಾವುದೇ ಸಂದೇಶ ಅಥವಾ ಕೊಡುಗೆಗಳನ್ನು ಅವರಿಂದ ವಿನಂತಿಸುವ ಸಲುವಾಗಿ ನಿಮ್ಮ ಸಬ್‌ಸ್ಕ್ರಿಪ್ಷನ್ ಖರೀದಿಯ ಸಮಯದಲ್ಲಿ ಡೆವಲಪರ್‌ಗಳಿಗೆ ಒದಗಿಸಲಾದ ರಸೀದಿ ಮಾಹಿತಿಯನ್ನು Apple ಬಳಸಬಹುದು. ಡೆವಲಪರ್ ಪರವಾಗಿ ನಾವು ಡಿಸ್‌ಪ್ಲೇ ಮಾಡುವ ಸಂದೇಶಗಳ ಕಂಟೆಂಟ್ ಅನ್ನು Apple ಸ್ವಂತ ಉದ್ದೇಶಗಳಿಗಾಗಿ ಸಂಗ್ರಹಿಸುವುದಿಲ್ಲ ಅಥವಾ ಬಳಸುವುದಿಲ್ಲ. ಆದರೆ ಸಂದೇಶಗಳ ವಿನಂತಿಯು ನೀವು ನಿಮ್ಮ ಸಬ್‌ಸ್ಕ್ರಿಪ್ಷನ್ ಅನ್ನು ನಿರ್ವಹಿಸುತ್ತಿದ್ದೀರಿ ಎಂದು ಡೆವಲಪರ್‌ಗೆ ಸೂಚಿಸಬಹುದು ಹಾಗೂ ಸಂದೇಶವನ್ನು ಡಿಸ್‌ಪ್ಲೇ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು, ಒಂದುವೇಳೆ ಡಿಸ್‌ಪ್ಲೇ ಮಾಡಲಾಗಿದ್ದರೆ ಯಾವ ಬಗೆಯ ಸಂದೇಶವನ್ನು ಡಿಸ್‌ಪ್ಲೇ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನು Apple ಸಂಗ್ರಹಿಸಬಹುದು. ಸಬ್‌ಸ್ಕ್ರಿಪ್ಶನ್ ನಿರ್ವಹಣೆಯಲ್ಲಿ ನಿಮಗೆ ಆಗುವ ಅನುಭವವನ್ನು ಸುಧಾರಿಸಲು, ನಿಮ್ಮ Apple ಖಾತೆಯ ಸಬ್‌ಸ್ಕ್ರಿಪ್ಶನ್ ಸೆಟ್ಟಿಂಗ್ಸ್‌ನಲ್ಲಿ ನೀವು ಏನನ್ನು ವೀಕ್ಷಿಸುತ್ತೀರಿ, ಕ್ಲಿಕ್ ಮಾಡುತ್ತೀರಿ ಮತ್ತು ಟ್ಯಾಪ್ ಮಾಡುತ್ತೀರಿ ಎಂಬುದು ಸೇರಿದಂತೆ ನಿಮ್ಮ ಸಂವಹನಗಳ ಕುರಿತು Apple ಡೇಟವನ್ನು ಸಂಗ್ರಹಿಸಬಹುದು.

ಶಾಲೆ ಮತ್ತು ವ್ಯಾಪಾರ ಸಂಸ್ಥೆಗಳು

ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿರುವ ಈಮೇಲ್ ವಿಳಾಸವು Apple School Manager ಅಥವಾ Apple Business Manager ಸಂಸ್ಥೆಯಿಂದ ನಿಯಂತ್ರಿಸಲ್ಪಡುವ ಡೊಮೇನ್ ಅನ್ನು ಬಳಸಿದರೆ, ಆ ಸಂಸ್ಥೆಯು ಡೊಮೇನ್ ಅನ್ನು ನಿಯಂತ್ರಿಸುತ್ತದೆಯೇ ಎಂದು ಪರಿಶೀಲಿಸಿದ ನಂತರ Apple ನಿಮ್ಮ ಈಮೇಲ್ ವಿಳಾಸವನ್ನು ಆ ಸಂಸ್ಥೆಯೊಂದಿಗೆ ಹಂಚಿಕೊಳ್ಳುತ್ತದೆ. ನಿಮ್ಮ ಖಾತೆಯನ್ನು ಕೆಲಸ ಅಥವಾ ಶಾಲೆಯ ಖಾತೆಗೆ ವರ್ಗಾಯಿಸಲು ನಿಮಗೆ ಅನುವು ಮಾಡಿಕೊಡುವ ಮೂಲಕ ಅಥವಾ ನಿಮ್ಮ ಈಮೇಲ್ ವಿಳಾಸವನ್ನು ಹಿಂಪಡೆಯುವ ಮೂಲಕ ಸಂಸ್ಥೆಯು ನಿಮ್ಮ ಈಮೇಲ್ ವಿಳಾಸವನ್ನು ನಿಮ್ಮ Apple ಖಾತೆಯೊಂದಿಗೆ ಸಂಯೋಜಿಸುವುದನ್ನು ತಡೆಯಬಹುದು. ನಿಮ್ಮ ಖಾತೆಯನ್ನು ವರ್ಗಾಯಿಸುವ ಆಯ್ಕೆಯನ್ನು ನೀವು ಮಾಡಿದರೆ, ಅರ್ಹತೆಯನ್ನು ನಿರ್ಧರಿಸುವುದಕ್ಕಾಗಿ, ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳು ಮತ್ತು ಖರೀದಿಗಳು, ಪಾವತಿ ವಿಧಾನಗಳು ಹಾಗೂ ಉಳಿದಿರುವ ಬ್ಯಾಲೆನ್ಸ್‌ಗಳಂತಹ ವಿವಿಧ ಗುಣಲಕ್ಷಣಗಳನ್ನು ಮತ್ತು ನಿಮ್ಮ ಖಾತೆಯು ಕುಟುಂಬ ಹಂಚಿಕೊಳ್ಳುವಿಕೆ ಗುಂಪಿನ ಭಾಗವಾಗಿದೆಯೇ ಎಂಬುದನ್ನು Apple ಪರಿಶೀಲಿಸಬಹುದು. ನಿಮ್ಮ ಖಾತೆಯು ಅರ್ಹವಾಗಿದ್ದರೆ, ನಿಮ್ಮ ಸಂಸ್ಥೆಯು ನಿರ್ವಹಿಸುವ ಉದ್ಯೋಗ ಅಥವಾ ಶಾಲೆಯ ಖಾತೆಗೆ ನಿಮ್ಮ Apple ಖಾತೆಯನ್ನು ವರ್ಗಾಯಿಸಲು ನೀವು ಆಯ್ಕೆ ಮಾಡಬಹುದು, ಇದರಿಂದ ಖಾತೆಗೆ ಸಂಬಂಧಿಸಿದ ಎಲ್ಲಾ ಡೇಟವನ್ನು ಆ್ಯಕ್ಸೆಸ್ ಮಾಡಲು ಸಂಸ್ಥೆಗೆ ಸಾಧ್ಯವಾಗುತ್ತದೆ. ನಿಮ್ಮ ಖಾತೆಯು ಅರ್ಹವಾಗಿಲ್ಲದಿದ್ದರೆ ಅಥವಾ ನೀವು ಆಯ್ಕೆ ಮಾಡಲು ಬಯಸದಿದ್ದರೆ, ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾದ ಈಮೇಲ್ ವಿಳಾಸವನ್ನು ನೀವು ಅಪ್‌ಡೇಟ್ ಮಾಡಬೇಕಾಗುತ್ತದೆ. ಖಾತೆಯ ಗುಣಲಕ್ಷಣಗಳ ಸಂಪೂರ್ಣ ಪಟ್ಟಿಯನ್ನು ಒಳಗೊಂಡಂತೆ ನಿಮ್ಮ ಖಾತೆಯನ್ನು ವರ್ಗಾಯಿಸುವ ಕುರಿತು ಹೆಚ್ಚಿನ ಮಾಹಿತಿಗಾಗಿ ಮತ್ತು ನಿಮ್ಮ ಈಮೇಲ್ ವಿಳಾಸವನ್ನು ಅಪ್‌ಡೇಟ್ ಮಾಡಲು support.apple.com/en-in/102159 ಎಂಬಲ್ಲಿಗೆ ಭೇಟಿ ನೀಡಿ.

ಬಳಕೆಯ ಡೇಟ

ಸೇವೆಯ ಗುಣಮಟ್ಟವನ್ನು ಒದಗಿಸಲು ಮತ್ತು ಸುಧಾರಿಸಲು ನಿಮ್ಮ iCloud ಬಳಕೆಯ ಕುರಿತಾದ ಡೇಟವನ್ನು ಸಹ ನಾವು ಸಂಗ್ರಹಿಸುತ್ತೇವೆ. ಗ್ರಾಹಕರ ಸಮಸ್ಯೆಗಳು ಉದ್ಭವಿಸಿದರೆ ಅವುಗಳನ್ನು ಪರಿಹರಿಸಲು ಸಹಾಯ ಮಾಡಲು, ಈ ಕೆಲವು ಡೇಟವನ್ನು ನಿಮ್ಮ Apple ಖಾತೆಯೊಂದಿಗೆ ಸಂಯೋಜಿಸಬಹುದು. ನೀವು ಯಾವ ನಗರ ಮತ್ತು ದೇಶದಿಂದ ಸೇವೆಯನ್ನು ಆ್ಯಕ್ಸೆಸ್ ಮಾಡುತ್ತಿದ್ದೀರಿ ಎಂದು ಕಂಡುಹಿಡಿಯಲು ನಾವು ನಿಮ್ಮ IP ವಿಳಾಸವನ್ನು ಬಳಸಬಹುದು, ಆದರೆ ನಾವು ಅದನ್ನು ಉಳಿಸಿಕೊಳ್ಳುವುದಿಲ್ಲ.

ಖಾತೆಯ ಭದ್ರತೆ

ನಿಮ್ಮ ಡೇಟವನ್ನು ಸುರಕ್ಷಿತವಾಗಿರಿಸುವುದಕ್ಕೆ Apple ಅತ್ಯುತ್ತಮ ದರ್ಜೆಯ ಭದ್ರತಾ ತಂತ್ರಜ್ಞಾನಗಳನ್ನು ಬಳಸುತ್ತದೆ. Apple ಖಾತೆ, Apple ಭದ್ರತಾ ಫೀಚರ್‌ಗಳು ಮತ್ತು Apple ಖಾತೆ ರಿಕವರಿ ಪ್ರಕ್ರಿಯೆಗಳ ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸಲು ಮತ್ತು ಖಚಿತಪಡಿಸಲು, Apple ನಿಮ್ಮ Apple ಖಾತೆಗೆ ಸಂಬಂಧಿಸಿರಬಹುದಾದ ಕೆಲವು ಸೀಮಿತ ಮಾಹಿತಿಯನ್ನು ಸಂಗ್ರಹಿಸುತ್ತದೆ, ಅವುಗಳಲ್ಲಿ ಈ ಕೆಳಗಿನವುಗಳು ಸೇರಿವೆ:

  • Apple ಖಾತೆಗೆ ಸೈನ್ ಇನ್ ಮಾಡುವಾಗ, ಸಮೀಪದಲ್ಲಿರುವ ನಿಮ್ಮದೇ ಆದ ಮತ್ತೊಂದು ಸಾಧನವನ್ನು ಬಳಸಿಕೊಂಡು ಹೊಸ ಸಾಧನವನ್ನು ಸೆಟಪ್ ಮಾಡುವಾಗ, ಸಾಧನಗಳನ್ನು ತೆಗೆದುಹಾಕುವಾಗ, ನಿಮ್ಮ Apple ಖಾತೆ ಸೆಟ್ಟಿಂಗ್ಸ್ ಅನ್ನು ಅಪ್‌ಡೇಟ್ ಮಾಡುವಾಗ ಮತ್ತು ನಿಮ್ಮ ಡೇಟವನ್ನು ಆ್ಯಕ್ಸೆಸ್ ಮಾಡಲು ಅಥವಾ ರಿಕವರ್ ಮಾಡಲು ನಿಮ್ಮ ಖಾತೆಯನ್ನು ದೃಢೀಕರಿಸುವಾಗ ಅನುಸರಿಸುವ ಪ್ರಕ್ರಿಯೆಗಳು ಮತ್ತು ಅವುಗಳಲ್ಲಿ ಎಷ್ಟು ಬಾರಿ ಯಶಸ್ವಿಯಾಗುತ್ತೀರಿ ಅಥವಾ ಸಮಸ್ಯೆಗಳನ್ನು ಎದುರಿಸುತ್ತೀರಿ ಎಂಬುದನ್ನು ದಾಖಲಿಸುವ ಸಂದರ್ಭಗಳು
  • ನಿಮ್ಮ ರಚನೆಯ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆ ಹಾಗೂ Apple ಖಾತೆಗೆ ಸಂಬಂಧಿಸಿದ ರಿಕವರಿ ಸಂಪರ್ಕಗಳು ಮತ್ತು ರಿಕವರಿ ಕೀಗಳು ಅಥವಾ ಅದೇ ರೀತಿಯ ಭದ್ರತೆ ಮತ್ತು ರಿಕವರಿ ವಿವರಗಳ ಬಳಕೆಯನ್ನು ಪರಿಗಣಿಸುವ ಸಂದರ್ಭಗಳು. Appleಗೆ ನಿಮ್ಮ ರಿಕವರಿ ಸಂಪರ್ಕಗಳು ಅಥವಾ ರಿಕವರಿ ಕೀಗಳು ತಿಳಿದಿರುವುದಿಲ್ಲ ಅಥವಾ ಅವುಗಳಿಗೆ ಆ್ಯಕ್ಸೆಸ್ ಹೊಂದಿರುವುದಿಲ್ಲ
  • ನಿಮ್ಮ ಡೇಟದ ಆ್ಯಕ್ಸೆಸ್ ಅನ್ನು ರಿಕವರ್ ಮಾಡಲು, ನಿಮ್ಮ ಸಾಧನದ ಪಾಸ್‌ಕೋಡ್ ಅಥವಾ ಪಾಸ್‌ವರ್ಡ್ ಅನ್ನು ಬಳಸುವ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ಪರಿಗಣಿಸುವ ಸಂದರ್ಭಗಳು. Appleಗೆ ನಿಮ್ಮ ಸಾಧನದ ಪಾಸ್‌ಕೋಡ್ ಅಥವಾ ಪಾಸ್‌ವರ್ಡ್ ತಿಳಿದಿರುವುದಿಲ್ಲ ಅಥವಾ ಅವುಗಳಿಗೆ ಆ್ಯಕ್ಸೆಸ್ ಹೊಂದಿರುವುದಿಲ್ಲ
  • ನಿಮ್ಮ ಖಾತೆಯಿಂದ ಸಾಧನಗಳನ್ನು ತೆಗೆದುಹಾಕುವ ಅಥವಾ ವಿಫಲವಾದ ಖಾತೆ ಮತ್ತು ಡೇಟ ರಿಕವರಿ ಪರಿಣಾಮವನ್ನು ನಿರ್ಧರಿಸಲು ನಿಮ್ಮ ಎಲ್ಲಾ iCloud ಡೇಟವನ್ನು ರೀಸೆಟ್ ಮಾಡುವ ಮತ್ತು ಡಿಲೀಟ್ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದ ಸಂದರ್ಭಗಳು

ವೈಯಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸಲು ಅನ್ವಯವಾಗುವ ಕಾನೂನುಬದ್ಧ ಆಧಾರ

ನಿಮ್ಮ Apple ಖಾತೆಯನ್ನು ಮತ್ತು ಮೇಲೆ ವಿವರಿಸಿದ ಸಂಯೋಜಿತ ಮಾಹಿತಿಯನ್ನು ಸಾಮಾನ್ಯವಾಗಿ ಸೇವೆಯನ್ನು ಒದಗಿಸಲು ಮತ್ತು ನಮ್ಮ ಕಾನೂನಾತ್ಮಕ ಬಾಧ್ಯತೆಗಳನ್ನು ಅನುಸರಿಸಲು ಅಗತ್ಯವಿರುವಂತೆ Appleನೊಂದಿಗಿನ ನಿಮ್ಮ ಒಪ್ಪಂದವನ್ನು ನಿರ್ವಹಿಸುವುದಕ್ಕಾಗಿ ನಾವು ಪ್ರಕ್ರಿಯೆಗೊಳಿಸುತ್ತೇವೆ. ಸಮ್ಮತಿಯು ಸೂಕ್ತವಾದ ಕಾನೂನುಬದ್ಧ ಆಧಾರವಾಗಿದ್ದಲ್ಲಿ, ನಾವು ಅದನ್ನು ಅನ್ವಯವಾಗುವ ಸ್ಥಳೀಯ ಕಾನೂನುಗಳಿಗೆ ಅನುಗುಣವಾಗಿ ಪಡೆಯುತ್ತೇವೆ.

ಅನ್ವಯವಾಗುವ ಕಾನೂನು ಅನುಮತಿಸುವಲ್ಲಿ, ನಮ್ಮ ಅಥವಾ ಥರ್ಡ್ ಪಾರ್ಟಿಯೊಬ್ಬರ ಕಾನೂನುಬದ್ಧ ಹಿತಾಸಕ್ತಿಗಳನ್ನು ಪೂರೈಸುವ ಉದ್ದೇಶಗಳಿಗಾಗಿ, ನಾವು ವೈಯಕ್ತಿಕ ಡೇಟದ ಈ ಕೆಳಗಿನ ವರ್ಗಗಳನ್ನು ಅಗತ್ಯಕ್ಕೆ ತಕ್ಕಂತೆ ಪ್ರಕ್ರಿಯೆಗೊಳಿಸುತ್ತೆವೆ, ಇದರಲ್ಲಿ ಈ ಕೆಳಗಿನವುಗಳ ಕುರಿತಾದ ಮಾಹಿತಿಯೂ ಸೇರಿದೆ:

  • ನೀವು Apple ಸೇವೆಗಳಾದ್ಯಂತ ಸೈನ್ ಇನ್ ಮಾಡಲು ಬಳಸುವ ನಿಮ್ಮ Apple ಖಾತೆ, ಇದು ನೀವು ಸೈನ್ ಇನ್ ಮಾಡಲು ಬಳಸುವ ಮಾಹಿತಿ, ಹಾಗೆಯೇ ಎಲ್ಲಾ ಸಂಪರ್ಕ, ಪಾವತಿ ಮತ್ತು ವಿಶ್ವಾಸಾರ್ಹ ಫೋನ್ ಸಂಖ್ಯೆಗಳು ಹಾಗೂ ಭದ್ರತಾ ಪ್ರಶ್ನೆಗಳಂತಹ ಭದ್ರತೆಯ ವಿವರಗಳನ್ನು ಒಳಗೊಂಡಿರುತ್ತದೆ
  • ನೀವು ಇನ್‌ಸ್ಟಾಲ್ ಮಾಡುವ ಆ್ಯಪ್‌ಗಳು, ಇದರಲ್ಲಿ ನೀವು ಅವುಗಳನ್ನು ಎಲ್ಲಿ ಇನ್‌ಸ್ಟಾಲ್ ಮಾಡುತ್ತೀರಿ (ಉದಾಹರಣೆಗೆ, ವೆಬ್‌ಸೈಟ್ ಅಥವಾ ಆ್ಯಪ್ ಮಾರ್ಕೆಟ್‌ಪ್ಲೇಸ್) ಎಂಬ ಮಾಹಿತಿಯೂ ಸೇರಿದೆ
  • ನಿಮ್ಮ ಸಾಧನವು ಇರುವ ದೇಶ ಅಥವಾ ಪ್ರದೇಶವನ್ನು ಆಧರಿಸಿ ಕಾನೂನಾತ್ಮಕವಾಗಿ ಅಗತ್ಯವಿರುವ ಕೆಲವು ಸೇವೆಗಳು ಮತ್ತು ಫೀಚರ್‌ಗಳಿಗೆ ಅದು ಅರ್ಹವಾಗಿದೆಯೇ
  • ನಿಮ್ಮ ಸಾಧನದ ಹೆಸರು, ಕ್ರಮ ಸಂಖ್ಯೆ ಮತ್ತು ಇತರ ಹಾರ್ಡ್‌ವೇರ್ ಐಡೆಂಟಿಫೈಯರ್‌ಗಳನ್ನು ಒಳಗೊಂಡಂತೆ ನಿಮ್ಮ ಸಾಧನಗಳು
  • iCloud, iTunes Store, App Store, Apple Music, ಮತ್ತು Apple Oneನಂತಹ ವಿವಿಧ Apple ಸೇವೆಗಳ ನಿಮ್ಮ ಬಳಕೆ ಮತ್ತು ಅವುಗಳಿಗೆ ನೀವು ಮಾಡಿರುವ ಸಬ್‌ಸ್ಕ್ರಿಪ್ಶನ್‌ಗಳು
  • ಖಾತೆ ಸಂಖ್ಯೆಗಳು ಮತ್ತು ಅವಧಿ ಮುಕ್ತಾಯ ದಿನಾಂಕಗಳು, ಬಿಲ್ಲಿಂಗ್ ಮತ್ತು ಷಿಪ್ಪಿಂಗ್ ವಿಳಾಸಗಳು ಹಾಗೂ ಉಡುಗೊರೆ ಕಾರ್ಡ್ ರಿಡೆಂಪ್ಶನ್ ಮಾಹಿತಿ ಸೇರಿದಂತೆ ಪಾವತಿ ವಿವರಗಳು

ಈ ಕಾನೂನುಬದ್ಧವಾದ ಹಿತಾಸಕ್ತಿಗಳು ಇವುಗಳನ್ನು ಒಳಗೊಂಡಿರುತ್ತವೆ:

  • ನಿಮಗೆ ಮತ್ತು ಇತರರಿಗೆ ಉತ್ತಮ ಸೇವೆ ಮತ್ತು ಬೆಂಬಲವನ್ನು ಒದಗಿಸುವುದು ಮತ್ತು ಲೆಕ್ಕಪತ್ರ ನಿರ್ವಹಣೆ, ವರದಿ ಮಾಡುವಿಕೆ ಮತ್ತು ಅನಾಲಿಟಿಕ್ಸ್ ಉದ್ದೇಶಗಳಿಗಾಗಿ
  • ಕಾನೂನುಬದ್ಧವಾಗಿ ಅಗತ್ಯವಿರುವ ಫೀಚರ್‌ಗಳು ಮತ್ತು ಸೇವೆಗಳ ಲಭ್ಯತೆಯನ್ನು ನಿರ್ಧರಿಸುವುದು ಮತ್ತು ಅವುಗಳನ್ನು ಸಕ್ರಿಯಗೊಳಿಸುವುದು
  • ಈಮೇಲ್ ಮೂಲಕ ನಿಮಗೆ ಆಫರ್‌ಗಳನ್ನು ಕಳುಹಿಸಲು ಮತ್ತು ನಿಮಗೆ ಆಸಕ್ತಿಯಿರುವ push ನೋಟಿಫಿಕೇಷನ್ಸ್ ಅನ್ನು ಕಳುಹಿಸಲು ನಿಮ್ಮ ಡೇಟವನ್ನು ಬಳಸುವುದು
  • ಆಫರ್‌ಗಳಿಗಾಗಿ ಅರ್ಹತೆಯನ್ನು ಪರಿಶೀಲಿಸಲಾಗುತ್ತಿದೆ
  • ಮೋಸ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯುವುದು

ರಿಟೆನ್ಷನ್

ನೀವು ಸಬ್‌ಸ್ಕ್ರಿಪ್ಶನ್‌ನಂತಹ ಖರೀದಿಯನ್ನು ಮಾಡಿದಾಗ, ನಿಮ್ಮ ಖರೀದಿಗಳಿಗೆ ಸಂಬಂಧಿಸಿದ ವೈಯಕ್ತಿಕ ಡೇಟವನ್ನು, ಹಣಕಾಸಿನ ವರದಿ ಮಾಡುವಿಕೆಗೆ ಅನ್ವಯವಾಗುವ ಕಾನೂನುಗಳು ನಿರ್ದಿಷ್ಟಪಡಿಸುವ ಅವಧಿಗಳವರೆಗೆ ನಾವು ಇರಿಸಿಕೊಳ್ಳುತ್ತೇವೆ, ಪ್ರದೇಶಕ್ಕೆ ಅನುಗುಣವಾಗಿ ಇದರಲ್ಲಿ ವ್ಯತ್ಯಾಸವಾಗಬಹುದು. ಅದಕ್ಕಾಗಿ ಬಹುತೇಕ ಗ್ರಾಹಕರಿಗೆ ಕನಿಷ್ಠ 10-ವರ್ಷಗಳ ಇರಿಸಿಕೊಳ್ಳುವಿಕೆಯ ಅವಧಿಯ ಅಗತ್ಯವಿರುತ್ತದೆ, ಆದರೆ ಚೀನಾದಂಥ ಪ್ರದೇಶಗಳಲ್ಲಿ ಆ ಅವಧಿ 30 ವರ್ಷಗಳಷ್ಟಿರಬಹುದು. iCloud-ಸಂಬಂಧಿತ ಸೇವೆಗಳೊಂದಿಗೆ ನೀವು ನೆಡೆಸಿದ ಸಂವಹನಗಳ ದಾಖಲೆಯನ್ನು ಸಹ ನಾವು ಉಳಿಸಿಕೊಳ್ಳಬಹುದು. ಸಾಮಾನ್ಯವಾಗಿ, ಈ ದಾಖಲೆಗಳನ್ನು 30 ದಿನಗಳವರೆಗೆ ಸಂಗ್ರಹಿಸಲಾಗುತ್ತದೆ ಆದರೆ ಕಾನೂನು ಅಥವಾ ಕಾನೂನು ಪ್ರಕ್ರಿಯೆಗಳ ಪ್ರಕಾರ ಅವುಗಳನ್ನು ಹೆಚ್ಚು ಕಾಲ ಸಂಗ್ರಹಿಸುವ ಅಗತ್ಯವಿರದ ಹೊರತು ಅವುಗಳನ್ನು ಮೂರು ವರ್ಷಗಳವರೆಗೆ ಒಟ್ಟಾರೆಯಾಗಿ ಸಂಗ್ರಹಿಸಬಹುದು.

ನಿಮ್ಮ Apple ಖಾತೆಯನ್ನು ನೀವು ಡಿಲೀಟ್ ಮಾಡಿದರೆ, ಮೇಲೆ ವಿವರಿಸಿರುವುದನ್ನು ಒಳಗೊಂಡಂತೆ ಕಾನೂನಿನ ಬಾಧ್ಯತೆಗಳನ್ನು ಅನುಸರಿಸಲು ಮತ್ತು ಖಾತೆಯ ಭದ್ರತೆಯ ಕಾನೂನುಬದ್ಧ ಹಿತಾಸಕ್ತಿಗಳಿಗಾಗಿ ಅಗತ್ಯವಿರುವವರೆಗೆ ಡಿಲೀಟ್ ಮಾಡಲಾದ ಖಾತೆಯ ದಾಖಲೆಯನ್ನು ನಾವು ಉಳಿಸಿಕೊಳ್ಳುತ್ತೇವೆ. ನೀವು ಹೊಸ ಖಾತೆಯನ್ನು ನಂತರ ರಚಿಸುವ ಆಯ್ಕೆಯನ್ನು ಮಾಡಿದರೆ, ನೀವು ಡಿಲೀಟ್ ಮಾಡುವಂತೆ ನಮ್ಮನ್ನು ವಿನಂತಿಸಿಕೊಂಡಿರುವ ಖಾತೆಯೊಂದಿಗೆ ಸಂಯೋಜಿತವಾಗಿಲ್ಲದ ಈಮೇಲ್ ವಿಳಾಸವನ್ನು ನೀವು ಬಳಸಬೇಕಾಗುತ್ತದೆ. ನಿಮ್ಮ ಖಾತೆಯನ್ನು ರಚಿಸಲು ನೀವು ಫೋನ್ ಸಂಖ್ಯೆಯನ್ನು ಬಳಸಿದ್ದರೆ, ಅದೇ ಕಾರಣಗಳಿಗಾಗಿ ಇನ್ನೊಂದು ಖಾತೆಯನ್ನು ರಚಿಸಲು ಅದನ್ನು ಬಳಸಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಖಾತೆಯನ್ನು ರಚಿಸಲು ನೀವು ಪ್ರಾಥಮಿಕ ಈಮೇಲ್ ವಿಳಾಸ ಅಥವಾ ಫೋನ್ ಸಂಖ್ಯೆಯನ್ನು ಬಳಸಿದ್ದರೆ, ಆ ಖಾತೆಗೆ ಸಂಬಂಧಿಸಿದಂತೆ ಅದನ್ನು ತೆಗೆದುಹಾಕಲು ನಿಮಗೆ ಸಾಧ್ಯವಾಗುವುದಿಲ್ಲ. ನ್ಯಾಯಾಲಯದ ತೀರ್ಪು ಅಥವಾ ಅದಕ್ಕೆ ಸಮಾನವಾದ ಇತರ ಕಡ್ಡಾಯವಾದ ಪ್ರಕ್ರಿಯೆಗೆ ಅನುಗುಣವಾಗಿ ನಾವು ಮಾಹಿತಿಯನ್ನು ಉಳಿಸಿಕೊಳ್ಳಬೇಕಾಗಬಹುದು.

ನಾವು ಖಾತೆಯನ್ನು ಡಿಲೀಟ್ ಮಾಡಿದಾಗ, ನಿಮ್ಮ ಖಾತೆಯೊಂದಿಗೆ ಸಂಯೋಜಿತವಾಗಿರುವ ಎಲ್ಲಾ ವೈಯಕ್ತಿಕ ಡೇಟವನ್ನು ಡಿಲೀಟ್ ಮಾಡಲು ನಮ್ಮ ಕೈಲಾದ ಪ್ರಯತ್ನಗಳನ್ನು ನಾವು ಮಾಡುತ್ತೇವೆ. ನಿಮ್ಮ ವೈಯಕ್ತಿಕ ಡೇಟವನ್ನು ನಾವು ಡಿಲೀಟ್ ಮಾಡಿದರೆ, ನಿಮ್ಮ ಕುರಿತಾದ ಕೆಲವು ವೈಯಕ್ತಿಕ ಡೇಟವನ್ನು ಶಾಶ್ವತವಾಗಿ ರಿಕವರ್ ಮಾಡಲು ಸಾಧ್ಯವಾಗದಂತೆ ಮಾಡುತ್ತೇವೆ ಮತ್ತು ಕೆಲವು ವೈಯಕ್ತಿಕ ಡೇಟವನ್ನು ಗುರುತಿಸಲಾಗದಂತೆ ಮಾಡುತ್ತೇವೆ.

ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಇದನ್ನು ನೀವು https://www.apple.com/in/privacy/ ಎಂಬಲ್ಲಿ ನೋಡಬಹುದು.

2026-05-11