Apple Books ಮತ್ತು ಗೌಪ್ಯತೆ

Apple Books ಅನ್ನು ಸುಧಾರಿಸಲು ಮತ್ತು ವೈಯಕ್ತೀಕರಿಸಲು ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿಲ್ಲದ ಪುಸ್ತಕಗಳ ಬಳಕೆಯ ಡೇಟವನ್ನು Apple ಸಂಗ್ರಹಿಸುತ್ತದೆ. Apple Booksನಲ್ಲಿ ನಿಮ್ಮ ಅನುಭವವನ್ನು ವೈಯಕ್ತೀಕರಿಸಲು, ನಿಮಗೆ ಮಾರ್ಕೆಟಿಂಗ್ ಈಮೇಲ್‌ಗಳು ಮತ್ತು ನೋಟಿಫಿಕೇಷನ್‌ಗಳನ್ನು ಕಳುಹಿಸಲು, ಸ್ಟೋರ್‌ ಅನ್ನು ಸುಧಾರಿಸಲು ಹಾಗೂ ವಂಚನೆಯನ್ನು ತಡೆಗಟ್ಟಲು ನಿಮ್ಮ ಹುಡುಕಾಟಗಳು, ಬ್ರೌಸಿಂಗ್ ಮಾಹಿತಿ, ಖರೀದಿಗಳು ಮತ್ತು ಸಾಧನದ ಟ್ರಸ್ಟ್ ಸ್ಕೋರ್ ಅನ್ನು ಬಳಸಬಹುದು. ನೀವು ಯಾವುದೇ ಸಮಯದಲ್ಲಿ ನಿಮ್ಮ ಮಾರ್ಕೆಟಿಂಗ್ ಮತ್ತು ವೈಯಕ್ತೀಕರಣದ ಆದ್ಯತೆಗಳನ್ನು ಬದಲಾಯಿಸಬಹುದು.
 

ನಿಮ್ಮ ಮಾಹಿತಿಯನ್ನು ಕಾಪಾಡಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎಂಬುದನ್ನು ಆಯ್ಕೆ ಮಾಡಲು ನಿಮಗೆ ಅನುವು ಮಾಡಿಕೊಡಲು Apple Books ಅನ್ನು ವಿನ್ಯಾಸಗೊಳಿಸಲಾಗಿದೆ.


Privacy Icon

  • ನಿಮ್ಮ ವೈಯಕ್ತಿಕ ಡೇಟವನ್ನು ನಾವು ಸಂಗ್ರಹಿಸುತ್ತೇವೆ ಇದರಿಂದ ನೀವು ಖರೀದಿಸುವ, ಡೌನ್‌ಲೋಡ್ ಮಾಡುವ ಅಥವಾ App Store ಮತ್ತು ಇತರ Apple ಆನ್‌ಲೈನ್ ಸ್ಟೋರ್‌ಗಳಲ್ಲಿ ಅಪ್‌ಡೇಟ್ ಮಾಡಲು ಬಯಸುವ ವಿಷಯವನ್ನು ನಾವು ನಿಮಗೆ ಒದಗಿಸಬಹುದು.
  • ನಾವು ಸ್ಟೋರ್‌ನಲ್ಲಿ ನಿಮ್ಮ ಖಾತೆ, ಖರೀದಿಗಳು, ಹಾಗೂ ಡೌನ್‌ಲೋಡ್‌ಗಳ ಬಗೆಗಿನ ಮಾಹಿತಿಯನ್ನು App Store, Apple News ಹಾಗೂ ಸ್ಟಾಕ್ಸ್ ಆ್ಯಪ್‌ನಲ್ಲಿ ಕಂಡುಬರುವ ಜಾಹೀರಾತುಗಳು ನಿಮಗೆ ಸೂಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬಳಸುತ್ತೇವೆ. ಕೆಳಗೆ ವಿವರಿಸಿದಂತೆ ನೀವು ಈ ಜಾಹೀರಾತಿಗೆ ಸಂಬಂಧಿಸಿದಂತೆ ಆಯ್ಕೆಗಳನ್ನು ಹೊಂದಿದ್ದೀರಿ.
  • ನಾವು ಸ್ಟೋರ್‌ನಲ್ಲಿನ ನಿಮ್ಮ ಖರೀದಿಗಳು ಮತ್ತು ಡೌನ್‌ಲೋಡ್‌ಗಳ ಬಗೆಗಿನ ಮಾಹಿತಿಯನ್ನು ಮತ್ತು Apple Booksನಲ್ಲಿನ ಇತರ ಚಟುವಟಿಕೆಗಳಿಗೆ ಸಂಬಂಧಿಸಿದ ಫೀಚರ್‌ಗಳನ್ನು ವಿಶೇಷ ಉದ್ದೇಶಗಳಿಗಾಗಿ ರಚಿಸಲು, ವೈಯಕ್ತೀಕರಿಸಿದ ಶಿಫಾರಸುಗಳನ್ನು ನೀಡಲು, Apple Marketing ಅನ್ನೂ ಒಳಗೊಂಡಂತೆ ಇತರೆ ನೋಟಿಫಿಕೇಷನ್‌ಗಳನ್ನು ನಿಮಗೆ ಕಳುಹಿಸುವ ಸಲುವಾಗಿ ಬಳಸುತ್ತೇವೆ. ಕೆಳಗೆ ವಿವರಿಸಿದಂತೆ ನೀವು ಈ ಉದ್ದೇಶಕ್ಕಾಗಿ ಈ ಡೇಟ ಬಳಕೆಯಾಗದಂತೆ ಹೊರಗುಳಿಯುವುದನ್ನು ಆಯ್ದುಕೊಳ್ಳಬಹುದು. ನಮ್ಮ ಬಳಕೆದಾರರಿಗಾಗಿ Apple Books ಅನ್ನು ಸುಧಾರಿಸಲು ನಾವು ಬಳಕೆದಾರರ ವಹಿವಾಟಿನ ಬಗ್ಗೆ ವೈಯಕ್ತಿಕವಲ್ಲದ ಡೇಟವನ್ನು ಸಂಗ್ರಹಿಸುತ್ತೇವೆ.
  • ವಂಚನೆಯನ್ನು ಗುರುತಿಸಲು ಮತ್ತು ತಡೆಯಲು ಸಹಾಯ ಮಾಡಲು, ನೀವು ಮಾಡುವ ಸಂಭಾವ್ಯ ಫೋನ್ ಕರೆಗಳು ಅಥವಾ ನೀವು ಕಳುಹಿಸುವ ಅಥವಾ ಸ್ವೀಕರಿಸುವ ಈಮೇಲ್‌ಗಳು ಸೇರಿದಂತೆ ನಿಮ್ಮ ಸಾಧನವನ್ನು ನೀವು ಹೇಗೆ ಬಳಸುತ್ತೀರಿ ಎಂಬುದರ ಕುರಿತು ಈ ಮಾಹಿತಿಯನ್ನು ನೀವು ಶಾಪಿಂಗ್ ಮಾಡುವಾಗ ಸಾಧನದ ವಿಶ್ವಾಸಾರ್ಹ ಸ್ಕೋರ್ ಅನ್ನು ಲೆಕ್ಕಾಚಾರ ಮಾಡಲು ಬಳಸಲಾಗುತ್ತದೆ. ನಿಮ್ಮ ಸಾಧನದಲ್ಲಿನ ನಿಜವಾದ ಮೌಲ್ಯಗಳನ್ನು ತಿಳಿದುಕೊಳ್ಳಲು Appleಗೆ ಸಾಧ್ಯವಾಗದ ರೀತಿಯಲ್ಲಿ ಸಲ್ಲಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ. ಸ್ಕೋರ್‌ಗಳನ್ನು ನಮ್ಮ ಸರ್ವರ್‌ಗಳಲ್ಲಿ ನಿಗದಿತ ಸಮಯದವರೆಗೆ ಸಂಗ್ರಹಿಸಲಾಗುತ್ತದೆ.
  • ಸ್ಟೋರ್‌ಗಳನ್ನು ಹೇಗೆ ಸುಧಾರಿಸುವುದು ಎಂಬುದನ್ನು ತಿಳಿಯಲು ನಿಮ್ಮ ಬ್ರೌಸಿಂಗ್, ಖರೀದಿಗಳು, ಹುಡುಕಾಟಗಳು ಮತ್ತು ಡೌನ್‌ಲೋಡ್‌ಗಳ ಕುರಿತು ನಾವು ಮಾಹಿತಿಯನ್ನು ಬಳಸುತ್ತೇವೆ. ನೀವು App Store ಅಥವಾ ಇತರ Apple ಆನ್‌ಲೈನ್ ಸ್ಟೋರ್‌ಗಳಿಗೆ ಸೈನ್ ಇನ್ ಮಾಡಿದಾಗ ಈ ರೆಕಾರ್ಡ್‌ಗಳನ್ನು IP ವಿಳಾಸಗಳು ಎಂದು ಕರೆಯಲಾಗುವ ರ್‍ಯಾಂಡಮ್ ಅನನ್ಯ ಐಡೆಂಟಿಫೈಯರ್‌ಗಳು (ಅವುಗಳು ಬಂದಿರುವ ಮೂಲ ಅಥವಾ ವಿಧಾನ) ಮತ್ತು Apple ಖಾತೆಯೊಂದಿಗೆ ಸಂಗ್ರಹಿಸಲಾಗುತ್ತದೆ.

ನಿಮ್ಮ ಮಾಹಿತಿಯ ಗೌಪ್ಯತೆ ಮತ್ತು ಭದ್ರತೆಯನ್ನು ರಕ್ಷಿಸುವುದು Appleನಲ್ಲಿರುವ ಪ್ರತಿಯೊಬ್ಬರ ಆದ್ಯತೆಯಾಗಿದೆ. ನಿಮ್ಮ ಅನುಭವವನ್ನು ಸುಧಾರಿಸಲು ಅಗತ್ಯವಾದ ಡೇಟವನ್ನು ಸಂಗ್ರಹಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ನಾವು ಡೇಟವನ್ನು ಸಂಗ್ರಹಿಸಿದಾಗ, ನಾವು ಏನನ್ನು ಸಂಗ್ರಹಿಸುತ್ತೇವೆ ಮತ್ತು ನಮಗೆ ಅದು ಏಕೆ ಬೇಕು ಎಂಬುದನ್ನು ನೀವು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ನಾವು ಭಾವಿಸುತ್ತೇವೆ, ಇದರಿಂದ ನೀವು ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಬಹುದು. ಪ್ರತಿಯೊಂದು Apple ಉತ್ಪನ್ನ ಮತ್ತು ಸೇವೆಯಂತೆ, ಈ ತತ್ವಗಳನ್ನು ಗಮನದಲ್ಲಿಟ್ಟುಕೊಂಡು Apple Books ಅನ್ನು ವಿನ್ಯಾಸಗೊಳಿಸಲಾಗಿದೆ.

ಸ್ಟೋರ್‌ಗಳನ್ನು ಒದಗಿಸುವುದು

ನಾವು App Storeನಲ್ಲಿ ಹಾಗೂ iTunes Store ಮತ್ತು Apple Books ಒಳಗೊಂಡಂತೆ ಇತರ Apple ಆನ್‌ಲೈನ್ ಸ್ಟೋರ್‌ಗಳಲ್ಲಿ ಸೇವೆಗಳು ಹಾಗೂ ಫೀಚರ್‌ಗಳನ್ನು ನೀಡಲು ನಿಮ್ಮ ವೈಯಕ್ತಿಕ ಡೇಟವನ್ನು ಬಳಸುತ್ತೇವೆ. ಉದಾಹರಣೆಗೆ, ಈ ಮಾಹಿತಿಯು ನಿಮ್ಮ ಖಾತೆ ಮತ್ತು ಪಾವತಿ ಮಾಹಿತಿ, ಅದನ್ನು ನೀವು ಸೆಟ್ಟಿಂಗ್ಸ್‌ನಲ್ಲಿ ಆ್ಯಕ್ಸೆಸ್ ಮಾಡಬಹುದು ಮತ್ತು ಬದಲಾಯಿಸಬಹುದು ಮತ್ತು ನಿಮ್ಮ ಖರೀದಿ ಹಾಗೂ ಡೌನ್‌ಲೋಡ್ ಇತಿಹಾಸವನ್ನು ಒಳಗೊಂಡಿರುತ್ತದೆ.

ನೀವು Apple Booksನಿಂದ ಕಂಟೆಂಟ್ ಅನ್ನು ಡೌನ್‌ಲೋಡ್ ಮಾಡಿದಾಗ, ನಿಮ್ಮ ಸಾಧನದ ಹಾರ್ಡ್‌ವೇರ್ ID ಮತ್ತು IP ವಿಳಾಸದಂತಹ ಐಡೆಂಟಿಫೈಯರ್‌ಗಳನ್ನು Apple ನಿಮ್ಮ Apple ಖಾತೆಯೊಂದಿಗೆ ಲಾಗ್ ಮಾಡುತ್ತದೆ.

ನಿಮಗೆ ಅನುಕೂಲವಾಗಲು, Apple Books ನೀವು ಸೈನ್ ಇನ್ ಮಾಡಿದ ಸಾಧನಗಳು ಹಾಗೂ ಕಂಪ್ಯೂಟರ್‌ಗಳಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳು, ಟಿಪ್ಪಣಿ, ಹಾಗೂ ಸಂಗ್ರಹಗಳನ್ನು ಸಿಂಕ್ ಮಾಡುತ್ತದೆ. ಈ ಮಾಹಿತಿಯನ್ನು ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿ ಸಂಗ್ರಹಿಸಲಾಗುತ್ತದೆ.

ಸ್ಟೋರ್‌ಗಳನ್ನು ಸುಧಾರಿಸುವುದು

App Store ಹಾಗೂ ಇತರ Apple ಆನ್‌ಲೈನ್ ಸ್ಟೋರ್‌ಗಳ ಅನುಭವವನ್ನು ಸುಧಾರಿಸಲು, ನೀವು ಸ್ಟೋರ್ ಅನ್ನು ಯಾವಾಗ ತೆರೆಯುತ್ತೀರಿ ಹಾಗೂ ಮುಚ್ಚುತ್ತೀರಿ, ನೀವು ಯಾವ ಕಂಟೆಂಟ್ ಅನ್ನು ಹುಡುಕುತ್ತೀರಿ, ನೀವು ನೋಡುವ ಹಾಗೂ ಡೌನ್‌ಲೋಡ್ ಮಾಡುವ ಕಂಟೆಂಟ್ ಹಾಗೂ ನೋಟಿಫಿಕೇಷನ್‌ಗಳ ಜೊತೆಗೆ ನಿಮ್ಮ ಸಂವಹನಗಳೂ ಸೇರಿದಂತೆ ನಿಮ್ಮ Apple Books ಬಳಕೆಯ ಕುರಿತ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ನಿಮ್ಮ ಸಾಧನದ ಪ್ರಕಾರ, ನಿಮ್ಮ ಆಪರೇಟಿಂಗ್ ಸಿಸ್ಟಂನ ಆವೃತ್ತಿ ಮತ್ತು ನಿಮ್ಮ ಸಾಧನದಲ್ಲಿ ಲಭ್ಯವಿರುವ ಸ್ಥಳಾವಕಾಶದಂತಹ ಮಾಹಿತಿಯನ್ನು ಸಹ ನಾವು ಸಂಗ್ರಹಿಸುತ್ತೇವೆ. ವಿನಂತಿಸಿದ ಕಂಟೆಂಟ್ ಅನ್ನು ಡೌನ್‌ಲೋಡ್ ಮಾಡಬಹುದೇ ಎಂಬುದನ್ನು ನಿರ್ಣಯಿಸಲು, ಸಾಧನ ಸಂಗ್ರಹಣೆಯ ಬಳಕೆಯ ಸಾಮಾನ್ಯ ಟ್ರೆಂಡ್‌ಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿಮ್ಮ ಸಾಧನವನ್ನು Wi-Fi ಅಥವಾ ಮೊಬೈಲ್ ಸೇವೆಯ ಮೂಲಕ ಕನೆಕ್ಟ್ ಮಾಡಲಾಗಿದೆಯೇ ಎಂಬುದನ್ನು ನಿರ್ಣಯಿಸಲು ನಾವು ಈ ಮಾಹಿತಿಯನ್ನು ಬಳಸಬಹುದು. ನೀವು ಏನನ್ನು ಹುಡುಕುತ್ತೀರಿ ಎಂಬುದು ಸಹ ನಮಗೆ ಟ್ರೆಂಡಿಂಗ್ ಹುಡುಕಾಟಗಳನ್ನು ತೋರಿಸುವುದನ್ನೂ ಸಾಧ್ಯವಾಗಿಸುತ್ತದೆ. ಹುಡುಕಾಟ ಹಾಗೂ ಶಿಫಾರಸುಗಳನ್ನು ಸುಧಾರಿಸಲು ಆ್ಯಪ್ ಬಳಕೆ ಹಾಗೂ ಓದುವ ಚಟುವಟಿಕೆಯನ್ನು ಅರ್ಥಮಾಡಿಕೊಳ್ಳಲು ನಾವು ಒಟ್ಟುಗೂಡಿಸಿದ ಮಾಹಿತಿಯನ್ನು ಬಳಸುತ್ತೇವೆ.

ನಾವು ಬಳಕೆದಾರರ ತೊಡಗಿಸಿಕೊಳ್ಳುವಿಕೆಯನ್ನು ಅರ್ಥಮಾಡಿಕೊಳ್ಳಲು, ಫೀಚರ್‌ಗಳಿಗೆ ಆದ್ಯತೆ ನೀಡಲು ಹಾಗೂ ಒಟ್ಟುಗೂಡಿಸಿದ ಓದುವ ಚಟುವಟಿಕೆಯನ್ನು ಅರ್ಥಮಾಡಿಕೊಳ್ಳಲು ಪುಸ್ತಕಗಳ ಜೊತೆಗೆ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುತ್ತೇವೆ. Apple ಒಬ್ಬ ನಿರ್ದಿಷ್ಟ ಬಳಕೆದಾರರ ಓದುವಿಕೆಯ ಚಟುವಟಿಕೆಯನ್ನು ತಿಳಿಯದಂತೆ ಈ ಮಾಹಿತಿಯನ್ನು ಪ್ರತೀ ಬಳಕೆದಾರರಿಗೆ ಹಾಗೂ ಪ್ರತೀ ಪುಸ್ತಕಕ್ಕೆ ರ್‍ಯಾಂಡಮ್ವಾದ ಅನನ್ಯ ಐಡೆಂಟಿಫೈಯರ್‌ಗಳ ಜೊತೆಗೆ ಜೋಡಿಸಲಾಗುತ್ತದೆ. Apple Booksನಿಂದ ಡೌನ್‌ಲೋಡ್ ಮಾಡಿದ ಪುಸ್ತಕಗಳಿಗಾಗಿ, ಬಳಕೆಯನ್ನು ಪ್ರಕಾರದಂಥ ಪುಸ್ತಕದ ಕುರಿತಾದ ಮಾಹಿತಿಯ ಜೊತೆಗೆ ಬಳಕೆದಾರರಲ್ಲಿ ಒಟ್ಟುಗೂಡಿಸಲಾಗುತ್ತದೆ. Apple Booksನಿಂದ ಡೌನ್‌ಲೋಡ್ ಮಾಡಿರದ ಪುಸ್ತಕಗಳು ಹಾಗೂ ಇತರ ಡಾಕ್ಯುಮಂಟ್‌ಗಳಿಗಾಗಿ, ನಾವು ಫೈಲ್ ಫಾರ್ಮ್ಯಾಟ್ ಅನ್ನು ಸಂಗ್ರಹಿಸುತ್ತೇವೆ, ಆದರೆ ಪುಸ್ತಕದ ಕಂಟೆಂಟ್ ಬಗ್ಗೆ ಯಾವುದೇ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ.

ನಾವು iCloudಗೆ ಸೈನ್ ಇನ್ ಮಾಡಲಾದ ನಿಮ್ಮ ಸಾಧನಗಳಾದ್ಯಂತ ಪುಸ್ತಕಗಳ ಬಳಕೆಯ ಚಟುವಟಿಕೆಗಾಗಿ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಅನ್ನು ಬಳಸಿ ಐಡೆಂಟಿಫೈಯರ್‌ಗಳನ್ನು ಸಿಂಕ್ ಮಾಡಲು iCloud ಅನ್ನು ಬಳಸುತ್ತೇವೆ. ಈ ಐಡೆಂಟಿಫೈಯರ್‌ಗಳನ್ನು ರೀಸೆಟ್ ಮಾಡಲು, ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ಸೆಟ್ಟಿಂಗ್ಸ್ > ಆ್ಯಪ್‌ಗಳು > ಪುಸ್ತಕ ಎಂಬಲ್ಲಿಗೆ ಹೋಗಿ ಮತ್ತು ಐಡೆಂಟಿಫೈಯರ್ ರೀಸೆಟ್ ಮಾಡಿ ಎನ್ನುವುದನ್ನು ಟ್ಯಾಪ್ ಮಾಡಿ.

ಸ್ಟೋರ್‌ಗಳನ್ನು ವೈಯಕ್ತೀಕರಿಸುವುದು

ನಿಮಗೆ ಹೆಚ್ಚು ಸೂಕ್ತವಾದ ಕಂಟೆಂಟ್ ಅನ್ನು ಅನ್ವೇಷಿಸಲು ನಿಮಗೆ ಸಹಾಯ ಮಾಡುವುದಕ್ಕಾಗಿ Apple Books ಮೂಲಕ ನಿಮ್ಮ ಸಂವಹನಗಳನ್ನು ಬಳಸುತ್ತೇವೆ. ಉದಾಹರಣೆಗೆ, ನೀವು ಯಾವ ಕಂಟೆಂಟ್ ಅನ್ನು ವೀಕ್ಷಿಸುತ್ತೀರಿ ಅಥವಾ ಡೌನ್‌ಲೋಡ್ ಮಾಡುತ್ತೀರಿ ಎಂಬುದನ್ನು ತಿಳಿದುಕೊಂಡರೆ “ನೀವು ಇಷ್ಟಪಡಬಹುದಾದ ಇನ್ನಷ್ಟು ಪುಸ್ತಕಗಳು” ಎಂಬಂತಹ ವೈಯಕ್ತೀಕರಿಸಿದ ಫೀಚರ್‌ಗಳನ್ನು ನೀಡಲು ನಮಗೆ ಸಾಧ್ಯವಾಗುತ್ತದೆ. ನೀವು ಈ ಹಿಂದೆ ಏನನ್ನು ಹುಡುಕಿದ್ದೀರಿ, ನೋಡಿದ್ದೀರಿ, ಡೌನ್‌ಲೋಡ್ ಮಾಡಿದ್ದೀರಿ, ಅಪ್‌ಡೇಟ್ ಮಾಡಿದ್ದೀರಿ, ವಿಮರ್ಶಿಸಿದ್ದೀರಿ, ಅಥವಾ ನೀವು ಓದಬಯಸುತ್ತೀರಿ ಪಟ್ಟಿಗೆ ಸೇರಿಸಿದ್ದೀರಿ ಎನ್ನುವುದನ್ನು ಆಧರಿಸಿ, ನಿಮಗೆ ಆಸಕ್ತಿಯಿರಬಹುದು ಎಂದು ಭಾವಿಸುವ ಕಂಟೆಂಟ್ ಅನ್ನು ನಿಮಗೆ ಶಿಪಾರಸು ಮಾಡುತ್ತೇವೆ. ನಿಮ್ಮ ಓದುತ್ತಿರುವ ಪುಸ್ತಕದಲ್ಲಿನ ಪ್ರಗತಿಯಂತಹ ನಿಮ್ಮ ಓದುವ ಚಟುವಟಿಕೆಯನ್ನೂ ಹೆಚ್ಚು ಸೂಕ್ತವಾದ ಶಿಫಾರಸುಗಳನ್ನು ಜನರೇಟ್ ಮಾಡಲು ಬಳಸುತ್ತೇವೆ. ಈ ಓದಿನ ಚಟುವಟಿಕೆಯು ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿಲ್ಲ. ನಿಮ್ಮ Apple ಖಾತೆಯಿಂದ ಪಡೆದ ಖಾತೆಯ ಮಾಹಿತಿಯೊಂದಿಗೆ ಖರೀದಿಯ ಇತಿಹಾಸ ಹಾಗೂ ಪಾವತಿ ವಿಧಾನಗಳನ್ನು ಒಟ್ಟಾಗಿ ಬಳಸುತ್ತೇವೆ. ನಿಮ್ಮ Apple ಖಾತೆಗಾಗಿ ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಆಫ್ ಮಾಡುವ ಮೂಲಕ ನೀವು App Store, Apple Books, iTunes Store, Apple TV, ಪಾಡ್‌ಕಾಸ್ಟ್ಸ್ ಮತ್ತು Appleನಿಂದ ಸಬ್‌ಸ್ಕ್ರಿಪ್ಶನ್‌ಗಳನ್ನು ವೈಯಕ್ತೀಕರಣಗೊಳಿಸಿದ ಫೀಚರ್‌ಗಳನ್ನು ನೀವು ಆಫ್ ಮಾಡಬಹುದು. ನಿಮ್ಮ iOS, iPadOS ಅಥವಾ visionOS ಸಾಧನಗಳಲ್ಲಿ, ಸೆಟ್ಟಿಂಗ್ಸ್ > [ನಿಮ್ಮ ಹೆಸರು] > ಮೀಡಿಯಾ ಮತ್ತು ಖರೀದಿಗಳು, ಖಾತೆಯನ್ನು ನೋಡಿ ಎನ್ನುವುದನ್ನು ಟ್ಯಾಪ್ ಮಾಡಿ ಹಾಗೂ ನಂತರ ವೈಯಕ್ತೀಕರಿಸಿದ ಶಿಫಾರಸುಗಳನ್ನು ಆಫ್ ಮಾಡಲು ಟ್ಯಾಪ್ ಮಾಡಿ.

Siri ನೀವು ಬಳಸುವ ಆ್ಯಪ್‌ಗಳಿಂದ ಪಡೆದ ಮಾಹಿತಿಯ ಸಾಧನದಲ್ಲಿನ ಪ್ರಕ್ರಿಯೆಯನ್ನು ಆಧರಿಸಿ ನೀವು ಇಷ್ಟಪಡಬಹುದಾದ ಕಂಟೆಂಟ್ ಅನ್ನು ಸೂಚಿಸುತ್ತದೆ. ಈ ಮಾಹಿತಿಯನ್ನು Appleಗೆ ಕಳುಹಿಸಲಾಗುವುದಿಲ್ಲ. ನೀವು ಸೆಟ್ಟಿಂಗ್ಸ್ > ಆ್ಯಪ್‌ಗಳು > ಪುಸ್ತಕ > Siri ಎಂಬಲ್ಲಿಗೆ ಹೋಗುವ ಮೂಲಕ ಮತ್ತು ಆ್ಯಪ್‌ನಲ್ಲಿ ತೋರಿಸಿ ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ, ನಿಮ್ಮ iOS ಮತ್ತು iPadOS ಅಥವಾ visionOS ಸಾಧನದಲ್ಲಿ ಯಾವುದೇ ಸಮಯದಲ್ಲಿ ನೀವು ಇದನ್ನು ನಿಷ್ಕ್ರಿಯಗೊಳಿಸಬಹುದು. ನಿಮ್ಮ Apple Intelligence–ಸಮರ್ಥ iOS, iPadOS ಅಥವಾ visionOS ಸಾಧನದಲ್ಲಿ, ಸೆಟ್ಟಿಂಗ್ಸ್ > ಆ್ಯಪ್‌‌ಗಳು > ಪುಸ್ತಕ > Apple Intelligence ಮತ್ತು Siri ಎಂಬಲ್ಲಿಗೆ ಹೋಗಿ, ನಂತರ ಆ್ಯಪ್‌ನಲ್ಲಿ ತೋರಿಸಿ ಆಯ್ಕೆಯನ್ನು ಆಫ್ ಮಾಡಲು ಟ್ಯಾಪ್ ಮಾಡಿ.

ನಿಮ್ಮೊಂದಿಗೆ ಸಂವಹನ ನಡೆಸುವುದು

Apple Books ಹಾಗೂ ನಿಮಗೆ ಆಸಕ್ತಿಯಿರಬಹುದಾದ ಇತರ Apple ಉತ್ಪನ್ನಗಳು, ಸೇವೆಗಳು ಮತ್ತು ಆಫರ್‌ಗಳ ಕುರಿತು ನಿಮಗೆ ಸಂವಹನಗಳನ್ನು ಕಳುಹಿಸಲು, ನಿಮ್ಮ ಮಾಲೀಕತ್ವದಲ್ಲಿರುವ Apple ಉತ್ಪನ್ನಗಳು ಮತ್ತು ನೀವು Apple ಸೇವೆಗಳಿಗೆ ಮಾಡಿರುವ ಸಬ್‌ಸ್ಕ್ರಿಪ್ಶನ್‌ಗಳಂತಹ, ನಿಮ್ಮ ಖಾತೆಯ ಕುರಿತಾದ ಮಾಹಿತಿಯನ್ನು Apple ಬಳಸಬಹುದು. Apple Booksನಲ್ಲಿ ಲಭ್ಯವಿರುವ ಹೊಸ ಫೀಚರ್‌ಗಳು, ಕಂಟೆಂಟ್ ಮತ್ತು ಆಫರ್‌ಗಳ ಕುರಿತು ನಿಮಗೆ ಸಂವಹನಗಳನ್ನು ಕಳುಹಿಸಲು Apple Booksನಲ್ಲಿನ ನಿಮ್ಮ ಚಟುವಟಿಕೆಯ ಕುರಿತಾದ ಮಾಹಿತಿಯನ್ನು ಸಹ Apple ಬಳಸಬಹುದು.

ಈಮೇಲ್ ಮಾರ್ಕೆಟಿಂಗ್ ಸ್ವೀಕರಿಸಲು ನೀವು ಸಮ್ಮತಿಸಿದರೆ, ನೀವು ಈಮೇಲ್ ಮೂಲಕ ಈ ಸಂವಹನಗಳನ್ನು ಸ್ವೀಕರಿಸಬಹುದು. ನಿಮ್ಮ ಈಮೇಲ್ ಆದ್ಯತೆಗಳನ್ನು ನೀವು ಬದಲಾಯಿಸಬಹುದು ಮತ್ತು account.apple.com/in ಎಂಬಲ್ಲಿಗೆ ಹೋಗುವ ಮೂಲಕ ಅಥವಾ iOS, iPadOS ಅಥವಾ visionOS ಸಾಧನಗಳಲ್ಲಿ ಸೆಟ್ಟಿಂಗ್ಸ್ > [ನಿಮ್ಮ ಹೆಸರು] > ವೈಯಕ್ತಿಕ ಮಾಹಿತಿ > ಸಂವಹನದ ಆದ್ಯತೆಗಳಿಗೆ ಹೋಗುವ ಮೂಲಕ ಈ ಈಮೇಲ್‌ಗಳನ್ನು ಸ್ವೀಕರಿಸುವುದರಿಂದ ಹೊರಗುಳಿಯಬಹುದು. ನೀವು ಈ ಸಂವಹನಗಳನ್ನು ಪುಶ್, ಬ್ಯಾನರ್ ಅಥವಾ ಬ್ಯಾಡ್ಜ್ ನೋಟಿಫಿಕೇಷನ್‌ಗಳ ಮೂಲಕವೂ ಸ್ವೀಕರಿಸಬಹುದು. ನಿಮ್ಮ ನೋಟಿಫಿಕೇಷನ್ ಆದ್ಯತೆಗಳನ್ನು ಅಪ್‌ಡೇಟ್ ಮಾಡಲು ಅಥವಾ ನಿಮ್ಮ iOS, iPadOS, ಅಥವಾ visionOS ಸಾಧನದಲ್ಲಿ ನೋಟಿಫಿಕೇಷನ್‌ಗಳಿಂದ ಹೊರಗುಳಿಯಲು, ಸೆಟ್ಟಿಂಗ್ಸ್ > ನೋಟಿಫಿಕೇಷನ್‌ಗಳು > ಪುಸ್ತಕ ಎಂಬಲ್ಲಿಗೆ ಹೋಗಿ.

ಜಾಹೀರಾತು

App Store, Apple News ಮತ್ತು ಸ್ಟಾಕ್ಸ್ ಆ್ಯಪ್‌ನಲ್ಲಿ ಉತ್ಪನ್ನಗಳು ಮತ್ತು ಸೇವೆಗಳನ್ನು ಅನ್ವೇಷಿಸಲು Apple-ಡೆಲಿವರಿ ಮಾಡಿದ ಜಾಹೀರಾತು ಜನರಿಗೆ ಸಹಾಯ ಮಾಡುತ್ತದೆ. ಆ್ಯಡ್‌ಗಳು ಸೂಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಸಾಧನ, ಖಾತೆ, ಖರೀದಿಗಳು, ಸಬ್‌ಸ್ಕ್ರಿಪ್ಶನ್‌ಗಳು ಮತ್ತು ಡೌನ್‌ಲೋಡ್‌ಗಳ ಕುರಿತ ಮಾಹಿತಿಯನ್ನು ನಾವು ಬಳಸುತ್ತೇವೆ. ನೀವು App Storeನಲ್ಲಿ ಹುಡುಕಿದಾಗ, ನಿಮ್ಮ ಹುಡುಕಾಟದ ಪದಗಳನ್ನು ಕೂಡ ಬಳಸುತ್ತೇವೆ. ಒಂದೇ ರೀತಿಯ ಗುಣಲಕ್ಷಣಗಳನ್ನು ಹಂಚಿಕೊಳ್ಳುವ, ವಿಭಾಗಗಳು ಎಂದು ಕರೆಯಲ್ಪಡುವ ಜನರ ಗುಂಪುಗಳನ್ನು ನಾವು ರಚಿಸುತ್ತೇವೆ ಮತ್ತು ಟಾರ್ಗೆಟ್ ಮಾಡಿದ ಆ್ಯಡ್‌ಗಳನ್ನು ನೀಡಲು ಈ ಗುಂಪುಗಳನ್ನು ಬಳಸುತ್ತೇವೆ. ನಿಮ್ಮನ್ನು ಯಾವ ವಿಭಾಗದಲ್ಲಿ ಇರಿಸಲಾಗುವುದು ಮತ್ತು ನೀವು ಯಾವ ಜಾಹೀರಾತುಗಳನ್ನು ಸ್ವೀಕರಿಸುತ್ತೀರಿ ಎಂಬುದನ್ನು ನಿರ್ಧರಿಸಲು ನಿಮ್ಮ ಬಗ್ಗೆ ಮಾಹಿತಿಯನ್ನು ಬಳಸಲಾಗುತ್ತದೆ. ನಿಮ್ಮ ಗೌಪ್ಯತೆಯನ್ನು ರಕ್ಷಿಸಲು, 5,000 ಕ್ಕಿಂತಲೂ ಹೆಚ್ಚಿನ ಜನರು ಟಾರ್ಗೆಟ್ ಮಾಡುವ ಮಾನದಂಡಗಳನ್ನು ಪೂರೈಸಿದರೆ ಮಾತ್ರ ಟಾರ್ಗೆಟ್ ಮಾಡಿದ ಆ್ಯಡ್‌ಗಳನ್ನು ಡೆಲಿವರ್ ಮಾಡಲಾಗುತ್ತದೆ. ನಿಮಗೆ ಯಾವ ಆ್ಯಡ್‌ಗಳು ಸೂಕ್ತವಾಗಿವೆ ಎಂಬುದನ್ನು ನಿರ್ಧರಿಸಲು ಬಳಸಲಾಗುವ ಮಾಹಿತಿಯು ರ್‍ಯಾಂಡಮ್ ಐಡೆಂಟಿಫೈಯರ್‌ಗಳೊಂದಿಗೆ ಸೇರಿಸಲಾಗಿದೆ ಮತ್ತು ನಿಮ್ಮ Apple ಖಾತೆಗೆ ಸಂಬಂಧಿಸಿರುವುದಿಲ್ಲ.

ವೈಯಕ್ತೀಕರಿಸಿದ ಆ್ಯಡ್‌ಗಳ ಸೆಟ್ಟಿಂಗ್ ಆನ್ ಆಗಿದ್ದರೆ, Appleನ ಜಾಹೀರಾತು ಪ್ಲ್ಯಾಟ್‌ಫಾರ್ಮ್ ನಿಮಗೆ ಹೆಚ್ಚು ಸೂಕ್ತವಾದ ಆ್ಯಡ್‌ಗಳನ್ನು ಸರ್ವ್ ಮಾಡಲು ನಿಮ್ಮ ಮಾಹಿತಿಯನ್ನು ಬಳಸಬಹುದು. Appleನ ಜಾಹೀರಾತು ಪ್ಲ್ಯಾಟ್‌ಫಾರ್ಮ್‌ನಿಂದ ನಿಮ್ಮ ಆಸಕ್ತಿಗಳಿಗೆ ಗುರಿಯಾಗಿರುವ ಆ್ಯಡ್‌ಗಳನ್ನು ಸ್ವೀಕರಿಸಲು ನೀವು ಬಯಸದಿದ್ದರೆ, ನೀವು ವೈಯಕ್ತಿಕಗೊಳಿಸಿದ ಆ್ಯಡ್‌ಗಳನ್ನು ಆಫ್ ಮಾಡಲು ಆಯ್ಕೆ ಮಾಡಬಹುದು. ವೈಯಕ್ತೀಕರಿಸಿದ ಜಾಹೀರಾತನ್ನು ಆಫ್ ಮಾಡುವುದರಿಂದ Apple ನಿಮ್ಮ ಮಾಹಿತಿಯನ್ನು ಜಾಹೀರಾತು ಟಾರ್ಗೆಟ್‌ಗಾಗಿ ಬಳಸದಂತೆ ತಡೆಯುತ್ತದೆ. ಇದು ನೀವು ಸ್ವೀಕರಿಸುವ ಜಾಹೀರಾತುಗಳ ಸಂಖ್ಯೆಯನ್ನು ಕಡಿಮೆ ಮಾಡದಿರಬಹುದು, ಆದರೆ ಜಾಹೀರಾತುಗಳು ನಿಮಗೆ ಕಡಿಮೆ ಸಂಬಂಧಿತವಾಗಿರಬಹುದು.

www.apple.com/in/legal/privacy/data/en/apple-advertising ಎಂಬಲ್ಲಿನ Apple ಜಾಹೀರಾತು ಮತ್ತು ಗೌಪ್ಯತೆಯ ಕುರಿತು ಇನ್ನಷ್ಟು ತಿಳಿಯಿರಿ.

App Store, Apple News ಮತ್ತು ಸ್ಟಾಕ್ಸ್ ಎಂಬಲ್ಲಿ ವೈಯಕ್ತೀಕರಿಸಿದ ಆ್ಯಡ್‌ಗಳಿಂದ ಹೊರಗುಳಿಯುವುದು ಹೇಗೆ ಎಂಬುದರ ಬಗ್ಗೆ support.apple.com/en-in/105131ನಲ್ಲಿ ತಿಳಿಯಿರಿ.

ಥರ್ಡ್ ಪಾರ್ಟಿಗಳ ಜೊತೆಗೆ ಹಂಚಿಕೊಳ್ಳುವುದು

ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು, ಗ್ರಾಹಕರಿಗೆ Apple ಅನ್ನು ಮಾರಾಟ ಮಾಡಲು ಸಹಾಯ ಮಾಡಲು, ಮತ್ತು App Store, Apple News ಮತ್ತು ಸ್ಟಾಕ್ಸ್ ಆ್ಯಪ್‌ನಲ್ಲಿ ತೋರಿಸಲು ಹಾಗೂ Apple ಪರವಾಗಿ ಜಾಹೀರಾತುಗಳನ್ನು ಮಾರಾಟ ಮಾಡಲು Appleನೊಂದಿಗೆ ಕೆಲಸ ಮಾಡುವ ಪ್ರಮುಖ ಪಾಲುದಾರರಿಗೆ ನಾವು ನಿಮ್ಮ ಕಂಟೆಂಟ್ ಖರೀದಿಗಳ ಬಗೆಗಿನ ಕೆಲವು ವೈಯಕ್ತಿಕವಲ್ಲದ ಡೇಟವನ್ನು ಒದಗಿಸಲು ಬದ್ಧರಾಗಿದ್ದೇವೆ. ಉದಾಹರಣೆಗೆ, ನಾವು ವೈಯಕ್ತಿಕವಲ್ಲದ ಡೇಟವನ್ನು ಕಂಟೆಂಟ್ ಮಾಲೀಕರ ಜೊತೆಗೆ ಹಂಚಿಕೊಳ್ಳಬಹುದು, ಇದರಿಂದ ಅವರು ತಮ್ಮ ಸೃಜನಾತ್ಮಕ ಕೆಲಸದ ಕಾರ್ಯಕ್ಷಮತೆಯನ್ನು ಅಳೆಯಬಹುದು, ರಾಯಧನ ಮತ್ತು ಲೆಕ್ಕಪತ್ರದ ಅಗತ್ಯತೆಗಳನ್ನು ಪೂರೈಸಬಹುದು ಮತ್ತು ತಮ್ಮ ಉತ್ಪನ್ನಗಳು ಹಾಗೂ ಸೇವೆಗಳನ್ನು ಸುಧಾರಿಸಬಹುದು.

ವೈಯುಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುವುದಕ್ಕಾಗಿ ಅನ್ವಯವಾಗುವ ಕಾನೂನುಬದ್ಧ ಆಧಾರ

ನಾವು ಸಾಮಾನ್ಯವಾಗಿ Apple ಜೊತೆಗಿನ ನಿಮ್ಮ ವೈಯುಕ್ತಿಕ ಒಪ್ಪಂದದ ನಿರ್ವಹಣೆಗಾಗಿ, ಸೇವೆಯನ್ನು ಒದಗಿಸಲು ಅಗತ್ಯವಾದ ಹಾಗೆ, ಹಾಗೂ ನಮ್ಮ ಕಾನೂನುಬದ್ಧ ನಿಯಮಗಳನ್ನು ಪಾಲಿಸಲು ಪುಸ್ತಕ ಆ್ಯಪ್‌ನಲ್ಲಿ ನಿಮ್ಮ ವೈಯುಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುತ್ತೇವೆ. ಸಮ್ಮತಿಯ ಸೂಕ್ತವಾದ ಕಾನೂನುಬದ್ಧ ಆಧಾರವಾಗಿದ್ದಲ್ಲಿ, ನಾವು ಅದನ್ನು ಅನ್ವಯವಾಗುವ ಸ್ಥಳೀಯ ಕಾನೂನುಗಳ ಪ್ರಕಾರ ಪಡೆಯುತ್ತೇವೆ.

ಅನ್ವಯವಾಗುವ ಸ್ಥಳೀಯ ಕಾನೂನುಗಳು ಅನುಮತಿಸಿದಲ್ಲಿ, ನಾವು ಇವುಗಳನ್ನು ಮಾಡಲು ನಮ್ಮ ಅಥವಾ ಯಾವುದಾದರೂ ಥರ್ಡ್ ಪಾರ್ಟಿ ಕಾನೂನುಬದ್ಧ ಆಸಕ್ತಿಯ ಉದ್ದೇಶಗಳಿಗೆ ಅಗತ್ಯವಾದ ಹಾಗೆ ಈ ಕೆಳಗಿನ ಪ್ರಕಾರದ ವೈಯುಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುತ್ತೇವೆ ಹಾಗೂ ಅದು ಇವುಗಳ ಕುರಿತು ಮಾಹಿತಿಯನ್ನು ಒಳಗೊಂಡಿರುತ್ತದೆ:

  • ನೀವು ಬಳಸುವ ಫೀಚರ್‌‌ಗಳೂ ಸೇರಿದಂತೆ (ಉದಾಹರಣೆಗೆ, ಓದಬೇಕು ಎನ್ನುವ ಪಟ್ಟಿಗೆ ನೀವು ಏನು ಸೇರಿಸುತ್ತೀರಿ), ನೀವು ಯಾವ ಕಂಟೆಂಟ್ ಅನ್ನು ಹುಡುಕುತ್ತೀರಿ, ನೀವು ನೋಡುವ ಕಂಟೆಂಟ್, ನಿಮ್ಮ ವಿಮರ್ಶೆಗಳು, ಹಾಗೂ ನೋಟಿಫಿಕೇಷನ್‌ಗಳ ಜೊತೆಗೆ ನಿಮ್ಮ ಸಂವಹನಗಳಂತಹ ಪುಸ್ತಕ ಆ್ಯಪ್‌ನ ನಿಮ್ಮ ಬಳಕೆ
  • ನಿಮ್ಮ ಮಾಲೀಕತ್ವದಲ್ಲಿರುವ Apple ಉತ್ಪನ್ನಗಳಂತಹ ನಿಮ್ಮ ಖಾತೆಗಳು ಹಾಗೂ Apple ಸೇವೆಗಳಿಗೆ ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳು ಹಾಗೂ ನಿಮ್ಮ ಖರೀದಿಗಳು ಹಾಗೂ ಡೌನ್‌ಲೋಡ್‌ಗಳು
  • ನಿಮ್ಮ ಸಾಧನದ ಹಾರ್ಡ್‌ವೇರ್ ID ಹಾಗೂ IP ವಿಳಾಸ

ಈ ಕಾನೂನುಬದ್ಧವಾದ ಆಸಕ್ತಿಗಳು ಇವುಗಳನ್ನು ಒಳಗೊಂಡಿರುತ್ತವೆ:

  • ನಿಮಗೆ ಹಾಗೂ ಇತರರಿಗೆ ಸೇವೆಯನ್ನು ಗರಿಷ್ಠಗೊಳಿಸುವುದು ಹಾಗೂ ಸುಧಾರಿಸುವುದು
  • ನಿಮಗೆ ಹೆಚ್ಚು ಸೂಕ್ತವಾಗಿರುವ ಕಂಟೆಂಟ್ ಅನ್ನು ಅನ್ವೇಷಿಸಲು ನಿಮಗೆ ಸಹಾಯ ಮಾಡುವುದು
  • ನಿಮಗೆ Apple Books ಹಾಗೂ ಇತರ ಸಂಬಂಧಿತ Apple ಉತ್ಪನ್ನಗಳು, ಸೇವೆಗಳು, ಹಾಗೂ ನಿಮಗೆ ಆಸಕ್ತಿಯಿರಬಹುದಾದ ಆಫರ್‌ಗಳ ಬಗೆಗಿನ ಸಂವಹನಗಳನ್ನು ಕಳುಹಿಸುವುದು
  • ಕಂಟೆಂಟ್ ಮಾಲಕರಿಗೆ ವರದಿಗಳನ್ನು ನೀಡುವುದು
  • ಮೋಸ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯುವುದು

ರಿಟೆನ್ಶನ್

ನಿಮ್ಮ ಖರೀದಿಗಳು ಹಾಗೂ ಡೌನ್‌ಲೋಡ್‌ಗಳಿಗೆ ಸಂಬಂಧಿಸಿದ ವೈಯುಕ್ತಿಕ ಡೇಟವನ್ನು ಹಣಕಾಸಿನ ವರದಿ ಮಾಡುವಿಕೆಯ ಅನ್ವಯವಾಗುವ ಕಾನೂನುಗಳು ನಿರ್ದಿಷ್ಟಪಡಿಸುವ ಅವಧಿಗಳಿಗೆ ನಾವು ಇಟ್ಟುಕೊಳ್ಳುತ್ತಿದ್ದು, ಇದು ಪ್ರದೇಶಕ್ಕೆ ಅನುಗುಣವಾಗಿ ಬದಲಾಗಬಹುದು. ಅದಕ್ಕಾಗಿ ಬಹುತೇಕ ಗ್ರಾಹಕರಿಗೆ ಕನಿಷ್ಠ 10-ವರ್ಷಗಳ ಇರಿಸಿಕೊಳ್ಳುವಿಕೆಯ ಅವಧಿಯ ಅಗತ್ಯವಿರುತ್ತದೆ, ಆದರೆ ಚೀನಾದಂಥ ಪ್ರದೇಶಗಳಲ್ಲಿ ಆ ಅವಧಿ 30 ವರ್ಷಗಳಷ್ಟಿರಬಹುದು. ನಾವು ಖರೀದಿಗಳು ಹಾಗೂ ಕಂಟೆಂಟ್‌ಗಳ ಡೌನ್‌ಲೋಡ್ ದಾಖಲೆಗಳನ್ನು ನಿಮಗೆ ಆ ಕಂಟೆಂಟ್ ಅನ್ನು ಮರುಡೌನ್‌ಲೋಡ್ ಮಾಡಲು ಅನುಮತಿಸಲು ನೀವು ಕನಿಷ್ಠ ನಮ್ಮ ಬಳಿ ಖಾತೆಯನ್ನು ಹೊಂದಿರುವಷ್ಟು ಕಾಲ ಇಟ್ಟುಕೊಳ್ಳುತ್ತಿದ್ದು ಇದು ಕೂಡ ನಮ್ಮ ಅನ್ವಯವಾಗುವ ನೀತಿಗಳ ಪ್ರಕಾರವಾಗಿರುತ್ತದೆ. ನಾವು ಬ್ರೌಸಿಂಗ್ ಚಟುವಟಿಕೆ ಹಾಗೂ ಹುಡುಕಾಟಗಳಂತ ಇತರ ಮಾಹಿತಿಯನ್ನು ಸ್ವಲ್ಪ ಕಾಲದವರೆಗೆ, ಸಾಮಾನ್ಯವಾಗಿ ಎರಡು ವರ್ಷಗಳವರೆಗೆ ಇಟ್ಟುಕೊಳ್ಳುತ್ತೇವೆ. ಆರಿಸಲಾದ ಅವಧಿಯು ಡೇಟ ಹಾಗೂ ನಿರ್ದಿಷ್ಟವಾದ ವ್ಯಾಪಾರ ಬಳಕೆಯ ಪ್ರಕರಣಗಳನ್ನು ಇಟ್ಟುಕೊಳ್ಳಲು ಅನ್ವಯವಾಗುವ ಕಾನೂನುಬದ್ಧ ಅಗತ್ಯಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಆದರೆ, ನೀವು ಸಂಗ್ರಹಿಸಿಟ್ಟ ಕಾರ್ಡ್ ವಿವರಗಳನ್ನು ಹೊರತುಪಡಿಸಿ, ಖರೀದಿಗಳಂತಹ ಕೆಲವು ಮಾಹಿತಿಯನ್ನು ನಿಮ್ಮ ಖಾತೆಯನ್ನು ನೀವು ಮುಚ್ಚಿದ ನಂತರವೂ ಅಥವಾ Apple Books ಅಥವಾ ಇತರ Apple ಆನ್‌ಲೈನ್ ಸ್ಟೋರ್‌ಗಳನ್ನು ಬಳಸುವುದನ್ನು ನೀವು ನಿಲ್ಲಿಸಿದ ನಂತರವೂ ವ್ಯಾಪಾರ ದಾಖಲೆಗಳಾಗಿ ಇರಿಸಿಕೊಳ್ಳಬಹುದು.

ನೀವು ಒಂದು ಪಾವತಿ ಕಾರ್ಡ್ ಅನ್ನು ಬಳಸಿದಾಗ, Apple ಭವಿಷ್ಯದ ಖರೀದಿಗಳಿಗೆ, ಪುನರಾವರ್ತನೆಗೊಳ್ಳುವ ವಹಿವಾಟುಗಳಿಗೆ, ಅಥವಾ ನೀವು ಧೃಢೀಕರಿಸಿದ ಇತರ ಬಳಕೆಗಳಿಗೆ ನಿಮ್ಮ ಕಾರ್ಡ್ ಸಂಖ್ಯೆ ಹಾಗೂ ಬಿಲ್ಲಿಂಗ್ ಮಾಹಿತಿಯನ್ನು ಇಟ್ಟುಕೊಳ್ಳಬಹುದು ಹಾಗೂ ಸ್ವಯಂಚಾಲಿತವಾಗಿ ಅಪ್‌ಡೇಟ್ ಮಾಡಬಹುದು. Apple ಈ ಮಾಹಿತಿಯನ್ನು ನಿಮ್ಮ ಹಣಕಾಸು ಸಂಸ್ಥೆ ಅಥವಾ ಪಾವತಿಯ ನೆಟ್‌ವರ್ಕ್ ಮೂಲಕ ಪಡೆಯಬಹುದು, ಹಾಗೂ ಇದನ್ನು ವಂಚನೆ ತಡೆಗಟ್ಟುವಿಕೆ ಮತ್ತು ಧೃಢೀಕರಣಕ್ಕಾಗಿ ಸಹ ಬಳಸಬಹುದು.

ಮೋಸ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯುವುದು

ನಾವು ವೈಯಕ್ತಿಕ ಡೇಟವನ್ನು Apple Books ಹಾಗೂ ಇತರ Apple ಆನ್‌ಲೈನ್ ಸ್ಟೋರ್‌ಗಳು ಹಾಗೂ ಅದರ Apple ಆ್ಯಪ್‌ಗಳು ಹಾಗೂ ಸೇವೆಗಳಲ್ಲಿ ಮೋಸ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯಲೂ ಕೂಡ ಸಂಗ್ರಹಿಸುತ್ತೇವೆ. ಈ ಮಾಹಿತಿಯು ಸಾಧನದ ಪ್ರಕಾರ ಹಾಗೂ ಸಾಫ್ಟ್‌ವೇರ್ ಆವೃತ್ತಿಯಂತ ಸಾಧನ ಮಾಹಿತಿ, ಸ್ಥಳ ಮಾಹಿತಿ (ನಿಮ್ಮ ಇಂಟರ್ನೆಟ್ ಸಂಪರ್ಕದ IP ವಿಳಾಸವನ್ನು ಲಭ್ಯವಿದ್ದಲ್ಲಿ ಒಂದು ಭೌಗೋಳಿಕ ಪ್ರದೇಶಕ್ಕೆ ಹೋಲಿಸುವ ಮೂಲಕ ಅಂದಾಜಿಸಲಾಗುತ್ತದೆ), ಡೌನ್‌ಲೋಡ್ ಹಾಗೂ ಖರೀದಿಯ ಇತಿಹಾಸ ಹಾಗೂ ಸ್ಟೋರ್ ಜೊತೆಗಿನ ಇತರ ಸಂವಹನಗಳನ್ನು ಒಳಗೊಂಡಿರುತ್ತದೆ. ನೀವು ಒಂದು ಖರೀದಿಯನ್ನು ಪ್ರಾರಂಭಿಸಿದಾಗ Apple ತನ್ನ ಜೊತೆಗಿನ ನಿಮ್ಮ ಹಿಂದಿನ ವ್ಯಾಪಾರದ ಸಂಬಂಧವನ್ನು ವಿನಂತಿಯನ್ನು ಸಂಸ್ಕರಿಸಲು, ಹಾಗೂ ಪಾವತಿ ಪಾಲುದಾರರು ಪಾವತಿಯನ್ನು ದೃಢೀಕರಿಸುವ ಮೊದಲೇ ಉತ್ಪನ್ನ ಅಥವಾ ಸೇವೆಯನ್ನು ನೀಡಬೇಕೇ ಎಂದು ನಿರ್ಧರಿಸಲು ಬಳಸುತ್ತದೆ.

ನೀವು ಒಂದು ಖರೀದಿಯನ್ನು ಮಾಡಲು ಪ್ರಯತ್ನಿಸಿದಾಗ, ನೀವು ಕಳುಹಿಸುವ ಹಾಗೂ ಸ್ವೀಕರಿಸುವ ಫೋನ್ ಕರೆಗಳು ಅಥವಾ ಈಮೇಲ್‌ಗಳ ಅಂದಾಜು ಸಂಖ್ಯೆಯನ್ನೂ ಒಳಗೊಂಡಂತೆ ನೀವು ನಿಮ್ಮ ಸಾಧನವನ್ನು ಹೇಗೆ ಬಳಸುತ್ತೀರಿ ಎಂಬುದರ ಮಾಹಿತಿಯನ್ನು ಬಳಸಿಕೊಂಡು ನಿಮ್ಮ ಸಾಧನದಲ್ಲಿ ಒಂದು ಸಾಧನದ ವಿಶ್ವಸಾರ್ಹತೆಯ ಸ್ಕೋರ್ ಅನ್ನು ಸಹ ನಾವು ಲೆಕ್ಕ ಹಾಕುತ್ತೇವೆ. ನಿಮ್ಮ ಸಾಧನದಲ್ಲಿನ ನಿಜವಾದ ಮೌಲ್ಯಗಳನ್ನು ತಿಳಿದುಕೊಳ್ಳಲು Appleಗೆ ಸಾಧ್ಯವಾಗದ ರೀತಿಯಲ್ಲಿ ಸಲ್ಲಿಕೆಯನ್ನು ವಿನ್ಯಾಸಗೊಳಿಸಲಾಗಿದೆ. ಸ್ಕೋರ್ ಅನ್ನು ನಮ್ಮ ಸರ್ವರ್‌ಗಳಲ್ಲಿ ನಿಗದಿತ ಸಮಯದವರೆಗೆ ಸಂಗ್ರಹಿಸಲಾಗುತ್ತದೆ.

ಎಲ್ಲಾ ಸಮಯದಲ್ಲೂ, Appleನಿಂದ ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಇದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.

2025-12-12