Apple Card ಮತ್ತು ಗೌಪ್ಯತೆ
Apple Card ಅನ್ನು ನೀವು ನಿಮ್ಮ ಗೌಪ್ಯತೆ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದ್ದು, ಇದರಿಂದಾಗಿ ನಿಮ್ಮ ಆರ್ಥಿಕ ಆರೋಗ್ಯದ ಕುರಿತು ಗಮನ ಹರಿಸಲು ನಿಮಗೆ ಸಾಧ್ಯವಾಗುತ್ತದೆ.
![]()
- ನಿಮ್ಮ Apple Card ಅಪ್ಲಿಕೇಶನ್‌ನಲ್ಲಿ ನೀವು ಒದಗಿಸುವ ಮಾಹಿತಿಯನ್ನು Apple ಸಂಪೂರ್ಣ ಸ್ವಾಯತ್ತ ಅಂಗಸಂಸ್ಥೆ ಮತ್ತು Goldman Sachs ಬಳಸುತ್ತದೆ ಮತ್ತು ನಿಮ್ಮ ಗುರುತನ್ನು ಪರಿಶೀಲಿಸಲು ಮತ್ತು ವಂಚನೆಯನ್ನು ತಡೆಯಲು ಥರ್ಡ್ ಪಾರ್ಟಿ ಗುರುತಿನ ಪರಿಶೀಲನೆ ಸೇವಾ ಪೂರೈಕೆದಾರರೊಂದಿಗೆ ಹಂಚಿಕೊಳ್ಳಲಾಗುತ್ತದೆ.
- Apple Cardನ ವಿತರಕ ಬ್ಯಾಂಕ್ ಆದ Goldman Sachs ಹಾಗೂ Apple Cardನ ಜಾಗತಿಕ ಪಾವತಿಯ ನೆಟ್‌ವರ್ಕ್ ಆದ Mastercard, ನಿಮ್ಮ Apple Card ವಹಿವಾಟಿನ ಮಾಹಿತಿಯನ್ನು ಪಡೆಯುತ್ತಿದ್ದರೂ, ಮಾರ್ಕೆಟಿಂಗ್ ಅಥವಾ ಜಾಹೀರಾತು ನೀಡುವುದಕ್ಕಾಗಿ ಥರ್ಡ್ ಪಾರ್ಟಿಗಳಿಗೆ ನಿಮ್ಮ ವಹಿವಾಟಿನ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಅಥವಾ ಮಾರಾಟ ಮಾಡುವುದಿಲ್ಲ.
- ಖರ್ಚಿನ ಸಾರಾಂಶಗಳಂತಹ ನಿಮ್ಮ ವಹಿವಾಟಿನ ಇತಿಹಾಸವನ್ನು ಬಳಸುವ Apple Card ಫೀಚರ್‌ಗಳನ್ನು ಸಾಧನದಲ್ಲಿ ರಚಿಸಲಾಗಿದೆ. Appleಗೆ ನಿಮ್ಮ ವಹಿವಾಟಿನ ಇತಿಹಾಸದ ಬಗ್ಗೆ ತಿಳಿದಿರುವುದಿಲ್ಲ.
Apple Cardಗಾಗಿ ಅರ್ಜಿ ಸಲ್ಲಿಸಲಾಗುತ್ತಿದೆ
ನೀವು Apple Cardಗಾಗಿ ಅರ್ಜಿ ಸಲ್ಲಿಸಿದಾಗ, ನಿಮ್ಮ ಗುರುತನ್ನು ಪರಿಶೀಲಿಸಲು ಮತ್ತು ವಂಚನೆಯನ್ನು ತಡೆಯಲು ಸಹಾಯ ಮಾಡಲು Apple ಮತ್ತು Goldman Sachs Bank USA, Salt Lake City Branch (“Goldman Sachs”) ಮೂಲಕ ನಿಮ್ಮ ಹೆಸರು, ಜನ್ಮ ದಿನಾಂಕ, ಸಂಪರ್ಕ ಮಾಹಿತಿ ಮತ್ತು ಸಾಧನದ ಫೋನ್ ಸಂಖ್ಯೆಯನ್ನು ಬಳಸುತ್ತದೆ. ನಿಮ್ಮ ಖಾತೆಯನ್ನು ಸೆಟಪ್ ಮಾಡಲು ಮತ್ತು ಅಗತ್ಯವಿರುವ ಡ್ಯೂ ಡಿಲಿಜೆನ್ಸ್‌ಗಾಗಿ Goldman Sachs ಈ ಮಾಹಿತಿಯನ್ನು ಬಳಸುತ್ತದೆ. ಖಾತೆ ಮಾಲೀಕರ ಭಾಗಶಃ ಅಥವಾ ಪೂರ್ಣ ಸಾಮಾಜಿಕ ಭದ್ರತೆ ಸಂಖ್ಯೆ ಮತ್ತು ಯಾವ ದೇಶದ ಪೌರತ್ವವನ್ನು ಹೊಂದಿದ್ದಾರೆ ಎಂಬುದನ್ನು ಪರಿಶೀಲಿಸಲು, Goldman Sachs ಥರ್ಡ್-ಪಾರ್ಟಿ ಗುರುತಿನ ಪರಿಶೀಲನೆ ಸೇವೆ ಒದಗಿಸುವವರನ್ನು ಬಳಸುತ್ತದೆ; Apple ಈ ಮಾಹಿತಿಯನ್ನು ಓದುವುದಿಲ್ಲ ಅಥವಾ ಸಂಗ್ರಹಿಸುವುದಿಲ್ಲ.
ನಿಮ್ಮ ಗುರುತನ್ನು ಪರಿಶೀಲಿಸಲು ಹೆಚ್ಚಿನ ಮಾಹಿತಿಯ ಅಗತ್ಯವಿದ್ದರೆ, ನಿಮ್ಮ ಚಾಲಕರ ಪರವಾನಗಿ ಅಥವಾ ರಾಜ್ಯ-ನೀಡಿದ ಫೋಟೋ IDಯನ್ನು ಸ್ಕ್ಯಾನ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ನಿಮ್ಮ ಗುರುತನ್ನು ಪರಿಶೀಲಿಸಲು ಮತ್ತು ವಂಚನೆಯನ್ನು ತಡೆಯಲು ನಿಮ್ಮ ಫೋಟೋ IDಯ ಚಿತ್ರವನ್ನು ಥರ್ಡ್-ಪಾರ್ಟಿ ಗುರುತಿನ ಪರಿಶೀಲನೆ ಸೇವಾ ಪೂರೈಕೆದಾರರಿಗೆ ಸುರಕ್ಷಿತವಾಗಿ ವರ್ಗಾಯಿಸಲಾಗುತ್ತದೆ. Apple ನಿಮ್ಮ ಫೋಟೋ IDಯ ಚಿತ್ರವನ್ನು ಓದುವುದಿಲ್ಲ ಅಥವಾ ಸಂಗ್ರಹಿಸುವುದಿಲ್ಲ, ಆದರೆ Apple Card ಅಪ್ಲಿಕೇಶನ್‌ನ ವಂಚನೆಯನ್ನು ತಡೆಯಲು ಗುರುತಿನ ಪರಿಶೀಲನೆಗಾಗಿ ನಿಮ್ಮ ಫೋಟೋ IDಯಿಂದ ಹೆಸರು ಮತ್ತು ವಿಳಾಸವನ್ನು ಸ್ವೀಕರಿಸುತ್ತದೆ.
ನಿಮ್ಮ ವಾರ್ಷಿಕ ಆದಾಯದ ಅಂದಾಜನ್ನು Goldman Sachsಗೆ ಒದಗಿಸಲು ಸಹ ನಿಮ್ಮನ್ನು ಕೇಳಲಾಗುತ್ತದೆ ಇದರಿಂದ ಅವರು ನಿಮಗೆ ಕ್ರೆಡಿಟ್ ನೀಡಬೇಕೆ ಅಥವಾ ಬೇಡವೇ ಮತ್ತು ನೀಡಿದರೆ ಎಷ್ಟು ಮೊತ್ತವನ್ನು ನೀಡಬೇಕೆಂದು ನಿರ್ಧರಿಸಬಹುದು. Apple ನಿಮ್ಮ ವಾರ್ಷಿಕ ಆದಾಯವನ್ನು ಓದುವುದಿಲ್ಲ ಅಥವಾ ಸಂಗ್ರಹಿಸುವುದಿಲ್ಲ.
ನೀವು Apple Cardನ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳುವವರೆಗೆ ಕ್ರೆಡಿಟ್ ನಿರ್ಧಾರಕ್ಕಾಗಿ ನಿಮ್ಮ ಅರ್ಜಿಯನ್ನು Goldman Sachsಗೆ ಸಲ್ಲಿಸಲಾಗುವುದಿಲ್ಲ. ನಿಮ್ಮ ಅರ್ಜಿಯನ್ನು ಪ್ರಕ್ರಿಯೆಗೊಳಿಸಲು Goldman Sachsಗೆ ಹೆಚ್ಚುವರಿ ಮಾಹಿತಿಯ ಅಗತ್ಯವಿದ್ದರೆ, ನಿಮ್ಮ ಅರ್ಜಿಯ ಕುರಿತಾ ಮಾಹಿತಿಯನ್ನು 30 ದಿನಗಳವರೆಗೆ ನಿಮ್ಮ ಸಾಧನದಲ್ಲಿ ಸಂಗ್ರಹಿಸಲಾಗುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ನೀವು ಎಲ್ಲಿ ವಿರಾಮಗೊಳಿಸಿದ್ದೀರಿ ಎಂಬುದರ ಮಾಹಿತಿಯನ್ನು Apple ಸಂಗ್ರಹಿಸುತ್ತದೆ ಮತ್ತು ನೀವು ತೆರೆದಿರುವ ಅರ್ಜಿಯನ್ನು ಹೊಂದಿರುವ ಕುರಿತು ನಿಮಗೆ ನೆನಪಿಸಲು ಮತ್ತು ಸಹಾಯವನ್ನು ಒದಗಿಸಲು Apple ಅಥವಾ Goldman Sachs ನಿಮ್ಮನ್ನು ಸಂಪರ್ಕಿಸಬಹುದು.
ನೀವು ಸ್ಥಳ ಸೇವೆಗಳನ್ನು ಸಕ್ರಿಯಗೊಳಿಸಿದ್ದರೆ, ವಂಚನೆಯನ್ನು ತಡೆಗಟ್ಟಲು ನಿಮ್ಮ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ನಿಮ್ಮ ಅಂದಾಜು ಸ್ಥಳದ ಮಾಹಿತಿಯನ್ನು Apple ಮತ್ತು Goldman Sachs ಬಳಸುತ್ತವೆ. ಅದೇ ರೀತಿ, ನೀವು Apple Payನಲ್ಲಿ ಯಾವುದೇ ಪಾವತಿ ವಿಧಾನವನ್ನು ಸೇರಿಸಿದಾಗ ಅಥವಾ Apple Cardಗೆ ಅರ್ಜಿ ಸಲ್ಲಿಸಿದಾಗ ಅಥವಾ ಸ್ವೀಕರಿಸಿದಾಗ, ಕೆಲವು ಸಾಧನ ಸೆಟ್ಟಿಂಗ್ಸ್ ಅನ್ನು ಸಕ್ರಿಯಗೊಳಿಸಲಾಗಿದೆಯೇ ಮತ್ತು ಸಾಧನದ ಬಳಕೆಯ ಪ್ಯಾಟರ್ನ್‌ಗಳಂತಹ ನಿಮ್ಮ ಸಾಧನದ ಕುರಿತ ಮಾಹಿತಿಯನ್ನು (ಉದಾಹರಣೆಗೆ, ಸಾಧನವು ಚಲನೆಯಲ್ಲಿರುವ ಸಮಯದ ಶೇಕಡಾವಾರು ಅಥವಾ ಪ್ರತಿ ವಾರದ ಕರೆಗಳ ಸಂಖ್ಯೆಯ ಅಂದಾಜು) ಗುರುತಿನ ದೃಢೀಕರಣ ಮತ್ತು ವಂಚನೆಯನ್ನು ತಡೆಯುವುದಕ್ಕಾಗಿ Appleಗೆ ಕಳುಹಿಸಬಹುದು. ವಂಚನೆಯನ್ನು ತಡೆಗಟ್ಟಲು ನಿಮ್ಮ ನೆಟ್‌ವರ್ಕ್ ಪೂರೈಕೆದಾರರಿಂದ ನಿಮ್ಮ ಅಪ್ಲಿಕೇಶನ್ ಫೋನ್ ಸಂಖ್ಯೆಯ ಕುರಿತ ಮಾಹಿತಿಯನ್ನೂ Apple ಪಡೆಯಬಹುದು.
ನಿಮ್ಮ ಅರ್ಜಿಯ ಭಾಗವಾಗಿ ಒದಗಿಸಿದ ಮಾಹಿತಿಯ ಆಧಾರದ ಮೇಲೆ Goldman Sachs ಒದಗಿಸುವ ಕೆಲವು Apple Card ಪ್ರೋಗ್ರಾಂಗಳಿಗೆ ನೀವು ಅರ್ಹರಾಗಿರಬಹುದು. ನೀವು ಭಾಗವಹಿಸುವ ಆಹ್ವಾನವನ್ನು ಸ್ವೀಕರಿಸುತ್ತೀರಾ ಮತ್ತು ನೀವು ಆಹ್ವಾನವನ್ನು ಒಪ್ಪಿಕೊಳ್ಳುತ್ತೀರಾ ಅಥವಾ ನಿರಾಕರಿಸುತ್ತೀರಾ ಎಂಬ ವಿಚಾರ Appleಗೆ ತಿಳಿದಿರಬಹುದು ಮತ್ತು ಪ್ರೋಗ್ರಾಂ ಅನ್ನು ಕಾರ್ಯಗತಗೊಳಿಸಲು ಅದು ಆ ಮಾಹಿತಿಯನ್ನು Goldman Sachs ಜೊತೆಗೆ ಹಂಚಿಕೊಳ್ಳಬಹುದು. ಪ್ರೋಗ್ರಾಂನಲ್ಲಿನ ನಿಮ್ಮ ಭಾಗವಹಿಸುವಿಕೆಯ ಕುರಿತಾದ ಹೆಚ್ಚುವರಿ ವಿವರಗಳು Appleಗೆ ತಿಳಿದಿರುವುದಿಲ್ಲ.
Apple Card ಒದಗಿಸಲಾಗುತ್ತಿದೆ
Apple Payನಲ್ಲಿ ನಿಮ್ಮ Apple Card ಅನ್ನು ಸಕ್ರಿಯಗೊಳಿಸಲು ಹಾಗೂ ಸೆಟಪ್ ಮಾಡಲು ಮತ್ತು ವಂಚನೆಯನ್ನು ತಡೆಗಟ್ಟುವುದಕ್ಕಾಗಿ Appleನಿಂದ Goldman Sachs ಅಥವಾ Mastercardಗೆ ಮಾಹಿತಿಯನ್ನೂ ಒದಗಿಸಬಹುದು. ಹಂಚಿಕೊಳ್ಳಲಾದ ಈ ಮಾಹಿತಿಯು Apple Pay ಜೊತೆಗೆ ಯಾವುದೇ ಕಾರ್ಡ್ ಅನ್ನು ಒದಗಿಸಲು ನೀವು ಹಂಚಿಕೊಂಡ ಮಾಹಿತಿಗಿಂತ ಭಿನ್ನವಾಗಿರುವುದಿಲ್ಲ ಮತ್ತು ಇವುಗಳನ್ನು ಒಳಗೊಂಡಿರಬಹುದು:
- ನಿಮ್ಮ Apple ಖಾತೆಗೆ ಸಂಬಂಧಿಸಿರುವ ಹೆಸರು ಮತ್ತು ಬಿಲ್ಲಿಂಗ್ ವಿಳಾಸ
- ನಿಮ್ಮ Apple ಖಾತೆ, iTunes ಮತ್ತು App Store ಖಾತೆಯ ಚಟುವಟಿಕೆಯ (ಉದಾಹರಣೆಗೆ, iTunesನಲ್ಲಿ ನೀವು ಸುದೀರ್ಘ ವಹಿವಾಟಿನ ಇತಿಹಾಸವನ್ನು ಹೊಂದಿದ್ದರೆ) ಕುರಿತಾದ ಸಾಮಾನ್ಯ ಮಾಹಿತಿ
- ನಿಮ್ಮ ಸಾಧನದ ಮಾಹಿತಿ, Apple Watch ಅನ್ನು ಬಳಸುತ್ತಿದ್ದರೆ ಅದರ ಮಾಹಿತಿ, ಪೇರ್ ಮಾಡಲಾದ iOS ಕುರಿತ ಮಾಹಿತಿ (ಉದಾಹರಣೆಗೆ, ಸಾಧನದ ಐಡೆಂಟಿಫೈಯರ್, ಫೋನ್ ಸಂಖ್ಯೆ ಹಾಗೂ ನಿಮ್ಮ ಸಾಧನದ ಹೆಸರು ಮತ್ತು ಮಾಡಲ್)
- ನಿಮ್ಮ ಕಾರ್ಡ್ ಅನ್ನು ನೀವು ಸೇರಿಸುವ ಸಮಯದಲ್ಲಿ ಅಂದಾಜು ಸ್ಥಳ (ನೀವು ಸ್ಥಳ ಸೇವೆಗಳನ್ನು ಸಕ್ರಿಯಗೊಳಿಸಿದ್ದರೆ)
- ಪಾವತಿ ಕಾರ್ಡ್‌ಗಳನ್ನು ಸೇರಿಸುವ ಖಾತೆ ಅಥವಾ ಸಾಧನದ ಇತಿಹಾಸ
- ನೀವು ಸೇರಿಸಿದ ಅಥವಾ Apple Payಗೆ ಸೇರಿಸಲು ಪ್ರಯತ್ನಿಸಿದ ಪಾವತಿ ಕಾರ್ಡ್‌ಗಳಿಂದ ದೊರೆತ ಮಾಹಿತಿಗೆ ಸಂಬಂಧಿಸಿದ ಒಟ್ಟು ಅಂಕಿಅಂಶಗಳು
ಇತರ ಸಾಧನಗಳಲ್ಲಿ ನೀವು ಹೊಂದಿರುವ ಅಥವಾ ಇತ್ತೀಚೆಗೆ ಹೊಂದಿದ್ದ ಕಾರ್ಡ್‌ಗಳನ್ನು ಸೆಟಪ್ ಮಾಡುವುದಕ್ಕೆ ನಿಮಗೆ ಸಹಾಯ ಮಾಡಲು, Apple ನಿಮ್ಮ Apple ಖಾತೆಯೊಂದಿಗೆ ಕಾರ್ಡ್ ರೆಫರೆನ್ಸ್ ಅನ್ನು ಸಂಗ್ರಹಿಸುತ್ತದೆ, ಅದನ್ನು ಭದ್ರತಾ ಕೋಡ್ ನಮೂದಿಸಿದ ನಂತರ ಕಾರ್ಡ್ ಅನ್ನು ಮರಳಿ ಸೇರಿಸಲು ಕಾರ್ಡ್ ವಿತರಕರು ಅಥವಾ ಪಾವತಿ ನೆಟ್‌ವರ್ಕ್‌ನೊಂದಿಗೆ ಬಳಸಬಹುದು . ಈ Apple Pay ಫೀಚರ್ Apple Card ಜೊತೆಗೆ ಲಭ್ಯವಿದೆ.
Apple Card ಮೂಲಕ ಪಾವತಿಸಲಾಗುತ್ತಿದೆ
ತೆರಿಗೆ ಮತ್ತು ಷಿಪ್ಪಿಂಗ್ ವೆಚ್ಚದ ಲೆಕ್ಕಾಚಾರವನ್ನು ಸಕ್ರಿಯಗೊಳಿಸಲು, ಆ್ಯಪ್‌ನಲ್ಲಿ, ವೆಬ್‌ನಲ್ಲಿ ಅಥವಾ Apple Card ಬಳಸಿಕೊಂಡು Apple Messages for Businessನಲ್ಲಿ ಪಾವತಿಯನ್ನು ಪ್ರಾರಂಭಿಸಿದಾಗ, ನಿಮ್ಮ ಪಿನ್ ಕೋಡ್, ಪೋಸ್ಟಲ್ ಕೋಡ್ ಅಥವಾ ಇತರ ಸಂಬಂಧಿತ ಮಾಹಿತಿಯನ್ನು ಆ್ಯಪ್, ವೆಬ್‌ಸೈಟ್ ಅಥವಾ ವ್ಯಾಪಾರಿಗೆ ಒದಗಿಸಲಾಗುತ್ತದೆ. ನೀವು ಪಾವತಿಯನ್ನು ದೃಢೀಕರಿಸಿದ ನಂತರ, ಸಾಧನ-ನಿರ್ದಿಷ್ಟ ಖಾತೆ ಸಂಖ್ಯೆ, ನಿಮ್ಮ ಷಿಪ್ಪಿಂಗ್ ವಿಳಾಸ ಅಥವಾ ಈಮೇಲ್ ವಿಳಾಸದಂತಹ ವ್ಯಾಪಾರಿಯು ವಿನಂತಿಸುವ ಇತರ ಮಾಹಿತಿಯನ್ನು ಸಹ ಅವರಿಗೆ ಒದಗಿಸಲಾಗುತ್ತದೆ. ವಹಿವಾಟಿನ ಸಮಯದಲ್ಲಿ ವ್ಯಾಪಾರಿಯು ಅವರ ಗೌಪ್ಯತೆ ನೀತಿಗಳಲ್ಲಿ ವಿವರಿಸಿದಂತೆ ನಿಮ್ಮ ಸ್ಥಳದ ಬಗ್ಗೆ ಮಾಹಿತಿಯನ್ನು ಮತ್ತು ನಿಮ್ಮ ವಹಿವಾಟಿನ ಕುರಿತ ಇತರ ಮಾಹಿತಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಬಹುದು ಮತ್ತು ಬಳಸಬಹುದು. ನಿಮ್ಮ ಸಾಧನದ ಸ್ಥಳದ ಆ್ಯಕ್ಸೆಸ್ ಮತ್ತು ಬಳಕೆಯನ್ನು ನಿಯಂತ್ರಿಸುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, www.apple.com/in/legal/privacy/data/en/location-services ಎಂಬಲ್ಲಿನ ಸ್ಥಳ ಸೇವೆಗಳು ಮತ್ತು ಗೌಪ್ಯತೆ ಎಂಬುದಕ್ಕೆ ಭೇಟಿ ನೀಡಿ.
ನೀವು Apple Payಯನ್ನು ಬಳಸುವಾಗ ನಿಮ್ಮ Apple Card ಸಂಖ್ಯೆಯನ್ನು ಒದಗಿಸಲಾಗುವುದಿಲ್ಲ. ಆ್ಯಪ್‌ಗಳು, ವೆಬ್‌ಸೈಟ್‌ಗಳು ಮತ್ತು Apple Messages for Businessನಲ್ಲಿ ನಿಮ್ಮ ಪಾವತಿ ಮಾಹಿತಿಯನ್ನು ಸುರಕ್ಷಿತವಾಗಿ ರವಾನಿಸಲು, ಮಾಹಿತಿಯನ್ನು Appleಗೆ ಎನ್‌ಕ್ರಿಪ್ಟೆಡ್ ರೂಪದಲ್ಲಿ ಕಳುಹಿಸಲಾಗುತ್ತದೆ, ಅಲ್ಲಿ ಮಾಹಿತಿಯನ್ನು ಸಂಕ್ಷಿಪ್ತವಾಗಿ ಡೀಕ್ರಿಪ್ಟ್ ಮಾಡಲಾಗುತ್ತದೆ ಮತ್ತು ವ್ಯಾಪಾರಿ ನಿರ್ದಿಷ್ಟ ಕೀ ಮೂಲಕ ಮರು ಎನ್‌ಕ್ರಿಪ್ಟ್ ಮಾಡಲಾಗುತ್ತದೆ, ಇದರಿಂದ ವ್ಯಾಪಾರಿ, ಡೆವಲಪರ್ ಅಥವಾ ಅವರ ಪಾವತಿ ಪ್ರೊಸೆಸರ್ ಮಾತ್ರ ನಿಮ್ಮ ಪಾವತಿ ಮಾಹಿತಿಯನ್ನು ಡೀಕ್ರಿಪ್ಟ್ ಮಾಡಬಹುದು. ಕಾರ್ಡ್ ಅನ್ನು ಸೇರಿಸಲಾಗದ Macನಲ್ಲಿ ನೀವು ಪಾವತಿಯನ್ನು ಮಾಡಿದಾಗ, Mac ಮತ್ತು ದೃಢೀಕರಿಸುವ ಸಾಧನವು Apple ಸರ್ವರ್‌ಗಳ ಮೂಲಕ ಎನ್‌ಕ್ರಿಪ್ಟೆಡ್ ಚಾನಲ್‌ನಲ್ಲಿ ಸಂವಹನ ನಡೆಸುತ್ತವೆ. ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸುವ ರೂಪದಲ್ಲಿ Apple ಈ ಯಾವುದೇ ಮಾಹಿತಿಯನ್ನು ಇರಿಸಿಕೊಳ್ಳುವುದಿಲ್ಲ.
ನೀವು Apple Card ಅನ್ನು ಬಳಸುವಾಗ, ನಮ್ಮ ವಿತರಿಸುವ ಬ್ಯಾಂಕ್ ಮತ್ತು ಪಾವತಿ ನೆಟ್‌ವರ್ಕ್ ಪಾಲುದಾರರಾದ Goldman Sachs ಮತ್ತು Mastercard ಹಾಗೂ ಅವರ ಸೇವಾ ಪೂರೈಕೆದಾರರು Apple Card ಅನ್ನು ಆಪರೇಟ್ ಮಾಡುವ ಸಲುವಾಗಿ ವ್ಯಾಪಾರಿ, ಸಮಯ ಮತ್ತು ಮೊತ್ತವನ್ನು ಒಳಗೊಂಡಂತೆ ನಿಮ್ಮ ವಹಿವಾಟಿನ ಕುರಿತ ಮಾಹಿತಿಯನ್ನು ಸ್ವೀಕರಿಸುತ್ತಾರೆ. Goldman Sachs ಅಥವಾ Mastercard ಯಾವುದೇ ಆಗಲಿ ನಿಮ್ಮ ವಹಿವಾಟಿನ ಮಾಹಿತಿಯನ್ನು ಥರ್ಡ್ ಪಾರ್ಟಿಗಳೊಂದಿಗೆ ಜಾಹೀರಾತು ಅಥವಾ ಮಾರ್ಕೆಟಿಂಗ್‌ಗಾಗಿ ಹಂಚಿಕೊಳ್ಳುವುದಿಲ್ಲ ಅಥವಾ ಮಾರಾಟ ಮಾಡುವುದಿಲ್ಲ.
Apple ನಿಮ್ಮ Apple ಖಾತೆಯಲ್ಲಿನ ವೈಯಕ್ತಿಕ ವಹಿವಾಟಿನ ಮಾಹಿತಿಯನ್ನು ಡೆಲಿವರಿ ಮಾಡುತ್ತದೆ ಮತ್ತು ಸಂಗ್ರಹಿಸುತ್ತದೆ ಮತ್ತು ನಿಮ್ಮ ಸಾಧನಗಳಾದ್ಯಂತ ನಿಮ್ಮ ವಹಿವಾಟಿನ ಇತಿಹಾಸವನ್ನು ಅಪ್ ಟು ಡೇಟ್ ಆಗಿರಿಸುತ್ತದೆ. ನಿಮ್ಮ ವಹಿವಾಟುಗಳನ್ನು iCloudನಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಬಳಸಿ ಸಂಗ್ರಹಿಸಲಾಗುತ್ತದೆ, ಇದು ಗರಿಷ್ಠ ಮಟ್ಟದ ಡೇಟ ಭದ್ರತೆಯನ್ನು ಒದಗಿಸುತ್ತದೆ. ನಿಮಗೆ ಮಾತ್ರ ತಿಳಿದಿರುವ ನಿಮ್ಮ ಸಾಧನದ ಪಾಸ್‌ಕೋಡ್‌ನೊಂದಿಗೆ ಸಂಯೋಜಿಸಲಾದ ನಿಮ್ಮ ಸಾಧನಕ್ಕೆ ನಿರ್ದಿಷ್ಟವಾದ ಮಾಹಿತಿಯಿಂದ ಪಡೆದ “ಕೀ” ಮೂಲಕ ನಿಮ್ಮ ಡೇಟವನ್ನು ರಕ್ಷಿಸಲಾಗಿದೆ. ನಿಮ್ಮ ಸಾಧನಗಳು ನಿಮ್ಮ ವಹಿವಾಟಿನ ಇತಿಹಾಸವನ್ನು ಆ್ಯಕ್ಸೆಸ್ ಮಾಡಬಹುದು ಅಥವಾ ಓದಬಹುದು, ಆದರೆ Appleಗೆ ಈ ಮಾಹಿತಿಯನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಾಗುವುದಿಲ್ಲ. ವೆಚ್ಚದ ಸಾರಾಂಶಗಳಂತಹ ನಿಮ್ಮ ವಹಿವಾಟಿನ ಇತಿಹಾಸವನ್ನು ಬಳಸುವ Apple Card ಫೀಚರ್‌ಗಳನ್ನು ಸಾಧನದಲ್ಲಿ ರಚಿಸಲಾಗಿದೆ.
Apple Card ಕುಟುಂಬ
Apple Card ಗ್ರಾಹಕರು, ತಮ್ಮ iCloud ಕುಟುಂಬ ಹಂಚಿಕೆ ಗುಂಪಿನ ಅರ್ಹ ಸದಸ್ಯರನ್ನು ಸಹ-ಮಾಲೀಕರಾಗಲು ಅಥವಾ ಭಾಗವಹಿಸಲು ಆಹ್ವಾನಿಸಬಹುದು ಮತ್ತು ಅವರೊಂದಿಗೆ ತಮ್ಮ Apple Card ಅನ್ನು ಹಂಚಿಕೊಳ್ಳಬಹುದು. Apple Card ಕುಟುಂಬ ಆಹ್ವಾನದ ಸ್ಟೇಟಸ್, ವಾಲೆಟ್‌ನಲ್ಲಿನ Apple Card ಪಾಸ್‌ನ ಹಿಂಭಾಗದಲ್ಲಿ ಯಾವಾಗ ಬೇಕಾದರೂ ನೋಡಲು ಲಭ್ಯವಿರುತ್ತದೆ. ಆಹ್ವಾನಿಸಿದಾಗ, ಆಫರ್ ಪರಿಶೀಲನೆಗೆ ಸಿದ್ಧವಾದಾಗ ಮತ್ತು ಸಹ-ಮಾಲೀಕರು ಅಥವಾ ಭಾಗವಹಿಸುವವರು ಆಹ್ವಾನ ಅಥವಾ ಆಫರ್‌ಗೆ ಪ್ರತಿಕ್ರಿಯಿಸಿದಾಗ ಆಹ್ವಾನಗಳನ್ನು ನಿರ್ವಹಿಸುವುದಕ್ಕೆ ಸಹಾಯ ಮಾಡಲು ಸಹ-ಮಾಲೀಕರು ಮತ್ತು ಭಾಗವಹಿಸುವವರಿಗೆ ವಾಲೆಟ್ ಅಲರ್ಟ್ ಅನ್ನು ಕಳುಹಿಸುತ್ತದೆ.
ಸಹ-ಮಾಲೀಕತ್ವದ ಖಾತೆಗಳು: ಸಹ-ಮಾಲೀಕರನ್ನು ಸೇರಿಸಲು, Apple Card ಗ್ರಾಹಕರು ತಮ್ಮ ಖಾತೆಗೆ ಸಹ-ಮಾಲೀಕರಾಗಿ ಸೇರಿಸಲು ಬಯಸುವ ಅರ್ಹ ಕುಟುಂಬ ಹಂಚಿಕೊಳ್ಳುವಿಕೆ ಗುಂಪಿನ ಸದಸ್ಯರನ್ನು ಆಯ್ಕೆ ಮಾಡಬೇಕು. ಆಹ್ವಾನಿತರ Apple Cardನ ಸಹ-ಮಾಲೀಕತ್ವವನ್ನು ಹೊಂದಲು ಮತ್ತು ಅದನ್ನು ಹಂಚಿಕೊಳ್ಳಲು ಆಯ್ದ ಕುಟುಂಬ ಹಂಚಿಕೆ ಗುಂಪಿನ ಸದಸ್ಯರಿಗೆ Apple ಆಹ್ವಾನವನ್ನು ಕಳುಹಿಸುತ್ತದೆ. ಪ್ರಸ್ತುತ Apple Card ಖಾತೆಯನ್ನು ಹೊಂದಿರದ ಆಹ್ವಾನಿತರು ಮೇಲೆ ವಿವರಿಸಿದಂತೆ ಅಪ್ಲಿಕೇಶನ್‌ನ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಸಹ-ಮಾಲೀಕತ್ವದ Apple Card ಕ್ರೆಡಿಟ್ ಲೈನ್ ಅನ್ನು ಮೌಲ್ಯಮಾಪನ ಮಾಡಲು Goldman Sachsಗೆ ಅನುವು ಮಾಡಿಕೊಡಲು ಅಸ್ತಿತ್ವದಲ್ಲಿರುವ Apple Card ಗ್ರಾಹಕರು ತಮ್ಮ ಪ್ರಸ್ತುತ ಆದಾಯದ ಮಾಹಿತಿಯನ್ನು ಅವರಿಗೆ ಒದಗಿಸಬೇಕಾಗುತ್ತದೆ. ಅಸ್ತಿತ್ವದಲ್ಲಿರುವ ಯಾವುದೇ Apple Card ಬ್ಯಾಲೆನ್ಸ್‌ಗಳಿಗೆ ಇಬ್ಬರು ಸಹ-ಮಾಲೀಕರೂ ಜವಾಬ್ದಾರರಾಗಿರುವುದರಿಂದ, ಅಸ್ತಿತ್ವದಲ್ಲಿರುವ ಬ್ಯಾಲೆನ್ಸ್ ಮಾಹಿತಿಯನ್ನು ಸಹ-ಮಾಲೀಕತ್ವದ Apple Card ಆಫರ್ ನಿಯಮಗಳ ಭಾಗವಾಗಿ ಬಹಿರಂಗಪಡಿಸಲಾಗುತ್ತದೆ. ಸಹ-ಮಾಲೀಕತ್ವದ ಖಾತೆಯನ್ನು ರಚಿಸಿದರೆ, ಪ್ರತಿಯೊಬ್ಬ ಸಹ-ಮಾಲೀಕರು Golden Sachs ಅನ್ನು ಸಂಪರ್ಕಿಸುವ ಮೂಲಕ, ಒಟ್ಟುಗೂಡಿಸಲಾದ ಖಾತೆಗಳಲ್ಲಿನ ಐತಿಹಾಸಿಕ ವಹಿವಾಟುಗಳ ಕುರಿತಾದ ಮಾಹಿತಿಗೆ ಆ್ಯಕ್ಸೆಸ್ ಅನ್ನು ವಿನಂತಿಸಬಹುದು; ಸಾಧನದಲ್ಲಿ ಇತ್ತೀಚಿನ ವಹಿವಾಟುಗಳು ಸಹ ಲಭ್ಯವಿರುತ್ತವೆ. ಸಹ-ಮಾಲೀಕತ್ವದ Apple Card ಆಫರ್ ಪರಿಶೀಲನೆಗೆ ಸಿದ್ಧವಾದಾಗ ಮತ್ತು ಸಂಭಾವ್ಯ ಸಹ-ಮಾಲೀಕರು ಆಫರ್‌ನ ನಿಯಮಗಳಿಗೆ ಪ್ರತಿಕ್ರಿಯಿಸಿದಾಗ, ಸಹ-ಮಾಲೀಕತ್ವದ Apple Card ಅರ್ಜಿದಾರರಿಗೆ Apple ಅಲರ್ಟ್ ಅನ್ನು ಕಳುಹಿಸುತ್ತದೆ. ಇನ್ನು ಮುಂದೆ ಪ್ರತಿ ಸಹ-ಮಾಲೀಕರು ಖಾತೆಯಲ್ಲಿನ ಎಲ್ಲಾ ವಹಿವಾಟುಗಳ ಮಾಹಿತಿಗೆ ಆ್ಯಕ್ಸೆಸ್ ಅನ್ನು ಹೊಂದಿರುತ್ತಾರೆ. ಲಭ್ಯವಿರುವ ಕ್ರೆಡಿಟ್, ಒಟ್ಟು ಬ್ಯಾಲೆನ್ಸ್ ಮತ್ತು ಕ್ರೆಡಿಟ್ ಮಿತಿಯನ್ನು ಒಳಗೊಂಡ ಬ್ಯಾಲೆನ್ಸ್ ವಿವರಗಳು ಇಬ್ಬರು ಸಹ-ಮಾಲೀಕರಿಗೂ ಲಭ್ಯವಿರುತ್ತವೆ.
ಭಾಗವಹಿಸುವವರ ಖಾತೆಗಳು: ಭಾಗವಹಿಸುವವರನ್ನು ಸೇರಿಸಲು, ತಮ್ಮ ಖಾತೆಗೆ ಭಾಗವಹಿಸುವವರಾಗಿ ಸೇರಿಸಲು ಬಯಸುವ ಅರ್ಹ ಕುಟುಂಬ ಹಂಚಿಕೆ ಗುಂಪಿನ ಸದಸ್ಯರನ್ನು Apple Card ಮಾಲೀಕರು ಆಯ್ಕೆ ಮಾಡಬೇಕು. ಮಾಲೀಕರ Apple Card ಅನ್ನು ಹಂಚಿಕೊಳ್ಳಲು, ಕುಟುಂಬ ಹಂಚಿಕೆ ಗುಂಪಿನ ಸದಸ್ಯರಿಗೆ ಆಹ್ವಾನವನ್ನು ಕಳುಹಿಸಲು ಒದಗಿಸಲಾದ ಮಾಹಿತಿಯನ್ನು Apple ಬಳಸುತ್ತದೆ. ಭಾಗವಹಿಸುವವರು 18 ವರ್ಷದೊಳಗಿನವರಾಗಿದ್ದರೆ, ಭಾಗವಹಿಸುವವರ ಕಾನೂನುಬದ್ಧ ಹೆಸರು ಮತ್ತು ಜನ್ಮದಿನಾಂಕವನ್ನು ದೃಢೀಕರಿಸಲು ವಯಸ್ಕ ಮಾಲೀಕರನ್ನು ಕೇಳಲಾಗುತ್ತದೆ; ಭಾಗವಹಿಸುವವರು 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಾಗಿದ್ದರೆ, ಭಾಗವಹಿಸುವವರಿಗೆ ಅವರ ಕಾನೂನುಬದ್ಧ ಹೆಸರು, ಜನ್ಮದಿನಾಂಕ ಮತ್ತು ಮನೆಯ ವಿಳಾಸವನ್ನು ದೃಢೀಕರಿಸುವಂತೆ ಕೇಳಲಾಗುತ್ತದೆ. ಒಂದು ವೇಳೆ 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಭಾಗವಹಿಸುವವರು ಗ್ರಾಹಕರ ವರದಿ ಮಾಡುವ ಏಜೆನ್ಸಿಗಳ ಬಳಿ ತಮ್ಮ ಫೈಲ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹೊಂದಲು ಬಯಸಿದಲ್ಲಿ, ಅವರು ತಮ್ಮ ಭಾಗವಹಿಸುವವರ ಖಾತೆಯನ್ನು ಸೆಟಪ್ ಮಾಡುವ ವೇಳೆ Goldman Sachsಗೆ ತಮ್ಮ ಸಾಮಾಜಿಕ ಭದ್ರತಾ ಸಂಖ್ಯೆಯನ್ನು ಒದಗಿಸಬಹುದು. ಭಾಗವಹಿಸುವವರ ಆನ್‌ಬೋರ್ಡಿಂಗ್ ಪ್ರಕ್ರಿಯೆಯ ಭಾಗವಾಗಿ ಒದಗಿಸಲಾದ ಮಾಹಿತಿಯನ್ನು Goldman Sachsಗೆ ಎನ್‌ಕ್ರಿಪ್ಟ್ ಮಾಡಲಾಗುತ್ತದೆ ಮತ್ತು ಭಾಗವಹಿಸುವವರ ಆನ್‌ಬೋರ್ಡಿಂಗ್ ಪೂರ್ಣಗೊಳಿಸಿರುವುದು ಅಥವಾ 30 ದಿನಗಳು ಕಳೆಯುವವರೆಗೆ Apple ಸಂಗ್ರಹಿಸಿಡುತ್ತದೆ. Apple Card ಖಾತೆಯನ್ನು ಸೆಟಪ್ ಮಾಡಲು ಮತ್ತು ನಿರ್ವಹಿಸಲು ಹಾಗೂ ವಂಚನೆ ತಡೆಗಟ್ಟಲು ಪೂರ್ಣಗೊಂಡ ಭಾಗವಹಿಸುವವರ ಆನ್‌ಬೋರ್ಡಿಂಗ್ ಮಾಹಿತಿಯನ್ನು ಮಾಲೀಕರ ಮತ್ತು ಭಾಗವಹಿಸುವವರ Apple ಖಾತೆಯ ಜೊತೆಗೆ Goldman Sachsಗೆ ಕಳುಹಿಸಲಾಗುತ್ತದೆ.
ಲಭ್ಯವಿರುವ ಕ್ರೆಡಿಟ್, ಒಟ್ಟು ಬ್ಯಾಲೆನ್ಸ್ ಮತ್ತು ಕ್ರೆಡಿಟ್ ಮಿತಿಯಂತಹ ಬ್ಯಾಲೆನ್ಸ್ ವಿವರಗಳನ್ನು ಮಾಲೀಕರು ಭಾಗವಹಿಸುವವರ ಜೊತೆಗೆ ಹಂಚಿಕೊಳ್ಳಲು ಆಯ್ಕೆಮಾಡಬಹುದು. ಅದಕ್ಕಾಗಿ ಅವರು ತಮ್ಮ ವಾಲೆಟ್‌ನಲ್ಲಿರುವ Apple Card ಪಾಸ್‌ನ ಹಿಂಭಾಗದಲ್ಲಿ, ಭಾಗವಹಿಸುವವರ ಹೆಸರನ್ನು ಆಯ್ಕೆ ಮಾಡಬೇಕಾಗುತ್ತದೆ ಮತ್ತು ‘ಬ್ಯಾಲೆನ್ಸ್ ವಿವರಗಳನ್ನು ತೋರಿಸಿ’ ಎಂಬುದನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಬ್ಯಾಲೆನ್ಸ್‌ಗೆ ಕೊಡುಗೆ ನೀಡುವ ಎಲ್ಲಾ ವಹಿವಾಟುಗಳಿಗೆ ಮಾಲೀಕರೇ ಜವಾಬ್ದಾರರಾಗಿರುವ ಕಾರಣ, ಇತರ ಎಲ್ಲಾ ಮಾಲೀಕರು ಅಥವಾ ಭಾಗವಹಿಸುವವರ ವಹಿವಾಟಿನ ಚಟುವಟಿಕೆಯನ್ನು ಅವರು ನೋಡಬಹುದು, ಆದರೆ ಭಾಗವಹಿಸುವವರು ಮಾತ್ರ ತಮ್ಮ ವಹಿವಾಟಿನ ಮಾಹಿತಿಯನ್ನಷ್ಟೇ ನೋಡಲು ಸಾಧ್ಯವಿರುತ್ತದೆ. ಮಾಲೀಕರು, ಭಾಗವಹಿಸುವವರ ವಹಿವಾಟಿನ ಮಿತಿಯನ್ನು ಸಹ ಆಯ್ಕೆ ಮಾಡಬಹುದು, ವಾಲೆಟ್‌ನಲ್ಲಿರುವ ತಮ್ಮ Apple Card ಪಾಸ್‌ನ ಹಿಂಭಾಗದಲ್ಲಿ ಅದನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು, ಅದಕ್ಕಾಗಿ ಮೊದಲಿಗೆ ಭಾಗವಹಿಸುವವರ ಹೆಸರನ್ನು ಆಯ್ಕೆ ಮಾಡಿ, ನಂತರ ವಹಿವಾಟಿನ ಮಿತಿಯನ್ನು ಆಯ್ಕೆ ಮಾಡಬೇಕಾಗುತ್ತದೆ.
ನೋಟಿಫಿಕೇಷನ್‌ಗಳು: ಮಾಲೀಕರು, ವಾಲೆಟ್‌ನಲ್ಲಿನ ತಮ್ಮ Apple Card ಪಾಸ್‌ನಲ್ಲಿ ಹಿಂಭಾಗಕ್ಕೆ ಹೋಗುವ ಮೂಲಕ, ಸಹ-ಮಾಲೀಕರು ಅಥವಾ ಭಾಗವಹಿಸುವವರ ಹೆಸರನ್ನು ಆಯ್ಕೆ ಮಾಡಿ, ನೋಟಿಫಿಕೇಷನ್‌ಗಳನ್ನು ಸಕ್ರಿಯಗೊಳಿಸುವುದು ಅಥವಾ ನಿಷ್ಕ್ರಿಯಗೊಳಿಸುವ ಮೂಲಕ Apple Card Familyಯಲ್ಲಿ ಚಟುವಟಿಕೆಯ ಕುರಿತ ನೋಟಿಫಿಕೇಷನ್‌ಗಳನ್ನು ನಿರ್ವಹಿಸಬಹುದು. ನಿರ್ದಿಷ್ಟ ಡಾಲರ್ ಮೊತ್ತದ ವಹಿವಾಟುಗಳಂತಹ ನಿರ್ದಿಷ್ಟ ಮಿತಿಗಳನ್ನು ತಲುಪಿರುವ ನೋಟಿಫಿಕೇಷನ್‌ಗಳನ್ನು ಮಾತ್ರ ಸ್ವೀಕರಿಸುವುದನ್ನು ಸಹ ಮಾಲೀಕರು ಆರಿಸಿಕೊಳ್ಳಬಹುದು. Apple, ನೋಟಿಫಿಕೇಷನ್‌ಗಳನ್ನು ನಿರ್ವಹಿಸಲು ನೋಟಿಫಿಕೇಷನ್ ಸೆಟ್ಟಿಂಗ್ಸ್ ಕುರಿತು ಮಾಹಿತಿಯನ್ನೂ ಬಳಸುತ್ತದೆ; ಖಾತೆಯಲ್ಲಿ ಇತರರ ಜೊತೆಗೆ ನೋಟಿಫಿಕೇಷನ್ ಸೆಟ್ಟಿಂಗ್ಸ್ ಅನ್ನು ಹಂಚಿಕೊಳ್ಳಲಾಗುವುದಿಲ್ಲ. ವಹಿವಾಟಿನ ಕುರಿತ ನೋಟಿಫಿಕೇಷನ್‌ಗಳನ್ನು ಸಕ್ರಿಯಗೊಳಿಸಿದಾಗ, ಖರೀದಿಯ ದಿನಾಂಕ ಮತ್ತು ಸಮಯ, ಖರೀದಿಯ ಮೊತ್ತ, ವ್ಯಾಪಾರಿ ಹಾಗೂ ಲಭ್ಯವಿದ್ದಲ್ಲಿ, ಸ್ಥಳದ ವಿವರವನ್ನು ತೋರಿಸುವ push ನೋಟಿಫಿಕೇಷನ್ ಅನ್ನು ಮಾಲೀಕರು ಸ್ವೀಕರಿಸುತ್ತಾರೆ. ವಹಿವಾಟಿನ ಮಿತಿಗಳೊಂದಿಗೆ ಭಾಗವಹಿಸುವವರ ಕುರಿತು ನೋಟಿಫಿಕೇಷನ್‌ಗಳಿಗೆ, ಭಾಗವಹಿಸುವವರ ಒಟ್ಟು ಮಾಸಿಕ ವೆಚ್ಚವನ್ನೂ ನೋಟಿಫಿಕೇಷನ್ ತೋರಿಸುತ್ತದೆ.
Apple Card ಮತ್ತು ಸ್ಥಳ
ನೀವು Apple Card ಅನ್ನು Apple Pay ಮೂಲಕ ಬಳಸಿದಾಗ, ವ್ಯಾಪಾರಿ ಮತ್ತು ಸ್ಥಳದ ಕುರಿತ ಮಾಹಿತಿಯನ್ನು ನೇರವಾಗಿ ನಿಮಗೆ ಕನೆಕ್ಟ್ ಮಾಡಲು ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಸಾಧನದಿಂದ Apple ನಕ್ಷೆಗೆ ಕಳುಹಿಸಲಾಗುತ್ತದೆ, ಈ ಮೂಲಕ ವಿಳಾಸ ಮತ್ತು ಸಂಪರ್ಕ ವಿವರದಂತಹ ಸುಧಾರಿತ ವ್ಯಾಪಾರಿ ಮಾಹಿತಿಯನ್ನು ಒದಗಿಸಲಾಗುತ್ತದೆ. ನೀವು ಭೌತಿಕ Apple Card ಅನ್ನು ಬಳಸಿದರೆ, ವಹಿವಾಟಿಗೆ ಸಂಬಂಧಿಸಿದ ಸರಿಯಾದ ವ್ಯಾಪಾರಿಯನ್ನು ಗುರುತಿಸುವುದಕ್ಕೆ Apple ನಕ್ಷೆಗೆ ಸಹಾಯ ಮಾಡಲು ನಿಮ್ಮ ಸಾಧನದ ಸ್ಥಳವನ್ನು ಬಳಸುವ ಆಯ್ಕೆ ನಿಮ್ಮದಾಗಿರುತ್ತದೆ. ನೀವು ವಾಲೆಟ್‌ನಲ್ಲಿ ಸ್ಥಳ ಸೇವೆಗಳನ್ನು ಸಕ್ರಿಯಗೊಳಿಸಿದ್ದರೆ, ವಂಚನೆಯನ್ನು ಗುರುತಿಸಲು ಮತ್ತು ತಡೆಗಟ್ಟಲು ಸಹಾಯ ಮಾಡುವುದಕ್ಕಾಗಿ, ನಿಮ್ಮ Apple Card ಬಳಕೆಯೊಂದಿಗೆ ಸೇರಿಸಲಾದ ಸ್ಥಳದ ಕುರಿತ ಮಾಹಿತಿಯನ್ನು Apple ಬಳಸಿಕೊಳ್ಳಬಹುದು. ಉದಾ, ನೀವು ಭೌತಿಕ Apple Cardಗೆ ಆರ್ಡರ್ ನೀಡಿದಾಗ ಅಥವಾ ಅದನ್ನು ಬದಲಿಸಿದಾಗ ಅಥವಾ ಬ್ಯಾಲೆನ್ಸ್ ಪಾವತಿಗೆ ವೇಳಾಪಟ್ಟಿಯನ್ನು ನಿಗದಿಪಡಿಸಿದಾಗ. ಇಲ್ಲದೆ ಹೋದಲ್ಲಿ, Apple, ನೀವು Apple Card ಅನ್ನು ಬಳಸಿದಾಗ ನಿಮ್ಮ ಸ್ಥಳದ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಆನ್‌ಲೈನ್ ವಹಿವಾಟುಗಳಿಗೆ ನೀವು Apple Card ಮೂಲಕ ಪಾವತಿಸುವಾಗ, Goldman Sachs ಸ್ಥಳದ ಡೇಟವನ್ನು ವಂಚನೆ ತಡೆಗಟ್ಟುವ ಥರ್ಡ್ ಪಾರ್ಟಿ ಸೇವೆ ಒದಗಿಸುವವರಿಂದ ಸ್ವೀಕರಿಸಬಹುದು, ಅದನ್ನು Goldman Sachs ವಂಚನೆ ತಡೆಗಟ್ಟುವ ಉದ್ದೇಶಗಳಿಗಾಗಿ ಮಾತ್ರವೇ ಬಳಸಿಕೊಳ್ಳುತ್ತದೆ.
Apple Card ಮತ್ತು ಅನಾಲಿಟಿಕ್ಸ್
Apple Card ಅನ್ನು ಸುಧಾರಿಸುವುದಕ್ಕೆ ಸಹಾಯ ಮಾಡಲು, Apple Cardನ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಕುರಿತು ಮತ್ತು ವಾಲೆಟ್ ಆ್ಯಪ್‌ನಲ್ಲಿ Apple Cardನ ಫೀಚರ್‌ಗಳ ಬಳಕೆಯ ಮಾಹಿತಿಯನ್ನು Apple ಸಂಗ್ರಹಿಸುತ್ತದೆ ಹಾಗೂ ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಲಾಗದ ರೀತಿಯಲ್ಲಿ ಆ ಮಾಹಿತಿಯನ್ನು ಸಂಗ್ರಹಿಸಿಡುತ್ತದೆ. ಅರ್ಜಿಯನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯ ಮತ್ತು ಮಾಸಿಕ ಚಟುವಟಿಕೆಯ ವೀಕ್ಷಣೆಯಂತಹ Apple Cardನಲ್ಲಿ ಆಗಾಗ್ಗೆ ಬಳಸುವ ಫೀಚರ್‌ಗಳು ಯಾವುವು ಎನ್ನುವ ಮಾಹಿತಿಯನ್ನು ಇದು ಒಳಗೊಂಡಿದೆ. Apple, ಈ ಮಾಹಿತಿಯನ್ನು ಇತರ Apple ಉತ್ಪನ್ನಗಳು ಮತ್ತು ಸೇವೆಗಳನ್ನು ಸುಧಾರಿಸಲು, ಮಾರ್ಕೆಟಿಂಗ್‌ಗಾಗಿ ಮತ್ತು ವಂಚನೆ ತಡೆಗಟ್ಟಲು ಹಾಗೂ ಭದ್ರತಾ ಉದ್ದೇಶಗಳಿಗಾಗಿ ಸಹ ಬಳಸಬಹುದು.
ನಿಮ್ಮ ಬಳಿ Apple Card ಇದೆ ಎನ್ನುವ ವಾಸ್ತವಾಂಶ ಸೇರಿದಂತೆ Appleನಲ್ಲಿರುವ ನಿಮ್ಮ ಖಾತೆಯ ಕುರಿತ ಮಾಹಿತಿಯನ್ನು Apple ಬಳಸಬಹುದು, ಅದನ್ನು ಹಣಕಾಸಿನ ಮುನ್ಸೂಚನೆಯಂತಹ ಆಂತರಿಕ ಅಧ್ಯಯನ ಮತ್ತು ಅನಾಲಿಟಿಕ್ಸ್ ಉದ್ದೇಶಗಳಿಗೆ ಬಳಸಬಹುದು. Apple, ನಿಮ್ಮ Apple ಜೊತೆಗಿನ ಸಂಬಂಧದ ಕುರಿತ ಮಾಹಿತಿ, ಅಂದರೆ, ನೀವು ಯಾವ Apple ಉತ್ಪನ್ನಗಳನ್ನು ಖರೀದಿಸಿರುವಿರಿ, ಎಷ್ಟು ಸಮಯದಿಂದ ನಿಮ್ಮ Apple Account ಅನ್ನು ಬಳಸುವಿರಿ ಹಾಗೂ Apple ಜೊತೆಗೆ ಎಷ್ಟು ಮಧ್ಯಂತರದಲ್ಲಿ ವಹಿವಾಟು ನಡೆಸುವಿರಿ ಮೊದಲಾದ ವಿವರಗಳನ್ನು Apple Card ಸುಧಾರಿಸಲು ಬಳಸಿಕೊಳ್ಳಬಹುದು. ಆ ಮೂಲಕ Goldman Sachs ತನ್ನ ಕ್ರೆಡಿಟ್ ನಿರ್ಧಾರವನ್ನು ಸುಧಾರಿಸಲು ಸಾಧ್ಯವಾಗುವಂತೆ Apple ಮೆಟ್ರಿಕ್‌ಗಳನ್ನು ಗುರುತಿಸಲು ಸಹಾಯ ಮಾಡಲಾಗುತ್ತದೆ. ಸೂಕ್ತ Apple ಮೆಟ್ರಿಕ್‌ಗಳನ್ನು ಗುರುತಿಸಲು Appleನೊಂದಿಗಿನ ನಿಮ್ಮ ಸಂಬಂಧದ ಕುರಿತು ಯಾವುದೇ ವೈಯಕ್ತಿಕ ಡೇಟವನ್ನು Goldman Sachs ಜೊತೆಗೆ ಹಂಚಿಕೊಳ್ಳಲಾಗುವುದಿಲ್ಲ. ನೀವು Apple ಜೊತೆಗಿನ ನಿಮ್ಮ ಸಂಬಂಧದ ಕುರಿತ ಈ ಮಾಹಿತಿಯ ಬಳಕೆಯಿಂದ ಹೊರಗುಳಿಯುವ ಆಯ್ಕೆಯನ್ನು ಮಾಡಬಹುದು. ಅದಕ್ಕಾಗಿ ನಮ್ಮಗೌಪ್ಯತೆ ತಂಡದ ಈಮೇಲ್ ವಿಳಾಸ dpo@apple.com ಎಂಬುದಕ್ಕೆ “Apple ಸಂಬಂಧದ ಡೇಟ ಮತ್ತು Apple Card” ಎಂಬ ವಿಷಯದೊಂದಿಗೆ ಈಮೇಲ್ ಕಳುಹಿಸಬಹುದು. ಅರ್ಜಿದಾರರು ಮತ್ತು ಕಾರ್ಡ್ ಹೊಂದಿರುವವರು ತಮ್ಮ ಕ್ರೆಡಿಟ್‌ನ ಆಫರ್‌ನ ಮರುಮೌಲ್ಯಮಾಪನ ಅಥವಾ ತಮ್ಮ ಕ್ರೆಡಿಟ್ ಲೈನ್ ಅನ್ನು ಹೆಚ್ಚಿಸುವ ಉದ್ದೇಶದಿಂದ, ಗುರುತಿಸಲಾದ ಮೆಟ್ರಿಕ್‌ಗಳನ್ನು Goldman Sachs ಜೊತೆಗೆ ಹಂಚಿಕೊಳ್ಳುವ ಆಯ್ಕೆಯನ್ನು ಆರಿಸಬಹುದು.
Apple Card ಮತ್ತು ಸಂವಹನಗಳು
ಮಾರ್ಕೆಟಿಂಗ್ ಸಂದೇಶ ಸೇರಿದಂತೆ ಸಂದೇಶವೊಂದು ನಿಮಗೆ ಸೂಕ್ತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು, ನೀವು Apple Card ಖಾತೆಗಾಗಿ ಅರ್ಜಿ ಸಲ್ಲಿಸಿದ್ದೀರಾ ಅಥವಾ ಪ್ರಸ್ತುತ ಅದನ್ನು ಬಳಸುತ್ತಿದ್ದೀರಾ ಎಂಬಂತಹ ನಿಮ್ಮ Apple Card ಖಾತೆಯ ಸ್ಟೇಟಸ್ ಅನ್ನು Apple ಬಳಸಬಹುದು. Apple ನಿಮ್ಮ ಸಾಧನಕ್ಕೆ ಸಂದೇಶಗಳನ್ನು ಸಹ ಕಳುಹಿಸಬಹುದು, ಆ ಸಂದೇಶಗಳು ನಿಮಗೆ ಸೂಕ್ತವಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವುದಕ್ಕೆ ಸಹಾಯ ಮಾಡಲು ನಿಮಗೆ ಮತ್ತು ನಿಮ್ಮ ಸಾಧನಕ್ಕೆ ಮಾತ್ರ ತಿಳಿದಿರುವ, Appleಗೆ ತಿಳಿದಿರದ, ನಿಮ್ಮ ವಹಿವಾಟಿನ ಇತಿಹಾಸ ಮತ್ತು ಸ್ಥಳದಂತಹ ಮಾಹಿತಿಯನ್ನು ಅದು ಬಳಸಿಕೊಳ್ಳಬಹುದು. ಉದಾಹರಣೆಗೆ, ಸಾಮಾನ್ಯವಾಗಿ ಪ್ರಯಾಣಕ್ಕೆ ಸಂಬಂಧಿಸಿರುವುದನ್ನು ಖರೀದಿ ಮಾಡುವ ಜನರಿಗೆ ಸೂಕ್ತವೆನಿಸುವ ಸಂದೇಶವನ್ನು Apple ನಿಮ್ಮ ಸಾಧನಕ್ಕೆ ಕಳುಹಿಸಬಹುದು. Appleಗೆ ನೀವು ಪ್ರಯಾಣಕ್ಕೆ ಸಂಬಂಧಿಸಿದ ಖರೀದಿಯನ್ನು ಮಾಡಿರುವಿರಾ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿರುವುದಿಲ್ಲ, ನಿಮ್ಮ ಸಾಧನವು ನಿಮ್ಮ ವಹಿವಾಟಿನ ಇತಿಹಾಸವನ್ನು ಬಳಸಿಕೊಂಡು, ಆ ಸಂದೇಶ ನಿಮಗೆ ಸೂಕ್ತವೇ ಎಂಬುದನ್ನು ನಿರ್ಧರಿಸಬಹುದು. ನಿಮ್ಮ ಗೌಪ್ಯತೆಯನ್ನು ರಕ್ಷಿಸುವುದರ ಜೊತೆಗೆ ನಿಮಗೆ ಸೂಕ್ತವೆನಿಸುವ ಸಂವಹನಗಳನ್ನು ನೀವು ಸ್ವೀಕರಿಸುವಿರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ನಿಮ್ಮ ಸಾಧನದಲ್ಲಿ ನೀವು ಯಾವ ಸಂದೇಶಗಳನ್ನು ನೋಡುತ್ತೀರಿ ಎನ್ನುವುದು Appleಗೆ ತಿಳಿಯುವುದಿಲ್ಲ.
ನಿಮ್ಮೊಂದಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗದೆ ಇರುವ ಅನಾಮಧೇಯ ಮತ್ತು ಒಟ್ಟುಗೂಡಿಸಿದ ಮಾಹಿತಿಯನ್ನು Apple Card ಮಾರ್ಕೆಟಿಂಗ್ ಮತ್ತು ಇತರ ಸಂದೇಶ ಕಳುಹಿಸುವಿಕೆಗಾಗಿಯೂ ಬಳಸಬಹುದು. ಮಾರ್ಕೆಟಿಂಗ್ ಈಮೇಲ್‌ನಲ್ಲಿ ‘ಅನ್‌ಸಬ್‌ಸ್ಕ್ರೈಬ್ ಮಾಡಿ’ ಎಂಬ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅಥವಾ Apple Cardನ ನೋಟಿಫಿಕೇಷನ್‌ಗಳನ್ನು ಆಫ್ ಮಾಡುವ ಮೂಲಕ ನೀವು ಮಾರ್ಕೆಟಿಂಗ್ ಸಂದೇಶಗಳನ್ನು ಸ್ವೀಕರಿಸುವುದರಿಂದ ಹೊರಗುಳಿಯಬಹುದು.
Apple ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳು ನಿಮ್ಮ ಬಳಿ Apple Card ಇದೆಯೇ ಎಂದು ಪರಿಶೀಲಿಸಬಹುದು
ನೀವು Apple Payಯನ್ನು ಸಕ್ರಿಯಗೊಳಿಸಿದ್ದೀರಾ ಎಂದು ಪರಿಶೀಲಿಸುವ Apple ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳು, ನಿಮ್ಮ ಬಳಿ Apple Card ಇದೆಯೇ ಎಂದು ಸಹ ಪರಿಶೀಲಿಸಬಹುದು. iOS ಮತ್ತು Safariಯಲ್ಲಿ, ನಿಮ್ಮ ಸೆಟ್ಟಿಂಗ್ಸ್ ಅನ್ನು ಬದಲಾಯಿಸುವ ಮೂಲಕ Apple ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳು ನಿಮ್ಮ ಬಳಿ Apple Card ಇದೆಯೇ ಎಂದು ಪರಿಶೀಲಿಸುವುದನ್ನು ನಿಷ್ಕ್ರಿಯಗೊಳಿಸಬಹುದು. iOSನಲ್ಲಿ, ಸೆಟ್ಟಿಂಗ್ಸ್ > ಆ್ಯಪ್‌ಗಳು > Safari ಎಂಬಲ್ಲಿಗೆ ಹೋಗಿ ಮತ್ತು “Apple Payಯನ್ನು ಪರಿಶೀಲಿಸಿ” ಎನ್ನುವುದನ್ನು ಆಫ್ ಮಾಡಲು ಟ್ಯಾಪ್ ಮಾಡಿ. Macನಲ್ಲಿ, Safari > ಸೆಟ್ಟಿಂಗ್ಸ್ > ಸುಧಾರಿತ ಎಂಬಲ್ಲಿಗೆ ಹೋಗಿ ಹಾಗೂ “Apple Pay ಮತ್ತು Apple Cardಗಾಗಿ ಪರಿಶೀಲಿಸಲು ವೆಬ್‌ಸೈಟ್‌ಗಳಿಗೆ ಅನುಮತಿಸಿ” ಎಂಬ ಆಯ್ಕೆಯನ್ನು ರದ್ದುಮಾಡಿ.
Daily Cash
ನಿಮ್ಮ ಬಳಿ Apple Cash ಇದ್ದಲ್ಲಿ, ನಿಮ್ಮ Apple Card Daily Cash ವಿತರಣೆಗಳನ್ನು ಹಣ ವರ್ಗಾವಣೆಗೆ ಪರವಾನಗಿ ಪಡೆದಿರುವ Apple Payments Services LLCನ ಅಂಗ ಸಂಸ್ಥೆಯಾದ Apple Payments Inc. ಮೂಲಕ ಪ್ರಕ್ರಿಯೆಗೊಳಿಸಲಾಗುತ್ತದೆ. Apple Payments Inc. ನಿಮ್ಮ ಗೌಪ್ಯತೆಯನ್ನು ಹೇಗೆ ರಕ್ಷಿಸುತ್ತದೆ ಎಂಬ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳಬಹುದು. ಅದಕ್ಕಾಗಿ, ವಾಲೆಟ್ ತೆರೆದು, ನಿಮ್ಮ Apple Cash ಕಾರ್ಡ್ ಮೇಲೆ ಟ್ಯಾಪ್ ಮಾಡಿ, ‘ಇನ್ನಷ್ಟು’ ಬಟನ್ ಟ್ಯಾಪ್ ಮಾಡಿ, ನಂತರ “ನಿಮ್ಮ ಡೇಟವನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂದು ನೋಡಿ” ಎಂಬಲ್ಲಿಗೆ ಹೋಗಿ ಟ್ಯಾಪ್ ಮಾಡಬೇಕು.
Apple Card ಬೆಂಬಲ
Apple Card ಕುರಿತು ನಿಮ್ಮಲ್ಲಿ ಪ್ರಶ್ನೆಗಳಿದ್ದರೆ, ನಿಮ್ಮ ವಾಲೆಟ್ ಆ್ಯಪ್ ಮೂಲಕ ಸಂದೇಶವನ್ನು ಆರಂಭಿಸಿ ಬೆಂಬಲಕ್ಕಾಗಿ ಸಂಪರ್ಕಿಸಬಹುದು. ವೈಯಕ್ತಿಕ ಡೇಟ ಸೇರಿದಂತೆ ನೀವು ಹಂಚಿಕೊಳ್ಳುವ ಯಾವುದೇ ಮಾಹಿತಿಯನ್ನು Apple ನಿಮ್ಮ ವಿನಂತಿಯನ್ನು ಪ್ರಕ್ರಿಯೆಗೊಳಿಸಲು ಬಳಸುತ್ತದೆ. ಸೇವೆ ಒದಗಿಸಲು ನಿಮ್ಮ ಪ್ರಶ್ನೆಯನ್ನು Goldman Sachsಗೆ ಕಳುಹಿಸಬೇಕಾದಲ್ಲಿ, ನಿಮಗೆ ಉತ್ತಮವಾಗಿ ಸೇವೆ ಸಲ್ಲಿಸಲು ಸಾಧ್ಯವಾಗುವಂತೆ Apple ನಿಮ್ಮ ಮತ್ತು ನಿಮ್ಮ ಪ್ರಶ್ನೆಯ ಕುರಿತು ಮಾಹಿತಿಯನ್ನು Goldman Sachs ಜೊತೆಗೆ ಹಂಚಿಕೊಳ್ಳುತ್ತದೆ. ಸೇವೆಯನ್ನು ಒದಗಿಸಲು Goldman Sachsಗೆ ಕಳುಹಿಸುವ ವೈಯಕ್ತಿಕವಾಗಿ ಗುರುತಿಸಬಲ್ಲ ಹಣಕಾಸು ಮಾಹಿತಿಯನ್ನು Apple ಉಳಿಸಿಕೊಳ್ಳುವುದಿಲ್ಲ. 877-255-5923ಗೆ ಕರೆ ಮಾಡುವ ಮೂಲಕ ಸಹ ನೀವು ನೇರವಾಗಿ ಬೆಂಬಲವನ್ನು ಸಂಪರ್ಕಿಸಬಹುದು.
ನಿಮ್ಮ Apple Card ಖಾತೆಯನ್ನು ಮುಚ್ಚುವುದು
ನಿಮ್ಮ Apple Card ಖಾತೆಯನ್ನು ನೀವು ಮುಚ್ಚಿದಲ್ಲಿ, ವಾಲೆಟ್ ಆ್ಯಪ್‌ನಿಂದ Apple Card ಅನ್ನು ತೆಗೆದುಹಾಕುವವರೆಗೂ ನಿಮ್ಮ Apple Card ಖಾತೆಯ ಕುರಿತ ಮಾಹಿತಿಯು ವಾಲೆಟ್‌ನಲ್ಲೇ ಉಳಿಯುತ್ತದೆ.
ನಿಮ್ಮ ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗುತ್ತಿದೆ
ನಿಮ್ಮ Apple Card ಜೊತೆಗೆ ಸಂಯೋಜಿತವಾಗಿರುವ ವಿವರಗಳನ್ನು ಎಡಿಟ್ ಮಾಡುವ ಮೂಲಕ ವಾಲೆಟ್‌ನಲ್ಲಿ ನಿಮ್ಮ ಬಿಲ್ಲಿಂಗ್ ವಿಳಾಸವನ್ನು ನೀವು ಅಪ್‌ಡೇಟ್ ಮಾಡಬಹುದು. ನೀವು Goldman Sachs ಅನ್ನು ಸಂಪರ್ಕಿಸುವ ಮೂಲಕ ನಿಮ್ಮ Apple Card ಖಾತೆಯ ಮಾಹಿತಿಯನ್ನು ಸಹ ಅಪ್‌ಡೇಟ್ ಮಾಡಬಹುದು. Goldman Sachs, ಅಪ್‌ಡೇಟ್ ಮಾಡಲಾದ Apple Card ಖಾತೆಯ ಮಾಹಿತಿಯನ್ನು Apple Card ಸೇವೆಗಳನ್ನು ಒದಗಿಸುವ ಉದ್ದೇಶಗಳಿಗಾಗಿ Apple ಜೊತೆಗೆ ಹಂಚಿಕೊಳ್ಳಬಹುದು.
Apple ಲೈನ್ ಆಫ್ ಕ್ರೆಡಿಟ್
Apple ಲೈನ್ ಆಫ್ ಕ್ರೆಡಿಟ್, Apple Cardನ ಫೀಚರ್ ಆಗಿದೆ. ನೀವು apple.comನಲ್ಲಿ Apple Cardಗಾಗಿ ಅರ್ಜಿ ಸಲ್ಲಿಸಿದಾಗ, ನೀವು Apple ಲೈನ್ ಆಫ್ ಕ್ರೆಡಿಟ್ ಫೀಚರ್‌ಗೆ ಅರ್ಹರಾಗಿರಬಹುದು ಮತ್ತು ಅರ್ಹ Apple ಸಾಧನದಲ್ಲಿ Apple Cardಗಾಗಿ ನೀವು ಅರ್ಜಿ ಸಲ್ಲಿಸಿದಾಗ ಪ್ರಕ್ರಿಯೆಗೊಳಿಸುವ ಮಾಹಿತಿಗಿಂತ ವಿಭಿನ್ನವಾಗಿ Apple ನಿಮ್ಮ ಕೆಲವು ಮಾಹಿತಿಯನ್ನು ಪ್ರಕ್ರಿಯೆಗೊಳಿಸಬಹುದು.
ನೀವು apple.comನಲ್ಲಿ Apple Cardಗಾಗಿ ಅರ್ಜಿ ಸಲ್ಲಿಸಿದರೆ ಮತ್ತು Apple ಲೈನ್ ಆಫ್ ಕ್ರೆಡಿಟ್ ಪಡೆಯಲು ಅರ್ಹರಾಗಿದ್ದಲ್ಲಿ, ನಿಮ್ಮ ಅರ್ಜಿಯ ಮಾಹಿತಿಯನ್ನು ವೆಬ್ ಮೂಲಕ ಸಂಗ್ರಹಿಸಲಾಗುತ್ತದೆ ಮತ್ತು ಸಲ್ಲಿಸಲಾಗುತ್ತದೆ. ಗುರುತು ದೃಢೀಕರಣ ಮತ್ತು ವಂಚನೆ ತಡೆಗಟ್ಟುವ ಉದ್ದೇಶದಿಂದ ನಿಮ್ಮ ಸಾಧನದ ಬದಲಾಗಿ ನಿಮ್ಮ ಅರ್ಜಿಯ ಫೋನ್ ಸಂಖ್ಯೆಯ ಕುರಿತ ಮಾಹಿತಿಯನ್ನು Appleಗೆ ಕಳುಹಿಸಲಾಗುತ್ತದೆ. ಇದರ ಜೊತೆಗೆ, ಅರ್ಜಿ ಸಲ್ಲಿಸುವ ಸಮಯದಲ್ಲಿ ಬ್ರೌಸರ್ ವಿಧ ಮತ್ತು IP ವಿಳಾಸವನ್ನು Apple ಸಂಗ್ರಹಿಸುತ್ತದೆ ಹಾಗೂ ವಂಚನೆಯನ್ನು ತಡೆಗಟ್ಟಲು Apple ಮತ್ತು Goldman Sachs ಈ ಮಾಹಿತಿಯನ್ನು ಬಳಸಿಕೊಳ್ಳಬಹುದು. Goldman Sachsಗೆ ನಿಮ್ಮ ಅರ್ಜಿಯನ್ನು ಪ್ರಕ್ರಿಯೆಗೊಳಿಸಲು ಹೆಚ್ಚುವರಿ ಮಾಹಿತಿಯ ಅಗತ್ಯವಿದ್ದಲ್ಲಿ, ಹೆಚ್ಚುವರಿ ಮಾಹಿತಿಯನ್ನು ಒದಗಿಸಿದಾಗ, ಅರ್ಹ ಸಾಧನದಲ್ಲಿ Apple Cardಗಾಗಿ ನೀವು ಸಲ್ಲಿಸುವ ಅರ್ಜಿಯಲ್ಲದೆ, ನಿಮ್ಮ ಅರ್ಜಿಯ ಕುರಿತ ಮಾಹಿತಿಯನ್ನು ನಿಮ್ಮ ಸಾಧನದಲ್ಲಿ ಸಂಗ್ರಹಿಸಲಾಗುವುದಿಲ್ಲ. Apple ಲೈನ್ ಆಫ್ ಕ್ರೆಡಿಟ್ ಅನ್ನು ಸುಧಾರಿಸುವುದಕ್ಕೆ ಸಹಾಯ ಮಾಡಲು, Apple Cardನ Apple ಲೈನ್ ಆಫ್ ಕ್ರೆಡಿಟ್‌ಗೆ ಸಂಬಂಧಿಸಿದ ಅರ್ಜಿ ಪ್ರಕ್ರಿಯೆಗೊಳಿಸುವಿಕೆಯ ಕುರಿತು Apple ಮಾಹಿತಿಯನ್ನು ಸಂಗ್ರಹಿಸುತ್ತದೆ.
Apple ಲೈನ್ ಆಫ್ ಕ್ರೆಡಿಟ್ ಅನ್ನು Apple ಜೊತೆಗೆ ಮಾತ್ರ ವಹಿವಾಟುಗಳನ್ನು ನಡೆಸಲು ಬಳಸಬಹುದು. Apple ಲೈನ್ ಆಫ್ ಕ್ರೆಡಿಟ್ ಮೂಲಕ ಪಾವತಿಸುವಾಗ, ತೆರಿಗೆ ಮತ್ತು ಷಿಪ್ಪಿಂಗ್ ವೆಚ್ಚದ ಲೆಕ್ಕಾಚಾರವನ್ನು ಸಕ್ರಿಯಗೊಳಿಸಲು Apple ನಿಮ್ಮ ಪಿನ್ ಕೋಡ್ ಅಥವಾ ಇತರ ಸರಿಯಾದ ಮಾಹಿತಿಯನ್ನು ಬಳಸುತ್ತದೆ. ನಿಮ್ಮ ವಹಿವಾಟನ್ನು ಪ್ರಕ್ರಿಯೆಗೊಳಿಸಲು ನಿಮ್ಮ ವರ್ಚುವಲ್ ಪಾವತಿ ಖಾತೆ ಸಂಖ್ಯೆ, ಷಿಪ್ಪಿಂಗ್ ವಿಳಾಸ ಹಾಗೂ ಈಮೇಲ್ ವಿಳಾಸವನ್ನು ಬಳಸಬಹುದು. Apple ಲೈನ್ ಆಫ್ ಕ್ರೆಡಿಟ್, ನಿಖರವಾದ ಸ್ಥಳದ ಮಾಹಿತಿಯನ್ನು ಬಳಸುವುದಿಲ್ಲ.
Apple ಅನ್ನು ಸಂಪರ್ಕಿಸಲು ನೀವು ಬಳಸುವ ಈಮೇಲ್ ಮತ್ತು ಇತರ ಚಾನಲ್‌ಗಳ ಮೂಲಕ Apple ನಿಮ್ಮನ್ನು ಸಂಪರ್ಕಿಸಬಹುದು. Apple Cardನಂತಲ್ಲದೆ, Appleಗೆ ತಿಳಿದಿರದ, ಆದರೆ ನಿಮಗೆ ಮತ್ತು ನಿಮ್ಮ ಸಾಧನಕ್ಕೆ ಮಾತ್ರ ತಿಳಿದಿರುವ ಮಾಹಿತಿಯನ್ನು ಬಳಸಿಕೊಂಡು Apple ಲೈನ್ ಆಫ್ ಕ್ರೆಡಿಟ್ ಕುರಿತು Apple ನಿಮ್ಮ ಸಾಧನಕ್ಕೆ ಸಂದೇಶಗಳನ್ನು ಕಳುಹಿಸುವುದಿಲ್ಲ. ನೀವು ಮಾರ್ಕೆಟಿಂಗ್ ಈಮೇಲ್‌ನಲ್ಲಿ ‘ಅನ್‌ಸಬ್‌ಸ್ಕ್ರೈಬ್ ಮಾಡಿ’ ಎಂಬ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ Apple ಲೈನ್ ಆಫ್ ಕ್ರೆಡಿಟ್ ಮಾರ್ಕೆಟಿಂಗ್ ಸಂದೇಶಗಳನ್ನು ನಿಲ್ಲಿಸಲು ಆಯ್ಕೆಮಾಡಬಹುದು.
Apple ಲೈನ್ ಆಫ್ ಕ್ರೆಡಿಟ್ ಕುರಿತು ನಿಮ್ಮಲ್ಲಿ ಪ್ರಶ್ನೆಗಳಿದ್ದರೆ, ನಿಮ್ಮ ವೈಯಕ್ತಿಕ ಡೇಟವನ್ನು ಅಪ್‌ಡೇಟ್ ಮಾಡಲು ಅಥವಾ ನಿಮ್ಮ ಖಾತೆಯನ್ನು ಮುಚ್ಚಲು ಬಯಸಿದಲ್ಲಿ, ನೀವು 877-255-5923ಗೆ ಕರೆ ಮಾಡುವ ಮೂಲಕ ಬೆಂಬಲ ತಂಡವನ್ನು ಸಂಪರ್ಕಿಸಬಹುದು. ಅರ್ಹ ಸಾಧನಕ್ಕೆ Apple Card ಅನ್ನು ಒದಗಿಸಿದ ನಂತರ, ವಾಲೆಟ್ ಆ್ಯಪ್‌ನ ಮೂಲಕ ಸಂದೇಶ ಆ್ಯಪ್ ಬಳಸಲು ಆರಂಭಿಸುವುದರ ಜೊತೆಗೆ ಕಾರ್ಯಶೀಲತೆಯನ್ನು ಬೆಂಬಲಿಸಿ.
Apple Card ವೆಬ್ ಪೋರ್ಟಲ್
ನಿಮ್ಮ Apple ಖಾತೆಯನ್ನು ಬಳಸಿ card.apple.com ಎಂಬುದಕ್ಕೆ ಸೈನ್ ಇನ್ ಮಾಡುವ ಮೂಲಕ Apple Card ವೆಬ್ ಸರ್ವೀಸಿಂಗ್ ಪೋರ್ಟಲ್ ಅನ್ನು ಬಳಸಿಕೊಂಡು Apple Card ಮತ್ತು Apple ಲೈನ್ ಆಫ್ ಕ್ರೆಡಿಟ್ ಫೀಚರ್ ಅನ್ನು ನಿರ್ವಹಿಸಬಹುದು. ಈ ಪಾವತಿಯನ್ನು ಮಾಡಲು, ಪಾವತಿ ಮಾಡುವ ಬ್ಯಾಂಕ್ ಖಾತೆಯ ಕುರಿತು ಮಾಹಿತಿಯನ್ನು ನೀವು ಒದಗಿಸಬಹುದು. ಈ ಮಾಹಿತಿಯನ್ನು ನಿಮ್ಮ ಪಾವತಿಯನ್ನು ಪ್ರಕ್ರಿಯೆಗೊಳಿಸಲು ಮಾತ್ರ ಬಳಸಲಾಗುತ್ತದೆ. ನೀವು ಪಾವತಿಯನ್ನು ನಿಗದಿಪಡಿಸಿತ್ತೀರೋ ಅಥವಾ ಮಾಡುತ್ತೀರೋ ಎಂಬಂತಹ ಹಾಗೂ ನಿಮ್ಮ ವಿನಂತಿಯನ್ನು ಪೂರೈಸಲು ಅಥವಾ ಟ್ರಬಲ್‌ಶೂಟ್ ಮಾಡಲು ಮತ್ತು ಅದೇ ರೀತಿಯ ಕ್ರಿಯೆಗಳನ್ನು ಮಾಡಲು ಆ ಮಾಹಿತಿಯನ್ನು ಬಳಸುವಂತಹ ಪೋರ್ಟಲ್‌ನಲ್ಲಿ ನೀವು ಕೈಗೊಂಡ ಕ್ರಮಗಳ ಕುರಿತ ಮಾಹಿತಿಯನ್ನು Apple ಸಂಗ್ರಹಿಸಬಹುದು. ನಿಮ್ಮ ವಿನಂತಿಯನ್ನು ಪೂರೈಸಲು ಅಗತ್ಯವಿರುವಲ್ಲಿ ಸಂಗ್ರಹಿಸಲಾದ ನಿರ್ದಿಷ್ಟ ಮಾಹಿತಿಯನ್ನು Goldman Sachs ಜೊತೆಗೆ Apple ಹಂಚಿಕೊಳ್ಳಬಹುದು. ನಿಮಗೆ ಲಿಂಕ್ ಮಾಡಲಾಗದ ಪೋರ್ಟಲ್‌ನ ನಿಮ್ಮ ಬಳಕೆಯ ಕುರಿತು ಮಾಹಿತಿಯನ್ನು Apple Card ಅನ್ನು ಸುಧಾರಿಸಲು ಬಳಸಬಹುದು.
ಇನ್ನಷ್ಟು ಮಾಹಿತಿ
ನಿಮ್ಮ ಖಾತೆಯನ್ನು ನೀವು ಮುಚ್ಚಿದ ನಂತರವೂ, ನಿಮ್ಮApple Cardಗೆ ಸಂಬಂಧಿಸಿದ ಮಾಹಿತಿಯನ್ನು ಕಾನೂನು ಜಾರಿಗೆ ಅಗತ್ಯವಿರುವಂತೆ ಅಥವಾ ವಂಚನೆಯನ್ನು ತಡೆಗಟ್ಟಲು Apple ಬಳಸಬಹುದು. Appleನೊಂದಿಗೆ ನಿಮ್ಮ ಸಂಬಂಧದ ಕುರಿತ ಮಾಹಿತಿಯನ್ನು Apple ನಮ್ಮ ಸೇವಾ ಪೂರೈಕೆದಾರರ ಜೊತೆಗೂ ಹಂಚಿಕೊಳ್ಳಬಹುದು, ಅವರು ಈ ನೋಟೀಸ್ ಮತ್ತು Appleನ ಸೂಚನೆಗಳಿಗೆ ಅನುಗುಣವಾಗಿ ಮಾಹಿತಿಯನ್ನು ನಿರ್ವಹಿಸಲು ಬದ್ಧರಾಗಿರುತ್ತಾರೆ, ಅವರು ಸ್ವೀಕರಿಸಿದ ಯಾವುದೇ ವೈಯಕ್ತಿಕ ಡೇಟವನ್ನು ರಕ್ಷಿಸಲು ಸಮಂಜಸವಾದ ಭದ್ರತಾ ಕ್ರಮಗಳನ್ನು ಬಳಸುವ ಅಗತ್ಯವಿದೆ ಮತ್ತು ಕಾನೂನಿನ ಪ್ರಕಾರ ಅದನ್ನು ಉಳಿಸಿಕೊಳ್ಳುವ ಅಗತ್ಯವಿರದ ಹೊರತಾಗಿ, ಅವರು ಸೇವೆಗಳನ್ನು ಪೂರ್ಣಗೊಳಿಸಿದ ತಕ್ಷಣ ವೈಯಕ್ತಿಕ ಡೇಟವನ್ನು ಡಿಲೀಟ್ ಮಾಡಬೇಕಾಗುತ್ತದೆ.
ಕಾನೂನಿನ ಪ್ರಕಾರ ಅಗತ್ಯವಿರುವಂತೆ ಮತ್ತು ವಂಚನೆ ತಡೆಗಟ್ಟುವ ಉದ್ದೇಶಗಳಿಗಾಗಿ Apple ನಿಮ್ಮ ಮಾಹಿತಿಯನ್ನು Goldman Sachs ಜೊತೆಗೆ ಹಂಚಿಕೊಳ್ಳಬಹುದು. ವಂಚನೆ ತಡೆಗಟ್ಟುವ ಉದ್ದೇಶಗಳಿಗಾಗಿ Goldman Sachsನಿಂದ ನಿಮ್ಮ ಕುರಿತ Apple Cardಗೆ ಸಂಬಂಧಿಸಿದ ಮಾಹಿತಿಯನ್ನು Apple ಸಹ ಸ್ವೀಕರಿಸಬಹುದು. Goldman Sachs ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೇಗೆ ರಕ್ಷಿಸುತ್ತದೆ ಎನ್ನುವ ಬಗ್ಗೆ https://www.goldmansachs.com/privacy-and-cookies ಎಂಬಲ್ಲಿ ಲಭ್ಯವಿರುವ ಅವರ ಗೌಪ್ಯತೆ ನೀತಿಯನ್ನು ಪರಿಶೀಲಿಸುವ ಮೂಲಕ ನೀವು ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳಬಹುದು. Apple ಅಥವಾ ಅದರ ಅಂಗಸಂಸ್ಥೆಗಳು ಬ್ಯಾಂಕ್ ಆಗಿರುವುದಿಲ್ಲ ಮತ್ತು ಈ ನೋಟೀಸ್, ನೀವು Sachsನಿಂದ ಸ್ವೀಕರಿಸುವ ಯಾವುದೇ ನೋಟೀಸ್‌ಗಳಿಗೆ ಪೂರಕವಾಗಿ ಇರುತ್ತದೆ.
ಈ ಸೂಚನೆಯಲ್ಲಿ ವಿವರಿಸಿರುವ ವೈಯಕ್ತಿಕ ಡೇಟದ ಪ್ರಕ್ರಿಯೆಗೆ ಸಂಬಂಧಿಸಿದಂತೆ ಡೇಟ ಕಂಟ್ರೋಲರ್ ಆಗಿ Apple ವರ್ತಿಸುತ್ತದೆ, ಟಿಪ್ಪಣಿ ಮಾಡದ ಹೊರತಾಗಿ, ಅಂತಹ ಚಟುವಟಿಕೆಗಳನ್ನು Appleನ ಸಂಪೂರ್ಣ ಮಾಲೀಕತ್ವದಲ್ಲಿರುವ ಅಂಗಸಂಸ್ಥೆಯಾದ Apple Payments Services LLC ಒದಗಿಸುತ್ತದೆ. Apple Card ಅನ್ನು ಬಳಸುವ ಮೂಲಕ, ಮೇಲೆ ವಿವರಿಸಿದಂತೆ ನಿಮ್ಮ ಮಾಹಿತಿಯನ್ನು ರವಾನಿಸಲು, ಸಂಗ್ರಹಿಸಲು, ನಿರ್ವಹಿಸಲು, ಪ್ರಕ್ರಿಯೆಗೊಳಿಸಲು ಮತ್ತು ಬಳಸಲು Apple ಮತ್ತು ಅದರ ಅಂಗಸಂಸ್ಥೆಗಳು ಮತ್ತು ಏಜೆಂಟ್‌ಗಳಿಗೆ ನೀವು ಸಮ್ಮತಿಸುತ್ತೀರಿ ಮತ್ತು ಅನುಮತಿಸುತ್ತೀರಿ.
ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತೆ ನೀತಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ, ನೀವು ಅದನ್ನು www.apple.com/in/privacy ಎಂಬಲ್ಲಿ ನೋಡಬಹುದು.
2025-12-12