Apple Cash ಹಾಗೂ Apple Payments Inc. ಮತ್ತು ಗೌಪ್ಯತೆ
ಸುರಕ್ಷಿತವಾದ ಹಾಗೂ ಗೌಪ್ಯವಾದ ವಿಧಾನದಲ್ಲಿ ಹಣ ಕಳುಹಿಸಲು ಹಾಗೂ ಸ್ವೀಕರಿಸಲು ನಿಮಗೆ ಸಹಾಯ ಮಾಡಲು Apple Cash ಅನ್ನು ವಿನ್ಯಾಸಗೊಳಿಸಲಾಗಿದೆ.
![]()
- Apple ನಿಮ್ಮ ಗೌಪ್ಯತೆಯನ್ನು ರಕ್ಷಿಸಲು Apple Payments Inc. ಎಂಬ ಸಂಪೂರ್ಣ ಸ್ವಾಯತ್ತ ಅಂಗಸಂಸ್ಥೆಯನ್ನು ಬಳಸುತ್ತಿದ್ದು, ನೀವು ಎಷ್ಟು ಕಳುಹಿಸುತ್ತಿದ್ದೀರಿ, ಯಾರಿಗೆ ಕಳುಹಿಸುತ್ತಿದ್ದೀರಿ, ಮತ್ತು ನಿಮ್ಮ ಬ್ಯಾಲೆನ್ಸ್ ಮಾಹಿತಿಯನ್ನು Appleನ ಇತರೆ ಡೇಟದಿಂದ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ.
- ನೀವು ಆ್ಯಪ್‌ಗಳಲ್ಲಿ ಹಾಗೂ ವೆಬ್‌ನಲ್ಲಿ Apple Cash ಅನ್ನು ಬಳಸಿದಾಗ, ಪಾವತಿಯನ್ನು ಪ್ರಕ್ರಿಯೆಗೊಳಿಸಲು ಅವಶ್ಯಕವಾದ ಮಾಹಿತಿಯನ್ನು ಆ್ಯಪ್ ಅಥವಾ ವೆಬ್‌ಸೈಟ್ ಜೊತೆಗೆ ಹಂಚಿಕೊಳ್ಳಲಾಗುತ್ತದೆ. ನಿಮ್ಮ ನಿಜವಾದ Apple Cash ಖಾತೆ ಸಂಖ್ಯೆಯನ್ನು ವ್ಯಾಪಾರಿಯ ಜೊತೆಗೆ ಹಂಚಿಕೊಳ್ಳಲಾಗುವುದಿಲ್ಲ.
- ನಿಮ್ಮೊಂದಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗದ Apple Cash ಡೇಟವನ್ನು Apple Pay ಮತ್ತು ಇತರ Apple ಉತ್ಪನ್ನಗಳು ಹಾಗೂ ಸೇವೆಗಳನ್ನು ಸುಧಾರಿಸಲು Apple ಬಳಸಬಹುದು.
Apple Cash ಇತರ ಜನರಿಗೆ ಹಣವನ್ನು ಕಳುಹಿಸಲು ಮತ್ತು ಅವರಿಂದ ಹಣವನ್ನು ಸ್ವೀಕರಿಸಲು ಮತ್ತು ಪಾವತಿಗಳನ್ನು ಸ್ವೀಕರಿಸಲು ಹಾಗೂ ಅರ್ಹ ವ್ಯಾಪಾರಗಳಿಗೆ ನೇರವಾಗಿ ಪಾವತಿಗಳನ್ನು ಮಾಡಲು ನಿಮಗೆ ಅನುಮತಿಸುತ್ತದೆ.
ವ್ಯಕ್ತಿಯಿಂದ ವ್ಯಕ್ತಿಗೆ ಪಾವತಿಗಳನ್ನು ಮಾಡುವುದು ಮತ್ತು Apple Cash ಅನ್ನು ಬಳಸುವುದು (ಯುನೈಟೆಡ್ ಸ್ಟೇಟ್ಸ್ ಮಾತ್ರ)
ಸಂದೇಶ, ವಾಲೆಟ್‌ನಲ್ಲಿ ಮತ್ತು Siriಯನ್ನು ಬಳಸಿಕೊಂಡು ಇತರ ಜನರಿಗೆ ಹಣ ಕಳುಹಿಸಲು ಮತ್ತು ಅವರಿಂದ ಹಣ ಸ್ವೀಕರಿಸಲು Apple Cash ನಿಮಗೆ ಅನುವು ಮಾಡಿಕೊಡುತ್ತದೆ. ನೀವು ಹಣವನ್ನು ಸ್ವೀಕರಿಸಿದಾಗ, ಅದನ್ನು ನಿಮ್ಮ Apple Cash ಕಾರ್ಡ್‌ಗೆ ಸೇರಿಸಲಾಗುತ್ತದೆ, ಇದನ್ನು ಸ್ಟೋರ್‌ಗಳಲ್ಲಿ, ಆ್ಯಪ್‌ಗಳಲ್ಲಿ ಮತ್ತು ವೆಬ್‌ನಲ್ಲಿ Apple Pay ಬಳಸಿಕೊಂಡು ಖರೀದಿಗಳನ್ನು ಮಾಡಲು ಬಳಸಬಹುದು. ಎರಡು-ವ್ಯಕ್ತಿ ಪಾವತಿಗಳು ಮತ್ತು Apple Cash ಖಾತೆಗಳು Appleನ ಪಾಲುದಾರ ಬ್ಯಾಂಕ್, Green Dot Bank ಒದಗಿಸುವ ಸೇವೆಗಳಾಗಿವೆ.
Apple Cash ಅನ್ನು ಸೆಟಪ್ ಮಾಡಲಾಗುತ್ತಿದೆ
ನೀವು Apple Cash ಅನ್ನು ಸೆಟಪ್ ಮಾಡಿದಾಗ, ನಿಮ್ಮ ಗುರುತಿನ ಮಾಹಿತಿ ಮತ್ತು ಸಂಪರ್ಕ ಮಾಹಿತಿ, ಹಾಗೆಯೇ ನೀವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಸೇರಿಸಿದಾಗ ಅದೇ ಮಾಹಿತಿಯನ್ನು Green Dot Bank ಮತ್ತು Apple Payments Inc ಜೊತೆಗೆ ಹಂಚಿಕೊಳ್ಳಬಹುದು.
Apple ನಿಮ್ಮ ಗೌಪ್ಯತೆಯನ್ನು ರಕ್ಷಿಸಲು Apple Payments Inc., ಎಂಬ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಮತ್ತು ಪರವಾನಗಿ ಪಡೆದ ಹಣದ ಟ್ರಾನ್ಸ್‌ಮಿಟರ್ ಅನ್ನು ಸ್ಥಾಪಿಸಿದೆ. ನಿಮ್ಮ Apple Cash ಖಾತೆ ನೋಂದಣಿ ಮಾಹಿತಿ (ಹೆಸರು, ವಿಳಾಸ), ಬ್ಯಾಲೆನ್ಸ್, ವಹಿವಾಟಿನ ಮೊತ್ತ ಮತ್ತು ನೀವು ಯಾರಿಗೆ ಹಣವನ್ನು ಕಳುಹಿಸುತ್ತೀರಿ ಎಂಬುದನ್ನು ಇತರೆ Apple ವಿಭಾಗಗಳಿಗೆ ತಿಳಿದಿಲ್ಲದ ರೀತಿಯಲ್ಲಿ Apple Payments Inc. ಪ್ರತ್ಯೇಕವಾಗಿ ಸಂಗ್ರಹಿಸುತ್ತದೆ. Apple Payments Inc. ಮೂಲಕ ಸಂಗ್ರಹಿಸಲಾದ ನಿಮ್ಮ ವೈಯಕ್ತಿಕ ಡೇಟವನ್ನು ನೀವು ವಿನಂತಿಸುವ ಸೇವೆಗಳನ್ನು ಒದಗಿಸಲು, ದೋಷನಿವಾರಣೆಗಾಗಿ, ನಿಯಂತ್ರಕ ಉದ್ದೇಶಗಳಿಗಾಗಿ ಮತ್ತು ವಂಚನೆಯನ್ನು ತಡೆಗಟ್ಟಲು ಮಾತ್ರ ಬಳಸಲಾಗುತ್ತದೆ.
ಹೆಚ್ಚುವರಿಯಾಗಿ, ನೀವು Apple Cash ಅನ್ನು ಸಕ್ರಿಯಗೊಳಿಸಿದ್ದೀರಾ ಅಥವಾ Apple Cash ಸೇವೆಗಳನ್ನು ಬಳಸಿದ್ದೀರಾ ಎಂಬುದನ್ನು Apple Inc. ತಿಳಿಯುತ್ತದೆ, ಉದಾಹರಣೆಗೆ Apple Cash Familyಯನ್ನು ಸಕ್ರಿಯಗೊಳಿಸಿದ್ದೀರಾ ಅಥವಾ ಇಲ್ಲವೇ ಎಂಬುದರ ಮಾಹಿತಿ. Apple Cash ಮತ್ತು Apple Pay ಫೀಚರ್‌ಗಳನ್ನು ಅನ್ವೇಷಿಸಲು ಮತ್ತು ಬಳಸಲು ನಿಮಗೆ ಸಹಾಯ ಮಾಡಲು ಮಾತ್ರ ಈ ಮಾಹಿತಿಯನ್ನು ಬಳಸಲಾಗುತ್ತದೆ.
ನಿಮ್ಮ ಗುರುತನ್ನು ದೃಢೀಕರಿಸಲಾಗುತ್ತಿದೆ
ನಿಮ್ಮ ಗುರುತನ್ನು ಪರಿಶೀಲಿಸಲು ಮತ್ತು ಬ್ಯಾಂಕಿಂಗ್ ನಿಯಮಗಳನ್ನು ಅನುಸರಿಸಲು ಬ್ಯಾಂಕ್ ಮತ್ತು ಅದರ ಗುರುತಿನ ದೃಢೀಕರಣದ ಸೇವಾ ಪೂರೈಕೆದಾರರಿಗೆ ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಸಾಮಾಜಿಕ ಭದ್ರತಾ ಸಂಖ್ಯೆ ಸೇರಿದಂತೆ ಇನ್ನಿತರೆ ಮಾಹಿತಿಯನ್ನು ಒದಗಿಸಲು ನಿಮ್ಮನ್ನು ಕೇಳಬಹುದು. ನಿಮ್ಮ ಗುರುತನ್ನು ಪರಿಶೀಲಿಸಲು ನೀವು ಒದಗಿಸುವ ಮಾಹಿತಿಯನ್ನು ವಂಚನೆ ತಡೆಗಟ್ಟುವಿಕೆ ಮತ್ತು ಯುನೈಟೆಡ್ ಸ್ಟೇಟ್ಸ್ ಹಣಕಾಸು ನಿಯಮಗಳ ಅನುಸರಣೆಗಾಗಿ ಮಾತ್ರ ಬಳಸಲಾಗುತ್ತದೆ. ಪಾಲುದಾರ ಬ್ಯಾಂಕ್ ಮತ್ತು Apple Payments Inc ಮೂಲಕ ನಿಮ್ಮ ಹೆಸರು ಮತ್ತು ವಿಳಾಸವನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗಿದೆ. ನಿಮ್ಮ ಗುರುತನ್ನು ಪರಿಶೀಲಿಸುವ ಅಗತ್ಯವಿದ್ದರೆ, ನಿಮ್ಮ ಸರ್ಕಾರಿ IDಯ ಕಾಪಿಯಂತಹ ಹೆಚ್ಚುವರಿ ಮಾಹಿತಿಯನ್ನು ಒದಗಿಸುವಂತೆ ನಿಮ್ಮನ್ನು ಕೇಳಬಹುದು. ಈ ಹೆಚ್ಚುವರಿ ಮಾಹಿತಿಯನ್ನು ರೀಡ್ ಮಾಡಲು Apple Inc.ಗೆ ಸಾಧ್ಯವಾಗುವುದಿಲ್ಲ.
ನಿಮ್ಮ ಗೌಪ್ಯತೆಯನ್ನು ರಕ್ಷಿಸುವುದರ ಜೊತೆಗೆ ವಂಚನೆಯನ್ನು ತಡೆಗಟ್ಟುವುದಕ್ಕೆ ಸಹಾಯ ಮಾಡಲು, ನಿಮ್ಮ ಸಾಧನವು ನಿರ್ದಿಷ್ಟ ಸಾಧನ ಮತ್ತು ಖಾತೆ ಬಳಕೆಯ ಪ್ಯಾಟರ್ನ್‌ಗಳನ್ನು ಮೌಲ್ಯಮಾಪನ ಮಾಡಬಹುದು, ಉದಾಹರಣೆಗೆ: ಸ್ಕ್ಯಾಮ್‌ಗಳನ್ನು ಸೂಚಿಸುವ ಘಟನೆಗಳು ಅಥವಾ ಕಳುಹಿಸುವವರು ಅಥವಾ ಸ್ವೀಕರಿಸುವವರ ಜೊತೆಗಿನ ಪರಿಚಿತತೆ ಮತ್ತು ವಂಚನೆಯನ್ನು ತಡೆಗಟ್ಟುವುದಕ್ಕೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಅಪಾಯದ ಮೌಲ್ಯಮಾಪನವನ್ನು ರಚಿಸುವುದು. ಈ ಅಪಾಯದ ಮೌಲ್ಯಮಾಪನಗಳು — ಆದರೆ ಆಧಾರವಾಗಿರುವ ಮಾಹಿತಿಯಲ್ಲ — Apple Payments Inc. ಜೊತೆಗೆ ಗುರುತಿಸುವಂತೆ ಹಂಚಿಕೊಳ್ಳಲಾಗಿದೆ ಮತ್ತು Appleನೊಂದಿಗೆ ನಿಮಗೆ ಲಿಂಕ್ ಮಾಡಲು ಸಾಧ್ಯವಾಗದ ರೀತಿಯಲ್ಲಿ ಸೀಮಿತ ಅವಧಿಯವರೆಗೆ ಸಂಗ್ರಹಿಸಲಾಗುತ್ತದೆ ಮತ್ತು Apple Cash ಅನ್ನು ಬಳಸುವಾಗ (ಉದಾಹರಣೆಗೆ, ವಂಚನೆಗಳನ್ನು ತಡೆಗಟ್ಟುವುದು), ಅನಧಿಕೃತ ಬಳಕೆಯನ್ನು ತಡೆಗಟ್ಟಲು ಮತ್ತು Apple Cash ಪ್ಲ್ಯಾಟ್‌ಫಾರ್ಮ್‌ನ ಒಟ್ಟಾರೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವಾಗ ನಿಮ್ಮ ಹಣವನ್ನು ರಕ್ಷಿಸಲು ವಂಚನೆಯ ನಿರ್ಧಾರಗಳಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ, ನೀವು Apple Cash ಅನ್ನು ಕಾನ್ಫಿಗರ್ ಮಾಡಿದಾಗ, ನೀವು Apple Payಗೆ ಕಾರ್ಡ್ ಅನ್ನು ಸೇರಿಸಿದಾಗ, ನಿಮ್ಮ ಸಾಧನವು ಸಾಧನದ ಬಳಕೆಯ ಮಾದರಿಗಳನ್ನು ಮೌಲ್ಯಮಾಪನ ಮಾಡಬಹುದು (ಉದಾ., ಸಾಧನವನ್ನು ಸರಿಸಿದ ಶೇಕಡಾವಾರು ಸಮಯ, ವಾರಕ್ಕೆ ಕರೆಗಳ ಅಂದಾಜು ಸಂಖ್ಯೆ). ನಿಮ್ಮ ಸಂವಹನದ ಯಾವುದೇ ಕಂಟೆಂಟ್ ಅನ್ನು ಸಂಗ್ರಹಿಸಲಾಗಿಲ್ಲ. ಅನುಮಾನಾಸ್ಪದ ಚಟುವಟಿಕೆಯಿಂದಾಗಿ ಹೆಚ್ಚುವರಿ ವಿಶ್ಲೇಷಣೆ ಅಗತ್ಯವಿರುವ ವಹಿವಾಟುಗಳನ್ನು ಉಳಿಸಿಕೊಳ್ಳಬಹುದು ಮತ್ತು ನಿಮಗೆ ಲಿಂಕ್ ಮಾಡಬಹುದು. ನಿಮ್ಮ Apple Cash ಕಾರ್ಡ್ ವಹಿವಾಟುಗಳು ಇತಿಹಾಸಕ್ಕೆ ಹೋಗಿ ಅನುಮಾನಾಸ್ಪದ ಚಟುವಟಿಕೆಯಿಂದಾಗಿ ಯಾವ ವಹಿವಾಟಿಗೆ ಹೆಚ್ಚುವರಿ ವಿಶ್ಲೇಷಣೆಯ ಅಗತ್ಯವಿದೆ ಎಂದು ವೀಕ್ಷಿಸಬಹುದು.
ನೀವು Apple Cash ಅನ್ನು ಬಳಸಿದಾಗ ಹಂಚಿಕೊಳ್ಳಲಾದ ಮಾಹಿತಿ
ಹಣವನ್ನು ಒಂದು ಬ್ಯಾಂಕ್ ಖಾತೆಗೆ, ನಮ್ಮ ಸಹಭಾಗಿ ಬ್ಯಾಂಕ್‌ಗೆ ಸೇರಿಸಲು ಅಥವಾ ವರ್ಗಾವಣೆ ಮಾಡಲು ನೀವುApple Cash ಅನ್ನು ಬಳಸಿದಾಗ, ವಹಿವಾಟನ್ನು ಪ್ರಕ್ರಿಯೆಗೊಳಿಸಲು, ವಂಚನೆಯನ್ನು ತಡೆಗಟ್ಟಲು ಮತ್ತು ಹಣಕಾಸು ನಿಬಂಧನೆಗಳನ್ನು ಅನುಸರಿಸಲು Apple, ಮತ್ತು Apple Payments Inc. ನಿಮ್ಮ ಕುರಿತು, ನಿಮ್ಮ ಸಾಧನದ, ಮತ್ತು ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಬಳಸಬಹುದು ಮತ್ತು ಸಂಗ್ರಹಿಸಬಹುದು. ಈ ಮಾಹಿತಿಯು ನೀವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಪ್ರಕ್ರಿಯೆಗೊಳಪಡಿಸಿರುವುದಕ್ಕೆ ಸಮವಾಗಿದೆ, ಆದರೆ ನಿಮ್ಮ ಸಾಧನದ ಸ್ಥಳವನ್ನು ಒಳಗೊಂಡಿಲ್ಲ. ನೀವು ವಾಲೆಟ್‌ಗಾಗಿ ಸ್ಥಳ ಸೇವೆಗಳನ್ನು ಸಕ್ರಿಯಗೊಳಿಸಿದ್ದರೆ, ಸಾಧನದಲ್ಲಿನ ವಂಚನೆಯ ತಡೆಗಟ್ಟುವಿಕೆಯ ಮೌಲ್ಯಮಾಪನಗಳನ್ನು ಅಭಿವೃದ್ಧಿಪಡಿಸಲು ನಿಮ್ಮ ಸಾಧನವು ನಿಮ್ಮ ಸಾಧನದ ಸ್ಥಳದ ಕುರಿತಾದ ಮಾಹಿತಿಯನ್ನೂ ಸಹ ಮೌಲ್ಯಮಾಪನ ಮಾಡುತ್ತದೆ. Appleಗೆ ಮೌಲ್ಯಮಾಪನದ ಫಲಿತಾಂಶವನ್ನು ಕಳುಹಿಸಲಾಗುತ್ತದೆ, ಆದರೆ ಆಧಾರವಾಗಿರುವ ಡೇಟವನ್ನು ಕಳುಹಿಸಲಾಗುವುದಿಲ್ಲ. ನಿಮಗೆ ಬೆಂಬಲ ನೀಡಲು ಸಹಾಯ ಮಾಡಲು ಮತ್ತು ವಂಚನೆ ತಡೆಗಟ್ಟಲು ನಮ್ಮ ಸಹಭಾಗಿ ಬ್ಯಾಂಕ್‌ಗಳು ಅಥವಾ Apple ಜೊತೆಗೂ ಮಾಹಿತಿಯನ್ನು ಹಂಚಿಕೊಳ್ಳಬಹುದು. Apple Payments Inc., ದೋಷನಿವಾರಣೆಗಾಗಿ, ವಂಚನೆಯನ್ನು ತಡೆಗಟ್ಟಲು ಮತ್ತು ಹಣಕಾಸು ನಿಬಂಧನೆಗಳನ್ನು ಅನುಸರಿಸಲು ನಿಮ್ಮ ವಹಿವಾಟಿನ ಡೇಟವನ್ನು ಸಂಗ್ರಹಿಸುತ್ತದೆ ಮತ್ತು ಬಳಸುತ್ತದೆ. ಸ್ಕ್ಯಾಮ್‌ಗಳ ವಿರುದ್ಧ ನಿಮ್ಮನ್ನು ರಕ್ಷಿಸುವುದಕ್ಕೆ ಸಹಾಯ ಮಾಡಲು, ನೀವು ವಂಚನೆಗೆ ಒಳಗಾಗುವಂತೆ ಕಂಡುಬರುವ ವಹಿವಾಟನ್ನು ಪ್ರಯತ್ನಿಸಿದಾಗ, Apple Payments Inc. ನಮ್ಮ ಪಾಲುದಾರ ಬ್ಯಾಂಕ್‌ನಿಂದ Apple Cash ಖಾತೆಗೆ ಸಂಬಂಧಿಸಿದ ನೀವು ಕೊನೆಯ ಬಾರಿಗೆ ನಿಮ್ಮ ಗುರುತನ್ನು ಯಶಸ್ವಿಯಾಗಿ ದೃಢೀಕರಿಸಿದ ಸಮಯದಂತಹ ಇವೆಂಟ್‌ಗಳ ಕುರಿತ ಮಾಹಿತಿಯನ್ನು ವಿನಂತಿಸಬಹುದು. ವಂಚನೆಯನ್ನು ತಡೆಗಟ್ಟಲು Apple Payments Inc. ಈ ಡೇಟವನ್ನು ಸಂಗ್ರಹಿಸುತ್ತದೆ ಮತ್ತು ಬಳಸುತ್ತದೆ.
ಸಂದೇಶ ಅಥವಾ ವಾಲೆಟ್‌ನಿಂದ. ಹಣವನ್ನು ಕಳುಹಿಸುವುದು ಅಥವಾ ವಿನಂತಿಸುವಾಗ, ನಿಮ್ಮ ಈಮೇಲ್ ವಿಳಾಸ ಅಥವಾ ಫೋನ್ ಸಂಖ್ಯೆಯನ್ನು ನೀವು ವ್ಯವಹರಿಸುವ ಜನರಿಗೆ ತೋರಿಸಲಾಗುತ್ತದೆ. ಸಂದೇಶ ಅಥವಾ ವಾಲೆಟ್‌ನಿಂದ ಕಳುಹಿಸುವಾಗ ಅಥವಾ ವಿನಂತಿಸುವಾಗ ಸಂಪರ್ಕ ಮಾಹಿತಿಯನ್ನು ಆಯ್ಕೆಮಾಡಲು ಅಥವಾ ಬದಲಿಸಲು, ಹುಡುಕಬೇಕು ಸೆಟ್ಟಿಂಗ್ಸ್ > ಆ್ಯಪ್‌ಗಳು > ಸಂದೇಶ > ಕಳುಹಿಸಿ ಮತ್ತು ಸ್ವೀಕರಿಸಿ. ನೀವು ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿದಾಗ, ಭವಿಷ್ಯದ ವರ್ಗಾವಣೆಗಳನ್ನು ಸರಳೀಕರಿಸಲು ಖಾತೆ ಸಂಖ್ಯೆ ಮತ್ತು ರೌಟಿಂಗ್ ಸಂಖ್ಯೆ ಸೇರಿದಂತೆ ನಿಮ್ಮ ಬ್ಯಾಂಕ್ ಮಾಹಿತಿಯನ್ನು iCloud ಕೀಚೇನ್‌ನಲ್ಲಿಯೇ ಸಂಗ್ರಹಿಸಲಾಗುವುದು. ಈ ಮಾಹಿತಿಯನ್ನು ಎನ್‌ಕ್ರಿಪ್ಟ್ ಮಾಡಲಾಗಿರುವುದರಿಂದ ಅದನ್ನು ರೀಡ್ ಮಾಡಲು Apple ಅಥವಾ Apple Payments Inc.ಗೆ ಸಾಧ್ಯವಾಗುವುದಿಲ್ಲ.
Tap to Cash ವಹಿವಾಟು ಆರಂಭಿಸಲು, ನಿಮ್ಮ ಸಾಧನದಲ್ಲಿ ನೀವು ಡಿಸ್‌ಪ್ಲೇ ಹೆಸರು ಮತ್ತು ಫೋಟೋ ಹಾಗೂ ವಹಿವಾಟಿನ ಮೊತ್ತವನ್ನು ಕಾನ್‌ಫಿಗರ್ ಮಾಡಬಹುದು, ಮೊತ್ತವನ್ನು ಅಧಿಕೃತಗೊಳಿಸಿದ ನಂತರ ನಿಮ್ಮ ಸಾಧನವನ್ನು ಸ್ವೀಕೃತದಾರರ ಸಾಧನದ ಸಮೀಪ ಹಿಡಿದಿಟ್ಟು, ಸಾಧನದಿಂದ ಸಾಧನಕ್ಕೆ ಕನೆಕ್ಷನ್ ಸ್ಥಾಪಿಸಬೇಕು. ಒಮ್ಮೆ ಕನೆಕ್ಷನ್ ಸ್ಥಾಪಿಸಿದಲ್ಲಿ, ನಿಮ್ಮ ಸಾಧನವು ಡಿಸ್‌ಪ್ಲೇ ಹೆಸರು ಮತ್ತು ನೀವು ಕಾನ್‌ಫಿಗರ್ ಮಾಡಿದ ಫೋಟೋ ಹಾಗೂ ವಹಿವಾಟಿನ ಮೊತ್ತವನ್ನು ಸ್ವೀಕೃತದಾರರ ಸಾಧನಕ್ಕೆ ನೇರವಾಗಿ ಹಂಚಿಕೊಳ್ಳುತ್ತದೆ. ಸ್ವೀಕೃತದಾರರು ನಂತರ ಪಾವತಿಯನ್ನು ಪರಿಶೀಲಿಸುವ ಮತ್ತು ಸಮ್ಮತಿಸುವ ಅವಕಾಶ ಹೊಂದಿರುತ್ತಾರೆ. ಸಮ್ಮತಿಸಿದಲ್ಲಿ, ಸ್ವೀಕೃತದಾರರ ಸಮ್ಮತಿ ಮತ್ತು ಅವರು ಕಾನ್ಫಿಗರ್ ಮಾಡಿದ ಡಿಸ್‌ಪ್ಲೇ ಹೆಸರು ಹಾಗೂ ಫೋಟೋವನ್ನು ಎನ್‌ಕ್ರಿಪ್ಟ್ ಮಾಡಲಾಗುತ್ತದೆ, ನಂತರ ನಿಮ್ಮ ಸಾಧನಕ್ಕೆ ಮರಳಿ ಹಂಚಿಕೊಳ್ಳಲಾಗುತ್ತದೆ. ಪೂರ್ಣವಾಗಿ ಅಧಿಕಾರ ನೀಡಿದ ವಹಿವಾಟುಗಳ ವಿವರಗಳನ್ನು ನಂತರ ನಿಮ್ಮ ಸಾಧನದಿಂದ Apple Pay ಸರ್ವರ್‌ಗಳಿಗೆ ಪ್ರಕ್ರಿಯೆಗೊಳಪಡಿಸಲೆಂದು ಕಳುಹಿಸಲಾಗುತ್ತದೆ.
ನೇರ ಪಾವತಿಗಳು ಮತ್ತು ವಿತರಣೆಗಳು
ನೀವು ದೃಢೀಕರಿಸುವ ಭಾಗವಹಿಸುವ ವ್ಯಾಪಾರಗಳಿಗೆ ನಿಮ್ಮ Apple Cash ಖಾತೆಗೆ ನೇರವಾಗಿ ಹಣವನ್ನು ವಿತರಿಸುವ ಅನುಮತಿಯನ್ನು ನೀಡಲು Apple Payments Inc. ಅನ್ನು Apple Cash ಬಳಸುತ್ತದೆ. ನೀವು ದೃಢೀಕರಿಸುವ ಕೆಲವು ವ್ಯಾಪಾರಗಳಿಗೆ ಪಾವತಿಗಳನ್ನು ಮಾಡಲು ನಿಮ್ಮ Apple Cash ಖಾತೆಯಲ್ಲಿನ ಹಣವನ್ನು ಬಳಸಲು ನಿಮಗೆ ಅನುವು ಮಾಡಿಕೊಡುವ ನೇರ ಪಾವತಿಗಳ ಸೇವೆಯನ್ನು ಸಹ Apple Payments Inc. ಒದಗಿಸುತ್ತದೆ.
ದೋಷಪರಿಹಾರಕ್ಕಾಗಿ, ಅನ್ವಯಿಸುವ ಕಾನೂನುಗಳ ಅನುಸರಣೆಗೆ, ಹಾಗೂ ಈ ವಹಿವಾಟುಗಳಿಗೆ ವಂಚನೆಯಾಗುವುದನ್ನು ತಡೆಗಟ್ಟಲು, ನೀವು ವಿನಂತಿಸಿದ ಸೇವೆಯನ್ನು ಒದಗಿಸಲು ಮಾತ್ರ ನೀವು ಸ್ವೀಕರಿಸುವ ಹಂಚಿಕೆಯ ಕುರಿತು ಮಾಹಿತಿ ಅಥವಾ ನೀವು ಮಾಡುವ ನೇರ ಪಾವತಿಗಳ ಮಾಹಿತಿಯನ್ನು Green Dot Bank ಮತ್ತು Apple Payments Inc. ಬಳಸಿಕೊಳ್ಳುತ್ತದೆ. ಸಂಶಯಾಸ್ಪದ ಎಂದು ಫ್ಲ್ಯಾಗ್ ಮಾಡಲಾಗಿರುವ ವಹಿವಾಟುಗಳೂ ಸೇರಿದಂತೆ, ಫೆಡೆರಲ್ ಮತ್ತು ರಾಜ್ಯಗಳ ಕಾನೂನಿಗೆ ಅಗತ್ಯವಿರುವಂತೆ, ವಹಿವಾಟಿನ ದಾಖಲೆಗಳನ್ನು Apple Payments Inc. ಐದು ವರ್ಷಗಳವರೆಗಿನ ಅವಧಿಯವರೆಗೆ ಇರಿಸಿಕೊಳ್ಳುತ್ತದೆ.
ಯಾವುದಾದರೂ ಮರುಕಳಿಸುವ ಅಥವಾ ಇತರೆ ವ್ಯಾಪಾರಿ-ಆರಂಭಿಸಿದ ಶುಲ್ಕಗಳಾದ ಸಬ್‌ಕ್ರಿಪ್ಶನ್‌ಗಳಿಗೆ ನೀವು ಅಧಿಕಾರ ನೀಡಿರುವುದನ್ನು ಖಚಿತಪಡಿಸಲು ಸಹಾಯ ಮಾಡಲು, ನೀವು ಭಾಗಿಯಾದ ವ್ಯಾಪಾರಿಗಳ ಜೊತೆಗೆ ಮರುಕಳಿಸುವ ಅಥವಾ ವ್ಯಾಪಾರಿ ಆರಂಭಿಸಿದ ಶುಲ್ಕಗಳಿಗೆ, Apple Cash ಅನ್ನು ಪಾವತಿ ವಿಧಾನವಾಗಿ ಆರಿಸಿದಾಗ, Green Dot Bank ಮತ್ತು Visa ಅಂಗೀಕರಿಸುತ್ತದೆ ಮತ್ತು ಅಂತಹ ಶುಲ್ಕಗಳಿಗಾಗಿ ಬಳಸಲು Apple Payಯ ವ್ಯಾಪಾರಿ ಟೋಕನ್ ಫೀಚರ್ ಬಳಸಿ ವ್ಯಾಪಾರಿ-ನಿರ್ದಿಷ್ಟ ಖಾತೆ ಸಂಖ್ಯೆಯನ್ನು ಉತ್ಪಾದಿಸುತ್ತದೆ. ನೀವು ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸುವ ಅಗತ್ಯವಿಲ್ಲದೆಯೇ ವಹಿವಾಟುಗಳಿಗೆ ಅಧಿಕಾರ ನೀಡಲು ನಿರ್ದಿಷ್ಟ ಭಾಗಿಯಾದ ವ್ಯಾಪಾರಿಯು ಈ ವ್ಯಾಪಾರಿ-ನಿರ್ದಿಷ್ಟ ಖಾತೆ ಸಂಖ್ಯೆಯನ್ನು ಮಾತ್ರ ಬಳಸಬಹುದು. ನಿಮ್ಮ ವ್ಯಾಪಾರಿ-ನಿರ್ದಿಷ್ಟ ಖಾತೆ ಸಂಖ್ಯೆಗಳೊಂದಿಗೆ ಯಾವ ವ್ಯಾಪಾರಿಗಳು ಸಂಯೋಜಿತರಾಗಿದ್ದಾರೆ ಎಂಬುದು Appleಗೆ ತಿಳಿದಿರುತ್ತದೆ, ಆದರೆ ನೀವು ಏನು ಖರೀದಿಸಿದ್ದೀರಿ ಅಥವಾ ಅದಕ್ಕೆ ಎಷ್ಟು ಪಾವತಿ ಮಾಡಿದ್ದೀರಿ ಎಂಬ ವಿವರಗಳು ತಿಳಿದಿರುವುದಿಲ್ಲ. ನಿಮ್ಮ Apple Cash ಕಾರ್ಡ್ ಅನ್ನು ಟ್ಯಾಪ್ ಮಾಡಿ, ಕಾರ್ಡ್ ವಿವರಗಳನ್ನು ವೀಕ್ಷಿಸಲು ಹೆಚ್ಚು ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ ವ್ಯಾಲೆಟ್‌ನಲ್ಲಿ ನಿಮ್ಮ Apple Cash ವ್ಯಾಪಾರಿ-ನಿರ್ದಿಷ್ಟ ಖಾತೆ ಸಂಖ್ಯೆಗಳನ್ನು ನೀವು ನಿರ್ವಹಿಸಬಹುದು.
ನೀವು ಸ್ನೇಹಿತರಿಗೆ ಆವರ್ತಕ ಪಾವತಿಗೆ ಅಥವಾ Apple Cash ಮೊತ್ತ ಸ್ವಯಂಚಾಲಿತವಾಗಿ ಮರುಲೋಡ್ ಆಗುವಂತೆ Apple Cash ಅನ್ನು ಬಳಸಿದಾಗ, ಭದ್ರವಾಗಿ ಆವರ್ತಕ ವಹಿವಾಟಿಗೆ ಅಧಿಕಾರ ನೀಡಲು ನಿಮ್ಮ Apple Pay ಡೆಬಿಟ್ ಕಾರ್ಡ್(ಗಳು) ಜೊತೆಗೆ ಸಂಯೋಜಿಸಿದ ವ್ಯಾಪಾರಿಯ ಟೋಕನ್ ಅನ್ನು Apple Cash ಬೇಡಿಕೆ ಇಡುತ್ತದೆ ಮತ್ತು ಸಂಗ್ರಹಿಸುತ್ತದೆ. ವ್ಯಾಪಾರಿಗೆ ಟೋಕನ್ ಉತ್ಪಾದಿಸುವುದು Apple ಮೂಲಸೌಕರ್ಯವನ್ನು ಅವಲಂಬಿಸಿದೆ, ಹೀಗಾಗಿ ನೀವು ಆವರ್ತಕ ಪಾವತಿ ಅಥವಾ ಸ್ವಯಂ ರಿಲೋಡ್ ಸೆಟಪ್ ಮಾಡಿದ್ದೀರಿ ಮತ್ತು ಮೊತ್ತದ ಬಗ್ಗೆಯೂ Appleಗೆ ತಿಳಿದಿರುತ್ತದೆ — ಆದರೆ ಯಾರ ಜೊತೆಗೆ ವ್ಯವಹರಿಸುತ್ತಿರುವಿರಿ ಅಥವಾ ಪಾವತಿಯ ಜೊತೆಗೆ ಸಂಬಂಧಿತ ಮೆಮೊ ವಿವರಗಳ ಬಗ್ಗೆ ತಿಳಿದಿರುವುದಿಲ್ಲ.
ನಿಮ್ಮ Apple Cash ಖಾತೆಯನ್ನು ಮುಚ್ಚುವುದು
ನಿಮ್ಮ Apple Cash ಖಾತೆಯನ್ನು ನೀವು ಮುಚ್ಚಿದಲ್ಲಿ, ಕಾನೂನಿನಲ್ಲಿ ಅಗತ್ಯವಿರುವಂತೆ ಮತ್ತು ವಂಚನೆ ತಡೆಗಟ್ಟಲು ವಹಿವಾಟು ಇತಿಹಾಸ ಸೇರಿದಂತೆ ಖಾತೆಯ ಕುರಿತ ಮಾಹಿತಿಯನ್ನು ಉಳಿಸಲಾಗುತ್ತದೆ.
Apple Cash ಕುಟುಂಬ
ಕುಟುಂಬ ಹಂಚಿಕೆಯನ್ನು ಸಕ್ರಿಯಗೊಳಿಸಿದಾಗ, 13 ವರ್ಷದೊಳಗಿನವರು ಸೇರಿದಂತೆ, 18 ವರ್ಷದೊಳಗಿನ ಕುಟುಂಬ ಸದಸ್ಯರು Apple Cash ಬಳಸಲು ಕುಟುಂಬ ವ್ಯವಸ್ಥಾಪಕರು ಅನುಮತಿ ನೀಡಬಹುದು. Apple Cash Family ಆನ್ ಬೋರ್ಡಿಂಗ್ ಫ್ಲೋನಲ್ಲಿ ಒದಗಿಸಲಾದ ಮಾಹಿತಿಯನ್ನು Apple ಬಳಸಿಕೊಳ್ಳುತ್ತದೆ ಮತ್ತು ಮಗುವಿನ ಖಾತೆಯನ್ನು ಸೆಟಪ್ ಮಾಡಲು ಅಂತಹ ಮಾಹಿತಿಯನ್ನು Green Dot Bank ಜೊತೆಗೆ ಹಂಚಿಕೊಳ್ಳುತ್ತದೆ. ಕಾನೂನಿನ ಅನುಸರಣೆ, ವಂಚನೆ ತಡೆಗಟ್ಟಲು, ಖಾತೆಯನ್ನು ಒದಗಿಸಲು Apple Cash ಖಾತೆಯ ಮಾಹಿತಿಯನ್ನು Green Dot Bank ಜೊತೆಗೆ ಸಹ ಹಂಚಲಾಗುತ್ತದೆ.
ಸಂದೇಶ ಬಳಸಿ ಮಗುವಿನ ಹಣವನ್ನು ಕಳುಹಿಸುವ ಆಯ್ಕೆಗೆ ಕುಟುಂಬ ವ್ಯವಸ್ಥಾಪಕರು ಮಿತಿ ಹೇರಬಹುದು; ಮಗುವಿನ ಖಾತೆಗೆ ಯಾರು ಬೇಕಾದರೂ ಹಣವನ್ನು ಕಳುಹಿಸಬಹುದು. ಕುಟುಂಬ ಆಯೋಜಕರ ಆಯ್ಕೆಗಳನ್ನು ಜಾರಿ ಮಾಡಲು ನಿರ್ಬಂಧವನ್ನು Apple ಸಂಗ್ರಹಿಸುತ್ತದೆ. ಕುಟುಂಬ ಹಂಚಿಕೆ ಸೆಟ್ಟಿಂಗ್ಸ್ > ಕುಟುಂಬ ಹಂಚಿಕೆ > Apple Cash ಎಂಬಲ್ಲಿಗೆ ಹೋಗಿ ಮಗುವಿನ ಹೆಸರಿನ ಮೇಲೆ ಟ್ಯಾಪ್ ಮಾಡಿ ಕುಟುಂಬ ವ್ಯವಸ್ಥಾಪಕರು ಯಾವುದೇ ಸಂದರ್ಭದಲ್ಲಿ ಬೇಕಾದರೂ ವ್ಯಾಲೆಟ್‌ನಲ್ಲಿ Apple Cash ಕಾರ್ಡ್ ಮೇಲೆ ಟ್ಯಾಪ್ ಮಾಡುವ ಮೂಲಕ Apple Cash ಮಗುವಿನ ಖಾತೆಯ ಸೆಟ್ಟಿಂಗ್ ಅನ್ನು ವೀಕ್ಷಿಸುವುದು ಮತ್ತು ಬದಲಾಯಿಸಲು ಸಾಧ್ಯವಿದೆ.
ಮೊತ್ತ, ದಿನಗಳು ಮತ್ತು ಸಂಸ್ಥೆಗಳು ಅಥವಾ ವ್ಯಕ್ತಿಗಳು ಸೇರಿದಂತೆ ಮಗುವಿನ ಖಾತೆಯ ಮೊತ್ತ ಮತ್ತು ಪೂರ್ಣ ವಹಿವಾಟಿನ ಇತಿಹಾಸವನ್ನು ಕುಟುಂಬ ವ್ಯವಸ್ಥಾಪಕರು ಮತ್ತು ಹೆತ್ತವರು ಹಾಗೂ ಕಾನೂನುಬದ್ಧ ಪೋಷಕರು ಸಹ ವೀಕ್ಷಿಸಲು ಸಾಧ್ಯವಿದೆ. ಹೆಚ್ಚುವರಿ ವಹಿವಾಟಿನ ವಿವರಗಳು ಲಭ್ಯವಿದ್ದಲ್ಲಿ, ಅವುಗಳನ್ನು ಸಹ ತೋರಿಸಬಹುದು, ಉದಾಹರಣೆಗೆ ಸಂದೇಶ ಆ್ಯಪ್‌ನಲ್ಲಿನ ವಹಿವಾಟೊಂದರ ಮೆಮೋ ಫೀಲ್ಡ್‌ನಲ್ಲಿ ಒದಗಿಸಿರುವ ವಿವರಣೆಗಳು. ಮಗುವಿನ ಖಾತೆಯ ವಹಿವಾಟು ಇತಿಹಾಸವನ್ನು ವೀಕ್ಷಿಸಲು, ವಾಲೆಟ್‌ನಲ್ಲಿ Apple Cash ಕಾರ್ಡ್ ಅನ್ನು ಟ್ಯಾಪ್ ಮಾಡಿ, ಕುಟುಂಬ ಹಂಚಿಕೆಯ ಸೆಟ್ಟಿಂಗ್ಸ್ > ಕುಟುಂಬ ಹಂಚಿಕೆ > Apple Cash > [ಮಗುವಿನ ಹೆಸರು] > ವಹಿವಾಟುಗಳು ಎಂಬುದನ್ನು ಆಯ್ಕೆಮಾಡಿ.
13 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ತಮ್ಮ Apple Cash ಖಾತೆಗೆ ಹಣವನ್ನು ತುಂಬಿಸಬಹುದು. ಹಣವನ್ನು ಲೋಡ್ ಮಾಡಿದಾಗ ಅದು ಖಾತೆಯ ಮಾಲೀಕರಿಗೆ ಕಾಣಿಸುತ್ತದೆ.
ಮಗುವಿಗೆ 18 ವರ್ಷ ವಯಸ್ಸಾದಾಗ, ಅವರು ತಮ್ಮ ಲಿಂಕ್ ಮಾಡಲಾದ ಖಾತೆಯ ಮಾಲೀಕತ್ವವನ್ನು ವಹಿಸಿಕೊಳ್ಳಲು ಮತ್ತು ಅದನ್ನು ಪ್ರತ್ಯೇಕವಾದ Apple Cash ಖಾತೆಯೆಂದು ಮೇಲ್ದರ್ಜೆಗೇರಿಸಲು ವಿನಂತಿಸಿಕೊಳ್ಳಬಹುದು. ಮಗುವು ಮೇಲ್ದರ್ಜೆಗೇರಿದ ನಂತರ, ಮಗುವಿನ ಖಾತೆಯ ಮಾಹಿತಿಯನ್ನು ಅಥವಾ ಮಗುವಿನ ಈ ಹಿಂದಿನ ಅಥವಾ ಭವಿಷ್ಯದ Apple Cash ವಹಿವಾಟುಗಳ ಕುರಿತಾದ ಮಾಹಿತಿಯನ್ನು ಆ್ಯಕ್ಸೆಸ್ ಮಾಡಲು ಕುಟುಂಬ ಆಯೋಜಕರಿಗೆ ಮತ್ತು ಪೋಷಕರಿಗೆ ಅಥವಾ ಕಾನೂನುಬದ್ಧ ಪಾಲಕರಿಗೆ ಸಾಧ್ಯವಾಗುವುದಿಲ್ಲ. ಮೇಲ್ದರ್ಜೆಗೇರುವುದಕ್ಕೆ ಮೋದಲಿನ ವಹಿವಾಟುಗಳ ಮಾಹಿತಿಯು ಮೈಲ್ದರ್ಜೆಗೇರಿದ ಖಾತೆಗೆ ಇನ್ನು ಮುಂದೆಯೂ ಕಾಣಿಸಲಿದೆ.
ಮಗು ಕುಟುಂಬದಿಂದ ಹೊರ ಹೋದರೆ, ಲಿಂಕ್ ಆಗಿರುವ ಮಗುವಿನ ಖಾತೆಯನ್ನು ಮುಚ್ಚಲಾಗುತ್ತದೆ ಹಾಗೂ ಖಾತೆಯ ಕುರಿತಾದ ಮಾಹಿತಿಯನ್ನು ಮೇಲೆ, ನಿಮ್ಮ Apple Cash ಖಾತೆಯನ್ನು ಮುಚ್ಚುವುದು ಎಂಬಲ್ಲಿ ವಿವರಿಸಿರುವ ರೀತಿಯಲ್ಲಿ ನಿರ್ವಹಿಸಲಾಗುತ್ತದೆ.
ಮಕ್ಕಳ ವೈಯಕ್ತಿಕ ಡೇಟವನ್ನು Apple ನಿರ್ವಹಿಸುವ ರೀತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ www.apple.com/in/legal/privacy/parent-disclosure ಎಂಬಲ್ಲಿ ಮಕ್ಕಳಿಗಾಗಿ ಕುಟುಂಬ ಗೌಪ್ಯತೆ ಪ್ರಕಟಣೆಯನ್ನು ನೋಡಿ.
ಇತರೆ
ಮೇಲೆ ವಿವರಿಸಲಾಗಿರುವ ನೇರ ಪಾವತಿಗಳು ಅಥವಾ ವಿತರಣೆಗಳ ಫೀಚರ್‌ಗಳನ್ನು ಸಂಬಂಧಿತ ವೈಯಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ Apple Payments Inc. ಒದಗಿಸುತ್ತದೆ. ಸಂಪೂರ್ಣವಾಗಿ Apple ಮಾಲೀಕತ್ವದಲ್ಲಿರುವ ಅಂಗ ಸಂಸ್ಥೆಯಾಗಿರುವ Apple Payments Services LLC, ಇತರೆ Apple Cash ತಂತ್ರಜ್ಞಾನ ಸೇವೆಗಳನ್ನು ಒದಗಿಸುತ್ತದೆ.
ನೀವು ವಂಚನೆಯುಕ್ತ Apple Cash ವಹಿವಾಟಿನ ಬಗ್ಗೆ ನಿಮ್ಮ ಹಣಕಾಸು ಸಂಸ್ಥೆಗೆ ದೂರು ನೀಡಿದಲ್ಲಿ, ನಿಮ್ಮ ದೂರಿಗೆ ಪ್ರತಿಕ್ರಿಯೆ ನೀಡಲು ನೆರವಾಗಲು ವ್ಯಾಜ್ಯದಲ್ಲಿರುವ ವಹಿವಾಟುಗೆ ಸಂಬಂಧಿಸಿದ IP ವಿಳಾಸ, Apple ಖಾತೆ, ದೂರವಾಣಿ ಸಂಖ್ಯೆ ಹಾಗೂ ಸಾಧನದ ಐಡೆಂಟಿಫೈಯರ್ ಮೊದಲಾಗಿ ನಿರ್ದಿಷ್ಟ ಮಾಹಿತಿಯನ್ನು Green Dot Bank ಜೊತೆಗೆ ಹಂಚಿಕೊಳ್ಳುವಂತೆ Apple ಸಂಸ್ಥೆಯನ್ನು Green Dot Bank ವಿನಂತಿಸಬಹುದು. ವಂಚನೆ ತಡೆಗಟ್ಟುವ ಉದ್ದೇಶದಿಂದ ಈ ವಹಿವಾಟು ಸಂಬಂಧಿತ ಮಾಹಿತಿಯನ್ನು Green Dot Bank ನಿಮ್ಮ ಹಣಕಾಸು ಸಂಸ್ಥೆ ಅಥವಾ ಪಾವತಿಯ ನೆಟ್‌ವರ್ಕ್ (ಉದಾಹರಣೆಗೆ, Visa ಅಥವಾ American Express) ಜೊತೆಗೆ ಹಂಚಿಕೊಳ್ಳಬಹುದು. ನೀವು https://applecash.greendot.com/privacyನಲ್ಲಿ Green Dot Bankನ ಗೌಪ್ಯತೆ ನೀತಿಯನ್ನು ಪರಿಶೀಲಿಸುವ ಮೂಲಕ ಆ ಬ್ಯಾಂಕ್ ನಿಮ್ಮ ವೈಯಕ್ತಿಕ ಡೇಟವನ್ನು ಹೇಗೆ ರಕ್ಷಿಸುತ್ತದೆ ಮತ್ತು ಹಂಚಿಕೊಳ್ಳುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಬಹುದು.
Apple Cash ಅನ್ನು ಸುಧಾರಿಸಲು ನೆರವಾಗಲು, ನಿಮ್ಮ Apple Cashನ ಬಳಕೆಯ ಕುರಿತಾದ ಮಾಹಿತಿಯನ್ನು Apple ಸಂಗ್ರಹಿಸುತ್ತದೆ ಮತ್ತು ಆ ಮಾಹಿತಿಯನ್ನು ನಿಮ್ಮನ್ನು ವ್ಯಕ್ತಿಗತವಾಗಿ ಗುರುತಿಸದೆ ಇರುವಂತೆ ದಾಸ್ತಾನು ಮಾಡುತ್ತದೆ. Apple ಈ ಮಾಹಿತಿಯನ್ನು ಇತರ Apple ಉತ್ಪನ್ನಗಳು ಮತ್ತು ಸೇವೆಗಳನ್ನು ಸುಧಾರಿಸಲು, ಮಾರ್ಕೆಟಿಂಗ್ ಮತ್ತು ವಂಚನೆ ಪತ್ತೆ ಹಾಗೂ ಭದ್ರತಾ ಉದ್ದೇಶಗಳಿಗಾಗಿ ಸಹ ಬಳಸಬಹುದು. Apple ನಿರ್ದಿಷ್ಟವಾಗಿ ಗುರುತಿಸದೆ ಇರುವ Apple Cash ಮಾಹಿತಿಯನ್ನು ಸಹ Green Dot Bankನಿಂದ ಆ್ಯಕ್ಸೆಸ್ ಮಾಡಬಹುದು ಮತ್ತು Apple Cash ಹಾಗೂ ಸಂಬಂಧಿತ ಸೇವೆಗಳನ್ನು ಸುಧಾರಿಸಲು ಮತ್ತು ವ್ಯಾಪಾರ ವಿಶ್ಲೇಷಣೆಗಾಗಿ ಆ ಮಾಹಿತಿಯನ್ನು ಬಳಸಬಹುದು.
ವೈಯಕ್ತಿಕ ಡೇಟವನ್ನು ಸಂಗ್ರಹಿಸಿದ ಉದ್ದೇಶ ಈಡೇರುವವರೆಗೆ ಮಾತ್ರವೇ Apple ಅದನ್ನು ಇರಿಸಿಕೊಳ್ಳುತ್ತದೆ, ಈ ಉದ್ದೇಶಗಳಲ್ಲಿ Appleನ ಗೌಪ್ಯತೆ ನೀತಿಗೆ ಅನುಸಾರವಾಗಿ ಅಥವಾ ನಮ್ಮ ನೋಟಿಸ್‌ಗಳಲ್ಲಿ ವಿವರಿಸಿರುವ ಅಥವಾ ಕಾನೂನಿನ ಪ್ರಕಾರ ಅಗತ್ಯವಿರುವ ಉದ್ದೇಶಗಳೂ ಸೇರಿವೆ. ಇರಿಸಿಕೊಳ್ಳುವಿಕೆಯ ಅವಧಿಗಳನ್ನು ಮೌಲ್ಯಮಾಪನ ಮಾಡುವಾಗ, ಸಂಗ್ರಹಿಸಿದ ವೈಯಕ್ತಿಕ ಡೇಟವನ್ನು ಇರಿಸಿಕೊಳ್ಳುವ ಅಗತ್ಯವಿದೆಯೇ ಎಂದು ನಾವು ಮೊದಲು ಎಚ್ಚರಿಕೆಯಿಂದ ಪರಿಶೀಲಿಸುತ್ತೇವೆ ಮತ್ತು ಇರಿಸಿಕೊಳ್ಳುವುದು ಅಗತ್ಯವಿದ್ದರೆ, ಕಾನೂನಿನ ಅಡಿಯಲ್ಲಿ ಅನುಮತಿಸುವ ಕಡಿಮೆ ಅವಧಿಗೆ ನಾವು ವೈಯಕ್ತಿಕ ಡೇಟವನ್ನು ಇರಿಸಿಕೊಳ್ಳುತ್ತೇವೆ.
ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/privacy ಎಂಬಲ್ಲಿ ನೋಡಬಹುದು.
2026-05-11