Apple ನಕ್ಷೆ ಆ್ಯಪ್ ಮತ್ತು ಗೌಪ್ಯತೆ
ನಿಮ್ಮ ಗೌಪ್ಯತೆಯನ್ನು ರಕ್ಷಿಸಲು Apple ನಕ್ಷೆ (“ನಕ್ಷೆ”) ಆ್ಯಪ್ ಅನ್ನು ಮೂಲದಿಂದ ವಿನ್ಯಾಸಗೊಳಿಸಲಾಗಿದೆ. ನಾವು ನಿಮ್ಮ ನಕ್ಷೆ ಆ್ಯಪ್ ಬಳಕೆಗೆ ಸಂಬಂಧಿಸಿದ ವೈಯಕ್ತಿಕ ಡೇಟವನ್ನು ಸಂಗ್ರಹಿಸುವುದಿಲ್ಲ.
ನಿಮ್ಮ ಮಾಹಿತಿಯನ್ನು ರಕ್ಷಿಸುವಂತೆ ನಕ್ಷೆಗಳನ್ನು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅನುಭವವನ್ನು ಉತ್ತಮಗೊಳಿಸಲು ನಮಗೆ ಅಗತ್ಯವಿರುವ ಡೇಟವನ್ನು ಮಾತ್ರ ಸಂಗ್ರಹಿಸಲು ನಾವು ಶ್ರಮಿಸುತ್ತೇವೆ. ನಾವು ಡೇಟವನ್ನು ಸಂಗ್ರಹಿಸಿದಾಗ, ನಾವು ಏನನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ನಮಗೆ ಅದರ ಅಗತ್ಯ ಏಕಿದೆ ಎಂಬುದು ನಿಮಗೆ ತಿಳಿದಿರುವುದು ಮುಖ್ಯ ಎಂದು ನಾವು ಭಾವಿಸುತ್ತೇವೆ.
ಸೈನ್-ಇನ್ ಮತ್ತು ಸಿಂಕ್ ಮಾಡಿ
ನಕ್ಷೆಗಳನ್ನು ಬಳಸಲು ನೀವು ನಿಮ್ಮ Apple ಖಾತೆಗೆ ಸೈನ್ ಇನ್ ಮಾಡಬೇಕಾಗಿಲ್ಲ. ನಿಮ್ಮ ಖಾತೆಗೆ ಸೈನ್ ಇನ್ ಮಾಡಲು ನೀವು ಆಯ್ಕೆಮಾಡಿಕೊಂಡರೆ ಮತ್ತು ಎರಡು ಅಂಶದ ದೃಢೀಕರಣವನ್ನು ಸಕ್ರಿಯಗೊಳಿಸಿದರೆ, ನಕ್ಷೆಗಳು ನಿಮ್ಮ ಎಲ್ಲಾ ಸಾಧನಗಳಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಬಳಸಿಕೊಂಡು ನಿಮ್ಮ ಡೇಟವನ್ನು ಸಿಂಕ್ ಮಾಡುತ್ತದೆ. ಉದಾಹರಣೆಗೆ, ನಿಮ್ಮ ಪಿನ್ ಮಾಡಿದ ಸ್ಥಳಗಳು, ಇತ್ತೀಚಿನವುಗಳು, ಭೇಟಿ ನೀಡಿದ ಸ್ಥಳಗಳು ಮತ್ತು ಗೈಡ್‌ಗಳನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಲಾಗಿದೆ, ಆದ್ದರಿಂದ Appleಗೆ ಅವುಗಳನ್ನು ಓದಲು ಸಾಧ್ಯವಿಲ್ಲ. ನೀವು ನಕ್ಷೆ ಆ್ಯಪ್‌ನ ಇತರ ಬಳಕೆದಾರರ ಜೊತೆಗೆ ನಿಮ್ಮ ETA ಅನ್ನು ಹಂಚಿಕೊಂಡಾಗ, ಹಂಚಿಕೊಂಡ ಸ್ಥಳವು Appleಗೆ ಕಾಣಿಸುವುದಿಲ್ಲ.
ನೀವು ಸೈನ್ ಇನ್ ಆಗಿದ್ದರೆ, ಕೆಲವು ಫೀಚರ್‌ಗಳು ನಿಮಗೆ ಲಭ್ಯವಿರಬೇಕೇ ಎಂಬುದನ್ನು ನಿರ್ಧರಿಸಲು, ನೀವು ವಯಸ್ಕರೋ ಅಥವಾ ಮಗುವೋ ಎಂಬಂತಹ ನಿಮ್ಮ Apple ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ನಕ್ಷೆ ಆ್ಯಪ್ ಬಳಸಬಹುದು. ನಕ್ಷೆ ಆ್ಯಪ್ ಆ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ.
ಸ್ಥಳ
ಬಹುತೇಕ ನಕ್ಷೆ ಆ್ಯಪ್ ಫೀಚರ್‌ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ನಿಮ್ಮ ಸ್ಥಳದ ಬಳಕೆಯ ಅಗತ್ಯವಿದೆ. ನಿಮ್ಮ ಸ್ಥಳವು ನಿಮ್ಮ ಗುರುತನ್ನು ಬಹಿರಂಗಪಡಿಸಬಹುದು, ಹಾಗಾಗಿ ನಾವು ನಿಮ್ಮ ನಿಖರವಾದ ಸ್ಥಳವನ್ನು 24 ಗಂಟೆಗಳ ಒಳಗಾಗ ಕಡಿಮೆ ನಿಖರವಾದ ಸ್ಥಳಗಳಾಗಿ ಪರಿವರ್ತಿಸುತ್ತೇವೆ. ನೀವು ನಕ್ಷೆ ಆ್ಯಪ್ ಅನ್ನು ಬಳಸಿಕೊಂಡು ನ್ಯಾವಿಗೇಟ್ ಮಾಡುವಾಗ, ನಿಮ್ಮ ಮಾರ್ಗದ ಪ್ರಾರಂಭದ ನಿಖರವಾದ ಸ್ಥಳವನ್ನು ನಾವು ಕಡಿಮೆ ನಿಖರವಾದ ಪ್ರದೇಶವಾಗಿ ಪರಿವರ್ತಿಸುತ್ತೇವೆ.
ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ಸೆಟ್ಟಿಂಗ್ಸ್ > ಆ್ಯಪ್‌ಗಳು > ನಕ್ಷೆ > ಸ್ಥಳ ಎಂಬಲ್ಲಿಗೆ ಹೋಗಿ, ನಂತರ ನಿಖರವಾದ ಸ್ಥಳವನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ನಕ್ಷೆ ಆ್ಯಪ್‌ನ ಸ್ಥಳ-ಆಧಾರಿತ ಕಾರ್ಯವನ್ನು ನೀವು ನಿಷ್ಕ್ರಿಯಗೊಳಿಸಬಹುದು. Macನಲ್ಲಿ, ಸಿಸ್ಟಂ ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ ಎಂಬಲ್ಲಿಗೆ ಹೋಗಿ ಮತ್ತು ಸ್ಥಳ ಸೇವೆಗಳ ಪಟ್ಟಿಯಲ್ಲಿ ನಕ್ಷೆ ಆ್ಯಪ್ ಅನ್ನು ಆಫ್ ಮಾಡಿ. ನೀವು ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದರೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌ನಂತಹ ಕೆಲವು ನಕ್ಷೆ ಆ್ಯಪ್ ಫೀಚರ್‌ಗಳು ಲಭ್ಯವಿರುವುದಿಲ್ಲ.
ಸ್ಥಳ ಸೇವೆಗಳನ್ನು ಆನ್ ಮಾಡಿದರೆ, ರೂಟಿಂಗ್, ಟ್ರಾಫಿಕ್ ಮತ್ತು ಸಮೀಪದಲ್ಲಿರುವ ಆಸಕ್ತಿಯ ಸ್ಥಳಗಳ ಮಾಹಿತಿಯನ್ನು ನಕ್ಷೆ ಆ್ಯಪ್ ಅನ್ನು ಸುಧಾರಿಸಲು ಅನಾಮಧೇಯ, ಒಟ್ಟುಗೂಡಿಸಿದ ರೂಪದಲ್ಲಿ ಬಳಸಲಾಗುತ್ತದೆ. ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು > ಸಿಸ್ಟಂ ಸೇವೆಗಳು ಎಂಬಲ್ಲಿಗೆ ಹೋಗಿ ನಂತರ ರೂಟಿಂಗ್ ಮತ್ತು ಟ್ರಾಫಿಕ್ ಅನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ನೀವು ಇದನ್ನು ನಿಷ್ಕ್ರಿಯಗೊಳಿಸಬಹುದು.
ನೀವು ಭೇಟಿ ನೀಡಿದ ಸ್ಥಳಗಳನ್ನು ಸಕ್ರಿಯಗೊಳಿಸಲು ಆರಿಸಿಕೊಂಡರೆ, ರೆಸ್ಟೋರೆಂಟ್‌ಗಳು ಅಥವಾ ಉದ್ಯಾನವನಗಳಂತಹ ನೀವು ಇತ್ತೀಚೆಗೆ ಭೇಟಿ ನೀಡಿದ ಸ್ಥಳಗಳ ಕುರಿತ ಮಾಹಿತಿಗೆ ನಕ್ಷೆ ಆ್ಯಪ್ ಆ್ಯಕ್ಸೆಸ್ ಹೊಂದಿರುತ್ತದೆ. ನೀವು ಭೇಟಿ ನೀಡಿದ ಸ್ಥಳಗಳನ್ನು ಸಕ್ರಿಯಗೊಳಿಸಿದ ನಂತರ ನೀವು ಭೇಟಿ ನೀಡುವ ಸ್ಥಳಗಳ ಕುರಿತ ಡೇಟವನ್ನು ಮಾತ್ರ ನಕ್ಷೆ ಆ್ಯಪ್‌ನೊಂದಿಗೆ ಹಂಚಿಕೊಳ್ಳಲಾಗುತ್ತದೆ. ನೀವು ಭೇಟಿ ನೀಡಿದ ಸ್ಥಳಗಳ ಮಾಹಿತಿಯು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಲಾಗಿದ್ದು ಅದನ್ನು ರೀಡ್ ಮಾಡಲು Appleಗೆ ಸಾಧ್ಯವಾಗುವುದಿಲ್ಲ. ನಿಮ್ಮ ಭೇಟಿ ನೀಡಿದ ಸ್ಥಳಗಳನ್ನು ನಕ್ಷೆ ಆ್ಯಪ್ ಎಷ್ಟು ಸಮಯದವರೆಗೆ ಸಂಗ್ರಹಿಸಬೇಕೆಂದು ನೀವು ಆಯ್ಕೆ ಮಾಡಬಹುದು ಮತ್ತು ಉಳಿಸಿಕೊಳ್ಳುವಿಕೆಯ ಅವಧಿಯನ್ನು ಸರಿಹೊಂದಿಸಲು ಲೈಬ್ರರಿ > ಭೇಟಿಗಳು ಎಂಬಲ್ಲಿಗೆ ಹೋಗಿ ನಂತರ ಭೇಟಿಗಳನ್ನು ಇರಿಸಿ ಎಂಬುದನ್ನು ಟ್ಯಾಪ್ ಮಾಡುವ ಮೂಲಕ ನಕ್ಷೆ ಆ್ಯಪ್‌ನಲ್ಲಿ ಯಾವುದೇ ಸಮಯದಲ್ಲಿ ಈ ಉಳಿಸಿಕೊಳ್ಳುವಿಕೆಯ ಅವಧಿಯನ್ನು ಬದಲಾಯಿಸಬಹುದು.
ನೀವು ಆದ್ಯತೆಯ ದಾರಿಗಳು ಮತ್ತು ಊಹಿಸಿದ ತಲುಪಬೇಕಾದ ಸ್ಥಳಗಳನ್ನು ಸಕ್ರಿಯಗೊಳಿಸಲು ಆರಿಸಿಕೊಂಡರೆ, ನೀವು ಆಗಾಗ್ಗೆ ತೆಗೆದುಕೊಳ್ಳುವ ದಾರಿಗಳ ಕುರಿತಾದ ಮಾಹಿತಿಯನ್ನು ನಕ್ಷೆ ಆ್ಯಪ್‌ನೊಂದಿಗೆ ಹಂಚಿಕೊಳ್ಳಲಾಗುತ್ತದೆ. ನಿಮ್ಮ ತಲುಪಬೇಕಾದ ಸ್ಥಳಕ್ಕೆ ದಾರಿಗಳನ್ನು ಹುಡುಕುವಾಗ, ನಕ್ಷೆ ಆ್ಯಪ್ ನಿಮ್ಮ ಆದ್ಯತೆಯ ಮತ್ತು ಮುಂಬರುವ ದಾರಿಗಳಲ್ಲಿ ಒಂದು ಅಥವಾ ಹೆಚ್ಚಿನ ದಾರಿಗಳನ್ನು Appleಗೆ ಕಳುಹಿಸಬಹುದು. ನಕ್ಷೆ ವಿಜೆಟ್‌ನಲ್ಲಿ ಈ ದಾರಿಗಳನ್ನು ಪ್ರದರ್ಶಿಸಲು ಅಥವಾ ನಿಮ್ಮ ಮುಂದಿನ ತಲುಪಬೇಕಾದ ಸ್ಥಳಕ್ಕೆ ನೀವು ಯಾವಾಗ ಹೊರಡಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡಲು ನಕ್ಷೆ ಆ್ಯಪ್ ಒಂದು ಅಥವಾ ಹೆಚ್ಚಿನ ನಿಮ್ಮ ಆದ್ಯತೆಯ ಮತ್ತು ಊಹಿಸಿದ ದಾರಿಗಳನ್ನು Appleಗೆ ಕಳುಹಿಸಬಹುದು. ಈ ಮಾಹಿತಿಯು ನಿಮ್ಮ Apple ಖಾತೆಗೆ ಸಂಬಂಧಿಸಿಲ್ಲ ಮತ್ತು ಇದು ಆದ್ಯತೆಯ ದಾರಿ ಅಥವಾ ಊಹಿಸಿದ ತಲುಪಬೇಕಾದ ಸ್ಥಳ ಎಂದು Apple ತಿಳಿದುಕೊಳ್ಳುವ ಮೊದಲು ನಾವು 24 ಗಂಟೆಗಳ ಒಳಗೆ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.
ನಕ್ಷೆ ಆ್ಯಪ್‌ನಲ್ಲಿ ಭೇಟಿ ನೀಡಿದ ಸ್ಥಳಗಳು ಅಥವಾ ಆದ್ಯತೆಯ ದಾರಿಗಳು ಮತ್ತು ಊಹಿಸಿದ ತಲುಪಬೇಕಾದ ಸ್ಥಳಗಳ ಫೀಚರ್‌ಗಳನ್ನು ಸಕ್ರಿಯಗೊಳಿಸಲು, ನೀವು ಪ್ರಮುಖ ಸ್ಥಳಗಳು ಮತ್ತು ದಾರಿಗಳನ್ನು ಸಕ್ರಿಯಗೊಳಿಸಬೇಕು ಮತ್ತು ನಿಮ್ಮ ಪ್ರಸ್ತುತ ಸ್ಥಳದ ಆ್ಯಕ್ಸೆಸ್ ಅನ್ನು ನಕ್ಷೆ ಆ್ಯಪ್‌ಗೆ ನೀಡಬೇಕು. ನಕ್ಷೆ ಆ್ಯಪ್‌ನೊಳಗಿನ ಭೇಟಿ ನೀಡಿದ ಸ್ಥಳಗಳು ಅಥವಾ ಆದ್ಯತೆಯ ಮಾರ್ಗಗಳು ಮತ್ತು ಊಹಿಸಿದ ತಲುಪಬೇಕಾದ ಸ್ಥಳಗಳನ್ನು ನಿಷ್ಕ್ರಿಯಗೊಳಿಸಲು ಸೆಟ್ಟಿಂಗ್ಸ್ > ಆ್ಯಪ್‌ಗಳು > ನಕ್ಷೆ > ಆ್ಯಕ್ಸೆಸ್ ಮಾಡಲು ನಕ್ಷೆ ಆ್ಯಪ್‌ಗೆ ಅನುಮತಿಸಿ > ಸ್ಥಳ > ಇನ್ನಷ್ಟು ಸ್ಥಳ ಸೇವೆಯ ಆ್ಯಕ್ಸೆಸ್ ಅನುಮತಿಸಿ ಎಂಬಲ್ಲಿಗೆ ಹೋಗಿ, ನಂತರ ಭೇಟಿ ನೀಡಿದ ಸ್ಥಳಗಳು ಅಥವಾ ಆದ್ಯತೆಯ ಮಾರ್ಗಗಳು ಮತ್ತು ಊಹಿಸಿದ ತಲುಪಬೇಕಾದ ಸ್ಥಳಗಳು ಎಂಬುದನ್ನು ಆಫ್ ಮಾಡಿ. ಭೇಟಿ ನೀಡಿದ ಸ್ಥಳಗಳು ಮತ್ತು ಆದ್ಯತೆಯ ದಾರಿಗಳು ಮತ್ತು ಊಹಿಸಿದ ತಲುಪಬೇಕಾದ ಸ್ಥಳಗಳು ಸೇರಿದಂತೆ ಸ್ಥಳ ಸೇವೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, www.apple.com/legal/privacy/data/en/location-services ಎಂಬಲ್ಲಿಗೆ ಭೇಟಿ ನೀಡಿ.
ನಕ್ಷೆಗಳನ್ನು ಬಳಸುವುದು
ನೀವು ನಕ್ಷೆಗಳನ್ನು ಬಳಸುವಾಗ, ಕೆಳಗಿನ ಮಾಹಿತಿಯನ್ನು Appleಗೆ ಕಳುಹಿಸಲಾಗುತ್ತದೆ:
- ನಿಮ್ಮ ವಿನಂತಿಯ ಸಮಯ
- ಸಾಧನದ ಮಾದರಿ ಮತ್ತು ಸಾಫ್ಟ್‌ವೇರ್ ಆವೃತ್ತಿ
- ಇನ್‌ಪುಟ್ ಭಾಷೆ
- ಸಾಧನದ ಸ್ಥಳ, ನಿಮ್ಮ ಸ್ಥಳವನ್ನು ಆ್ಯಕ್ಸೆಸ್ ಮಾಡಲು ನೀವು ನಕ್ಷೆಗಳಿಗೆ ಅಧಿಕಾರ ನೀಡಿದ್ದರೆ
- ನಿಮ್ಮ ಸಾಧನದಲ್ಲಿ ಗೋಚರಿಸುವ ನಕ್ಷೆ ಪ್ರದೇಶದಲ್ಲಿನ ಮಿತಿಗಳು
- ನೀವು ಬಳಸುವ ಹುಡುಕಾಟ ಪದಗಳು ಮತ್ತು ಫೀಚರ್‌ಗಳು, ನೀವು ವೀಕ್ಷಿಸುವ ಸ್ಥಳಗಳು ಮತ್ತು ನಕ್ಷೆಗಳ ನೋಟಿಫಿಕೇಷನ್‌ಗಳೊಂದಿಗೆ ನಿಮ್ಮ ಸಂವಾದಗಳನ್ನು ಒಳಗೊಂಡಂತೆ ನಕ್ಷೆಗಳೊಂದಿಗಿನ ಸಂವಹನಗಳು
ನಕ್ಷೆ ಆ್ಯಪ್ ಬಳಸುವಾಗ ನಾವು ಅಪ್ಲಿಕೇಶನ್, ಸಾಧನ ಮತ್ತು ನೆಟ್‌ವರ್ಕ್ ಕಾನ್ಫಿಗರೇಶನ್ ಹಾಗೂ ಕಾರ್ಯಕ್ಷಮತೆಯ ಡೇಟವನ್ನು ಸಹ ಸಂಗ್ರಹಿಸುತ್ತೇವೆ. ವ್ಯಕ್ತಿಗತ ಬಳಕೆಯ ಮೆಟ್ರಿಕ್‌ಗಳು ಒಂದು ಐಡೆಂಟಿಫೈಯರ್‌ಗೆ ಸಂಬಂಧಿಸಿರುತ್ತದೆ, ಅವುಗಳನ್ನು ಪ್ರತಿ ಗಂಟೆಗೆ ಅನೇಕ ಬಾರಿ ರೊಟೇಟ್ ಮಾಡಲಾಗುತ್ತದೆ ಮತ್ತು ಅವುಗಳು ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿರುವುದಿಲ್ಲ. ಅಂದರೆ, ನಕ್ಷೆ ಆ್ಯಪ್‌ಗಳ ಮೂಲಕ ನಿಮಗೆ ಅಥವಾ ನಿಮ್ಮ ಸಾಧನಕ್ಕೆ ಲಿಂಕ್ ಮಾಡಲಾಗಿರುವ ಐಡೆಂಟಿಫೈಯರ್‌ಗಳನ್ನು ಆಧರಿಸಿ ಮಾಹಿತಿಗಾಗಿ ಹುಡುಕಲು ಸಾಧ್ಯವಾಗುವುದಿಲ್ಲ. ದೀರ್ಘ-ಸಮಯದವರೆಗೆ ಸಕ್ರಿಯವಾಗಿರುವ ಈ ಐಡೆಂಟಿಫೈಯರ್‌ಗಳನ್ನು ಅಪ್ಲಿಕೇಶನ್‌ನ ಕಾರ್ಯಕ್ಷಮತೆ, ಒಟ್ಟುಗೂಡಿಸಿದ ಬಳಕೆಯ ಮೆಟ್ರಿಕ್‌ಗಳು ಹಾಗೂ ಸೇವೆಯ ಸಮಗ್ರತೆಯನ್ನು ನಿರ್ವಹಿಸಲು ಬಳಸಲಾಗುತ್ತದೆ. ದೀರ್ಘ-ಸಮಯದವರೆಗೆ ಸಕ್ರಿಯವಾಗಿರುವ ಈ ಐಡೆಂಟಿಫೈಯರ್‌ಗಳನ್ನು ಅಥವಾ ನಿಮ್ಮನ್ನು ಗುರುತಿಸಬಹುದಾದ ಇತರ ಮಾಹಿತಿಯನ್ನು ನಿಮ್ಮ Apple ಖಾತೆಯ ಜೊತೆಗೆ ಲಗತ್ತಿಸುವುದಿಲ್ಲ.
ಹೆಚ್ಚುವರಿಯಾಗಿ, ನ್ಯಾವಿಗೇಷನ್ ಅಥವಾ ದಾರಿಗಳ ಮಾಹಿತಿಯನ್ನು ವಿನಂತಿಸಲು ನೀವು ನಕ್ಷೆ ಆ್ಯಪ್ ಅನ್ನು ಬಳಸಿದಾಗ, ನಿಮ್ಮ ಮಾರ್ಗದ ಕುರಿತು ವಿವರವನ್ನು Appleಗೆ ಕಳುಹಿಸಲಾಗುತ್ತದೆ, ಅದರಲ್ಲಿ ಇವುಗಳು ಸೇರಿವೆ:
- ನಿಮ್ಮ ಸ್ಥಳವನ್ನು ಆ್ಯಕ್ಸೆಸ್ ಮಾಡಲು ನೀವು ನಕ್ಷೆ ಆ್ಯಪ್‌ಗೆ ಅಧಿಕಾರ ನೀಡಿದ್ದರೆ, ನೀವು ವಿನಂತಿಸಿದಾಗ ಮತ್ತು ನಿಮ್ಮ ನ್ಯಾವಿಗೇಷನ್ ಸೆಷನ್ ಸಂದರ್ಭದಲ್ಲಿ ಸಾಧನದ ಆರಂಭಿಕ ಮತ್ತು ಪ್ರಸ್ತುತ ಸ್ಥಳ
- ತಲುಪಬೇಕಾದ ಸ್ಥಳ
- ಸಾರಿಗೆಯ ಮೀಡಿಯಾ, ನೀವು CarPlayನೊಂದಿಗೆ ಕನೆಕ್ಟ್ ಆಗಿದ್ದೀರಾ ಅಥವಾ ಇಲ್ಲವೆ ಎಂಬುದನ್ನು ಒಳಗೊಂಡಿದೆ
- ಒಂದು ರ್‍ಯಾಂಡಮ್ ಐಡೆಂಟಿಫೈಯರ್, ನೀವು ದಾರಿಗಳ ಮಾಹಿತಿಯನ್ನು ಕೇಳಿದಾಗ ರಚಿಸಲಾಗುತ್ತದೆ ಮತ್ತು ನಿಮ್ಮ ನ್ಯಾವಿಗೇಷನ್ ಸೆಷನ್‌ನ ಪೂರ್ಣ ಅವಧಿಯವರೆಗೆ ಅಸ್ತಿತ್ವದಲ್ಲಿರುತ್ತದೆ
ನೀವು EV ರೌಟಿಂಗ್ ಅನ್ನು ಬಳಸಿದಲ್ಲಿ, ನಿಮ್ಮ EV ರೌಟಿಂಗ್‌ನ ವಿನಂತಿಯ ಆರಂಭದಲ್ಲಿ ಚಾರ್ಜ್‌ನ ಸ್ಥಿತಿ ಮತ್ತು ನಿಮ್ಮ ಪ್ರಯಾಣದ ವೇಳೆ ನಿಮ್ಮ ವಾಹನದ ಚಾರ್ಜ್ ಎಷ್ಟಿರುತ್ತದೆ ಎನ್ನುವ ಕುರಿತು ಮಾಹಿತಿಯನ್ನು ಸಹ Appleಗೆ ಕಳುಹಿಸಲಾಗುತ್ತದೆ. ಹೆಚ್ಚುವರಿಯಾಗಿ, ನೀವು “EV ರೌಟಿಂಗ್ ಸುಧಾರಿಸಿ” ಎಂಬ ಆಯ್ಕೆ ಮಾಡಿದಲ್ಲಿ, ನೀವು ದಾರಿಗಳ ಮಾಹಿತಿಗಾಗಿ ವಿನಂತಿಸಿದಾಗ ನಿಮ್ಮ ಪ್ರಯಾಣದ ಅನುಭವವನ್ನು ಉನ್ನತೀಕರಿಸಲು, ನೀವು ಯಾವಾಗ ವಾಹನಕ್ಕೆ ಚಾರ್ಜ್ ಮಾಡಬೇಕು ಎನ್ನುವ ಸೂಚನೆಗಳನ್ನು ನೀಡಲು ಹಾಗೂ ನಿಮ್ಮ ಮಾರ್ಗದ ಅಂತ್ಯದಲ್ಲಿ ಚಾರ್ಜ್‌ನ ಅಂದಾಜು ಮಟ್ಟವನ್ನು ಒದಗಿಸಲು ನಿಮ್ಮ ಎಲೆಕ್ಟ್ರಿಕ್ ವಾಹನದ ಡೇಟವನ್ನು Apple ಬಳಸಿಕೊಳ್ಳಬಹುದು. ಈ ಮಾಹಿತಿಯಲ್ಲಿ ಬ್ಯಾಟರಿ ಸಾಮರ್ಥ್ಯ, ಚಾರ್ಜ್‌ನ ಸ್ಥಿತಿ ಹಾಗೂ ವ್ಯಾಪ್ತಿಯ ಮೇಲೆ ಪ್ರಭಾವ ಬೀರುವ ವಾಹನದ ಇತರ ವೈಶಿಷ್ಟ್ಯಗಳಂತಹ ಮಾಹಿತಿಯನ್ನು ಒಳಗೊಂಡಿದೆ. ಆದರೆ, ಇವುಗಳಲ್ಲಿ ಯಾವುದೇ ಮಾಹಿತಿಯು ನಿಮ್ಮ Apple ಖಾತೆಗೆ ಸಂಯೋಜಿತವಾಗಿರುವುದಿಲ್ಲ. EV ರೌಟಿಂಗ್ ಬಗ್ಗೆ ಹಚ್ಚಿನ ಮಾಹಿತಿಗಾಗಿ, www.apple.com/in/legal/privacy/data/en/improve-ev-routing ಎಂಬುದಕ್ಕೆ ಭೇಟಿ ನೀಡಿ.
ಒಂದುವೇಳೆ ನೀವು ಸುಧಾರಿತ ನ್ಯಾವಿಗೇಷನ್ ನಿಖರತೆ, ಸ್ಥಳ ನಿಖರತೆ, ಅಥವಾ AR ನಡಿಗೆಗಾಗಿ ನ್ಯಾವಿಗೇಷನ್ ಫೀಚರ್‌ಗಳನ್ನು ಬಳಸಿದಲ್ಲಿ, ನಿಮ್ಮ ಸ್ಥಳ ಮತ್ತು ಗಮ್ಯದ ನಿಖರತೆಯನ್ನು ಸುಧಾರಿಸಲು ಹಾಗೂ ಸ್ವಯಂ ಓರಿಯಂಟ್ ಮಾಡಲು ಸಹಾಯವಾಗಲು, ನಕ್ಷೆ ಆ್ಯಪ್ ನಿಮ್ಮ ಕ್ಯಾಮರಾ ಮತ್ತು ಮೋಷನ್ ಸೆನ್ಸರ್ ಅನ್ನು ಬಳಸಿಕೊಳ್ಳುತ್ತದೆ. ಈ ಡೇಟವನ್ನು ಸಂಗ್ರಹಿಸಲಾಗುವುದಿಲ್ಲ ಮತ್ತು ನಿಮ್ಮ ಸಾಧನದಿಂದ ಹೊರಗೆ ಹೋಗುವುದಿಲ್ಲ. ನೀವು AR ಸ್ಥಳ ನಿಖರತೆಯನ್ನು ಆನ್ ಮಾಡಲು ಆಯ್ಕೆ ಮಾಡಿದರೆ, ನೀವು ನಕ್ಷೆಗಳಲ್ಲಿನ “ಸ್ಥಳವನ್ನು ಅಥವಾ AR ನಡಿಗೆಯನ್ನು ನಿಖರಪಡಿಸು” ಆಯ್ಕೆಯನ್ನು ಬಳಸಿದಾಗ, ನಿಮ್ಮ ಸಾಧನದ ಕ್ಯಾಮರಾದಲ್ಲಿರುವ ಕಟ್ಟಡಗಳ ಗಾತ್ರ ಮತ್ತು ಆಕಾರ ಹಾಗೂ ನಿಮ್ಮ ಸುತ್ತಲಿನ ಪರಿಸರದ ಇತರ ಭೌತಿಕ ಲಕ್ಷಣಗಳ ಕುರಿತು ಡೇಟವನ್ನು Appleಗೆ ಕಳುಹಿಸಲಾಗುತ್ತದೆ. ಈ ಡೇಟವು ನಿಮ್ಮ Apple ಖಾತೆಯ ಜೊತೆಗೆ ಸಂಯೋಜಿತವಾಗಿಲ್ಲ ಮತ್ತು ನಿಮ್ಮನ್ನು ಅಥವಾ ಅನ್ಯರನ್ನು ಗುರುತಿಸುವುದಿಲ್ಲ. ಸೆಟ್ಟಿಂಗ್ಸ್ > ಆ್ಯಪ್‌ಗಳು > ನಕ್ಷೆ ಆ್ಯಪ್ ಎಂಬಲ್ಲಿಗೆ ಹೋಗಿ “ದಾರಿಗಳು” ವಿಭಾಗಕ್ಕೆ ಹೋಗಿ, ನಡಿಗೆ ಮೇಲೆ ಟ್ಯಾಪ್ ಮಾಡಿದ ನಂತರ “ಸುಧಾರಿತ” ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ಸುಧಾರಿತ ನ್ಯಾವಿಗೇಷನ್ ನಿಖರತೆಯನ್ನು ನಿಷ್ಕ್ರಿಯಗೊಳಿಸಬಹುದು . ಸೆಟ್ಟಿಂಗ್ಸ್ > ಗೌಪ್ಯತೆ & ಭದ್ರತೆ > ಅನಾಲಿಟಿಕ್ಸ್ ಮತ್ತು ಸುಧಾರಣೆಗಳು ಎಂಬಲ್ಲಿಗೆ ಹೋಗಿ, ನಂತರ “AR ಸ್ಥಳ ನಿಖರತೆ ಸುಧಾರಣೆ” ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ನೀವು “AR ಸ್ಥಳ ನಿಖರತೆ ಸುಧಾರಣೆ”ಯನ್ನು ಆಫ್ ಮಾಡಬಹುದು.
ನೀವು ವಿಷುವಲ್ ಇಂಟೆಲಿಜೆನ್ಸ್ ಅನ್ನು ಬಳಸಿದರೆ, ನಕ್ಷೆ ಆ್ಯಪ್ ವ್ಯಾಪಾರಗಳು, ಲ್ಯಾಂಡ್‌ಮಾರ್ಕ್‌ಗಳು ಹಾಗೂ ಇತರ ಆಸಕ್ತಿಯ ಸ್ಥಳಗಳ ಕುರಿತು ಮಾಹಿತಿಯನ್ನು ಒದಗಿಸಬಹುದು. ನಕ್ಷೆ ಆ್ಯಪ್ ಆ ಮಾಹಿತಿಯನ್ನು ಒದಗಿಸುವಾಗ, ನಿಮ್ಮ ಆಸಕ್ತಿಯ ಶಿಫಾರಸು ಮಾಡಿರುವ ಸ್ಥಳಗಳು ಮತ್ತು ನಕ್ಷೆ ಆ್ಯಪ್ ಒದಗಿಸಿದ ಮಾಹಿತಿಯ ಜೊತೆಗಿನ ನಿಮ್ಮ ಸಂವಾದಗಳ ಕುರಿತ ಡೇಟವನ್ನು Apple ಸಂಗ್ರಹಿಸಬಹುದು.
ನಕ್ಷೆ ಆ್ಯಪ್ ಮತ್ತು ಇತರ ಸ್ಥಳ-ಆಧಾರಿತ ಉತ್ಪನ್ನಗಳು ಮತ್ತು ಸೇವೆಗಳನ್ನು ಸುಧಾರಿಸಲು ಮತ್ತು ಒದಗಿಸಲು,
ನಿಮ್ಮ ನಕ್ಷೆ ಆ್ಯಪ್ ಬಳಕೆಯಿಂದ ಸಂಗ್ರಹಿಸಿದ ಮಾಹಿತಿಯನ್ನು Apple ಬಳಸಿಕೊಳ್ಳಬಹುದು.
ರೇಟಿಂಗ್‌ಗಳು ಮತ್ತು ಫೋಟೋಗಳಲ್ಲಿ ಭಾಗವಹಿಸುವ ಆಯ್ಕೆ ನಿಮ್ಮ ಬಳಿ ಇದ್ದರೆ, ಅದರ ಸಹಾಯದಿಂದ ರೇಟಿಂಗ್‌ಗಳು, ಫೋಟೋಗಳು ಮತ್ತು ಇತರ ಕಂಟೆಂಟ್ ಅನ್ನು ಆಸಕ್ತಿಕರ ತಾಣಗಳಿಗೆ(“POIಗಳು”) ಸಾರ್ವಜನಿಕವಾಗಿ ಪ್ರಕಟಿಸಲು ಅನುಮತಿಸುತ್ತದೆ. ನಿಮ್ಮ ಫೋಟೋ ಸಲ್ಲಿಕೆಗಳನ್ನು ನಿಮ್ಮ Apple ಖಾತೆಗೆ ಲಿಂಕ್ ಮಾಡಲಾಗಿದೆ. ರೇಟಿಂಗ್‌ಗಳು ಮತ್ತು ಫೋಟೋಗಳು ಕುರಿತು ಹೆಚ್ಚಿನ ಮಾಹಿತಿಗಾಗಿ www.apple.com/in/legal/privacy/data/en/ratings-photos ಎಂಬುದಕ್ಕೆ ಭೇಟಿ ನೀಡಿ.
ನೀವು “ಸಮಸ್ಯೆಯೊಂದನ್ನು ವರದಿ ಮಾಡಿ” ಫೀಚರ್ ಅನ್ನು ಬಳಸಿ ಸಹ ನಕ್ಷೆಯಲ್ಲಿನ ಸಮಸ್ಯೆಯನ್ನು ವರದಿ ಮಾಡಬಹುದು. ಕೆಲವು ವರದಿಗಳನ್ನು ನಿಮ್ಮ Apple ಖಾತೆಗೆ ಲಿಂಕ್ ಮಾಡಲಾಗಿದೆ. “ಸಮಸ್ಯೆಯೊಂದನ್ನು ವರದಿ ಮಾಡಿ” ಕುರಿತು ಹೆಚ್ಚಿನ ಮಾಹಿತಿಗಾಗಿ www.apple.com/in/legal/privacy/data/en/maps-report-an-issue ಎಂಬುದಕ್ಕೆ ಭೇಟಿ ನೀಡಿ.
ನಕ್ಷೆಗಳನ್ನು ವೈಯಕ್ತೀಕರಿಸುವುದು
ಭೇಟಿ ನೀಡಿದ ಸ್ಥಳಗಳು, ಕಾರ್ ಪಾರ್ಕ್ ಮಾಡಿರುವುದು, ಹೊರಡುವ ಸಮಯ, ಪಿನ್ ಮಾಡಿದ ಸ್ಥಳಗಳು ಮತ್ತು ಸಲಹೆಗಳಂತಹ (ಉದಾಹರಣೆಗೆ ಮುಂಬರುವ ತಲುಪಬೇಕಾದ ಸ್ಥಳಗಳು) ನಕ್ಷೆ ಆ್ಯಪ್‌ನಲ್ಲಿನ ಅನೇಕ ವೈಯಕ್ತಿಕಗೊಳಿಸಿದ ಫೀಚರ್‌ಗಳನ್ನು ನಿಮ್ಮ ಸಾಧನದಲ್ಲಿ ರಚಿಸಲಾದ ಡೇಟವನ್ನು ಬಳಸಿಕೊಂಡು ರಚಿಸಲಾಗಿದೆ. ಇದರಿಂದ ನಿಮ್ಮ ಸಾಧನದಿಂದ ಕಳುಹಿಸಲಾಗುವ ಡೇಟದ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
ಆದ್ಯತೆಯ ದಾರಿಗಳು ಮತ್ತು ಊಹಿಸಿದ ತಲುಪಬೇಕಾದ ಸ್ಥಳಗಳು ನ್ಯಾವಿಗೇಷನ್ ವಿನಂತಿಗಳನ್ನು ಸೂಚಿಸಲು ಮತ್ತು ಪೂರೈಸಲು Appleಗೆ ಆದ್ಯತೆಯ ಮತ್ತು ಊಹಿಸಿದ ದಾರಿಯ ಜ್ಯಾಮಿತಿಯನ್ನು ಕಳುಹಿಸುವ ಅಗತ್ಯವಿದೆ. ಈ ಮಾಹಿತಿಯು ನಿಮ್ಮ Apple ಖಾತೆಗೆ ಸಂಬಂಧಿಸಿಲ್ಲ ಮತ್ತು ಇದು ಆದ್ಯತೆಯ ದಾರಿ ಅಥವಾ ಊಹಿಸಿದ ತಲುಪಬೇಕಾದ ಸ್ಥಳ ಎಂದು Apple ತಿಳಿದುಕೊಳ್ಳುವ ಮೊದಲು ನಾವು 24 ಗಂಟೆಗಳ ಒಳಗೆ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.
ಜಾಹೀರಾತು
ನಕ್ಷೆ ಆ್ಯಪ್‌ನಲ್ಲಿ Apple ಮೂಲಕ ನೀಡಲಾಗುವ ಜಾಹೀರಾತು ಕೇವಲ ಸಂದರ್ಭೋಚಿತ ಮಾಹಿತಿಯನ್ನು ಬಳಸಿಕೊಂಡು ಸಂಬಂಧಿತ ವ್ಯಾಪಾರಗಳು ಮತ್ತು ಸೇವೆಗಳನ್ನು ಅನ್ವೇಷಿಸಲು ನಿಮಗೆ ಅನುಮತಿಸುತ್ತದೆ. ನೀವು ಹೋಗುವ ಸ್ಥಳಗಳು ಮತ್ತು ನಕ್ಷೆ ಆ್ಯಪ್‌ನಲ್ಲಿ ನೀವು ನೋಡುವ ಮತ್ತು ಸಂವಹನ ನಡೆಸುವ ಆ್ಯಡ್‌ಗಳು ನಿಮ್ಮ ಗುರುತು ಅಥವಾ ನಿಮ್ಮ Apple ಖಾತೆಯೊಂದಿಗೆ ಸಂಬಂಧಿಸಿರುವುದಿಲ್ಲ.
ನಿಮ್ಮ ಪ್ರಸ್ತುತ ಹುಡುಕಾಟ ಪದಗಳು, ನೀವು ಹುಡುಕುತ್ತಿರುವಾಗಿನ ನಕ್ಷೆಯ ವ್ಯೂ ಮತ್ತು ನೀವು ನಮಗೆ ಅನುಮತಿ ನೀಡಿದರೆ ಸಾಧನದ ಅಂದಾಜು ಸ್ಥಳವನ್ನು ಬಳಸಿಕೊಂಡು ಸಂಬಂಧಿತ ಆ್ಯಡ್‌ಗಳನ್ನು ಆಯ್ಕೆಮಾಡಬಹುದು. ಇದರ ಜೊತೆಗೆ, ನಿಮ್ಮ ಸಾಧನದ ಭಾಷೆ, ಸಾಧನದ ಪ್ರಕಾರ, OS ಆವೃತ್ತಿ ಮತ್ತು ದಿನದ ಸಮಯದ ಕುರಿತ ಮಾಹಿತಿಯನ್ನು ನಿಮಗೆ ಆ್ಯಡ್‌ಗಳನ್ನು ನೀಡಲು ಬಳಸಬಹುದು.
ನಿಮ್ಮ ಆ್ಯಡ್ ಅನುಭವವನ್ನು ಸುಧಾರಿಸಲು, ನಿಮ್ಮ ಸಾಧನವು ಯಾವ ಆ್ಯಡ್ ಅನ್ನು ಪ್ರದರ್ಶಿಸಬೇಕು ಎಂಬುದನ್ನು ನಿರ್ಧರಿಸಲು ಸೆಶನ್‌ನ ಅವಧಿಯಲ್ಲಿ ನೀವು ವೀಕ್ಷಿಸುವ ಅಥವಾ ಸಂವಹನ ನಡೆಸುವ ಕಂಟೆಂಟ್‌ನಂತಹ ಹೆಚ್ಚುವರಿ ಸಂದರ್ಭೋಚಿತ ಮಾಹಿತಿಯನ್ನು ಬಳಸಬಹುದು. ಈ ವಿಶ್ಲೇಷಣೆಯು ನೇರವಾಗಿ ನಿಮ್ಮ ಸಾಧನದಲ್ಲಿ ನಡೆಯುತ್ತದೆ ಮತ್ತು Apple ಆ್ಯಡ್‌ಗಳಿಗೆ ಅದನ್ನು ಕಳುಹಿಸಲಾಗುವುದಿಲ್ಲ. ವಯಸ್ಸಿನ ನೀತಿ, ಜಾಹೀರಾತು ಕಂಟೆಂಟ್ ಮತ್ತು ಲಭ್ಯತೆಯ ನಿರ್ಬಂಧಗಳನ್ನು ಜಾರಿಗೊಳಿಸಲು ಮತ್ತು ಸ್ಥಳೀಯ ಕಾನೂನುಗಳನ್ನು ಅನುಸರಿಸಲು ನಾವು ಆನ್-ಡಿವೈಸ್ ಲಾಜಿಕ್ ಅನ್ನು ಸಹ ಬಳಸುತ್ತೇವೆ.
ನೀವು ನಿಮ್ಮ ಸ್ಥಳವನ್ನು ಆ್ಯಕ್ಸೆಸ್ ಮಾಡಲು ನಕ್ಷೆ ಆ್ಯಪ್‌ಗೆ ಅನುಮತಿಸಿದರೆ, ನಕ್ಷೆ ಆ್ಯಪ್‌ನಲ್ಲಿ ನಿಮಗೆ ಭೌಗೋಳಿಕವಾಗಿ ಸಂಬಂಧಿತ ಆ್ಯಡ್‌ಗಳನ್ನು ಒದಗಿಸಲು ನಕ್ಷೆ ಆ್ಯಪ್ ನಿಮ್ಮ ಅಂದಾಜು ಸ್ಥಳವನ್ನು Apple ಆ್ಯಡ್‌ಗಳ ಮಾತ್ರ ಹಂಚಿಕೊಳ್ಳುತ್ತದೆ. ನಿಮ್ಮ ಯಾವುದನ್ನು ಆಯ್ಕೆಮಾಡಿದರೂ ನಿಮ್ಮ ಸ್ಥಳವನ್ನು ಜಾಹೀರಾತುದಾರರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ಸೆಟ್ಟಿಂಗ್ಸ್ > ಆ್ಯಪ್‌ಗಳು > ನಕ್ಷೆ > ಸ್ಥಳ ಎಂಬಲ್ಲಿಗೆ ಹೋಗಿ, ನಂತರ ನಿಖರವಾದ ಸ್ಥಳವನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ನಕ್ಷೆ ಆ್ಯಪ್‌ನ ಸ್ಥಳ-ಆಧಾರಿತ ಕಾರ್ಯವನ್ನು ನೀವು ನಿಷ್ಕ್ರಿಯಗೊಳಿಸಬಹುದು. Macನಲ್ಲಿ, ಸಿಸ್ಟಂ ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ ಎಂಬಲ್ಲಿಗೆ ಹೋಗಿ ಮತ್ತು ಸ್ಥಳ ಸೇವೆಗಳ ಪಟ್ಟಿಯಲ್ಲಿ ನಕ್ಷೆ ಆ್ಯಪ್ ಅನ್ನು ಆಫ್ ಮಾಡಿ. ನೀವು ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದರೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌ನಂತಹ ಕೆಲವು ನಕ್ಷೆ ಆ್ಯಪ್ ಫೀಚರ್‌ಗಳು ಲಭ್ಯವಿರುವುದಿಲ್ಲ.
ನೀವು ವೀಕ್ಷಿಸುವ ಅಥವಾ ಟ್ಯಾಪ್ ಮಾಡುವ ಆ್ಯಡ್‌ಗಳ ಕುರಿತಾದ ಮಾಹಿತಿಯು ಪ್ರತಿ ಗಂಟೆಗೆ ಹಲವು ಬಾರಿ ಬದಲಾಗುವ ಮತ್ತು ನಿಮ್ಮ ಗುರುತು ಅಥವಾ ನಿಮ್ಮ Apple ಖಾತೆಗೆ ಎಂದಿಗೂ ಕನೆಕ್ಟ್ ಆಗಿರದ ರ್‍ಯಾಂಡಮ್ ಐಡೆಂಟಿಫೈಯರ್‌ಗೆ ಸಂಬಂಧಿಸಿದೆ.
www.apple.com/in/legal/privacy/data/en/apple-advertising ಎಂಬಲ್ಲಿನ Apple ಜಾಹೀರಾತು ಮತ್ತು ಗೌಪ್ಯತೆಯ ಕುರಿತು ಇನ್ನಷ್ಟು ತಿಳಿಯಿರಿ.
ಚೀನಾದಲ್ಲಿ ನಕ್ಷೆ ಸೇವೆ
ಚೀನಾದಲ್ಲಿ Apple ನಕ್ಷೆ ಉತ್ಪನ್ನವು Amap Software Co., Ltd.ನ ಮ್ಯಾಪಿಂಗ್ ಸೇವೆಗಳನ್ನು ಬಳಸುತ್ತದೆ. ಚೀನಾದಲ್ಲಿ ನಿಮ್ಮ ನಕ್ಷೆ ಆ್ಯಪ್ ಅನ್ನು ಬಳಸಲು ನೀವು Apple ಖಾತೆಗೆ ಸೈನ್ ಇನ್ ಮಾಡುವ ಅಗತ್ಯವಿರುವುದಿಲ್ಲ, ಮತ್ತು ಸರಣಿ ರ‍್ಯಾಂಡಮ್ ಮತ್ತು ರೊಟೇಟ್ ಆಗುವ ಐಡೆಂಟಿಫೈಯರ್‌ಗಳ ಜೊತೆ ಸಂಯೋಜಿಸಲಾದ ನಿಮ್ಮ ಚಟುವಟಿಕೆಯು ನಿಮ್ಮ Apple ಖಾತೆಗೆ ಸಂಬಂಧಿಸಿರುವುದಿಲ್ಲ. ಸಂಗ್ರಹಿಸಿದ ಯಾವುದೇ ಮಾಹಿತಿಯು ವೈಯಕ್ತಿಕವಾಗಿ ನಿಮ್ಮನ್ನು ಗುರುತಿಸದಂತೆ, ನಿಮ್ಮ ಸ್ಥಳವನ್ನು ಮರೆ ಮಾಡುವುದಕ್ಕಾಗಿ ಗೌಪ್ಯತೆ-ರಕ್ಷಿಸುವ ತಂತ್ರಗಳನ್ನು ಅನ್ವಯಿಸಲು Amap ಜೊತೆಗೆ Apple ಕೆಲಸ ಮಾಡುತ್ತದೆ.
ಚೀನಾದಲ್ಲಿ ಬಳಕೆಯಲ್ಲಿರುವ ಲೈಸೆನ್ಸ್ ಪ್ಲೇಟ್ ನಿರ್ಬಂಧಗಳ ಫೀಚರ್, ನಿಮ್ಮ ಪ್ರಸ್ತುತವಿರುವ ಮಾರ್ಗ ನೆಟ್‌ವರ್ಕ್ ನಿರ್ಬಂಧಗಳು ಮತ್ತು ನಿಮ್ಮ ಲೈಸೆನ್ಸ್ ಪ್ಲೇಟ್ ಆಧರಿಸಿದ ಪರ್ಯಾಯ ಮಾರ್ಗಗಳ ಆಯ್ಕೆಗಳ ಮಾಹಿತಿಯನ್ನು ನಿಮಗೆ ಒದಗಿಸುತ್ತದೆ. Amap ಜೊತೆಗೆ ಕೆಲಸ ಮಾಡುವ ನಕ್ಷೆ ಆ್ಯಪ್ ನಿಮ್ಮ ಲೈಸೆನ್ಸ್ ಪ್ಲೇಟ್ ಅನ್ನು ಆಧರಿಸಿ ನಿರ್ಬಂಧಿತ ಪ್ರದೇಶಗಳನ್ನು ಹೊಂದಿರದ ದಾರಿಗಳನ್ನು ನಿಮಗಾಗಿ ಹುಡುಕುತ್ತದೆ. ನೀವು ಮಾರ್ಗವೊಂದನ್ನು ವಿನಂತಿಸಿದಾಗ ನಿಮ್ಮ ಲೈಸೆನ್ಸ್ ಪ್ಲೇಟ್‌ಗೆ ಯಾವ ನಿರ್ಬಂಧಗಳು ಅನ್ವಯಿಸುತ್ತವೆ ಎಂಬುದರ ಕುರಿತ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಲಾಗುತ್ತದೆ. ಇದರಿಂದ Appleಗೆ ಅಥವಾ Amapಗೆ ನಿಮ್ಮ ನೈಜ ಲೈಸೆನ್ಸ್ ಪ್ಲೇಟ್ ಅನ್ನು ನೋಡಲು ಸಾಧ್ಯವಾಗುವುದಿಲ್ಲ ಹಾಗೂ ಇದರಲ್ಲಿನ ಯಾವುದೇ ಮಾಹಿತಿ ನಿಮ್ಮ Apple ಖಾತೆಯ ಜೊತೆಗೆ ಸಂಯೋಜಿತವಾಗಿರುವುದಿಲ್ಲ.
ಥರ್ಡ್ ಪಾರ್ಟಿಗಳ ಜೊತೆಗೆ ಹಂಚಿಕೊಳ್ಳುವುದು
Apple ತಮ್ಮ ಪಾಲುದಾರರ ಜೊತೆಗೆ, ಮೂವ್‌ಮೆಂಟ್ ಡೇಟ, POI ಡೇಟ, ಹಾಗೂ ಒಟ್ಟುಗೂಡಿಸಿದ ಬಳಕೆದಾರರ ಅನಾಲಿಟಿಕ್ಸ್ ಅನ್ನು ಹಂಚಿಕೊಳ್ಳುತ್ತದೆ. ಆದರೆ, ಪಾಲುದಾರರು ಈ ಮಾಹಿತಿಯನ್ನು ಯಾವುದೇ ನಿರ್ದಿಷ್ಟ ನಕ್ಷೆ ಆ್ಯಪ್ ಬಳಕೆದಾರನ ಜೊತೆಗೆ ಸಂಯೋಜಿಸಲು ಸಾಧ್ಯವಾಗದಂತೆ ತಡೆಯಲು, ನಿರ್ದಿಷ್ಟ ಕನಿಷ್ಠ ಮಿತಿಗಳನ್ನು ಪೂರೈಸಿದರೆ ಮಾತ್ರವೇ ಡೇಟವನ್ನು ಹಂಚಿಕೊಳ್ಳಲಾಗುತ್ತದೆ.
ನೀವು ಆ್ಯಡ್ ಅನ್ನು ನೋಡಿದಾಗ ಅಥವಾ ಅದರೊಂದಿಗೆ ಸಂವಹನ ನಡೆಸಿದಾಗ, ಆ್ಯಡ್ ಇಂಪ್ರೆಶನ್‌ಗಳು ಮತ್ತು ಸಂವಹನಗಳ ಕುರಿತ ವೈಯಕ್ತಿಕವಲ್ಲದ ಮಾಹಿತಿಯನ್ನು ಹಾಗೂ ಒಟ್ಟುಗೂಡಿಸಿದ ಜಾಹೀರಾತು ಮೆಟ್ರಿಕ್ಸ್‌ಗಳನ್ನು ನಕ್ಷೆ ಆ್ಯಪ್‌ನಲ್ಲಿ ಆ್ಯಡ್‌ಗಳನ್ನು ಇರಿಸುವ ಜಾಹೀರಾತುದಾರರೊಂದಿಗೆ Apple ಹಂಚಿಕೊಳ್ಳುತ್ತದೆ.
ನೀವು CarPlay ದಾರಿ ಹಂಚಿಕೆಯನ್ನು ಸಕ್ರಿಯಗೊಳಿಸಲು ಆಯ್ಕೆಮಾಡಿದರೆ, ನೀವು ನ್ಯಾವಿಗೇಷನ್ ವಿನಂತಿಯನ್ನು ಮಾಡಲು ನಕ್ಷೆ ಆ್ಯಪ್ ಬಳಸಿದಾಗ, Apple ವಾಹನ ನ್ಯಾವಿಗೇಷನ್ ಮತ್ತು ಚಾಲಕ ಸಹಾಯ ಸಿಸ್ಟಂಗಳನ್ನು ಬೆಂಬಲಿಸಲು ನಿಮ್ಮ ಮಾರ್ಗದ ವಿವರಗಳನ್ನು ನಿಮ್ಮ ವಾಹನದೊಂದಿಗೆ ಹಂಚಿಕೊಳ್ಳುತ್ತದೆ, ಅವುಗಳಲ್ಲಿ ಇವುಗಳು ಸೇರಿವೆ:
- ನೀವು ವಿನಂತಿಯನ್ನು ಮಾಡಿದಾಗ ಮತ್ತು ನಿಮ್ಮ ದಾರಿ ಬದಲಾದಾಗಲೆಲ್ಲಾ ಇರುವ ಮೂಲ ಮತ್ತು ಸಾಧನದ ಪ್ರಸ್ತುತ ಸ್ಥಳ
- ತಲುಪಬೇಕಾದ ಸ್ಥಳ
- ಮಾರ್ಗ ರೇಖೆ
ನಿಮ್ಮ Apple ಖಾತೆಯ ಜೊತೆಗೆ ಈ ಮಾಹಿತಿಯು ಸಂಯೋಜಿತವಾಗಿಲ್ಲ. ನಿಮ್ಮ ವಾಹನವು ಬಳಸುವ ಮಾಹಿತಿಯು ವಾಹನದ ಗೌಪ್ಯತೆ ನೀತಿಗೆ ಒಳಪಟ್ಟಿರುತ್ತದೆ. ಸೆಟ್ಟಿಂಗ್ಸ್ > ಸಾಮಾನ್ಯ > CarPlay > ನನ್ನ ಕಾರ್ > ದಾರಿ ಹಂಚಿಕೆ ಎಂಬಲ್ಲಿಗೆ ಹೋಗುವ ಮೂಲಕ ನಿಮ್ಮ ವಾಹನಕ್ಕಾಗಿ CarPlay ದಾರಿ ಹಂಚಿಕೆಯನ್ನು ನೀವು ನಿಷ್ಕ್ರಿಯಗೊಳಿಸಬಹುದು.
ನೀವು ನಕ್ಷೆ ಆ್ಯಪ್ ಕುರಿತಾದ ಥರ್ಡ್ ಪಾರ್ಟಿಯ ಡೇಟ ಒದಗಿಸುವವರಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ವರದಿ ಮಾಡಿದಲ್ಲಿ, ನೀವು ವರದಿ ಮಾಡಿದ ಸಮಸ್ಯೆಯನ್ನು ಪರಿಹರಿಸಲು ಸಹಾಯವಾಗಲು ನಿಮ್ಮ ವರದಿ ಮಾಡಿದ ಸಮಸ್ಯೆಯಿಂದ ಮಾಹಿತಿಯನ್ನು Apple ಥರ್ಡ್ ಪಾರ್ಟಿಗೆ ಒದಗಿಸಬಹುದು. ಸಮಸ್ಯೆಯನ್ನು ಪರಿಹರಿಸಲು ಅಗತ್ಯವಿರುವ ಥರ್ಡ್ ಪಾರ್ಟಿಗಳೊಂದಿಗೆ ಮಾತ್ರ Apple ಮಾಹಿತಿಯನ್ನು ಹಂಚಿಕೊಳ್ಳುತ್ತದೆ ಮತ್ತು ನಿಮ್ಮನ್ನು ಗುರುತಿಸಲು ಸಹಾಯ ಮಾಡುವ ಯಾವುದೇ ಮಾಹಿತಿ ಇದ್ದರೆ ಅದನ್ನು ಹಂಚಿಕೊಳ್ಳುವ ಮೊದಲು ಡಿಲೀಟ್ ಮಾಡುತ್ತದೆ.
Appleಗೆ ಕಳುಹಿಸಲಾದ ಡೇಟವನ್ನು ವಿಶ್ವಾಸಾರ್ಹ ಸೇವಾ ಪೂರೈಕೆದಾರರು ಪ್ರಕ್ರಿಯೆಗೊಳಿಸಬಹುದು ಮತ್ತು ಸಂಗ್ರಹಿಸಬಹುದು.
ರಿಟೆನ್ಶನ್
ನಿಮ್ಮ ನಕ್ಷೆ ಆ್ಯಪ್ ಬಳಕೆಗೆ ಸಂಬಂಧಿಸಿದ ವೈಯಕ್ತಿಕ ಡೇಟವನ್ನು ನಾವು ಸಂಗ್ರಹಿಸುವುದಿಲ್ಲ ಅಥವಾ ಉಳಿಸಿಕೊಳ್ಳುವುದಿಲ್ಲ. ನಕ್ಷೆ ಆ್ಯಪ್ ಬಳಕೆಯ ಬಗ್ಗೆ ನಿಮ್ಮಲ್ಲಿ ಪ್ರಶ್ನೆಗಳು ಇದ್ದರೆ, ಅಥವಾ ನಮ್ಮ ಡೇಟ ರಕ್ಷಣಾ ಅಧಿಕಾರಿಯನ್ನು ಸಂಪರ್ಕಿಸಲು ಬಯಸಿದರೆ ನೀವು ನಮ್ಮನ್ನು ಈ ಮುಂದಿನ ವಿಳಾಸ www.apple.com/legal/privacy/contact ಎಂಬಲ್ಲಿ ಸಂಪರ್ಕಿಸಬಹುದು.
ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.
2026-05-11