Apple News ಸುದ್ದಿಪತ್ರಗಳು ಮತ್ತು ಗೌಪ್ಯತೆ

ಸಾಧನದಲ್ಲಿನ ಕೃತಕ ಬುದ್ಧಿಮತ್ತೆಯು ನೀವು ಓದಿದ್ದನ್ನು ವಿಶ್ಲೇಷಿಸುತ್ತದೆ ಮತ್ತು ಅದೇ ರೀತಿಯ ಆಸಕ್ತಿ ಹೊಂದಿರುವ ಸಾವಿರಾರು ಇತರ ಬಳಕೆದಾರರ ಜೊತೆಗೆ ನಿಮ್ಮನ್ನು ಗುಂಪು ಮಾಡುತ್ತದೆ. ನಿಮ್ಮ ಈಮೇಲ್ ಸುದ್ದಿಪತ್ರಗಳನ್ನು ವೈಯಕ್ತೀಕರಿಸಲು ಆ ಆಸಕ್ತಿಗಳ ಕುರಿತಾದ ಸಮಗ್ರ ಮಾಹಿತಿಯನ್ನು Appleಗೆ ಕಳುಹಿಸಲಾಗುತ್ತದೆ. ನಿಮ್ಮ ಸುದ್ದಿಪತ್ರಗಳಲ್ಲಿ ಸ್ಥಳೀಯ ಸುದ್ದಿಗಳನ್ನು ಸೇರಿಸಲು Apple ನಿಮ್ಮ ಬಿಲ್ಲಿಂಗ್ ಪಿನ್ ಕೋಡ್ ಅನ್ನು ಬಳಸಬಹುದು. ನೀವು ಯಾವ ಸ್ಟೋರಿಗಳನ್ನು ಓದಿದ್ದೀರಿ ಎಂಬುದು Appleಗೆ ತಿಳಿದಿರುವುದಿಲ್ಲ.
 

ನಿಮ್ಮ ಮಾಹಿತಿಯನ್ನು ರಕ್ಷಿಸುವ ಜೊತೆಯಲ್ಲೇ ವೈಯಕ್ತೀಕರಿಸಿದ ಸುದ್ದಿಪತ್ರಗಳನ್ನು ಪಡೆಯುವ ಆಯ್ಕೆಯನ್ನು ನಿಮಗೆ ನೀಡುವಂತೆ Apple News ಸುದ್ದಿಪತ್ರಗಳನ್ನು ವಿನ್ಯಾಸಗೊಳಿಸಲಾಗಿದೆ.


Privacy Icon

  • ನಿಮ್ಮ ಈಮೇಲ್ ವಿಳಾಸವನ್ನು ಒದಗಿಸುವ ಮೂಲಕ ನಮ್ಮ ಸಂಪಾದಕರು ಆಯ್ಕೆ ಮಾಡಿದ ಅತ್ಯುತ್ತಮ ಸ್ಟೋರಿಗಳ ಜೊತೆಗೆ Apple News ಸುದ್ದಿಪತ್ರವನ್ನು ಸ್ವೀಕರಿಸಲು ನೀವು ಆಯ್ಕೆ ಮಾಡಬಹುದು.
  • ಕೆಲವು ದೇಶಗಳಲ್ಲಿ, Apple News ಸುದ್ದಿಪತ್ರಗಳನ್ನು ನಿಮ್ಮ ಆಸಕ್ತಿಗೆ ಹೊಂದಿಕೊಳ್ಳುವ ಬರಹಗಳೊಂದಿಗೆ ವೈಯಕ್ತೀಕರಿಸಿದ ಆವೃತ್ತಿಗಳನ್ನು ಸ್ವೀಕರಿಸುವ ಆಯ್ಕೆಯನ್ನು ಕೂಡ ನೀವು ಮಾಡಬಹುದು.
  • News ಆ್ಯಪ್‌ನಲ್ಲಿನ ನಿಮ್ಮ ವೈಯಕ್ತೀಕರಿಸಿದ ಸುದ್ದಿಪತ್ರಗಳ ಓದುವಿಕೆಯ ಇತಿಹಾಸವನ್ನು ನಿಮ್ಮ ಸಾಧನದಲ್ಲಿ ಇರಿಸಲಾಗುತ್ತದೆ. Appleಗೆ ಕಳುಹಿಸಲಾಗುವ ಒಟ್ಟುಗೂಡಿಸಿದ ಮಾಹಿತಿಯು ನೀವು ಯಾವ ಸ್ಟೋರಿಗಳನ್ನು ಓದಿದ್ದೀರಿ ಎನ್ನುವುದನ್ನು ತೋರಿಸಲು ಸಾಧ್ಯವಿಲ್ಲದ್ದರಿಂದ, Apple ನಿಮ್ಮ ಓದಿನ ಇತಿಹಾಸವನ್ನು ತಿಳಿದಿರುವುದಿಲ್ಲ.

Apple News ಸುದ್ದಿಪತ್ರಗಳು ಯುನೈಟೆಡ್ ಸ್ಟೇಟ್ಸ್, ಕೆನಡಾ, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಕಿಂಗ್ಡಮ್‌ನಲ್ಲಿ ಲಭ್ಯವಿವೆ. ಕೆಲವು ದೇಶಗಳಲ್ಲಿ, ವೈಯಕ್ತೀಕರಿಸಿದ ಸುದ್ದಿಪತ್ರಗಳು ಸಹ ಲಭ್ಯವಿವೆ.

Apple News ಸುದ್ದಿಪತ್ರಗಳು

ನಿಮ್ಮ ಈಮೇಲ್ ವಿಳಾಸದೊಂದಿಗೆ ನೀವು Apple ಅನ್ನು ಒದಗಿಸಬಹುದು ಇದರಿಂದ Apple News ಸಂಪಾದಕರು ಆಯ್ಕೆ ಮಾಡಿದ ಅತ್ಯುತ್ತಮ ಸ್ಟೋರಿಗಳ ಜೊತೆಗೆ ನಾವು ನಿಮಗೆ ಸುದ್ದಿಪತ್ರಗಳನ್ನು ಸಹ ಈಮೇಲ್ ಮಾಡಬಹುದು. ನಿಮ್ಮ ಸುದ್ದಿಪತ್ರಗಳಲ್ಲಿ ಸ್ಥಳೀಯ ಸುದ್ದಿಗಳನ್ನು ಸೇರಿಸಲು ನಿಮ್ಮ ಬಿಲ್ಲಿಂಗ್ ಪಿನ್ ಕೋಡ್‌ನಂತಹ ನಿಮ್ಮ Apple ಖಾತೆಯ ಮಾಹಿತಿಯನ್ನು Apple ಬಳಸಬಹುದು. Apple Newsನಿಂದ ಈಮೇಲ್‌ಗಳನ್ನು ಸ್ವೀಕರಿಸುವುದನ್ನು ನೀವು ಆರಿಸಿಕೊಳ್ಳಬಹುದು ಅಥವಾ ಹೊರಗುಳಿಯಬಹುದು ಮತ್ತು News ಆ್ಯಪ್‌ನಲ್ಲಿ ನಿಮ್ಮ ಸುದ್ದಿಪತ್ರದ ಆದ್ಯತೆಗಳನ್ನು ನಿರ್ವಹಿಸಬಹುದು. iOS ಅಥವಾ iPadOS ಸಾಧನದಲ್ಲಿ, ನಿಮ್ಮ ‘ಫಾಲೋ ಮಾಡುತ್ತಿರುವುದು’ ಎಂಬ ಪಟ್ಟಿಯ ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು ನಿರ್ವಹಿಸಿ ಎಂಬುದರ ಕೆಳಗೆ, ನೋಟಿಫಿಕೇಷನ್‌ಗಳು ಮತ್ತು ಈಮೇಲ್ ಅನ್ನು ಆಯ್ಕೆಮಾಡಿ. Macನಲ್ಲಿ, ಫೈಲ್ > ನೋಟಿಫಿಕೇಷನ್‌ಗಳು ಮತ್ತು ಈಮೇಲ್ ಅನ್ನು ನಿರ್ವಹಿಸಿ ಎಂಬುದನ್ನು ಆಯ್ಕೆಮಾಡಿ. ನಿಮ್ಮ Apple ಖಾತೆ ಸೆಟ್ಟಿಂಗ್ಸ್ ಅನ್ನು ನೀವು ಎಲ್ಲಿ ನಿರ್ವಹಿಸುತ್ತೀರೋ ಅಲ್ಲಿಂದಲೇ ನೀವು ಆಯ್ಕೆ ಮಾಡಬಹುದು ಅಥವಾ ಹೊರಗುಳಿಯಬಹುದು. ನೀವು ನಿಮ್ಮ Apple ಖಾತೆ ಸೆಟ್ಟಿಂಗ್ಸ್ ಅನ್ನು iOS ಅಥವಾ iPadOS ಸಾಧನದಲ್ಲಿನ ಸೆಟ್ಟಿಂಗ್ಸ್‌ನಲ್ಲಿ, Macನಲ್ಲಿನ ಸಿಸ್ಟಂ ಸೆಟ್ಟಿಂಗ್ಸ್‌ನಲ್ಲಿ ಮತ್ತು account.apple.com/in ಎಂಬಲ್ಲಿ ನಿರ್ವಹಿಸಬಹುದು.

Apple News ವೈಯಕ್ತೀಕರಿಸಿದ ಸುದ್ದಿಪತ್ರಗಳು

ಕೆಲವು ದೇಶಗಳಲ್ಲಿ, ನೀವು Apple News ಸುದ್ದಿಪತ್ರಗಳ ವೈಯಕ್ತೀಕರಿಸಿದ ಆವೃತ್ತಿಗಳನ್ನು ಸ್ವೀಕರಿಸುವ ಆಯ್ಕೆಯನ್ನು ನೀವು ಮಾಡಬಹುದು. ವೈಯಕ್ತೀಕರಿಸಿದ ಸುದ್ದಿಪತ್ರಗಳು Apple News ಎಡಿಟರ್‌ಗಳು ಆಯ್ಕೆಮಾಡಿದ ಅತ್ಯುತ್ತಮ ಸ್ಟೋರಿಗಳನ್ನು ಮತ್ತು ನಿಮ್ಮ ಆಸಕ್ತಿಗಳಿಗೆ ಹೊಂದಿಕೆಯಾಗುವ ಎಡಿಟರ್‌ಗಳು ಆಯ್ಕೆಮಾಡಿದ ಸ್ಟೋರಿಗಳನ್ನು ಒಳಗೊಂಡಿರುತ್ತವೆ.

ನೀವು ವೈಯಕ್ತೀಕರಿಸಿದ ಸುದ್ದಿಪತ್ರಗಳನ್ನು ಸ್ವೀಕರಿಸುವುದನ್ನು ಆರಿಸಿಕೊಂಡಲ್ಲಿ,ಸಾಧನದಲ್ಲಿನ ಕೃತಕ ಬುದ್ಧಿಮತ್ತೆಯು ನೀವು ಓದಿದ್ದನ್ನು ವಿಶ್ಲೇಷಿಸುತ್ತದೆ ಮತ್ತು ಅದೇ ರೀತಿಯ ಆಸಕ್ತಿ ಹೊಂದಿರುವ ಸಾವಿರಾರು ಇತರ ಬಳಕೆದಾರರ ಜೊತೆಗೆ ನಿಮ್ಮನ್ನು ಗುಂಪು ಮಾಡುತ್ತದೆ, ನಂತರ ಆಸಕ್ತಿಗಳಿಗೆ ಸಂಬಂಧಿಸಿದ ಈ ಮಾಹಿತಿಯನ್ನು ನಿಮ್ಮ ಸುದ್ದಿಪತ್ರಗಳನ್ನು ವೈಯಕ್ತೀಕರಿಸಲು Appleಗೆ ಕಳುಹಿಸಲಾಗುತ್ತದೆ.

ನಿಮ್ಮ Apple News ಓದುವಿಕೆಯ ಇತಿಹಾಸವನ್ನು ನಿಮ್ಮ ಸಾಧನದಲ್ಲಿ ಇರಿಸಲಾಗುತ್ತದೆ. Appleಗೆ ಕಳುಹಿಸಲಾಗುವ ಒಟ್ಟುಗೂಡಿಸಿದ ಮಾಹಿತಿಯು ನೀವು ಯಾವ ಸ್ಟೋರಿಗಳನ್ನು ಓದಿದ್ದೀರಿ ಎನ್ನುವುದನ್ನು ತೋರಿಸಲು ಸಾಧ್ಯವಿಲ್ಲದ್ದರಿಂದ, Apple ನಿಮ್ಮ ಓದಿನ ಇತಿಹಾಸವನ್ನು ತಿಳಿದಿರುವುದಿಲ್ಲ. ನೀವು Apple News+ ಅನ್ನು ಸಬ್‌ಸ್ಕ್ರೈಬ್ ಮಾಡಿದಲ್ಲಿ, ನಿಮ್ಮ ಈಮೇಲ್ ಸುದ್ದಿಪತ್ರಗಳಲ್ಲಿ ಫಾಲೋ ಮಾಡುವ ಮ್ಯಾಗಜೀನ್‌ಗಳ ಹೊಸ ಸಂಚಿಕೆಗಳನ್ನೂ ಕೂಡ ನೀವು ಸ್ವೀಕರಿಸುವಿರಿ. ನೀವು ಫಾಲೋ ಮಾಡುವ Apple News+ ಚಾನಲ್‌ಗಳ ಪಟ್ಟಿಯನ್ನು Appleಗೆ ಕಳುಹಿಸಲಾಗುತ್ತದೆ ಮತ್ತು ನಿಮ್ಮ Apple ಖಾತೆಗೆ ಲಿಂಕ್ ಮಾಡಲಾಗುತ್ತದೆ.

ವೈಯಕ್ತೀಕರಿಸಿದ ಸುದ್ದಿಪತ್ರಿಕೆಗಳನ್ನು ಸ್ವೀಕರಿಸಲು ಬಯಸದಿದ್ದಾಗ, News ಆ್ಯಪ್‌ನಿಂದ ಹೊರಗುಳಿಯುವುದನ್ನು ಆರಿಸಿಕೊಳ್ಳಬಹುದು. iOS ಅಥವಾ iPadOS ಸಾಧನದಲ್ಲಿ, ನಿಮ್ಮ ‘ಫಾಲೋ ಮಾಡುತ್ತಿರುವುದು’ ಎಂಬ ಪಟ್ಟಿಯ ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು ನಿರ್ವಹಿಸಿ ಎಂಬುದರ ಕೆಳಗೆ, ನೋಟಿಫಿಕೇಷನ್‌ಗಳು ಮತ್ತು ಈಮೇಲ್ ಅನ್ನು ಆಯ್ಕೆಮಾಡಿ. Macನಲ್ಲಿ, ಫೈಲ್ > ನೋಟಿಫಿಕೇಷನ್‌ಗಳು ಮತ್ತು ಈಮೇಲ್ ಅನ್ನು ನಿರ್ವಹಿಸಿ ಎಂಬುದನ್ನು ಆಯ್ಕೆಮಾಡಿ. ನಿಮ್ಮ Apple ಖಾತೆ ಸೆಟ್ಟಿಂಗ್ಸ್ ಅನ್ನು ನೀವು ಎಲ್ಲಿ ನಿರ್ವಹಿಸುತ್ತೀರೋ ಅಲ್ಲಿಂದಲೇ ನೀವು ಹೊರಗುಳಿಯಬಹುದು. ನೀವು ನಿಮ್ಮ Apple ಖಾತೆ ಸೆಟ್ಟಿಂಗ್ಸ್ ಅನ್ನು iOS ಅಥವಾ iPadOS ಸಾಧನದಲ್ಲಿನ ಸೆಟ್ಟಿಂಗ್ಸ್‌ನಲ್ಲಿ, Macನಲ್ಲಿನ ಸಿಸ್ಟಂ ಸೆಟ್ಟಿಂಗ್ಸ್‌ನಲ್ಲಿ ಮತ್ತು account.apple.com/in ಎಂಬಲ್ಲಿ ನಿರ್ವಹಿಸಬಹುದು.

ವೈಯಕ್ತೀಕರಿಸಿದ ಸುದ್ದಿಪತ್ರಿಕೆಗಳು ಲಭ್ಯವಿರುವ ದೇಶಗಳಲ್ಲಿ ಸ್ವೀಕರಿಸಲು ಬಯಸಿದಲ್ಲಿ, ನೀವು News ಆ್ಯಪ್‌ನಿಂದ ಆರಿಸಿಕೊಳ್ಳುವ ಅಗತ್ಯವಿದೆ. ಇದಲ್ಲದೇ, ನೀವು ಸೆಟ್ಟಿಂಗ್ಸ್, ಸಿಸ್ಟಂ ಸೆಟ್ಟಿಂಗ್ಸ್ ಅಥವಾ account.apple.com/in ಪುಟದಿಂದ ಆರಿಸಿಕೊಂಡಾಗ ವೈಯಕ್ತೀಕರಿಸದೆ ಇರುವ ಸುದ್ದಿಪತ್ರಗಳನ್ನು ಸ್ವೀಕರಿಸುವಿರಿ.

ವೈಯುಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುವುದಕ್ಕಾಗಿ ಅನ್ವಯವಾಗುವ ಕಾನೂನುಬದ್ಧ ಆಧಾರ

Apple News ಸುದ್ದಿಪತ್ರಗಳಿಗಾಗಿ ನಿಮ್ಮ ವೈಯುಕ್ತಿಕ ಡೇಟವನ್ನು ನಿಮ್ಮ ಸಮ್ಮತಿಯನ್ನು ಆಧರಿಸಿ ಹಾಗೂ ನಮ್ಮ ಕಾನೂನುಬದ್ಧ ಹಿತಾಸಕ್ತಿಗಳ ಉದ್ದೇಶಗಳಿಗೆ ಅಗತ್ಯವಾದ ರೀತಿಯಲ್ಲಿ ನಾವು ಪ್ರಕ್ರಿಯೆಗೊಳಿಸುತ್ತೇವೆ. ಅನ್ವಯವಾಗುವ ಸ್ಥಳೀಯ ಕಾನೂನುಗಳು ಅನುಮತಿಸಿದಲ್ಲಿ, ಕಾನೂನುಬದ್ಧ ಹಿತಾಸಕ್ತಿಯ ಉದ್ದೇಶಗಳಿಗೆ ಅಗತ್ಯವಾದ ಹಾಗೆ ಈ ಕೆಳಗಿನ ಪ್ರಕಾರದ ವೈಯುಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುತ್ತೇವೆ:

  • ನಿಮ್ಮ ಈಮೇಲ್ ವಿಳಾಸ, Apple ಸೇವೆಗಳಿಗೆ ಸಬ್‌ಸ್ಕ್ರಿಪ್ಷನ್‌ಗಳು, ಮತ್ತು ಬಿಲ್ ಮಾಡುವ ಜಿಪ್‌ಕೋಡ್‌ನಂತಹ ನಿಮ್ಮ ಖಾತೆಯ ಮಾಹಿತಿ
  • ನೀವು ಫಾಲೋ ಮಾಡುವ ಚಾನಲ್‌ಗಳು

ಈ ಕಾನೂನುಬದ್ಧ ಆಸಕ್ತಿಗಳಲ್ಲಿ ನಿಮಗೆ ವೈಯಕ್ತೀಕರಿಸಿದ Apple News ಸುದ್ದಿಪತ್ರಗಳನ್ನು ಕಳುಹಿಸುವುದೂ ಸೇರಿದೆ.

ರಿಟೆನ್ಶನ್

ನಾವು Apple Newsಗೆ ಸಂಬಂಧಿಸಿದ ವೈಯಕ್ತಿಕ ಡೇಟವನ್ನು ನಮಗೆ ಉದ್ಯಮದ ಅಗತ್ಯವಿರುವವರೆಗೆ, ಒಪ್ಪಂದಗಳ ಬಾಧ್ಯತೆಗಳು, ಅಥವಾ ಕಾನೂನು ಅಗತ್ಯವಿರುವವರೆಗೆ ಮಾತ್ರವೇ ಉಳಿಸಿಕೊಳ್ಳುತ್ತೇವೆ. ಸಬ್‌ಸ್ಕ್ರಿಪ್ಷನ್ ಖರೀದಿ ಇತಿಹಾಸದಂತಹ ಕೆಲವು ಮಾಹಿತಿ, ಆದರೆ ನಿಮ್ಮ ಸಂಗ್ರಹಿಸಿದ ಕಾರ್ಡ್ ಮಾಹಿತಿಯಂತಲ್ಲದ ವಿವರಗಳನ್ನು ಉದ್ಯಮ ದಾಖಲೆಗಳಿಗಾಗಿ ನೀವು ಖಾತೆಯನ್ನು ಮುಚ್ಚಿದ ನಂತರವೂ ಅಥವಾ Apple News+ನಿಂದ ಅನ್‌ಸಬ್‌ಸ್ಕ್ರೈಬ್ ಆದ ನಂತರವೂ ಉಳಿಸಿಕೊಳ್ಳಬಹುದು. ರಿಟೆನ್ಷನ್ ಅವಧಿಯನ್ನು ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಮೊದಲಿಗೆ ಸಂಗ್ರಹಿಸಿದ ವೈಯಕ್ತಿಕ ಡೇಟವನ್ನು ಉಳಿಸಿಕೊಳ್ಳುವುದು ಅಗತ್ಯವೇ ಎಂದು ಜಾಗರೂಕವಾಗಿ ಪರೀಕ್ಷಿಸುತ್ತೇವೆ, ನಂತರ ರಿಟೆನ್ಷನ್ ಅಗತ್ಯವಿದ್ದಲ್ಲಿ, ಕಾನೂನಿನ ಅಡಿಯಲ್ಲಿ ಅವಕಾಶ ನೀಡಲಾಗಿರುವ ಅತಿ ಕಡಿಮೆ ಅವಧಿಗೆ ವೈಯಕ್ತಿಕ ಡೇಟವನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇವೆ.

ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು

2025-12-12