Apple News ಮತ್ತು ಗೌಪ್ಯತೆ
ನಿಮ್ಮ ಮಾಹಿತಿಯನ್ನು ಕಾಪಾಡಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವುದಕ್ಕೆ ಅನುವುಮಾಡಿಕೊಡಲು Apple News+ ಒಳಗೊಂಡಂತೆ Apple News ಅನ್ನು ವಿನ್ಯಾಸಗೊಳಿಸಲಾಗಿದೆ.
![]()
- News ಮತ್ತು ಸ್ಟಾಕ್ಸ್‌ನಲ್ಲಿ ನಿಮ್ಮ ಓದುವ ಮತ್ತು ಆಲಿಸುವ ಚಟುವಟಿಕೆಯು ನಿರ್ದಿಷ್ಟವಾಗಿ News ಮತ್ತು ಸ್ಟಾಕ್ಸ್‌ಗೆ ಸಂಬಂಧಿಸಿದ ಐಡೆಂಟಿಫೈಯರ್‌ಗಳಿಗೆ ಲಿಂಕ್ ಮಾಡಲಾಗಿದೆ ಮತ್ತು ನಿಮ್ಮ Apple ಖಾತೆ ಅಥವಾ ಇತರ Apple ಸೇವೆಗಳ ಜೊತೆಗೆ ಸಂಯೋಜಿಸಿರುವುದಿಲ್ಲ.
- ನಿಮ್ಮ ವೈಯಕ್ತಿಕ ಆಸಕ್ತಿಗಳಿಗೆ ತಕ್ಕಂತೆ ಫೀಚರ್‌ಗಳನ್ನು ವೈಯಕ್ತೀಕರಿಸಲು ನೀವು Apple News ಅನ್ನು ಹೇಗೆ ಬಳಸುತ್ತೀರಿ ಎಂಬುದರ ಕುರಿತಾದ ಮಾಹಿತಿಯನ್ನು ನಾವು ಬಳಸುತ್ತೇವೆ. ಈ ಮಾಹಿತಿಯು ನಿಮ್ಮ Apple ಖಾತೆಯೊಂದಿಗೆ ಸಂಬಂಧಿಸಿಲ್ಲ.
- News ಹಾಗೂ ಸ್ಟಾಕ್ಸ್ ಆ್ಯಪ್‌ಗಳಲ್ಲಿನ ಜಾಹೀರಾತುಗಳು ನಿಮಗೆ ಸೂಕ್ತವಾಗಿದೆಯೆಂದು ಖಚಿತಪಡಿಸಿಕೊಳ್ಳಲು ನಾವು ನಿಮ್ಮ ಖಾತೆ, ನೀವು ಓದುವ ಲೇಖನಗಳ ವಿಷಯಗಳು ಹಾಗೂ ಅವುಗಳ ವರ್ಗಗಳು, ಹಾಗೂ ನೀವು ಫಾಲೋ ಮಾಡುವ, ಸಬ್‌ಸ್ಕ್ರೈಬ್ ಮಾಡುವ, ಅಥವಾ ನೋಟಿಫಿಕೇಷನ್‌ಗಳನ್ನು ಆನ್ ಮಾಡಿರುವ ಪ್ರಕಾಶನಗಳ ಬಗೆಗಿನ ಮಾಹಿತಿಯನ್ನು ಬಳಸಬಹುದು. ನಾವು App Storeನಲ್ಲಿ ನಿಮ್ಮ ಜಾಹೀರಾತುಗಳನ್ನು ವೈಯಕ್ತೀಕರಿಸಲು ಕೂಡ ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳ ಬಗೆಗಿನ ಮಾಹಿತಿಯನ್ನು ಬಳಸಬಹುದು. ಕೆಳಗೆ ವಿವರಿಸಿದಂತೆ ನೀವು ಈ ಜಾಹೀರಾತಿಗೆ ಸಂಬಂಧಿಸಿದಂತೆ ಆಯ್ಕೆಗಳನ್ನು ಹೊಂದಿದ್ದೀರಿ.
- Apple Newsನಲ್ಲಿ ಬಳಸಬಹುದಾದ ಯಾವುದೇ ಸಕ್ರಿಯ ಸಬ್‌ಕ್ರಿಪ್ಶನ್‌ಗಳಿಗೆ ನಿಮ್ಮ Apple ಖಾತೆಯನ್ನು ನಾವು ಪರಿಶೀಲಿಸುತ್ತೇವೆ.
- ನೀವು ಒಂದು ಚಾನಲ್‌ಗಾಗಿ ನೋಟಿಫಿಕೇಷನ್‌ಗಳನ್ನು ಆನ್ ಮಾಡಿದಾಗ, ನಾವು ಆ ಚಾನಲ್ ಅನ್ನು ನಿಮ್ಮ Apple ಖಾತೆಯ ಜೊತೆಗೆ ಸಂಯೋಜಿಸಬಹುದು.
ನಿಮ್ಮ ಮಾಹಿತಿಯ ಗೌಪ್ಯತೆ ಮತ್ತು ಭದ್ರತೆಯನ್ನು ರಕ್ಷಿಸುವುದು Appleನಲ್ಲಿರುವ ಪ್ರತಿಯೊಬ್ಬರ ಆದ್ಯತೆಯಾಗಿದೆ. ನಿಮ್ಮ ಅನುಭವವನ್ನು ಉತ್ತಮಗೊಳಿಸಲು ನಮಗೆ ಅಗತ್ಯವಿರುವ ಡೇಟವನ್ನು ಮಾತ್ರ ಸಂಗ್ರಹಿಸಲು ನಾವು ಶ್ರಮಿಸುತ್ತೇವೆ. ನಾವು ಡೇಟವನ್ನು ಸಂಗ್ರಹಿಸಿದಾಗ, ನಾವು ಏನನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ನಮಗೆ ಅದರ ಅಗತ್ಯ ಏಕಿದೆ ಎಂಬುದು ನಿಮಗೆ ತಿಳಿದಿದ್ದರೆ ನೀವು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಅದು ನೆರವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಪ್ರತಿಯೊಂದು Apple ಉತ್ಪನ್ನ ಮತ್ತು ಸೇವೆಯಂತೆ, ಈ ತತ್ವಗಳನ್ನು ಗಮನದಲ್ಲಿಟ್ಟುಕೊಂಡು Apple News ಅನ್ನು ವಿನ್ಯಾಸಗೊಳಿಸಲಾಗಿದೆ.
Apple News ಅನ್ನು ಒದಗಿಸುತ್ತಿದೆ
ನೀವು ಓದುವ ಮತ್ತು ನೋಡುವ ಸ್ಟೋರಿಗಳು ನಿಮ್ಮ ವೈಯಕ್ತಿಕ ವಿಷಯ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಅದಕ್ಕಾಗಿಯೇ ನಾವು News ಮತ್ತು ಸ್ಟಾಕ್ಸ್ ಆ್ಯಪ್‌ಗಳನ್ನು ವಿನ್ಯಾಸಗೊಳಿಸಿದ್ದೇವೆ ಇದರಿಂದ ನಿಮ್ಮ ಓದುವ ಮತ್ತು ಆಲಿಸುವ ಚಟುವಟಿಕೆ ಮತ್ತು ನೀವು Apple News ಅನ್ನು ಹೇಗೆ ಬಳಸುತ್ತೀರಿ ನಿಮ್ಮ Apple ಖಾತೆಗೆ ಸಂಬಂಧಿಸಿರುವುದಿಲ್ಲ ಮತ್ತು ಯಾವುದೇ ಇತರ Apple ಸೇವೆಗೆ ಲಿಂಕ್ ಮಾಡುವುದಿಲ್ಲ. ನಾವು ಸಂಗ್ರಹಿಸುವ ಡೇಟವು News ಮತ್ತು ಸ್ಟಾಕ್ಸ್ ಆ್ಯಪ್‌ಗಳ ನಿರ್ದಿಷ್ಟ ಐಡೆಂಟಿಫೈಯರ್ ಜೊತೆಗೆ ಸಂಯೋಜಿತವಾಗಿದೆ.
ನಿಮ್ಮ ವೈಯಕ್ತಿಕ ಆಸಕ್ತಿಗಳಿಗೆ ತಕ್ಕಂತೆ ಫೀಚರ್‌ಗಳನ್ನು ವೈಯಕ್ತೀಕರಿಸಲು, ನೀವು Apple News ಅನ್ನು ಹೇಗೆ ಬಳಸುತ್ತೀರಿ ಎಂಬುದರ ಕುರಿತಾದ ಮಾಹಿತಿಯನ್ನು Apple ಸಂಗ್ರಹಿಸುತ್ತದೆ. ಉದಾಹರಣೆಗೆ, ಇಂದು ಎಂಬ ಫೀಚರ್ ನಿಮ್ಮ ಮೆಚ್ಚಿನ ಚಾನಲ್‌ಗಳು ಮತ್ತು ವಿಷಯಗಳಿಂದ ನಿಮಗಾಗಿ ಅತ್ಯುತ್ತಮ ಸ್ಟೋರಿಗಳನ್ನು ಹೈಲೈಟ್ ಮಾಡುವ ವೈಯಕ್ತಿಕ ಸುದ್ದಿ ಫೀಡ್ ಅನ್ನು ನಿಮಗೆ ಒದಗಿಸುತ್ತದೆ. ನೀವು ಯಾವ ಸ್ತೋರಿಗಳನ್ನು ಓದುತ್ತೀರಿ, ಸೇವ್ ಮಾಡುತ್ತೀರಿ ಅಥವಾ ಹಂಚಿಕೊಳ್ಳುತ್ತೀರಿ ಮತ್ತು ನೀವು ಫಾಲೋ ಮಾಡುವ ವಿಷಯಗಳು ಮತ್ತು ಚಾನಲ್‌ಗಳನ್ನು ಒಳಗೊಂಡಂತೆ, Apple News ಜೊತೆಗಿನ ನಿಮ್ಮ ಸಂವಹನಗಳ ಕುರಿತಾದ ಮಾಹಿತಿಯನ್ನು ಸಂಗ್ರಹಿಸುವ ಮೂಲಕ Apple ಈ ಫೀಚರ್‌ಗಳನ್ನು ಸಾಧ್ಯವಾಗಿಸುತ್ತದೆ.
ನಿಮ್ಮ ಸಾಧನದಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ಆಧರಿಸಿ Apple Newsನಲ್ಲಿ ಶಿಫಾರಸುಗಳನ್ನು ಮಾಡಲಾಗುತ್ತದೆ. ನಿಮ್ಮ iOS ಸಾಧನದಲ್ಲಿ ನಿಮ್ಮ ಓದುವಿಕೆ ಮತ್ತು ಆಲಿಸುವಿಕೆ ಇತಿಹಾಸವನ್ನು ತೆರವುಗೊಳಿಸಲು, ಅನುಸರಿಸುತ್ತಿರುವುದು > ಇತಿಹಾಸ ಎಂಬಲ್ಲಿಗೆ ಹೋಗಿ ಮತ್ತು ತೆರವುಗೊಳಿಸಿ ಎಂಬುದನ್ನು ಟ್ಯಾಪ್ ಮಾಡಿ. ನಿಮ್ಮ iPadOS ಸಾಧನದಲ್ಲಿ, ಇತಿಹಾಸ ಎಂಬಲ್ಲಿಗೆ ಹೋಗಿ ಮತ್ತು ತೆರವುಗೊಳಿಸಿ ಎಂಬುದನ್ನು ಟ್ಯಾಪ್ ಮಾಡಿ. Macನಲ್ಲಿ, News > ಇತಿಹಾಸವನ್ನು ತೆರವುಗೊಳಿಸಿ ಎಂಬಲ್ಲಿಗೆ ಹೋಗಿ ಮತ್ತು ಇತಿಹಾಸವನ್ನು ತೆರವುಗೊಳಿಸಿ ಕ್ಲಿಕ್ ಮಾಡಿ. News ಮತ್ತು ಸ್ಟಾಕ್ಸ್‌ಗೆ ಬಳಸಿದ ಐಡೆಂಟಿಫೈಯರ್ ಅನ್ನೂ ಇದು ರೀಸೆಟ್ ಮಾಡುತ್ತದೆ. ನೀವು ಸೆಟ್ಟಿಂಗ್ಸ್ > ಆ್ಯಪ್‌ಗಳು > News ಎಂಬಲ್ಲಿಗೆ ಹೋಗಿ, ನಂತರ ಐಡೆಂಟಿಫೈಯರ್ ರೀಸೆಟ್ ಮಾಡಿ ಎಂಬುದನ್ನು ಆನ್ ಮಾಡಿ ಎನ್ನುವುದನ್ನು ಟ್ಯಾಪ್ ಮಾಡುವ ಮೂಲಕವೂ ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ನಿಮ್ಮ ಓದುವಿಕೆ ಮತ್ತು ಆಲಿಸುವಿಕೆಯ ಇತಿಹಾಸವನ್ನು ತೆರವುಗೊಳಿಸದೆಯೇ ನೀವು ಐಡೆಂಟಿಫೈಯರ್ ಅನ್ನು ರೀಸೆಟ್ ಮಾಡಬಹುದು. Macನಲ್ಲಿ, News ಆ್ಯಪ್ ಅನ್ನು ತೆರೆಯಿರಿ, ನಂತರ ಸುದ್ದಿ > ಇತಿಹಾಸವನ್ನು ತೆರವುಗೊಳಿಸಿ ಎಂಬಲ್ಲಿಗೆ ಹೋಗಿ ಹಾಗೂ ಐಡೆಂಟಿಫೈಯರ್ ಅನ್ನು ರೀಸೆಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
Apple Newsನಲ್ಲಿ ಚಾನಲ್‌ಗಾಗಿ ನೀವು ನೋಟಿಫಿಕೇಷನ್‌ಗಳನ್ನು ಆನ್ ಮಾಡಿದಾಗ, ಆ ಚಾನಲ್‌ನಿಂದ ಪ್ರಮುಖ ಸ್ಟೋರಿಗಳು ಮತ್ತು ಹೊಸ ಸಂಚಿಕೆಗಳ ಬಗ್ಗೆ ನಿಮಗೆ ಸೂಚಿಸಲು ಆ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ ಹಾಗೂ ಅಂತಹ ಮಾಹಿತಿಯನ್ನು ನಿಮ್ಮ Apple ಖಾತೆಯೊಂದಿಗೆ ಸಂಯೋಜಿಸಬಹುದು. (ಹೊಸ ಸಂಚಿಕೆಯ ನೋಟಿಫಿಕೇಷನ್‌ಗಳು Apple News+ ಸಬ್‌ಸ್ಕ್ರೈಬರ್‌ಗಳಿಗೆ ಮತ್ತು iOS ಮತ್ತು iPadOS ಸಾಧನಗಳಲ್ಲಿ ಮಾತ್ರ ಲಭ್ಯವಿದೆ.) ನೀವು ಲೈವ್ ಚಟುವಟಿಕೆಯ ಜೊತೆಗೆ ಇವೆಂಟ್ ಅನ್ನು ಫಾಲೋ ಮಾಡುತ್ತಿರುವಾಗ, ಆ ಇವೆಂಟ್‌ನ ಅವಧಿಯಲ್ಲಿ ನಿಮಗೆ ಅಪ್‌ಡೇಟ್‌ಗಳನ್ನು ಕಳುಹಿಸಲು ನಿಮ್ಮ Apple ಖಾತೆ ಜೊತೆಗೆ ಇವೆಂಟ್ ಅನ್ನು ಸಂಯೋಜಿಸಬಹುದು.
ನೀವು Apple Newsನಲ್ಲಿ ಹುಡುಕಾಟವನ್ನು ಬಳಸಿದಾಗ, ನಿಮಗೆ ಸೂಕ್ತವೆನಿಸುವ ಹುಡುಕಾಟದ ಫಲಿತಾಂಶಗಳನ್ನು ಒದಗಿಸಲು ಮತ್ತು ಹುಡುಕಾಟವನ್ನು ಸುಧಾರಿಸಲು ನಿಮ್ಮ ಹುಡುಕಾಟ ಪ್ರಶ್ನೆಯ ಜೊತೆಗೆ ಸಬ್‌ಸ್ಕ್ರಿಪ್ಶನ್‌ಗಳು ಸೇರಿದಂತೆ ಮಾಹಿತಿಯನ್ನು Appleಗೆ ಕಳುಹಿಸಲಾಗುತ್ತದೆ. ಈ ಮಾಹಿತಿಯು ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿಲ್ಲ.
ನಿಮ್ಮ ಸ್ಥಳವನ್ನು ಆ್ಯಕ್ಸೆಸ್ ಮಾಡಲು Apple Newsಗೆ ನೀವು ಅನುಮತಿಸಿದರೆ, ಸ್ಥಳೀಯವಾಗಿ ಪ್ರಸ್ತುತವೆನಿಸುವ ಮಾಹಿತಿಯಾದ ಸ್ಥಳೀಯ ಸುದ್ದಿ, ಹವಾಮಾನ, ಹುಡುಕಾಟ ಫಲಿತಾಂಶಗಳು ಹಾಗೂ ಜಾಹೀರಾತುಗಳನ್ನು ಒದಗಿಸಲು ನಿಮ್ಮ ನಿಖರವಾದ ಸ್ಥಳವನ್ನು ಬಳಸಬಹುದು. ಹೆಚ್ಚುವರಿಯಾಗಿ, Apple Newsನಲ್ಲಿನ ನಿಮ್ಮ ಚಟುವಟಿಕೆ ಮತ್ತು ನಿಮ್ಮ ಸ್ಥಳವನ್ನು ಆಧರಿಸಿ ನಿಮಗೆ ಚಾನಲ್‌ಗಳು ಹಾಗೂ ವಿಷಯಗಳನ್ನು ಸೂಚಿಸಬಹುದು. ಸ್ಥಳೀಯವಾಗಿ ಸೂಕ್ತವಾದ ಮಾಹಿತಿಯನ್ನು ಹುಡುಕಲು ನೀವು ಹಸ್ತಚಾಲಿತವಾಗಿ ಸ್ಥಳ ಅಥವಾ ಪಿನ್ ಕೋಡ್ ಅನ್ನು ಸಹ ನಮೂದಿಸಬಹುದು. ಈ ಮಾಹಿತಿಯು ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿಲ್ಲ.
ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳಿಗೆ ಹೋಗಿ, News ಆ್ಯಪ್ ಟ್ಯಾಪ್ ಮಾಡಿ, ನಂತರ ಎಂದಿಗೂ ಬೇಡ ಎಂಬುದನ್ನು ಆಯ್ಕೆ ಮಾಡುವ ಮೂಲಕ ನಿಮ್ಮ iOS ಅಥವಾ iPadOS ಸಾಧನದಲ್ಲಿ ನೀವು ಯಾವುದೇ ಸಮಯದಲ್ಲಿ ಸ್ಥಳ ಆಧಾರಿತ ಕಾರ್ಯನಿರ್ವಹಣೆಯಿಂದ ಹೊರಗುಳಿಯಲು ಆಯ್ಕೆಮಾಡಬಹುದು. Macನಲ್ಲಿ, ಸಿಸ್ಟಂ ಸೆಟ್ಟಿಂಗ್ > ಗೌಪ್ಯತೆ ಮತ್ತು ಭದ್ರತೆ > ಗೌಪ್ಯತೆ > ಸ್ಥಳ ಸೇವೆಗಳು, ನಂತರ News ಆ್ಯಪ್ ಆಯ್ಕೆಯನ್ನು ರದ್ದುಮಾಡಿ.
Siri, ನೀವು ಬಳಸುವ ಆ್ಯಪ್‌ಗಳಿಂದ ಮತ್ತು Safari ಬಳಸಿ ಭೇಟಿ ನೀಡುವ ವೆಬ್‌ಸೈಟ್‌ಗಳಿಂದ ಪಡೆದ ಮಾಹಿತಿಯನ್ನು ಬಳಸಿದ ಸಾಧನದಲ್ಲಿ ಪ್ರಕ್ರಿಯೆಗೊಳಿಸುವುದನ್ನು ಆಧರಿಸಿ ನೀವು ಇಷ್ಟಪಡಬಹುದಾದ ಸ್ಟೋರಿಗಳು, ಚಾನಲ್‌ಗಳು ಹಾಗೂ ವಿಷಯಗಳನ್ನು ಸೂಚಿಸುತ್ತದೆ. ಈ ಮಾಹಿತಿಯನ್ನು Appleಗೆ ಕಳುಹಿಸಲಾಗುವುದಿಲ್ಲ. ಸೆಟ್ಟಿಂಗ್ಸ್ > ಆ್ಯಪ್‌ಗಳು > News > Siri & ಹುಡುಕಾಟ ಎಂಬಲ್ಲಿಗೆ ಹೋಗಿ, ಆ್ಯಪ್‌ನಲ್ಲಿ ತೋರಿಸಿ ಎನ್ನುವುದನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ, ನಿಮ್ಮ iOS ಅಥವಾ iPadOS ಸಾಧನದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ನೀವು ಇದನ್ನು ನಿಷ್ಕ್ರಿಯಗೊಳಿಸಬಹುದು. ನಿಮ್ಮ visionOS ಸಾಧನದಲ್ಲಿ, ಸೆಟ್ಟಿಂಗ್ಸ್ > ಆ್ಯಪ್‌ಗಳು > News ಎಂಬಲ್ಲಿಗೆ ಹೋಗಿ, ನಂತರ ಆ್ಯಪ್‌ನಲ್ಲಿ ತೋರಿಸಿ ಆಯ್ಕೆಯನ್ನು ಆಫ್ ಮಾಡಲು ಟ್ಯಾಪ್ ಮಾಡಿ. Macನಲ್ಲಿ, ಸಿಸ್ಟಂ ಸೆಟ್ಟಿಂಗ್ಸ್ > Siri & Spotlight, ನಂತರ Siri ಸಲಹೆಗಳು ಮತ್ತು ಗೌಪ್ಯತೆಯನ್ನು ಕ್ಲಿಕ್ ಮಾಡಿ, ನಂತರ News ಕ್ಲಿಕ್ ಮಾಡಿ, ಆ್ಯಪ್‌ನಲ್ಲಿ Siri ಸಲಹೆಗಳನ್ನು ತೋರಿಸಿ ಆಯ್ಕೆಯನ್ನು ರದ್ದುಮಾಡಿ.
ನಿಮಗೆ ಅನುಕೂಲವಾಗುವಂತೆ, Apple News ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ ಅನುಭವದ ಅಂಶಗಳನ್ನು ಅಪ್ ಟು ಡೇಟ್ ಆಗಿರಿಸಲು iCloud ಅನ್ನು ಬಳಸುತ್ತದೆ. ಉದಾಹರಣೆಗೆ, ನೀವು ಯಾವ ಚಾನಲ್‌ಗಳು ಮತ್ತು ವಿಷಯಗಳನ್ನು ಫಾಲೋ ಮಾಡುತ್ತಿರುವಿರಿ, ನಿಮ್ಮ ಓದುವಿಕೆ ಮತ್ತು ಆಲಿಸುವಿಕೆಯ ಇತಿಹಾಸ ಹಾಗೂ ಓದುವಿಕೆ ಮತ್ತು ಆಲಿಸುವಿಕೆಯ ಆದ್ಯತೆಗಳು ಮತ್ತು ನಿಮ್ಮ ರೆಸಿಪಿ ರೇಟಿಂಗ್‌ಗಳು ಹಾಗೂ ಟಿಪ್ಪಣಿಗಳನ್ನು ನೆನಪಿಟ್ಟುಕೊಳ್ಳಲು, Apple News, iCloud ಅನ್ನು ಬಳಸುವುದರಿಂದ ನಿಮ್ಮ ಯಾವುದೇ ಸಾಧನಗಳಿಂದ ಅದೇ Apple News ಅನುಭವವನ್ನು ನೀವು ಆನಂದಿಸಬಹುದು. ನಿಮ್ಮ ಓದುವಿಕೆ ಮತ್ತು ಆಲಿಸುವಿಕೆಯ ಇತಿಹಾಸವನ್ನು ಮೂರು ತಿಂಗಳವರೆಗೆ ಸಂಗ್ರಹಿಸಲಾಗುತ್ತದೆ. ನೀವು ಚಾನಲ್ ಅಥವಾ ವಿಷಯವನ್ನು ಅನ್‌ಫಾಲೋ ಮಾಡಿದಲ್ಲಿ, ನಿಮ್ಮ ಸೇವ್ ಮಾಡಿದ ಸ್ಟೋರಿಗಳಿಂದ ಒಂದು ಸ್ಟೋರಿಯನ್ನು ತೆಗೆದುಹಾಕಿದರೆ ಅಥವಾ ನಿಮ್ಮ ಓದುವಿಕೆ ಇತಿಹಾಸದಿಂದ ಒಂದು ಸ್ಟೋರಿಯನ್ನು ಡಿಲೀಟ್ ಮಾಡಿದರೆ, ಆ ಮಾಹಿತಿಯು ನಿಮ್ಮ Appleನ ಸರ್ವರ್‌ಗಳಿಂದ ತಕ್ಷಣವೇ ಡಿಲೀಟ್ ಮಾಡಲಾಗುತ್ತದೆ. Apple Newsಗೆ iCloud ಅನ್ನು ಆಫ್ ಮಾಡುವ ಮೂಲಕ ಯಾವುದೇ ಸಮಯದಲ್ಲಿ ಈ ಸಾಮರ್ಥ್ಯವನ್ನು ನೀವು ನಿಷ್ಕ್ರಿಯಗೊಳಿಸಬಹುದು. ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ಇದೇ ರೀತಿ ಮಾಡಲು, ಸೆಟ್ಟಿಂಗ್ಸ್ > [ನಿಮ್ಮ ಹೆಸರು] > iCloud ಎಂಬಲ್ಲಿಗೆ ಹೋಗಿ, ನಂತರ News ಆ್ಯಪ್ ಅನ್ನು ಆಫ್ ಮಾಡಲು ಟ್ಯಾಪ್ ಮಾಡಿ. Macನಲ್ಲಿ, ಸಿಸ್ಟಂ ಸೆಟ್ಟಿಂಗ್ಸ್ > [ನಿಮ್ಮ ಹೆಸರು] > iCloud, ನಂತರ News ಆ್ಯಪ್ ಆಯ್ಕೆಯನ್ನು ರದ್ದುಮಾಡಿ. ನೀವು ಈ ಫೀಚರ್ ಅನ್ನು ನಿಷ್ಕ್ರಿಯಗೊಳಿಸಿದ್ದರೆ, ನೀವು ಫಾಲೋ ಮಾಡುವ ಚಾನಲ್‌ಗಳು ಮತ್ತು ವಿಷಯಗಳು, ನಿಮ್ಮ ಓದುವಿಕೆ ಮತ್ತು ಆಲಿಸುವಿಕೆಯ ಇತಿಹಾಸ ಹಾಗೂ ನಿಮ್ಮ ಓದುವಿಕೆ ಮತ್ತು ಆಲಿಸುವಿಕೆಯ ಆದ್ಯತೆಗಳನ್ನು iCloud ಬ್ಯಾಕಪ್ ಸಕ್ರಿಯಗೊಳಿಸಿದ್ದಲ್ಲಿ, iCloudನಲ್ಲಿ ಬ್ಯಾಕಪ್ ಮಾಡಲಾಗುತ್ತದೆ.
ಸಬ್‌ಸ್ಕ್ರಿಪ್ಶನ್‌ಗಳು
ನೀವು Apple News+ಗೆ ಸಬ್‌ಸ್ಕ್ರೈಬ್ ಮಾಡಿದ್ದರೆ, ವಿವಿಧ ಪ್ರಕಾಶನಗಳಿಂದ ಸಬ್‌ಸ್ಕ್ರಿಪ್ಶನ್ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಬಹುದು. ಇದಕ್ಕೆ ಪರ್ಯಾಯವಾಗಿ, ನೀವು ಹಲವು ವಿಧಾನಗಳಲ್ಲಿ ಒಂದನ್ನು ಆರಿಸಿಕೊಂಡು ವ್ಯಕ್ತಿಗತ ಪ್ರಕಾಶನಗಳಿಂದ ಸಬ್‌ಸ್ಕ್ರಿಪ್ಷನ್ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಬಹುದು.
ಮೊದಲನೆಯದಾಗಿ, Apple Newsನಲ್ಲಿ ಬಳಸಬಹುದಾದ App Storeನಿಂದ ಪಡೆದ ಯಾವುದೇ ಸಕ್ರಿಯ ಸಬ್‌ಸ್ಕ್ರಿಪ್ಶನ್ ನಿಮ್ಮ ಬಳಿ ಇದೆಯೇ ಎಂದು ನಿಮ್ಮ Apple ಖಾತೆಯನ್ನು Apple News ಪರಿಶೀಲಿಸುತ್ತದೆ. ಹಾಗಿದ್ದರೆ, Apple News ಸ್ವಯಂಚಾಲಿತವಾಗಿ ನಿಮ್ಮ ಸಬ್‌ಸ್ಕ್ರಿಪ್ಶನ್ ಅನ್ನು ಅನ್‌ಲಾಕ್ ಮಾಡಿ, ಪ್ರಕಾಶನದ ಪಾವತಿಸಿದ ಸ್ಟೋರಿಗಳಿಗೆ ನಿಮಗೆ ಆ್ಯಕ್ಸೆಸ್ ನೀಡುತ್ತದೆ. ಎರಡನೆಯದಾಗಿ, ನೀವು News ಆ್ಯಪ್‌ನಲ್ಲಿ ನೇರವಾಗಿ ವ್ಯಕ್ತಿಗತ ಪ್ರಕಾಶನದ ಸಬ್‌ಸ್ಕ್ರಿಪ್ಶನ್ ಅನ್ನು ಖರೀದಿಸಬಹುದು, ಆ ಸಂದರ್ಭದಲ್ಲಿ ನೀವು ಪ್ರಕಾಶನದ ಜೊತೆಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ಆರಿಸಬಹುದು. ಮೂರನೆಯದಾಗಿ, ಒಂದು ಪ್ರಕಾಶನದಿಂದ ಈ ಹಿಂದೆ ನೀವು ನೇರವಾಗಿ ಸಬ್‌ಕ್ರಿಪ್ಶನ್ ಅನ್ನು ಖರೀದಿಸಿದ್ದರೆ (ಉದಾಹರಣೆಗೆ, ಪ್ರಕಾಶನದ ವೆಬ್‌ಸೈಟ್‌ನಿಂದ), ನಿಮ್ಮ ಸಬ್‌ಸ್ಕ್ರಿಪ್ಶನ್ ಖಾತೆಯಿಂದ Apple Newsಗೆ ಸೈನ್ ಇನ್ ಮಾಡಲು ಪ್ರಕಾಶಕರು ನಿಮಗೆ ಅನುಮತಿ ನೀಡಬಹುದು. ಪ್ರಕಾಶನವು ನಿಮ್ಮ ಸಬ್‌ಸ್ಕ್ರಿಪ್ಶನ್ ಅನ್ನು ದೃಢೀಕರಿಸಿ, ತಮ್ಮ ಸಬ್‌ಸ್ಕ್ರಿಪ್ಶನ್ ಕಂಟೆಂಟ್‌ಗೆ Apple Newsನಲ್ಲಿ ನಿಮಗೆ ಆ್ಯಕ್ಸೆಸ್ ನೀಡುತ್ತದೆ.
ನೀವು Apple News+ ಭಾಗವಾಗಿರುವ ಒಂದು ಪ್ರಕಾಶನದ ವ್ಯಕ್ತಿಗತವಾದ ಸಬ್‌ಕ್ರಿಪ್ಶನ್ ಅನ್ನು ಹೊಂದಿದ್ದರೆ, ನೀವು Apple News+ ಸಬ್‌ಕ್ರಿಪ್ಶನ್ ಹೊಂದಿಲ್ಲದೆ ಇದ್ದರೂ ಸಹ, ಆ ಪ್ರಕಾಶನದಿಂದ ಪಾವತಿಸಿದ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಲು ನಿಮಗೆ ಸಾಧ್ಯವಾಗುತ್ತದೆ.
ಕೆಲವು ದೇಶಗಳಲ್ಲಿ, Apple News ಎಡಿಟರ್‌ಗಳು ಹೌಸ್ಟ್ ಮಾಡಿದ ಆಯ್ದ ಸ್ಟೋರಿಗಳು ಮತ್ತು ದಿನದ ಪ್ರಮುಖ ಸ್ಟೋರಿಗಳ ಆಡಿಯೊ ಸಾರಾಂಶದ ಆಡಿಯೊ ಆವೃತ್ತಿಗಳನ್ನು ನೀವು ಆಲಿಸಬಹುದು. iPhone, iPod touch, ಹಾಗೂ CarPlayನಲ್ಲಿ ಆಡಿಯೊ ಲಭ್ಯವಿದೆ. ಪೂರ್ಣ ಆಡಿಯೊ ಸ್ಟೋರಿಗಳು Apple News+ ಸಬ್‌ಸ್ಕ್ರೈಬರ್‌ಗಳಿಗೆ ಮಾತ್ರ ಲಭ್ಯವಿದೆ. ಸಬ್‌ಸ್ಕ್ರೈಬರ್ ಅಲ್ಲದವರು ಸಣ್ಣ ಪ್ರಿವ್ಯೂವನ್ನು ಆಲಿಸಬಹುದು. ಸಬ್‌ಸ್ಕ್ರೈಬರ್‌ಗಳಿಗೆ ಮತ್ತು ಸಬ್‌ಸ್ಕ್ರೈಬರ್ ಅಲ್ಲದವರಿಗೆ ಆಡಿಯೊ ಸಾರಾಂಶವು ಲಭ್ಯವಿದೆ.
ಆ್ಯಕ್ಸೆಸ್ ನಿಯಂತ್ರಣ ಮತ್ತು ಡಿಜಿಟಲ್ ಕಂಟೆಂಟ್‌ನ ಎನ್‌ಕ್ರಿಪ್ಶನ್‌ಗೆ ಸಂಬಂಧಿಸಿದ Appleನ FairPlay ಸ್ಟ್ರೀಮಿಂಗ್ ಡಿಜಿಟಲ್ ಹಕ್ಕುಗಳು ನಿರ್ವಹಣೆ (DRM) ಫ್ರೇಮ್‌ವರ್ಕ್‌ನ ಮೂಲಕ ಸ್ಟೋರಿಗಳು ಮತ್ತು ಬ್ರೀಫಿಂಗ್‌ಗಳ ಆಡಿಯೊ ಆವೃತ್ತಿಗಳನ್ನು ರಕ್ಷಿಸಲಾಗುತ್ತದೆ. ನಿಮ್ಮ ಸಾಧನವು ವಿನಂತಿಸುವ ಕೀಗಳಿಂದ ನಿಮ್ಮ ಆಲಿಸುವಿಕೆಯ ಇತಿಹಾಸದ ಮಾಹಿತಿಯನ್ನು ಪಡೆದುಕೊಳ್ಳಲು Appleಗೆ ಸಾಧ್ಯವಾಗದಂತೆ ನೋಡಿಕೊಳ್ಳಲು, Apple News ಅನೇಕ ಕಂಟೆಂಟ್ ಫೈಲ್‌ಗಳಲ್ಲಿ ಡಿಕ್ರಿಪ್ಷನ್ ಕೀಗಳನ್ನು ಹಂಚಿಕೊಳ್ಳುತ್ತದೆ.
Apple Podcasts
Apple News ಆಡಿಯೊ ಕಂಟೆಂಟ್ Apple Podcastsನಲ್ಲಿ ಲಭ್ಯವಿದೆ. ನೀವು Apple Podcastsನಲ್ಲಿ ನೀವು ಅಂತಹ ಕಂಟೆಂಟ್ ಅನ್ನು ಆಲಿಸಿದರೆ, ನಿಮ್ಮ ಆಲಿಸುವಿಕೆ ಚಟುವಟಿಕೆಯು www.apple.com/in/legal/privacy/data/en/apple-podcasts ಎಂಬಲ್ಲಿನ Apple Podcast ಮತ್ತು ಗೌಪ್ಯತೆಗೆ ಒಳಪಟ್ಟಿರುತ್ತದೆ. ಉದಾಹರಣೆಗೆ, ನೀವು ಆಲಿಸುವಂತಹ ಪಾಡ್‌ಕಾಸ್ಟ್ ಎಪಿಸೋಡ್‌ಗಳನ್ನು ಪ್ಲೇ ಮಾಡಿದ ಸ್ಥಾನದ ಬಗ್ಗೆ ತಿಳಿದುಕೊಂಡು Apple ನಿಮ್ಮ ಸಾಧನಗಳಾದ್ಯಂತ ಅದನ್ನು ಸಿಂಕ್ ಮಾಡುತ್ತದೆ.
Game Center
ನೀವು Game Centerಗೆ ಸೈನ್ ಇನ್ ಮಾಡಿದಾಗ, ಸ್ಕೋರ್‌ಗಳು, ಪರಿಹರಿಸಿದ ಸಮಯ ಹಾಗೂ ಇತರ ಸಾಧನೆಗಳು ಸೇರಿರುವಂತಹ ಪಝಲ್ ಚಟುವಟಿಕೆಯನ್ನು Apple ಸ್ವೀಕರಿಸುತ್ತದೆ. ಸೆಟ್ಟಿಂಗ್ಸ್ > ಆ್ಯಪ್‌ಗಳು > News > News+ ಪಝಲ್‌ಗಳು, ನಂತರ Game Center ಅನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ಯಾವುದೇ ಸಮಯದಲ್ಲಿ ಇದನ್ನು ನಿಷ್ಕ್ರಿಯಗೊಳಿಸಬಹುದು. Macನಲ್ಲಿ, News > ಸೆಟ್ಟಿಂಗ್ಸ್ ಎಂಬಲ್ಲಿಗೆ ಹೋಗಿ ಹಾಗೂ Game Center ಆಯ್ಕೆಯನ್ನು ರದ್ದುಮಾಡಲು ಕ್ಲಿಕ್ ಮಾಡಿ. www.apple.com/in/legal/privacy/data/en/game-center ಎಂಬುದಕ್ಕೆ ಹೋಗುವ ಮೂಲಕ ನೀವು Game Center ಮತ್ತು ಗೌಪ್ಯತೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಬಹುದು.
Apple News ಅನ್ನು ಸುಧಾರಿಸುವುದು
ನಿಮ್ಮ Apple News ಬಳಕೆಗೆ ಸಂಬಂಧಿಸಿದಂತೆ ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿರದ ಮಾಹಿತಿಯನ್ನೂ Apple ಸಂಗ್ರಹಿಸುತ್ತದೆ. ನೀವು ಬಳಸುವ ಫೀಚರ್‌ಗಳು ಮತ್ತು ನೀವು ಓದುವ ಅಥವಾ ನೋಡುವ ಸ್ಟೋರಿಗಳು, ಲೈವ್ ಚಟುವಟಿಕೆಗಳೊಂದಿಗೆ ನಿಮ್ಮ ಸಂವಹನಗಳು, ಲೋಡ್ ಸಮಯಗಳು, ನೋಟಿಫಿಕೇಷನ್ ಡೆಲಿವರಿ ಮತ್ತು ದೋಷಗಳು ಹಾಗೂ ಕ್ರ್ಯಾಶ್‌ಗಳಿಗೆ ಸಂಬಂಧಿಸಿದ ಮಾಹಿತಿಯಂತಹ ಆ್ಯಪ್ ಕಾರ್ಯಕ್ಷಮತೆಯ ಕುರಿತಾದ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ. ಇದು ನಿಮ್ಮ ಸಾಧನದ ಕುರಿತ ಮಾಹಿತಿಯನ್ನು ಸಹ ಒಳಗೊಂಡಿರುತ್ತದೆ, ಉದಾಹರಣೆಗೆ ಸಾಧನದ ಪ್ರಕಾರ ಮತ್ತು ನಿಮ್ಮ ಆಪರೇಟಿಂಗ್ ಸಿಸ್ಟಂನ ಆವೃತ್ತಿ. ನಿಮಗಾಗಿ ಮತ್ತು ಇತರರಿಗಾಗಿ Apple News ಅನ್ನು ಸುಧಾರಿಸಲು ಮತ್ತು ಆಪ್ಟಿಮೈಸ್ ಮಾಡಲು ನಾವು ಈ ಮಾಹಿತಿಯನ್ನು ಬಳಸುತ್ತೇವೆ.
ನಿಮ್ಮೊಂದಿಗೆ ಸಂವಹನ ನಡೆಸುವುದು
Apple News+ ಮತ್ತು ನಿಮಗೆ ಆಸಕ್ತಿಯಿರಬಹುದಾದ, Apple One ಅನ್ನೂ ಒಳಗೊಂಡ ಇತರ Apple ಉತ್ಪನ್ನಗಳು, ಸೇವೆಗಳು ಮತ್ತು ಆಫರ್‌ಗಳ ಕುರಿತು ನಿಮಗೆ ಸಂವಹನಗಳನ್ನು ಕಳುಹಿಸಲು, ನಿಮ್ಮ ಮಾಲೀಕತ್ವದಲ್ಲಿರುವ Apple ಉತ್ಪನ್ನಗಳು, ನೀವು Apple ಸೇವೆಗಳಿಗೆ ಮಾಡಿರುವ ಸಬ್‌ಸ್ಕ್ರಿಪ್ಶನ್‌ಗಳು ಮತ್ತು ನೀವು ಡೌನ್‌ಲೋಡ್ ಮಾಡುವ Apple ಆ್ಯಪ್‌ಗಳಂತಹ, ನಿಮ್ಮ ಖಾತೆಯ ಕುರಿತಾದ ಮಾಹಿತಿಯನ್ನು Apple ಬಳಸಬಹುದು. Apple ಆಫರ್‌ಗಳಿಗೆ ಅರ್ಹತೆಯನ್ನು ಪರಿಶೀಲಿಸಲು ನಿಮ್ಮ ಸಾಧನದ ಕ್ರಮ ಸಂಖ್ಯೆ ಅಥವಾ ನಿಮ್ಮ Apple News+ ಸಬ್‌ಕ್ರಿಪ್ಶನ್‌ನ ವಿವರಗಳನ್ನು ಬಳಸಬಹುದು. ನೀವು ಕುಟುಂಬ ಹಂಚಿಕೊಳ್ಳುವಿಕೆ ಗುಂಪಿನಲ್ಲಿದ್ದರೆ, ಕುಟುಂಬ ಹಂಚಿಕೊಳ್ಳುವಿಕೆಯ ಮೂಲಕ ನಿಮಗೆ ಲಭ್ಯವಿರುವ ಉತ್ಪನ್ನಗಳು, ಸೇವೆಗಳು ಮತ್ತು ಆಫರ್‌ಗಳ ಕುರಿತಾದ ಸಂವಹನಗಳನ್ನು Apple ಕಳುಹಿಸಬಹುದು. ನೀವು Apple One ಸಬ್‌ಸ್ಕ್ರಿಪ್ಶನ್ ಅನ್ನು ಖರೀದಿಸಿದರೆ, ನೀವು ಸಬ್‌ಸ್ಕ್ರೈಬ್ ಮಾಡಿರುವ ಪ್ರತಿಯೊಂದು ಸೇವೆಗಳ ಫೀಚರ್‌ಗಳ ಕುರಿತು ನಾವು ನಿಮಗೆ ಈಮೇಲ್‌ಗಳು ಹಾಗೂ push ನೋಟಿಫಿಕೇಷನ್ಸ್ ಅನ್ನು ಕಳುಹಿಸಬಹುದು. Apple News ಆ್ಯಪ್‌ನಲ್ಲಿ ಲಭ್ಯವಿರುವ ಹೊಸ ಫೀಚರ್‌ಗಳು, ಕಂಟೆಂಟ್ ಮತ್ತು ಆಫರ್‌ಗಳ ಕುರಿತು ನಿಮಗೆ ಈಮೇಲ್‌ಗಳು ಹಾಗೂ push ನೋಟಿಫಿಕೇಷನ್ಸ್ ಅನ್ನು ಕಳುಹಿಸಲು Apple News ಆ್ಯಪ್‌ನಲ್ಲಿನ ನಿಮ್ಮ ಚಟುವಟಿಕೆಯ ಕುರಿತಾದ ಮಾಹಿತಿಯನ್ನು ಸಹ Apple ಬಳಸಬಹುದು. ನೀವು account.apple.com/in ಎಂಬಲ್ಲಿಗೆ ಹೋಗುವ ಮೂಲಕ ನಿಮ್ಮ ಈಮೇಲ್ ಆದ್ಯತೆಗಳನ್ನು ಬದಲಾಯಿಸಬಹುದು ಹಾಗೂ ಈ ಈಮೇಲ್‌ಗಳನ್ನು ಸ್ವೀಕರಿಸುವ ಆಯ್ಕೆಯಿಂದ ಹೊರಗುಳಿಯಬಹುದು. ನಿಮ್ಮ iOS, iPadOS ಅಥವಾ visionOSನಲ್ಲಿ ನಿಮ್ಮ ನೋಟಿಫಿಕೇಷನ್ ಆದ್ಯತೆಗಳನ್ನು ಅಪ್‌ಡೇಟ್ ಮಾಡಲು, ಸೆಟ್ಟಿಂಗ್ಸ್ > ನೋಟಿಫಿಕೇಷನ್‌ಗಳು > News ಎಂಬಲ್ಲಿಗೆ ಹೋಗಿ. Macನಲ್ಲಿ, News ತೆರೆಯಿರಿ ಹಾಗೂ ಫೈಲ್ > ನೋಟಿಫಿಕೇಷನ್‌ಗಳು ಮತ್ತು ಈಮೇಲ್ ಅನ್ನು ನಿರ್ವಹಿಸಿ ಎಂಬಲ್ಲಿಗೆ ಹೋಗಿ. ನಮ್ಮ ಸೇವೆಗಳನ್ನು ಸುಧಾರಿಸಲು, ನೋಟಿಫಿಕೇಷನ್‌ಗಳೂ ಸೇರಿದಂತೆ ನಮ್ಮ ಸಂವಹನಗಳ ಜೊತೆಗಿನ ನಿಮ್ಮ ಸಂವಾದಗಳ ಕುರಿತಾದ ಮಾಹಿತಿಯನ್ನು Apple ಬಳಸುತ್ತದೆ.
ಜಾಹೀರಾತು
ಪ್ರಮುಖ ಪ್ರಕಾಶಕರಿಂದ ಅದ್ಭುತವಾದ ಕಂಟೆಂಟ್ ಅನ್ನು ಡೆಲಿವರ್ ಮಾಡಲು, Apple News ಆ್ಯಡ್‌ಗಳಿಂದ ಬೆಂಬಲಿತವಾಗಿರುತ್ತದೆ. ವೈಯಕ್ತೀಕರಿಸಿದ ಆ್ಯಡ್‌ಗಳ ಸೆಟ್ಟಿಂಗ್ ಆನ್ ಆಗಿದ್ದಲ್ಲಿ, Appleನ ಜಾಹೀರಾತು ಪ್ಲ್ಯಾಟ್‌ಫಾರ್ಮ್ ನಿಮಗೆ ಹೆಚ್ಚು ಸೂಕ್ತವಾಗಿರುವ ಆ್ಯಡ್‌ಗಳನ್ನು ನಿಮಗೆ ನೀಡಲು ನಿಮ್ಮ ಖಾತೆ, ನೀವು ಓದುವ ಸ್ಟೋರಿಗಳ ವಿಷಯಗಳು ಹಾಗೂ ಅವುಗಳ ವರ್ಗಗಳು ಹಾಗೂ ನೀವು ಫಾಲೋ ಮಾಡುವ, ಸಬ್‌ಸ್ಕ್ರೈಬ್ ಮಾಡುವ ಅಥವಾ ನೋಟಿಫಿಕೇಷನ್‌ಗಳನ್ನು ಆನ್ ಮಾಡಿರುವ ಪ್ರಕಾಶನಗಳ ಕುರಿತ ಮಾಹಿತಿಯನ್ನು ಬಳಸಬಹುದು. ನಾವು App Storeನಲ್ಲಿ ನಿಮ್ಮ ಜಾಹೀರಾತುಗಳನ್ನು ವೈಯಕ್ತೀಕರಿಸಲು ಕೂಡ ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳ ಬಗೆಗಿನ ಮಾಹಿತಿಯನ್ನು ಬಳಸಬಹುದು. ವೈಯಕ್ತೀಕರಿಸಿದ ಆ್ಯಡ್‌ಗಳನ್ನು ಆಫ್ ಮಾಡುವುದರಿಂದ Apple ಈ ಮಾಹಿತಿಯನ್ನು ಆ್ಯಡ್ ಟಾರ್ಗೆಟಿಂಗ್‌ಗಾಗಿ ಬಳಸದಂತೆ ತಡೆಯುತ್ತದೆ. ಇದು ನೀವು ಸ್ವೀಕರಿಸುವ ಆ್ಯಡ್‌ಗಳ ಸಂಖ್ಯೆಯನ್ನು ಕಡಿಮೆ ಮಾಡದಿರಬಹುದು, ಆದರೆ ಆ್ಯಡ್‌ಗಳು ನಿಮಗೆ ಕಡಿಮೆ ಸೂಕ್ತವೆನಿಸಬಹುದು. ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ, ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ> Apple ಜಾಹೀರಾತು ಎಂಬಲ್ಲಿಗೆ ಹೋಗುವ ಮೂಲಕ, ನಂತರ ವೈಯಕ್ತೀಕರಿಸಿದ ಆ್ಯಡ್‌ಗಳನ್ನು ಆಫ್ ಮಾಡಿ ಟ್ಯಾಪ್ ಮಾಡುವ ಮೂಲಕ ವೈಯಕ್ತೀಕರಿಸಿದ ಆ್ಯಡ್‌ಗಳನ್ನು ನೀವು ನಿಷ್ಕ್ರಿಯಗೊಳಿಸಬಹುದು. Macನಲ್ಲಿ, ಸಿಸ್ಟಂ ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > Apple ಜಾಹೀರಾತುಗಳಿಗೆ ಹೋಗಿ ಮತ್ತು ವೈಯಕ್ತಿಕರಿಸಿದ ಜಾಹೀರಾತುಗಳ ಆಯ್ಕೆಯನ್ನು ರದ್ದುಮಾಡಿ. Apple Newsನಲ್ಲಿ ನೀವು ಓದುವ ಮತ್ತು ಆಲಿಸುವ ಸ್ಟೋರಿಗಳನ್ನು News ಅಥವಾ ಸ್ಟಾಕ್ಸ್ ಆ್ಯಪ್‌ಗಳನ್ನು ಬಳಸುವಾಗ ನಿಮಗೆ ಜಾಹೀರಾತುಗಳನ್ನು ಕಳುಹಿಸಲು ಮಾತ್ರ ಬಳಸುತ್ತೇವೆ.
ಥರ್ಡ್ ಪಾರ್ಟಿಗಳಿಗೆ ಬಹಿರಂಗಪಡಿಸುವಿಕೆ
ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಥರ್ಡ್ ಪಾರ್ಟಿ ಆ್ಯಪ್‌ಗಳ ಜೊತೆಗೆ ಹಂಚಿಕೊಳ್ಳುವುದಿಲ್ಲ. ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು, ಗ್ರಾಹಕರಿಗೆ ಮಾರಾಟ ಮಾಡುವುದಕ್ಕೆ Appleಗೆ ಸಹಾಯ ಮಾಡಲು ಹಾಗೂ Apple Newsನಲ್ಲಿ ಡಿಸ್‌ಪ್ಲೇ ಮಾಡಲು Appleನ ಪರವಾಗಿ ಆ್ಯಡ್‌ಗಳನ್ನು ಮಾರಾಟ ಮಾಡಲು Appleನೊಂದಿಗೆ ಕೆಲಸ ಮಾಡುವ ಪ್ರಮುಖ ಪಾಲುದಾರರಿಗೆ ಕೆಲವು ವೈಯಕ್ತಿಕವಲ್ಲದ ಡೇಟವನ್ನು ಲಭ್ಯವಾಗುವಂತೆ ಮಾಡಲು ಬದ್ಧರಾಗಿರುತ್ತೇವೆ. ಉದಾಹರಣೆಗೆ, ಪ್ರಕಾಶಕರಿಗೆ ಪಾವತಿಸಲು ನಿಮ್ಮ Apple News ಬಳಕೆಗೆ ಸಂಬಂಧಿಸಿದ ವೈಯಕ್ತಿಕವಲ್ಲದ ಡೇಟವನ್ನು Apple ಬಳಸಬಹುದು ಮತ್ತು ಒಟ್ಟುಗೂಡಿಸಿದ ವರದಿಗಳನ್ನು ಬಳಕೆದಾರರು ಅವರ ಕಂಟೆಂಟ್ ಅನ್ನು ಹೇಗೆ ಓದುತ್ತಾರೆ ಮತ್ತು ಬಳಸಿಕೊಳ್ಳುತ್ತಾರೆ ಎಂದು ಅರ್ಥಮಾಡಿಕೊಳ್ಳಲು Apple News ಪ್ರಕಾಶಕರಿಗೆ ಸಹಾಯ ಮಾಡುವುದಕ್ಕಾಗಿ ಅವರ ಜೊತೆಗೆ ಹಂಚಿಕೊಳ್ಳಬಹುದು. ಹೀಗೆ ಒಟ್ಟುಗೂಡಿಸಿದ ಕೆಲವು ವರದಿಗಳಲ್ಲಿ ಬಳಕೆದಾರರ ಜನಸಂಖ್ಯಾವಿವರಗಳಾದ ವಯಸ್ಸು ಮತ್ತು ಲಿಂಗ ಸೇರಿವೆ (ಅವುಗಳನ್ನು ನಿಮ್ಮ Apple ಖಾತೆಯಲ್ಲಿರುವ ನಿಮ್ಮ ಹೆಸರು ಮತ್ತು ಸ್ವಾಗತವಿವರಗಳ ಮಾಹಿತಿಯಿಂದ ಪಡೆದುಕೊಳ್ಳಬಹುದು). ಮಾಹಿತಿ ಪ್ರಕ್ರಿಯೆಗೊಳಿಸುವುದು, ಗ್ರಾಹಕ ಸೇವೆ ಒದಗಿಸುವುದು, ನಮ್ಮ ಉತ್ಪನ್ನಗಳು ಮತ್ತು ಸೇವೆಗಳ ಮೇಲಿನ ನಿಮ್ಮ ಆಸಕ್ತಿಯ ಮೌಲ್ಯಮಾಪನ ಮಾಡುವುದು ಹಾಗೂ ನಮ್ಮ ಪರವಾಗಿ ಗ್ರಾಹಕ ಸಂಶೋಧನೆ ಅಥವಾ ತೃಪ್ತಿಯ ಸಮೀಕ್ಷೆಗಳನ್ನು ನಡೆಸುವುದು ಮೊದಲಾದ ಸೇವೆಗಳನ್ನು ಒದಗಿಸುವ ಸೇವಾ ಪೂರೈಕೆದಾರರ ಜೊತೆಗೆ ಸಹ Apple ಮಾಹಿತಿಯನ್ನು ಹಂಚಿಕೊಳ್ಳಬಹುದು. ಈ ಕಂಪನಿಗಳು ನಿಮ್ಮ ಮಾಹಿತಿಯನ್ನು ರಕ್ಷಿಸುವ ಬಾಧ್ಯತೆಗೆ ಒಳಪಟ್ಟಿದೆ ಹಾಗೂ Apple ಕಾರ್ಯನಿರ್ವಹಿಸುವಲ್ಲಿ ಪತ್ತೆ ಮಾಡಬಹುದು.
ನೀವು Apple News ಆ್ಯಪ್‌ನಲ್ಲಿನ ವ್ಯಕ್ತಿಗತ ಪ್ರಕಾಶನದ ಸಬ್‌ಸ್ಕ್ರಿಪ್ಶನ್ ಅನ್ನು ಖರೀದಿಸಿದಾಗ, ನಿಮಗಾಗಿ ಮತ್ತು ಪ್ರಕಾಶಕರಿಗಾಗಿ Apple ಅನನ್ಯ ಸಬ್‌ಸ್ಕ್ರೈಬರ್ IDಯನ್ನು ರಚಿಸುತ್ತದೆ. ನೀವು ಖರೀದಿಸಿದ ಸಬ್‌ಸ್ಕ್ರಿಪ್ಶನ್ ಮತ್ತು ನಿಮ್ಮ ದೇಶ ಅಥವಾ ವಾಸಸ್ಥಳದ ಬಗ್ಗೆ ಮಾಹಿತಿಯನ್ನು ಒಳಗೊಂಡಿರುವ ಮಾಹಿತಿಯ ಕುರಿತು ಪ್ರಕಾಶಕರಿಗೆ ವರದಿಗಳನ್ನು ನೀಡು ನಾವು ಸಬ್‌ಸ್ಕ್ರೈಬರ್ IDಯನ್ನು ಬಳಸುತ್ತೇವೆ, ಇದರಿಂದ ಪ್ರಕಾಶಕರು ತಮ್ಮ ಸಬ್‌ಸ್ಕ್ರಿಪ್ಶನ್‌ಗಳ ಕಾರ್ಯಕ್ಷಮತೆಯನ್ನು ಅರ್ಥಮಾಡಿಕೊಳ್ಳಬಹುದು. ನಿರ್ದಿಷ್ಟ ಪ್ರಕಾಶಕರ ಜೊತೆಗೆ ನಿಮ್ಮ ಎಲ್ಲಾ ಸಬ್‌ಸ್ಕ್ರಿಪ್ಶನ್‌ಗಳನ್ನು ನೀವು ರದ್ದು ಮಾಡಿದರೆ ಮತ್ತು ನೀವು ಮತ್ತೆ ಸಬ್‌ಸ್ಕ್ರೈಬರ್ ಆಗಗಿದ್ದರೆ, ಸಬ್‌ಸ್ಕ್ರೈಬರ್ IDಯನ್ನು 180 ದಿನಗಳ ನಂತರ ರೀಸೆಟ್ ಮಾಡಲಾಗುತ್ತದೆ.
Apple News ಕಂಟೆಂಟ್ ಅನ್ನು ಇತರ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಸಹ Apple News ನಿಮಗೆ ಅವಕಾಶ ನೀಡುತ್ತದೆ. ನೀವು Apple News ಕಂಟೆಂಟ್ ಅನ್ನು ವೆಬ್‌ಸೈಟ್‌ಗಳು ಅಥವಾ ಸಾಮಾಜಿಕ ಜಾಲತಾಣಗಳಂತಹ ಇತರ ಸ್ಥಳಗಳಲ್ಲಿ ಹಂಚಿಕೊಳ್ಳುವಾಗ, ಆ ಮಾಹಿತಿಯನ್ನು ಸಂಬಂಧಿತ ವೆಬ್‌ಸೈಟ್‌ಗಳು ಅಥವಾ ಸಾಮಾಜಿಕ ಜಾಲತಾಣಗಳ ಗೌಪ್ಯತೆಯ ನೀತಿಗಳಿಂದ ನಿಯಂತ್ರಿಸಲ್ಪಡುತ್ತದೆ. ಈ ಮಾಹಿತಿಯನ್ನು ಥರ್ಡ್ ಪಾರ್ಟಿಗಳ ಜೊತೆಗೆ ಹಂಚಿಕೊಳ್ಳಲು ನೀವು ಬಯಸದಿದ್ದರೆ, Apple News ಕಂಟೆಂಟ್ ಅನ್ನು ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ.
ಯಾವುದೇ ಉದ್ದೇಶಕ್ಕಾಗಿ ವೈಯಕ್ತಿಕವಲ್ಲದ ಡೇಟವನ್ನು ನಾವು ಸಂಗ್ರಹಿಸಬಹುದು, ಬಳಸಬಹುದು, ವರ್ಗಾಯಿಸಬಹುದು ಹಾಗೂ ಬಹಿರಂಗಪಡಿಸಬಹುದು. ಉದಾಹರಣೆಗೆ, ಸೇವೆಯನ್ನು ಸುಧಾರಿಸುವ ಉದ್ದೇಶದಿಂದ ನಿಮ್ಮ ವೈಯಕ್ತಿಕವಲ್ಲದ ಡೇಟವನ್ನು ಇತರ Apple News ಬಳಕೆದಾರರ ಜೊತೆಗೆ ಒಟ್ಟುಗೂಡಿಸಬಹುದು.
ವಂಚನೆ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯುವುದು
ನೀವು ಖರೀದಿಯನ್ನು ಮಾಡಲು ಪ್ರಯತ್ನಿಸಿದಾಗ, ನೀವು ಕಳುಹಿಸುವ ಹಾಗೂ ಸ್ವೀಕರಿಸುವ ಫೋನ್ ಕರೆಗಳು ಅಥವಾ ಈಮೇಲ್‌ಗಳ ಅಂದಾಜು ಸಂಖ್ಯೆ ಒಳಗೊಂಡಂತೆ, ನಿಮ್ಮ ಸಾಧನವನ್ನು ನೀವು ಹೇಗೆ ಬಳಸುತ್ತೀರಿ ಎಂಬ ಮಾಹಿತಿಯನ್ನು ಬಳಸಿಕೊಂಡು ನಿಮ್ಮ ಸಾಧನದಲ್ಲಿ ಸಾಧನದ ವಿಶ್ವಸಾರ್ಹತೆಯ ಸ್ಕೋರ್ ಅನ್ನು ನಾವು ಲೆಕ್ಕ ಹಾಕುತ್ತೇವೆ. ನಿಮ್ಮ ಸಾಧನದಲ್ಲಿನ ಮೂಲ ಮೌಲ್ಯಗಳನ್ನು ತಿಳಿದುಕೊಳ್ಳಲು Appleಗೆ ಸಾಧ್ಯವಾಗದ ರೀತಿಯಲ್ಲಿ ಸಲ್ಲಿಕೆಯನ್ನು ವಿನ್ಯಾಸಗೊಳಿಸಲಾಗಿದೆ. ಸ್ಕೋರ್ ಅನ್ನು ನಿಗದಿತ ಸಮಯದವರೆಗೆ ನಮ್ಮ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. Apple News+ ಸಬ್‌ಸ್ಕ್ರಿಪ್ಶನ್ ನವೀಕರಣಗಳನ್ನು ಪ್ರಕ್ರಿಯೆಗೊಳಿಸಲು ಹಾಗೂ ಪಾವತಿ ಪಾಲುದಾರರ ದೃಢೀಕರಿಸುವ ಮೊದಲೇ ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳಿಗೆ ಮುಂದುವರಿದ ಆ್ಯಕ್ಸೆಸ್ ನೀಡಬೇಕೇ ಎಂದು ನಿರ್ಧರಿಸಲು Apple ಜೊತೆಗಿನ ನಿಮ್ಮ ಐತಿಹಾಸಿಕ ವ್ಯಾಪಾರ ಸಂಬಂಧಗಳ ಕುರಿತಾದ ಮಾಹಿತಿಯನ್ನೂ ನಾವು ಬಳಸಬಹುದು.
ವೈಯಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುವುದಕ್ಕಾಗಿ ಅನ್ವಯವಾಗುವ ಕಾನೂನುಬದ್ಧ ಆಧಾರ
ನಾವು ಸಾಮಾನ್ಯವಾಗಿ Apple ಜೊತೆಗಿನ ನಿಮ್ಮ ಒಪ್ಪಂದದ ಕಾರ್ಯಕ್ಷಮತೆಗಾಗಿ, ಸೇವೆಯನ್ನು ಒದಗಿಸಲು ಅಗತ್ಯವಿರುವಂತೆ ಹಾಗೂ ನಮ್ಮ ಕಾನೂನಾತ್ಮಕ ಬಾಧ್ಯತೆಗಳನ್ನು ಪಾಲಿಸಲು Apple News ಆ್ಯಪ್‌ನಲ್ಲಿ ನಿಮ್ಮ ವೈಯಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುತ್ತೇವೆ. ಸಮ್ಮತಿಯು ಸೂಕ್ತವಾದ ಕಾನೂನುಬದ್ಧ ಆಧಾರವಾಗಿದ್ದಲ್ಲಿ, ನಾವು ಅದನ್ನು ಅನ್ವಯವಾಗುವ ಸ್ಥಳೀಯ ಕಾನೂನುಗಳ ಪ್ರಕಾರ ಪಡೆಯುತ್ತೇವೆ.
ಅನ್ವಯವಾಗುವ ಸ್ಥಳೀಯ ಕಾನೂನಿಗೆ ಒಳಪಟ್ಟು, ನಮ್ಮ ಅಥವಾ ಥರ್ಡ್ ಪಾರ್ಟಿಯ ಕಾನೂನುಬದ್ಧ ಹಿತಾಸಕ್ತಿಗಳ ಉದ್ದೇಶಗಳಿಗಾಗಿ ಅಗತ್ಯವಿರುವಲ್ಲಿ ನಾವು ವೈಯಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುತ್ತೇವೆ:
- ನಿಮಗೆ ಲಭ್ಯವಿರುವ ಕಂಟೆಂಟ್ ಅನ್ನು ಡಿಸ್‌ಪ್ಲೇ ಮಾಡುತ್ತದೆ
- ಆಫರ್‌ಗಳಿಗೆ ಅರ್ಹತೆಯನ್ನು ಪರೀಕ್ಷಿಸುವುದು, ನಿಮಗಾಗಿ ಹಾಗೂ ಇತರಿಗಾಗಿ ಸೇವೆಯನ್ನು ಆಪ್ಟಿಮೈಜ್ ಮಾಡುವುದು ಹಾಗೂ ಸುಧಾರಿಸುವುದು ಮತ್ತು Apple News ಹಾಗೂ ಇತರ ಸಂಬಂಧಪಟ್ಟ Apple ಉತ್ಪನ್ನಗಳು, ಸೇವೆಗಳು, ಹಾಗೂ Apple One ಸೇರಿದಂತೆ ನಿಮಗೆ ಆಸಕ್ತಿಯಿರಬಹುದಾದ ಆಫರ್‌ಗಳ ಬಗೆಗಿನ ಸಂವಹನಗಳನ್ನು ನಿಮಗೆ ಕಳುಹಿಸುವುದು
- ಮೋಸ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯುವುದು
ಬಳಸಲಾದ ಡೇಟ ಇದನ್ನು ಒಳಗೊಂಡಿರುತ್ತದೆ:
- ನಿಮ್ಮ ಸಾಧನ ಮತ್ತು ಖಾತೆಯ ಕುರಿತ ಮಾಹಿತಿ, ಸಬ್‌ಕ್ರಿಪ್ಷನ್‌ನಿಂದ ಪಬ್ಲಿಕೇಶನ್‌ವರೆಗೆ, Apple ಸೇವೆಗಳು, ನಿಮ್ಮ ಮಾಲೀಕತ್ವದಲ್ಲಿರುವ Apple ಉತ್ಪನ್ನಗಳು, ನೀವು ಡೌನ್‌ಲೋಡ್ ಮಾಡುವ Apple ಆ್ಯಪ್‌ಗಳು, ಹಾಗೂ ನೀವು ಕುಟುಂಬ ಹಂಚಿಕೆ ಗುಂಪಿನಲ್ಲಿ ಇದ್ದೀರಿ ಎನ್ನುವ ವಿಚಾರ
- ಈ ಚಾನಲ್‌ಗಳಿಗೆ ನೀವು ನೋಟಿಫಿಕೇಷನ್‌ಗಳನ್ನು ಸಕ್ರಿಯಗೊಳಿಸಿರುವಿರಿ
- ಸಾಧನದ ವಿಶ್ವಾಸದ ಸ್ಕೋರ್
ರಿಟೆನ್ಶನ್
ನಾವು Apple Newsಗೆ ಸಂಬಂಧಿಸಿದ ವೈಯಕ್ತಿಕ ಡೇಟವನ್ನು ನಮಗೆ ವ್ಯಾಪಾರದ ಅಗತ್ಯವಿರುವವರೆಗೆ, ಒಪ್ಪಂದಗಳ ಬಾಧ್ಯತೆಗಳು, ಅಥವಾ ಕಾನೂನು ಅಗತ್ಯವಿರುವವರೆಗೆ ಮಾತ್ರವೇ ಉಳಿಸಿಕೊಳ್ಳುತ್ತೇವೆ. ಸಬ್‌ಸ್ಕ್ರಿಪ್ಷನ್ ಖರೀದಿ ಇತಿಹಾಸದಂತಹ ಕೆಲವು ಮಾಹಿತಿ, ಆದರೆ ನಿಮ್ಮ ಸಂಗ್ರಹಿಸಿದ ಕಾರ್ಡ್ ಮಾಹಿತಿಯಂತಲ್ಲದ ವಿವರಗಳನ್ನು ಉದ್ಯಮ ದಾಖಲೆಗಳಿಗಾಗಿ ನೀವು ಖಾತೆಯನ್ನು ಮುಚ್ಚಿದ ನಂತರವೂ ಅಥವಾ Apple News+ನಿಂದ ಅನ್‌ಸಬ್‌ಸ್ಕ್ರೈಬ್ ಆದ ನಂತರವೂ ಉಳಿಸಿಕೊಳ್ಳಬಹುದು. ರಿಟೆನ್ಷನ್ ಅವಧಿಯನ್ನು ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಮೊದಲಿಗೆ, ಸಂಗ್ರಹಿಸಿದ ವೈಯಕ್ತಿಕ ಡೇಟವನ್ನು ಉಳಿಸಿಕೊಳ್ಳುವುದು ಅಗತ್ಯವೇ ಎಂದು ಜಾಗರೂಕವಾಗಿ ಪರೀಕ್ಷಿಸುತ್ತೇವೆ, ನಂತರ ರಿಟೆನ್ಷನ್ ಅಗತ್ಯವಿದ್ದಲ್ಲಿ, ಕಾನೂನಿನ ಅಡಿಯಲ್ಲಿ ಅವಕಾಶ ನೀಡಲಾಗಿರುವ ಅತಿ ಕಡಿಮೆ ಅವಧಿಗೆ ವೈಯಕ್ತಿಕ ಡೇಟವನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇವೆ.
ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.
2026-03-30