Apple Pay ಮತ್ತು ಗೌಪ್ಯತೆ

ಕಾರ್ಡ್ ಕುರಿತಾದ ಮಾಹಿತಿ, ಸ್ಥಳ ಮತ್ತು ಸಾಧನದ ಸೆಟ್ಟಿಂಗ್ಸ್ ಹಾಗೂ ಬಳಕೆಯ ಪ್ಯಾಟರ್ನ್‌ಗಳ ಮಾಹಿತಿಯನ್ನು Appleಗೆ ಕಳುಹಿಸಬಹುದು ಮತ್ತು Apple Pay ಅನ್ನು ಸೆಟಪ್ ಮಾಡುವುದಕ್ಕಾಗಿ ಮತ್ತು ವಹಿವಾಟು ವಂಚನೆಯನ್ನು ತಡೆಯುವುದಕ್ಕಾಗಿ ನಿಮ್ಮ ಕಾರ್ಡ್ ವಿತರಕರಿಗೆ ಮೌಲ್ಯಮಾಪನಗಳನ್ನು ಒದಗಿಸಲು ಖಾತೆಯ ಮಾಹಿತಿಯ ಜೊತೆಗೆ ಅದನ್ನು ಕೂಡ ಬಳಸಬಹುದಾಗಿದೆ.
 

ನಿಮ್ಮ ಮಾಹಿತಿಯನ್ನು ಕಾಪಾಡಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸಲು ನಿಮಗೆ ಅನುವು ಮಾಡಿಕೊಡಲು Apple Pay ಅನ್ನು ವಿನ್ಯಾಸಗೊಳಿಸಲಾಗಿದೆ.


Privacy Icon

  • ನೀವು Apple Payಗೆ ಕಾರ್ಡ್ ಅನ್ನು ಸೇರಿಸಿದಾಗ, ಅರ್ಹತೆಯನ್ನು ನಿರ್ಧರಿಸಲು ಕಾರ್ಡ್-ಸಂಬಂಧಿತ ಮಾಹಿತಿ, ಸ್ಥಳ ಮತ್ತು ಸಾಧನದ ಸೆಟ್ಟಿಂಗ್ಸ್ ಮತ್ತು ಬಳಕೆಯ ಮಾದರಿಗಳ ಕುರಿತಾದ ಮಾಹಿತಿಯನ್ನು Appleಗೆ ಕಳುಹಿಸಬಹುದು.
  • ಮೇಲಿನ ಕೆಲವು ಮಾಹಿತಿ, ಖಾತೆ ಸಂಬಂಧಿತ ಮಾಹಿತಿ ಹಾಗೂ ಪೇರ್ ಮಾಡಿದ ಸಾಧನದ ವಿವರಗಳನ್ನು ನಿಮ್ಮ ಕಾರ್ಡ್ ವಿತರಕರು ಅಥವಾ ಬ್ಯಾಂಕ್‌ನೊಂದಿಗೆ ಅರ್ಹತೆ ನಿರ್ಧರಿಸಲು ಮತ್ತು ವಂಚನೆ ವಿರೋಧಿ ಉದ್ದೇಶಗಳಿಗಾಗಿ ಹಂಚಿಕೊಳ್ಳಲಾಗುತ್ತದೆ.
  • ನೀವು ಆ್ಯಪ್‌ಗಳಲ್ಲಿ ಹಾಗೂ ವೆಬ್‌ನಲ್ಲಿ Apple Payಯನ್ನು ಬಳಸಿದಾಗ, ಪಾವತಿಯನ್ನು ಪ್ರಕ್ರಿಯೆಗೊಳಿಸಲು ಅವಶ್ಯಕವಾದ ಮಾಹಿತಿಯನ್ನು ಆ್ಯಪ್ ಅಥವಾ ವೆಬ್‌‌ಸೈಟ್ ಜೊತೆಗೆ ಹಂಚಿಕೊಳ್ಳಲಾಗುತ್ತದೆ. ನಿಮ್ಮ ನಿಜವಾದ ಕಾರ್ಡ್ ಸಂಖ್ಯೆಯನ್ನು ವ್ಯಾಪಾರಿಯ ಜೊತೆಗೆ ಹಂಚಿಕೊಳ್ಳುವುದಿಲ್ಲ.
  • ನಿಮ್ಮೊಂದಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗದ Apple Pay ಡೇಟವನ್ನು Apple Pay ಮತ್ತು ಇತರ Apple ಉತ್ಪನ್ನಗಳು ಹಾಗೂ ಸೇವೆಗಳನ್ನು ಸುಧಾರಿಸಲು Apple ಬಳಸಬಹುದು.
  • Apple Pay ಎನ್ನುವುದು ನಿಮ್ಮ ವೈಯಕ್ತಿಕ ಡೇಟಗೆ ಜವಾಬ್ದಾರರಾಗಿರುವ Apple Inc. ಅಂಗಸಂಸ್ಥೆಗಳು ಒದಗಿಸುವ ತಂತ್ರಜ್ಞಾನ ಸೇವೆಯಾಗಿದೆ.

ನಿಮ್ಮ ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್‌ಗಳನ್ನು ಬಳಸಿಕೊಂಡು ಸ್ಟೋರ್‌ಗಳಲ್ಲಿ, ಆ್ಯಪ್‌ಗಳಲ್ಲಿ ಮತ್ತು ವೆಬ್‌ನಲ್ಲಿ ಸುರಕ್ಷಿತ ಖರೀದಿಗಳನ್ನು ಮಾಡಲು Apple Pay ನಿಮಗೆ ಅನುಮತಿಸುತ್ತದೆ.

Apple Pay ಎನ್ನುವುದು ನಿಮ್ಮ ವೈಯಕ್ತಿಕ ಡೇಟಗೆ ಜವಾಬ್ದಾರರಾಗಿರುವ Apple Inc. ಅಂಗಸಂಸ್ಥೆಗಳು ಒದಗಿಸುವ ತಂತ್ರಜ್ಞಾನ ಸೇವೆಯಾಗಿದೆ. ನಿಮ್ಮ ಸ್ಥಳವನ್ನು ಆಧರಿಸಿ, ನಿಮ್ಮ Apple Pay ಪೂರೈಕೆದಾರರು ಬದಲಾಗಬಹುದು, ಉದಾಹರಣೆಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ Apple Payments Services LLC. ನಿಮ್ಮ ವೈಯಕ್ತಿಕ ಡೇಟದ ಪ್ರಕ್ರಿಯೆಗೆ ಜವಾಬ್ದಾರರಾಗಿರುವ Apple ಘಟಕಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, apple.com/in/privacy ಎಂಬಲ್ಲಿ Appleನ ಗೌಪ್ಯತೆ ನೀತಿ ಮತ್ತು www.apple.com/in/legal/privacy/en/affiliated-company ಎಂಬಲ್ಲಿ Apple-ಅಂಗಸಂಸ್ಥೆ ಕಂಪನಿಗಳಿಗೆ ಭೇಟಿ ನೀಡಿ.

Apple Payಗೆ ಕಾರ್ಡ್‌ಗಳನ್ನು ಸೇರಿಸಲಾಗುತ್ತಿದೆ

ನೀವು Apple Payಗೆ ಸ್ಟೋರ್, ಕ್ರೆಡಿಟ್, ಡೆಬಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್‌ಗಳಂತಹ ಪಾವತಿ ಕಾರ್ಡ್ ಅನ್ನು ಸೇರಿಸುತ್ತಿರುವಾಗ, ನಿಮ್ಮ ಕಾರ್ಡ್ ಕುರಿತು ನೀವು ಒದಗಿಸುವ ಮಾಹಿತಿ ಮತ್ತು Apple Pay ಅನ್ನು ಸಕ್ರಿಯಗೊಳಿಸಲು ಮತ್ತು ಅದರ ಫೀಚರ್‌ಗಳನ್ನು ಸಕ್ರಿಯಗೊಳಿಸಲು ನಿಮ್ಮ ಅರ್ಹತೆಯನ್ನು ನಿರ್ಧರಿಸಲು ಕೆಲವು ಸಾಧನ ಸೆಟ್ಟಿಂಗ್ಸ್ ಅನ್ನು ಸಕ್ರಿಯಗೊಳಿಸಲಾಗಿದೆಯೇ ಎಂಬುದರ ಮಾಹಿತಿಯನ್ನು Appleಗೆ ಕಳುಹಿಸಬಹುದು. ವಂಚನೆಯನ್ನು ಗುರುತಿಸಲು ನಿಮ್ಮ ಸಾಧನವು ಸಾಧನದ ಬಳಕೆಯ ಮಾದರಿಗಳನ್ನು ಸಹ ಮೌಲ್ಯಮಾಪನ ಮಾಡಬಹುದು (ಉದಾಹರಣೆಗೆ, ಸಾಧನವು ಎಷ್ಟು ಶೇಕಡಾ ಸಮಯ ಚಲನೆಯಲ್ಲಿದೆ, ವಾರಕ್ಕೆ ಕರೆಗಳ ಅಂದಾಜು ಸಂಖ್ಯೆ). ನಿಮ್ಮ ಸಾಧನವು ಮೌಲ್ಯಮಾಪನ ಮಾಡಿದ ಮಾಹಿತಿಯನ್ನು ನಿಮಗೆ ಲಿಂಕ್ ಮಾಡಬಹುದಾದ ರೀತಿಯಲ್ಲಿ Apple ಜೊತೆಗೆ ಹಂಚಿಕೊಳ್ಳಲಾಗುವುದಿಲ್ಲ.

ನಿಮ್ಮ ಕಾರ್ಡ್ ವಿತರಕರು, ಪಾವತಿ ನೆಟ್‌ವರ್ಕ್ ಅಥವಾ ನಿಮ್ಮ ಕಾರ್ಡ್ ವಿತರಕರಿಂದ ದೃಢೀಕರಿಸಲ್ಪಟ್ಟ ಪೂರೈಕೆದಾರರು ಕಾರ್ಡ್ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳ ಕುರಿತು ಮಾಹಿತಿಯನ್ನು Appleನೊಂದಿಗೆ ಹಂಚಿಕೊಳ್ಳಬಹುದು, ಉದಾಹರಣೆಗೆ ಇದು ಪ್ರತಿಫಲಗಳು ಅಥವಾ ಕಂತು ಕಾರ್ಯಕ್ರಮಗಳನ್ನು ಬೆಂಬಲಿಸುತ್ತದೆಯೇ, ಇದರಿಂದ ಕೆಲವು Apple Pay ಫೀಚರ್‌ಗಳ ಅರ್ಹತೆಯನ್ನು ನಿರ್ಧರಿಸಬಹುದು. Apple Payಯನ್ನು ಸಕ್ರಿಯಗೊಳಿಸಲು, ಕಾರ್ಡ್ ಅರ್ಹತೆಯನ್ನು ನಿರ್ಧರಿಸಲು, Apple Pay ಮೂಲಕ ನಿಮ್ಮ ಕಾರ್ಡ್ ಅನ್ನು ಸೆಟಪ್ ಮಾಡಲು ಮತ್ತು ವಂಚನೆಯನ್ನು ತಡೆಗಟ್ಟಲು ಆ ಘಟಕಗಳಿಗೆ Apple ಮಾಹಿತಿಯನ್ನು ಒದಗಿಸಬಹುದು:

  • ನಿಮ್ಮ ಕ್ರೆಡಿಟ್, ಡೆಬಿಟ್ ಅಥವಾ ಪ್ರಿಪೇಯ್ಡ್ ಕಾರ್ಡ್ ಸಂಖ್ಯೆ
  • ನಿಮ್ಮ Apple ಖಾತೆಯ ಜೊತೆಗೆ ಸಂಯೋಜಿತವಾಗಿರುವ ಹೆಸರು ಮತ್ತು ಬಿಲ್ಲಿಂಗ್ ವಿಳಾಸ
  • ನಿಮ್ಮ Apple ಖಾತೆಯ ಚಟುವಟಿಕೆಯ ಕುರಿತು ಸಾಮಾನ್ಯ ಮಾಹಿತಿ (ಉದಾಹರಣೆಗೆ, ನೀವು iTunesನಲ್ಲಿ ವಹಿವಾಟುಗಳ ಸುದೀರ್ಘ ಇತಿಹಾಸವನ್ನು ಹೊಂದಿದ್ದರೆ)
  • ನಿಮ್ಮ ಸಾಧನದ ಕುರಿತು ಮಾಹಿತಿ ಮತ್ತು Apple Watch ಅನ್ನು ಬಳಸುತ್ತಿದ್ದರೆ, ಪೇರ್ ಮಾಡಲಾದ iOS ಸಾಧನ (ಉದಾಹರಣೆಗೆ, ಸಾಧನದ ಐಡೆಂಟಿಫೈಯರ್, ಫೋನ್ ಸಂಖ್ಯೆ ಮತ್ತು ಹೆಸರು ಹಾಗೂ ಮಾಡಲ್, ನಿಮ್ಮ Apple Watch ಮತ್ತು ಪೇರ್ ಆಗಿರುವ iOS ಸಾಧನ ಎರಡಕ್ಕೂ)
  • ನಿಮ್ಮ ಕಾರ್ಡ್ ಅನ್ನು ನೀವು ಸೇರಿಸುವ ಸಮಯದಲ್ಲಿನ ಸ್ಥಳ (ನೀವು ಸ್ಥಳ ಸೇವೆಗಳನ್ನು ಸಕ್ರಿಯಗೊಳಿಸಿದ್ದರೆ)
  • ಪಾವತಿ ಕಾರ್ಡ್‌ಗಳನ್ನು ಸೇರಿಸುವ ಖಾತೆ ಅಥವಾ ಸಾಧನದ ಇತಿಹಾಸ
  • ನೀವು ಸೇರಿಸಿದ ಅಥವಾ Apple Payಗೆ ಸೇರಿಸಲು ಪ್ರಯತ್ನಿಸಿದ ಪಾವತಿ ಕಾರ್ಡ್‌ಗಳಿಂದ ದೊರೆತ ಮಾಹಿತಿಗೆ ಸಂಬಂಧಿಸಿದ ಒಟ್ಟು ಅಂಕಿಅಂಶಗಳು

ಬ್ಯಾಂಕಿಂಗ್ ಆ್ಯಪ್‌ನಂತಹ ಥರ್ಡ್ ಪಾರ್ಟಿ ಆ್ಯಪ್ ಅನ್ನು ಬಳಸಿಕೊಂಡು ನೀವು Apple Payಗೆ ಕಾರ್ಡ್ ಅನ್ನು ಸೇರಿಸಿದಾಗ, ಆ್ಯಪ್ ನಿಮ್ಮ ಸಾಧನಕ್ಕೆ ಖಾತೆ ಅಥವಾ ಕಾರ್ಡ್ ಐಡೆಂಟಿಫೈಯರ್ ಅನ್ನು ಕಳುಹಿಸುತ್ತದೆ. ನಿಮ್ಮ ಕಾರ್ಡ್‌ನ ಅರ್ಹತೆಯನ್ನು ನಿರ್ಧರಿಸಲು, Apple Pay ಜೊತೆಗೆ ನಿಮ್ಮ ಕಾರ್ಡ್ ಅನ್ನು ಸೆಟ್ ಮಾಡಲು ಮತ್ತು ವಂಚನೆಯನ್ನು ತಡೆಗಟ್ಟಲು ಈ ಮಾಹಿತಿಯನ್ನು Apple ಮತ್ತು ನಿಮ್ಮ ಕಾರ್ಡ್ ವಿತರಕರು ಬಳಸುತ್ತಾರೆ.

ನೀವು ಇತರೆ ಸಾಧನಗಳಲ್ಲಿ ಹೊಂದಿರುವ ಅಥವಾ ಇತ್ತೀಚೆಗೆ ಹೊಂದಿದ್ದ Apple Pay ಕಾರ್ಡ್‌ಗಳನ್ನು ಸೆಟಪ್ ಮಾಡುವುದಕ್ಕೆ ನಿಮಗೆ ಸಹಾಯ ಮಾಡಲು, Apple ನಿಮ್ಮ Apple ಖಾತೆಯೊಂದಿಗೆ ಆ Apple Pay ಕಾರ್ಡ್‌ಗಳಿಗಾಗಿ ಕಾರ್ಡ್ ರೆಫರೆನ್ಸ್ ಅನ್ನು ಸಂಗ್ರಹಿಸುತ್ತದೆ, ಭದ್ರತಾ ಕೋಡ್ ನಮೂದಿಸಿದ ನಂತರ ಕಾರ್ಡ್ ಅನ್ನು ಮರಳಿ ಸೇರಿಸಲು ಕಾರ್ಡ್ ವಿತರಕರು ಅಥವಾ ಪಾವತಿ ನೆಟ್‌ವರ್ಕ್‌ನೊಂದಿಗೆ ಅದನ್ನು ಬಳಸಬಹುದು. Apple Pay ಮೂಲ ಕ್ರೆಡಿಟ್, ಡೆಬಿಟ್ ಅಥವಾ ಪ್ರಿಪೇಯ್ಡ್ ಕಾರ್ಡ್ ಸಂಖ್ಯೆಯನ್ನು ಸಂಗ್ರಹಿಸುವುದಿಲ್ಲ. ನೀವು ಹೊಸ ಸಾಧನಕ್ಕೆ ಮೈಗ್ರೇಟ್ ಆದಾಗ, ವಂಚನೆಯನ್ನು ತಡೆಗಟ್ಟಲು Apple ನಿಮ್ಮ ಹತ್ತಿರವಿರುವ iCloud-ಸಕ್ರಿಯಗೊಳಿಸಿದ ಸಾಧನಗಳ ಬಗೆಗಿನ ಮಾಹಿತಿಯನ್ನು ಸಂಗ್ರಹಿಸುತ್ತದೆ. ನಿಮ್ಮ Apple ಖಾತೆಯೊಂದಿಗೆ ಸಂಯೋಜಿಸಿರುವ iCloud-ಸಕ್ರಿಯಗೊಳಿಸಿದ ಸಾಧನಗಳ ಕುರಿತು Apple ಹೊಂದಿರುವ ಮಾಹಿತಿಯ ವಿವರಣೆಗಾಗಿ, www.apple.com/legal/privacy/data/en/apple-id ಎಂಬಲ್ಲಿ Apple ಖಾತೆ ಮತ್ತು ಗೌಪ್ಯತೆ ಎಂಬುದಕ್ಕೆ ಭೇಟಿ ನೀಡಿ.

ಸೆಟ್ಟಿಂಗ್ಸ್ > ವಾಲೆಟ್ ಮತ್ತು Apple Pay ಎಂಬಲ್ಲಿಗೆ ಹೋಗಿ, “ಕಾರ್ಡ್‌ ಅನ್ನು Apple Pay ಜೊತೆಗೆ ಬಳಸಿ” ಎಂಬುದನ್ನು ಸಕ್ರಿಯಗೊಳಿಸುವ ಮೂಲಕ ನಿಮ್ಮ iCloud ಕೀಚೇನ್‌ನಲ್ಲಿ ಸಂಗ್ರಹಿಸಿದ ಸೇವ್ ಮಾಡಲಾದ ಸ್ವಯಂಭರ್ತಿ ಕಾರ್ಡ್‌ಗಳನ್ನು Apple Payಗೆ ಸೇರಿಸಬಹುದು. ಸಕ್ರಿಯಗೊಳಿಸಿದಾಗ, ನಿಮ್ಮ ಸಾಧನವು Apple Pay ಅರ್ಹತೆಯನ್ನು ನಿರ್ಧರಿಸಲು ನಿಮ್ಮ iCloud ಕೀಚೇನ್‌ನಲ್ಲಿನ ನಿಮ್ಮ ಸ್ವಯಂಭರ್ತಿ ಕಾರ್ಡ್ ಸಂಖ್ಯೆಗಳನ್ನು ನಿಮ್ಮ ಕಾರ್ಡ್‌ಗಳ ಪಾವತಿ ನೆಟ್‌ವರ್ಕ್‌ನೊಂದಿಗೆ ಹಂಚಿಕೊಳ್ಳುತ್ತದೆ. ಅರ್ಹರಾಗಿದ್ದರೆ, ಹೆಚ್ಚು ಸುರಕ್ಷಿತ ವಹಿವಾಟುಗಳನ್ನು ಸಾಧ್ಯವಾಗಿಸುವುದಕ್ಕಾಗಿ ನಿಮ್ಮ ಸೇವ್ ಮಾಡಲಾದ ಸ್ವಯಂಭರ್ತಿ ಕಾರ್ಡ್‌ಗಳನ್ನು Apple Payಗೆ ಸೇರಿಸಲು ನೀವು ಮುಂದುವರಿಯಬಹುದು. ಒಮ್ಮೆ ಪೂರೈಸಿದ ನಂತರ, ನಿಮ್ಮ ಸೇವ್ ಮಾಡಲಾದ ಸ್ವಯಂಭರ್ತಿ ಕಾರ್ಡ್ ಸಂಖ್ಯೆಗಳನ್ನು ಸಂಬಂಧಿತ Apple Pay ಪಾಸ್‌ಗಳ ಹಿಂಭಾಗದಲ್ಲಿ ನಿಮ್ಮ ಅನುಕೂಲತೆಗಾಗಿ ತೋರಿಸಬಹುದು. ನಿಮ್ಮ ಸೇವ್ ಮಾಡಲಾದ ಸ್ವಯಂಭರ್ತಿ ಕಾರ್ಡ್ ಸಂಖ್ಯೆಗಳು ನಿಮ್ಮ iCloud ಕೀಚೇನ್‌ನಲ್ಲಿ ಸಂಗ್ರಹವಾಗಿರುತ್ತವೆ, ಅವುಗಳನ್ನು ಆಕ್ಸೆಸ್ ಮಾಡಲು Appleಗೆ ಸಾಧ್ಯವಾಗುವುದಿಲ್ಲ ಮತ್ತು ಅವುಗಳನ್ನು Apple Pay ವಹಿವಾಟುಗಳಿಗಾಗಿ ಬಳಸಲಾಗುವುದಿಲ್ಲ.

Apple Pay ಮೂಲಕ ಪಾವತಿಸಲಾಗುತ್ತಿದೆ

ನೀವು ಪಾವತಿಯನ್ನು ಪ್ರಾರಂಭಿಸಿದಾಗ, ತೆರಿಗೆ ಮತ್ತು ಷಿಪ್ಪಿಂಗ್ ವೆಚ್ಚದ ಲೆಕ್ಕಾಚಾರವನ್ನು ಸಕ್ರಿಯಗೊಳಿಸಲು ನಿಮ್ಮ ಪಿನ್ ಕೋಡ್, ಪೋಸ್ಟಲ್ ಕೋಡ್ ಅಥವಾ ಇತರ ಸಮಾನ ಮಾಹಿತಿಯನ್ನು ಆ್ಯಪ್, ವೆಬ್‌ಸೈಟ್ ಅಥವಾ ವ್ಯಾಪಾರಿಗೆ ಒದಗಿಸಬಹುದು. ನೀವು ಥರ್ಡ್ ಪಾರ್ಟಿ ಬ್ರೌಸರ್‌ನಲ್ಲಿ ಪಾವತಿಯನ್ನು ಪ್ರಾರಂಭಿಸಿದಾಗ, ಬ್ರೌಸರ್ ನಿಮ್ಮ Apple Payಯನ್ನು ಬೆಂಬಲಿಸುವ ಸಾಧನದೊಂದಿಗೆ ಸ್ಕ್ಯಾನ್ ಮಾಡಲು QR ಕೋಡ್ ಅಥವಾ ಆ್ಯಪ್ ಕ್ಲಿಪ್ ಕೋಡ್ ಅನ್ನು ಜನರೇಟ್ ಮಾಡುತ್ತದೆ. ಸ್ಕ್ಯಾನ್ ಮಾಡಿದ ನಂತರ, Apple ಬ್ರೌಸರ್ ಮತ್ತು Apple Pay ಬೆಂಬಲಿಸುವ ಸಾಧನದ ನಡುವೆ ಸಂವಹನ ಚಾನಲ್ ಅನ್ನು ಪ್ರಾರಂಭಿಸುತ್ತದೆ, ಅದರ ಮೂಲಕ ಬ್ರೌಸರ್ ಮತ್ತು ಸಾಧನವು ಸೂಕ್ತವಾದ ವಹಿವಾಟು ಮತ್ತು ಬಿಲ್ಲಿಂಗ್ ಮತ್ತು/ಅಥವಾ ವಹಿವಾಟನ್ನು ಪ್ರಕ್ರಿಯೆಗೊಳಿಸಲು ಅಗತ್ಯವಾದ ಷಿಪ್ಪಿಂಗ್ ಮಾಹಿತಿಯನ್ನು ಹಂಚಿಕೊಳ್ಳುತ್ತದೆ.

ಕಂತುಗಳು ಅಥವಾ ಬಹುಮಾನಗಳ ಮೂಲಕ ಪಾವತಿಸುವ ಸಾಮರ್ಥ್ಯದಂತಹ ವರ್ಧಿತ Apple Pay ಪಾವತಿ ಫೀಚರ್‌ಗಳನ್ನು ಸಕ್ರಿಯಗೊಳಿಸಿದರೆ, ನೀವು Apple Pay ಖರೀದಿಯನ್ನು ಪ್ರಾರಂಭಿಸಿದ ನಂತರ, ನಿಮ್ಮ ವಾಲೆಟ್‌ನಲ್ಲಿ ನೀವು ಹೊಂದಿರುವ ಕಾರ್ಡ್‌ಗಳು, ಆ ಕಾರ್ಡ್‌ಗಳ ಪ್ರಯೋಜನಗಳು ಮತ್ತು ಫೀಚರ್‌ಗಳನ್ನು ಆಧರಿಸಿ, ನಿಮಗೆ ಲಭ್ಯವಿರುವ ಪಾವತಿ ಆಯ್ಕೆಗಳನ್ನು Apple ಗುರುತಿಸುತ್ತದೆ, ಈ ಮಾಹಿತಿಯನ್ನು ಕಾರ್ಡ್ ವಿತರಕರು Appleಗೆ ಒದಗಿಸುತ್ತಾರೆ. Apple, ನಿಮಗೆ ಲಭ್ಯವಿರಬಹುದಾದ ಮತ್ತು ನಿಮ್ಮ ವಾಲೆಟ್‌ನಲ್ಲಿ ಇನ್ನೂ ಇಲ್ಲದಿರುವ ಹೆಚ್ಚುವರಿ ಪಾವತಿ ಆಯ್ಕೆಗಳನ್ನು ಗುರುತಿಸಲು ನೀವು ಆರಿಸಬಹುದು. ಇದನ್ನು ಮಾಡಲು, ಆ ವಹಿವಾಟಿಗೆ ಹೆಚ್ಚುವರಿ ಪಾವತಿ ವಿಧಾನಗಳು ಲಭ್ಯವಿದೆಯೇ ಎಂಬುದನ್ನು ನಿರ್ಧರಿಸಲು, ಉದಾಹರಣೆಗೆ ವ್ಯಾಪಾರಿ ಮತ್ತು ಮೊತ್ತ, Apple ನಿಮ್ಮ ವಹಿವಾಟಿನ ಕುರಿತು ಮಾಹಿತಿಯನ್ನು ಬಳಸುತ್ತದೆ. Apple ವಹಿವಾಟುಗಳು ಮತ್ತು ಪಾವತಿ ವಿಧಾನದ ಅರ್ಹತಾ ಪರಿಶೀಲನೆಗಳ ಕುರಿತಾದ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ನಿಮಗೆ ಸಂಬಂಧಪಡುವ ರೀತಿಯಲ್ಲಿ ಇರಿಸಕೊಳ್ಳುವುದಿಲ್ಲ. ನೀವು ಹೊಸ ಪಾವತಿ ವಿಧಾನಕ್ಕೆ ಅರ್ಜಿ ಸಲ್ಲಿಸಲು ಆಯ್ಕೆ ಮಾಡಿದರೆ, ನಿಮ್ಮ ಅರ್ಜಿಯ ಮಾಹಿತಿಯನ್ನು ನೇರವಾಗಿ ವಿತರಕರೊಂದಿಗೆ ಹಂಚಿಕೊಳ್ಳಲಾಗುತ್ತದೆ ಮತ್ತು Appleನಿಂದ ನೋಡಲಾಗುವುದಿಲ್ಲ ಅಥವಾ ಸಂಗ್ರಹಿಸಲಾಗುವುದಿಲ್ಲ. ತಿಳುವಳಿಕೆಯುಳ್ಳ ಹಣಕಾಸಿನ ನಿರ್ಧಾರಗಳನ್ನು ಮಾಡಲು ನಿಮಗೆ ಸಹಾಯ ಮಾಡಲು, ನೀವು ರಿವಾರ್ಡ್‌ಗಳನ್ನು ಬಳಸಿಕೊಂಡು ಪಾವತಿಸಲು ಆಯ್ಕೆಮಾಡಿದರೆ, ನಿಮ್ಮ ಪ್ರಸ್ತುತ ರಿವಾರ್ಡ್ ಬ್ಯಾಲೆನ್ಸ್ ಅನ್ನು ಪಡೆದುಕೊಳ್ಳಲು ಮತ್ತು ಡಿಸ್‌ಪ್ಲೇ ಮಾಡಲು, ವಹಿವಾಟಿಗಾಗಿ ಶುಲ್ಕ ವಿಧಿಸಲು ಬಳಸುವ ರಿವಾರ್ಡ್‌ಗಳ ಪಾಯಿಂಟ್‌ಗಳು (ಅಥವಾ ಸಮಾನ) ಮತ್ತು ವಹಿವಾಟಿನ ನಂತರದ ನಿಮ್ಮ ರಿವಾರ್ಡ್ ಬ್ಯಾಲೆನ್ಸ್, ನಿಮ್ಮ ಕಾರ್ಡ್, ಕಾರ್ಡ್ ಫೀಚರ್‌ಗಳು ಮತ್ತು ಪ್ರಯೋಜನಗಳು, ಹಾಗೆಯೇ ವಹಿವಾಟು ನಡೆಸಿದ ವ್ಯಾಪಾರಿ ಮತ್ತು ವಹಿವಾಟಿನ ಮೊತ್ತದ ಮಾಹಿತಿಯನ್ನು Apple ಬಳಸಬಹುದು. ನಿಮ್ಮ ಹಣಕಾಸಿನ ಪರಿಸ್ಥಿತಿಯ ಆಧಾರದ ಮೇಲೆ ಸರಿಯಾದ ಕಂತಿನ ಪ್ಲ್ಯಾನ್ ಅನ್ನು ಆಯ್ಕೆ ಮಾಡುವುದಕ್ಕಾಗಿ ನಿಮಗೆ ಅವಕಾಶ ನೀಡಲು, ಭಾಗವಹಿಸುತ್ತಿರುವ ನಿಮ್ಮ ಕಾರ್ಡ್ ವಿತರಕರಿಗೆ Apple ವ್ಯಾಪಾರಿ ಮತ್ತು ಮೊತ್ತದ ಮಾಹಿತಿಯನ್ನು ಒದಗಿಸುತ್ತದೆ, ಅವರು ಅರ್ಹತೆಯನ್ನು ಮೌಲ್ಯಮಾಪನ ಮಾಡಲು ಮತ್ತು Appleಗೆ ಪ್ರದರ್ಶನಕ್ಕಾಗಿ ಕಂತಿನ ಆಯ್ಕೆಗಳ ಪಟ್ಟಿಯನ್ನು ಒದಗಿಸಲು ಈ ಮಾಹಿತಿಯನ್ನು ಬಳಸುತ್ತಾರೆ. ವರ್ಧಿತ Apple Pay ಪಾವತಿ ಫೀಚರ್‌ಗಳನ್ನು ಒದಗಿಸಲು ಪ್ರಕ್ರಿಯೆಗೊಳಿಸಲಾದ ಈ ಮಾಹಿತಿಯನ್ನು ನಿಮಗೆ ಸಂಬಂಧಪಡುವ ರೀತಿಯಲ್ಲಿ Apple ಇರಿಸಿಕೊಳ್ಳುವುದಿಲ್ಲ.

ನೀವು ಪಾವತಿಯನ್ನು ದೃಢೀಕರಿಸಿದ ನಂತರ, ಸಾಧನ ಅಥವಾ ವ್ಯಾಪಾರಿ-ನಿರ್ದಿಷ್ಟ ಖಾತೆ ಸಂಖ್ಯೆ, ನಿಮ್ಮ ಷಿಪ್ಪಿಂಗ್ ವಿಳಾಸ ಅಥವಾ ಈಮೇಲ್ ವಿಳಾಸದಂತಹ ವ್ಯಾಪಾರಿ ವಿನಂತಿಸಿದ ಇತರ ಮಾಹಿತಿಯನ್ನು ಸಹ ಒದಗಿಸಲಾಗುತ್ತದೆ. ನೀವು ಯಾವುದೇ ವ್ಯಾಪಾರಿಗೆ ಪಾವತಿಸಲು ಸಾಮಾಜಿಕ ಮಾಧ್ಯಮ ಅಥವಾ ಜನರೇಟಿವ್ AI ಆ್ಯಪ್‌ನಂತಹ ಥರ್ಡ್-ಪಾರ್ಟಿ ಆ್ಯಪ್ ಅಥವಾ ವೆಬ್‌ಸೈಟ್ ಅನ್ನು ಬಳಸುತ್ತಿದ್ದರೆ, ವ್ಯಾಪಾರಿಯು ವಿನಂತಿಸಿದ ಇತರ ಮಾಹಿತಿಯನ್ನು ಆ ಥರ್ಡ್-ಪಾರ್ಟಿ ಆ್ಯಪ್ ಅಥವಾ ವೆಬ್‌ಸೈಟ್ ಆ್ಯಕ್ಸೆಸ್ ಮಾಡಬಹುದು. Apple Pay ವಹಿವಾಟನ್ನು ಸುಗಮಗೊಳಿಸುವ ಉದ್ದೇಶಗಳಿಗಾಗಿ ಮಾತ್ರ Apple ಈ ಮಾಹಿತಿಯನ್ನು ಬಳಸಲು ಬಯಸುತ್ತದೆ. ನೀವು Apple Payಯನ್ನು ಬಳಸುವಾಗ ನಿಮ್ಮ ಕ್ರೆಡಿಟ್, ಡೆಬಿಟ್ ಅಥವಾ ಪ್ರೀಪೇಯ್ಡ್ ಕಾರ್ಡ್‌ನಿಂದ ಕಾರ್ಡ್ ಸಂಖ್ಯೆಯನ್ನು ಒದಗಿಸಲಾಗುವುದಿಲ್ಲ.

ಸಬ್‌ಸ್ಕ್ರಿಪ್ಶನ್‌ಗಳಂತಹ ಯಾವುದೇ ಮರುಕಳಿಸುವ ಅಥವಾ ಇತರ ವ್ಯಾಪಾರಿ ಪ್ರಾರಂಭಿಸಿದ ಶುಲ್ಕಗಳು ನಿಮ್ಮಿಂದ ಮಂಜೂರಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಸಹಾಯ ಮಾಡಲು, ಮರುಕಳಿಸುವ ಅಥವಾ ವ್ಯಾಪಾರಿ ಪ್ರಾರಂಭಿಸಿದ ಶುಲ್ಕಗಳಿಗಾಗಿ ಭಾಗಿಯಾದ ವ್ಯಾಪಾರಿಗಳಿಗೆ ಅರ್ಹ Apple Pay ಪಾವತಿ ವಿಧಾನಗಳನ್ನು ಒದಗಿಸಲು ನೀವು ಆಯ್ಕೆ ಮಾಡಿದಾಗ, ನಿಮ್ಮ ವಿತರಕರು ಮತ್ತು/ಅಥವಾ ಪಾವತಿ ನೆಟ್‌ವರ್ಕ್ ಅನುಮೋದಿಸುತ್ತದೆ ಮತ್ತು ಅಂತಹ ಶುಲ್ಕಗಳಿಗೆ ಬಳಸಬೇಕಾದ ವ್ಯಾಪಾರಿ ನಿರ್ದಿಷ್ಟ ಖಾತೆ ಸಂಖ್ಯೆಯನ್ನು ರಚಿಸುತ್ತದೆ. ನೀವು ನಿರ್ದಿಷ್ಟ ಕ್ರಮವನ್ನು ತೆಗೆದುಕೊಳ್ಳದೆಯೇ ವಹಿವಾಟುಗಳನ್ನು ಮಂಜೂರು ಮಾಡಲು, ಭಾಗಿಯಾದ ವ್ಯಾಪಾರಿಯು ಆ ವ್ಯಾಪಾರಿ ನಿರ್ದಿಷ್ಟ ಖಾತೆ ಸಂಖ್ಯೆಯನ್ನು ಮಾತ್ರ ಬಳಸಬಹುದು. ನಿಮ್ಮ ವ್ಯಾಪಾರಿ-ನಿರ್ದಿಷ್ಟವಾದ ಖಾತೆ ಸಂಖ್ಯೆಗಳ ಜೊತೆಗೆ ಯಾವ ವ್ಯಾಪಾರಿಗಳು ಸಂಯೋಜಿತರಾಗಿದ್ದಾರೆ ಎನ್ನುವುದು Appleಗೆ ತಿಳಿದಿರುತ್ತದೆ, ಆದರೆ ನೀವು ಏನು ಖರೀದಿಸಿದ್ದೀರಿ ಅಥವಾ ಅದಕ್ಕೆ ಎಷ್ಟು ಪಾವತಿ ಮಾಡಿದ್ದೀರಿ ಎಂಬ ವಿವರಗಳು ತಿಳಿದಿರುವುದಿಲ್ಲ. ಕಾರ್ಡ್ ಅನ್ನು ಟ್ಯಾಪ್ ಮಾಡುವ ಮೂಲಕ ಮತ್ತು ಕಾರ್ಡ್ ವಿವರಗಳನ್ನು ವೀಕ್ಷಿಸಲು ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ ವಾಲೆಟ್‌ನಲ್ಲಿ ನಿಮ್ಮ ವ್ಯಾಪಾರಿ ನಿರ್ದಿಷ್ಟ ಖಾತೆ ಸಂಖ್ಯೆಗಳನ್ನು ನೀವು ನಿರ್ವಹಿಸಬಹುದು.

ಕೆಲವು ವರ್ಧಿತ ವಂಚನೆ ತಡೆಗಟ್ಟುವಿಕೆ ಹೊಂದಿರುವ ಕಾರ್ಡ್‌ಗಳಿಗಾಗಿ, ನೀವು ಆನ್‌ಲೈನ್ ಅಥವಾ ಆ್ಯಪ್‌ನಲ್ಲಿ ವಹಿವಾಟು ನಡೆಸಲು ಪ್ರಯತ್ನಿಸಿದಾಗ, ಸಾಧನದಲ್ಲಿ ವಂಚನೆ ತಡೆಗಟ್ಟುವಿಕೆ ಮೌಲ್ಯಮಾಪನಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ನೀವು ವಾಲೆಟ್‌ಗಾಗಿ ಸ್ಥಳ ಸೇವೆಗಳನ್ನು ಸಕ್ರಿಯಗೊಳಿಸಿದ್ದರೆ, ನಿಮ್ಮ ಸಾಧನವು ನಿಮ್ಮ Apple ಖಾತೆ, ಸಾಧನ ಮತ್ತು ಸ್ಥಳದ ಕುರಿತ ಮಾಹಿತಿಯನ್ನು ಮೌಲ್ಯಮಾಪನ ಮಾಡುತ್ತದೆ. ಸಾಧನದಲ್ಲಿನ ವಂಚನೆ ತಡೆಗಟ್ಟುವಿಕೆ ಮೌಲ್ಯಮಾಪನಗಳ ಔಟ್‌ಪುಟ್ ಅನ್ನು Appleಗೆ ಕಳುಹಿಸಲಾಗುತ್ತದೆ, ಆದರೆ ಅದರಲ್ಲಿರುವ ಡೇಟವನ್ನು ಅಲ್ಲ. Apple Pay ವಹಿವಾಟಿನ ವಂಚನೆ ತಡೆಗಟ್ಟುವಿಕೆ ಮೌಲ್ಯಮಾಪನಗಳನ್ನು ಅಭಿವೃದ್ಧಿಪಡಿಸಲು ನಿಮ್ಮ ಸಾಧನ ಮತ್ತು ಖಾತೆಯ ಕುರಿತು Apple ತಿಳಿದಿರುವ ಮಾಹಿತಿಯೊಂದಿಗೆ ಇದನ್ನು ಸಂಯೋಜಿಸಲಾಗುತ್ತದೆ. ವಹಿವಾಟಿನ ಸಮಯದಲ್ಲಿ ವಂಚನೆ ತಡೆಗಟ್ಟುವ ಉದ್ದೇಶಗಳಿಗಾಗಿ ಲಭ್ಯವಿರುವಾಗ ಷಿಪ್ಪಿಂಗ್ ವಿಳಾಸದ ಐಡೆಂಟಿಫೈಯರ್ ಮತ್ತು IP ವಿಳಾಸದೊಂದಿಗೆ ಈ ವಹಿವಾಟುಗಳ ವಂಚನೆ ತಡೆಗಟ್ಟುವಿಕೆ ಮೌಲ್ಯಮಾಪನಗಳನ್ನು ನಿಮ್ಮ ಪಾವತಿ ನೆಟ್‌ವರ್ಕ್‌ನೊಂದಿಗೆ ಹಂಚಿಕೊಳ್ಳಬಹುದು. ಷಿಪ್ಪಿಂಗ್ ವಿಳಾಸದ ಐಡೆಂಟಿಫೈಯರ್, ಪ್ರತಿ ಪಾವತಿ ನೆಟ್‌ವರ್ಕ್‌ಗೆ ಭಿನ್ನವಾಗಿರುತ್ತದೆ ಮತ್ತು ನಿಮ್ಮ ಸಾಧನದಲ್ಲಿರುವ ನಿರ್ದಿಷ್ಟ ಕಾರ್ಡ್ ಅನ್ನು ಬಳಸಿಕೊಂಡು ವಿಭಿನ್ನ ವಹಿವಾಟುಗಳಿಗೆ ಷಿಪ್ಪಿಂಗ್ ವಿಳಾಸಗಳು ಆಧಾರವಾಗಿರುವ ವಿಳಾಸವನ್ನು ಬಹಿರಂಗಪಡಿಸದ ರೀತಿಯಲ್ಲಿ ಒಂದೇ ಆಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಳಸಬಹುದು. ವಾಲೆಟ್‌ನಲ್ಲಿ ನಿಮ್ಮ ಪಾವತಿ ರುಜುವಾತುಗಳ ಹಿಂಭಾಗಕ್ಕೆ ಹೋಗುವ ಮೂಲಕ ಯಾವುದೇ ಸಮಯದಲ್ಲಿ ಕಾರ್ಡ್ ಈ ವರ್ಧಿತ ವಂಚನೆ ತಡೆಗಟ್ಟುವಿಕೆಯನ್ನು ಹೊಂದಿದೆಯೇ ಎಂಬುದನ್ನು ನೀವು ಪರಿಶೀಲಿಸಬಹುದು. ನಿಮ್ಮ ಪಾವತಿ ನೆಟ್‌ವರ್ಕ್‌ನೊಂದಿಗೆ ವಂಚನೆ ತಡೆಗಟ್ಟುವಿಕೆ ಮೌಲ್ಯಮಾಪನಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಲು ನೀವು ಇನ್ನೊಂದು ಕಾರ್ಡ್ ಅನ್ನು ಆಯ್ಕೆ ಮಾಡಬಹುದು.

iOS, watchOS ಅಥವಾ macOSನಲ್ಲಿ Apple Payಯನ್ನು ಬಳಸುವ ಆ್ಯಪ್ ಬಳಸುವಾಗ ಅಥವಾ Safari ಮೂಲಕ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ, ಆ ಸಾಧನದಲ್ಲಿ ನೀವು Apple Payಯನ್ನು ಸಕ್ರಿಯಗೊಳಿಸಿದ್ದೀರಾ ಎಂದು ಆ್ಯಪ್ ಅಥವಾ ವೆಬ್‌ಸೈಟ್ ಪರಿಶೀಲಿಸಬಹುದು. iOS ಸಾಧನದಲ್ಲಿನ Safariಯಲ್ಲಿ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಅಥವಾ ಕಾರ್ಡ್ ಅನ್ನು ಸೇರಿಸಲಾಗದ Macಗೆ ಭೇಟಿ ನೀಡಿದಾಗ, ನೀವು ಅದೇ Apple ಖಾತೆಯನ್ನು ಬಳಸಿಕೊಂಡು iPhone ಅಥವಾ Apple Watchನಲ್ಲಿ Apple Payಯನ್ನು ಸೆಟಪ್ ಮಾಡಿರುವಿರಾ ಎಂಬುದನ್ನು ವೆಬ್‌ಸೈಟ್ ಪರಿಶೀಲಿಸಬಹುದು. ನಿಮ್ಮ ಸೆಟ್ಟಿಂಗ್ಸ್ ಅನ್ನು ಬದಲಾಯಿಸುವ ಮೂಲಕ ನೀವು ಭೇಟಿ ನೀಡುವ ವೆಬ್‌ಸೈಟ್‌ಗಳಿಗೆ Apple Payಯನ್ನು ಸಕ್ರಿಯಗೊಳಿಸಲಾಗಿದೆಯೇ ಎಂದು ಪರಿಶೀಲಿಸುವುದನ್ನು ನೀವು ನಿಷ್ಕ್ರಿಯಗೊಳಿಸಬಹುದು. ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ, ಸೆಟ್ಟಿಂಗ್ಸ್ > ಆ್ಯಪ್‌ಗಳು > Safari > ಸುಧಾರಿತ ಎಂಬುದಕ್ಕೆ ಹೋಗಿ ಮತ್ತು Apple Pay ಪರಿಶೀಲಿಸಿ ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡಿ. ನಿಮ್ಮ Macನಲ್ಲಿ, Safari > ಸೆಟ್ಟಿಂಗ್ಸ್ > ಸುಧಾರಿತ ಎಂಬಲ್ಲಿಗೆ ಹೋಗಿ ಹಾಗೂ “Apple Pay ಮತ್ತು Apple Cardಗಾಗಿ ಪರಿಶೀಲಿಸಲು ವೆಬ್‌ಸೈಟ್‌ಗಳನ್ನು ಅನುಮತಿಸಿ” ಎಂಬ ಆಯ್ಕೆಯನ್ನು ರದ್ದುಮಾಡಿ.

Apple ಖಾತೆ ಪಾವತಿ ವಿಧಾನಗಳನ್ನು ರಕ್ಷಿಸುವುದು

Apple ಎಕೋಸಿಸ್ಟಮ್‌ನಲ್ಲಿ ನಿಮ್ಮ ಪಾವತಿ ವಿಧಾನಗಳನ್ನು ನಿರ್ವಹಿಸುವುದಕ್ಕೆ ನಿಮಗೆ ಸಹಾಯ ಮಾಡಲು, ನಿಮ್ಮ Apple ಖಾತೆಗೆ ಫೈಲ್‌ನಲ್ಲಿ ಪಾವತಿ ವಿಧಾನವಾಗಿ ಸೇರಿಸಲು ಯಾವುದೇ Apple Pay ಪಾವತಿ ವಿಧಾನಗಳು ಅರ್ಹವಾಗಿವೆಯೇ ಎಂಬುದನ್ನು Apple ಪರಿಶೀಲಿಸಬಹುದು ಮತ್ತು ಆ ಪಾವತಿ ವಿಧಾನಗಳನ್ನು ಸೆಟ್ಟಿಂಗ್ಸ್ ಆ್ಯಪ್ > [ನಿಮ್ಮ ಹೆಸರು] > ಪಾವತಿ ಮತ್ತು ಶಿಪ್ಪಿಂಗ್ > ಪಾವತಿ ವಿಧಾನ ಸೇರಿಸಿ > ಪಾವತಿ ವಿಧಾನಗಳು ಎಂಬಲ್ಲಿ ಡಿಸ್‌ಪ್ಲೇ ಮಾಡಬಹುದು. ನಿಮ್ಮ Apple ಖಾತೆಯೊಂದಿಗೆ ನೀವು ವಹಿವಾಟು ನಡೆಸಿದಾಗ, ಫೈಲ್‌ನಲ್ಲಿರುವ ಯಾವುದೇ Apple ಖಾತೆ ಪಾವತಿ ವಿಧಾನಗಳು Apple Payಗೆ ಅರ್ಹವಾಗಿವೆಯೇ ಎಂಬುದನ್ನು ಸಹ Apple ಪರಿಶೀಲಿಸಬಹುದು. ಹಾಗಿದ್ದಲ್ಲಿ, ನಿಮ್ಮ ಪಾವತಿ ಮಾಹಿತಿಯನ್ನು ರಕ್ಷಿಸುವುದಕ್ಕೆ ಸಹಾಯ ಮಾಡಲು, Apple ಆ ಪಾವತಿ ವಿಧಾನಕ್ಕಾಗಿ Apple Payಯನ್ನು ಸಕ್ರಿಯಗೊಳಿಸಬಹುದು. ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ಸೆಟ್ಟಿಂಗ್ಸ್ > [ನಿಮ್ಮ ಹೆಸರು] > ಪಾವತಿ ಮತ್ತು ಷಿಪ್ಪಿಂಗ್ ಎಂಬುದಕ್ಕೆ ಹೋಗುವ ಮೂಲಕ ನೀವು ಯಾವುದೇ ಸಮಯದಲ್ಲಿ ನಿಮ್ಮ Apple ಖಾತೆಯ ಪಾವತಿ ವಿಧಾನಗಳನ್ನು ಮಾರ್ಪಡಿಸಬಹುದು. ನಿಮ್ಮ Macನಲ್ಲಿ, ಸಿಸ್ಟಂ ಸೆಟ್ಟಿಂಗ್ಸ್ > [ನಿಮ್ಮ ಹೆಸರು] > ಪಾವತಿ ಮತ್ತು ಷಿಪ್ಪಿಂಗ್ ಎಂಬುದಕ್ಕೆ ಹೋಗಿ.

Apple ನಿಮ್ಮ ಪಾವತಿಯ ಮಾಹಿತಿಯ ಪ್ರಸರಣ ಮಾಡುತ್ತದೆ ಆದರೆ ಅದನ್ನು ಸಂಗ್ರಹಿಸುವುದಿಲ್ಲ

ಆ್ಯಪ್‌ಗಳು, ವೆಬ್‌ಸೈಟ್‌ಗಳು ಮತ್ತು Business Chatನಲ್ಲಿ ನಿಮ್ಮ ಪಾವತಿ ಮಾಹಿತಿಯನ್ನು ಸುರಕ್ಷಿತವಾಗಿ ರವಾನಿಸಲು, ಈ ಮಾಹಿತಿಯನ್ನು Appleಗೆ ಎನ್‌ಕ್ರಿಪ್ಟೆಡ್ ರೂಪದಲ್ಲಿ ಕಳುಹಿಸಲಾಗುತ್ತದೆ, ಅಲ್ಲಿ ಮಾಹಿತಿಯನ್ನು ಸಂಕ್ಷಿಪ್ತವಾಗಿ ಡೀಕ್ರಿಪ್ಟ್ ಮಾಡಲಾಗುತ್ತದೆ ಮತ್ತು ವ್ಯಾಪಾರಿ ನಿರ್ದಿಷ್ಟ “ಕೀ” ಮೂಲಕ ಮರು ಎನ್‌ಕ್ರಿಪ್ಟ್ ಮಾಡಲಾಗುತ್ತದೆ. ಇದರಿಂದ ವ್ಯಾಪಾರಿ, ಡೆವಲಪರ್ ಅಥವಾ ಅವರ ಪಾವತಿ ಪ್ರೊಸೆಸರ್ ನಿಮ್ಮ ಪಾವತಿ ಮಾಹಿತಿಯನ್ನು ಡೀಕ್ರಿಪ್ಟ್ ಮಾಡಬಹುದು. ಕಾರ್ಡ್ ಅನ್ನು ಸೇರಿಸಲಾಗದ Mac‌ನಲ್ಲಿ ನೀವು ಪಾವತಿಯನ್ನು ಮಾಡಿದಾಗ, Mac ಮತ್ತು ಮಂಜೂರು ಮಾಡುವ ಸಾಧನವು Apple ಸರ್ವರ್‌ಗಳ ಮೂಲಕ ಎನ್‌ಕ್ರಿಪ್ಟೆಡ್ ಚಾನಲ್‌ನಲ್ಲಿ ಸಂವಹನ ನಡೆಸುತ್ತದೆ. ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಬಲ್ಲ ರೂಪದಲ್ಲಿ Apple ಈ ಯಾವುದೇ ಮಾಹಿತಿಯನ್ನು ಇರಿಸಿಕೊಳ್ಳುವುದಿಲ್ಲ.

ಥರ್ಡ್ ಪಾರ್ಟಿ ಬ್ರೌಸರ್‌ಗಳಲ್ಲಿ ಪಾವತಿಯನ್ನು ಮಾಡಲು ಸಹ Apple Pay ಅನುಮತಿಸುತ್ತದೆ ಹಾಗೂ ವಹಿವಾಟನ್ನು ಮಂಜೂರು ಮಾಡಲು Apple Payಯನ್ನು ಬೆಂಬಲಿಸುವ ಸಾಧನಗಳನ್ನು ಬಳಸಬಹುದು. ಈ ಫೀಚರ್ ಅನ್ನು ಬಳಸುವಾಗ, Apple ಸರ್ವರ್‌ಗಳ ಮೂಲಕ ಥರ್ಡ್ ಪಾರ್ಟಿ ಬ್ರೌಸರ್ ಮತ್ತು ನಿಮ್ಮ ಮಂಜೂರು ಮಾಡುವ ಸಾಧನದ ನಡುವೆ ಸಂವಹನದ ಮಾಧ್ಯಮವನ್ನು Apple ರಚಿಸುತ್ತದೆ. ಆ ಮೂಲಕ ನಿಮ್ಮ ಷಿಪ್ಪಿಂಗ್ ಮತ್ತು ಪಾವತಿ ವಿವರಗಳನ್ನು ಅಪ್‌ಡೇಟ್ ಮಾಡಲು ಮತ್ತು ನಿಮ್ಮ ಮಂಜೂರಾತಿಯನ್ನು ಒದಗಿಸಲು ನಿಮಗೆ ಅನುಮತಿಸುತ್ತದೆ. ನಿಮ್ಮ ಷಿಪ್ಪಿಂಗ್ ಮತ್ತು ಬಿಲ್ಲಿಂಗ್ ಮಾಹಿತಿ ಹಾಗೂ ನಿಮ್ಮ ಖರೀದಿಗೆ ಸಂಬಂಧಿಸಿದ ತೆರಿಗೆ ಅಥವಾ ಷಿಪ್ಪಿಂಗ್ ಶುಲ್ಕಗಳಂತಹ ವ್ಯಾಪಾರಿ ವಿಧಿಸಿದ ಶುಲ್ಕಗಳ ಕುರಿತ ಮಾಹಿತಿಯು ಸಂಕ್ಷಿಪ್ತವಾಗಿ Appleಗೆ ಗೋಚರಿಸುತ್ತದೆ. ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಬಲ್ಲ ರೂಪದಲ್ಲಿ Apple ಈ ಯಾವುದೇ ಮಾಹಿತಿಯನ್ನು ಇರಿಸಿಕೊಳ್ಳುವುದಿಲ್ಲ.

Apple Pay ಆರ್ಡರ್ ಟ್ರ್ಯಾಕಿಂಗ್

ನಿಮಗೆ ಆರ್ಡರ್ ಟ್ರ್ಯಾಕಿಂಗ್ ಒದಗಿಸಲು, Apple Pay ಮೂಲಕ ಖರೀದಿಸಿದ ನಂತರ, ಭಾಗವಹಿಸುವ ವ್ಯಾಪಾರಿಯೊಬ್ಬರು ನಿಮ್ಮ ಸಾಧನಕ್ಕೆ ಸೀಮಿತವಾದ ಆರ್ಡರ್ ಮಾಹಿತಿಯನ್ನು ನಿಮ್ಮ ಆರ್ಡರ್ ಟ್ರ್ಯಾಕ್ ಮಾಡುವ ಉದ್ದೇಶಕ್ಕಾಗಿ ನಿಮ್ಮ ಸಾಧನಕ್ಕೆ ಕಳುಹಿಸುತ್ತಾರೆ. ಮತ್ತು ವ್ಯಾಪಾರಿಗೆ ನಿರ್ದಿಷ್ಟವಾದ ಸಾಧನ ಐಡೆಂಟಿಫೈಯರ್ ಅನ್ನು Apple ವ್ಯಾಪಾರಿಗೆ ಒದಗಿಸುತ್ತದೆ ಮತ್ತು ಸಾಧನಕ್ಕೆ ಆರ್ಡರ್ ಅಪ್‌ಡೇಟ್‌ಗಳನ್ನು ನೀಡಲು ವ್ಯಾಪಾರಿ ಬಳಸಬಹುದಾದ ಪುಶ್ ಟೋಕನ್ ಅನ್ನು ಒದಗಿಸುತ್ತದೆ. Apple, ವ್ಯಾಪಾರಿ ಅಪ್‌ಡೇಟ್‌ಗಳಿಗೆ ಅನುಕೂಲ ಕಲ್ಪಿಸಿಕೊಡುತ್ತದೆ, ಆದರೆ ಆರ್ಡರ್ ಮಾಹಿತಿಯನ್ನು ಸಂಗ್ರಹಿಸಿಡುವುದಿಲ್ಲ ಅಥವಾ ಎಷ್ಟು ಪ್ರಮಾಣ, ಎಷ್ಟು ಬಾರಿ ಅಥವಾ ಯಾವ ವ್ಯಾಪಾರಿಗಳು ಆರ್ಡರ್ ಅಪ್‌ಡೇಟ್‌ಗಳನ್ನು ಕಳುಹಿಸುತ್ತಾರೆ ಎನ್ನುವುದನ್ನು ಟ್ರ್ಯಾಕ್ ಮಾಡುವುದಿಲ್ಲ. ಆರ್ಡರ್ ಟ್ರ್ಯಾಕ್ ಮಾಡುವ ಮಾಹಿತಿಯನ್ನು ಸ್ಥಳೀಯವಾಗಿ ನಿಮ್ಮ ಸಾಧನಗಳಲ್ಲಿ ಸಂಗ್ರಹಿಸಿಡಲಾಗುತ್ತದೆ ಮತ್ತು Appleಗೆ ಆ್ಯಕ್ಸೆಸ್ ಇಲ್ಲದಂತೆ ಎನ್‌ಕ್ರಿಪ್ಟೆಡ್ ಕಾಪಿಯನ್ನು ಸಿಂಕ್ ಮಾಡುವ ಮೂಲಕ ಎಲ್ಲಾ ಸಾಧನಗಳಲ್ಲಿ ಅಪ್ ಟು ಡೇಟ್ ಆಗಿ ಇರಿಸಲಾಗುತ್ತದೆ. ನೀವು ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಆರ್ಡರ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಿರ್ದಿಷ್ಟ ಆರ್ಡರ್ ಅನ್ನು ಟ್ಯಾಪ್ ಮಾಡಿ ಹಾಗೂ ಆರ್ಡರ್ ಅನ್ನು ನಿರ್ವಹಿಸಿ ಎಂಬುದನ್ನು ಟ್ಯಾಪ್ ಮಾಡುವ ಮೂಲಕ, ನೀವು ಯಾವಾಗ ಬೇಕಾದರೂ ನಿಮ್ಮ Apple Pay ಆರ್ಡರ್‌ಗಳನ್ನು ನಿರ್ವಹಿಸಬಹುದು. ನೀವು ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಆರ್ಡರ್‌ಗಳು ಎಂಬುದನ್ನು ಟ್ಯಾಫ್ ಮಾಡಿ, ‘ಇನ್ನಷ್ಟು’ ಬಟನ್ ಟ್ಯಾಪ್ ಮಾಡಿದ ನಂತರ ನೋಟಿಫಿಕೇಷನ್‌ಗಳನ್ನು ಮ್ಯೂಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ಆರ್ಡರ್‌ಗಳಿಗೆ ಸಂಬಂಧಿಸಿದ ನೋಟಿಫಿಕೇಷನ್‌ಗಳನ್ನು ಸಹ ನೀವು ನಿರ್ವಹಿಸಬಹುದು.

ನಿಮ್ಮ ಖಾತೆಯಿಂದ ನೀವು ಸೈನ್ ಔಟ್ ಮಾಡಿದಾಗ, ನಿಮ್ಮ ಸಾಧನವು ಈಗಲೂ ಆರ್ಡರ್‌ಗಳ ಕುರಿತು ಸೀಮಿತ ಮಾಹಿತಿಯನ್ನು ಉಳಿಸಿಕೊಳ್ಳಬಹುದು, ಅದಕ್ಕಾಗಿ ಸಾಧನವು ಅಪ್‌ಡೇಟ್‌ಗಳನ್ನು ಪಡೆದುಕೊಳ್ಳುತ್ತದೆ. ಈ ಮಾಹಿತಿಯು ಸಾಧನದ ಬಳಕೆದಾರರಿಗೆ ಗೋಚರವಾಗುವುದಿಲ್ಲ, ಸ್ವಲ್ಪ ಸಮಯದವರೆಗೆ ಇದನ್ನು ಉಳಿಸಿಕೊಳ್ಳಲಾಗುತ್ತದೆ ಹಾಗೂ ಈ ಮಾಹಿತಿಯನ್ನು ನಿಮ್ಮ ಸಾಧನವು ಸೈನ್ ಔಟ್ ಆದ ನಂತರ ನಿಮ್ಮ ಆರ್ಡರ್ ಮಾಹಿತಿಗೆ ಅನಧಿಕೃತ ಆ್ಯಕ್ಸೆಸ್ ಅನ್ನು ತಡೆಗಟ್ಟಲು ಸಾಧನಕ್ಕೆ ಕಳುಹಿಸಲಾಗುವ ಅಪ್‌ಡೇಟ್‌ಗಳನ್ನು ನಿಲ್ಲಿಸುವುದಕ್ಕೆ ಸಹಾಯ ಮಾಡಲು ಮಾತ್ರ ಬಳಸಿಕೊಳ್ಳುತ್ತದೆ.

ಥರ್ಡ್ ಪಾರ್ಟಿ ಆ್ಯಪ್‌ಗಳೊಂದಿಗೆ ಖಾತೆ ಚಟುವಟಿಕೆಯನ್ನು ಹಂಚಿಕೊಳ್ಳುವುದು

ನಿಮ್ಮ Apple Card, ಸೇವಿಂಗ್ಸ್ ಹಾಗೂ Apple Cash ಮತ್ತು ಇತರ ಕನೆಕ್ಟ್ ಮಾಡಿದ ಕಾರ್ಡ್‌ನ ಖಾತೆ ವಿವರಗಳು ಹಾಗೂ App Storeನಿಂದ ನೀವು ವಿಶ್ವಾಸದಿಂದ ಪಡೆದ ಭಾಗವಹಿಸುತ್ತಿರುವ ವೈಯಕ್ತಿಕ ಹಣಕಾಸು ನಿರ್ವಹಣೆ ಆ್ಯಪ್‌ಗಳ ಜೊತೆಗಿನ ವಹಿವಾಟು ಇತಿಹಾಸವನ್ನು ನೀವು ಹಂಚಿಕೊಳ್ಳಬಹುದು. ವಾಲೆಟ್‌ನಲ್ಲಿ Apple Payಯಿಂದ ನಿಮ್ಮ ಖಾತೆ ಚಟುವಟಿಕೆಯನ್ನು ಓದುವ ಸಾಮರ್ಥ್ಯವನ್ನು ಆ್ಯಪ್‌ಗಳು ವಿನಂತಿಸಬೇಕಾಗುತ್ತದೆ. ಈ ಆ್ಯಪ್‌ಗಳೊಂದಿಗೆ ನೀವು ಹಂಚಿಕೊಳ್ಳುವ ಡೇಟದ ಮೇಲೆ ನಿಮಗೆ ನಿಯಂತ್ರಣವಿರುತ್ತದೆ ಮತ್ತು ಯಾವ ಸಮಯದಲ್ಲಾದರೂ ಹಂಚಿಕೊಳ್ಳುವುದನ್ನು ಬದಲಾಯಿಸಬಹುದು. ನೀವು ಥರ್ಡ್ ಪಾರ್ಟಿ ಆ್ಯಪ್ ಜೊತೆಗೆ ಹಂಚಿಕೊಳ್ಳಲು ಬಯಸುವ ಖಾತೆಯ ಚಟುವಟಿಕೆಯನ್ನು ಆ ಆ್ಯಪ್‌ನ ಗೌಪ್ಯತೆ ನೀತಿಗೆ ಅನುಸಾರವಾಗಿ ನಿಭಾಯಿಸಲಾಗುತ್ತದೆ. ನಿಮ್ಮ ಖಾತೆಯ ಚಟುವಟಿಕೆಯನ್ನು ನೀವು ಹಂಚಿಕೊಂಡಾಗ, Apple ನಿಮ್ಮ ಖಾತೆಯ ವಿವರಗಳು ಅಥವಾ ವಹಿವಾಟಿನ ಇತಿಹಾಸವನ್ನು ನೋಡುವುದಿಲ್ಲ ಅಥವಾ ಸಂಗ್ರಹಿಸುವುದಿಲ್ಲ.

ವೈಯುಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುವುದಕ್ಕಾಗಿ ಅನ್ವಯವಾಗುವ ಕಾನೂನುಬದ್ಧ ಆಧಾರ

ಸೇವೆಯನ್ನು ಒದಗಿಸಲು ಮತ್ತು ನಮ್ಮ ಕಾನೂನು ಬಾಧ್ಯತೆಗಳನ್ನು ಅನುಸರಿಸಲು ಅಗತ್ಯವಿರುವಂತೆ Apple ಜೊತೆಗಿನ ನಿಮ್ಮ ಒಪ್ಪಂದದ ಕಾರ್ಯಕ್ಷಮತೆಗಾಗಿ ನಾವು ಸಾಮಾನ್ಯವಾಗಿ ನಿಮ್ಮ Apple Pay ವೈಯಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುತ್ತೇವೆ. ಸಮ್ಮತಿಯು ಸೂಕ್ತವಾದ ಕಾನೂನುಬದ್ಧ ಆಧಾರವಾಗಿದ್ದಲ್ಲಿ, ನಾವು ಅದನ್ನು ಅನ್ವಯವಾಗುವ ಸ್ಥಳೀಯ ಕಾನೂನುಗಳ ಪ್ರಕಾರ ಪಡೆಯುತ್ತೇವೆ.

ಅನ್ವಯವಾಗುವ ಸ್ಥಳೀಯ ಕಾನೂನುಗಳು ಅನುಮತಿಸಿದಲ್ಲಿ, ನಾವು ಈ ಕೆಳಗಿನ ಮಾಹಿತಿಯನ್ನು ಒಳಗೊಂಡಂತೆ, ಅವುಗಳ ವರ್ಗಗಳನ್ನು ಪ್ರಕ್ರಿಯೆಗೊಳಿಸಲು ನಮ್ಮ ಅಥವಾ ಯಾವುದಾದರೂ ಥರ್ಡ್ ಪಾರ್ಟಿಯ ಕಾನೂನುಬದ್ಧ ಆಸಕ್ತಿಯ ಉದ್ದೇಶಗಳಿಗೆ ಅಗತ್ಯವಾದ ಹಾಗೆ ಈ ಕೆಳಗಿನ ಪ್ರಕಾರದ ವೈಯುಕ್ತಿಕ ಡೇಟವನ್ನು ಸಂಸ್ಕರಿಸುತ್ತೇವೆ:

  • ನಿಮ್ಮ ಖಾತೆ, ಉದಾರಹಣೆಗೆ ನಿಮ್ಮ ಖಾತೆ ಸಕ್ರಿಯವಾಗಿದೆಯೇ ಇಲ್ಲವೇ ಇತ್ಯಾದಿ
  • ಸಾಧನದ ಬಗೆ, ಸಾಫ್ಟ್‌ವೇರ್ ಆವೃತ್ತಿ, ಹಾಗೂ ಸಾಧನದ ಸೀರಿಯಲ್ ನಂಬರ್‌ನಂತಹ ನಿಮ್ಮ ಸಾಧನ
  • ನಿಮ್ಮ ಪಾಸ್ ಮೇಲೆ ತೋರಿಸಲಾದ ಮಾಹಿತಿಯಂತಹ ನಿಮ್ಮ ಪಾಸ್‌ನ ಮಾಹಿತಿ
  • ಪಾಸ್‌ಗೆ ಅಪ್‌ಡೇಟ್ ಅನ್ನು ಒದಗಿಸುವ ಅಧಿಕಾರ ಹೊಂದಿರುವ ಥರ್ಡ್ ಪಾರ್ಟಿಯಂತಹ ನಿಮ್ಮ ಪಾಸ್ ವಿತರಕರು
  • ನಿಮ್ಮ Apple Pay ಬಳಕೆ, ಉದಾಹರಣೆಗೆ, ನೀವು ಸೇರಿಸಿದ Apple Pay ಪಾಸ್‌ಗಳ ಸಂಖ್ಯೆಯಾಗಿದೆ
  • ನಿಮ್ಮ ಸ್ಥಳ

ಈ ಕಾನೂನುಬದ್ಧವಾದ ಆಸಕ್ತಿಗಳು ಇವುಗಳನ್ನು ಒಳಗೊಂಡಿರುತ್ತವೆ:

  • ಪಾಸ್‌ಗಳನ್ನು ಸೇರಿಸುವುದು ಮತ್ತು ನಿರ್ವಹಿಸುವುದು
  • ನಿಮಗಾಗಿ ಮತ್ತು ಇತರರಿಗಾಗಿ ಸೇವೆಯನ್ನು ಸುಧಾರಿಸಲು ಮತ್ತು ಆಪ್ಟಿಮೈಜ್ ಮಾಡಲು ಸಹಾಯ ಮಾಡುವುದು
  • ನಿಮಗೆ ಹೆಚ್ಚು ಸೂಕ್ತವಾಗಿರುವ ಫೀಚರ್‌ಗಳನ್ನು ಕಂಡುಕೊಳ್ಳಲು ನಿಮಗೆ ಸಹಾಯ ಮಾಡುವುದು
  • ಅರ್ಹತೆಯನ್ನು ಪರಿಶೀಲಿಸುವುದು
  • ನೀವು ವಿನಂತಿಸಿದ ಸೇವೆಗಳನ್ನು ನಿಮಗೆ ಒದಗಿಸುವುದು
  • ನಿಮಗೆ Apple Pay ಹಾಗೂ ಇತರ Apple ಉತ್ಪನ್ನಗಳು, ಸೇವೆಗಳು ಹಾಗೂ ನಿಮಗೆ ಆಸಕ್ತಿಯಿರಬಹುದಾದ ಆಫರ್‌ಗಳ ಕುರಿತು ಸಂವಹನಗಳನ್ನು ಕಳುಹಿಸುವುದು
  • ಮೋಸ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯುವುದು

ಇತರ ಮಾಹಿತಿ

ವಾಲೆಟ್ ಮತ್ತು Apple Pay ಫೀಚರ್‌ಗಳ ಅರ್ಹತೆಯನ್ನು ನಿರ್ಧರಿಸಲು, ನೀವು ವಾಲೆಟ್‌ನಲ್ಲಿ ಕಾರ್ಡ್ ಟ್ಯಾಪ್ ಮಾಡಿದಾಗ, ಯಾವ ದೇಶದಲ್ಲಿ ಕಾರ್ಡ್ ಅನ್ನು ನೀಡಲಾಗಿದೆ ಮತ್ತು ಫೀಚರ್‌ನಲ್ಲಿ ಕಾರ್ಡ್ ನೀಡಿದವರ ಭಾಗವಹಿಸುವಿಕೆ ಇದೆಯೇ ಎಂದು Apple ಫೀಚರ್ ಅರ್ಹತೆಯನ್ನು ಪರೀಕ್ಷಿಸಬಹುದು.

ನೀವು ಸ್ಥಳ ಸೇವೆಗಳನ್ನು ಆನ್ ಮಾಡಿದ್ದಲ್ಲಿ, ನೀವು ಸ್ಟೋರ್‌ಗಳಲ್ಲಿ ಖರೀದಿಗಳನ್ನು ಮಾಡಲು ಸ್ಥಳ ಸೇವೆಗಳನ್ನು ಬಳಸುವ ಸಮಯದಲ್ಲಿ ನಿಮ್ಮ ಸಾಧನದ ಸ್ಥಳವನ್ನು Appleಗೆ ಅನಾಮಧೇಯವಾಗಿ ಕಳುಹಿಸಬಹುದು ಮತ್ತು ಅದನ್ನು Apple Pay ವಾಲೆಟ್ ಕಾರ್ಡ್ ವಹಿವಾಟಿನ ಇತಿಹಾಸದಲ್ಲಿ ವ್ಯಾಪಾರದ ಹೆಸರುಗಳ ನಿಖರತೆಯನ್ನು ಸುಧಾರಿಸುವುದಕ್ಕೆ ಸಹಾಯ ಮಾಡು ಬಳಸಲಾಗುತ್ತದೆ ಮತ್ತು Apple ನಕ್ಷೆ, Apple Pay ಹಾಗೂ ವಾಲೆಟ್ ಅನ್ನು ಸುಧಾರಿಸಲು ಒಟ್ಟುಗೂಡಿಸಿ ಉಳಿಸಿಕೊಳ್ಳಬಹುದು. ಸೆಟ್ಟಿಂಗ್ಸ್ ಆ್ಯಪ್ > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು > ಸಿಸ್ಟಂ ಸೇವೆಗಳು ಎಂಬಲ್ಲಿಗೆ ಹೋಗಿ, Apple Pay ವ್ಯಾಪಾರಿ ಗುರುತಿಸುವಿಕೆಯನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ, Apple Payಯ ಈ ಸ್ಥಳ ಆಧರಿತ ಕಾರ್ಯಚಟುವಟಿಕೆಯನನ್ನು ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ಯಾವುದೇ ಸಮಯದಲ್ಲಿ ನೀವು ನಿಷ್ಕ್ರಿಯಗೊಳಿಸಬಹುದು. ನಿಮ್ಮ Macನಲ್ಲಿ, ಸಿಸ್ಟಂ ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > ಗೌಪ್ಯತೆ > ಸ್ಥಳ ಸೇವೆಗಳು ಎಂಬುದಕ್ಕೆ ಹೋಗಿ, ನಂತರ ವಾಲೆಟ್ ಆಫ್ ಮಾಡಲು ಕ್ಲಿಕ್ ಮಾಡಿ.

Apple Payಯನ್ನು ಸುಧಾರಿಸುವುದಕ್ಕೆ ಸಹಾಯ ಮಾಡಲು, ನಿಮ್ಮ Apple Pay ಬಳಕೆಯ ಕುರಿತಾದ ಮಾಹಿತಿಯನ್ನು Apple ಸಂಗ್ರಹಿಸುತ್ತದೆ ಮತ್ತು ಆ ಮಾಹಿತಿಯನ್ನು ನಿಮ್ಮನ್ನು ವ್ಯಕ್ತಿಗತವಾಗಿ ಗುರುತಿಸದೆ ಇರುವಂತೆ ಸಂಗ್ರಹಿಸುತ್ತದೆ. Apple Pay ಬಳಸಿ ಯಶಸ್ವಿಯಾಗಿ ಕಾರ್ಡ್ ಒಂದನ್ನು ಸೇರಿಸಲು ಅಥವಾ ವಹಿವಾಟನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯವನ್ನು ಈ ಮಾಹಿತಿ ಒಳಗೊಂಡಿರುತ್ತದೆ. ಕಳೆದ ವಾರದಲ್ಲಿ ನೀವು Apple Pay ಖರೀದಿಯನ್ನು ಮಾಡಿದ್ದೀರಾ ಎನ್ನುವಂತಹ ನೀವು Apple Payನಲ್ಲಿ ಸಕ್ರಿಯವಾಗಿ ವಹಿವಾಟು ನಡೆಸುತ್ತೀರಿ ಎಂದು ಸೂಚಿಸುವ ಸಿಗ್ನಲ್‌ಗಳನ್ನು ಸಹ Apple ನಿರ್ವಹಿಸುತ್ತದೆ. ಖರೀದಿ ಅಥವಾ ಚಟುವಟಿಕೆಯ ಮಾಹಿತಿಯನ್ನು Apple ಜೊತೆಗೆ ಹಂಚಿಕೊಳ್ಳುವ ಅಗತ್ಯವಿಲ್ಲದೆಯೇ ಈ ಸಿಗ್ನಲ್‌ಗಳನ್ನು ನಿಮ್ಮ ಸಾಧನದಲ್ಲಿ ಲೆಕ್ಕ ಹಾಕಲಾಗುತ್ತದೆ. Apple ಈ ಮಾಹಿತಿಯನ್ನು ಇತರ Apple ಉತ್ಪನ್ನಗಳು ಮತ್ತು ಸೇವೆಗಳನ್ನು ಸುಧಾರಿಸಲು, ಮಾರ್ಕೆಟಿಂಗ್ ಮತ್ತು ವಂಚನೆ ಪತ್ತೆ ಹಾಗೂ ಭದ್ರತಾ ಉದ್ದೇಶಗಳಿಗಾಗಿ ಸಹ ಬಳಸಬಹುದು.

ಯಾವುದೇ ಕಾರ್ಡ್ ಹೊಂದಿರುವವರು, ಬಳಕೆದಾರರು, ವ್ಯಾಪಾರಿ ಒಪ್ಪಂದ ಅಥವಾ Apple Pay ಫೀಚರ್‌ಗಳ ಬಳಕೆಗೆ ಅನ್ವಯವಾಗುವ ಇತರ ನಿಯಮಗಳು ಮತ್ತು ಷರತ್ತುಗಳು ನಿಮ್ಮ ಕಾರ್ಡ್‌ಗಳ ಬಳಕೆಯ ಮೇಲೆ ಮತ್ತು Apple Payಗೆ ಸಂಬಂಧಿಸಿ ಅವುಗಳ ಬಳಕೆಯ ಮೇಲೆ ನಿಯಂತ್ರಣ ಹೊಂದಿರುವುದು ಮುಂದುವರಿಯಲಿದೆ ಮತ್ತು ಅಂತಹ ನಿಯಮಗಳಿಗೆ ಹೆಚ್ಚುವರಿ ಗೌಪ್ಯತೆ ನೀತಿಗಳನ್ನು ಹೊಂದಿರಬಹುದು. Apple ಅಥವಾ Apple Pay ಸೇವೆ ಒದಗಿಸುವ ಅಂಗಸಂಸ್ಥೆಗಳು ಬ್ಯಾಂಕ್ ಆಗಿರುವುದಿಲ್ಲ ಮತ್ತು ಈ ನೋಟೀಸ್, ನಿಮ್ಮ ಬ್ಯಾಂಕ್‌ನಿಂದ ನೀವು ಸ್ವೀಕರಿಸುವ ಯಾವುದೇ ನೋಟೀಸ್‌ಗಳಿಗೆ ಪೂರಕವಾಗಿ ಇರುತ್ತದೆ. Apple Pay ಬಳಕೆಗೆ ಸಂಬಂಧಿಸಿದಂತೆ Apple ವಂಚನೆಯನ್ನು ಶಂಕಿಸಿದಲ್ಲಿ, ಸಂಭಾವ್ಯ ವಂಚನಾತ್ಮಕ Apple ಖಾತೆ ಮತ್ತು ವಹಿವಾಟುಗಳ ಕುರಿತ ಮಾಹಿತಿಯನ್ನು ವಂಚನೆ ತಡೆಗಟ್ಟುವ ಉದ್ದೇಶದಿಂದ ನಿಮಗೆ ಕಾರ್ಡ್ ವಿತರಕರು ಅಥವಾ ಪಾವತಿ ನೆಟ್‌ವರ್ಕ್ ಪೂರೈಕೆದಾರರ ಜೊತೆಗೆ ಹಂಚಿಕೊಳ್ಳಲಾಗುತ್ತದೆ.

ಈ ನೋಟೀಸ್‌ನಲ್ಲಿ ವಿವರಿಸಿರುವ ಹಾಗೆ ಮತ್ತು Appleನ ಗೌಪ್ಯತೆ ನೀತಿಗೆ ಅನುಗುಣವಾಗಿ ಅಥವಾ ಕಾನೂನಿನ ಪ್ರಕಾರ ಅಗತ್ಯವಿರುವ ಹಾಗೆ ಎಂಬುದು ಸೇರಿದಂತೆ, ವೈಯಕ್ತಿಕ ಡೇಟವನ್ನು ಸಂಗ್ರಹಿಸಿದ ಉದ್ದೇಶ ಈಡೇರುವವರೆಗೆ ಮಾತ್ರವೇ Apple ಅದನ್ನು ಇರಿಸಿಕೊಳ್ಳುತ್ತದೆ. ಇರಿಸಿಕೊಳ್ಳುವಿಕೆಯ ಅವಧಿಗಳನ್ನು ಮೌಲ್ಯಮಾಪನ ಮಾಡುವಾಗ, ಸಂಗ್ರಹಿಸಿದ ವೈಯಕ್ತಿಕ ಡೇಟವನ್ನು ಇರಿಸಿಕೊಳ್ಳುವ ಅಗತ್ಯವಿದೆಯೇ ಎಂದು ನಾವು ಮೊದಲು ಎಚ್ಚರಿಕೆಯಿಂದ ಪರಿಶೀಲಿಸುತ್ತೇವೆ ಮತ್ತು ಇರಿಸಿಕೊಳ್ಳುವುದು ಅಗತ್ಯವಿದ್ದರೆ, ಕಾನೂನಿನ ಅಡಿಯಲ್ಲಿ ಅನುಮತಿಸುವ ಕಡಿಮೆ ಅವಧಿಗೆ ನಾವು ವೈಯಕ್ತಿಕ ಡೇಟವನ್ನು ಇರಿಸಿಕೊಳ್ಳುತ್ತೇವೆ.

ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.

2025-12-12