Apple Podcasts ಮತ್ತು ಗೌಪ್ಯತೆ
ನಿಮ್ಮ ಮಾಹಿತಿಯನ್ನು ಕಾಪಾಡಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವುದಕ್ಕೆ ಅನುವುಮಾಡಿಕೊಡಲು Apple Podcasts ಅನ್ನು ವಿನ್ಯಾಸಗೊಳಿಸಲಾಗಿದೆ.
![]()
- Apple Podcastsನಲ್ಲಿ ನೀವು ಖರೀದಿಸುವ ಪಾಡ್‌ಕಾಸ್ಟ್‌ಗಳ ಸಬ್‌ಸ್ಕ್ರಿಪ್ಶನ್‌ಗಳನ್ನು ನಿಮ್ಮ Apple ಖಾತೆಯೊಂದಿಗೆ ಸಂಯೋಜಿಸಲಾಗುತ್ತದೆ.
- ನಿಮ್ಮ ಪಾಡ್‌ಕಾಸ್ಟ್ ಆಲಿಸುವಿಕೆಯ ಡೇಟವನ್ನು ನಿಮ್ಮ Apple ಖಾತೆಯ ಜೊತೆಗೆ ಸಂಗ್ರಹಿಸಿರದ ರ್‍ಯಾಂಡಮ್ ಸಾಧನದ ಐಡೆಂಟಿಫೈಯರ್‌ಗೆ ಲಿಂಕ್ ಮಾಡಲಾಗುತ್ತದೆ.
- ಪಾಡ್‌ಕಾಸ್ಟ್ ಆಲಿಸುವಿಕೆಯ ಚಟುವಟಿಕೆಯನ್ನು ಸಮಗ್ರವಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಮತ್ತು ಪಾಡ್‌ಕಾಸ್ಟ್ ಪೂರೈಕೆದಾರರಿಗೆ ವರದಿ ಮಾಡಲು ನಾವು ಪಾಡ್‌ಕಾಸ್ಟ್ ಆಲಿಸುವಿಕೆಯ ಡೇಟವನ್ನು ಸಂಗ್ರಹಿಸುತ್ತೇವೆ.
- ಟ್ಯಾಪ್‌ಗಳಂತಹ Apple Podcasts ನಿಮ್ಮ ಬಳಕೆಯ ಬಗ್ಗೆಯೂ ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ.
- ವಂಚನೆಯನ್ನು ಗುರುತಿಸಲು ಮತ್ತು ತಡೆಯಲು ಸಹಾಯ ಮಾಡುವುದಕ್ಕೆ ನೀವು ಮಾಡುವ ಸಂಭಾವ್ಯ ಫೋನ್ ಕರೆಗಳು ಅಥವಾ ನೀವು ಕಳುಹಿಸುವ ಅಥವಾ ಸ್ವೀಕರಿಸುವ ಈಮೇಲ್‌ಗಳು ಸೇರಿದಂತೆ ನಿಮ್ಮ ಸಾಧನವನ್ನು ನೀವು ಹೇಗೆ ಬಳಸುತ್ತೀರಿ ಎಂಬುದರ ಕುರಿತು ಈ ಮಾಹಿತಿಯನ್ನು ನೀವು ಶಾಪಿಂಗ್ ಮಾಡುವಾಗ ಸಾಧನದ ವಿಶ್ವಾಸಾರ್ಹ ಸ್ಕೋರ್ ಅನ್ನು ಲೆಕ್ಕಾಚಾರ ಮಾಡಲು ಬಳಸಲಾಗುತ್ತದೆ. ನಿಮ್ಮ ಸಾಧನದಲ್ಲಿನ ನಿಜವಾದ ಮೌಲ್ಯಗಳನ್ನು ತಿಳಿದುಕೊಳ್ಳಲು Appleಗೆ ಸಾಧ್ಯವಾಗದ ರೀತಿಯಲ್ಲಿ ಸಲ್ಲಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ. ಸ್ಕೋರ್‌ಗಳನ್ನು ನಮ್ಮ ಸರ್ವರ್‌ಗಳಲ್ಲಿ ನಿಗದಿತ ಸಮಯದವರೆಗೆ ಸಂಗ್ರಹಿಸಲಾಗುತ್ತದೆ.
ನಿಮ್ಮ ಮಾಹಿತಿಯ ಗೌಪ್ಯತೆ ಮತ್ತು ಭದ್ರತೆಯನ್ನು ರಕ್ಷಿಸುವುದು Appleನಲ್ಲಿರುವ ಪ್ರತಿಯೊಬ್ಬರ ಆದ್ಯತೆಯಾಗಿದೆ. ನಿಮ್ಮ ಅನುಭವವನ್ನು ಸುಧಾರಿಸಲು ಅಗತ್ಯವಾದ ಡೇಟವನ್ನು ಸಂಗ್ರಹಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ನಾವು ಡೇಟವನ್ನು ಸಂಗ್ರಹಿಸಿದಾಗ, ನಾವು ಏನನ್ನು ಸಂಗ್ರಹಿಸುತ್ತೇವೆ ಮತ್ತು ನಮಗೆ ಅದು ಏಕೆ ಬೇಕು ಎಂಬುದನ್ನು ನೀವು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ನಾವು ಭಾವಿಸುತ್ತೇವೆ, ಇದರಿಂದ ನೀವು ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಬಹುದು. ಪ್ರತಿಯೊಂದು Apple ಉತ್ಪನ್ನ ಮತ್ತು ಸೇವೆಯಂತೆ, ಈ ತತ್ವಗಳನ್ನು ಗಮನದಲ್ಲಿಟ್ಟುಕೊಂಡು Apple Podcasts ಅನ್ನು ವಿನ್ಯಾಸಗೊಳಿಸಲಾಗಿದೆ.
Apple Podcasts ಅನ್ನು ಒದಗಿಸುವುದು ಮತ್ತು ಸುಧಾರಿಸುವುದು
ಸೇವೆಯನ್ನು ಒದಗಿಸಲು ಮತ್ತು ಸುಧಾರಿಸಲು ಮತ್ತು ಪಾಡ್‌ಕಾಸ್ಟ್ ಆಲಿಸುವವರ ಬಗ್ಗೆ ಸಮಗ್ರ ವರದಿಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಒದಗಿಸಲು ನಾವು ಪಾಡ್‌ಕಾಸ್ಟ್ ಆಲಿಸುವಿಕೆ ಮತ್ತು ಸಂವಹನಗಳ ಕುರಿತು ಡೇಟವನ್ನು ಸಂಗ್ರಹಿಸುತ್ತೇವೆ. ಈ ಡೇಟವು ನೀವು ಕೇಳುವ ಪಾಡ್‌ಕಾಸ್ಟ್‌ಗಳ ಕುರಿತು ಮಾಹಿತಿಯನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ನೀವು ಎಷ್ಟು ಪಾಡ್‌ಕಾಸ್ಟ್ ಅನ್ನು ಕೇಳುತ್ತೀರಿ, ನೀವು ಯಾವಾಗ ಕೇಳುತ್ತೀರಿ ಮತ್ತು ನೀವು ಯಾವಾಗ ಸ್ಟ್ರೀಮ್ ಮಾಡುತ್ತೀರಿ, ಡೌನ್‌ಲೋಡ್ ಮಾಡುತ್ತೀರಿ ಅಥವಾ ಅನುಸರಿಸುತ್ತೀರಿ ಎಂಬಂತಹ ಮಾಹಿತಿ. ಸೇವೆಯನ್ನು ಸುಧಾರಿಸಲು ಮತ್ತು ವೈಯಕ್ತೀಕರಿಸಲು ಸಹಾಯ ಮಾಡಲು, ನೀವು ಟ್ಯಾಪ್ ಮಾಡುವ ಲಿಂಕ್‌ಗಳಂತಹ Apple Podcastsನೊಂದಿಗಿನ ನಿಮ್ಮ ಸಂವಾದಗಳ ಕುರಿತು ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಈ ಡೇಟವನ್ನು ಇತರ Apple ಸೇವೆಗಳಿಗೆ ಲಿಂಕ್ ಮಾಡದಂತೆ ನೋಡಿಕೊಳ್ಳಲು ನಾವು Apple Podcasts ಅನ್ನು ವಿನ್ಯಾಸಗೊಳಿಸಿದ್ದೇವೆ. ಈ ಮಾಹಿತಿಯು Apple Podcastsಗಳಿಗೆ ನಿರ್ದಿಷ್ಟವಾದ ಮತ್ತು ನಿಮ್ಮ Apple ಖಾತೆಯೊಂದಿಗೆ ಸಂಗ್ರಹಿಸದಿರುವ ರ್‍ಯಾಂಡಮ್ ಅನನ್ಯ ಐಡೆಂಟಿಫೈಯರ್ ಜೊತೆಗೆ ಸಂಯೋಜಿತವಾಗಿದೆ. iCloud ಕೀಚೇನ್ ಅನ್ನು ಸಕ್ರಿಯಗೊಳಿಸಿರುವ ನಿಮ್ಮ ಸಾಧನಗಳಾದ್ಯಂತ ಐಡೆಂಟಿಫೈಯರ್ ಅನ್ನು ಸಿಂಕ್ ಮಾಡಲು ನಾವು iCloud ಕೀಚೇನ್ ಅನ್ನು ಬಳಸುತ್ತೇವೆ. ನಿಮ್ಮ iOS, iPadOS, ಅಥವಾ visionOS ಸಾಧನದಲ್ಲಿ Appleಗೆ ಕಳುಹಿಸಿದ ಪ್ಲೇಬ್ಯಾಕ್ ಡೇಟದಲ್ಲಿ ಸೇರಿಸಲಾದ ಐಡೆಂಟಿಫೈಯರ್ ಅನ್ನು ರೀಸೆಟ್ ಮಾಡಲು, ಸೆಟ್ಟಿಂಗ್ಸ್ > ಆ್ಯಪ್‌ಗಳು > ಪಾಡ್‌ಕಾಸ್ಟ್‌ಗಳು > ಐಡೆಂಟಿಫೈಯರ್ ಅನ್ನು ರಿಸೇಟ್ ಮಾಡಿ ಎಂಬಲ್ಲಿಗೆ ಹೋಗಿ. iOS ಮತ್ತು iPadOS ಸಾಧನಗಳಿಗಾಗಿ, ಇದರಿಂದ ಯಾವುದೇ ಪೇರ್ ಮಾಡಲಾಗಿರುವ watchOS ಸಾಧನಗಳಿಗೆ ಐಡೆಂಟಿಫೈಯರ್ ರೀಸೆಟ್ ಆಗುತ್ತದೆ.
ನಿಮಗೆ ಅನುಕೂಲವಾಗುವಂತೆ, Apple Podcasts ನಿಮ್ಮ ಮೆಚ್ಚಿನ ವರ್ಗಗಳನ್ನು, ನೀವು ಕೇಳುತ್ತಿರುವ ಪಾಡ್‌ಕಾಸ್ಟ್ ಎಪಿಸೋಡ್‌ಗಳ ಪ್ಲೇ ಸ್ಥಾನವನ್ನು ಸಿಂಕ್ ಮಾಡುತ್ತದೆ, ಹಾಗೆಯೇ ನೀವು ಅನುಸರಿಸುವ ಶೋಗಳು, ನೀವು ಸೇವ್ ಮಾಡಿದ ಎಪಿಸೋಡ್‌ಗಳು ಮತ್ತು ನಿಮ್ಮ ಸ್ಟೇಷನ್‌ಗಳನ್ನು ಒಳಗೊಂಡಂತೆ ನಿಮ್ಮ ಲೈಬ್ರರಿಯ ಕಂಟೆಂಟ್‌ಗಳನ್ನು ಸಿಂಕ್ ಮಾಡುತ್ತದೆ. ಹೀಗೆ ನಿಮ್ಮ ಯಾವುದೇ ಸಾಧನಗಳಿಂದ ಅದೇ Apple Podcasts ಅನುಭವವನ್ನು ನೀವು ಆನಂದಿಸಬಹುದು. ಈ ಮಾಹಿತಿಯನ್ನು ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿ ಸಂಗ್ರಹಿಸಲಾಗಿದೆ. ನೀವು ಯಾವುದೇ ಸಮಯದಲ್ಲೂ ಸೆಟ್ಟಿಂಗ್ಸ್‌ನಲ್ಲಿ ನಿಮ್ಮ ಲೈಬ್ರರಿಯ ಸಿಂಕ್ ಮಾಡುವುಕೆಯನ್ನು ನಿಷ್ಕ್ರಿಯಗೊಳಿಸಬಹುದು.
ನಾವು ನಿಮ್ಮ ಅಚ್ಚುಮೆಚ್ಚಿನ ವರ್ಗಗಳು, ಚಾನಲ್ ಸಬ್‌ಸ್ಕ್ರಿಪ್ಶನ್‌ಗಳು, ಫಾಲೋ ಮಾಡಿದ ಪಾಡ್‌ಕಾಸ್ಟ್‌ಗಳು, ಇತ್ತೀಚಿನ ಪಾಡ್‌ಕಾಸ್ಟ್‌ಗಳ ಪ್ಲೇಗಳು ಹಾಗೂ ಇತ್ತೀಚಿನ ಶಿಫಾರಸುಗಳ ಬಗೆಗಿನ ಮಾಹಿತಿಯನ್ನು ಸೇವೆಯನ್ನು ವೈಯಕ್ತಿಕಗೊಳಿಸಲು ಹಾಗೂ ನಿಮಗೆ ತುಂಬಾ ಸೂಕ್ತವಾದ ಕಂಟೆಂಟ್ ಅನ್ನು ಕಂಡುಕೊಳ್ಳಲು ನಿಮಗೆ ಸಹಾಯ ಮಾಡಲು ಬಳಸುತ್ತೇವೆ. ನೀವು ನಿಮ್ಮ್ Apple ಖಾತೆಗೆ ವೈಯುಕ್ತೀಕರಣಗೊಳಿಸಿದ ಶಿಪಾರಸುಗಳನ್ನು ಆಫ್ ಮಾಡುವ ಮೂಲಕ Apple Podcasts, App Store, Apple Books, iTunes Store, Apple TVಗಳಲ್ಲಿ ವೈಯುಕ್ತೀಕರಣಗೊಳಿಸುವುದನ್ನು ನಿಷ್ಕ್ರಿಯಗೊಳಿಸಬಹುದು. ನಿಮ್ಮ iOS, iPadOS ಅಥವಾ visionOS ಸಾಧನಗಳಲ್ಲಿ, ಸೆಟ್ಟಿಂಗ್ಸ್ > [ನಿಮ್ಮ ಹೆಸರು] > ಮೀಡಿಯಾ ಮತ್ತು ಖರೀದಿಗಳು > ಖಾತೆಯನ್ನು ನೋಡಿ ಎನ್ನುವಲ್ಲಿ ಹೋಗಿ ಮತ್ತು ನಂತರ ವೈಯಕ್ತೀಕರಿಸಿದ ಶಿಫಾರಸುಗಳನ್ನು ಆಫ್ ಮಾಡಲು ಟ್ಯಾಪ್ ಮಾಡಿ.
ನಾವು ಒಟ್ಟಾರೆ ವಿಧಾನದಲ್ಲಿ ಮಾತ್ರವೇ ಪಾಡ್‌ಕಾಸ್ಟ್ ಪೂರೈಕೆದಾರರ ಜೊತೆಗೆ ಡೇಟವನ್ನು ಹಂಚಿಕೊಳ್ಳುತ್ತೇವೆ. ನಾವು ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿಯನ್ನು ಮೂರನೆಯ ಪಕ್ಷಗಳ ಜೊತೆಗೆ ಹಂಚಿಕೊಳ್ಳುವುದಿಲ್ಲ. ಆದರೆ, ನೀವು ಕೆಲವು ಪಾಡ್‌ಕಾಸ್ಟ್ ಪೂರೈಕೆದಾರರಿಂದ ಪಾಡ್‌ಕಾಸ್ಟ್ ಎಪಿಸೋಡ್‌ಗಳನ್ನು ಪ್ಲೇ ಮಾಡಿದಾಗ ಅಥವಾ ಡೌನ್‌ಲೋಡ್ ಮಾಡಿದಾಗ ಅಥವಾ ಒಂದು ಆಡಿಯೊ ಬ್ರೀಫ್ ಅನ್ನು ಕೇಳಲು Siriಯನ್ನು ಬಳಸಿದಾಗ, ಆ ಪೂರೈಕೆದಾರರು ಅವರ ಪಾಡ್‌ಕಾಸ್ಟ್‌ಗಳ ನಿಮ್ಮ ಬಳಕೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗಬಹುದು ಹಾಗೂ ಸಂಗ್ರಹವನ್ನು ಅವರ ಗೌಪ್ಯತಾ ನೀತಿಗಳು ಹಾಗೂ ಪದ್ಧತಿಗಳು ನೋಡಿಕೊಳ್ಳುತ್ತವೆ ಎನ್ನುವುದನ್ನು ಗಮನದಲ್ಲಿಡಿ. ಉದಾಹರಣೆಗೆ, ನೀವು URLಮೂಲಕ ಒಂದು ಶೋವನ್ನು ಸೇರಿಸಿದಾಗ ಅಥವಾ ಮೂರನೆಯ ಪಕ್ಷವು ಹೋಸ್ಟ್ ಮಾಡಿದ ಒಂದು ಪಾಡ್‌ಕಾಸ್ಟ್ ಅನ್ನು ಕೇಳಿದಾಗ, ನಿಮ್ಮ ಸಾಧನವು ನೀವು ವಿನಂತಿಸಿದ ಕಂಟೆಂಟ್ ಅನ್ನು ನಿಮಗೆ ಒದಗಿಸಲು ನೇರವಾಗಿ ಮೂರನೆಯ ಪಕ್ಷದ ಹೋಸ್ಟಿಂಗ್ ಪ್ಲ್ಯಾಟ್‌ಫಾರ್ಮ್‌ಗೆ ಸಂಪರ್ಕ ಹೊಂದುತ್ತದೆ. ಇದು ಸಂಪರ್ಕಗೊಂಡಾಗ, ನಿಮ್ಮ ಸಾಧನದ IP ವಿಳಾಸವು ಥರ್ಡ್ ಪಾರ್ಟಿ ಹೋಸ್ಟಿಂಗ್ ಪ್ಲ್ಯಾಟ್‌ಫಾರ್ಮ್‌ಗೆ ಕಾಣಿಸುತ್ತದೆ. ಥರ್ಡ್ ಪಾರ್ಟಿ ಹೋಸ್ಟಿಂಗ್ ಪ್ಲ್ಯಾಟ್‌ಫಾರ್ಮ್ ನಿಮ್ಮ IP ವಿಳಾಸವನ್ನು ನಿರ್ವಹಿಸುವುದನ್ನು ಈ ಥರ್ಡ್ ಪಾರ್ಟಿ ಗೌಪ್ಯತಾ ನೀತಿಗಳು ನೋಡಿಕೊಳ್ಳುತ್ತವೆ.
Apple Podcasts ಸಂಯೋಜನೆಗಳನ್ನು ನೀಡುವ ಇತರ ಆ್ಯಪ್‌ಗಳು ಹಾಗೂ ಸಾಧನಗಳು Apple Podcasts ಹಾಗೂ ನಿಮ್ಮ ಪಾಡ್‌ಕಾಸ್ಟ್‌ಗಳ ಲೈಬ್ರರಿಗೆ ಆ್ಯಕ್ಸೆಸ್ ಅನ್ನು ವಿನಂತಿಸಬಹುದು. ನೀವು ಒಂದು ಆ್ಯಪ್ ಅಥವಾ ಸಾಧನದ ಏಕೀಕರಣಕ್ಕೆ ಇಂಥ ಅನುಮತಿಯನ್ನು ನೀಡಿದಲ್ಲಿ ಇದು ನಿಮ್ಮ ಲೈಬ್ರರಿ, ನಿಮ್ಮ ಪಾಡ್‌ಕಾಸ್ಟ್ ಪ್ಲೇ ಚಟುವಟಿಕೆ, ಹಾಗೂ ನಿಮ್ಮ ಶಿಫಾರಸ್ಸುಗಳಂಥ ಮಾಹಿತಿಯನ್ನು ಆ್ಯಕ್ಸೆಸ್ ಮಾಡಬಹುದು. ಅನುಮತಿಸಲಾದ ಆ್ಯಪ್ ಅಥವಾ ಸಾಧನವೂ ಕೂಡ ನಿಮ್ಮ ಲೈಬ್ರರಿಯಲ್ಲಿ ಯಾವ ಪಾಡ್‌ಕಾಸ್ಟ್‌ಗಳಿವೆ ಎಂಬಂಥ ನಿಮ್ಮ ಖಾತೆಗೆ ಸಂಬಂಧಿಸಿದ ಡೇಟವನ್ನು ಬದಲಾಯಿಸಬಹುದು. ನೀವು ನಿಮ್ಮ iOS, iPadOS, ಅಥವಾ visionOS ಸಾಧನದಲ್ಲಿ ಸೆಟ್ಟಿಂಗ್ಸ್> ಗೌಪ್ಯತೆ ಹಾಗೂ ಸುರಕ್ಷತೆ > ಮೀಡಿಯಾ ಹಾಗೂ Apple Musicಗೆ ಹೋಗುವ ಮೂಲಕ ಒಂದು iOS, iPadOS, ಅಥವಾ visionOSನ ಆ್ಯಪ್ ಆ್ಯಕ್ಸೆಸ್ ಅನ್ನು ನಿಷ್ಕ್ರಿಯಗೊಳಿಸಬಹುದು. ನೀವು ನಿಮ್ಮ Apple Music ಖಾತೆಯ ಸೆಟ್ಟಿಂಗ್ಸ್‌ನಲ್ಲಿ ಇತರ ಆ್ಯಪ್‌ಗಳು ಅಥವಾ ಸಾಧನಗಳ ಆ್ಯಕ್ಸೆಸ್ ಅನ್ನು ನಿಷ್ಕ್ರಿಯಗೊಳಿಸಬಹುದು.
ನಿಮ್ಮೊಂದಿಗೆ ಸಂವಹನ ನಡೆಸುವುದು
Apple Podcasts ಹಾಗೂ ನಿಮಗೆ ಆಸಕ್ತಿಯಿರಬಹುದಾದ ಇತರ Apple ಉತ್ಪನ್ನಗಳು, ಸೇವೆಗಳು ಮತ್ತು ಆಫರ್‌ಗಳ ಕುರಿತು ನಿಮಗೆ ಸಂವಹನಗಳನ್ನು ಕಳುಹಿಸಲು, ನಿಮ್ಮ ಮಾಲೀಕತ್ವದಲ್ಲಿರುವ Apple ಉತ್ಪನ್ನಗಳು ಮತ್ತು ನೀವು Apple ಸೇವೆಗಳಿಗೆ ಮಾಡಿರುವ ಸಬ್‌ಸ್ಕ್ರಿಪ್ಶನ್‌ಗಳಂತಹ, ನಿಮ್ಮ ಖಾತೆಯ ಕುರಿತಾದ ಮಾಹಿತಿಯನ್ನು Apple ಬಳಸಬಹುದು. Apple Podcastsನಲ್ಲಿ ಲಭ್ಯವಿರುವ ಹೊಸ ಫೀಚರ್‌ಗಳು, ಕಂಟೆಂಟ್ ಮತ್ತು ಆಫರ್‌ಗಳ ಕುರಿತು ನಿಮಗೆ ಈಮೇಲ್‌ಗಳು ಹಾಗೂ push ನೋಟಿಫಿಕೇಷನ್ಸ್ ಅನ್ನು ಕಳುಹಿಸಲು Apple Podcastsನಲ್ಲಿನ ನಿಮ್ಮ ಖರೀದಿಯ ಚಟುವಟಿಕೆಯ ಕುರಿತಾದ ಮಾಹಿತಿಯನ್ನು ಸಹ Apple ಬಳಸಬಹುದು. ನೀವು account.apple.com/in ಎಂಬಲ್ಲಿಗೆ ಹೋಗುವ ಮೂಲಕ ನಿಮ್ಮ ಈಮೇಲ್ ಆದ್ಯತೆಗಳನ್ನು ಬದಲಾಯಿಸಬಹುದು ಹಾಗೂ ಈ ಈಮೇಲ್‌ಗಳನ್ನು ಪಡೆಯುವುದರಿಂದ ಹೊರಗುಳಿಯಬಹುದು. ನಿಮ್ಮ iOS, iPadOS ಅಥವಾ visionOSನಲ್ಲಿ ನಿಮ್ಮ ನೋಟಿಫಿಕೇಷನ್ ಆದ್ಯತೆಗಳನ್ನು ಅಪ್‌ಡೇಟ್ ಮಾಡಲು ಸೆಟ್ಟಿಂಗ್ಸ್ > ನೋಟಿಫಿಕೇಷನ್‌ಗಳು > ಪಾಡ್‌ಕಾಸ್ಟ್ಸ್ ಎನ್ನುವಲ್ಲಿ ಹೋಗಿ. ನಮ್ಮ ಸೇವೆಗಳನ್ನು ಸುಧಾರಿಸುವುದಕ್ಕಾಗಿ, ನೋಟಿಫಿಕೇಷನ್‌ಗಳೂ ಒಳಗೊಂಡಂತೆ ನಮ್ಮ ಸಂವಹನಗಳ ಜೊತೆಗಿನ ನಿಮ್ಮ ಮಾತುಕತೆಗಳ ಕುರಿತಾದ ಮಾಹಿತಿಯನ್ನು Apple ಬಳಸುತ್ತದೆ.
Apple Podcasts ಸಬ್‌ಸ್ಕ್ರಿಪ್ಶನ್‌ಗಳು
ನೀವು Apple Podcastsನಿಂದ ಪಾಡ್‌ಕಾಸ್ಟ್ ಸಬ್‌ಸ್ಕ್ರಿಪ್ಶನ್‌ಗಳನ್ನು ಖರೀದಿಸಿದರೆ, ನಿಮ್ಮ ಖರೀದಿಯ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲು ಅಗತ್ಯವಾದ ನಿಮ್ಮ ಖಾತೆ ಹಾಗೂ ಪಾವತಿಯ ಮಾಹಿತಿಯಂತಹ ವೈಯುಕ್ತಿಕ ಡೇಟವನ್ನು ಬಳಸುತ್ತೇವೆ ಹಾಗೂ ನೀವು ಇದನ್ನು ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ ಹಾಗೂ ನಿಮ್ಮ ಖರೀದಿಯ ಇತಿಹಾಸದಲ್ಲಿ ಆ್ಯಕ್ಸೆಸ್ ಮಾಡಬಹುದು ಹಾಗೂ ಬದಲಾಯಿಸಬಹುದು. Apple Podcastsನ ಉಚಿತ ಟ್ರಯಲ್ ಅಥವಾ ವಿಶೇಷ ಆಫರ್ ಅನ್ನು ಪಡೆಯಲು ನೀವು ಅರ್ಹರಾಗಿದ್ದೀರಾ ಎಂದು ಪರಿಶೀಲಿಸಲು ಸಹ ನಾವು ನಿಮ್ಮ ವೈಯಕ್ತಿಕ ಡೇಟವನ್ನು ಬಳಸಬಹುದು.
ನಾವು Apple ಸೇವೆಗಳು ಹಾಗೂ App Store ಮೂಲಕ ಖರೀದಿಸಲಾದ ಥರ್ಡ್ ಪಾರ್ಟಿಗಳಿಗೆ ನಿಮ್ಮ ಸಕ್ರಿಯ ಸಬ್‌ಸ್ಕ್ರಿಪ್ಶನ್‌ಗಳ ಬಗೆಗಿನ ಮಾಹಿತಿಯನ್ನು ನೀವು Apple Podcastsನಲ್ಲಿ ಹೆಚ್ಚುವರಿ ಸಬ್‌ಸ್ಕ್ರೈಬ್ ಮಾಡಿದ ಮಾಹಿತಿಯನ್ನು ಆ್ಯಕ್ಸೆಸ್ ಮಾಡಲು ಅರ್ಹರಾಗಿದ್ದೀರೇ ಎಂದು ಪರೀಕ್ಷಿಸಲು ಬಳಸುತ್ತೇವೆ. ನೀವು ಈ ಹಿಂದೆ ಲಭ್ಯವಿರುವ ಕಂಟೆಂಟ್ ಹೊಂದಿರುವ ಥರ್ಡ್-ಪಾರ್ಟಿಯಿಂದ ನೇರವಾಗಿ ಸಬ್‌ಸ್ಕ್ರಿಪ್ಶನ್ ಅನ್ನು ಖರೀದಿಸಿದ್ದರೆ, ಥರ್ಡ್-ಪಾರ್ಟಿಯೊಂದಿಗಿನ ನಿಮ್ಮ ಸಬ್‌ಸ್ಕ್ರಿಪ್ಶನ್ ಅನ್ನು ದೃಢೀಕರಿಸಲು ಹಾಗೂ ಅಂಥ ಕಂಟೆಂಟ್‌ಗೆ ಆ್ಯಕ್ಸೆಸ್ ಪಡೆಯಲು ನಿಮಗೆ ಸಾಧ್ಯವಾಗುತ್ತದೆ.
ಮೋಸ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯುವುದು
ನೀವು ಒಂದು ಪಾವತಿ ಕಾರ್ಡ್ ಅನ್ನು ಬಳಸಿದಾಗ, Apple ಭವಿಷ್ಯದ ಖರೀದಿಗಳಿಗೆ, ಪುನರಾವರ್ತನೆಗೊಳ್ಳುವ ವಹಿವಾಟುಗಳಿಗೆ, ಅಥವಾ ನೀವು ಧೃಢೀಕರಿಸಿದ ಇತರ ಬಳಕೆಗಳಿಗೆ ನಿಮ್ಮ ಕಾರ್ಡ್ ಸಂಖ್ಯೆ ಹಾಗೂ ಬಿಲ್ಲಿಂಗ್ ಮಾಹಿತಿಯನ್ನು ಇಟ್ಟುಕೊಳ್ಳಬಹುದು ಹಾಗೂ ಸ್ವಯಂಚಾಲಿತವಾಗಿ ಅಪ್‌ಡೇಟ್ ಮಾಡಬಹುದು. Apple ಈ ಮಾಹಿತಿಯನ್ನು ನಿಮ್ಮ ಹಣಕಾಸು ಸಂಸ್ಥೆ ಅಥವಾ ಪಾವತಿಯ ನೆಟ್‌ವರ್ಕ್ ಮೂಲಕ ಪಡೆಯಬಹುದು, ಹಾಗೂ ಇದನ್ನು ವಂಚನೆ ತಡೆಗಟ್ಟುವಿಕೆ ಮತ್ತು ಧೃಢೀಕರಣಕ್ಕಾಗಿ ಸಹ ಬಳಸಬಹುದು. Apple Podcasts ಸಬ್‌ಸ್ಕ್ರಿಪ್ಶನ್ ನವೀಕರಣಗಳನ್ನು ಪ್ರಕ್ರಿಯೆಗೊಳಿಸಲು ಹಾಗೂ ಪಾವತಿ ಪಾಲುದಾರರು ದೃಢೀಕರಿಸುವುದಕ್ಕೆ ಮುಂಚಿತವಾಗಿ ಮೊದಲೇ ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳಿಗೆ ಮುಂದುವರಿದ ಆ್ಯಕ್ಸೆಸ್ ನೀಡಬೇಕೇ ಎಂದು ನಿರ್ಧರಿಸಲು Apple ಜೊತೆಗಿನ ನಿಮ್ಮ ಐತಿಹಾಸಿಕ ವ್ಯಾಪಾರ ಸಂಬಂಧಗಳ ಕುರಿತಾದ ಮಾಹಿತಿಯನ್ನೂ Apple ಬಳಸಬಹುದು.
ನೀವು ಒಂದು ಖರೀದಿಯನ್ನು ಮಾಡಲು ಪ್ರಯತ್ನಿಸಿದಾಗ ನೀವು ಕಳುಹಿಸುವ ಹಾಗೂ ಸ್ವೀಕರಿಸುವ ಫೋನ್ ಕರೆಗಳು ಅಥವಾ ಈಮೇಲ್‌ಗಳ ಅಂದಾಜು ಸಂಖ್ಯೆಯನ್ನು ಒಳಗೊಂಡಂತೆ ನೀವು ನಿಮ್ಮ ಸಾಧನವನ್ನು ಹೇಗೆ ಬಳಸುತ್ತೀರಿ ಎಂದು ನಿಮ್ಮ ಸಾಧನದಲ್ಲಿ ಒಂದು ಸಾಧನದ ವಿಶ್ವಸಾರ್ಹ ಸ್ಕೋರ್ ಅನ್ನು ಲೆಕ್ಕ ಹಾಕುತ್ತೇವೆ. ನಿಮ್ಮ ಸಾಧನದಲ್ಲಿನ ಮೂಲ ಮೌಲ್ಯಗಳನ್ನು ತಿಳಿದುಕೊಳ್ಳಲು Appleಗೆ ಸಾಧ್ಯವಾಗದ ರೀತಿಯಲ್ಲಿ ಸಲ್ಲಿಕೆಯನ್ನು ವಿನ್ಯಾಸಗೊಳಿಸಲಾಗಿದೆ. ಸ್ಕೋರ್ ಅನ್ನು ನಿಗದಿತ ಸಮಯದವರೆಗೆ ನಮ್ಮ ಸರ್ವರ್‌ಗಳಲ್ಲಿ ಸ್ಟೋರ್ ಮಾಡಲಾಗುತ್ತದೆ.
iOS, iPadOS, ಅಥವಾ visionOS ಸಾಫ್ಟ್‌ವೇರ್ ಲೈಸೆನ್ಸ್ ಒಪ್ಪಂದ ಅಥವಾ ಅನ್ವಯವಾಗುವ ಕಾನೂನನ್ನು ಉಲ್ಲಂಘಿಸುತ್ತಿರುವ ಅಥವಾ ಉಲ್ಲಂಘಿಸಬಹುದಾದ ಚಟುವಟಿಕೆಗಳನ್ನು ತಡೆಗಟ್ಟಲು ಅಥವಾ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು Apple Podcastsನ ನಿಮ್ಮ ಬಳಕೆಯ ಕುರಿತಾದ ಮಾಹಿತಿಯನ್ನು ಸಹ Apple ಬಳಸಬಹುದು.
ವೈಯುಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುವುದಕ್ಕಾಗಿ ಅನ್ವಯವಾಗುವ ಕಾನೂನುಬದ್ಧ ಆಧಾರ
ನಾವು ಸಾಮಾನ್ಯವಾಗಿ Apple ಜೊತೆಗಿನ ನಿಮ್ಮ ವೈಯುಕ್ತಿಕ ಒಪ್ಪಂದದ ನಿರ್ವಹಣೆಗಾಗಿ, ಸೇವೆಯನ್ನು ಒದಗಿಸಲು ಅಗತ್ಯವಾದ ಹಾಗೆ ಹಾಗೂ ನಮ್ಮ ಕಾನೂನುಬದ್ಧ ನಿಯಮಗಳನ್ನು ಪಾಲಿಸಲು Apple Podcastsನಲ್ಲಿ ನಿಮ್ಮ ವೈಯುಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುತ್ತೇವೆ. ಸಮ್ಮತಿಯ ಸೂಕ್ತವಾದ ಕಾನೂನುಬದ್ಧ ಆಧಾರವಾಗಿದ್ದಲ್ಲಿ, ನಾವು ಅದನ್ನು ಅನ್ವಯವಾಗುವ ಸ್ಥಳೀಯ ಕಾನೂನುಗಳ ಪ್ರಕಾರ ಪಡೆಯುತ್ತೇವೆ.
ಅನ್ವಯವಾಗುವ ಸ್ಥಳೀಯ ಕಾನೂನುಗಳು ಅನುಮತಿಸಿದಲ್ಲಿ, ನಾವು ಇವುಗಳನ್ನು ಮಾಡಲು ನಮ್ಮ ಅಥವಾ ಯಾವುದಾದರೂ ಥರ್ಡ್ ಪಾರ್ಟಿಯ ಕಾನೂನುಬದ್ಧ ಆಸಕ್ತಿಯ ಉದ್ದೇಶಗಳಿಗೆ ಅಗತ್ಯವಾದ ಹಾಗೆ ವೈಯುಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುತ್ತೇವೆ:
- ನಿಮಗೆ ಲಭ್ಯವಿರುವ ಕಂಟೆಂಟ್ ಅನ್ನು ಡಿಸ್‌ಪ್ಲೇ ಮಾಡಿ
- ಸಾಧನಗಳಾದ್ಯಂತ ನಿಮ್ಮ ಅಚ್ಚುಮೆಚ್ಚಿನ ವಿಭಾಗಗಳು, ಪ್ಲೇಬ್ಯಾಕ್ ಸ್ಥಾನ ಹಾಗೂ ಲೈಬ್ರರಿಯನ್ನು ಸಿಂಕ್ ಮಾಡುತ್ತದೆ
- ನಿಮಗಾಗಿ ಹಾಗೂ ಇತರಿಗಾಗಿ ಸೇವೆಗಳನ್ನು ಆಪ್ಟಿಮೈಸ್ ಮಾಡುತ್ತದೆ ಹಾಗೂ ಸುಧಾರಿಸುತ್ತದೆ, ಹಾಗೂ Apple Podcasts ಹಾಗೂ ಇತರ ಸಂಬಂಧಪಟ್ಟ Apple ಉತ್ಪನ್ನಗಳು, ಸೇವೆಗಳು, ಹಾಗೂ ನಿಮಗೆ ಆಸಕ್ತಿಯಿರಬಹುದಾದ ಆಫರ್‌ಗಳ ಬಗೆಗಿನ ಸಂವಹನಗಳನ್ನು ನಿಮಗೆ ಕಳುಹಿಸುತ್ತದೆ
- ಮೋಸ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯಿರಿ
ಬಳಸಲಾದ ಡೇಟ ಇದನ್ನು ಒಳಗೊಂಡಿರುತ್ತದೆ:
- ನಿಮ್ಮ ಅಚ್ಚುಮೆಚ್ಚಿನ ವರ್ಗಗಳು, ಪ್ಲೇ ಸ್ಥಾನ ಹಾಗೂ ನಿಮ್ಮ ಲೈಬ್ರರಿಯಲ್ಲಿನ ಕಂಟೆಂಟ್ ಸೇರಿದಂತೆ ನಿಮ್ಮ Apple Podcastsನ ಬಳಕೆ
- Apple Podcastsನಲ್ಲಿ ನೀವು ಖರೀದಿಸುವ ಪಾಡ್‌ಕಾಸ್ಟ್‌ಗಳ ಸಬ್‌ಸ್ಕ್ರಿಪ್ಶನ್‌ಗಳು
- ನೀವು ಮಾಲಕತ್ವ ಹೊಂದಿರುವ Apple ಉತ್ಪನ್ನಗಳಂಥ ನಿಮ್ಮ ಖಾತೆಗಳು ಹಾಗೂ Apple ಉತ್ಪನ್ನಗಳಿಗೆ ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳು
- ನಿಮ್ಮ IP ವಿಳಾಸ
ರಿಟೆನ್ಶನ್
Apple Podcastsನಲ್ಲಿ ನಿಮ್ಮ ಖರೀದಿಗಳಿಗೆ ಸಂಬಂಧಿಸಿದ ವೈಯುಕ್ತಿಕ ಡೇಟವನ್ನು ಹಣಕಾಸಿನ ವರದಿ ಮಾಡುವಿಕೆಯ ಅನ್ವಯವಾಗುವ ಕಾನೂನುಗಳು ನಿರ್ದಿಷ್ಟಪಡಿಸುವ ಅವಧಿಗಳಿಗೆ ನಾವು ಇಟ್ಟುಕೊಳ್ಳುತ್ತಿದ್ದು, ಇದು ಪ್ರದೇಶಕ್ಕೆ ಅನುಗುಣವಾಗಿ ಬದಲಾಗಬಹುದು. ಅದಕ್ಕಾಗಿ ಬಹುತೇಕ ಗ್ರಾಹಕರಿಗೆ ಕನಿಷ್ಠ 10-ವರ್ಷಗಳ ಇರಿಸಿಕೊಳ್ಳುವಿಕೆಯ ಅವಧಿಯ ಅಗತ್ಯವಿರುತ್ತದೆ, ಆದರೆ ಚೀನಾದಂಥ ಪ್ರದೇಶಗಳಲ್ಲಿ ಆ ಅವಧಿ 30 ವರ್ಷಗಳಷ್ಟಿರಬಹುದು. ನಾವು ನೀವು ಮಾಡಿದ ಖರೀದಿಗಳ ದಾಖಲೆಗಳನ್ನು ನಿಮಗೆ ಆ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಲು ಅನುಮತಿಸಲು ನೀವು ಕನಿಷ್ಠ ನಮ್ಮ ಬಳಿ ಖಾತೆಯನ್ನು ಹೊಂದಿರುವಷ್ಟು ಕಾಲ ಇಟ್ಟುಕೊಳ್ಳುತ್ತಿದ್ದು ಇದು ಕೂಡ ನಮ್ಮ ಅನ್ವಯವಾಗುವ ನೀತಿಗಳ ಪ್ರಕಾರವಾಗಿರುತ್ತದೆ. ವಹಿವಾಟುಗಳಂಥ, ಆದರೆ ನಿಮ್ಮ ಸ್ಟೋರ್ ಮಾಡಿದ ಕಾರ್ಡ್ ವಿವರಗಳಂತಲ್ಲದ ಕೆಲವು ಮಾಹಿತಿಯನ್ನು ನೀವು ನಿಮ್ಮ ಖಾತೆಯನ್ನು ಮುಚ್ಚಿದ ನಂತರವೂ ಅಥವಾ Apple Podcasts ಬಳಸುವುದನ್ನು ನಿಲ್ಲಿಸಿದ ನಂತರವೂ ವ್ಯಾಪಾರ ದಾಖಲೆಗಳಾಗಿ ಇಟ್ಟುಕೊಳ್ಳಬಹುದು.
ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.
2025-12-12