Apple TV ಆ್ಯಪ್ ಹಾಗೂ ಗೌಪ್ಯತೆ
ನಿಮ್ಮ ಮಾಹಿತಿಯನ್ನು ಕಾಪಾಡಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವುದಕ್ಕೆ ಅನುವುಮಾಡಿಕೊಡಲು Apple TV ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ.
![]()
- Apple TV ಆ್ಯಪ್ ನಿಮ್ಮ ಮೆಚ್ಚಿನ ಟಿವಿ ಶೋಗಳು ಮತ್ತು ಚಲನಚಿತ್ರಗಳನ್ನು ಒಂದೇ ಸ್ಥಳಕ್ಕೆ ತರುತ್ತದೆ ಮತ್ತು ನೀವು ಆನಂದಿಸಬಹುದಾದ ಇತರ ಕಾರ್ಯಕ್ರಮಗಳನ್ನೂ ಶಿಫಾರಸು ಮಾಡುತ್ತದೆ.
- ನಿಮ್ಮ ಖರೀದಿಗಳು, ಡೌನ್‌ಲೋಡ್‌ಗಳು, Apple TV ಆ್ಯಪ್‌ನಲ್ಲಿನ ನಿಮ್ಮ ಚಟುವಟಿಕೆ, ನೀವು ವೀಕ್ಷಿಸುವ ಕಂಟೆಂಟ್ ಮತ್ತು Apple TV ಆ್ಯಪ್‌ನಲ್ಲಿ ಮತ್ತು ನಿಮ್ಮ ಬೆಂಬಲಿತ ಯಾವುದೇ ಸಾಧನಗಳ ಕನೆಕ್ಟೆಡ್ ಆ್ಯಪ್‌ಗಳಲ್ಲಿ ನೀವು ಅದನ್ನು ಎಲ್ಲೆಲ್ಲಿ ವೀಕ್ಷಿಸುತ್ತೀರಿ ಎಂಬುದರ ಬಗ್ಗೆ Apple ಮಾಹಿತಿಯನ್ನು ಸಂಗ್ರಹಿಸುತ್ತದೆ. ಸೇವೆಯನ್ನು ಒದಗಿಸಲು ಮತ್ತು ನಿಮಗಾಗಿ ಮತ್ತು ಇತರರಿಗಾಗಿ Apple TV ಆ್ಯಪ್ ಅನ್ನು ಸುಧಾರಿಸಲು ನಾವು ಈ ಮಾಹಿತಿಯನ್ನು ಬಳಸುತ್ತೇವೆ.
- ಫೀಚರ್‌ಗಳನ್ನು ವಿಶೇಷ ಉದ್ದೇಶಗಳಿಗಾಗಿ ರಚಿಸಲು, ವೈಯಕ್ತೀಕರಿಸಿದ ಶಿಫಾರಸುಗಳನ್ನು ನೀಡಲು ಮತ್ತು ನೋಟಿಫಿಕೇಷನ್‌ಗಳನ್ನು ನಿಮಗೆ ಕಳುಹಿಸುವ ಸಲುವಾಗಿ ನಾವು ನಿಮ್ಮ ಖರೀದಿಗಳು, ಡೌನ್‌ಲೋಡ್‌ಗಳು, Apple TV ಆ್ಯಪ್‌ನಲ್ಲಿನ ಚಟುವಟಿಕೆ, ನೀವು ನೋಡುವ ಕಂಟೆಂಟ್, ಹಾಗೂ ಅದನ್ನು ನೀವು ಎಲ್ಲಿ ನೋಡುತ್ತೀರಿ ಎಂಬ ಮಾಹಿತಿಯನ್ನು ಸಹ ಸಂಗ್ರಹಿಸುತ್ತೇವೆ. ಕೆಳಗೆ ವಿವರಿಸಿದಂತೆ ನೀವು ಈ ಉದ್ದೇಶಕ್ಕಾಗಿ ಡೇಟ ಬಳಕೆಯಾಗುವುದರಿಂದ ಹೊರಗುಳಿಯುವುದನ್ನು ಆಯ್ದುಕೊಳ್ಳಬಹುದು.
- App Store, Apple News ಮತ್ತು ಸ್ಟಾಕ್ಸ್‌ನಲ್ಲಿನ ಜಾಹೀರಾತುಗಳು ನಿಮಗೆ ಸೂಕ್ತವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಜಾಹೀರಾತನ್ನು ನೀಡಲು, ನೀವು ಖರೀದಿಸುವ ಮತ್ತು ಡೌನ್‌ಲೋಡ್ ಮಾಡುವ ಚಲನಚಿತ್ರಗಳು ಮತ್ತು TV ಶೋಗಳ ಬಗ್ಗೆ ಮಾಹಿತಿಯನ್ನು ನಾವು ಬಳಸುತ್ತೇವೆ. ಕೆಳಗೆ ವಿವರಿಸಿದಂತೆ ನೀವು ಈ ಜಾಹೀರಾತಿಗೆ ಸಂಬಂಧಿಸಿದಂತೆ ಆಯ್ಕೆಗಳನ್ನು ಹೊಂದಿದ್ದೀರಿ.
- ವಂಚನೆಯನ್ನು ಗುರುತಿಸಲು ಮತ್ತು ತಡೆಯಲು ಸಹಾಯ ಮಾಡಲು, ನೀವು ಮಾಡುವ ಸಂಭಾವ್ಯ ಫೋನ್ ಕರೆಗಳು ಅಥವಾ ನೀವು ಕಳುಹಿಸುವ ಅಥವಾ ಸ್ವೀಕರಿಸುವ ಈಮೇಲ್‌ಗಳು ಸೇರಿದಂತೆ ನಿಮ್ಮ ಸಾಧನವನ್ನು ನೀವು ಹೇಗೆ ಬಳಸುತ್ತೀರಿ ಎಂಬುದರ ಕುರಿತು ಈ ಮಾಹಿತಿಯನ್ನು ನೀವು ಶಾಪಿಂಗ್ ಮಾಡುವಾಗ ಸಾಧನದ ವಿಶ್ವಾಸಾರ್ಹ ಸ್ಕೋರ್ ಅನ್ನು ಲೆಕ್ಕಾಚಾರ ಮಾಡಲು ಬಳಸಲಾಗುತ್ತದೆ. ನಿಮ್ಮ ಸಾಧನದಲ್ಲಿನ ನಿಜವಾದ ಮೌಲ್ಯಗಳನ್ನು ತಿಳಿದುಕೊಳ್ಳಲು Appleಗೆ ಸಾಧ್ಯವಾಗದ ರೀತಿಯಲ್ಲಿ ಸಲ್ಲಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ. ಸ್ಕೋರ್‌ಗಳನ್ನು ನಮ್ಮ ಸರ್ವರ್‌ಗಳಲ್ಲಿ ನಿಗದಿತ ಸಮಯದವರೆಗೆ ಸಂಗ್ರಹಿಸಲಾಗುತ್ತದೆ.
Apple TV ಆ್ಯಪ್ ನಿಮ್ಮ ಮೆಚ್ಚಿನ ಟಿವಿ ಶೋಗಳು ಮತ್ತು ಚಲನಚಿತ್ರಗಳೆಲ್ಲವನ್ನೂ ಒಂದೇ ಸ್ಥಳದಲ್ಲಿ ವೀಕ್ಷಿಸಲು ನಿಮಗೆ ಅನುಮತಿಸುತ್ತದೆ. ನೀವು ಬಾಡಿಗೆಗೆ ಪಡೆದ ಅಥವಾ Appleನಿಂದ ಖರೀದಿಸಿದ ಕಂಟೆಂಟ್ ಅನ್ನು ವೀಕ್ಷಿಸಬಹುದು. ಲಭ್ಯವಿದ್ದರೆ, ನಿಮ್ಮ Apple TV ಸಬ್‌ಸ್ಕ್ರಿಪ್ಶನ್, Apple TV ಚಾನಲ್‌ಗಳು ಮತ್ತು ನಿಮ್ಮ ಕನೆಕ್ಟ್ ಆಗಿರುವ ಥರ್ಡ್ ಪಾರ್ಟಿ ವೀಡಿಯೊ ಆ್ಯಪ್‌ಗಳ ಮೂಲಕವೂ ನೀವು ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಬಹುದು. ಒಂದೇ Apple ಖಾತೆಗೆ ಸೈನ್ ಇನ್ ಆಗಿರುವ ಬೆಂಬಲಿತ ಸಾಧನಗಳಾದ್ಯಂತ Apple TV ಆ್ಯಪ್ ಮೂಲಕ ನೀವು ಈ ಎಲ್ಲಾ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಬಹುದು.
Apple TV ಆ್ಯಪ್ ಅನ್ನು ಒದಗಿಸುವುದು
Apple TV ಆ್ಯಪ್‌ನಲ್ಲಿ ಸೇವೆಗಳನ್ನು ಮತ್ತು ಫೀಚರ್‌ಗಳನ್ನು ಒದಗಿಸಲು ನಿಮ್ಮ ವೈಯಕ್ತಿಕ ಡೇಟವನ್ನು ನಾವು ಬಳಸುತ್ತೇವೆ. ಈ ಮಾಹಿತಿಯು ನಿಮ್ಮ ಖಾತೆ ಮತ್ತು ಪಾವತಿ ಮಾಹಿತಿಯನ್ನು ಒಳಗೊಂಡಿರುತ್ತದೆ, ಇದನ್ನು ನೀವು ಸೆಟ್ಟಿಂಗ್ಸ್‌ನಲ್ಲಿ ಆ್ಯಕ್ಸೆಸ್ ಮಾಡಬಹುದು ಮತ್ತು ಬದಲಾಯಿಸಬಹುದು.
ಒಂದೇ Apple ಖಾತೆಗೆ ಸೈನ್ ಇನ್ ಆಗಿರುವ ಯಾವುದೇ ಬೆಂಬಲಿತ ಸಾಧನಗಳಲ್ಲಿ Apple TV ಆ್ಯಪ್‌ನಲ್ಲಿ ನೀವು ಏನನ್ನು ಖರೀದಿಸುತ್ತೀರಿ ಮತ್ತು ಏನನ್ನು ವೀಕ್ಷಿಸುತ್ತೀರಿ ಎಂಬುದರ ಕುರಿತು Apple ಮಾಹಿತಿಯನ್ನು ಸಂಗ್ರಹಿಸುತ್ತದೆ. Apple ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿರುವ ಈ ಮಾಹಿತಿಯನ್ನು ಸಂಗ್ರಹಿಸುತ್ತದೆ, ಈ ಮೂಲಕ ನೀವು ವೀಕ್ಷಿಸುತ್ತಿರುವುದನ್ನು ನಿಮ್ಮ ಬೆಂಬಲಿತ ಸಾಧನಗಳಾದ್ಯಂತ ನಾವು ಡಿಸ್‌ಪ್ಲೇ ಮಾಡಬಹುದು. ನೀವು ಥರ್ಡ್-ಪಾರ್ಟಿ ಆ್ಯಪ್‌ಗಳಿಗೆ ಸೈನ್ ಇನ್ ಮಾಡಿದಾಗ, ಆ ಸೇವೆಗಳಿಗೆ ನೀವು ಸಬ್‌ಸ್ಕ್ರೈಬ್ ಮಾಡಿದ್ದೀರಾ ಎಂಬುದರ ಕುರಿತ ಮಾಹಿತಿಯನ್ನು ನಿಮಗೆ ಲಭ್ಯವಿರುವ ಕಂಟೆಂಟ್ ಅನ್ನು ಪ್ರದರ್ಶಿಸಲು ಬಳಸಲಾಗುತ್ತದೆ. Apple TV ಆ್ಯಪ್‌ಗೆ ಥರ್ಡ್-ಪಾರ್ಟಿ ಆ್ಯಪ್ ಕನೆಕ್ಟ್ ಆಗಲು ನೀವು ಅನುಮತಿಯನ್ನು ನೀಡಿದರೆ, ನಿಮ್ಮ ಯಾವುದೇ ಬೆಂಬಲಿತ ಸಾಧನಗಳಲ್ಲಿ ಆ ಆ್ಯಪ್‌ನಿಂದ ನೀವು ಏನನ್ನು ವೀಕ್ಷಿಸುತ್ತೀರಿ ಎಂಬುದರ ಕುರಿತ ಮಾಹಿತಿಯನ್ನು, ಜೊತೆಗೆ ನಿಮ್ಮ ಸಬ್‌ಸ್ಕ್ರಿಪ್ಶನ್ ಸ್ಥಿತಿಯನ್ನು Apple ಸಂಗ್ರಹಿಸುತ್ತದೆ. ನೀವು Apple TV ಆ್ಯಪ್ ಅನ್ನು ಬಳಸಲು ಪ್ರಾರಂಭಿಸಿದಾಗ, Apple Music ಮತ್ತು ರಿಮೋಟ್‌ನಂತಹ ಬೆಂಬಲಿತ ಕಂಟೆಂಟ್ ಅನ್ನು ಹೊಂದಿರುವ Apple ಆ್ಯಪ್‌ಗಳು ಸ್ವಯಂಚಾಲಿತವಾಗಿ ಕನೆಕ್ಟ್ ಆಗುತ್ತವೆ.
ನೀವು ಏನನ್ನು ನೋಡುತ್ತಿದ್ದೀರಿ ಎಂಬುದರ ಬಗ್ಗೆ ಮಾಹಿತಿಯು ನೀವು ಯಾವ ಕಂಟೆಂಟ್ ಅನ್ನು ಪ್ಲೇ ಮಾಡಿದ್ದೀರಿ, ನೀವು ಅದನ್ನು ಯಾವಾಗ ಪ್ಲೇ ಮಾಡಿದ್ದೀರಿ, ನೀವು ಅದನ್ನು ಪ್ಲೇ ಮಾಡಿದ ಸಾಧನ ಮತ್ತು ನೀವು ಅದನ್ನು ಎಲ್ಲಿ ವಿರಾಮಗೊಳಿಸಿದ್ದೀರಿ ಅಥವಾ ನೋಡುವುದನ್ನು ನಿಲ್ಲಿಸಿದ್ದೀರಿ ಎಂಬುದನ್ನು ಒಳಗೊಂಡಿರುತ್ತದೆ. Apple TV ಚಾನಲ್‌ಗಳು ಮತ್ತು ನಿಮ್ಮ Apple TV ಸಬ್‌ಸ್ಕ್ರಿಪ್ಶನ್‌ಗಾಗಿ ನಾವು ಎಲ್ಲಾ ಪ್ಲೇಬ್ಯಾಕ್ ಚಟುವಟಿಕೆಯ ವಿವರವಾದ ಇತಿಹಾಸವನ್ನು ಸಹ ಸಂಗ್ರಹಿಸುತ್ತೇವೆ.
ನಿಮ್ಮ ಸ್ಥಳವನ್ನು ಆ್ಯಕ್ಸೆಸ್ ಮಾಡಲು ನೀವು Apple TV ಆ್ಯಪ್‌ಗೆ ಅನುಮತಿಸಿದರೆ, ಲೈವ್ ಕ್ರೀಡೆಗಳು, ಇವೆಂಟ್‌ಗಳು ಮತ್ತು ಸುದ್ದಿಗಳಂತಹ ಸ್ಥಳೀಯ ಕಂಟೆಂಟ್ ಸೇರಿದಂತೆ ನಿಮ್ಮ ಪ್ರದೇಶದಲ್ಲಿ ಬ್ರೌಸ್ ಮಾಡಲು ಅಥವಾ ವೀಕ್ಷಿಸಲು ಏನು ಲಭ್ಯವಿದೆ ಎಂಬುದನ್ನು ನಿರ್ಧರಿಸಲು ನಿಮ್ಮ ಸ್ಥಳವನ್ನು ಬಳಸಲಾಗುತ್ತದೆ. ಕೆಲವು ಕಂಟೆಂಟ್ ಭೌಗೋಳಿಕತೆಗೆ ಸಂಬಂಧಿತ ಜಾಹೀರಾತುಗಳನ್ನು ಒಳಗೊಂಡಿವೆ. ನೀವು ಆಯ್ಕೆಮಾಡಿರುವ ಕಂಟೆಂಟ್ ಅನ್ನು ಪ್ಲೇ ಮಾಡಲು ನಿಮಗೆ ಅಗತ್ಯವಿರುವ ಪರವಾನಗಿಯ ಹಕ್ಕುಗಳು ನಮ್ಮಲ್ಲಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು, ನೀವು ಯಾವ ದೇಶ ಅಥವಾ ಪ್ರದೇಶದಿಂದ ಸೇವೆಯನ್ನು ಆ್ಯಕ್ಸೆಸ್ ಮಾಡುತ್ತಿದ್ದೀರಿ ಎಂಬುದನ್ನು ಪತ್ತೆಹಚ್ಚಲು Apple ನಿಮ್ಮ ಇಂಟರ್ನೆಟ್ ಕನೆಕ್ಷನ್‌ನ IP ವಿಳಾಸವನ್ನು ಪ್ರತ್ಯೇಕವಾಗಿ ಬಳಸಬಹುದು. ಈ ನಿರ್ಧಾರವನ್ನು ಮಾಡಿದ ನಂತರ, ನಾವು IP ವಿಳಾಸವನ್ನು ಮತ್ತು IP ವಿಳಾಸದಿಂದ ಪಡೆದ ಯಾವುದೇ ಸ್ಥಳದ ಮಾಹಿತಿಯನ್ನು ತ್ಯಜಿಸುತ್ತೇವೆ.
Apple TV ಆ್ಯಪ್ ಅನ್ನು ಸುಧಾರಿಸುವುದು
ನೀವು ಬಳಸುವ ಫೀಚರ್‌ಗಳು (ಉದಾಹರಣೆಗೆ, ವೀಕ್ಷಿಸುವುದನ್ನು ಮುಂದುವರಿಸಿ ಅಥವಾ ಲೈಬ್ರರಿ), ನೀವು ಹುಡುಕುವ ಐಟಮ್‌ಗಳು, ನೋಟಿಫಿಕೇಷನ್‌ಗಳಿಗೆ ನಿಮ್ಮ ಪ್ರತಿಕ್ರಿಯೆಗಳು, ನೀವು ಬ್ರೌಸ್ ಮಾಡುವ ಅಥವಾ ನೋಡುವ ಕಂಟೆಂಟ್ ಪುಟಗಳು, ಆ್ಯಪ್‌ನೊಳಗಿನ ದೋಷಗಳು ಅಥವಾ ಕ್ರ್ಯಾಶ್‌ಗಳ ಬಗ್ಗೆ ಮಾಹಿತಿ ಮತ್ತು ನಿಮ್ಮ ಬಿಲ್ಲಿಂಗ್ ಜಿಪ್ ಕೋಡ್ ಸೇರಿದಂತೆ Apple TV ಆ್ಯಪ್ ಮತ್ತು ನಿಮ್ಮ ಖಾತೆಯ ಬಳಕೆಯ ಬಗ್ಗೆ ಮಾಹಿತಿಯನ್ನು Apple ಸಂಗ್ರಹಿಸುತ್ತದೆ. ನಿಮಗೆ ಮತ್ತು ಇತರರಿಗೆ ಸೇವೆಯನ್ನು ಸುಧಾರಿಸುವುದಕ್ಕೆ ಮತ್ತು ಉತ್ತಮಗೊಳಿಸುವುದಕ್ಕೆ ಸಹಾಯ ಮಾಡಲು ನಾವು ಈ ಮಾಹಿತಿ, ನಿಮ್ಮನ್ನು ಗುರುತಿಸದ ಅಂದಾಜು ಸ್ಥಳದ ಮಾಹಿತಿ ಮತ್ತು ನೀವು ವೀಕ್ಷಿಸುವ ಕುರಿತು ಮಾಹಿತಿಯನ್ನು ಬಳಸುತ್ತೇವೆ. ಸಾಧನದ ಪ್ರಕಾರ, ನಿಮ್ಮ ಸಾಧನವನ್ನು ಯಾವುದರಿಂದ ಪಡೆಯಲಾಗಿದೆಯೋ ಆ ಚಾನೆಲ್, ನಿಮ್ಮ ಆಪರೇಟಿಂಗ್ ಸಿಸ್ಟಮ್‌ನ ಆವೃತ್ತಿ ಮತ್ತು ನಿಮ್ಮ ಸಾಧನದಲ್ಲಿ ಲಭ್ಯವಿರುವ ಸಂಗ್ರಹಣಾ ಸ್ಥಳಾವಕಾಶದಂತಹ ನಿಮ್ಮ ಸಾಧನದ ಬಗೆಗಿನ ಮಾಹಿತಿಯನ್ನು ಸಹ ನಾವು ಸಂಗ್ರಹಿಸುತ್ತೇವೆ. ಉದಾಹರಣೆಗೆ ವಿನಂತಿಸಿದ ಕಂಟೆಂಟ್ ಅನ್ನು ಡೌನ್‌ಲೋಡ್ ಮಾಡಬಹುದೇ ಎಂಬುದನ್ನು ನಿರ್ಣಯಿಸಲು, ಸಾಧನ ಬಳಕೆ ಮತ್ತು ಸಂಗ್ರಹಣೆಯಲ್ಲಿ ಸಾಮಾನ್ಯ ಟ್ರೆಂಡ್‌ಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿಮ್ಮ ಸಾಧನವನ್ನು Wi-Fi ಅಥವಾ ಮೊಬೈಲ್ ಸೇವೆಯ ಮೂಲಕ ಕನೆಕ್ಟ್ ಮಾಡಲಾಗಿದೆಯೇ ಎಂಬುದನ್ನು ನಿರ್ಣಯಿಸಲು ನಾವು ಈ ಮಾಹಿತಿಯನ್ನು ಬಳಸಬಹುದು. ಉದಾಹರಣೆಗೆ, ನಿಮ್ಮ ಸಾಧನದಲ್ಲಿ ಖಾಲಿ ಸ್ಥಳ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುವುದು, ‘ಖರೀದಿ’ಯಲ್ಲಿ ಡೌನ್‌ಲೋಡ್ ಮಾಡದೆಯೇ, ನಿಮ್ಮ iPhoneನಲ್ಲಿ ಚಲನಚಿತ್ರವನ್ನು ಖರೀದಿಸಲು ಅನುಮತಿಸುವ ಫೀಚರ್ ಅನ್ನು ರಚಿಸಲು ನಮಗೆ ಅನುಮತಿಸಿದೆ. ಇತರ ಬಳಕೆದಾರರೊಂದಿಗೆ ಕಂಟೆಂಟ್ ಅನ್ನು ವೀಕ್ಷಿಸಲು ನೀವು SharePlayಯನ್ನು ಬಳಸಿದರೆ, Apple TV ಆ್ಯಪ್ ನೀವು SharePlay ಸೆಷನ್ ಸಮಯದಲ್ಲಿ ಆ ಕಂಟೆಂಟ್ ಅನ್ನು ವೀಕ್ಷಿಸಿದ್ದೀರಿ ಎಂಬುದನ್ನು ಮತ್ತು ಸೆಷನ್‌ನಲ್ಲಿ ಭಾಗವಹಿಸಿದ ಸಾಧನಗಳ ಸಂಖ್ಯೆಯನ್ನು ಸಂಗ್ರಹಿಸುತ್ತದೆ, ಆದರೆ SharePlay ಸೆಷನ್‌ನಲ್ಲಿ ಭಾಗವಹಿಸುವವರನ್ನು ಗುರುತಿಸಲು ಇದು ಯಾವುದೇ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ.
ನಾವು Apple TV ಹುಡುಕಾಟದ ಡೇಟವನ್ನು Apple TVಯನ್ನು ಶಕ್ತಗೊಳಿಸುವ ಮಾಡಲ್‌ಗಳನ್ನು ಸುಧಾರಿಸಲು ಸಹ ಬಳಸುತ್ತೇವೆ. ಉದಾಹರಣೆಗೆ, ಒಟ್ಟುಗೂಡಿಸಿದ Apple TV ಹುಡುಕಾಟದ ಪ್ರಶ್ನೆಗಳನ್ನು Apple TV ಹುಡುಕಾಟದ ಮಾಡಲ್ ಅನ್ನು ಪರಿಷ್ಕರಿಸಲು ಬಳಸಲಾಗುತ್ತದೆ.
Apple TV ಆ್ಯಪ್ ಅನ್ನು ವೈಯಕ್ತಿಕಗೊಳಿಸುವುದು
ನಿಮಗೆ ಹೆಚ್ಚು ಸೂಕ್ತವಾದ ಕಂಟೆಂಟ್ ಅನ್ನು ಅನ್ವೇಷಿಸಲು ನಿಮಗೆ ಸಹಾಯ ಮಾಡುವುದಕ್ಕಾಗಿ ನಾವು Apple TV ಆ್ಯಪ್ ಅನ್ನು ವೈಯಕ್ತೀಕರಿಸುತ್ತೇವೆ. ಉದಾಹರಣೆಗೆ, ನೀವು ಈ ಹಿಂದೆ ವೀಕ್ಷಿಸಿದ ಚಲನಚಿತ್ರಗಳನ್ನು ಆಧರಿಸಿ ನಿಮಗೆ ಆಸಕ್ತಿಯಿರಬಹುದೆಂದು ನಮಗನಿಸುವ ಚಲನಚಿತ್ರಗಳನ್ನು ನಾವು ಶಿಫಾರಸು ಮಾಡುತ್ತೇವೆ ಮತ್ತು Apple TV ಆ್ಯಪ್‌ನಲ್ಲಿನ ನಿಮ್ಮ ಚಟುವಟಿಕೆಯನ್ನು ಆಧರಿಸಿ ನಿಮಗೆ ಹೆಚ್ಚು ಸೂಕ್ತವಾದ ಹುಡುಕಾಟದ ಫಲಿತಾಂಶಗಳನ್ನು ನಾವು ಒದಗಿಸುತ್ತೇವೆ. ವೈಯಕ್ತೀಕರಣವನ್ನು ಒದಗಿಸಲು, ನೀವು ಏನನ್ನು ನೋಡುತ್ತೀರಿ, ನಿಮ್ಮ ಖರೀದಿಗಳು, ಸಬ್‌ಸ್ಕ್ರಿಪ್ಶನ್‌ಗಳು, ಡೌನ್‌ಲೋಡ್‌ಗಳು, ಹುಡುಕಾಟಗಳು, ಬ್ರೌಸಿಂಗ್ ಮತ್ತು Apple TV ಆ್ಯಪ್‌ನಲ್ಲಿನ ಇತರ ಚಟುವಟಿಕೆಗಳು, ಜೊತೆಗೆ ನಿಮ್ಮ ವಯಸ್ಸಿನಂತಹ ನಿಮ್ಮ ಖಾತೆಯಲ್ಲಿ ಲಭ್ಯವಿರುವ ಮಾಹಿತಿ ಸೇರಿದಂತೆ ಇತರ ಮಾಹಿತಿಯನ್ನು ನಾವು ಬಳಸುತ್ತೇವೆ.
Apple TV ಆ್ಯಪ್ ಅನ್ನು ಬೆಂಬಲಿಸುವ ಎಲ್ಲಾ ಸಾಧನಗಳಲ್ಲಿ, ವೈಯಕ್ತೀಕರಣದ ಉದ್ದೇಶಕ್ಕಾಗಿ ಈ ಸಾಧನದಲ್ಲಿರುವ Apple TV ಆ್ಯಪ್‌ನಲ್ಲಿ ನೀವು ಏನನ್ನು ನೋಡುತ್ತೀರಿ ಎಂಬುದರ ಬಗ್ಗೆ Apple ಮಾಹಿತಿಯನ್ನು ಬಳಸುವುದನ್ನು ನೀವು ಬಯಸದಿದ್ದರೆ, ನೀವು ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ ಪ್ಲೇ ಇತಿಹಾಸವನ್ನು ಬಳಸಿ ಎಂಬುದನ್ನು ಆಫ್ ಮಾಡಬಹುದು. ನಿಮ್ಮ iOS, iPadOS, visionOS ಅಥವಾ tvOS ಸಾಧನದಲ್ಲಿ, ಸೆಟ್ಟಿಂಗ್ಸ್ > ಆ್ಯಪ್‌ಗಳು > TV > ಪ್ಲೇ ಇತಿಹಾಸವನ್ನು ಬಳಸಿ ಎಂಬಲ್ಲಿಗೆ ಹೋಗಿ. Macನಲ್ಲಿರುವ Apple TV ಆ್ಯಪ್‌ನಲ್ಲಿ, TV > ಸೆಟ್ಟಿಂಗ್ಸ್ > ಪ್ಲೇಬ್ಯಾಕ್ ಎಂಬಲ್ಲಿಗೆ ಹೋಗಿ, ನಂತರ ವೀಕ್ಷಣೆಯ ಇತಿಹಾಸವನ್ನು ಬಳಸಿ ಎಂಬ ಆಯ್ಕೆಯನ್ನು ರದ್ದುಮಾಡಿ.
ನಿಮ್ಮ Apple ಖಾತೆಗಾಗಿ ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಆಫ್ ಮಾಡುವ ಮೂಲಕ ನೀವು App Store, Apple Books, iTunes Store, Apple TV, Apple Podcasts ಮತ್ತು Appleನಿಂದ ಸಬ್‌ಸ್ಕ್ರಿಪ್ಶನ್‌ಗಳನ್ನು ವೈಯಕ್ತೀಕರಣಗೊಳಿಸಿದ ಫೀಚರ್‌ಗಳನ್ನು ನೀವು ಆಫ್ ಮಾಡಬಹುದು. ನಿಮ್ಮ iOS, iPadOS ಅಥವಾ visionOS ಸಾಧನಗಳಲ್ಲಿ, ಸೆಟ್ಟಿಂಗ್ಸ್ > [ನಿಮ್ಮ ಹೆಸರು] > ಮೀಡಿಯಾ ಮತ್ತು ಖರೀದಿಗಳು > ಖಾತೆಯನ್ನು ನೋಡಿ ಎನ್ನುವಲ್ಲಿ ಹೋಗಿ ಮತ್ತು ನಂತರ ವೈಯಕ್ತೀಕರಿಸಿದ ಶಿಫಾರಸುಗಳನ್ನು ಆಫ್ ಮಾಡಲು ಟ್ಯಾಪ್ ಮಾಡಿ.
ನಿಮ್ಮೊಂದಿಗೆ ಸಂವಹನ ನಡೆಸುವುದು
Apple TV ಆ್ಯಪ್ ಮತ್ತು ನಿಮಗೆ ಆಸಕ್ತಿಯಿರಬಹುದಾದ, Apple One ಅನ್ನೂ ಒಳಗೊಂಡ ಇತರ Apple ಉತ್ಪನ್ನಗಳು, ಸೇವೆಗಳು ಮತ್ತು ಆಫರ್‌ಗಳ ಕುರಿತು ನಿಮಗೆ ಸಂವಹನಗಳನ್ನು ಕಳುಹಿಸಲು, ನಿಮ್ಮ ಮಾಲೀಕತ್ವದಲ್ಲಿರುವ Apple ಉತ್ಪನ್ನಗಳು, Apple ಸೇವೆಗಳಿಗೆ ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳು, ನೀವು ಡೌನ್‌ಲೋಡ್ ಮಾಡುವ Apple ಆ್ಯಪ್‌ಗಳು ಮತ್ತು ನಿಮ್ಮ ಬಿಲ್ಲಿಂಗ್ ಪಿನ್ ಕೋಡ್‌ನಂತಹ ನಿಮ್ಮ ಖಾತೆಯ ಕುರಿತಾದ ಮಾಹಿತಿಯನ್ನು Apple ಬಳಸಬಹುದು. Apple ಆಫರ್‌ಗಳಿಗೆ ಅರ್ಹತೆಯನ್ನು ಪರಿಶೀಲಿಸಲು ನಿಮ್ಮ ಸಾಧನದ ಕುರಿತ ವಿವರಗಳಾದ, ಸಾಧನದ ಸರಣಿ ಸಂಖ್ಯೆ ಅಥವಾ ನಿಮ್ಮ ಸಂಬಂಧಿತ App Store ಸಬ್‌ಸ್ಕ್ರಿಪ್ಶನ್‌ಗಳ ಬಗ್ಗೆ ವಿವರಗಳನ್ನು ಬಳಸಬಹುದು. ನೀವು ಕುಟುಂಬ ಹಂಚಿಕೊಳ್ಳುವಿಕೆ ಗುಂಪಿನಲ್ಲಿದ್ದರೆ, ಕುಟುಂಬ ಹಂಚಿಕೊಳ್ಳುವಿಕೆಯ ಮೂಲಕ ನಿಮಗೆ ಲಭ್ಯವಿರುವ ಉತ್ಪನ್ನಗಳು, ಸೇವೆಗಳು ಮತ್ತು ಆಫರ್‌ಗಳ ಕುರಿತಾದ ಸಂವಹನಗಳನ್ನು Apple ಕಳುಹಿಸಬಹುದು. ನೀವು Apple One ಸಬ್‌ಸ್ಕ್ರಿಪ್ಶನ್ ಅನ್ನು ಖರೀದಿಸಿದರೆ, ನೀವು ಸಬ್‌ಸ್ಕ್ರೈಬ್ ಮಾಡಿರುವ ಪ್ರತಿಯೊಂದು ಸೇವೆಗಳ ಫೀಚರ್‌ಗಳ ಕುರಿತು ನಾವು ನಿಮಗೆ ಈಮೇಲ್‌ಗಳು ಹಾಗೂ ನೋಟಿಫಿಕೇಷನ್‌ಗಳನ್ನು ಕಳುಹಿಸಬಹುದು. Apple News ಆ್ಯಪ್‌ನಲ್ಲಿ ಲಭ್ಯವಿರುವ ಹೊಸ ಫೀಚರ್‌ಗಳು, ಕಂಟೆಂಟ್ ಮತ್ತು ಆಫರ್‌ಗಳ ಕುರಿತು ನಿಮಗೆ ಈಮೇಲ್‌ಗಳು ಹಾಗೂ ನೋಟಿಫಿಕೇಷನ್‌ಗಳನ್ನು ಕಳುಹಿಸಲು Apple TV ಆ್ಯಪ್‌ನಲ್ಲಿನ ನಿಮ್ಮ ಚಟುವಟಿಕೆಯ ಕುರಿತಾದ ಮಾಹಿತಿಯನ್ನು ಸಹ Apple ಬಳಸಬಹುದು. ನೀವು account.apple.com/in ಎಂಬಲ್ಲಿಗೆ ಹೋಗುವ ಮೂಲಕ ನಿಮ್ಮ ಈಮೇಲ್ ಆದ್ಯತೆಗಳನ್ನು ಬದಲಾಯಿಸಬಹುದು ಹಾಗೂ ಈ ಈಮೇಲ್‌ಗಳನ್ನು ಪಡೆಯುವುದರಿಂದ ಹೊರಗುಳಿಯಬಹುದು. ನಿಮ್ಮ iOS,iPadOS, ಅಥವಾ visionOSನಲ್ಲಿ ನಿಮ್ಮ ನೋಟಿಫಿಕೇಷನ್ ಆದ್ಯತೆಗಳನ್ನು ಅಪ್‌ಡೇಟ್ ಮಾಡಲು ಸೆಟ್ಟಿಂಗ್ಸ್ > ನೋಟಿಫಿಕೇಷನ್‌ಗಳು > TV ಎನ್ನುವಲ್ಲಿ ಹೋಗಿ.
ಜಾಹೀರಾತು
Apple TV ಆ್ಯಪ್‌ನಲ್ಲಿ, ನಿಮ್ಮ ಸ್ಥಳವನ್ನು ಆ್ಯಕ್ಸೆಸ್ ಮಾಡಲು ನೀವು Apple TVಗೆ ಅನುಮತಿಸಿದರೆ, ಭೌಗೋಳಿಕತೆಗೆ ಸೂಕ್ತವಾದ ಜಾಹೀರಾತುಗಳನ್ನು ಒದಗಿಸಲು ನಿಮ್ಮ ಸ್ಥಳವನ್ನು ಬಳಸಬಹುದು.
App Store, Apple News, ಮತ್ತು ಸ್ಟಾಕ್ಸ್‌ನಂತಹ ಇತರ ಆ್ಯಪ್‌ಗಳಿಗೆ, ವೈಯಕ್ತೀಕರಿಸಿದ ಜಾಹೀರಾತುಗಳ ಸೆಟ್ಟಿಂಗ್ ಆನ್ ಆಗಿದ್ದರೆ, Appleನ ಜಾಹೀರಾತು ಪ್ಲ್ಯಾಟ್‌ಫಾರ್ಮ್ ನಿಮಗೆ ಹೆಚ್ಚು ಪ್ರಸ್ತುತವಾಗಿರುವ ಆ್ಯಪ್‌ಗಳಲ್ಲಿ ಜಾಹೀರಾತುಗಳನ್ನು ಒದಗಿಸಲು, ನೀವು Appleನಿಂದ ಖರೀದಿಸುವ ಚಲನಚಿತ್ರಗಳು ಮತ್ತು ಟಿವಿ ಶೋಗಳ ಬಗ್ಗೆ ಮಾಹಿತಿ ಸೇರಿದಂತೆ ನಿಮ್ಮ ಮಾಹಿತಿಯನ್ನು ಬಳಸಬಹುದು.
Appleನ ಜಾಹೀರಾತು ಪ್ಲ್ಯಾಟ್‌ಫಾರ್ಮ್‌ನಿಂದ ನಿಮ್ಮ ಆಸಕ್ತಿಗಳಿಗೆ ಗುರಿಯಾಗಿರುವ ಜಾಹೀರಾತುಗಳನ್ನು ಸ್ವೀಕರಿಸಲು ನೀವು ಬಯಸದಿದ್ದರೆ, ನೀವು ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ಆಫ್ ಮಾಡಲು ಆಯ್ಕೆ ಮಾಡಬಹುದು. ವೈಯಕ್ತೀಕರಿಸಿದ ಆ್ಯಡ್‌ಗಳನ್ನು ಆಫ್ ಮಾಡುವುದರಿಂದ ಆ್ಯಡ್ ಟಾರ್ಗೆಟಿಂಗ್‌ಗಾಗಿ ನಿಮ್ಮ ಮಾಹಿತಿಯನ್ನು ಬಳಸದಂತೆ Apple ಅನ್ನು ತಡೆಯುತ್ತದೆ. ಇದು ನೀವು ಸ್ವೀಕರಿಸುವ ಆ್ಯಡ್‌ಗಳ ಸಂಖ್ಯೆಯನ್ನು ಕಡಿಮೆ ಮಾಡದಿರಬಹುದು, ಆದರೆ ಆ್ಯಡ್‌ಗಳು ನಿಮಗೆ ಕಡಿಮೆ ಸಂಬಂಧಿತವಾಗಿರಬಹುದು.
ನೀವು ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > Apple ಜಾಹೀರಾತು ಎಂಬಲ್ಲಿಗೆ ಹೋಗುವ ಮೂಲಕ ನಿಮ್ಮ ವೈಯಕ್ತೀಕರಿಸಿದ ಜಾಹೀರಾತುಗಳ ಸೆಟ್ಟಿಂಗ್ಸ್ ಅನ್ನು ಬದಲಿಸಬಹುದು.
www.apple.com/in/legal/privacy/data/en/apple-advertising ಎಂಬಲ್ಲಿನ Apple ಜಾಹೀರಾತು ಮತ್ತು ಗೌಪ್ಯತೆಯ ಕುರಿತು ಇನ್ನಷ್ಟು ತಿಳಿಯಿರಿ.
App Store, Apple News ಮತ್ತು ಸ್ಟಾಕ್ಸ್‌ನಲ್ಲಿ ವೈಯಕ್ತೀಕರಿಸಿದ ಆ್ಯಡ್‌ಗಳಿಂದ ಹೊರಗುಳಿಯುವುದು ಹೇಗೆ ಎಂಬುದರ ಕುರಿತು support.apple.com/en-in/105131 ವೆಬ್‌ಪುಟದಲ್ಲಿ ತಿಳಿಯಿರಿ.
ಪಾಲುದಾರರ ಮೂಲಕ Apple TV ಸಬ್‌ಸ್ಕ್ರಿಪ್ಶನ್‌ಗಳು
ನಿಮ್ಮ ಮೊಬೈಲ್ ನೆಟ್‌ವರ್ಕ್ ಪೂರೈಕೆದಾರರು Apple TV ಸಬ್‌ಸ್ಕ್ರಿಪ್ಶನ್‌ಗಳು ಮತ್ತು ಉಚಿತ ಟ್ರಯಲ್‌ಗಳನ್ನು ನೀಡುವುದಾದರೆ, ನಿಮ್ಮ ಅರ್ಹತೆಯನ್ನು ನಿರ್ಧರಿಸಲು Apple ನಿಮ್ಮ ಫೋನ್ ಸಂಖ್ಯೆಯನ್ನು ಮೊಬೈಲ್ ನೆಟ್‌ವರ್ಕ್ ಪೂರೈಕೆದಾರ ಪಾಲುದಾರರ ಬಳಿ ಪರಿಶೀಲಿಸಬಹುದು. ನೀವು ನಿಮ್ಮ ಮೊಬೈಲ್ ನೆಟ್‌ವರ್ಕ್ ಪೂರೈಕೆದಾರರು ಅಥವಾ ಬೇರೊಬ್ಬ Apple ಪಾಲುದಾರರ ಮೂಲಕ Apple TV ಸಬ್‌ಸ್ಕ್ರಿಪ್ಶನ್‌ಗೆ ಅಥವಾ ಉಚಿತ ಟ್ರಯಲ್‌ಗೆ ಸೈನ್ ಅಪ್ ಮಾಡಿದರೆ, Apple ನಿಮ್ಮ ಖಾತೆಯನ್ನು ಗುರುತಿಸಲು ಹಾಗೂ ಮೊಬೈಲ್ ನೆಟ್‌ವರ್ಕ್ ಪೂರೈಕೆದಾರರು ಅಥವಾ ಬೇರೆ ಪಾಲುದಾರರಿಗೆ ನೀವು ನಿಮ್ಮ ಸಬ್‌ಸ್ಕ್ರಿಪ್ಶನ್ ಅನ್ನು ಸಕ್ರಿಯಗೊಳಿಸಿದ್ದೀರಿ ಎಂದು ತಿಳಿಸಲು, ಆ ಪಾಲುದಾರಾರು ಹಂಚಿಕೊಳ್ಳುವ ನಿಮ್ಮ ಫೋನ್ ಸಂಖ್ಯೆ ಅಥವಾ ಅನನ್ಯ ಖಾತೆಯ ಐಡೆಂಟಿಫೈಯರ್ ಅನ್ನು ಬಳಸುತ್ತದೆ. ಸೈನ್ ಇನ್ ಮಾಡುವಾಗ ನಿಮ್ಮ ಖಾತೆಯನ್ನು ದೃಢೀಕರಿಸಲು ಮತ್ತು ನಿಮ್ಮ ಖಾತೆಯೊಂದಿಗೆ ನಿಮ್ಮ Apple TV ಸಬ್‌ಸ್ಕ್ರಿಪ್ಶನ್ ಅನ್ನು ಕನೆಕ್ಟ್ ಮಾಡಲು ನಿಮ್ಮ ಸಬ್‌ಸ್ಕ್ರಿಪ್ಶನ್ ಜೊತೆಗೆ ಸಂಯೋಜಿತವಾಗಿರುವ ಫೋನ್ ಸಂಖ್ಯೆ ಅಥವಾ ಅನನ್ಯ ಐಡೆಂಟಿಫೈಯರ್ ಅನ್ನು ನಾವು ಬಳಸುತ್ತೇವೆ.
ಪಾಲುದಾರರ ಖಾತೆಗಳನ್ನು ಕನೆಕ್ಟ್ ಮಾಡಲಾಗುತ್ತಿದೆ
Apple ಮತ್ತು ನಮ್ಮ ಕೆಲವು ಪಾಲುದಾರರು ನಿಮ್ಮ ಪಾಲುದಾರರ ಖಾತೆ ಮತ್ತು ನಿಮ್ಮ Apple ಖಾತೆಯನ್ನು ಕನೆಕ್ಟ್ ಮಾಡಲು ನಿಮಗೆ ಅನುಮತಿಸಬಹುದು, ಇದರಿಂದ ನೀವು Apple TV ಸಬ್‌ಸ್ಕ್ರಿಪ್ಶನ್ ಕಂಟೆಂಟ್ ಅನ್ನು Apple TV ಆ್ಯಪ್ ಮತ್ತು ಪಾಲುದಾರರ ಪ್ಲ್ಯಾಟ್‌ಫಾರ್ಮ್ ಎರಡರಲ್ಲೂ ವೀಕ್ಷಿಸಬಹುದು. ನಿಮ್ಮ ಪಾಲುದಾರರ ಖಾತೆಯನ್ನು ಕನೆಕ್ಟ್ ಮಾಡಲು ನೀವು ಆಯ್ಕೆಮಾಡಿದಾಗ, ಪಾಲುದಾರರ ಬಳಿಯಿರುವ ನಿಮ್ಮ ಖಾತೆಯ ಕುರಿತಾದ ಕೆಲವು ಮಾಹಿತಿಯನ್ನು Apple ಸ್ವೀಕರಿಸುತ್ತದೆ, ಆದರೆ Apple ನಿಮ್ಮ Apple TV ಸಬ್‌ಸ್ಕ್ರಿಪ್ಶನ್ ಸ್ಟೇಟಸ್ ಮತ್ತು ಪಾಲುದಾರರ IDಯನ್ನು ಮಾತ್ರ ಸಂಗ್ರಹಿಸುತ್ತದೆ.
Apple ನಿಮ್ಮ ಸಬ್‌ಸ್ಕ್ರಿಪ್ಶನ್ ಸ್ಟೇಟಸ್ ಮತ್ತು ನಿಮ್ಮ Apple ಖಾತೆಯೊಂದಿಗೆ ನೀವು ಪಾಲುದಾರರ ಖಾತೆಗಳನ್ನು ಕನೆಕ್ಟ್ ಮಾಡುತ್ತೀರಾ ಎಂಬುದರ ಕುರಿತಾದ ಮಾಹಿತಿಯನ್ನು ನಿಮಗಾಗಿ ಮತ್ತು ಇತರರಿಗಾಗಿ ಫೀಚರ್ ಹಾಗೂ Apple TV ಆ್ಯಪ್ ಅನ್ನು ಆಪ್ಟಿಮೈಸ್ ಮಾಡಲು ಮತ್ತು ಸುಧಾರಿಸಲು ಬಳಸುತ್ತದೆ.
ಥರ್ಡ್ ಪಾರ್ಟಿಗಳ ಜೊತೆಗೆ ಹಂಚಿಕೊಳ್ಳುವುದು
ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು, ಗ್ರಾಹಕರಿಗೆ Apple ಮಾರಾಟ ಮಾಡುವುದಕ್ಕೆ ಸಹಾಯ ಮಾಡಲು ಮತ್ತು App Store, Apple News ಮತ್ತು ಸ್ಟಾಕ್ಸ್‌ನಲ್ಲಿ ತೋರಿಸಲು Apple ಪರವಾಗಿ ಜಾಹೀರಾತುಗಳನ್ನು ಮಾರಾಟ ಮಾಡಲು Appleನೊಂದಿಗೆ ಕೆಲಸ ಮಾಡುವ ನಮ್ಮ ಜಾಹೀರಾತುದಾರರು ಮತ್ತು ಕಾರ್ಯತಂತ್ರದ ಪಾಲುದಾರರಿಗೆ ನಾವು ಕೆಲವು ವೈಯಕ್ತಿಕವಲ್ಲದ ಡೇಟವನ್ನು ಒದಗಿಸುತ್ತೇವೆ. ಉದಾಹರಣೆಗೆ, ನಿಮ್ಮ ವಹಿವಾಟುಗಳು, ಚಟುವಟಿಕೆಯ ವೀಕ್ಷಣೆ ಮತ್ತು ಪ್ರದೇಶದ ಬಗ್ಗೆ ವೈಯಕ್ತಿಕವಲ್ಲದ ಡೇಟವನ್ನು, ಜೊತೆಗೆ ವಯಸ್ಸು ಮತ್ತು ಲಿಂಗದಂತಹ ಒಟ್ಟುಗೂಡಿಸಿದ ಬಳಕೆದಾರರ ಜನಸಂಖ್ಯೆ (ನಿಮ್ಮ Apple ಖಾತೆಯಲ್ಲಿ ನಿಮ್ಮ ಹೆಸರು ಮತ್ತು ವಿನಿಮಯದಂತಹ ಮಾಹಿತಿಯಿಂದ ಊಹಿಸಬಹುದು), ಕಂಟೆಂಟ್ ಮಾಲೀಕರಂತಹ Apple TV ಕಾರ್ಯತಂತ್ರದ ಪಾಲುದಾರರೊಂದಿಗೆ ನಾವು ಹಂಚಿಕೊಳ್ಳಬಹುದು, ಇದರಿಂದ ಅವರು ತಮ್ಮ ಸೃಜನಶೀಲ ಕೆಲಸದ ಕಾರ್ಯಕ್ಷಮತೆಯನ್ನು ಮಾಪನ ಮಾಡಬಹುದು, ರಾಯಲ್ಟಿ ಮತ್ತು ಅಕೌಂಟಿಂಗ್ ಅವಶ್ಯಕತೆಗಳನ್ನು ಪೂರೈಸಬಹುದು ಮತ್ತು ಸಂಬಂಧಿತ ಉತ್ಪನ್ನಗಳು ಮತ್ತು ಸೇವೆಗಳನ್ನು ಸುಧಾರಿಸಬಹುದು.
ನೀವು Apple ಅಲ್ಲದ ಸಾಧನದಲ್ಲಿ Apple TV ಆ್ಯಪ್‌ಗೆ ಸೈನ್ ಇನ್ ಮಾಡಿದರೆ, ಆ್ಯಪ್‌ಗೆ ಕಾರ್ಯನಿರ್ವಹಿಸುವುದಕ್ಕೆ ಅನುವು ಮಾಡಿಕೊಡಲು Apple, ಪ್ಲ್ಯಾಟ್‌ಫಾರ್ಮ್ ಒದಗಿಸುವವರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಬಹುದು. ಇದರಿಂದ ನಿಮ್ಮ Apple TV ಸಬ್‌ಸ್ಕ್ರಿಪ್ಶನ್‌ಗಳ ಕಂಟೆಂಟ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಹುಡುಕಾಟದ ಫಲಿತಾಂಶಗಳು ಮತ್ತು ವೈಯಕ್ತೀಕರಿಸಿದ ಶಿಫಾರಸುಗಳನ್ನು ಒದಗಿಸುವಂತಹ ಪ್ಲ್ಯಾಟ್‌ಫಾರ್ಮ್ ಫೀಚರ್‌ಗಳನ್ನು ಇದು ಬೆಂಬಲಿಸುತ್ತದೆ. ನೀವು Apple TV ಆ್ಯಪ್ ಅನ್ನು ತೆರೆದಿದ್ದೀರಾ ಮತ್ತು ಲಭ್ಯವಿರುವಲ್ಲಿ, ನೀವು Apple TV ಮತ್ತು Apple TV ಚಾನಲ್‌ಗಳಿಗೆ ಸಬ್‌ಸ್ಕ್ರೈಬ್ ಆಗಿದ್ದೀರಾ ಎಂಬ ಮಾಹಿತಿಯನ್ನು ಇದು ಒಳಗೊಂಡಿರಬಹುದು. ನಿಮ್ಮ Apple ಅಲ್ಲದ ಸಾಧನದಲ್ಲಿ, Apple TV ಆ್ಯಪ್ ಸೆಟ್ಟಿಂಗ್ಸ್‌ನಲ್ಲಿ ನಿಮ್ಮ ಸಬ್‌ಸ್ಕ್ರಿಪ್ಶನ್ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಬಹುದು, ಹಾಗೆ ಮಾಡುವುದರಿಂದ ಪ್ಲ್ಯಾಟ್‌ಫಾರ್ಮ್‌ನಲ್ಲಿ Apple TV ಕಂಟೆಂಟ್ ಕಾಣಿಸಿಕೊಳ್ಳುವ ವಿಧಾನಗಳು ಮಿತಿಗೊಳ್ಳುತ್ತವೆ.
Apple ಅಲ್ಲದ ಬೆಂಬಲಿತ ಸಾಧನಗಳಲ್ಲಿ, Apple TV ಸಬ್‌ಸ್ಕ್ರಿಪ್ಶನ್, Apple TV ಚಾನಲ್‌ಗಳನ್ನು ಒಳಗೊಂಡಂತೆ Apple TV ಆ್ಯಪ್‌ನಲ್ಲಿ ನೀವು ವೀಕ್ಷಿಸುವ, ಖರೀದಿಸುವ ಅಥವಾ ಬಾಡಿಗೆಗೆ ಪಡೆಯುವುದನ್ನು ಮತ್ತು ಇತರ ಕಂಟೆಂಟ್ ಅನ್ನು (ಲಭ್ಯವಿರುವಲ್ಲಿ) ನಿಮ್ಮ ಥರ್ಡ್ ಪಾರ್ಟಿ ಪ್ಲ್ಯಾಟ್‌ಫಾರ್ಮ್‌ನ ಪೂರೈಕೆದಾರರೊಂದಿಗೆ ಹಂಚಿಕೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ನೀವು ಆಯ್ಕೆಮಾಡಬಹುದು. ಇದು ನಿಮ್ಮ ಪ್ರೊಫೈಲ್ ಹೆಸರು ಅಥವಾ Apple TV ಆ್ಯಪ್‌ನಿಂದ ನಿಮ್ಮ ಡೇಟವನ್ನು ನಿಮ್ಮ ಖಾತೆ ಅಥವಾ ನಿಮ್ಮ Apple ಅಲ್ಲದ ಸಾಧನದಲ್ಲಿನ ಪ್ರೊಫೈಲ್‌ನೊಂದಿಗೆ ಹೊಂದಾಣಿಕೆ ಮಾಡಲು ಬಳಸುವ ಇತರ ಮಾಹಿತಿಯನ್ನು ಒಳಗೊಂಡಿರಬಹುದು. ಪ್ರಗತಿಯಲ್ಲಿರುವ ಶೋಗಳನ್ನು ತೋರಿಸಲು ಮತ್ತು ವೈಯಕ್ತೀಕರಿಸಿದ ಶಿಫಾರಸುಗಳಂತಹ ಪ್ಲ್ಯಾಟ್‌ಫಾರ್ಮ್ ಫೀಚರ್‌ಗಳನ್ನು ಸಕ್ರಿಯಗೊಳಿಸಲು ನಿಮ್ಮ ಪ್ಲ್ಯಾಟ್‌ಫಾರ್ಮ್ ಪೂರೈಕೆದಾರರು Apple TV ಆ್ಯಪ್‌ನಿಂದ ನಿಮ್ಮ ಮಾಹಿತಿಯನ್ನು ಬಳಸಿಕೊಳ್ಳಬಹುದು. ನಿಮ್ಮ Apple ಅಲ್ಲದ ಸಾಧನದಲ್ಲಿ Apple TV ಆ್ಯಪ್ ಸೆಟ್ಟಿಂಗ್ಸ್‌ಗೆ ಹೋಗುವ ಮೂಲಕ ನೀವು ಇದನ್ನು ಆಫ್ ಮಾಡಬಹುದು. ಕೆಲವು ಸಾಧನಗಳಲ್ಲಿ, ಇದು ನಿಮ್ಮನ್ನು ಪ್ಲ್ಯಾಟ್‌ಫಾರ್ಮ್‌ನ ಸೆಟ್ಟಿಂಗ್ಸ್‌ಗೆ ನಿರ್ದೇಶಿಸಬಹುದು.
ನೀವು Apple ಅಲ್ಲದ ಸಾಧನದಲ್ಲಿ Apple TV ಆ್ಯಪ್‌ಗೆ ಸೈನ್ ಇನ್ ಮಾಡುವುದನ್ನು ಆಯ್ಕೆ ಮಾಡಿದರೆ, ಅದು ಯಾವ ಡೇಟವನ್ನು ಸಂಗ್ರಹಿಸುತ್ತದೆ, ಬಳಸುತ್ತದೆ ಮತ್ತು ಹಂಚಿಕೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ಲ್ಯಾಟ್‌ಫಾರ್ಮ್‌ನ ಪೂರೈಕೆದಾರರ ನಿಯಮಗಳು, ಗೌಪ್ಯತೆ ನೀತಿಗಳು ಮತ್ತು ಅಭ್ಯಾಸಗಳನ್ನು ನೀವು ಪರಿಶೀಲಿಸಬೇಕು.
ರಿಟೆನ್ಶನ್
ವ್ಯಾಪಾರದ ಅಗತ್ಯತೆ, ಒಪ್ಪಂದದ ಬಾಧ್ಯತೆಗಳು ಮತ್ತು ಕಾನೂನು ಅವಶ್ಯಕತೆಗಳ ಅನುಸಾರ Apple TV ಆ್ಯಪ್‌ನಲ್ಲಿ ನಿಮ್ಮ ಖರೀದಿಗಳು, ಡೌನ್‌ಲೋಡ್‌ಗಳು ಮತ್ತು ವೀಕ್ಷಣೆಯ ಚಟುವಟಿಕೆಗೆ ಸಂಬಂಧಿಸಿದ ವೈಯಕ್ತಿಕ ಡೇಟವನ್ನು ನಾವು ವಿಭಿನ್ನ ಸಮಯದವರೆಗೆ ಉಳಿಸಿಕೊಳ್ಳುತ್ತೇವೆ. ಖರೀದಿಗಳು ಮತ್ತು ಡೌನ್‌ಲೋಡ್‌ಗಳಿಗೆ, ಸಾಮಾನ್ಯವಾಗಿ ಕನಿಷ್ಠ 10 ವರ್ಷಗಳ ರಿಟೆನ್ಶನ್ ಅವಧಿಯ ಅಗತ್ಯವಿರುತ್ತದೆ, ಆದರೆ ಚೀನಾದಂತಹ ಪ್ರದೇಶಗಳಲ್ಲಿ ಆ ಅವಧಿ 30 ವರ್ಷಗಳಾಗಿರಬಹುದು. ಅನ್ವಯವಾಗುವ ನಮ್ಮ ನಿಯಮಗಳಿಗೆ ಅನುಗುಣವಾಗಿ ಆ ಕಂಟೆಂಟ್ ಅನ್ನು ಡೌನ್‌ಲೋಡ್ ಮಾಡುವುದಕ್ಕೆ ನಿಮಗೆ ಅನುಮತಿಸಲು ನೀವು ನಮ್ಮೊಂದಿಗೆ ಖಾತೆಯನ್ನು ಹೊಂದಿರುವವರೆಗೆ ಕನಿಷ್ಠ ಪಕ್ಷ ನಿಮ್ಮ ಖರೀದಿ ಮತ್ತು ಕಂಟೆಂಟ್‌ನ ಡೌನ್‌ಲೋಡ್‌ಗಳ ದಾಖಲೆಯನ್ನು ಸಹ ನಾವು ಉಳಿಸಿಕೊಳ್ಳುತ್ತೇವೆ. ನಾವು ಬ್ರೌಸಿಂಗ್ ಚಟುವಟಿಕೆ ಹಾಗೂ ಹುಡುಕಾಟಗಳಂತ ಇತರ ಮಾಹಿತಿಯನ್ನು ಎರಡು ವರ್ಷಗಳವರೆಗೆ ಉಳಿಸಿಕೊಳ್ಳುತ್ತೇವೆ. ವಹಿವಾಟುಗಳಂಥ, ಆದರೆ ನಿಮ್ಮ ಸ್ಟೋರ್ ಮಾಡಿದ ಕಾರ್ಡ್ ವಿವರಗಳಂತಲ್ಲದ ಕೆಲವು ಮಾಹಿತಿಯನ್ನು ನೀವು ನಿಮ್ಮ ಖಾತೆಯನ್ನು ಮುಚ್ಚಿದ ನಂತರವೂ ಅಥವಾ Apple TV ಆ್ಯಪ್‌ಗಳನ್ನು ಬಳಸುವುದನ್ನು ನಿಲ್ಲಿಸಿದ ನಂತರವೂ ವ್ಯಾಪಾರ ದಾಖಲೆಗಳಾಗಿ ಇಟ್ಟುಕೊಳ್ಳಬಹುದು.
ನೀವು ಒಂದು ಪಾವತಿ ಕಾರ್ಡ್ ಅನ್ನು ಬಳಸಿದಾಗ, Apple ಭವಿಷ್ಯದ ಖರೀದಿಗಳಿಗೆ, ಪುನರಾವರ್ತನೆಗೊಳ್ಳುವ ವಹಿವಾಟುಗಳಿಗೆ, ಅಥವಾ ನೀವು ದೃಢೀಕರಿಸಿದ ಇತರ ಬಳಕೆಗಳಿಗೆ ನಿಮ್ಮ ಕಾರ್ಡ್ ಸಂಖ್ಯೆ ಹಾಗೂ ಬಿಲ್ಲಿಂಗ್ ಮಾಹಿತಿಯನ್ನು ಇಟ್ಟುಕೊಳ್ಳಬಹುದು ಹಾಗೂ ಸ್ವಯಂಚಾಲಿತವಾಗಿ ಅಪ್‌ಡೇಟ್ ಮಾಡಬಹುದು. Apple ಈ ಮಾಹಿತಿಯನ್ನು ನಿಮ್ಮ ಹಣಕಾಸು ಸಂಸ್ಥೆ ಅಥವಾ ಪಾವತಿಯ ನೆಟ್‌ವರ್ಕ್ ಮೂಲಕ ಪಡೆಯಬಹುದು, ಹಾಗೂ ಇದನ್ನು ವಂಚನೆ ತಡೆಗಟ್ಟುವಿಕೆ ಮತ್ತು ದೃಢೀಕರಣಕ್ಕಾಗಿ ಸಹ ಬಳಸಬಹುದು.
ಪ್ಲೇ ಮಾಡಿರುವುದರ ಇತಿಹಾಸವನ್ನು ತೆರವುಗೊಳಿಸಿ
ಸೆಟ್ಟಿಂಗ್ಸ್ ಆ್ಯಪ್‌ನಲ್ಲಿನ Apple TV ಆ್ಯಪ್‌ನಲ್ಲಿ ನಿಮ್ಮ ಪ್ಲೇ ಮಾಡಿರುವ ಇತಿಹಾಸವನ್ನು ನೀವು ತೆರವುಗೊಳಿಸಬಹುದು. ನಿಮ್ಮ iOS, iPadOS, ಅಥವಾ visionOS ಸಾಧನದಲ್ಲಿನ Apple TV ಆ್ಯಪ್‌ನಲ್ಲಿ, ಖಾತೆ > ಗೌಪ್ಯತೆ ಮತ್ತು ಆ್ಯಕ್ಸೆಸ್ > ಪ್ಲೇ ಇತಿಹಾಸವನ್ನು ತೆರವುಗೊಳಿಸಿ ಎಂಬಲ್ಲಿಗೆ ಹೋಗಿ. ನಿಮ್ಮ Macನಲ್ಲಿನ Apple TV ಆ್ಯಪ್‌ನಲ್ಲಿ, TV > ಸೆಟ್ಟಿಂಗ್ಸ್ > ಸುಧಾರಿತ > ಪ್ಲೇ ಇತಿಹಾಸವನ್ನು ತೆರವುಗೊಳಿಸಿ ಎಂಬಲ್ಲಿಗೆ ಹೋಗಿ. tvOSನಲ್ಲಿ, ಸೆಟ್ಟಿಂಗ್ಸ್ > ಆ್ಯಪ್‌ಗಳು > TV > ಪ್ಲೇ ಇತಿಹಾಸವನ್ನು ತೆರವುಗೊಳಿಸಿ ಎಂಬಲ್ಲಿಗೆ ಹೋಗಿ. ಇದು ನಿಮ್ಮ ವಾಚ್‌ಲಿಸ್ಟ್‌ನಿಂದ ಎಲ್ಲಾ TV ಶೋಗಳು ಮತ್ತು ಚಲನಚಿತ್ರಗಳನ್ನು ತೆಗೆದುಹಾಕುತ್ತದೆ ಮತ್ತು ನಿಮ್ಮ ಖಾತೆಯಿಂದ ಹಿಂದಿನ ಯಾವುದೇ ಪ್ಲೇಬ್ಯಾಕ್ ಇತಿಹಾಸವನ್ನು ಬೇರ್ಪಡಿಸುತ್ತದೆ. ಒಂದೇ Apple ಖಾತೆಯನ್ನು ಬಳಸುವ ಸಾಧನಗಳಲ್ಲಿ Apple ಹೊಂದಿರುವ ಮತ್ತು ಬಳಸುವ ನಿಮ್ಮ ಪ್ಲೇ ಡೇಟಗೆ ಇದು ಅನ್ವಯಿಸುತ್ತದೆ. ನೀವು Apple ಅಲ್ಲದ ಸಾಧನವನ್ನು ಬಳಸಿದರೆ ಮತ್ತು ನೀವು ವೀಕ್ಷಿಸುವುದನ್ನು ಆ ಪ್ಲ್ಯಾಟ್‌ಫಾರ್ಮ್‌ನ ಪೂರೈಕೆದಾರರೊಂದಿಗೆ ಹಂಚಿಕೊಳ್ಳುವುದನ್ನು ಆಯ್ಕೆ ಮಾಡಿದ್ದರೆ, ನಿಮ್ಮ ಪ್ಲೇ ಇತಿಹಾಸವನ್ನು ತೆರವುಗೊಳಿಸುವುದರಿಂದ ಪ್ಲ್ಯಾಟ್‌ಫಾರ್ಮ್‌ನ ಪೂರೈಕೆದಾರರು ಸಂಗ್ರಹಿಸಿರುವ ಪ್ಲೇ ಡೇಟದ ಮೇಲೆ ಪರಿಣಾಮ ಬೀರುವುದಿಲ್ಲ. ಆ ಪೂರೈಕೆದಾರರು ಸಂಗ್ರಹಿಸಿದ ಡೇಟವನ್ನು ನೀವು ಡಿಲೀಟ್ ಮಾಡಬಹುದೇ ಇಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ಲ್ಯಾಟ್‌ಫಾರ್ಮ್‌ನ ಪೂರೈಕೆದಾರರ ನಿಯಮಗಳು, ಗೌಪ್ಯತೆ ನೀತಿಗಳು ಮತ್ತು ಅಭ್ಯಾಸಗಳನ್ನು ನೀವು ಪರಿಶೀಲಿಸಬೇಕು.
ಎಪಿಸೋಡ್ ಅನ್ನು ದೀರ್ಘ ಸಮಯದವರೆಗೆ ಒತ್ತಿ ಹಿಡಿಯುವ ಮೂಲಕ ಮತ್ತು ‘ವಾಚ್‌ಲಿಸ್ಟ್‌ನಿಂದ ತೆಗೆದುಹಾಕಿ’ ಎಂಬುದನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ವಾಚ್‌ಲಿಸ್ಟ್‌ನಿಂದ ಒಂದೊಂದೇ ಐಟಮ್‌ಗಳನ್ನು ನೀವು ತೆಗೆದುಹಾಕಬಹುದು. ಅದೇ ಮೆನುವಿನಲ್ಲಿ, ನೀವು ‘ಇತ್ತೀಚೆಗೆ ವೀಕ್ಷಿಸರುವುದು’ ಎಂಬುದರಿಂದ ‘ತೆಗೆದುಹಾಕಿ’ ಎಂಬುದನ್ನು ಆಯ್ಕೆ ಮಾಡಿದರೆ, ವೈಯಕ್ತೀಕರಿಸಿದ ಶಿಫಾರಸುಗಳನ್ನು ರಚಿಸುವುದರಿಂದಲೂ ಆ ಎಪಿಸೋಡ್ ಅನ್ನು ತೆಗೆದುಹಾಕಲಾಗುತ್ತದೆ. ಆದರೂ, ವರದಿ ಮತ್ತು ರಾಯಲ್ಟಿ ಅವಶ್ಯಕತೆಗಳಿಗಾಗಿ Apple TV ಚಾನಲ್‌ಗಳು ಮತ್ತು Apple TV ಸಬ್‌ಸ್ಕ್ರಿಪ್ಶನ್‌ನ ಪ್ಲೇ ಇತಿಹಾಸದ ದಾಖಲೆಗಳನ್ನು Apple ಉಳಿಸಿಕೊಳ್ಳುತ್ತದೆ.
ಥರ್ಡ್-ಪಾರ್ಟಿ ಕನೆಕ್ಟೆಡ್ ಆ್ಯಪ್‌ಗಳು
ಆ್ಯಪ್‌ಗಳಲ್ಲಿ ನೀವು ಏನನ್ನು ನೋಡುತ್ತೀರೋ ಅದನ್ನು Appleನೊಂದಿಗೆ ಹಂಚಿಕೊಳ್ಳುವುದಕ್ಕೆ ಪ್ರಾರಂಭಿಸಲು ನಿಮ್ಮ ಬೆಂಬಲಿತ ಥರ್ಡ್-ಪಾರ್ಟಿ ಆ್ಯಪ್‌ಗಳನ್ನು Apple TV ಆ್ಯಪ್‌ಗೆ ಕನೆಕ್ಟ್ ಮಾಡಲು ನೀವು ಅನುಮತಿ ನೀಡಬೇಕು. ನೀವು Apple TV ಆ್ಯಪ್ ಅನ್ನು ಸೆಟಪ್ ಮಾಡಿದಾಗ, ಒಂದೇ ಸಮಯದಲ್ಲಿ ಅನೇಕ ಆ್ಯಪ್‌ಗಳಿಗೆ ಅನುಮತಿ ನೀಡುವಂತೆ ನಿಮ್ಮನ್ನು ಕೇಳಬಹುದು. ಕೆಲವು ಆ್ಯಪ್‌ಗಳು ನೀವು ಆ ಸಾಧನದಲ್ಲಿ ಇನ್ನೂ ಇನ್‌ಸ್ಟಾಲ್ ಮಾಡದ ಆ್ಯಪ್‌ಗಳಾಗಿರಬಹುದು ಮತ್ತು ಅವುಗಳನ್ನು ಇನ್‌ಸ್ಟಾಲ್ ಮಾಡಿದ ನಂತರ ನಿಮ್ಮ ಆದ್ಯತೆಗಳನ್ನು ಅನ್ವಯಿಸಲಾಗುತ್ತದೆ. ನೀವು ಅನುಮತಿ ನೀಡುತ್ತೀರೋ ಇಲ್ಲವೋ, ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ ಪ್ರತಿ ಆ್ಯಪ್‌ಗೆ ನಿಮ್ಮ ಆದ್ಯತೆಗಳನ್ನು ಬದಲಾಯಿಸಲು ನಿಮಗೆ ಸಾಧ್ಯವಾಗುತ್ತದೆ.
ಯಾವುದೇ ಸಮಯದಲ್ಲಿ ನಿಮ್ಮ ಥರ್ಡ್-ಪಾರ್ಟಿ ಆ್ಯಪ್‌ಗಳಲ್ಲಿ ಒಂದನ್ನು Apple TV ಆ್ಯಪ್‌ಗೆ ಕನೆಕ್ಟ್ ಮಾಡಲು ನೀವು ಬಯಸುವುದಿಲ್ಲ ಎಂದು ನೀವು ನಿರ್ಧರಿಸಿದರೆ, ನೀವು ಆ ಆ್ಯಪ್ ಅನ್ನು Apple TV ಆ್ಯಪ್‌ನಿಂದ ಡಿಸ್‌ಕನೆಕ್ಟ್ ಮಾಡಬಹುದು ಮತ್ತು Apple, ಆ ಥರ್ಡ್-ಪಾರ್ಟಿ ಆ್ಯಪ್‌ನಿಂದ ನಿಮ್ಮ ಪ್ಲೇ ಡೇಟವನ್ನು ಸಂಗ್ರಹಿಸುವುದನ್ನು ನಿಲ್ಲಿಸುತ್ತದೆ. iOS, iPadOS ಅಥವಾ visionOS ಸಾಧನದಲ್ಲಿನ Apple TV ಆ್ಯಪ್‌ನಲ್ಲಿ, ಖಾತೆ > ಕನೆಕ್ಟ್ ಮಾಡಲಾದ ಆ್ಯಪ್‌ಗಳು ಎಂಬಲ್ಲಿಗೆ ಹೋಗಿ, ಥರ್ಡ್-ಪಾರ್ಟಿ ಆ್ಯಪ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ಆಫ್ ಮಾಡಿ. tvOS ನಲ್ಲಿ, ಸೆಟ್ಟಿಂಗ್ಸ್ > ಆ್ಯಪ್‌ಗಳು > TV > TVಗೆ ಕನೆಕ್ಟ್ ಮಾಡಿ ಎಂಬಲ್ಲಿಗೆ ಹೋಗಿ, ಥರ್ಡ್-ಪಾರ್ಟಿ ಆ್ಯಪ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ಆಫ್ ಮಾಡಿ. Apple TV ಆ್ಯಪ್‌ನಿಂದ ಥರ್ಡ್-ಪಾರ್ಟಿ ಆ್ಯಪ್ ಅನ್ನು ತೆಗೆದುಹಾಕುವಾಗ, ತೆಗೆದುಹಾಕಿ ಮತ್ತು ಪ್ಲೇ ಇತಿಹಾಸವನ್ನು ತೆರವುಗೊಳಿಸಿ ಎಂಬ ಆಯ್ಕೆಯನ್ನು ಆರಿಸುವ ಮೂಲಕ ಆ ಆ್ಯಪ್‌ನಿಂದ ನೀವು ವೀಕ್ಷಿಸಿದ ಕಂಟೆಂಟ್ ಬಗ್ಗೆ Apple ಸಂಗ್ರಹಿಸಿದ ಎಲ್ಲಾ ಪ್ಲೇ ಡೇಟ ಮಾಹಿತಿಯನ್ನು ನೀವು ಡಿಲೀಟ್ ಮಾಡಬಹುದು. ಯಾವುದೇ ಸಮಯದಲ್ಲಿ, ಮೇಲೆ ವಿವರಿಸಿದಂತೆ ನಿಮ್ಮ ಪ್ಲೇ ಇತಿಹಾಸವನ್ನು ತೆರವುಗೊಳಿಸುವ ಮೂಲಕ, Apple TV ಆ್ಯಪ್‌ನಲ್ಲಿ ನೀವು ನೋಡುವ ಎಲ್ಲಾ ಥರ್ಡ್-ಪಾರ್ಟಿ ಕಂಟೆಂಟ್ ಬಗ್ಗೆ Apple ಸಂಗ್ರಹಿಸಿದ ನಿಮ್ಮ ಎಲ್ಲಾ ಪ್ಲೇ ಡೇಟ ಮಾಹಿತಿಯನ್ನು ತೆರವುಗೊಳಿಸುವುದನ್ನು ಸಹ ನೀವು ಆಯ್ಕೆ ಮಾಡಬಹುದು. ಈ ವಿವರಿಸಿದ ಯಾವುದೇ ಸಂದರ್ಭಗಳಲ್ಲಿ ನಿಮ್ಮ ಪ್ಲೇ ಇತಿಹಾಸವನ್ನು ತೆರವುಗೊಳಿಸುವುದರಿಂದ Apple TV ಆ್ಯಪ್‌ಗಾಗಿ Apple ಹೊಂದಿರುವ ಮತ್ತು ಬಳಸುವ ನಿಮ್ಮ ಥರ್ಡ್-ಪಾರ್ಟಿ ಆ್ಯಪ್ ಪ್ಲೇ ಡೇಟವನ್ನು ಮಾತ್ರ ತೆರವುಗೊಳಿಸುತ್ತದೆ. ಥರ್ಡ್-ಪಾರ್ಟಿ ಆ್ಯಪ್ ಒದಗಿಸುವವರು ಪ್ರತ್ಯೇಕವಾಗಿ ಹೊಂದಿರುವ ಯಾವುದೇ ಪ್ಲೇ ಡೇಟದ ಮೇಲೆ ಇದು ಪರಿಣಾಮ ಬೀರುವುದಿಲ್ಲ (ಉದಾಹರಣೆಗೆ, ಅವರ ಸ್ವಂತ ಆ್ಯಪ್ ಒಳಗೆ ಅಥವಾ ಅವರ ಸರ್ವರ್‌ಗಳಲ್ಲಿ).
ನಿಮ್ಮ ಪ್ಲೇ ಡೇಟ ಮತ್ತು ಸಂಬಂಧಿತ ಮಾಹಿತಿಯನ್ನು ಅವು ಹೇಗೆ ಬಳಸುತ್ತವೆ ಮತ್ತು ಹಂಚಿಕೊಳ್ಳುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮ್ಮ ಭಾಗವಹಿಸುವ ಥರ್ಡ್ ಪಾರ್ಟಿ ಆ್ಯಪ್‌ಗಳ ನಿಯಮಗಳು, ಗೌಪ್ಯತೆ ನೀತಿಗಳು ಮತ್ತು ಅಭ್ಯಾಸಗಳನ್ನು ಸಹ ನೀವು ಪರಿಶೀಲಿಸಬೇಕು.
ಗುಂಪು ಶಿಫಾರಸುಗಳು
ನೀವು Apple TV ಸಾಧನದಲ್ಲಿ ಗುಂಪು ಶಿಫಾರಸುಗಳನ್ನು ಸಕ್ರಿಯಗೊಳಿಸಿದರೆ, ನೀವು ಏನನ್ನು ವೀಕ್ಷಿಸುತ್ತೀರಿ ಎಂಬುದರ ಬಗ್ಗೆ ಮಾಹಿತಿಯನ್ನು, ಅದೇ Apple TVಯಲ್ಲಿ ಆಯ್ಕೆ ಮಾಡಿದ ಬಳಕೆದಾರರ ಯಾವುದೇ ಸಂಯೋಜನೆಯೊಂದಿಗೆ ಗುಂಪು ಶಿಫಾರಸುಗಳನ್ನು ಮಾಡಲು ಬಳಸಲಾಗುತ್ತದೆ. ಮಕ್ಕಳ ಖಾತೆಯು ಗುಂಪಿನಲ್ಲಿದ್ದರೆ, ಮಕ್ಕಳಿಗಾಗಿ ಶಿಫಾರಸುಗಳನ್ನು ಸೇರಿಸಲಾಗುತ್ತದೆ, ಆದರೆ ಅವರ ವೀಕ್ಷಣಾ ಇತಿಹಾಸವನ್ನು ಬಳಸಲಾಗುವುದಿಲ್ಲ. ಸೆಟ್ಟಿಂಗ್ಸ್ > ಬಳಕೆದಾರರು ಮತ್ತು ಖಾತೆಗಳು ಎಂಬಲ್ಲಿ, ನಿಮ್ಮ ಪ್ರೊಫೈಲ್ ಅನ್ನು ಆಯ್ಕೆ ಮಾಡಿ, ನಂತರ ನಿಮ್ಮೆಲ್ಲರಿಗಾಗಿ ಎಂಬುದನ್ನು ಆಯ್ಕೆ ಮಾಡುವ ಮೂಲಕ ನೀವು ಯಾವುದೇ ಸಮಯದಲ್ಲಿ ನಿಮ್ಮ ಖಾತೆಗೆ ಗುಂಪು ಶಿಫಾರಸುಗಳನ್ನು ಆಫ್ ಮಾಡಬಹುದು.
tvOS ಮತ್ತು ಥರ್ಡ್ ಪಾರ್ಟಿ ಟಿವಿಗಳಲ್ಲಿ Apple TV ಆ್ಯಪ್ ಪ್ರೊಫೈಲ್‌ಗಳು
tvOS ಮತ್ತು ಕೆಲವು ಥರ್ಡ್ ಪಾರ್ಟಿ ಟಿವಿಗಳಲ್ಲಿರುವ Apple TV ಆ್ಯಪ್‌ನಲ್ಲಿನ ನಿಮ್ಮ Apple ಖಾತೆಗೆ ಸಂಬಂಧಿಸಿದಂತೆ ಮಕ್ಕಳ ಪ್ರೊಫೈಲ್‌ಗಳು ಸೇರಿದಂತೆ ನೀವು ಪ್ರೊಫೈಲ್‌ಗಳನ್ನು ರಚಿಸಬಹುದು. ಈ ಪ್ರೊಫೈಲ್‌ಗಳನ್ನು ಆ ಪ್ಲ್ಯಾಟ್‌ಫಾರ್ಮ್‌ಗಳಲ್ಲಿರುವ Apple TV ಆ್ಯಪ್‌ನಲ್ಲಿ ಬಳಸಬಹುದು ಮತ್ತು Apple TV ಆ್ಯಪ್‌ನಲ್ಲಿ ವೈಯಕ್ತೀಕರಿಸಿದ ಅನುಭವಗಳನ್ನು ಅನುಮತಿಸಬಹುದು. ಪ್ರೊಫೈಲ್‌ಗಳಿಗೆ ಸಂಬಂಧಿಸಿರುವ Apple ಖಾತೆಯು ನಿರ್ವಹಿಸುವ ಪ್ರೊಫೈಲ್ ಆಗಿದೆ. ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿರುವ ಪ್ರೊಫೈಲ್ ಅನ್ನು ರಚಿಸಲು, ನಿಮಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ನೀವು ಪ್ರೊಫೈಲ್‌ಗಾಗಿ ಹೆಸರನ್ನು ಮತ್ತು ಚಿತ್ರವನ್ನು ಆರಿಸುತ್ತೀರಿ ಮತ್ತು ಆ ಪ್ರೊಫೈಲ್ ಮಗುವಿಗಾಗಿ ಆಗಿದೆಯೇ ಎಂಬುದನ್ನು ನಿರ್ದಿಷ್ಟಪಡಿಸುತ್ತೀರಿ. ಪ್ರೊಫೈಲ್ ಸೆಟಪ್ ಮಾಡುವ ಸಮಯದಲ್ಲಿ ಮತ್ತು ಸೆಟ್ಟಿಂಗ್ಸ್‌ನಲ್ಲಿ ಯಾವುದೇ ಸಮಯದಲ್ಲಿ, ನಿಮ್ಮ Apple ಖಾತೆಯನ್ನು ಬಳಸಿಕೊಂಡು ಖರೀದಿಸುವ ಮತ್ತು ಬಾಡಿಗೆಗೆ ಪಡೆಯುವ ಪ್ರೊಫೈಲ್‌ನ ಸಾಮರ್ಥ್ಯವನ್ನು ನೀವು ನಿಯಂತ್ರಿಸಬಹುದು. ನೀವು Apple TV ಆ್ಯಪ್‌ಗಾಗಿ ಕಂಟೆಂಟ್ ನಿರ್ಬಂಧಗಳನ್ನು ಸಹ ಸೆಟಪ್ ಮಾಡಬಹುದು. tvOSನಲ್ಲಿ, ಸೆಟ್ಟಿಂಗ್ಸ್ > ಆ್ಯಪ್‌ಗಳು > TV > ಕಂಟೆಂಟ್ ನಿರ್ಬಂಧಗಳು ಎಂಬಲ್ಲಿಗೆ ಹೋಗಿ, ಪ್ರೊಫೈಲ್ ಅನ್ನು ಆಯ್ಕೆಮಾಡಿ ಮತ್ತು ಹಂತಗಳನ್ನು ಅನುಸರಿಸಿ.
ನೀವು ಆರಿಸುವ ಕಂಟೆಂಟ್ ರೇಟಿಂಗ್‌ಗಳಿಗೆ ಒಳಪಟ್ಟಿದ್ದು, ನೀವು Appleನಿಂದ ಖರೀದಿಸಿದ ಅಥವಾ ಬಾಡಿಗೆಗೆ ಪಡೆದ ಕಂಟೆಂಟ್ ಮತ್ತು ನಿಮ್ಮ Apple TV ಸಬ್‌ಸ್ಕ್ರಿಪ್ಶನ್ ಹಾಗೂ Apple TV ಚಾನಲ್‌ಗಳನ್ನು ಪ್ರೊಫೈಲ್ ಆ್ಯಕ್ಸೆಸ್ ಮಾಡಬಹುದು ಮತ್ತು ವೀಕ್ಷಿಸಬಹುದು. ಪ್ರೊಫೈಲ್ ನಿಮ್ಮ ಕನೆಕ್ಟ್ ಮಾಡಲಾದ ಥರ್ಡ್ ಪಾರ್ಟಿ ವೀಡಿಯೊ ಆ್ಯಪ್‌ಗಳನ್ನು ಸಹ ಆ್ಯಕ್ಸೆಸ್ ಮಾಡಬಹುದು, ಆದರೆ ಕಂಟೆಂಟ್ ನಿರ್ಬಂಧಗಳು Apple TV ಆ್ಯಪ್‌ಗೆ ಮಾತ್ರ ಅನ್ವಯಿಸುತ್ತವೆ.
ಪ್ರೊಫೈಲ್‌ಗಳ ಕುರಿತು Apple ಸಂಗ್ರಹಿಸುವ ಮತ್ತು ಶೇಖರಿಸುವ ಮಾಹಿತಿಯು ನಿರ್ವಹಿಸುವ ಪ್ರೊಫೈಲ್‌ನ Apple ಖಾತೆಯೊಂದಿಗೆ ಸಂಯೋಜಿತವಾಗಿರುತ್ತದೆ. ಇದು ಪ್ರೊಫೈಲ್ ಏನನ್ನು ನೋಡುತ್ತದೆ, ಅದನ್ನು ಯಾವಾಗ ನೋಡಿದೆ, ಯಾವ ಸಾಧನದಲ್ಲಿ ನೋಡಿದೆ ಮತ್ತು ಕಂಟೆಂಟ್‌ನಲ್ಲಿ ಪ್ರೊಫೈಲ್‌ನ ಪ್ರಗತಿಯ ಕುರಿತು ವಿವರವಾದ ಪ್ಲೇಬ್ಯಾಕ್ ಚಟುವಟಿಕೆಯಂತಹವುಗಳನ್ನು ಒಳಗೊಂಡಿರುತ್ತದೆ.
ಮಕ್ಕಳ ಪ್ರೊಫೈಲ್‌ಗಳಿಗೆ ಸಂಬಂಧಿಸಿದಂತೆ, ಆ ಪ್ರೊಫೈಲ್‌ನ ಬಳಕೆದಾರರಿಗೆ Apple TV ಆ್ಯಪ್‌ನಲ್ಲಿ ವಯಸ್ಸಿಗೆ ಸೂಕ್ತವಾದ ಅನುಭವವನ್ನು ಒದಗಿಸಲು ನಾವು ಮಕ್ಕಳ ಪ್ರೊಫೈಲ್‌ಗೆ ಸಂಬಂಧಿಸಿದ ನಿರಂತರ ಐಡೆಂಟಿಫೈಯರ್ ಅನ್ನು ಸಂಗ್ರಹಿಸುತ್ತೇವೆ. ನಾವು ಐಡೆಂಟಿಫೈಯರ್ ಮತ್ತು ಮಗುವಿನ ಪ್ರೊಫೈಲ್‌ನ ಚಟುವಟಿಕೆಯ ಡೇಟವನ್ನು (ಹುಡುಕಾಟ ಮತ್ತು ವೀಕ್ಷಣೆಯ ಇತಿಹಾಸದ ರೀತಿಯ) ಆ ಪ್ರೊಫೈಲ್‌ನ ಬಳಕೆದಾರರಿಗೆ Apple TV ಆ್ಯಪ್ ಅನ್ನು ಒದಗಿಸಲು, ಪ್ರೊಫೈಲ್‌ಗಳ ಫೀಚರ್ ಮತ್ತು Apple TV ಆ್ಯಪ್ ಅನ್ನು ಸುಧಾರಿಸಲು ಮತ್ತು ವಂಚನೆ ತಡೆಗಟ್ಟಲು ಹಾಗೂ ಭದ್ರತಾ ಉದ್ದೇಶಗಳಿಗಾಗಿ ಬಳಸುತ್ತೇವೆ. ಸಂಬಂಧವಿಲ್ಲದ ಉದ್ದೇಶಗಳಿಗಾಗಿ ಐಡೆಂಟಿಫೈಯರ್ ಮತ್ತು ಸಂಬಂಧಿತ ಮಾಹಿತಿಯನ್ನು ಬಳಸಲಾಗುವುದಿಲ್ಲ ಅಥವಾ ಬಹಿರಂಗಪಡಿಸಲಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು Apple ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
ಸೆಟ್ಟಿಂಗ್ಸ್ ಆ್ಯಪ್‌ನಲ್ಲಿನ ನಿರ್ವಹಿಸುವ ಪ್ರೊಫೈಲ್‌ನ ಅನುಮೋದನೆಯೊಂದಿಗೆ ಪ್ರೊಫೈಲ್‌ವೊಂದನ್ನು Apple ಖಾತೆಗೆ ಅಪ್‌ಗ್ರೇಡ್ ಮಾಡಬಹುದು. tvOSನಲ್ಲಿ, ಸೆಟ್ಟಿಂಗ್ಸ್ > ಪ್ರೊಫೈಲ್‌ಗಳು ಮತ್ತು ಖಾತೆಗಳು ಎಂಬಲ್ಲಿಗೆ ಹೋಗಿ, ಪ್ರೊಫೈಲ್ ಅನ್ನು ಆಯ್ಕೆಮಾಡಿ, Apple ಖಾತೆಗೆ ಅಪ್‌ಗ್ರೇಡ್ ಮಾಡಿ ಎಂಬುದನ್ನು ಆಯ್ಕೆಮಾಡಿ ಮತ್ತು ಹಂತಗಳನ್ನು ಅನುಸರಿಸಿ. ಪ್ರೊಫೈಲ್ ಅನ್ನು ಅಪ್‌ಗ್ರೇಡ್ ಮಾಡಿದಾಗ, ಆ ಪ್ರೊಫೈಲ್ ವೀಕ್ಷಿಸಿರುವುದರ ಕುರಿತಾದ ಮಾಹಿತಿ ಮತ್ತು ವೀಕ್ಷಣೆ ಇತಿಹಾಸಕ್ಕೆ ಸಂಬಂಧಿಸಿದ ವಿವರಗಳನ್ನು ಹೊಸ Apple ಖಾತೆಗೆ ವರ್ಗಾಯಿಸಲಾಗುತ್ತದೆ ಮತ್ತು ಇನ್ನು ಮುಂದೆ ನಿರ್ವಹಿಸುವ ಪ್ರೊಫೈಲ್‌ನೊಂದಿಗೆ ಸಂಯೋಜಿತವಾಗಿರುವುದಿಲ್ಲ. ಆದರೂ, ಪ್ರೊಫೈಲ್ ಅನ್ನು ಅಪ್‌ಗ್ರೇಡ್ ಮಾಡಿದಾಗ, ಖರೀದಿಗಳು, ಸಬ್‌ಸ್ಕ್ರಿಪ್ಶನ್‌ಗಳು ಮತ್ತು ಬಾಡಿಗೆಗಳು ನಿರ್ವಹಿಸುವ ಪ್ರೊಫೈಲ್‌ನೊಂದಿಗೆ ಸಂಯೋಜಿತವಾಗಿರುತ್ತವೆ ಮತ್ತು ಪ್ರೊಫೈಲ್‌ನ ಹೊಸ Apple ಖಾತೆಗೆ ವರ್ಗಾಯಿಸಲಾಗುವುದಿಲ್ಲ ಅಥವಾ ಅದಕ್ಕೆ ಸಂಯೋಜಿಸಲಾಗುವುದಿಲ್ಲ. ಸೆಟ್ಟಿಂಗ್ಸ್ ಆ್ಯಪ್‌ನಲ್ಲಿನ ನಿರ್ವಹಿಸುವ ಪ್ರೊಫೈಲ್‌ನ ಮೂಲಕ ಪ್ರೊಫೈಲ್‌ವೊಂದನ್ನು ಯಾವುದೇ ಸಮಯದಲ್ಲಿ ಸಹ ಡಿಲೀಟ್ ಮಾಡಬಹುದು. tvOSನಲ್ಲಿ, ಸೆಟ್ಟಿಂಗ್ಸ್ > ಪ್ರೊಫೈಲ್‌ಗಳು ಮತ್ತು ಖಾತೆಗಳು ಎಂಬಲ್ಲಿಗೆ ಹೋಗಿ, ಪ್ರೊಫೈಲ್ ಅನ್ನು ಆಯ್ಕೆಮಾಡಿ ಮತ್ತು ಪ್ರೊಫೈಲ್ ಅನ್ನು ಡಿಲೀಟ್ ಮಾಡಿ ಎಂಬುದನ್ನು ಆಯ್ಕೆಮಾಡಿ. ಡಿಲೀಟ್ ಮಾಡಿದ ನಂತರ, ಪ್ರೊಫೈಲ್ ಮತ್ತು ಅದರ ವೀಕ್ಷಣೆಯ ಇತಿಹಾಸವು ಅದನ್ನು ನಿರ್ವಹಿಸುವ ಪ್ರೊಫೈಲ್‌ನ Apple ಖಾತೆಗೆ ಇನ್ನು ಮುಂದೆ ಲಭ್ಯವಿರುವುದಿಲ್ಲ.
ಮೋಸ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯುವುದು
Apple TV ಆ್ಯಪ್‌ನಲ್ಲಿ ನಾವು ವೈಯಕ್ತಿಕ ಡೇಟವನ್ನು ಮೋಸ ಹಾಗೂ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯಲು ಸಹ ಸಂಗ್ರಹಿಸುತ್ತೇವೆ. ಈ ಮಾಹಿತಿಯು ಸಾಧನದ ಪ್ರಕಾರ ಹಾಗೂ ಸಾಫ್ಟ್‌ವೇರ್ ಆವೃತ್ತಿಯಂತಹ ಸಾಧನ ಮಾಹಿತಿ, ಸ್ಥಳ ಮಾಹಿತಿ (ಲಭ್ಯವಿದ್ದಲ್ಲಿ ನಿಮ್ಮ ಇಂಟರ್ನೆಟ್ ಸಂಪರ್ಕದ IP ವಿಳಾಸವನ್ನು ಒಂದು ಭೌಗೋಳಿಕ ಪ್ರದೇಶಕ್ಕೆ ಹೋಲಿಸುವ ಮೂಲಕ ಅಂದಾಜಿಸಿರುವುದು), ಡೌನ್‌ಲೋಡ್ ಹಾಗೂ ಖರೀದಿಯ ಇತಿಹಾಸ ಮತ್ತು Apple TV ಆ್ಯಪ್ ಜೊತೆಗಿನ ಇತರ ಸಂವಹನಗಳನ್ನು ಒಳಗೊಂಡಿರುತ್ತದೆ. ನಿಮ್ಮ Fitness+ ಸಬ್‌ಸ್ಕ್ರಿಪ್ಶನ್ ಸ್ವಯಂ-ನವೀಕರಣಗೊಂಡಾಗ, Apple ತನ್ನ ಜೊತೆಗಿನ ನಿಮ್ಮ ಹಿಂದಿನ ವ್ಯಾಪಾರದ ಸಂಬಂಧವನ್ನು, ವಿನಂತಿಯನ್ನು ಪ್ರಕ್ರಿಯೆಗೊಳಿಸುವ ಸಲುವಾಗಿ ಹಾಗೂ ಪಾವತಿ ಪಾಲುದಾರರು ಪಾವತಿಯನ್ನು ಅಧಿಕೃತಗೊಳಿಸುವ ಮೊದಲೇ ನಿಮ್ಮ ಸಬ್‌ಸ್ಕ್ರಿಪ್ಶನ್‌ಗೆ ಈಗಿರುವ ಆ್ಯಕ್ಸೆಸ್ ಮುಂದುವರಿಸಬೇಕೆ ಎಂದು ನಿರ್ಧರಿಸಲು ಸಹ ಬಳಸಬಹುದು.
ನೀವು ಮಾಡುವ ಮತ್ತು ಸ್ವೀಕರಿಸುವ ಫೋನ್ ಕರೆಗಳು ಅಥವಾ ಈಮೇಲ್‌ಗಳ ಅಂದಾಜು ಸಂಖ್ಯೆ ಸೇರಿದಂತೆ ನಿಮ್ಮ ಸಾಧನವನ್ನು ನೀವು ಹೇಗೆ ಬಳಸುತ್ತೀರಿ ಎಂಬುದರ ಕುರಿತ ಮಾಹಿತಿಯನ್ನು ಬಳಸಿಕೊಂಡು, ನೀವು ಖರೀದಿಗೆ ಪ್ರಯತ್ನಿಸಿದಾಗ ನಿಮ್ಮ ಸಾಧನದಲ್ಲಿ ‘ಸಾಧನ ವಿಶ್ವಾಸ ಸ್ಕೋರ್’ ಅನ್ನು ಸಹ ನಾವು ಲೆಕ್ಕಹಾಕಬಹುದು. ನಿಮ್ಮ ಸಾಧನದಲ್ಲಿನ ಮೂಲ ಮೌಲ್ಯಗಳನ್ನು ತಿಳಿದುಕೊಳ್ಳಲು Appleಗೆ ಸಾಧ್ಯವಾಗದ ರೀತಿಯಲ್ಲಿ ಸಲ್ಲಿಕೆಯನ್ನು ವಿನ್ಯಾಸಗೊಳಿಸಲಾಗಿದೆ. ಸ್ಕೋರ್ ಅನ್ನು ನಿಗದಿತ ಸಮಯದವರೆಗೆ ನಮ್ಮ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ.
ವೈಯಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುವುದಕ್ಕಾಗಿ ಅನ್ವಯವಾಗುವ ಕಾನೂನುಬದ್ಧ ಆಧಾರ
ಸೇವೆಯನ್ನು ಒದಗಿಸಲು ಮತ್ತು ನಮ್ಮ ಕಾನೂನು ಬಾಧ್ಯತೆಗಳನ್ನು ಅನುಸರಿಸಲು ಅಗತ್ಯವಿರುವಂತೆ Apple ಜೊತೆಗಿನ ನಿಮ್ಮ ಒಪ್ಪಂದದ ಕಾರ್ಯಕ್ಷಮತೆಗಾಗಿ ಸಾಮಾನ್ಯವಾಗಿ Apple TV ಆ್ಯಪ್‌ನಲ್ಲಿ ನಿಮ್ಮ ವೈಯಕ್ತಿಕ ಡೇಟವನ್ನು ನಾವು ಪ್ರಕ್ರಿಯೆಗೊಳಿಸುತ್ತೇವೆ. ಸಮ್ಮತಿಯು ಸೂಕ್ತವಾದ ಕಾನೂನುಬದ್ಧ ಆಧಾರವಾಗಿದ್ದಲ್ಲಿ, ನಾವು ಅದನ್ನು ಅನ್ವಯವಾಗುವ ಸ್ಥಳೀಯ ಕಾನೂನುಗಳ ಪ್ರಕಾರ ಪಡೆಯುತ್ತೇವೆ.
ಅನ್ವಯವಾಗುವ ಸ್ಥಳೀಯ ಕಾನೂನಿಗೆ ಒಳಪಟ್ಟು, ನಮ್ಮ ಅಥವಾ ಥರ್ಡ್ ಪಾರ್ಟಿಯ ಕಾನೂನುಬದ್ಧ ಹಿತಾಸಕ್ತಿಗಳ ಉದ್ದೇಶಗಳಿಗಾಗಿ ಅಗತ್ಯವಿರುವಲ್ಲಿ ನಾವು ವೈಯಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುತ್ತೇವೆ:
- ಥರ್ಡ್ ಪಾರ್ಟಿ ಸೇವೆಗಳಂದಲೂ ಸೇರಿದಂತೆ, ನಿಮಗೆ ಲಭ್ಯವಿರುವ ಮತ್ತು ಸೂಕ್ತವಾದ ಕಂಟೆಂಟ್ ಅನ್ನು ತೋರಿಸಿ ಮತ್ತು ಪ್ಲೇಬ್ಯಾಕ್ ಮಾಡಲು ಅನುಮತಿಸಿ
- ಆಫರ್ ಗಳಿಗೆ ಅವಶ್ಯಕತೆಯಿರುವ ಅರ್ಹತೆಗಳನ್ನು ಪರಿಶೀಲಿಸುವುದು, ನಿಮಗೆ ಮತ್ತು ಇತರರಿಗೆ ಸೇವೆಯನ್ನು ಸುಧಾರಿಸಲು ಮತ್ತು ಉತ್ತಮಗೊಳಿಸಲು ಸಹಾಯ ಮಾಡುವುದು ಮತ್ತು Apple TV ಆ್ಯಪ್‌ಗಳು ಮತ್ತು ಇತರ Apple ಉತ್ಪನ್ನಗಳು, ಸೇವೆಗಳು ಮತ್ತು ನಿಮಗೆ ಆಸಕ್ತಿಯಿರಬಹುದಾದ ಆಫರ್‌ಗಳ ಬಗೆಗಿನ ಸಂವಹನಗಳನ್ನು ನಿಮಗೆ ಕಳುಹಿಸುವುದು
- ಮೋಸ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯುವುದು
ಬಳಸಲಾದ ಡೇಟ ಇದನ್ನು ಒಳಗೊಂಡಿರುತ್ತದೆ:
- ನೀವು ಹುಡುಕುವ ಐಟಮ್‌ಗಳು, ನೋಟಿಫಿಕೇಷನ್‌ಗಳಿಗೆ ನಿಮ್ಮ ಪ್ರತಿಕ್ರಿಯೆಗಳು, ನೀವು ಬ್ರೌಸ್ ಮಾಡುವ ಅಥವಾ ವೀಕ್ಷಿಸುವ ಕಂಟೆಂಟ್ ಪುಟಗಳು, ನೀವು ಏನನ್ನು ವೀಕ್ಷಿಸುತ್ತೀರಿ, ಖರೀದಿಸುತ್ತೀರಿ, ಸಬ್‌ಸ್ಕ್ರೈಬ್ ಮಾಡುತ್ತೀರಿ ಮತ್ತು ಡೌನ್‌ಲೋಡ್ ಮಾಡುತ್ತೀರಿ ಮತ್ತು ಆ್ಯಪ್‌ನೊಳಗಿನ ದೋಷಗಳು ಅಥವಾ ಕ್ರ್ಯಾಶ್‌ಗಳ ಬಗ್ಗೆ ಮಾಹಿತಿ ಸೇರಿದಂತೆ Apple TV ಆ್ಯಪ್‌ನ ನಿಮ್ಮ ಬಳಕೆಯಂತಹ ನೀವು ಬಳಸುವ ಫೀಚರ್‌ಗಳು (ಉದಾಹರಣೆಗೆ, ವೀಕ್ಷಿಸುವುದನ್ನು ಮುಂದುವರಿಸಿ ಅಥವಾ ಲೈಬ್ರರಿ)
- ನಿಮ್ಮ ಸಾಧನ ಹಾಗೂ ಖಾತೆಯ ಬಗೆಗಿನ ವಿವರಗಳು
- ಸಾಧನದ ವಿಶ್ವಾಸದ ಸ್ಕೋರ್
- ನಿಮ್ಮ ಸ್ಥಳ
ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.
2026-05-11