Siri, ಡಿಕ್ಟೇಷನ್ ಮತ್ತು ಗೌಪ್ಯತೆ
ನಿಮ್ಮ ಮಾಹಿತಿಯನ್ನು ಕಾಪಾಡಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವುದಕ್ಕೆ ಅನುವುಮಾಡಿಕೊಡಲು Siriಯನ್ನು ವಿನ್ಯಾಸಗೊಳಿಸಲಾಗಿದೆ.
Siri, ಡಿಕ್ಟೇಷನ್ ಮತ್ತು ಗೌಪ್ಯತೆಯು Siri ಮತ್ತು ಡಿಕ್ಟೇಷನ್‌ಗಾಗಿ ಡಿಫಾಲ್ಟ್ ನಡವಳಿಕೆಯನ್ನು ವಿವರಿಸುತ್ತದೆ. ನೀವು Siri ಮತ್ತು ಡಿಕ್ಟೇಷನ್ ಅನ್ನು ಸುಧಾರಿಸಲು ಆಯ್ಕೆಮಾಡಿದರೆ, ಹೆಚ್ಚುವರಿ ಡೇಟವನ್ನು ಸಂಗ್ರಹಿಸಲಾಗುತ್ತದೆ, ಶೇಖರಿಸಲಾಗುತ್ತದೆ ಮತ್ತು ಪರಿಶೀಲಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ, www.apple.com/legal/privacy/data/en/improve-siri-dictation ಎಂಬುದಕ್ಕೆ ಭೇಟಿ ನೀಡಿ.
Siri ಮತ್ತು ಡಿಕ್ಟೇಷನ್
ನೀವು Siriಯನ್ನು ಬಳಸುವಾಗ, ನೀವು ಹೇಳುವ ವಿಷಯಗಳನ್ನು ನಿಮ್ಮ ಸಾಧನದಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆಯೇ ಮತ್ತು Apple ಸರ್ವರ್‌ಗಳಿಗೆ ಕಳುಹಿಸಲಾಗುವುದಿಲ್ಲ ಎಂಬುದನ್ನು ನಿಮ್ಮ ಸಾಧನವು Siri ಸೆಟ್ಟಿಂಗ್ಸ್‌ನಲ್ಲಿ ಸೂಚಿಸುತ್ತದೆ. ಇಲ್ಲದಿದ್ದರೆ, ನಿಮ್ಮ ಆಡಿಯೊವನ್ನು Apple ಸರ್ವರ್‌ಗಳಿಗೆ ಕಳುಹಿಸಲಾಗುತ್ತದೆ ಮತ್ತು ಪ್ರಕ್ರಿಯೆಗೊಳಿಸಲಾಗುತ್ತದೆ. ನೀವು Siri ಮತ್ತು ಡಿಕ್ಟೇಷನ್ ಅನ್ನು ಸುಧಾರಿಸಲು ಆಯ್ಕೆ ಮಾಡದ ಹೊರತು, ನಿಮ್ಮ ಆಡಿಯೊ ಡೇಟವನ್ನು Apple ಸಂಗ್ರಹಿಸುವುದಿಲ್ಲ.
ನೀವು ಡಿಕ್ಟೇಷನ್ ಅನ್ನು ಬಳಸುವಾಗ, ನಿಮ್ಮ ಸಾಧನದಲ್ಲಿ ನಿಮ್ಮ ಆಡಿಯೊ ಮತ್ತು ಟ್ರಾನ್ಸ್‌ಕ್ರಿಪ್ಟ್‌ಗಳನ್ನು ಪ್ರಕ್ರಿಯೆಗೊಳಿಸಿದರೆ ಮತ್ತು Apple ಸರ್ವರ್‌ಗಳಿಗೆ ಕಳುಹಿಸದಿದ್ದರೆ ನಿಮ್ಮ ಸಾಧನವು ಕೀಬೋರ್ಡ್ ಸೆಟ್ಟಿಂಗ್ಸ್‌ನಲ್ಲಿ ಸೂಚಿಸುತ್ತದೆ. ಇಲ್ಲದಿದ್ದರೆ, ನೀವು ಡಿಕ್ಟೇಟ್ ಮಾಡುವ ವಿಷಯಗಳನ್ನು ಸರ್ವರ್‌ಗೆ ಕಳುಹಿಸಲಾಗುತ್ತದೆ ಮತ್ತು ಅಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ, ಆದರೆ ನೀವು Siri ಮತ್ತು ಡಿಕ್ಟೇಷನ್ ಅನ್ನು ಸುಧಾರಿಸಲು ಆಯ್ಕೆ ಮಾಡದ ಹೊರತು ಅವುಗಳನ್ನು ಸಂಗ್ರಹಿಸಲಾಗುವುದಿಲ್ಲ.
ನಿಮ್ಮ ವಿನಂತಿಯ ವರ್ಗ ಮತ್ತು ಅದು ಯಶಸ್ವಿಯಾಗಿ ಪೂರ್ಣಗೊಂಡಿದೆಯೇ ಇಲ್ಲವೇ ಎಂಬುದನ್ನು, ಹಾಗೆಯೇ ಸಾಧನದ ಸ್ಪೆಸಿಫಿಕೇಶನ್‌ಗಳು, ಸಾಧನದ ಕಾನ್ಫಿಗರೇಶನ್, ಕಾರ್ಯಕ್ಷಮತೆಯ ಅಂಕಿಅಂಶಗಳನ್ನು ಹಾಗೂ ನೀವು Siriಗಾಗಿ ಸ್ಥಳ ಸೇವೆಗಳನ್ನು ಆನ್ ಮಾಡಿದ್ದರೆ, ವಿನಂತಿಯನ್ನು ಮಾಡಿದ ಸಮಯದಲ್ಲಿ ನಿಮ್ಮ ಸಾಧನದ ಅಂದಾಜು ಸ್ಥಳದಂತಹ ಸಂಬಂಧಿತ ವಿನಂತಿಯ ಡೇಟವನ್ನು ಸಹ Apple ಸಂಗ್ರಹಿಸುತ್ತದೆ.
ಟ್ರಾನ್ಸ್‌ಕ್ರಿಪ್ಟ್‌ಗಳು ಮತ್ತು ಯಾವುದೇ ಸಂಬಂಧಿತ ವಿನಂತಿಯ ಡೇಟವನ್ನು ಒಳಗೊಂಡಿರುವ ನಿಮ್ಮ ವಿನಂತಿಯ ಇತಿಹಾಸವು ರ್‍ಯಾಂಡಮ್, ಸಾಧನದಲ್ಲಿ ಜನರೇಟ್ ಆದ ಐಡೆಂಟಿಫೈಯರ್‌ನೊಂದಿಗೆ ಸಂಯೋಜಿತವಾಗಿರುತ್ತದೆ ಹಾಗೂ ಅದು ಪ್ರತಿ ಗಂಟೆಗೆ ಹಲವು ಬಾರಿ ರೊಟೇಟ್ ಆಗುತ್ತದೆ ಮತ್ತು ನಿಮ್ಮ Apple ಖಾತೆ ಅಥವಾ ಈಮೇಲ್ ವಿಳಾಸದೊಂದಿಗೆ ಸಂಯೋಜಿತವಾಗಿರುವುದಿಲ್ಲ. Apple ಉತ್ಪನ್ನಗಳು ಮತ್ತು ಸೇವೆಗಳಲ್ಲಿ Siri, ಡಿಕ್ಟೇಷನ್, ಹುಡುಕಾಟ ಮತ್ತು ಸೀಮಿತ ಇತರ ಭಾಷಾ ಸಂಸ್ಕರಣಾ ಕಾರ್ಯಕಾರಿತ್ವಗಳನ್ನು ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು Apple ಎರಡು ವರ್ಷಗಳವೆರಗೆ ಈ ಡೇಟವನ್ನು ಉಳಿಸಿಕೊಳ್ಳಬಹುದು ಮತ್ತು ಬಳಸಬಹುದು. ಉದಾಹರಣೆಗೆ Siri, ಹುಡುಕಾಟ, ವಾಯ್ಸ್ ಕಂಟ್ರೋಲ್, ಅನುವಾದ ಮತ್ತು ಸ್ವಯಂಚಾಲಿತ ಮಾತಿನ ಗುರುತಿಸುವಿಕೆ ಮಾದರಿಗಳನ್ನು ಉತ್ತಮಗೊಳಿಸಲು ಟ್ರಾನ್ಸ್‌ಕ್ರಿಪ್ಟ್‌ಗಳನ್ನು ಬಳಸಬಹುದು. Siri ಜೊತೆಗಿನ ನಿಮ್ಮ ಸಂವಹನಗಳಿಗೆ ಸಂಬಂಧಿಸಿದ ಟ್ರಾನ್ಸ್‌ಕ್ರಿಪ್ಟ್‌ಗಳ ಒಂದು ಭಾಗವನ್ನು Apple ಪರಿಶೀಲಿಸಬಹುದು ಹಾಗೂ ಈ ಉತ್ಪನ್ನಗಳು ಮತ್ತು ಸೇವೆಗಳನ್ನು ನಿರಂತರವಾಗಿ ಸುಧಾರಿಸುವ ಸಲುವಾಗಿ ನಿಮ್ಮ ಈ ಸಣ್ಣ ಪ್ರಮಾಣದ ಪರಿಶೀಲಿಸಿದ ಸಂವಹನಗಳನ್ನು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಉಳಿಸಿಕೊಳ್ಳಬಹುದು.
ನಿಮ್ಮ Siri ಮತ್ತು ಡಿಕ್ಟೇಷನ್ ಸಂವಹನಗಳ ಇತಿಹಾಸವನ್ನು ನಿಮ್ಮ ಸಾಧನದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ನಿಮ್ಮ Siri ಅನುಭವವನ್ನು ವೈಯಕ್ತೀಕರಿಸಲು ಇದನ್ನು ಬಳಸಬಹುದು.
ನೀವು Siri ಮತ್ತು ಡಿಕ್ಟೇಷನ್ ಅನ್ನು ಬಳಸಿದಾಗ, ನಿಮ್ಮ ಸಾಧನವು Appleಗೆ ಇತರೆ ಸಂದರ್ಭೋಚಿತ ಡೇಟವನ್ನು ಕಳುಹಿಸಬಹುದು, Siri ವಿನಂತಿಗಳೊಂದಿಗೆ ಸಂಯೋಜಿತವಾಗಲು ನೀವು ಅನುಮತಿಸುವ ಥರ್ಡ್ ಪಾರ್ಟಿ ಆ್ಯಪ್‌ಗಳ ಡೇಟ ಇದರಲ್ಲಿ ಸೇರಿರುತ್ತದೆ, ಉದಾಹರಣೆಗೆ:
- ಸಂಪರ್ಕದ ಹೆಸರುಗಳು, ಅಡ್ಡಹೆಸರುಗಳು ಮತ್ತು ಸಂಬಂಧಗಳು (ಉದಾಹರಣೆಗೆ, “ನನ್ನ ತಂದೆ”), ನೀವು ಅವುಗಳನ್ನು ನಿಮ್ಮ ಸಂಪರ್ಕಗಳಲ್ಲಿ ಸೆಟಪ್ ಮಾಡಿದರೆ
- ಭಾಷೆ ಮತ್ತು ಪ್ರದೇಶದ ಸೆಟ್ಟಿಂಗ್ಸ್‌ನಲ್ಲಿ ಸೆಟ್ ಮಾಡಿದ್ದರೆ ವಿಳಾಸದ ರೂಪ
- ನೀವು ಆನಂದಿಸುವ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳು
- ನಿಮ್ಮ ಮತ್ತು ನಿಮ್ಮ ಕುಟುಂಬ ಹಂಚಿಕೆಯ ಸದಸ್ಯರ ಸಾಧನಗಳ ಹೆಸರುಗಳು
- ಮನೆ ಆ್ಯಪ್‌ನಲ್ಲಿನ ಆ್ಯಕ್ಸೆಸರಿಗಳು, ಮನೆಗಳು, ದೃಶ್ಯಗಳು, ಹಂಚಿಕೊಂಡ ಮನೆಯ ಸದಸ್ಯರ ಹೆಸರುಗಳು ಮತ್ತು Apple TV ಬಳಕೆದಾರರ ಪ್ರೊಫೈಲ್‌ಗಳು
- ಫೋಟೋಗಳಲ್ಲಿನ ಜನರ ಹೆಸರುಗಳು, ಅಲಾರಂ ಹೆಸರುಗಳು ಮತ್ತು ರಿಮೈಂಡರ್‌ಗಳ ಪಟ್ಟಿಗಳ ಹೆಸರುಗಳಂತಹ ಐಟಮ್‌ಗಳಿಗೆ ಲೇಬಲ್‌ಗಳು
- ನಿಮ್ಮ ಸಾಧನದಲ್ಲಿ ಇನ್‌ಸ್ಟಾಲ್ ಮಾಡಲಾದ ಆ್ಯಪ್‌ಗಳ ಹೆಸರುಗಳು ಮತ್ತು ನೀವು Siri ಮೂಲಕ ಸೇರಿಸಿದ ಶಾರ್ಟ್‌ಕಟ್‌ಗಳು
ಈ ಡೇಟವು ಒಂದು ರ್‍ಯಾಂಡಮ್ ಆದ, ಸಾಧನದಿಂದ ಜನರೇಟ್ ಆದ ಐಡೆಂಟಿಫೈಯರ್ ಜೊತೆಗೆ ಸಂಯೋಜಿಸಲ್ಪಟ್ಟಿದೆ, ಮತ್ತು ಆ ಐಡೆಂಟಿಫೈಯರ್ ನಿಮ್ಮ Apple ಖಾತೆ ಅಥವಾ ಈಮೇಲ್ ವಿಳಾಸದೊಂದಿಗೆ ಸಂಯೋಜಿತವಾಗಿಲ್ಲ. ನಿಮ್ಮ ವಿನಂತಿಯನ್ನು Siri ಅರ್ಥಮಾಡಿಕೊಂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಮತ್ತು ನಿಮ್ಮ iOS ಸಾಧನ ಮತ್ತು ನಿಮ್ಮ Apple Watch, HomePod, ಅಥವಾ ಬೆಂಬಲಿತ HomeKit ಆ್ಯಕ್ಸೆಸರಿಯಂತಹ ಯಾವುದೇ ಕನೆಕ್ಟ್ ಆಗಿರುವ Apple ಸಾಧನಕ್ಕೆ ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ನೀವು ಏನು ಹೇಳುತ್ತೀರೋ ಅದನ್ನು ಗುರುತಿಸುವುದಕ್ಕೆ ಸಹಾಯ ಮಾಡಲು ಮಾತ್ರ ಇದನ್ನು Apple ಬಳಸುತ್ತದೆ.
ಈ ಸಂದರ್ಭೋಚಿತ ಡೇಟ ಹಾಗೂ ನಿಮ್ಮ Siri ಟ್ರಾನ್ಸ್‌ಕ್ರಿಪ್ಟ್‌ಗಳು ಮತ್ತು ಸಂಬಂಧಿತ ವಿನಂತಿ ಡೇಟವನ್ನು, ಮಾರ್ಕೆಟಿಂಗ್ ಪ್ರೊಫೈಲ್ ಅನ್ನು ರಚಿಸಲು ಬಳಸಲಾಗುವುದಿಲ್ಲ ಮತ್ತು ಯಾರಿಗೂ ಮಾರಾಟ ಮಾಡಲಾಗುವುದಿಲ್ಲ.
ಥರ್ಡ-ಪಾರ್ಟಿ ಆ್ಯಪ್‌ಗಳು
Siri ನಿಮ್ಮ ಪರವಾಗಿ ಥರ್ಡ್ ಪಾರ್ಟಿ ಆ್ಯಪ್ ಅಥವಾ ಸೇವೆಯೊಂದಿಗೆ ಸಂವಹನ ನಡೆಸಿದಾಗ, ನೀವು ಆ ಆ್ಯಪ್ ಅಥವಾ ಸೇವೆಯ ನಿಯಮಗಳು ಮತ್ತು ಷರತ್ತುಗಳು ಮತ್ತು ಗೌಪ್ಯತಾ ನೀತಿಗೆ ಒಳಪಟ್ಟಿರುತ್ತೀರಿ. ಹೆಚ್ಚುವರಿಯಾಗಿ, ಟ್ರಾನ್ಸ್‌ಕ್ರಿಪ್ಷನ್‌ಗಾಗಿ ಮಾತಿನ ಗುರುತಿಸುವಿಕೆಯನ್ನು ಬಳಸಲು ಆ್ಯಪ್‌ಗಳಿಗೆ ನೀವು ಅನುಮತಿಸಿದರೆ, ಟ್ರಾನ್ಸ್‌ಕ್ರೈಬ್ ಮಾಡಬೇಕಾದ ಆಡಿಯೊ ಡೇಟವನ್ನು Appleಗೆ ಕಳುಹಿಸಬಹುದು.
Siri ಸಲಹೆಗಳು
ನಿಮ್ಮ ಅನುಭವವನ್ನು ವೈಯಕ್ತೀಕರಿಸಲು ನಿಮ್ಮ ಸಾಧನಗಳು ಮತ್ತು ಆ್ಯಪ್‌ಗಳನ್ನು ನೀವು ಹೇಗೆ ಬಳಸುತ್ತೀರಿ ಎಂಬುದನ್ನು ತಿಳಿಯಲು Siri ಸಲಹೆಗಳು ಸ್ಥಳೀಯ, ಸಾಧನದ ಪ್ರಕ್ರಿಯೆಗೊಳಿಸುವಿಕೆಯನ್ನು ಬಳಸುತ್ತದೆ. ನಿಮ್ಮ Safari ಬ್ರೌಸಿಂಗ್ ಇತಿಹಾಸ, ಈಮೇಲ್‌ಗಳು, ಸಂದೇಶಗಳು, ಚಿತ್ರಗಳು, ನೋಟಿಫಿಕೇಷನ್‌ಗಳು ಮತ್ತು ಸಂಪರ್ಕಗಳಂತಹ ನಿಮ್ಮ ಸಾಧನದಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಬಳಸಿಕೊಂಡು, ಜೊತೆಗೆ ಇನ್‌ಸ್ಟಾಲ್ ಮಾಡಿದ ಇತರ ಆ್ಯಪ್‌ಗಳಿಂದ ದೇಣಿಗೆ ಅಥವಾ ಕೊಡುಗೆ ನೀಡಿದ ಮಾಹಿತಿಯನ್ನು ಬಳಸಿಕೊಂಡು, Siri ಶಾರ್ಟ್‌ಕಟ್‌ಗಳನ್ನು ಸೂಚಿಸಬಹುದು ಮತ್ತು ಹುಡುಕಾಟಗಳು, ಹಂಚಿಕೆ ಶೀಟ್, ಕ್ಯಾಲೆಂಡರ್, ಲುಕ್ ಅಪ್, ವಿಷುವಲ್ ಶೋಧನೆ, Safari, ಆ್ಯಪಗಳು ಹಾಗೂ ಇನ್ನೂ ಹಲವೆಡೆಗಳಲ್ಲಿ ಸಲಹೆಗಳನ್ನು ನೀಡಬಹುದು. ಉದಾಹರಣೆಗೆ, ಫೋಟೋದಲ್ಲಿ ಯಾರಿದ್ದಾರೆ ಎಂಬುದನ್ನು ಆಧರಿಸಿ ಹಂಚಿಕೆ ಶೀಟ್‌ನಲ್ಲಿ ಯಾರೊಂದಿಗೆ ಫೋಟೋವನ್ನು ಹಂಚಿಕೊಳ್ಳಬೇಕು ಎಂದು ಸಲಹೆ ನೀಡಲು Siri ಆನ್-ಡಿವೈಸ್ ಇಂಟೆಲಿಜೆನ್ಸ್ ಅನ್ನು ಬಳಸಬಹುದು. Apple ಸೇವೆಗಳನ್ನು ವೈಯಕ್ತೀಕರಿಸಲು ಶಿಫಾರಸುಗಳನ್ನು ಬಳಸಬಹುದು ಆದರೆ Apple ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುವುದಿಲ್ಲ ಅಥವಾ ಇತರ ಥರ್ಡ್-ಪಾರ್ಟಿ ಆ್ಯಪ್‌ನೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. Siri ಸೂಚಿಸಿದ ಶಾರ್ಟ್‌ಕಟ್‌ಗಳನ್ನು ಚಾಲನೆ ಮಾಡುವಾಗ, ನೀವು ಆ್ಯಪ್‌ನ ನಿಯಮಗಳು ಮತ್ತು ಷರತ್ತುಗಳು ಮತ್ತು ಗೌಪ್ಯತೆ ನೀತಿಗೆ ಅನುಗುಣವಾಗಿ ವರ್ತಿಸಲು ಬದ್ಧರಾಗಿರುತ್ತೀರಿ.
ಸ್ಥಳ ಸೇವೆಗಳು
ನೀವು Siriಗಾಗಿ ಸ್ಥಳ ಸೇವೆಗಳನ್ನು ಆನ್ ಮಾಡಿದ್ದರೆ, ನಿಮ್ಮ ವಿನಂತಿಗಳಿಗೆ ಅದು ನೀಡುವ ಪ್ರತಿಕ್ರಿಯೆಯ ನಿಖರತೆಯನ್ನು ಸುಧಾರಿಸುವುದಕ್ಕಾಗಿ Siri ಮತ್ತು ಡಿಕ್ಟೇಷನ್‌ಗೆ ಸಹಾಯ ಮಾಡಲು, ನೀವು ವಿನಂತಿ ಮಾಡುವ ಸಮಯದಲ್ಲಿ ನಿಮ್ಮ ಸಾಧನದ ಸ್ಥಳವನ್ನು Appleಗೆ ಕಳುಹಿಸಲಾಗುತ್ತದೆ. ಸಂಬಂಧಿತ ಪ್ರಸ್ತುತವೆನಿಸುವ ಪ್ರತಿಕ್ರಿಯೆಗಳು ಮತ್ತು ಸಲಹೆಗಳನ್ನು ಒದಗಿಸಲು, Apple ನಿಮ್ಮ ಇಂಟರ್ನೆಟ್ ಕನೆಕ್ಷನ್‌ನ IP ವಿಳಾಸವನ್ನು ಭೌಗೋಳಿಕ ಪ್ರದೇಶಕ್ಕೆ ಹೊಂದಿಸುವ ಮೂಲಕ ನಿಮ್ಮ ಸ್ಥಳವನ್ನು ಅಂದಾಜು ಮಾಡಲು ಬಳಸಬಹುದು. ಸಲಹೆಗಳನ್ನು ನೀಡಲು, Apple ನಿಮ್ಮ ಇಂಟರ್ನೆಟ್ ಕನೆಕ್ಷನ್‌ನ IP ವಿಳಾಸವನ್ನು ಭೌಗೋಳಿಕ ಪ್ರದೇಶಕ್ಕೆ ಹೊಂದಿಸುವ ಮೂಲಕ ನಿಮ್ಮ ಸ್ಥಳವನ್ನು ಅಂದಾಜು ಮಾಡಲು ಬಳಸಬಹುದು.
iCloud ಸಿಂಕ್ ಮಾಡುವಿಕೆ
ನೀವು iCloud ಬಳಸಿದರೆ ನಿಮ್ಮ Siri ಸೆಟ್ಟಿಂಗ್ಸ್ ಮತ್ತು Siri ಸಲಹೆಗಳ ವೈಯಕ್ತೀಕರಣವು ನಿಮ್ಮ Apple ಸಾಧನಗಳಾದ್ಯಂತ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಬಳಸಿ ಸಿಂಕ್ ಆಗುತ್ತದೆ. ನೀವು Siriಯನ್ನು ಸೆಟಪ್ ಮಾಡಿದ್ದರೆ, ಪ್ರತಿ ಸಾಧನದಲ್ಲಿ ವೈಯಕ್ತೀಕರಿಸಿದ Siri ಗುರುತಿಸುವಿಕೆಯನ್ನು ಸುಧಾರಿಸಲು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಬಳಸಿ ನಿಮ್ಮ ವಿನಂತಿಗಳ ಸಣ್ಣ ಸ್ಯಾಂಪಲ್ ಅನ್ನು ಸಹ ಸಿಂಕ್ ಮಾಡಲಾಗುತ್ತದೆ. ವೈಯಕ್ತೀಕರಿಸಿದ ಮಾತು ಗುರುತಿಸುವಿಕೆ ಮಾಡೆಲ್‌ಗಳು ಹಾಗೂ Siri ಮತ್ತು ಡಿಕ್ಟೇಷನ್‌ನೊಂದಿಗೆ ನೀವು ಸಾಧನದಲ್ಲಿ ನಡೆಸುವ ಸಂವಹನಗಳು ತಮ್ಮ ನಿಖರತೆ ಮತ್ತು ಮಾಡೆಲ್ ಕಾರ್ಯಕ್ಷಮತೆಯನ್ನು ಸುಧಾರಿಸಲು ನಿಮ್ಮ ಸಾಧನದಲ್ಲಿನ ಮಾಹಿತಿಯನ್ನು ಬಳಸಿಕೊಳ್ಳಬಹುದು. ನಿಮ್ಮ ಹತ್ತಿರದ ಟೈಮರ್‌ಗಳ ಸ್ಥಿತಿ, ಅಲಾರಂಗಳು, ಹಂಚಿದ ಮಾಧ್ಯಮ, ಮತ್ತು, ನೀವು HomePodನಲ್ಲಿ ವೈಯಕ್ತಿಕ ವಿನಂತಿಗಳನ್ನು ಆಯ್ಕೆಮಾಡಿಕೊಂಡಿದ್ದರೆ, ಫೋನ್ ಕರೆ ಸ್ಥಿತಿ, ನಿಮ್ಮ ಸಾಧನದಿಂದ ಮತ್ತು ಅಂತಹ ಸಾಧನದ ಪ್ರಾಕ್ಸಿಮಿಟಿಯನ್ನು ಇತರರಿಗೆ ನಿಮ್ಮ ಹತ್ತಿರದ Apple ಸಾಧನಗಳ ಮೂಲಕ ಸ್ಥಳೀಯವಾಗಿ ಹಂಚಿಕೊಳ್ಳಬಹುದು Siri ಸಕ್ರಿಯಗೊಳಿಸಿದ ನಿಮ್ಮ ಹತ್ತಿರದ ಸಾಧನಗಳಿಂದ ಅವುಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ನೀವು ಆಯ್ಕೆಮಾಡುವ ಮತ್ತು ನಿಯಂತ್ರಿಸುವ ಸಾಮರ್ಥ್ಯ ಹೊಂದಿದ್ದೀರಿ
ನೀವು ಯಾವುದೇ ಸಮಯದಲ್ಲಿ Siri ಅಥವಾ ಡಿಕ್ಟೇಷನ್ ಅನ್ನು ನಿಷ್ಕ್ರಿಯಗೊಳಿಸಬಹುದು. Siriಯನ್ನು ಆಫ್ ಮಾಡಲು, ಸೆಟ್ಟಿಂಗ್ಸ್ > Siri > Siri ಜೊತೆಗೆ ಮಾತನಾಡಿ ಎಂಬಲ್ಲಿಗೆ ಹೋಗಿ ಹಾಗೂ ಆಫ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ ಮತ್ತು ಸೆಟ್ಟಿಂಗ್ಸ್ > Siri > Siri ಜೊತೆಗೆ ಮಾತನಾಡಿ ಎಂಬಲ್ಲಿಗೆ ಹೋಗಿ ಮತ್ತು “Siriಗಾಗಿ ಹೋಮ್ ಒತ್ತಿ” ಅಥವಾ “Siriಗಾಗಿ ಸೈಡ್ ಬಟನ್ ಒತ್ತಿ” ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡಿ. ಡಿಕ್ಟೇಷನ್ ಅನ್ನು ಆಫ್ ಮಾಡಲು, ಸೆಟ್ಟಿಂಗ್ಸ್ > ಸಾಮಾನ್ಯ > ಕೀಬೋರ್ಡ್‌ಗೆ ಹೋಗಿ, ನಂತರ ಡಿಕ್ಟೇಷನ್ ಅನ್ನು ಸಕ್ರಿಯಗೊಳಿಸಿ ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡಿ. ನೀವು Siri ಮತ್ತು ಡಿಕ್ಟೇಷನ್ ಎರಡನ್ನೂ ಆಫ್ ಮಾಡಿದರೆ, ನಿಮ್ಮ ಸಾಧನದಲ್ಲಿ ಸಂಗ್ರಹವಾಗಿರುವ ಮತ್ತು ನಿಮ್ಮ ಅನುಭವವನ್ನು ವೈಯಕ್ತೀಕರಿಸಲು ಬಳಸಿರುವ ನಿಮ್ಮ Siri ಮತ್ತು ಡಿಕ್ಟೇಷನ್ ವಿನಂತಿಗಳ ಟ್ರಾನ್ಸ್‌ಕ್ರಿಪ್ಟ್‌ಗಳು ಡಿಲೀಟ್ ಆಗುತ್ತವೆ.
ಸೆಟ್ಟಿಂಗ್ಸ್ > Siri > Siri ಮತ್ತು ಡಿಕ್ಟೇಷನ್ ಇತಿಹಾಸ ಎಂಬಲ್ಲಿ “Siri ಮತ್ತು ಡಿಕ್ಟೇಷನ್ ಇತಿಹಾಸವನ್ನು ಡಿಲೀಟ್ ಮಾಡಿ” ಎಂಬುದನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ಸಾಧನದಲ್ಲಿ ಸಂಗ್ರಹವಾಗಿರುವ ನಿಮ್ಮ Siri ಮತ್ತು ಡಿಕ್ಟೇಷನ್ ವಿನಂತಿಗಳ ಟ್ರಾನ್ಸ್‌ಕ್ರಿಪ್ಟ್‌ಗಳನ್ನು ನೀವು ಡಿಲೀಟ್ ಮಾಡಬಹುದು.
ನೀವು ಸೆಟ್ಟಿಂಗ್ಸ್ > Siri > ಆ್ಯಪ್‌ಗಳು > [ಆ್ಯಪ್ ಹೆಸರು] > Siri ವಿನಂತಿಗಳೊಂದಿಗೆ ಬಳಸಿ ಎಂಬಲ್ಲಿಗೆ ಹೋಗುವ ಮೂಲಕ Siriಗೆ ಅನುಮತಿಸಿ ವಿನಂತಿಗಳೊಂದಿಗೆ ಯಾವುದೇ ಸಮಯದಲ್ಲಿ ಯಾವ ಆ್ಯಪ್‌ಗಳನ್ನು ಸಂಯೋಜಿಸಬಹುದು ಎಂಬುದನ್ನು ನೀವು ಕಂಟ್ರೋಲ್ ಮಾಡಬಹುದು.
ನಿಮಗೆ Siri ಸಲಹೆಗಳು ಆ್ಯಪ್‌ಗಳಲ್ಲಿ ಬೇಡವೆಂದರೆ ಅಥವಾ ಹಂಚಿಕೊಳ್ಳುವಾಗ, ಹುಡುಕುವಾಗ ಅಥವಾ ಆಲಿಸುವಾಗ ಅವುಗಳನ್ನು ನೀವು ಬಯಸದಿದ್ದರೆ, ಸೆಟ್ಟಿಂಗ್ಸ್ > Siri ಎಂಬಲ್ಲಿಗೆ ಹೋಗಿ “ಆ್ಯಪ್ ಲೈಬ್ರರಿಯಲ್ಲಿ ತೋರಿಸಿ”, “Spotlightನಲ್ಲಿ ತೋರಿಸಿ”, “ಹಂಚಿಕೊಳ್ಳುವಾಗ ತೋರಿಸಿ”, ಅಥವಾ “ಆಲಿಸುವಾಗ ತೋರಿಸಿ” ಎನ್ನುವುದನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ Siri ಸಲಹೆಗಳನ್ನು ನಿಷ್ಕ್ರಿಯಗೊಳಿಸಬಹುದು.
Siri ವೈಯಕ್ತೀಕರಿಸುವ ಫೀಚರ್‌ಗಳ ಸಂಪೂರ್ಣ ಪಟ್ಟಿಯನ್ನು ಮತ್ತು ಯಾವ ಆ್ಯಪ್‌ಗಳಿಗೆ Siri ಶಾರ್ಟ್‌ಕಟ್‌ಗಳನ್ನು ಸೂಚಿಸುತ್ತದೆಯೋ ಅವುಗಳನ್ನು ನೀವು ಸೆಟ್ಟಿಂಗ್ಸ್ > Siri ಎಂಬಲ್ಲಿ ನೋಡಬಹುದು ಮತ್ತು ನಿಯಂತ್ರಿಸಬಹುದು. Siriಯನ್ನು ವೈಯಕ್ತೀಕರಿಸಲು ಮಾಹಿತಿಯನ್ನು ಒದಗಿಸದಂತೆ ಆ್ಯಪ್‌ಗಳನ್ನು ನಿಲ್ಲಿಸಲು, ಸೆಟ್ಟಿಂಗ್ಸ್ > Siri > ಆ್ಯಪ್‌ಗಳು > [ಆ್ಯಪ್ ಹೆಸರು] ಎಂಬಲ್ಲಿಗೆ ಹೋಗಿ, ನಂತರ “ಈ ಆ್ಯಪ್‌ನಿಂದ ತಿಳಿಯಿರಿ” ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡಿ. Siriಯನ್ನು ವೈಯಕ್ತೀಕರಿಸಲು ಮಾಹಿತಿಯನ್ನು ಒದಗಿಸದಂತೆ ಆ್ಯಪ್ ಕ್ಲಿಪ್‌ಗಳನ್ನು ನಿಲ್ಲಿಸಲು, ಸೆಟ್ಟಿಂಗ್ಸ್ > Siri > ಆ್ಯಪ್ ಕ್ಲಿಪ್‌ಗಳು ಎಂಬಲ್ಲಿಗೆ ಹೋಗಿ ಮತ್ತು “ಆ್ಯಪ್ ಕ್ಲಿಪ್‌ಗಳಿಂದ ತಿಳಿಯಿರಿ” ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡಿ.
ನೀವು ಸ್ಥಳ ಸೇವೆಗಳನ್ನು ಸಕ್ರಿಯಗೊಳಿಸಿದ್ದರೆ, ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು > Siri ಮತ್ತು ಎಂದಿಗೂ ಬೇಡ ಎಂಬುದನ್ನು ಟ್ಯಾಪ್ ಮಾಡುವ ಮೂಲಕ ನೀವು Siriಗಾಗಿ ಸ್ಥಳ ಸೇವೆಗಳನ್ನು ಆಫ್ ಮಾಡಬಹುದು.
ನೀವು ಸ್ಥಳ ಸೇವೆಗಳನ್ನು ಸಕ್ರಿಯಗೊಳಿಸಿದ್ದರೆ, ನೀವು ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು > ಸಿಸ್ಟಂ ಸೇವೆಗಳು ಎಂಬಲ್ಲಿಗೆ ಹೋಗುವ ಮೂಲಕ ಮತ್ತು ಸಲಹೆಗಳು & ಹುಡುಕಾಟವನ್ನು ಆಫ್ ಮಾಡಿ ಎಂಬುದನ್ನು ಟ್ಯಾಪ್ ಮಾಡುವ ಮೂಲಕ ನೀವು Siri ಸಲಹೆಗಳಿಗಾಗಿ ಸ್ಥಳ ಸೇವೆಗಳನ್ನು ಆಫ್ ಮಾಡಬಹುದು.
ನಿಮ್ಮ ಸಾಧನಗಳಾದ್ಯಂತ Siri ವೈಯಕ್ತೀಕರಣವನ್ನು ಸಿಂಕ್ ಮಾಡಲು ನೀವು ಬಯಸದಿದ್ದರೆ, ಸೆಟ್ಟಿಂಗ್ಸ್ > [ನಿಮ್ಮ ಹೆಸರು] > iCloud > iCloudನಲ್ಲಿ ಸೇವ್ ಮಾಡಲಾಗಿದೆ > ಎಲ್ಲವನ್ನೂ ನೋಡಿ ಎಂಬಲ್ಲಿಗೆ ಹೋಗುವ ಮೂಲಕ ಮತ್ತು Siriಯನ್ನು ಆಫ್ ಮಾಡಿ ಎಂಬುದನ್ನು ಟ್ಯಾಪ್ ಮಾಡುವ ಮೂಲಕ ನೀವು Siriಯನ್ನು ನಿಷ್ಕ್ರಿಯಗೊಳಿಸಬಹುದು.
ಸೆಟ್ಟಿಂಗ್ಸ್ > ಸ್ಕ್ರೀನ್ ಟೈಮ್ > ಕಂಟೆಂಟ್ ಮತ್ತು ಗೌಪ್ಯತೆ ನಿರ್ಬಂಧಗಳು > ಅನುಮತಿಸಲಾದ ಆ್ಯಪ್‌ಗಳು ಮತ್ತು ಫೀಚರ್‌ಗಳು ಎಂಬಲ್ಲಿಗೆ ಹೋಗುವ ಮೂಲಕ ಹಾಗೂ Siri ಮತ್ತು ಡಿಕ್ಟೇಷನ್ ಅನ್ನು ಟ್ಯಾಪ್ ಮಾಡುವ ಮೂಲಕ Siri ಮತ್ತು ಡಿಕ್ಟೇಷನ್ ಅನ್ನು ಸಂಪೂರ್ಣವಾಗಿ ಬಳಸುವ ಸಾಮರ್ಥ್ಯವನ್ನು ಸಹ ನೀವು ಸೀಮಿತಗೊಳಿಸಬಹುದು.
ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > ಧ್ವನಿ ಗುರುತಿಸುವಿಕೆಗೆ ಹೋಗುವ ಮೂಲಕ ಟ್ರಾನ್ಸ್‌ಕ್ರಿಪ್ಶನ್‌ಗಾಗಿ Siriಯನ್ನು ಯಾವ ಆ್ಯಪ್‌ಗಳು ಬಳಸುತ್ತವೆ ಎಂಬುದನ್ನು ನೀವು ಕಂಟ್ರೋಲ್ ಮಾಡಬಹುದು.
Siri,ಡಿಕ್ಟೇಷನ್ ಅಥವಾ Siri ಸಲಹೆಗಳನ್ನು ಬಳಸುವ ಮೂಲಕ, ನೀವು Apple ಮತ್ತು ಅದರ ಅಂಗಸಂಸ್ಥೆಗಳು ಮತ್ತು ಏಜೆಂಟ್‌ಗಳಿಗೆ Apple ಉತ್ಪನ್ನಗಳು ಮತ್ತು ಸೇವೆಗಳಲ್ಲಿ Siri, ಡಿಕ್ಟೇಷನ್, ಹುಡುಕಾಟ ಮತ್ತು ಇತರೆ ಸೀಮಿತ ಭಾಷಾ ಪ್ರಕ್ರಿಯೆಗೊಳಿಸುವಿಕೆ ಫೀಚರ್‌ಗಳ ಕಾರ್ಯಕಾರಿತ್ವವನ್ನು ಒದಗಿಸುವುದಕ್ಕಾಗಿ ಮತ್ತು ಸುಧಾರಿಸುವುದಕ್ಕಾಗಿ ಮೇಲೆ ವಿವರಿಸಿದಂತೆ ಈ ಮಾಹಿತಿಯನ್ನು ಪ್ರಸರಣ ಮಾಡಲು, ಸಂಗ್ರಹಿಸಲು, ನಿರ್ವಹಿಸಲು, ಪ್ರಕ್ರಿಯೆಗೊಳಿಸಲು ಮತ್ತು ಬಳಸಿಕೊಳ್ಳಲು ನೀವು ಒಪ್ಪುತ್ತೀರಿ ಮತ್ತು ಅದಕ್ಕೆ ಸಮ್ಮತಿಸುತ್ತೀರಿ. Apple ಈ ಮಾಹಿತಿಯನ್ನು ವಿಶ್ವಾಸಾರ್ಹ ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರೊಂದಿಗೆ ಪ್ರಕ್ರಿಯೆಗೊಳಿಸಬಹುದು ಮತ್ತು ಸಂಗ್ರಹಿಸಬಹುದು. ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.
2026-02-11