ಬ್ರೌಸರ್ ಅಯ್ಕೆ ಸ್ಕ್ರೀನ್ ಮತ್ತು ಗೌಪ್ಯತೆ

ನಿಮ್ಮ ಸಾಧನದಲ್ಲಿ ಪ್ರಸ್ತುತ ಇಲ್ಲದ ಬ್ರೌಸರ್ ಆ್ಯಪ್ ಅನ್ನು ನೀವು ಆಯ್ಕೆ ಮಾಡಿದಾಗ, ಆ್ಯಪ್ ಅನ್ನು App Storeನಿಂದ ಡೌನ್‌ಲೋಡ್ ಮಾಡಲಾಗುತ್ತದೆ ಮತ್ತು ನಿಮ್ಮ Apple ಖಾತೆಯೊಂದಿಗೆ ಸಂಯೋಜಿಸಲಾಗುತ್ತದೆ.
 

ಬ್ರೌಸರ್ ಆಯ್ಕೆ ಸ್ಕ್ರೀನ್ ನಿಮ್ಮ ಆದ್ಯತೆಯ ಡಿಫಾಲ್ಟ್ ಬ್ರೌಸರ್ ಆ್ಯಪ್ ಸೆಟ್ ಮಾಡಲು ನಿಮಗೆ ಅನುಮತಿಸುತ್ತದೆ.


Privacy Icon

  • ನೀವು Appleನೊಂದಿಗೆ ಅನಾಲಿಟಿಕ್ಸ್ ಅನ್ನು ಹಂಚಿಕೊಳ್ಳುವ ಆಯ್ಕೆಯನ್ನು ಮಾಡಿದಾಗ, ಅನುಭವವನ್ನು ಸುಧಾರಿಸಲು ಮತ್ತು ಅನುಸರಣೆಯ ಉದ್ದೇಶಗಳಿಗಾಗಿ ಬ್ರೌಸರ್ ಆಯ್ಕೆಯ ಪ್ರಕ್ರಿಯೆಯೊಂದಿಗಿನ ನಿಮ್ಮ ಸಂವಹನಗಳ ಕುರಿತಾದ ಮಾಹಿತಿಯನ್ನು Apple ಸಂಗ್ರಹಿಸುತ್ತದೆ. ಈ ಮಾಹಿತಿಯು ನಿಮ್ಮೊಂದಿಗೆ ಸಂಬಂಧ ಹೊಂದಿಲ್ಲ.
  • ನಿಮ್ಮ ಸಾಧನದಲ್ಲಿ ಪ್ರಸ್ತುತ ನೀವು ಹೊಂದಿರದ ಬ್ರೌಸರ್ ಆ್ಯಪ್ ಅನ್ನು ನೀವು ಆಯ್ಕೆ ಮಾಡಿದಾಗ, ನಿಮ್ಮ ಡಿಫಾಲ್ಟ್ ಬ್ರೌಸರ್ ಆಗಿ ಸೆಟ್ ಮಾಡಲು App Store‌ನಿಂದ ಆ್ಯಪ್ ಅನ್ನು ಡೌನ್‌ಲೋಡ್ ಮಾಡಲಾಗುತ್ತದೆ.
  • Apple ನಿಮ್ಮ ಬ್ರೌಸರ್ ಆ್ಯಪ್ ಡೌನ್‌ಲೋಡ್ ಅನ್ನು Apple ಖಾತೆಯೊಂದಿಗೆ ಸಂಯೋಜಿಸುತ್ತದೆ.

ವೆಬ್‌ಸೈಟ್‌ಗಳಿಗೆ ಲಿಂಕ್‌ಗಳನ್ನು ತೆರೆಯುವಾಗ ಬಳಸಿದ ಡಿಫಾಲ್ಟ್ ಬ್ರೌಸರ್ ಆ್ಯಪ್ ಅನ್ನು ನೀವು ಆಯ್ಕೆ ಮಾಡಬಹುದು.

ನೀವು Apple ಮತ್ತು ಆ್ಯಪ್ ಡೆವಲಪರ್‌ಗಳೊಂದಿಗೆ ಅನಾಲಿಟಿಕ್ಸ್ ಅನ್ನು ಹಂಚಿಕೊಳ್ಳುವ ಆಯ್ಕೆಯನ್ನು ಮಾಡಿದ್ದರೆ, ನೀವು ಏನನ್ನು ಟ್ಯಾಪ್ ಮಾಡುತ್ತೀರಿ ಮತ್ತು ವೀಕ್ಷಿಸುತ್ತೀರಿ ಎಂಬುದನ್ನು ಒಳಗೊಂಡ ಬ್ರೌಸರ್ ಆಯ್ಕೆಯ ಸಂವಹನಗಳು ಮತ್ತು ಆಯ್ಕೆಯ ಪುಟದಲ್ಲಿ ಬ್ರೌಸರ್‌ನ ನಿಯೋಜನೆಯ ಕುರಿತು Apple ಮಾಹಿತಿಯನ್ನು ಸಂಗ್ರಹಿಸುತ್ತದೆ. ಈ ಡೇಟವನ್ನು ಸಂಗ್ರಹಿಸುವಾಗ Apple ನಿಮ್ಮ ಗೌಪ್ಯತೆಯನ್ನು ಕಾಪಾಡುತ್ತದೆ ಮತ್ತು ಅದನ್ನು ನಿಮ್ಮೊಂದಿಗೆ ಸಂಯೋಜಿಸುವುದಿಲ್ಲ. ಬ್ರೌಸರ್ ಆಯ್ಕೆಯ ಅನುಭವವನ್ನು ಸುಧಾರಿಸಲು ಮತ್ತು Appleನ ವರದಿ ಮತ್ತು ಅನುಸರಣೆ ಉದ್ದೇಶಗಳಿಗಾಗಿ ಡೇಟವನ್ನು ಬಳಸಬಹುದು. ನೀವು ಯಾವುದೇ ಸಮಯದಲ್ಲಿ ನಿಮ್ಮ ಅನಾಲಿಟಿಕ್ಸ್ ಹಂಚಿಕೆ ಆದ್ಯತೆಗಳನ್ನು ಬದಲಾಯಿಸಬಹುದು. ನಿಮ್ಮ iOS ಅಥವಾ iPadOS ಸಾಧನದಲ್ಲಿ ಹಾಗೆ ಮಾಡಲು, ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > ಅನಾಲಿಟಿಕ್ಸ್ ಮತ್ತು ಸುಧಾರಣೆಗಳು ಎಂಬಲ್ಲಿಗೆ ಹೋಗಿ ಮತ್ತು ಹಂಚಿಕೆ [ಸಾಧನ] ಅನಾಲಿಟಿಕ್ಸ್ ಅನ್ನು ಆಫ್ ಮಾಡಲು ಟ್ಯಾಪ್ ಮಾಡಿ.

ನಿಮ್ಮ ಸಾಧನದಲ್ಲಿ ಪ್ರಸ್ತುತ ನೀವು ಹೊಂದಿರದ ಬ್ರೌಸರ್ ಆ್ಯಪ್ ಅನ್ನು ನೀವು ಆಯ್ಕೆ ಮಾಡಿದಾಗ, ಆ್ಯಪ್ ಸ್ವಯಂಚಾಲಿತವಾಗಿ App Store‌ನಿಂದ ಡೌನ್‌ಲೋಡ್ ಆಗುತ್ತದೆ ಮತ್ತು ನಿಮ್ಮ ಡಿಫಾಲ್ಟ್ ಬ್ರೌಸರ್ ಆಗಿ ಸೆಟ್ ಮಾಡುತ್ತದೆ. ಈ ಡೌನ್‌ಲೋಡ್‌ನ ಭಾಗವಾಗಿ, Apple ನಿಮ್ಮ Apple ಖಾತೆಯ ಜೊತೆಗೆ ನಿಮ್ಮ ಸಾಧನದ ಹಾರ್ಡ್‌ವೇರ್ ID ಮತ್ತು IP ವಿಳಾಸದಂತಹ ಗುರುತಿಸುವಿಕೆಗಳನ್ನು ಲಾಗ್ ಮಾಡುತ್ತದೆ. ನೀವು App Store ಅನ್ನು ಬಳಸುವಾಗ, ನಿಮ್ಮ ಡಿಫಾಲ್ಟ್ ಬ್ರೌಸರ್ ಆ್ಯಪ್‌ನ ಡೌನ್‌ಲೋಡ್‌ಗಳು ಸೇರಿದಂತೆ ನಿಮ್ಮ ಡೌನ್‌ಲೋಡ್‌ಗಳ ಕುರಿತು ಮಾಹಿತಿಯನ್ನು www.apple.com/in/legal/privacy/data/en/app-store ಎಂಬುದರಲ್ಲಿ “App Store ಮತ್ತು ಗೌಪ್ಯತೆ” ಎಂಬಲ್ಲಿ ವಿವರಿಸಿರುವ ಪ್ರಕಾರ ಬಳಸಬಹುದು.

ನೀವು ಯಾವುದೇ ಸಮಯದಲ್ಲಿ ನಿಮ್ಮ ಡಿಫಾಲ್ಟ್ ಬ್ರೌಸರ್ ಅನ್ನು ಬದಲಾಯಿಸಬಹುದು. ಹಾಗೆ ಮಾಡಲು, ಸೆಟ್ಟಿಂಗ್ಸ್ > ಆ್ಯಪ್‌ಗಳು ಎಂಬಲ್ಲಿಗೆ ಹೋಗಿ, ನಿಮ್ಮ ಡಿಫಾಲ್ಟ್ ಬ್ರೌಸರ್ ಆಗಿ ನೀವು ಸೆಟ್ ಮಾಡಲು ಬಯಸುವ ಆ್ಯಪ್ ಅನ್ನು ಟ್ಯಾಪ್ ಮಾಡಿ, ನಂತರ ಡಿಫಾಲ್ಟ್ ಬ್ರೌಸರ್ ಆ್ಯಪ್ ಅನ್ನು ಟ್ಯಾಪ್ ಮಾಡಿ. ನಿಮ್ಮ ಡಿಫಾಲ್ಟ್ ಆಗಿ ಹೊಂದಿಸಲು ಆ್ಯಪ್ ಅನ್ನು ಆಯ್ಕೆಮಾಡಿ. ಇದು ಡಿಫಾಲ್ಟ್ ಎಂದು ಖಚಿತಪಡಿಸಲು ಆ್ಯಪ್‌ನ ಪಕ್ಕದಲ್ಲಿ ಚೆಕ್‌ಮಾರ್ಕ್ ಕಾಣಿಸುತ್ತದೆ.

ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.

2025-12-12