ChatGPT ಎಕ್ಸ್‌ಟೆನ್ಶನ್ ಮತ್ತು ಗೌಪ್ಯತೆ

ವಿಷಯಗಳ ಮೇಲೆ ನಿಮ್ಮ ನಿಯಂತ್ರಣವಿರಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸಲು ಅನುವು ಮಾಡಿಕೊಡಲು ChatGPT ಎಕ್ಸ್‌ಟೆನ್ಶನ್ ಅನ್ನು ವಿನ್ಯಾಸಗೊಳಿಸಲಾಗಿದೆ.


ನೀವು Siri, ಬರವಣಿಗೆಯ ಟೂಲ್‌ಗಳು ಮತ್ತು ವಿಷುವಲ್ ಇಂಟೆಲಿಜೆನ್ಸ್‌ನಂತಹ (ಲಭ್ಯವಿರುವಲ್ಲಿ) ಬೆಂಬಲಿತ ಫೀಚರ್‌ಗಳನ್ನು ಬಳಸುವಾಗ, ChatGPT ಎಕ್ಸ್‌ಟೆನ್ಶನ್ ಸಕ್ರಿಯಗೊಳಿಸುವುದನ್ನು ಆರಿಸಬಹುದು. ChatGPT ಎಕ್ಸ್‌ಟೆನ್ಶನ್ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನೆರವಾಗುವ ಜೊತೆಗೆ, ಪಠ್ಯ ಮತ್ತು ಚಿತ್ರದ ಕಂಟೆಂಟ್ ಅನ್ನೂ ಸಹ ರಚಿಸುತ್ತದೆ. ಯಾವಾಗ ChatGPTಯನ್ನು ಬಳಸಬೇಕು ಎನ್ನುವುದನ್ನು ನೀವು ನಿಯಂತ್ರಿಸುತ್ತೀರಿ ಮತ್ತು ನಿಮ್ಮನ್ನು ಕೇಳಿದ ನಂತರವೇ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.

ನೀವು ಖಾತೆಯ ಹೊರತಾಗಿಯೂ ChatGPT ಎಕ್ಸ್‌ಟೆನ್ಶನ್ ಅನ್ನು ಬಳಸಬಹುದು. ನಿಮ್ಮ ಬಳಿ ChatGPT ಖಾತೆಯಿದ್ದರೆ, ನೀವು ಈ ಎಕ್ಸ್‌ಟೆನ್ಶನ್ ಜೊತೆಗೆ ನಿಮ್ಮ ಖಾತೆಯನ್ನು ಕನೆಕ್ಟ್ ಮಾಡುವುದನ್ನು ಸಹ ಆಯ್ಕೆ ಮಾಡಬಹುದು.

ChatGPT ಎಕ್ಸ್‌ಟೆನ್ಶನ್ ಅನ್ನು ಬಳಸುವುದು

ಯಾವುದೇ ಮಾಹಿತಿಯನ್ನು ChatGPTಗೆ ಕಳುಹಿಸುವ ಮೊದಲು, ನೀವು ChatGPT ಎಕ್ಸ್‌ಟೆನ್ಶನ್ ಅನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಈ ಎಕ್ಸ್‌ಟೆನ್ಶನ್ ಡಿಫಾಲ್ಟ್ ಆಗಿ ಆಫ್ ಆಗಿದೆ. ಇದನ್ನು ಸಕ್ರಿಯಗೊಳಿಸುವುದರಿಂದ ನಿಮಗೆ Siri, ಬರವಣಿಗೆಯ ಟೂಲ್‌ಗಳು ಮತ್ತು ವಿಷುವಲ್ ಇಂಟೆಲಿಜೆನ್ಸ್ ಮತ್ತು ಹೆಚ್ಚಿನವುಗಳು ಸೇರಿದಂತೆ ಬೆಂಬಲಿತ ಫೀಚರ್‌ಗಳಲ್ಲಿ ChatGPTಗೆ ವಿನಂತಿಗಳನ್ನು ಕಳುಹಿಸಲು ಅನುಮತಿಸುತ್ತದೆ. ಸೆಟ್ಟಿಂಗ್ಸ್ > Apple Intelligence & Siri > ChatGPT ಎಂಬಲ್ಲಿಗೆ ಹೋಗುವ ಮೂಲಕ ಮತ್ತು ChatGPTಯನ್ನು ಬಳಸಿ ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ಯಾವಾಗ ಬೇಕಾದರೂ ನೀವು ChatGPT ಎಕ್ಸ್‌ಟೆನ್ಶನ್ ಅನ್ನು ನಿಷ್ಕ್ರಿಯಗೊಳಿಸಲು ಆಯ್ಕೆ ಮಾಡಬಹುದು. Macನಲ್ಲಿ, ಸಿಸ್ಟಂ ಸೆಟ್ಟಿಂಗ್ಸ್ > Apple Intelligence & Siri > ChatGPT ಎಂಬಲ್ಲಿಗೆ ಹೋಗಿ, ChatGPT ಬಳಕೆಯನ್ನು ಆಫ್ ಮಾಡಲು ಟ್ಯಾಪ್ ಮಾಡಿ.

ನೀವು ChatGPT ಎಕ್ಸ್‌ಟೆನ್ಶನ್ ಅನ್ನು ಆ್ಯಕ್ಸೆಸ್ ಮಾಡಲು Siriಯನ್ನು ಬಳಸಿದರೆ, ನೀವು ChatGPTಯನ್ನು ವಿನಂತಿಯನ್ನು ಪ್ರಕ್ರಿಯೆಗೊಳಿಸಲು ಸ್ಪಷ್ಟವಾಗಿ ಕೇಳುತ್ತಿದ್ದೀರಾ ಎಂದು ನಿರ್ಧರಿಸಲು ನಿಮ್ಮ ವಿನಂತಿಯನ್ನು ವಿಶ್ಲೇಷಿಸಲಾಗುತ್ತದೆ. ಉದಾಹರಣೆಗೆ, ನೀವು “Ask ChatGPT to write a poem” ಎಂದು ಹೇಳಿದರೆ ಅಥವಾ ಟೈಪ್ ಮಾಡುವಂತಹ ಕಾರ್ಯವನ್ನು ನಿರ್ವಹಿಸುವಂತೆ ChatGPTಯನ್ನು ಸ್ಪಷ್ಟವಾಗಿ ಕೇಳಿದರೆ, ನಂತರದಲ್ಲಿ ಈ ವಿನಂತಿಗಳನ್ನು ನೇರವಾಗಿ ChatGPTಗೆ ಕಳುಹಿಸಲಾಗುತ್ತದೆ.

ChatGPTಯನ್ನು ಬಳಸಲು ಸ್ಪಷ್ಟವಾದ ವಿನಂತಿ ಇರದಿದ್ದರೆ, ChatGPT ಬಳಿ ಉಪಯುಕ್ತ ಫಲಿತಾಂಶಗಳು ಸಿಗಬಹುದೇ ಎಂದು ನಿರ್ಧರಿಸಲು ನಿಮ್ಮ ವಿನಂತಿಯನ್ನು ವಿಶ್ಲೇಷಿಸಲಾಗುತ್ತದೆ. ಅದು ಹಾಗೆ ಆದಲ್ಲಿ, ನೀವು ChatGPTಯನ್ನು ಬಳಸಲು ಬಯಸುವಿರಾ ಎಂದು Siri ನಿಮ್ಮನ್ನು ಕೇಳುತ್ತದೆ. ನೀವು ಆಯ್ಕೆ ಮಾಡಿಕೊಂಡರೆ, Siri ನಿಮ್ಮ ವಿನಂತಿಯನ್ನು ChatGPTಗೆ ಕಳುಹಿಸುತ್ತದೆ ಮತ್ತು ಉತ್ತರವನ್ನು ನೇರವಾಗಿ ಪ್ರಸ್ತುತಿಪಡಿಸುತ್ತದೆ. ಸೆಟ್ಟಿಂಗ್ಸ್ > Apple Intelligence & Siri > ChatGPT ಎಂಬಲ್ಲಿಗೆ ಹೋಗುವ ಮೂಲಕ ಮತ್ತು “ChatGPT ವಿನಂತಿಗಳನ್ನು ದೃಢೀಕರಿಸಿ” ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ChatGPTಗೆ Siri ವಿನಂತಿಗಳನ್ನು ಕಳುಹಿಸಬೇಕೆ ಎಂಬುದನ್ನು ದೃಢೀಕರಿಸಲು Siri ನಿಮ್ಮನ್ನು ಕೇಳುವುದನ್ನು ನಿಷ್ಕ್ರಿಯಗೊಳಿಸುವ ಆಯ್ಕೆಯನ್ನು ಸಹ ನೀವು ಆರಿಸಬಹುದು.

ನೀವು ಬರವಣಿಗೆಯ ಟೂಲ್‌ಗಳು ಅಥವಾ ವಿಷುವಲ್ ಇಂಟೆಲಿಜೆನ್ಸ್‌ನಂತಹ ಇತರ ಬೆಂಬಲಿತ ಫೀಚರ್‌ಗಳನ್ನು ಬಳಸುವಾಗ, ಈ ಪ್ರತಿಯೊಂದು ಫೀಚರ್‌ಗಳಿಗೆ ಪ್ರತ್ಯೇಕವಾಗಿ ChatGPT ಎಕ್ಸ್‌ಟೆನ್ಶನ್ ಅನ್ನು ಬಳಸಲು ಬಯಸುವಿರಾ ಎಂದು ಆಯ್ಕೆಮಾಡಲು ನಿಮಗೆ ಸಾಧ್ಯವಾಗುತ್ತದೆ.

ChatGPTಗೆ ಒದಗಿಸಿದ ಡೇಟ

ChatGPT ಎಕ್ಸ್‌ಟೆನ್ಶನ್ ಬಳಸುವಾಗ, ChatGPTಗೆ ಯಾವ ಕಂಟೆಂಟ್ ಅನ್ನು ಕಳುಹಿಸಬೇಕು ಎಂಬುದನ್ನು ನೀವು ಆಯ್ಕೆ ಮಾಡಬಹುದು. ನಿಮ್ಮ ವಿನಂತಿ ಮತ್ತು ಡಾಕ್ಯುಮಂಟ್‌ಗಳು, ಫೋಟೋಗಳು ಅಥವಾ ಡಾಕ್ಯುಮಂಟ್‌ನ ಕಂಟೆಂಟ್‌ಗಳಂತಹ ಅಟ್ಯಾಟ್‌ಮೆಂಟ್‌ಗಳು, ಹಾಗೆಯೇ ವಿನಂತಿಯನ್ನು ಮಾಡುವಾಗ ಬಳಸಲಾಗುವ ಪ್ರಸ್ತುತ ಸಮಯ ವಲಯ, ದೇಶ, ಸಾಧನದ ಪ್ರಕಾರ, ಭಾಷೆ ಮತ್ತು ಫೀಚರ್‌ನಂತಹ ವಿನಂತಿಯೊಂದಿಗೆ ಸಂಯೋಜಿತವಾಗಿರುವ ಸೀಮಿತ ಡೇಟವನ್ನು ನಿಮ್ಮ ವಿನಂತಿಗೆ ಉತ್ತರಿಸಲು ChatGPTಗೆ ಕಳುಹಿಸಲಾಗುತ್ತದೆ ಮತ್ತು ನಿಮಗೆ ನಿಖರ ಮತ್ತು ಸಂಬಂಧಿತ ಫಲಿತಾಂಶಗಳನ್ನು ಒದಗಿಸಲು ChatGPTಯನ್ನು ಸಕ್ರಿಯಗೊಳಿಸುತ್ತದೆ.

ChatGPT ಎಕ್ಸ್‌ಟೆನ್ಶನ್ ಬಳಸುವಾಗ, ChatGPT ನಿಮ್ಮ IP ವಿಳಾಸವನ್ನು ಅಸ್ಪಷ್ಟಗೊಳಿಸಿದೆ. ನಿಮ್ಮ ಇಂಟರ್ನೆಟ್ ಕನೆಕ್ಷನ್‌ನ IP ವಿಳಾಸವನ್ನು ಭೌಗೋಳಿಕ ಪ್ರದೇಶಕ್ಕೆ ಹೊಂದಿಸುವ ಮೂಲಕ ಅಂದಾಜು ಮಾಡಲಾದ ನಿಮ್ಮ ಸಾಮಾನ್ಯ ಸ್ಥಳವನ್ನು, ವಂಚನೆಯನ್ನು ತಡೆಗಟ್ಟಲು ಮತ್ತು ಅನ್ವಯಿಸುವ ಕಾನೂನನ್ನು ಅನುಸರಿಸಲು ChatGPTಯನ್ನು ಸಕ್ರಿಯಗೊಳಿಸುವಂತಹ ಉದ್ದೇಶಗಳಿಗಾಗಿ ChatGPTಗೆ ಒದಗಿಸಲಾಗಿದೆ.

ಖಾತೆಯ ಹೊರತಾಗಿ ChatGPT ಎಕ್ಸ್‌ಟೆನ್ಶನ್ ಅನ್ನು ಬಳಸುವುದು

ನೀವು ಖಾತೆಯಿಲ್ಲದೆಯೇ ChatGPT ಎಕ್ಸ್‌ಟೆನ್ಶನ್ ಅನ್ನು ಆ್ಯಕ್ಸೆಸ್ ಮಾಡಿದರೆ, ಮೇಲೆ ವಿವರಿಸಿದ ಮಾಹಿತಿಯನ್ನು ಮಾತ್ರ ChatGPTಗೆ ಕಳುಹಿಸಲಾಗುತ್ತದೆ. OpenAI ನಿಮ್ಮ Apple ಖಾತೆಗೆ ಸಂಯೋಜಿತವಾಗಿರುವ ಯಾವುದೇ ಮಾಹಿತಿಯನ್ನು ಸ್ವೀಕರಿಸುವುದಿಲ್ಲ.

OpenAI ನಿಮ್ಮ ವಿನಂತಿಯನ್ನು ಪೂರ್ಣಗೊಳಿಸುವ ಉದ್ದೇಶಕ್ಕಾಗಿ ಮಾತ್ರ ನಿಮ್ಮ ಮಾಹಿತಿಯನ್ನು ಪ್ರಕ್ರಿಯೆಗೊಳಿಸಬೇಕು ಮತ್ತು ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಅಗತ್ಯವಿರುವ ಹೊರತಾಗಿ ನಿಮ್ಮ ಮಾಹಿತಿಯನ್ನು ಅಥವಾ ಅದು ಒದಗಿಸುವ ಯಾವುದೇ ಪ್ರತಿಕ್ರಿಯೆಯನ್ನು ಸಂಗ್ರಹಿಸಬಾರದು. OpenAI ಸಹ ತನ್ನ ಮಾಡಲ್‌ಗಳನ್ನು ಸುಧಾರಿಸಲು ಅಥವಾ ತರಬೇತಿ ನೀಡಲು ನಿಮ್ಮ ಮಾಹಿತಿಯನ್ನು ಬಳಸಿಕೊಳ್ಳುವಂತಿಲ್ಲ.

ChatGPT ಖಾತೆಯ ಮೂಲಕ ChatGPT ಎಕ್ಸ್‌ಟೆನ್ಶನ್ ಅನ್ನು ಬಳಸುವುದು

ನೀವು ChatGPT ಖಾತೆಯನ್ನು ರಚಿಸಲು ಆರಿಸಿಕೊಳ್ಳಬಹುದು ಅಥವಾ ಅಸ್ತಿತ್ವದಲ್ಲಿರುವ ಖಾತೆಯೊಂದಕ್ಕೆ ಸೈನ್ ಇನ್ ಮಾಡಬಹುದು. ನೀವು ChatGPT ಸಬ್‌ಸ್ಕ್ರೈಬರ್ ಆಗಿದ್ದರೆ, ನಿಮ್ಮ Apple ಅನುಭವಗಳಿಂದ ಪಾವತಿಸಿದ ಫೀಚರ್‌ಗಳನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಾಗುತ್ತದೆ.

ನೀವು ಸೈನ್ ಇನ್ ಮಾಡಿದ್ದರೆ, ನಿಮ್ಮ ChatGPT ಖಾತೆ ಸೆಟ್ಟಿಂಗ್ಸ್ ಮತ್ತು OpenAIನ ಡೇಟ ಗೌಪ್ಯತೆ ನೀತಿಗಳು ಅನ್ವಯಿಸುತ್ತವೆ. ಅಂದರೆ, OpenAI ನಿಮ್ಮ ವಿನಂತಿ, ಅಟ್ಯಾಚ್‌ಮೆಂಟ್‌ಗಳು, ಸೆಷನ್ ಇತಿಹಾಸಗಳನ್ನು ಲಾಗ್ ಮಾಡಬಹುದು ಮತ್ತು ಈ ಡೇಟವನ್ನು ತಮ್ಮ ಮಾಡಲ್‌ಗಳಿಗೆ ತರಬೇತಿ ನೀಡಲು ಅಥವಾ ಸುಧಾರಿಸಲು ಬಳಸಿಕೊಳ್ಳಬಹುದು. OpenAIನ ಗೌಪ್ಯತೆ ಅಭ್ಯಾಸಗಳ ಬಗ್ಗೆ ಇನ್ನಷ್ಟು ತಿಳಿಯಲು, https://openai.com/policies/row-privacy-policy ಎಂಬಲ್ಲಿಗೆ ಭೇಟಿ ನೀಡಿ.

Appleಗೆ ಒದಗಿಸಲಾಗಿರುವ ಡೇಟ

ನೀವು ChatGPTಯನ್ನು ಬೆಂಬಲಿತ ಫೀಚರ್‌ಗಳಲ್ಲಿ ಬಳಸುವಾಗ, ಸೇವೆಯನ್ನು ನಿರ್ವಹಿಸಲು ಮತ್ತು ವಂಚನೆಯನ್ನು ತಡೆಯುವ ಉದ್ದೇಶದಿಂದ, ಕಳುಹಿಸಿದ ವಿನಂತಿಗಳ ಸಂಖ್ಯೆ ಅಥವಾ ಪ್ರತಿಕ್ರಿಯೆಯ ಅಥವಾ ವಿನಂತಿಯ ಒಟ್ಟು ಅಂದಾಜಿನ ಗಾತ್ರದಂತಹ ChatGPTಗೆ ಮಾಡಿದ ನಿಮ್ಮ ವಿನಂತಿಗಳು ಮತ್ತು ChatGPT ನಿಮಗೆ ನೀಡಿದ ಪ್ರತಿಕ್ರಿಯೆಯ ಸೀಮಿತ ಮಾಹಿತಿಯನ್ನು Apple ಸಂಗ್ರಹಿಸುತ್ತದೆ.

ನೀವು Siriಯಲ್ಲಿ ChatGPTಯನ್ನು ಬಳಸುವಾಗ, Apple ನಿಮ್ಮ ವಿನಂತಿಯ ಕುರಿತ ಮಾಹಿತಿಯನ್ನು ಸಂಗ್ರಹಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ, www.apple.com/legal/privacy/data/en/ask-siri-dictation ಎಂಬುದಕ್ಕೆ ಭೇಟಿ ನೀಡಿ. ನೀವು Siri ಮತ್ತು ಡಿಕ್ಟೇಷನ್ ಅನ್ನು ಸುಧಾರಿಸುವ ಆಯ್ಕೆಯನ್ನು ಮಾಡಿದರೆ, ನಿಮ್ಮ ವಿನಂತಿಯ ಆಡಿಯೊ ರೆಕಾರ್ಡಿಂಗ್ ಮತ್ತು ಟ್ರಾನ್ಸ್‌ಕ್ರಿಪ್ಟ್ ಹಾಗೂ ಪ್ರತಿಕ್ರಿಯೆಯ ಜೊತೆಗೆ ಸಂಯೋಜಿತವಾಗಿರುವ ಮೆಟಾಡೇಟದಂತಹ ನಿಮ್ಮ ವಿನಂತಿಯ ಕುರಿತ ಹೆಚ್ಚುವರಿ ಡೇಟವನ್ನು Apple ಲಾಗ್ ಮಾಡಬಹುದು. ನಿಮ್ಮ Apple ಖಾತೆಯ ಜೊತೆಗೆ ಈ ಯಾವುದೇ ಡೇಟವು ಸಂಯೋಜಿತವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ, www.apple.com/legal/privacy/data/en/improve-siri-dictation ಎಂಬುದಕ್ಕೆ ಭೇಟಿ ನೀಡಿ.

ನಿಮ್ಮ Apple ಸಾಧನದ ಮೂಲಕ ಪ್ರಸ್ತುತ ChatGPT ಯೋಜನೆಯನ್ನು ಅಪ್‌ಗ್ರೇಡ್ ಮಾಡಲು ನೀವು ಕ್ರಮಗಳನ್ನು ಕೈಗೊಂಡರೆ, ನಿಮ್ಮ ಅನುಭವವನ್ನು ಅರ್ಥಮಾಡಿಕೊಳ್ಳಲು ಮತ್ತು ಸುಧಾರಿಸಲು ಅಪ್‌ಗ್ರೇಡ್ ಅನುಭವದೊಂದಿಗಿನ ನಿಮ್ಮ ಸಂವಾದಗಳಿಗೆ ಸಂಬಂಧಿಸಿದ ವ್ಯೂ ಮತ್ತು ಕ್ಲಿಕ್‌ಗಳಂತಹ ಸೀಮಿತ ಮಾಹಿತಿಯನ್ನು Apple ಸಂಗ್ರಹಿಸಬಹುದು. ನಿಮ್ಮ Apple ಖಾತೆಯ ಜೊತೆಗೆ ಈ ಡೇಟವು ಸಂಯೋಜಿತವಾಗಿಲ್ಲ.

ಒಂದು ಕಳವಳವನ್ನು ವರದಿ ಮಾಡುವುದು

ನಿಮಗೆ ChatGPT ಎಕ್ಸ್‌ಟೆನ್ಶನ್ ಬಗ್ಗೆ ಸಮಸ್ಯೆಯೊಂದನ್ನು ವರದಿ ಮಾಡಬೇಕೆಂದರೆ, ನೀವು ‘ಕಳವಳವನ್ನು ವರದಿಮಾಡಿ’ ಮೂಲಕ ಅದನ್ನು ವರದಿ ಮಾಡಬಹುದು. ನೀವು ಒಂದು ಕಳವಳವನ್ನು ವರದಿ ಮಾಡುವಾಗ, ನೀವು OpenAI ಜೊತೆಗೆ ಕಳವಳದ ಕುರಿತು ಮಾಹಿತಿ ಹಂಚಿಕೊಳ್ಳಲು ಪ್ರತ್ಯೇಕವಾದ ಆಯ್ಕೆಯನ್ನು ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ, www.apple.com/legal/privacy/data/en/report-concern ಎಂಬುದಕ್ಕೆ ಭೇಟಿ ನೀಡಿ.

2025-12-12