ತುರ್ತು SOS & ಗೌಪ್ಯತೆ
ನಿಮ್ಮ ಮಾಹಿತಿಯನ್ನು ರಕ್ಷಿಸಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎಂಬುದನ್ನು ನಿರ್ಧರಿಸುಲು ನಿಮಗೆ ಅನುವು ಮಾಡಿಕೊಡಲು ತುರ್ತು SOS ಅನ್ನು ವಿನ್ಯಾಸಗೊಳಿಸಲಾಗಿದೆ.
![]()
- ತುರ್ತು ಸೇವೆಗಳಿಗೆ ಕರೆ ಮಾಡಲು ತುರ್ತು SOS ಅನ್ನು ಬಳಸುವಾಗ, ರವಾನೆದಾರರು ನಿಮಗೆ ಸಹಾಯ ಮಾಡಲು ಅನುಮತಿಸುವ ಉದ್ದೇಶಕ್ಕಾಗಿ, ನೀವು ಸ್ಥಳ ಸೇವೆಗಳನ್ನು ಸಕ್ರಿಯಗೊಳಿಸಲಿ ಅಥವಾ ಇಲ್ಲದಿರಲಿ, ಕರೆಯಲ್ಲಿ ನಿಮ್ಮ ಸ್ಥಳದ ಮಾಹಿತಿಯನ್ನು ಸೇರಿಸಿರಬಹುದು.
- ಕರೆ ಕೊನೆಗೊಂಡರೆ ಮತ್ತು ನೀವು ಸಂದೇಶ ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿರದೆ ಇದ್ದಲ್ಲಿ, ನಿಮ್ಮ ತುರ್ತು ಸಂಪರ್ಕಗಳಿಗೆ ನಿಮ್ಮ ಸ್ಥಳ ಮತ್ತು ನೋಟಿಫಿಕೇಷನ್ ಜೊತೆಗೆ ಸಂದೇಶವನ್ನು ಕಳುಹಿಸಬಹುದು. ನೀವು ತುರ್ತು ಸೇವೆಗಳಿಗೆ ಕರೆ ಮಾಡಿದ್ದೀರಿ ಎಂದು ನೋಟಿಫಿಕೇಷನ್‌ಗಳಲ್ಲಿ ತಿಳಿಸಲಾಗುತ್ತದೆ.
ತುರ್ತು SOS ಜೊತೆಗೆ, ನೀವು ತ್ವರಿತವಾಗಿ ಮತ್ತು ಸುಲಭವಾಗಿ ಸಹಾಯಕ್ಕಾಗಿ ಕರೆ ಮಾಡಬಹುದು ಮತ್ತು ನಿಮ್ಮ ತುರ್ತು ಸಂಪರ್ಕಗಳನ್ನು ಎಚ್ಚರಿಸಬಹುದು. ನೀವು ತುರ್ತು SOSಗೆ ಕರೆ ಮಾಡಿದಾಗ, ನಿಮ್ಮ ಸಾಧನವು ಸ್ವಯಂಚಾಲಿತವಾಗಿ ಸ್ಥಳೀಯ ತುರ್ತು ಸಂಖ್ಯೆಗೆ ಕರೆ ಮಾಡುತ್ತದೆ. ಕೆಲವು ದೇಶಗಳು ಮತ್ತು ಪ್ರದೇಶಗಳಲ್ಲಿ, ನಿಮ್ಮ ತುರ್ತು ಸೇವೆಯೆಂದು ನಿಯೋಜಸಲು ನೀವು ಬಯಸುವ ಸೇವೆಯನ್ನು ನೀವು ಆಯ್ಕೆ ಮಾಡಬೇಕಾಗಬಹುದು. ನೀವು ಸ್ಥಳ ಸೇವೆಗಳನ್ನು ಸಕ್ರಿಯಗೊಳಿಸಲಿ ಅಥವಾ ಇಲ್ಲದಿರಲಿ, ನಿಮಗೆ ಸಹಾಯ ಮಾಡಲು ರವಾನೆದಾರರನ್ನು ಅನುಮತಿಸಲು ಈ ಕರೆ ನಿಮ್ಮ ಸ್ಥಳವನ್ನು ಒಳಗೊಂಡಿರಬಹುದು. ಕರೆ ಕೊನೆಗೊಂಡ ನಂತರ, ನೀವು ತುರ್ತು ಸೇವೆಗಳಿಗೆ ಕರೆ ಮಾಡಿದ್ದೀರಿ ಎಂದು ಹೇಳುವ ಸಂದೇಶದೊಂದಿಗೆ ನಿಮ್ಮ ತುರ್ತು ಸಂಪರ್ಕಗಳಿಗೆ ಸೂಚಿಸಲು ನೀವು ಆಯ್ಕೆ ಮಾಡಬಹುದು. ಈ ಸಂದೇಶವು ನಿಮ್ಮ ಪ್ರಸ್ತುತ ಸ್ಥಳವನ್ನು ಸಹ ಒಳಗೊಂಡಿದೆ. iPhoneನಲ್ಲಿನ ಆರೋಗ್ಯ ಆ್ಯಪ್‌ನಲ್ಲಿ ನಿಮ್ಮ ಮೆಡಿಕಲ್ IDಯನ್ನು ಎಡಿಟ್ ಮಾಡುವ ಮೂಲಕ ನಿಮ್ಮ ತುರ್ತು ಸಂಪರ್ಕಗಳನ್ನು ನೀವು ನಿರ್ವಹಿಸಬಹುದು.
ಸಂದೇಶ ಆ್ಯಪ್ ಬಳಸಿ, ನಿಮ್ಮ ಸ್ಥಳ ಬದಲಾದಂತೆ ಸೀಮಿತ ಅವಧಿಯವರೆಗೆ ನಿಮ್ಮ ಸಾಧನವು ನಿಮ್ಮ ತುರ್ತು ಸಂಪರ್ಕಗಳಿಗೆ ಅಪ್‌ಡೇಟ್‌ಗಳನ್ನು ಕಳುಹಿಸುತ್ತದೆ. ಇದು ಸಂಭವಿಸಿದಾಗ ನೀವು ನೋಟಿಫಿಕೇಷನ್ ಅನ್ನು ಸ್ವೀಕರಿಸುತ್ತೀರಿ. ನಿಮ್ಮ Apple Watchನಲ್ಲಿ ನೀವು ತುರ್ತು SOS ಅನ್ನು ಬಳಸಿದಾಗ, ನಿಮ್ಮ Apple Watchನಲ್ಲಿನ ನೋಟಿಫಿಕೇಷನ್‌ನಲ್ಲಿ ಹಂಚಿಕೊಳ್ಳುವುದನ್ನು ನಿಲ್ಲಿಸಿ ಎಂಬುದನ್ನು ಟ್ಯಾಪ್ ಮಾಡುವ ಮೂಲಕ ನೀವು ಈ ಅಪ್‌ಡೇಟ್‌ಗಳನ್ನು ನಿಲ್ಲಿಸಬಹುದು. ನಿಮ್ಮ iPhoneನಲ್ಲಿ ನೀವು ತುರ್ತು SOS ಅನ್ನು ಬಳಸಿದಾಗ, ನಿಮ್ಮ iPhoneನಲ್ಲಿ ಸ್ಥಿತಿ ಪಟ್ಟಿಯನ್ನು ಟ್ಯಾಪ್ ಮಾಡುವ ಮೂಲಕ ಮತ್ತು ತುರ್ತು ಸ್ಥಳ ಹಂಚಿಕೆಯನ್ನು ನಿಲ್ಲಿಸಿ ಎಂಬುದನ್ನು ಆಯ್ಕೆ ಮಾಡುವ ಮೂಲಕ ನೀವು ಈ ಅಪ್‌ಡೇಟ್‌ಗಳನ್ನು ನಿಲ್ಲಿಸಬಹುದು.
ಸ್ಥಳ ಸೇವೆಗಳನ್ನು ನಿಷ್ಕ್ರಿಯಗೊಳಿಸಿದರೆ, ನಿಮ್ಮ ಪ್ರಸ್ತುತ ಸ್ಥಳದ ಕುರಿತು ತುರ್ತು ಸಂಪರ್ಕಗಳಿಗೆ ತಿಳಿಸಲು ಅವುಗಳನ್ನು ತಾತ್ಕಾಲಿಕವಾಗಿ ಸಕ್ರಿಯಗೊಳಿಸಲಾಗುತ್ತದೆ. ನಿಮ್ಮ ಸ್ಥಳವನ್ನು ಹಂಚಿಕೊಳ್ಳುವಾಗ, 24-ಗಂಟೆಗಳ ಅವಧಿಯಲ್ಲಿ ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಅದನ್ನು ನಿಲ್ಲಿಸಲು ನೀವು ರಿಮೈಂಡರ್ ಅನ್ನು ಪಡೆಯುತ್ತೀರಿ. ನಿಮ್ಮ ತುರ್ತು ಸಂಪರ್ಕಗಳಿಗೆ ನಿಮ್ಮ ಸ್ಥಳವನ್ನು ಕಳುಹಿಸಲು ನೀವು ಬಯಸದಿದ್ದರೆ, ನಿಮ್ಮ iPhoneನಲ್ಲಿ ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು > ಸಿಸ್ಟಂ ಸೇವೆಗಳು ಎಂಬಲ್ಲಿಗೆ ಹೋಗಿ ಮತ್ತು “ತುರ್ತು ಕರೆಗಳು ಮತ್ತು SOS” ಅನ್ನು ಆಫ್ ಮಾಡಲು ಟ್ಯಾಪ್ ಮಾಡಿ.
2025-12-12