Game Center ಹಾಗೂ ಗೌಪ್ಯತೆ

ನೀವು ಯಾವ ಗೇಮ್ ಆಡುತ್ತೀರಿ ಮತ್ತು ನಿಮ್ಮ ಆಟದ ಚಟುವಟಿಕೆ ಸೇರಿದಂತೆ ನಿಮ್ಮ ಗೇಮ್‌ಪ್ಲೇ ಮಾಹಿತಿಯನ್ನು Game Center ಅನ್ನು ಸುಧಾರಿಸಲು ಬಳಸಲಾಗುತ್ತದೆ. ನಿಮ್ಮ ಅಡ್ಡಹೆಸರು, ಅವತಾರ್, Arcade ಸಬ್‌ಸ್ಕ್ರಿಪ್ಶನ್ ಸ್ಥಿತಿ, ಸ್ಕೋರ್‌ಗಳು ಮತ್ತು ನೀವು ಹಂಚಿಕೊಳ್ಳಲು ಆಯ್ಕೆ ಮಾಡುವ ಇತರ ಚಟುವಟಿಕೆಯ ಮಾಹಿತಿಯು Game Center ಬಳಕೆದಾರರಿಗೆ ಗೋಚರಿಸುತ್ತದೆ.
 

ನಿಮ್ಮ ಮಾಹಿತಿಯನ್ನು ರಕ್ಷಿಸಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎಂಬುದನ್ನು ಆಯ್ಕೆ ಮಾಡಲು ನಿಮಗೆ ಅನುವುಮಾಡಿಕೊಡಲು Game Center ಅನ್ನು ವಿನ್ಯಾಸಗೊಳಿಸಲಾಗಿದೆ.


Privacy Icon

  • Game Center ಲೀಡರ್‌ಬೋರ್ಡ್‌ಗಳಲ್ಲಿ ಭಾಗವಹಿಸುವಿಕೆಯಂತಹ ಗೇಮ್-ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಿಮಗೆ ಅನುಮತಿಸುತ್ತದೆ; ಈ ಚಟುವಟಿಕೆಗಳಲ್ಲಿ ಮಲ್ಟಿಪ್ಲೇಯರ್ ಗೇಮ್; ಸ್ನೇಹಿತರನ್ನು ಹುಡುಕುವುದು, ನೋಡುವುದು ಮತ್ತು ಸ್ನೇಹಿತರಿಗೆ ಸವಾಲು ಹಾಕುವುದು; ಮತ್ತು ಸಾಧನೆಗಳನ್ನು ಟ್ರ್ಯಾಕ್ ಮಾಡುವುದು ಸೇರಿರುತ್ತವೆ.
  • ನೀವು Game Centerನಲ್ಲಿ ಸೈನ್ ಇನ್ ಆದಾಗ Game Centerನಿಂದ ಸಕ್ರಿಯಗೊಂಡ ಗೇಮ್‌ಗಳನ್ನು ಆಡಿದಾಗ, Apple ನೀವು ಆಡುವ ಗೇಮ್‌ಗಳು ಹಾಗೂ ನಿಮ್ಮ ಗೇಮ್ ಚಟುವಟಿಕೆಗಳಂತಹ ಮಾಹಿತಿಯನ್ನು ಸಂಗ್ರಹಿಸುತ್ತದೆ. ಈ ಮಾಹಿತಿಯನ್ನು ನಿಮ್ಮ ಅಧಿಕವಾದ ಸ್ಕೋರ್‌ಗಳು, ಸಾಧನೆಗಳು, ಹಾಗೂ ಸವಾಲುಗಳನ್ನು ಸುಧಾರಿಸಲು ಹಾಗೂ ನಿಮಗೆ ಹಾಗೂ ಇತರರಿಗೆ Game Center ಅನ್ನು ಸುಧಾರಿಸಲು ಬಳಸಲಾಗುತ್ತದೆ.
  • ನೀವು ಜೊತೆಗೂಡಿ ಆಡುವ ನಿಮ್ಮ Game Center ಸ್ನೇಹಿತರು ಹಾಗೂ ನೀವು ಅವರೊಂದಿಗೆ ಯಾವಾಗ ಆಡುತ್ತೀರಿ ಎಂಬುದರ ಪಟ್ಟಿಯನ್ನು ಸಹ Apple ಸಂಗ್ರಹಿಸುತ್ತದೆ. ಈ ಮಾಹಿತಿಯನ್ನು ನೀವು ಮಲ್ಟಿಪ್ಲೇಯರ್ ಗೇಮ್‌ಗಳಲ್ಲಿ ಮತ್ತೆ ಸುಲಭವಾಗಿ ತೊಡಗಿಕೊಳ್ಳಲು ಸಹಾಯ ಮಾಡಲು, ಪರಸ್ಪರರ ಉನ್ನತ ಸ್ಕೋರ್‌ಗಳನ್ನು ಬೇಗ ನೋಡಲು, ಹಾಗೂ ನಿಮಗೆ ಹಾಗೂ ಇತರರಿಗೆ Game Center ಅನ್ನು ಸುಧಾರಿಸಲು ಬಳಸಲಾಗುತ್ತದೆ.
  • ನಿಮ್ಮ Game Centerನ ಕಿರು ಹೆಸರು, ಅವತಾರ, ಸ್ಕೋರ್‌ಗಳು, ಹಾಗೂ Arcade ಸಬ್‌ಸ್ಕ್ರಿಪ್ಶನ್ ಸ್ಥಿತಿಯು ಎಲ್ಲಾ Game Center ಬಳಕೆದಾರರಿಗೆ ಕಾಣುತ್ತದೆ. ನೀವು ಆಡಿದ ಗೇಮ್‌ಗಳು ಹಾಗೂ ಸಾಧನೆಯ ಪ್ರಗತಿಗಳಂಥ ಇತರ Game Center ಚಟುವಟಿಕೆಯ ಮಾಹಿತಿಯನ್ನೂ ಕೂಡ ನಿಮ್ಮ Game Center ಸ್ನೇಹಿತರು ಅಥವಾ ಎಲ್ಲಾ Game Center ಬಳಕೆದಾರರ ಜೊತೆಗೆ ಹಂಚಿಕೊಳ್ಳಬಹುದು. ಈ ಮಾಹಿತಿಯು Game Centerನಲ್ಲಿ ಹಾಗೂ App Store, Apple Games ಹಾಗೂ Apple Arcadeನಂತಹ ಇತರ Apple ಸೇವೆಗಳಲ್ಲಿ ನೀವು ಅದನ್ನು ಹಂಚಿಕೊಳ್ಳುವವರಿಗೆ ಗೋಚರಿಸುತ್ತದೆ. ನಿಮ್ಮ ಹೆಸರು ನಿಮ್ಮ Game Center ಸ್ನೇಹಿತರಿಗೂ ಕಾಣಬಹುದು.
  • ತಮ್ಮ Game Center ಅಡ್ಡಹೆಸರನ್ನು ತಮ್ಮ ಸಂಪರ್ಕಗಳ ಕಾರ್ಡ್‌ಗೆ ಲಿಂಕ್ ಮಾಡಿದ ಸ್ನೇಹಿತರಿಗೆ ಸಲಹೆ ನೀಡಲು Apple ನಿಮ್ಮ ಸಂಪರ್ಕಗಳಿಂದ ಗುರುತಿಸಲಾಗದ ಮಾಹಿತಿಯನ್ನು ಬಳಸುತ್ತದೆ, ಆದರೆ ಅದು ಈ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಈ ಶಿಫಾರಸುಗಳ ಕುರಿತು ಸಹಾಯ ಮಾಡಲು Game Center ಆನ್-ಡಿವೈಸ್ ಪ್ರೊಸೆಸಿಂಗ್ ಅನ್ನು ಬಳಸುತ್ತದೆ.

ನಿಮ್ಮ ಮಾಹಿತಿಯ ಗೌಪ್ಯತೆ ಮತ್ತು ಭದ್ರತೆಯನ್ನು ರಕ್ಷಿಸುವುದು Appleನಲ್ಲಿರುವ ಪ್ರತಿಯೊಬ್ಬರ ಆದ್ಯತೆಯಾಗಿದೆ. ನಿಮ್ಮ ಅನುಭವವನ್ನು ಸುಧಾರಿಸಲು ಅಗತ್ಯವಾದ ಡೇಟವನ್ನು ಸಂಗ್ರಹಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ನಾವು ಡೇಟವನ್ನು ಸಂಗ್ರಹಿಸಿದಾಗ, ನಾವು ಏನನ್ನು ಸಂಗ್ರಹಿಸುತ್ತೇವೆ ಮತ್ತು ನಮಗೆ ಅದು ಏಕೆ ಬೇಕು ಎಂಬುದನ್ನು ನೀವು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ನಾವು ಭಾವಿಸುತ್ತೇವೆ, ಇದರಿಂದ ನೀವು ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಬಹುದು. ಪ್ರತಿಯೊಂದು Apple ಉತ್ಪನ್ನ ಮತ್ತು ಸೇವೆಯಂತೆ, ಈ ತತ್ವಗಳನ್ನು ಗಮನದಲ್ಲಿಟ್ಟುಕೊಂಡು Game Center ಅನ್ನು ವಿನ್ಯಾಸಗೊಳಿಸಲಾಗಿದೆ.

Game Center ಅನ್ನು ಒದಗಿಸುವುದು ಮತ್ತು ಸುಧಾರಿಸುವುದು

ಒಮ್ಮೆ ನೀವು Game Centerಗೆ ಆನ್‌ಬೋರ್ಡ್ ಆದ ನಂತರ, ಲೀಡರ್‌ಬೋರ್ಡ್‌ಗಳಲ್ಲಿ ಭಾಗವಹಿಸುವಿಕೆಯಂತಹ ಗೇಮ್-ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ; ಈ ಚಟುವಟಿಕೆಗಳಲ್ಲಿ ಮಲ್ಟಿಪ್ಲೇಯರ್ ಗೇಮ್‌ಗಳು; ಸ್ನೇಹಿತರನ್ನು ಹುಡುಕುವುದು, ನೋಡುವುದು ಮತ್ತು ಸ್ನೇಹಿತರಿಗೆ ಸವಾಲು ಹಾಕುವುದು ಮತ್ತು ಸಾಧನೆಗಳನ್ನು ಟ್ರ್ಯಾಕ್ ಮಾಡುವುದು ಸೇರಿರುತ್ತವೆ. ನೀವು Game Center ಅನ್ನು ಬಳಸುವಾಗ, ನೀವು ಆಡುವ ಗೇಮ್‌ಗಳು, ನೀವು ಯಾವಾಗ ಅವುಗಳನ್ನು ಆಡುತ್ತೀರಿ ಮತ್ತು ನೀವು ಯಾರೊಂದಿಗೆ ಆಡುತ್ತೀರಿ ಎಂಬ ಮಾಹಿತಿ; ನಿಮ್ಮ ಸ್ಕೋರ್‌ಗಳು ಮತ್ತು ಸಾಧನೆಗಳು; ಹಾಗೂ ನೀವು ಕಳುಹಿಸುವ ಹಾಗೂ ಸ್ವೀಕರಿಸುವ ಚಾಲೆಂಜ್‌ಗಳನ್ನೊಳಗೊಂಡ ಮಾಹಿತಿಯನ್ನು Apple ಸಂಗ್ರಹಿಸುತ್ತದೆ. ಮಲ್ಟಿಪ್ಲೇಯರ್ ಗೇಮ್‌ಗಳಲ್ಲಿ ಸುಲಭವಾಗಿ ಪುನಃ ತೊಡಗಿಸಿಕೊಳ್ಳಲು ಮತ್ತು ಇತರರ ಅತ್ಯಧಿಕ ಸ್ಕೋರ್‌ಗಳನ್ನು ತ್ವರಿತವಾಗಿ ನೋಡಲು ನಿಮಗೆ ಸಹಾಯ ಮಾಡುವುದಕ್ಕಾಗಿ ನಿಮ್ಮ Game Center ಸ್ನೇಹಿತರು ಮತ್ತು ನಿಮ್ಮ ಜೊತೆ ಆಡುವ ಪ್ಲೇಯರ್‌ಗಳ ಪಟ್ಟಿ ಹಾಗೂ ನೀವು ಅವರೊಂದಿಗೆ ಯಾವಾಗ ಆಡುತ್ತೀರಿ ಎಂಬ ಮಾಹಿತಿಯನ್ನು ಸಹ Apple ಸಂಗ್ರಹಿಸುತ್ತದೆ. ಈ ಮಾಹಿತಿ ನಿಮ್ಮ Apple ಖಾತೆಯೊಂದಿಗೆ ಸಂಯೋಜಿಸಿಲ್ಲ.

Apple ನೀವು ಏನನ್ನು ವೀಕ್ಷಿಸುತ್ತೀರಿ ಮತ್ತು ಕ್ಲಿಕ್ ಮಾಡುತ್ತೀರಿ ಎಂಬ ಮಾಹಿತಿ, ನೀವು ಗೇಮ್ ಕಂಟ್ರೋಲರ್ ಅನ್ನು ಬಳಸುವಿರೋ ಅಥವಾ ಇಲ್ಲವೋ ಎಂಬ ಮಾಹಿತಿ, ಕಂಟ್ರೋಲರ್ ಬಗ್ಗೆ ವಿವರಗಳು ಮತ್ತು ನಿಮ್ಮ ಸ್ನೇಹಿತರ ವಿನಂತಿಗಳಂತಹ ಸೆಟ್ಟಿಂಗ್ಸ್ ಮೂಲಕ ನೀವು ಆ್ಯಕ್ಸೆಸ್ ಮಾಡುವ ಫೀಚರ್‌ಗಳೂ ಸೇರಿದಂತೆ Game Center ಫೀಚರ್‌ಗಳೊಂದಿಗಿನ ನಿಮ್ಮ ಸಂವಹನದ ಕುರಿತ ಮಾಹಿತಿಯನ್ನು ಸಂಗ್ರಹಿಸುತ್ತದೆ. ನೀವು Game Centerಗೆ ಸೈನ್ ಇನ್ ಮಾಡಿದಾಗ ಮತ್ತು ಕಂಟ್ರೋಲ್ ಸೆಂಟರ್ ಮೂಲಕ ಗೇಮ್ ಓವರ್‌ಲೇ ಮತ್ತು ಗೇಮ್ ಕಂಟ್ರೋಲ್‌ಗಳನ್ನು ಆ್ಯಕ್ಸೆಸ್ ಮಾಡಿದಾಗ, ಓವರ್‌ಲೇ ಮತ್ತು ಕಂಟ್ರೋಲ್‌ಗಳೊಂದಿಗಿನ ನಿಮ್ಮ ಸಂವಹನಗಳನ್ನು Apple ಸಂಗ್ರಹಿಸುತ್ತದೆ. ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿಲ್ಲದ ರ್‍ಯಾಂಡಮ್ ಐಡೆಂಟಿಫೈಯರ್ ಅನ್ನು ಈ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ಈ ಐಡೆಂಟಿಫೈಯರ್ ಅನ್ನು ರೀಸೆಟ್ ಮಾಡಲು, ಸೆಟ್ಟಿಂಗ್ಸ್ > Game Center > ಐಡೆಂಟಿಫೈಯರ್ ರೀಸೆಟ್ ಮಾಡಿ ಎಂಬಲ್ಲಿಗೆ ಹೋಗಿ. Macನಲ್ಲಿ, ಸಿಸ್ಟಂ ಸೆಟ್ಟಿಂಗ್ಸ್ > Game Center > ಐಡೆಂಟಿಫೈಯರ್ ಅನ್ನು ರೀಸೆಟ್ ಮಾಡಿ ಎಂಬಲ್ಲಿಗೆ ಹೋಗಿ.

Game Center ಮತ್ತು Game Center ಬಳಸುವ ಇತರೆ Apple ಸೇವೆಗಳನ್ನು ನಿಮಗಾಗಿ ಮತ್ತು ಇತರರಿಗಾಗಿ ಸುಧಾರಿಸಲು ಮತ್ತು ಆಪ್ಟಿಮೈಸ್ ಮಾಡಲು ಈ ವಿಭಾಗದಲ್ಲಿ ವಿವರಿಸಲಾದ ಮಾಹಿತಿಯನ್ನು ಬಳಸಬಹುದು.

ಇತರ ಆಟಗಾರರು ಹಾಗೂ ಸ್ನೇಹಿತರ ಜ್ತೊಗೆ ಆಟವಾಡುವುದು

ನಿಮ್ಮ Game Centerನ ಕಿರು ಹೆಸರು, ಅವತಾರ, ಸ್ಕೋರ್‌ಗಳು, ಹಾಗೂ Arcade ಸಬ್‌ಸ್ಕ್ರಿಪ್ಶನ್ ಸ್ಥಿತಿಯು ಜಾಗತಿಕ ಲೀಡರ್‌ಬೋರ್ಡ್‌ಗಳಿರುವ ಗೇಮ್‌ಗಳಿಗಾಗಿ ಎಲ್ಲಾ Game Center ಬಳಕೆದಾರರಿಗೆ ಕಾಣುತ್ತದೆ. ನೀವು ನಿಮ್ಮ Game Center ಸ್ನೇಹಿತರು ಅಥವಾ ಎಲ್ಲಾ Game Center ಬಳಕೆದಾರರ ಜೊತೆಗೆ ಇತರ Game Center ಚಟುವಟಿಕೆಯ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ಆಯ್ಕೆ ಮಾಡಬಹುದು. ಈ ಮಾಹಿತಿ ನೀವು ಆಡಿದ ಗೇಮ್‌ಗಳು ಹಾಗೂ ನಿಮ್ಮ ಸಾಧನೆಯ ಪ್ರಗತಿಯನ್ನೂ ಒಳಗೊಂಡಿರುತ್ತದೆ ಹಾಗೂ Game Centerನಲ್ಲಿ ಹಾಗೂ App Store ಹಾಗೂ Apple Arcadeನಂತಹ ಇತರ Apple ಸೇವೆಗಳಲ್ಲಿ ನೀವು ಅದನ್ನು ಹಂಚಿಕೊಳ್ಳುವವರಿಗೆ ಕಾಣುತ್ತದೆ. ಮಕ್ಕಳ Game Center ಚಟುವಟಿಕೆಯ ಮಾಹಿತಿಯನ್ನು ಅವರ Game Center ಸ್ನೇಹಿತರ ಜೊತೆಗೆ ಮಾತ್ರವೇ ಹಂಚಿಕೊಳ್ಳಬಹುದು. ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ಸೆಟ್ಟಿಂಗ್ಸ್ ಆ್ಯಪ್ > Game Center > ಚಟುವಟಿಕೆ ಹಂಚಿಕೆ ಎಂಬಲ್ಲಿಗೆ ಹೋಗುವ ಮೂಲಕ ಹಾಗೂ Macನಲ್ಲಿ ಸಿಸ್ಟಂ ಸೆಟ್ಟಿಂಗ್ಸ್ ಆ್ಯಪ್ > Game Center > ಚಟುವಟಿಕೆ ಹಂಚಿಕೆ ಎಂಬಲ್ಲಿಗೆ ಹೋಗುವ ಮೂಲಕ ನಿಮ್ಮ ಚಟುವಟಿಕೆ ಹಂಚಿಕೆಯ ಸ್ಥಿತಿಯನ್ನು ನೀವು ನೋಡಬಹುದು ಹಾಗೂ ಬದಲಾಯಿಸಬಹುದು.

ನಿಮ್ಮ Game Center ಕಿರುಹೆಸರನ್ನು ನಿಮ್ಮ ಕಾಂಟ್ಯಾಕ್ಟ್ ಕಾರ್ಡ್ ಜೊತೆಗೆ ಲಿಂಕ್ ಮಾಡಿದಾಗ, Game Center ನಿಮ್ಮ Apple ಖಾತೆಯೊಂದಿಗೆ ಸಂಯೋಜನೆಗೊಂಡಿರುವ ಈಮೇಲ್ ವಿಳಾಸ ಮತ್ತು ಫೋನ್ ಸಂಖ್ಯೆಯನ್ನು ಬಳಸುತ್ತದೆ. ಇದು ನಿಮ್ಮ Game Center ಸ್ನೇಹಿತರು ಅವರ ಸಂಪರ್ಕ ಆ್ಯಪ್‌ನಲ್ಲಿ ನಿಮಗೆ ಇರಿಸಿರುವ ಹೆಸರಿನ ಆಧಾರದ ಮೇಲೆ ನಿಮ್ಮನ್ನು ಸುಲಭವಾಗಿ ಕಂಡುಹಿಡಿಯಲು ಅನುಮತಿಸುತ್ತದೆ. ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ಸೆಟ್ಟಿಂಗ್ಸ್ ಆ್ಯಪ್ > Game Center > ನಿಮ್ಮನ್ನು ಹುಡುಕಲು ಸ್ನೇಹಿತರಿಗೆ ಸಹಾಯ ಮಾಡಿ ಎಂಬಲ್ಲಿಗೆ ಹೋಗುವ ಮೂಲಕ ಹಾಗೂ Macನಲ್ಲಿ ಸಿಸ್ಟಂ ಸೆಟ್ಟಿಂಗ್ಸ್ > Game Center > ನಿಮ್ಮನ್ನು ಹುಡುಕಲು ಸ್ನೇಹಿತರಿಗೆ ಸಹಾಯ ಮಾಡಿ ಎಂಬಲ್ಲಿಗೆ ಹೋಗುವ ಮೂಲಕ ನೀವು ಈ ಸೆಟ್ಟಿಂಗ್ ಅನ್ನು ನಿಯಂತ್ರಿಸಬಹುದು.

ನೀವು ಮಲ್ಟಿಪ್ಲೇಯರ್ ಕಾರ್ಯವನ್ನು ಬೆಂಬಲಿಸುವ ಒಂದು ಗೇಮ್ ಅನ್ನು ಆಡುತ್ತಿರುವಾಗ ಅದೇ Wi-Fi ನೆಟ್‌ವರ್ಕ್‌ನಲ್ಲಿ ಅದೇ ಗೇಮ್ ಅನ್ನು ಆ್ಯಕ್ಸೆಸ್ ಮಾಡುತ್ತಿರುವ, ಅಥವಾ Bluetooth ರೇಂಜ್‌ನಲ್ಲಿರುವ ಇತರ Game Center ಬಳಕೆದಾರರು ನೀವು ಸಮೀಪದಲ್ಲಿದ್ದೀರಿ ಎನ್ನುವುದನ್ನು ಹಾಗೂ ನಿಮ್ಮ ಕಿರುಹೆಸರು ಹಾಗೂ ಅವತಾರವನ್ನು ನೋಡಬಹುದು. ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ಸೆಟ್ಟಿಂಗ್ಸ್ > Game Centerಗೆ ಹೋಗಿ, ನಂತರ ಸಮೀಪದಲ್ಲಿರುವ ಆಟಗಾರರನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ನೀವು ಈ ಫೀಚರ್ ಅನ್ನು ನಿಷ್ಕ್ರಿಯಗೊಳಿಸಬಹುದು. Macನಲ್ಲಿ, ಸಿಸ್ಟಂ ಸೆಟ್ಟಿಂಗ್ಸ್ > Game Center ಎಂಬಲ್ಲಿಗೆ ಹೋಗಿ ಹಾಗೂ “ಸಮೀಪದ ಆಟಗಾರರು” ಎಂಬುದನ್ನು ಆಫ್ ಮಾಡಲು ಕ್ಲಿಕ್ ಮಾಡಿ. tvOSನಲ್ಲಿ, ಸೆಟ್ಟಿಂಗ್ಸ್ > ಪ್ರೊಫೈಲ್‌ಗಳು ಹಾಗೂ ಖಾತೆಗಳು > [ಬಳಕೆದಾರರ ಹೆಸರು] > Game Center ಎಂಬಲ್ಲಿಗೆ ಹೋಗಿ ಹಾಗೂ ಸಮೀಪದ ಆಟಗಾರರು ಎಂಬುದನ್ನು ಆಫ್ ಮಾಡಿ.

ತಮ್ಮ Game Center ಅಡ್ಡಹೆಸರುಗಳನ್ನು ತಮ್ಮ ಸಂಪರ್ಕದ ಕಾರ್ಡ್‌ಗಳ ಜೊತೆಗೆ ಲಿಂಕ್ ಮಾಡುವ ಆಯ್ಕೆಯನ್ನು ಮಾಡಿರುವ ನಿಮ್ಮ ಸಂಪರ್ಕಗಳ ಕುರಿತಾದ ಗುರುತಿಸಲಾಗದ ಮಾಹಿತಿಯನ್ನು Apple ಸ್ವೀಕರಿಸುತ್ತದೆ. ಈ ಮಾಹಿತಿಯನ್ನು Game Center ಸರ್ಫೇಸ್‌ಗಳಲ್ಲಿ ನಿಮಗೆ ತೋರಿಸಲಾದ ಸ್ನೇಹಿತರ ಶಿಫಾರಸುಗಳನ್ನು ವರ್ಧಿಸಲು ಬಳಸಲಾಗುತ್ತದರೂ Apple ಇದನ್ನು ಸಂಗ್ರಹಿಸುವುದಿಲ್ಲ. ಈ ಶಿಫಾರಸುಗಳ ಕುರಿತು ಸಹಾಯ ಮಾಡಲು Game Center ಆನ್-ಡಿವೈಸ್ ಪ್ರೊಸೆಸಿಂಗ್ ಅನ್ನು ಬಳಸುತ್ತದೆ.

ನೀವು iOS 10ಗಿಂತ ಮೊದಲೇ ಸ್ನೇಹ ಸಂಬಂಧಗಳನ್ನು ಹೊಂದಿದ್ದರೆ, ಅಂತಹ ಸ್ನೇಹಿತರು ನಿಮ್ಮ ನಿಜವಾದ ಹೆಸರಿಗೆ ಆ್ಯಕ್ಸೆಸ್ ಹೊಂದಿರುತ್ತಾರೆ. ನೀವು iOS 10 ಅನ್ನು ಅಳವಡಿಸಿಕೊಂಡ ನಂತರ ಸ್ಥಾಪಿಸಲಾದ ಯಾವುದೇ ಸ್ನೇಹಿತರ ಸಂಬಂಧಗಳಲ್ಲಿ ನಿಮ್ಮ ಸ್ನೇಹಿತರಿಗೆ ಕೇವಲ ನಿಮ್ಮ ಕಿರು ಹೆಸರು ಮಾತ್ರವೇ ಲಭ್ಯವಿರುತ್ತದೆ. iOS 10 ಮೊದಲೂ ಒಳಗೊಂಡಂತೆ ಮಕ್ಕಳ ಖಾತೆಗಳು ಎಂದಿಗೂ ನಿಜವಾದ ಹೆಸರುಗಳನ್ನು ಸ್ನೇಹಿತರಿಗೆ ಕಾಣುವಂತೆ ಮಾಡುವುದಿಲ್ಲ.

Game Center ಮತ್ತು Apple Games

Game Center ಎನ್ನುವುದು Apple Games ಆ್ಯಪ್ ಅನುಭವದ ಪ್ರಮುಖ ಭಾಗವಾಗಿದೆ. Apple Games ಆ್ಯಪ್ ಬಳಸಲು, ನೀವು Game Centerಗೆ ಸೈನ್ ಇನ್ ಆಗಿರಬೇಕು. ನೀವು Games ಆ್ಯಪ್ ಬಳಸದಿದ್ದರೂ ಸಹ, ನಿಮ್ಮ ಅಡ್ಡಹೆಸರು ಮತ್ತು ಅವತಾರ್ ಸೇರಿದಂತೆ ನಿಮ್ಮ Game Center ಪ್ರೊಫೈಲ್ ಮತ್ತು ನಿಮ್ಮ Game Center ಚಟುವಟಿಕೆಯನ್ನು ನೀವು ಹಂಚಿಕೊಳ್ಳಲು ಆಯ್ಕೆಮಾಡಿದ್ದರೆ, Apple Games ಆ್ಯಪ್‌ನಲ್ಲಿ ಲಭ್ಯವಿರುತ್ತದೆ. ನೀವು Apple Games ಆ್ಯಪ್ ಬಳಸುವಾಗ, ಮೇಲಿನ Game Center ಅನ್ನು ಒದಗಿಸುವುದು ಮತ್ತು ಸುಧಾರಿಸುವುದು ಹಾಗೂ ಇತರ ಆಟಗಾರರು ಮತ್ತು ಸ್ನೇಹಿತರೊಂದಿಗೆ ಆಟವಾಡುವುದು ವಿಭಾಗಗಳಲ್ಲಿ ವಿವರಿಸಿದಂತೆ ನಿಮ್ಮ ಗೇಮಿಂಗ್ ಚಟುವಟಿಕೆ, ಸ್ನೇಹಿತರು, ಚಾಲೆಂಜ್‌ಗಳು ಮತ್ತು ಸಾಧನೆಗಳ ಕುರಿತು ಮಾಹಿತಿಯನ್ನು Apple Games ಆ್ಯಪ್ ಬಳಸುತ್ತದೆ, ಇದು Apple Gamesನಲ್ಲಿ ನಿಮ್ಮ ಅನುಭವವನ್ನು ಬಲಪಡಿಸಲು ಮತ್ತು ವೈಯಕ್ತೀಕರಿಸಲು, ಗೇಮ್‌ಗಳನ್ನು ಅನ್ವೇಷಿಸಲು ಮತ್ತು ಸ್ನೇಹಿತರನ್ನು ಹುಡುಕಲು ನಿಮಗೆ ಸಹಾಯ ಮಾಡುತ್ತದೆ, Game Center ಮತ್ತು Apple Games ಅನ್ನು ಆಪ್ಟಿಮೈಸ್ ಮಾಡಲು ಮತ್ತು ಸುಧಾರಿಸಲು ಹಾಗೂ ನಿಮಗೆ ಸಂವಹನಗಳನ್ನು ಕಳುಹಿಸಲು ಸಹಾಯ ಮಾಡುತ್ತದೆ. Apple Games ಆ್ಯಪ್ ಕುರಿತ ಹೆಚ್ಚಿನ ಮಾಹಿತಿಗಾಗಿ, www.apple.com/legal/privacy/data/en/apple-games ಎಂಬಲ್ಲಿಗೆ ಭೇಟಿ ನೀಡಿ.

ನಿಮ್ಮೊಂದಿಗೆ ಸಂವಹನ ನಡೆಸುವುದು

Game Center ಹಾಗೂ ನಿಮಗೆ ಆಸಕ್ತಿಯಿರಬಹುದಾದ ಇತರ Apple ಉತ್ಪನ್ನಗಳು, ಸೇವೆಗಳು ಮತ್ತು ಆಫರ್‌ಗಳ ಕುರಿತು ನಿಮಗೆ ಸಂವಹನಗಳನ್ನು ಕಳುಹಿಸಲು, ನಿಮ್ಮ ಮಾಲೀಕತ್ವದಲ್ಲಿರುವ Apple ಉತ್ಪನ್ನಗಳು ಮತ್ತು ನೀವು Apple ಸೇವೆಗಳಿಗೆ ಮಾಡಿರುವ ಸಬ್‌ಸ್ಕ್ರಿಪ್ಶನ್‌ಗಳಂತಹ, ನಿಮ್ಮ ಖಾತೆಯ ಕುರಿತಾದ ಮಾಹಿತಿಯನ್ನು Apple ಬಳಸಬಹುದು. Game Centerನಲ್ಲಿ ಲಭ್ಯವಿರುವ ಹೊಸ ಫೀಚರ್‌ಗಳು, ಕಂಟೆಂಟ್ ಮತ್ತು ಆಫರ್‌ಗಳ ಕುರಿತು ನಿಮಗೆ ಈಮೇಲ್‌ಗಳು ಹಾಗೂ ನೋಟಿಫಿಕೇಷನ್‌ಗಳನ್ನು ಕಳುಹಿಸಲು Game Centerನಲ್ಲಿನ ನಿಮ್ಮ ಚಟುವಟಿಕೆಯ ಕುರಿತಾದ ಮಾಹಿತಿಯನ್ನು ಸಹ Apple ಬಳಸಬಹುದು. ನೀವು account.apple.com/in ಎಂಬಲ್ಲಿಗೆ ಹೋಗುವ ಮೂಲಕ ನಿಮ್ಮ ಈಮೇಲ್ ಆದ್ಯತೆಗಳನ್ನು ಬದಲಾಯಿಸಬಹುದು ಹಾಗೂ ಈ ಈಮೇಲ್‌ಗಳನ್ನು ಸ್ವೀಕರಿಸುವುದರಿಂದ ಹೊರಗುಳಿಯಬಹುದು. ನಿಮ್ಮ iOS, iPadOS, ಅಥವಾ visionOSನಲ್ಲಿ ನಿಮ್ಮ ನೋಟಿಫಿಕೇಷನ್ ಆದ್ಯತೆಗಳನ್ನು ಅಪ್‌ಡೇಟ್ ಮಾಡಲು ಸೆಟ್ಟಿಂಗ್ಸ್ > ನೋಟಿಫಿಕೇಷನ್‌ಗಳು > Game Center ಎನ್ನುವಲ್ಲಿ ಹೋಗಿ. Macನಲ್ಲಿ, ಸಿಸ್ಟಂ ಸೆಟ್ಟಿಂಗ್ಸ್ > ನೋಟಿಫಿಕೇಷನ್‌ಗಳು > Game Center ಎಂಬಲ್ಲಿಗೆ ಹೋಗಿ. ನಮ್ಮ ಸೇವೆಗಳನ್ನು ಸುಧಾರಿಸುವುದಕ್ಕಾಗಿ, ನೋಟಿಫಿಕೇಷನ್‌ಗಳೂ ಒಳಗೊಂಡಂತೆ ನಮ್ಮ ಸಂವಹನಗಳ ಜೊತೆಗಿನ ನಿಮ್ಮ ಮಾತುಕತೆಗಳ ಕುರಿತಾದ ಮಾಹಿತಿಯನ್ನು Apple ಬಳಸುತ್ತದೆ.

ಮೂರನೆಯ ಪಕ್ಷದ ಡೆವೆಲಪರ್‌ಗಳು

ನೀವು ಒಂದು Game Centerಗೆ ಸೈನ್ ಇನ್ ಆದಾಗ, ನೀವು ಆಡುವ ಗೇಮ್‌ನ ಡೆವೆಲಪರ್‌ಗಳು ನಿಮ್ಮ ಕಿರುಹೆಸರು, ಅವತಾರ, ಹಾಗೂ ಇತರ ವಿಶಿಷ್ಟವಾದ Game Center ಐಡೆಂಟಿಫೈಯರ್‌ಗಳನ್ನು ಒಳಗೊಂಡ ನಿಮ್ಮ ಬಗೆಗಿನ ಮಾಹಿತಿಯನ್ನು ವಿನಂತಿಸಬಹುದು. ಒಬ್ಬ ಡೆವೆಲಪರ್ ನಿಮ್ಮ ಸ್ನೇಹಿತರು ಹಾಗೂ ನಿಮ್ಮೊಂದಿಗೆ ಇತ್ತೀಚಿಗೆ ಆಟವಾಡಿದ ಆಟಗಾರರನ್ನು ಒಳಗೊಂಡ ಸಂಬಂಧಿತ ಆಟಗಾರರ ಪಟ್ಟಿಯನ್ನೂ ವಿನಂತಿಸಬಹುದಾಗಿದ್ದು, ಇದು ಅಡ್ಡಹೆಸರುಗಳು ಹಾಗೂ ಅವತಾರ್‌ಗಳ ಪಟ್ಟಿಯನ್ನು ಒಳಗೊಂಡಿರುತ್ತದೆ. ನೀವು ಒಂದು ಆ್ಯಪ್ ನಿಮ್ಮನ್ನು ಸ್ನೇಹಿತರ ಜೊತೆಗೆ ಸಂಪರ್ಕಿಸಲು ಆಯ್ಕೆ ಮಾಡುವುದನ್ನು ಅನುಮತಿಸಲು ಆಯ್ಕೆ ಮಾಡಿದಲ್ಲಿ, ಅವರು ಈ ಆಟವನ್ನು ಆಡುವ ನಿಮ್ಮ ಸ್ನೇಹಿತರ ಒಂದು ಪಟ್ಟಿಗೂ ಆ್ಯಕ್ಸೆಸ್ ಹೊಂದಿರುತ್ತಾರೆ. ಈ ಆ್ಯಪ್ ಅವರ ಸ್ನೇಹಿತರ ಜೊತೆಗೆ ಸಂಪರ್ಕ ಸಾಧಿಸಲು ಸಮ್ಮತಿಸಿರುವ ಸ್ನೇಹಿತರು ಮಾತ್ರ ನಿಮ್ಮ ಆ್ಯಪ್‌ಗೆ ಸ್ನೇಹಿತರಾಗಿ ಕಾಣಿಸಿಕೊಳ್ಳುತ್ತಾರೆ. ಯಾವುದೇ ಆ್ಯಪ್‌ಗಳೂ ನಿಮ್ಮನ್ನು ಸ್ನೇಹಿತರ ಜೊತೆಗೆ ಸಂಪರ್ಕ ಕಲ್ಪಿಸದಂತೆಯೂ ನೀವು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ iOS, iPadOS, ಅಥವಾ visionOS ಸಾಧನದಲ್ಲಿ ಹಾಗೆ ಮಾಡಲು, ಸೆಟ್ಟಿಂಗ್ಸ್ > Game Center ಎಂಬಲ್ಲಿಗೆ ಹೋಗಿ ಮತ್ತು 'ಸ್ನೇಹಿತರ ಪಟ್ಟಿಯನ್ನು ಹಂಚಿಕೊಳ್ಳಿ’ ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡಿ. Macನಲ್ಲಿ, ಸಿಸ್ಟಂ ಸೆಟ್ಟಿಂಗ್ಸ್ > Game Center ಎಂಬಲ್ಲಿಗೆ ಹೋಗಿ ಹಾಗೂ ‘ಸ್ನೇಹಿತರ ಪಟ್ಟಿಯನ್ನು ಹಂಚಿಕೊಳ್ಳಿ’ ಎಂಬುದನ್ನು ಆಫ್ ಮಾಡಲು ಕ್ಲಿಕ್ ಮಾಡಿ. ಇದು ಆ್ಯಪ್‌ಗಳು ನಿಮ್ಮ Game Center ಸ್ನೇಹಿತರ ಜೊತೆಗೆ ನಿಮ್ಮನ್ನು ಕನೆಕ್ಟ್ ಮಾಡಬಹುದೇ ಬೇಡವೇ ಎಂದು ಕೇಳದಂತೆ ಅವುಗಳನ್ನು ತಡೆಯುತ್ತದೆ ಮತ್ತು ಈ ಮೊದಲು ಅನುಮತಿಸಿದ ಆ್ಯಪ್‌ಗಳೊಂದಿಗೆ ನಿಮ್ಮ ಸ್ನೇಹಿತರ ಪಟ್ಟಿಯನ್ನು ಹಂಚಿಕೊಳ್ಳುವುದನ್ನು ನಿಲ್ಲಿಸುತ್ತದೆ. ನೀವು ಥರ್ಡ್ ಪಾರ್ಟಿ ಆ್ಯಪ್ ಬಳಸಿದಾಗಲೆಲ್ಲ, ಅವರು ನಿಮ್ಮ ಡೇಟವನ್ನು ಹೇಗೆ ಸಂಗ್ರಹಿಸುತ್ತಾರೆ ಹಾಗೂ ಬಳಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ನೀವು ಡೆವಲಪರ್‌ನ ನಿಯಮಗಳು, ಗೌಪ್ಯತಾ ನೀತಿಗಳು ಹಾಗೂ ಅಭ್ಯಾಸಗಳನ್ನು ಪರಿಶೀಲಿಸಬೇಕು.

Game Centerನಲ್ಲಿ ಮಕ್ಕಳು

Game Center ಅನ್ನು ಬಳಸುವ ನಿಮ್ಮ ಕುಟುಂಬದ ಮಕ್ಕಳಿಗಾಗಿ, ನಿರ್ದಿಷ್ಟ ಆ್ಯಪ್‌ಗಳಲ್ಲಿ ಅವರು ಕಳೆಯುವ ಸಮಯವನ್ನು ಮಿತಿಗೊಳಿಸಲು ಹಾಗೂ ನಿಮ್ಮ ಮಗುವಿನ ಸಾಧನದಲ್ಲಿ ಮಲ್ಟಿಪ್ಲೇಯರ್ ಫಂಕ್ಷನಾಲಿಟಿಗಳು, ಸ್ನೇಹಿತರನ್ನು ಸೇರಿಸುವ ಸಾಮರ್ಥ್ಯ, ಹಾಗೂ ಅದೇ ಗೇಮ್ ಅನ್ನು ಆಡುತ್ತಿರುವ ಸ್ನೇಹಿತರ ಜೊತೆಗೆ ಸಂಪರ್ಕ ಸಾಧಿಸುವ ಸಾಮರ್ಥ್ಯವೂ ಸೇರಿದಂತೆ Game Center ಫೀಚರ್‌ಗಳನ್ನು ಬ್ಲಾಕ್ ಮಾಡಲು, ನೀವು ಸ್ಕ್ರೀನ್ ಟೈಮ್‌ನಲ್ಲಿ ಕಂಟೆಂಟ್ ಹಾಗೂ ಗೌಪ್ಯತೆಯ ನಿರ್ಬಂಧಗಳನ್ನು ಬಳಸಬಹುದು. ಇದನ್ನು ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ಮಾಡಲು, ಸೆಟ್ಟಿಂಗ್ಸ್ > ಸ್ಕ್ರೀನ್ ಟೈಮ್ > ಕಂಟೆಂಟ್ ಹಾಗೂ ಗೌಪ್ಯತೆಯ ನಿರ್ಬಂಧಗಳು > App Store, ಮೀಡಿಯಾ, ವೆಬ್ ಮತ್ತು ಗೇಮ್‌ಗಳಿಗೆ ಹೋಗಿ, ನಂತರ Game Center ವಿಭಾಗಕ್ಕೆ ಸ್ಕ್ರೋಲ್ ಮಾಡಿ. Macನಲ್ಲಿ, ಸಿಸ್ಟಂ ಸೆಟ್ಟಿಂಗ್ಸ್ > ಸ್ಕ್ರೀನ್ ಟೈಮ್ > ಕಂಟೆಂಟ್ ಹಾಗೂ ಗೌಪ್ಯತೆ ಎನ್ನುವಲ್ಲಿ ಹೋಗಿ. tvOSನಲ್ಲಿ, ಸೆಟ್ಟಿಂಗ್ಸ್ > ಸಾಮಾನ್ಯ > ನಿರ್ಬಂಧಗಳು ಎಂಬಲ್ಲಿಗೆ ಹೋಗಿ. ಹೆಚ್ಚುವರಿಯಾಗಿ, Game Centerನಲ್ಲಿ ಇತರ ಆಟಗಾರರೊಂದಿಗೆ ಸಂವಹನ ನಡೆಸುವಾಗ, ಮಕ್ಕಳಿಗೆ ಬಳಕೆದಾರರು ಇನ್‌ಪುಟ್ ಮಾಡಿದ ಪಠ್ಯವನ್ನು ಕಳುಹಿಸಲು ಅಥವಾ ಪಡೆಯಲು ಸಾಧ್ಯವಾಗುವುದಿಲ್ಲ. ಅವರನ್ನು ಪ್ರೀಸೆಟ್ ಸಂದೇಶಗಳನ್ನು ಕಳುಹಿಸುವುದು ಹೆಚ್ ಪಡೆಯುವುದಕ್ಕೆ ಸೀಮಿತಗೊಳಿಸಲಾಗಿರುತ್ತದೆ. ಮಕ್ಕಳಿಗೆ ನಿಷ್ಕ್ರಿಯಗೊಳಿಸಲಾದ ಗೇಮ್-ಒಳಗಿನ ವಾಯ್ಸ್ ಚ್ಯಾಟ್.

ವೈಯಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುವುದಕ್ಕಾಗಿ ಅನ್ವಯವಾಗುವ ಕಾನೂನುಬದ್ಧ ಆಧಾರ

Game Centerನಲ್ಲಿನ ನಿಮ್ಮ ವೈಯಕ್ತಿಕ ಡೇಟವನ್ನು ನಿಮ್ಮ ಸಮ್ಮತಿಯನ್ನು ಆಧರಿಸಿ ಹಾಗೂ ನಮ್ಮ ಕಾನೂನುಬದ್ಧ ಹಿತಾಸಕ್ತಿಗಳ ಉದ್ದೇಶಗಳಿಗೆ ಅಗತ್ಯವಾದ ರೀತಿಯಲ್ಲಿ ನಾವು ಪ್ರಕ್ರಿಯೆಗೊಳಿಸುತ್ತೇವೆ. ಅನ್ವಯವಾಗುವ ಸ್ಥಳೀಯ ಕಾನೂನುಗಳು ಅನುಮತಿಸಿದಲ್ಲಿ, ಕಾನೂನುಬದ್ಧ ಹಿತಾಸಕ್ತಿಯ ಉದ್ದೇಶಗಳಿಗೆ ಅಗತ್ಯವಾದ ಹಾಗೆ ಈ ಕೆಳಗಿನ ಪ್ರಕಾರದ ವೈಯಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುತ್ತೇವೆ:

  • ನೀವು ಆಡುವ ಗೇಮ್‌ಗಳು ಹಾಗೂ ನಿಮ್ಮ ಗೇಮ್ ಚಟುವಟಿಕೆಯಂಥ Game Centerನ ನಿಮ್ಮ ಬಳಕೆ
  • ನಿಮ್ಮ ಅಡ್ಡಹೆಸರು, ಅವತಾರ್, Arcade ಸಬ್‌ಸ್ಕ್ರಿಪ್ಶನ್ ಸ್ಥಿತಿ, ಸ್ಕೋರ್‌ಗಳು ಮತ್ತು ಇತರ ಚಟುವಟಿಕೆಯ ಮಾಹಿತಿ
  • ನಿಮ್ಮ Game Center ಸ್ನೇಹಿತರು, ನೀವು ಜೊತೆಗೆ ಆಡುವ ಆಟಗಾರರು, ಹಾಗೂ ನೀವು ಯಾವಾಗ ಜೊತೆಗೆ ಆಡುತ್ತೀರಿ

ಈ ಕಾನೂನುಬದ್ಧವಾದ ಆಸಕ್ತಿಗಳು ಇವುಗಳನ್ನು ಒಳಗೊಂಡಿರುತ್ತವೆ:

  • Game Center ಅನ್ನು ಮತ್ತು Game Center ಬಳಸುವ ಇತರೆ Apple ಸೇವೆಗಳನ್ನು ನಿಮಗಾಗಿ ಮತ್ತು ಇತರರಿಗಾಗಿ ಆಪ್ಟಿಮೈಸ್ ಮಾಡುವುದು ಮತ್ತು ಸುಧಾರಿಸುವುದು
  • ನಿಮಗೆ Game Center ಹಾಗೂ ಇತರ ಸಂಬಂಧಿತ Apple ಉತ್ಪನ್ನಗಳು, ಸೇವೆಗಳು, ಹಾಗೂ ನಿಮಗೆ ಆಸಕ್ತಿಯಿರಬಹುದಾದ ಆಫರ್‌ಗಳ ಬಗೆಗಿನ ಸಂವಹನಗಳನ್ನು ಕಳುಹಿಸುವುದು
  • ಮೋಸ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯುವುದು

ರಿಟೆನ್ಶನ್

Game Centerನೊಂದಿಗೆ ಸಂಯೋಜಿಸಲಾದ Apple ಖಾತೆಯನ್ನು ನೀವು ನಿರ್ವಹಿಸುವವರೆಗೆ Game Center ನಿಮ್ಮ ಕುರಿತು ಸಂಗ್ರಹಿಸಲಾದ ಈ ಮಾಹಿತಿಯನ್ನು ಇರಿಸಿಕೊಂಡಿರುತ್ತದೆ.

ಮೋಸ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯುವುದು

ನಾವು Game Center ಹಾಗೂ ಇತರ Apple ಆ್ಯಪ್‌ಗಳು ಹಾಗೂ ಸೇವೆಗಳಲ್ಲಿ ವಂಚನೆ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಗಟ್ಟಲು ವೈಯಕ್ತಿಕ ಡೇಟವನ್ನು ಸಂಗ್ರಹಿಸುತ್ತೇವೆ. ಈ ಮಾಹಿತಿಯು ಸಾಧನದ ಪ್ರಕಾರ ಹಾಗೂ ಸಾಫ್ಟ್‌ವೇರ್ ಆವೃತ್ತಿಯಂತ ಸಾಧನ ಮಾಹಿತಿ, ಸ್ಥಳ ಮಾಹಿತಿ (ನಿಮ್ಮ ಇಂಟರ್ನೆಟ್ ಸಂಪರ್ಕದ IP ವಿಳಾಸವನ್ನು ಲಭ್ಯವಿದ್ದಲ್ಲಿ ಒಂದು ಭೌಗೋಳಿಕ ಪ್ರದೇಶಕ್ಕೆ ಹೋಲಿಸುವ ಮೂಲಕ ಅಂದಾಜಿಸಲಾಗುತ್ತದೆ), ಡೌನ್‌ಲೋಡ್ ಹಾಗೂ ಖರೀದಿಯ ಇತಿಹಾಸ, ಹಾಗೂ Game Center ಹಾಗೂ ಇತರ ಆ್ಯಪ್‌ಗಳು ಹಾಗೂ ಸೇವೆಗಳ ಜೊತೆಗಿನ ಇತರ ಸಂವಹನಗಳನ್ನು ಒಳಗೊಂಡಿರುತ್ತದೆ.

ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.

2026-03-30