iCloud ಪ್ರೈವೇಟ್ ರಿಲೇ ಮತ್ತು ಗೌಪ್ಯತೆ

ಹೆಚ್ಚು ಸುರಕ್ಷಿತವಾದ ಹಾಗೂ ಖಾಸಗಿಯಾದ ರೀತಿಯಲ್ಲಿ ವೆಬ್‌ಗೆ ಕನೆಕ್ಟ್ ಆಗಲು ಮತ್ತು ಬ್ರೌಸ್ ಮಾಡಲು iCloud ಪ್ರೈವೇಟ್ ರಿಲೇ ನಿಮಗೆ ಅನುಮತಿಸುತ್ತದೆ.


iCloud ಪ್ರೈವೇಟ್ ರಿಲೇ (“Private Relay”) iCloud+ ಸಬ್‌ಸ್ಕ್ರಿಪಕ್ಷನ್ ಭಾಗವಾಗಿ ಕೊಡಲಾಗುತ್ತಿರುವ ಹೊಸ ಇಂಟರ್ನೆಟ್ ಗೌಪ್ಯತೆ ಸೇವೆಯಾಗಿದ್ದು, ನಿಮ್ಮ Safari ವೆಬ್ ಬ್ರೌಸಿಂಗ್ ಅನ್ನು ರಕ್ಷಿಸುತ್ತದೆ, ಹೀಗಾಗಿ ಯಾವುದೇ ಒಂದು ಘಟಕವು ನಿಮ್ಮ ಇಂಟರ್ನೆಟ್ ಬ್ರೌಸಿಂಗ್ ಜೊತೆಗೆ ಹೋಲಿಸಿ ನೋಡಲು ಸಾಧ್ಯವಾಗುವುದಿಲ್ಲ, Appleಗೂ ಸಾಧ್ಯವಿಲ್ಲ ಅಥವಾ ನೆಟ್‌ವರ್ಕ್ ಒದಗಿಸುವವರಿಗೂ ಸಾಧ್ಯವಿಲ್ಲ. ಪ್ರೈವೇಟ್ ರಿಲೇ ಎನ್‌ಕ್ರಿಪ್ಟ್ ಮಾಡದೆ ಇರುವ ಟ್ರಾಫಿಕ್ ಅನ್ನೂ ಎನ್‌ಕ್ರಿಪ್ಟ್ ಮಾಡುವ ಮೂಲಕ ನಿಮ್ಮ ಸಾಧನದ ಜೊತೆಗೆ ಪ್ರಶ್ನೆಗಳನ್ನೂ ಡೊಮೈನ್ ನೇಮ್ ಸರ್ವರ್‌ಗೆ(DNS) ಬಿಡುತ್ತದೆ — ಈ ವ್ಯವಸ್ಥೆಯು ವೆಬ್‌ಸೈಟ್‌ಗಳ ಹೆಸರುಗಳನ್ನು ಇಂಟರ್ನೆಟ್ ಪ್ರೊಟೋಕಾಲ್ (IP) ವಿಳಾಸಗಳಿಗೆ ಪರಿವರ್ತಿಸುತ್ತದೆ — ಅದರಿಂದ ನಿಮ್ಮ ಗೌಪ್ಯತೆಯನ್ನು ಇನ್ನಷ್ಟು ರಕ್ಷಿಸುತ್ತದೆ. ಪ್ರೈವೇಟ್ ರಿಲೇಯು iOS, iPadOS, visionOS, ಹಾಗೂ macOSನಲ್ಲಿ ಮಾತ್ರ ಲಭ್ಯವಿದೆ.

ನಿಮ್ಮ ಇಂಟರ್ನೆಟ್ ಕನೆಕ್ಷನ್ ಕೋರಿಕೆಗಳನ್ನು ಅನ್ನು ವಿಭಿನ್ನ ಘಟಕಗಳು ನಿರ್ವಹಿಸುವ ಎರಡು ಪ್ರತ್ಯೇಕ ರಿಲೇಗಳಿಗೆ ಕಳುಹಿಸಲಾಗುತ್ತದೆ. ಮೊದಲ ಘಟಕಕ್ಕೆ ನಿಮ್ಮ IP ವಿಳಾಸ ತಿಳಿದಿರುತ್ತದೆ, ಆದರೆ ನೀವು ಭೇಟಿ ನೀಡುತ್ತಿರುವ ವೆಬ್‌ಸೈಟ್ ತಿಳಿದಿರುವುದಿಲ್ಲ. ಡೆಸ್ಟಿನೇಶನ್ ವೆಬ್‌ಸೈಟ್‌ನ ಸಾಮಾನ್ಯ ಗುರುತಿಸುವಿಕೆ ಮತ್ತು ಸ್ಥಳ ಮಾಹಿತಿಯನ್ನು ಒದಗಿಸುವ ಬದಲು, ಎರಡನೇ ಘಟಕವು ನೀವು ಭೇಟಿ ನೀಡುವ ವೆಬ್‌ಸೈಟ್ ಅನ್ನು ತಿಳಿದಿರುತ್ತದೆ, ಆದರೆ ನಿಮ್ಮ IP ವಿಳಾಸವನ್ನು ತಿಳಿದಿರುವುದಿಲ್ಲ. ಈ ರೀತಿಯಾಗಿ ಯಾವುದೇ ಘಟಕವು ನಿಮ್ಮನ್ನು ಮತ್ತು ನೀವು ಭೇಟಿ ನೀಡಿದ ಸೈಟ್‌ಗಳನ್ನು ಗುರುತಿಸುವ ಮಾಹಿತಿಯನ್ನು ಹೊಂದಿರುವುದಿಲ್ಲ.

ಗೌಪ್ಯತೆಯನ್ನು ಕಾಪಾಡಿಕೊಂಡು ವೆಬ್‌ಸೈಟ್‌ಗಳು ನಿಮ್ಮ ಪ್ರದೇಶದೊಳಗೆ ನಿಮಗೆ ಕಂಟೆಂಟ್ ಅನ್ನು ನೀಡಲು ಸಾಧ್ಯವಾಗುವಂತೆ, ಪ್ರೈವೇಟ್ ರಿಲೇ ನಿಮ್ಮ ಮೂಲ IP ವಿಳಾಸದಿಂದ ಪಡೆದುಕೊಂಡ ಸಾರ್ವಜನಿಕವಾಗಿ ಪರಿಚಿತ ಸ್ಥಳದಿಂದ ಅಂದಾಜು ಪ್ರದೇಶವೊಂದನ್ನು ಲೆಕ್ಕಹಾಕುತ್ತದೆ. ನಿಮ್ಮ ಸಾಧನವು ಅಂದಾಜು ಪ್ರಾದೇಶಿಕ ಮಾಹಿತಿಯನ್ನು ಎನ್‌ಕ್ರಿಪ್ಟ್ ಮಾಡಲಾದ ರೂಪದಲ್ಲಿ ಎರಡನೇ ರಿಲೇಗೆ ಕಳುಹಿಸುತ್ತದೆ, ಎರಡನೇ ರಿಲೇಯು ಅದನ್ನು ಜೆನೆರಿಕ್ IP ವಿಳಾಸವನ್ನು ಡಿರೈವ್ ಮಾಡಲು ಬಳಸಿ ಅಂತಿಮ ತಲುಪಬೇಕಾದ ವಿಳಾಸಕ್ಕೆ ಕಳುಹಿಸುತ್ತದೆ. ಪ್ರೈವೇಟ್ ರಿಲೇಯನ್ನು ಬಳಸುತ್ತಲೇ ನಿಮ್ಮ ಸಮೀಪದಲ್ಲಿರುವ ಉದ್ಯಮಗಳನ್ನು ಹುಡುಕಲು ಸಾಧ್ಯವಿದೆ, ಆದರೆ ವೆಬ್‌ಸೈಟ್‌ಗಳು ಅಂದಾಜು ಪ್ರಾದೇಶಿಕ ಏರಿಯಾದ ಮೇಲೆ ಸಹವ್ಯಾಪಿಸುವ IP ವಿಳಾಸವನ್ನು ನೋಡಬಹುದೇ ವಿನಾ ನಿರ್ದಿಷ್ಟ ವ್ಯಕ್ತಿಯನ್ನಲ್ಲ. ನೀವು ಈ ಸ್ಥಳ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಬಹುದು ಮತ್ತು ನಿಮ್ಮ iOS, iPadOS, ಅಥವಾ visionOS ಸಾಧನದಲ್ಲಿ ಸೆಟ್ಟಿಂಗ್ಸ್ > [ನಿಮ್ಮ ಹೆಸರು] > iCloud > ಪ್ರೈವೇಟ್ ರಿಲೇ > IP ವಿಳಾಸದ ಸ್ಥಳ ಎಂಬಲ್ಲಿಗೆ ಹೋಗುವ ಮೂಲಕ ಮತ್ತು “ದೇಶ ಮತ್ತು ಸಮಯದ ವಲಯವನ್ನು ಬಳಸಿ” ಅನ್ನು ಆನ್ ಮಾಡುವ ಮೂಲಕ ಕಡಿಮೆ ನಿಖರವಾದ ಸ್ಥಳದ ಮಾಹಿತಿಯನ್ನು ಒದಗಿಸಬಹುದು. Macನಲ್ಲಿ, ಸಿಸ್ಟಂ ಸೆಟ್ಟಿಂಗ್ಸ್ > [ನಿಮ್ಮ ಹೆಸರು] > iCloud > ಪ್ರೈವೇಟ್ ರಿಲೇ ಎಂಬಲ್ಲಿಗೆ ಹೋಗಿ.

ಯಾವುದೇ ಸಂದರ್ಭದಲ್ಲೂ ಸೆಟ್ಟಿಂಗ್ಸ್ > [ನಿಮ್ಮ ಹೆಸರು] > iCloud > ಪ್ರೈವೇಟ್ ರಿಲೇ ಎಂಬಲ್ಲಿಗೆ ಹೋಗುವ ಮೂಲಕ, ನಂತರ ಪ್ರೈವೇಟ್ ರಿಲೇಯನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ಪ್ರೈವೇಟ್ ರಿಲೇಯನ್ನು ನಿಷ್ಕ್ರಿಯಗೊಳಿಸಬಹುದು. ಯಾವುದೇ ಸಂದರ್ಭದಲ್ಲಿ ನಿರ್ದಿಷ್ಟವಾದ Wi-Fiಗಾಗಿ iOS, iPadOS, ಅಥವಾ visionOS ಸಾಧನದಲ್ಲಿ ಸೆಟ್ಟಿಂಗ್ಸ್ > Wi-Fi ಎಂಬಲ್ಲಿಗೆ ಹೋಗುವ ಮೂಲಕ, ನಿಮ್ಮ ನೆಟ್‌ವರ್ಕ್ ಪಕ್ಕದಲ್ಲಿರುವ ಮಾಹಿತಿ ಬಟನ್‌ ಅನ್ನು ಟ್ಯಾಪ್ ಮಾಡಿದ ನಂತರ iCloud ಪ್ರೈವೇಟ್ ರಿಲೇಯನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ಕೂಡಾ ನೀವು ಪ್ರೈವೇಟ್ ರಿಲೇಯನ್ನು ನಿಷ್ಕ್ರಿಯಗೊಳಿಸಬಹುದು. Macನಲ್ಲಿ, ಸಿಸ್ಟಂ ಸೆಟ್ಟಿಂಗ್ಸ್ > [ನಿಮ್ಮ ಹೆಸರು] > iCloud > ಪ್ರೈವೇಟ್ ರಿಲೇ ಎಂಬಲ್ಲಿಗೆ ಹೋಗಿ, ಆಯ್ಕೆಗಳು ಎಂಬುದನ್ನು ಕ್ಲಿಕ್ ಮಾಡಿ, ನಂತರ iCloud ಪ್ರೈವೇಟ್ ರಿಲೇಯನ್ನು ನಿಷ್ಕ್ರಿಯಗೊಳಿಸಲು ಆಫ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ವೈಯಕ್ತಿಕ ಡೇಟವನ್ನು ಸಂಗ್ರಹಿಸಿದ ಉದ್ದೇಶ ಈಡೇರುವವರೆಗೆ ಮಾತ್ರವೇ Apple ಅದನ್ನು ಇರಿಸಿಕೊಳ್ಳುತ್ತದೆ, ಈ ಉದ್ದೇಶಗಳಲ್ಲಿ Appleನ ಗೌಪ್ಯತೆ ನೀತಿಯಲ್ಲಿ ಅಥವಾ ನಮ್ಮ ಸೇವಾ-ನಿರ್ದಿಷ್ಟ ಗೌಪ್ಯತೆ ನೋಟಿಸ್‌ಗಳಲ್ಲಿ ವಿವರಿಸಿರುವ, ಅಥವಾ ಕಾನೂನಿನ ಪ್ರಕಾರ ಅಗತ್ಯವಿರುವ ಉದ್ದೇಶಗಳೂ ಸೇರಿವೆ. ರಿಟೆನ್ಷನ್ ಅವಧಿಯನ್ನು ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಮೊದಲಿಗೆ ಸಂಗ್ರಹಿಸಿದ ವೈಯಕ್ತಿಕ ಡೇಟವನ್ನು ಉಳಿಸಿಕೊಳ್ಳುವುದು ಅಗತ್ಯವೇ ಎಂದು ಜಾಗರೂಕವಾಗಿ ಪರೀಕ್ಷಿಸುತ್ತೇವೆ, ನಂತರ ರಿಟೆನ್ಷನ್ ಅಗತ್ಯವಿದ್ದಲ್ಲಿ, ಕಾನೂನಿನ ಅಡಿಯಲ್ಲಿ ಅವಕಾಶ ನೀಡಲಾಗಿರುವ ಅತಿ ಕಡಿಮೆ ಅವಧಿಗೆ ವೈಯಕ್ತಿಕ ಡೇಟವನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇವೆ.

ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು

2025-12-12