EV ರೂಟಿಂಗ್ ಸುಧಾರಿಸಿ ಮತ್ತು ಗೌಪ್ಯತೆ
ನಿಮ್ಮ ಮಾಹಿತಿಯನ್ನು ರಕ್ಷಿಸಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎಂಬುದನ್ನು ಆಯ್ಕೆ ಮಾಡಲು ನಿಮಗೆ ಅನುವು ಮಾಡಿಕೊಡಲು EV ರೌಟಿಂಗ್ ಸುಧಾರಿಸಿ ಅನ್ನು ವಿನ್ಯಾಸಗೊಳಿಸಲಾಗಿದೆ.
ನೀವು EV ರೂಟಿಂಗ್ ಅನ್ನು ಸಕ್ರಿಯಗೊಳಿಸುವ ಆಯ್ಕೆಯನ್ನು ಮಾಡಿದರೆ, Apple ಈ ಕೆಳಗಿನ ಮಾಹಿತಿಯನ್ನು ಸಂಗ್ರಹಿಸಬಹುದು:
- ನಿಮ್ಮ ಮಾರ್ಗಕ್ಕೆ ಬ್ಯಾಟರಿ ಚಾರ್ಜ್ ಸ್ಟಾಪ್ ಅನ್ನು ಸೇರಿಸಿದ್ದರೆ
- ನಿಮ್ಮ ಮಾರ್ಗದ ಯಾವುದೇ ಭಾಗದಲ್ಲಿ ನಿಮ್ಮ ಬ್ಯಾಟರಿ ಖಾಲಿಯಾಗಿದ್ದರೆ
- ನಿಮ್ಮ ಬ್ಯಾಟರಿಯ ಉಳಿದ ಶೇಕಡಾವಾರು
- ನಿಮ್ಮ ವಾಹನದ ಪ್ರಸ್ತುತ ಬ್ಯಾಟರಿ ಸಾಮರ್ಥ್ಯ ಮತ್ತು ಗರಿಷ್ಠ ಬ್ಯಾಟರಿ ಸಾಮರ್ಥ್ಯ
- ನಿಮ್ಮ ಮಾರ್ಗದಲ್ಲಿರುವ ನಿರ್ದಿಷ್ಟ ಬ್ಯಾಟರಿ ಚಾರ್ಜ್ ನಿಲ್ದಾಣದಲ್ಲಿ ನಿಮ್ಮ ವಾಹನವು ಚಾರ್ಜ್ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ
- ಉಳಿದ ಪ್ರಯಾಣ ಶ್ರೇಣಿ ಮತ್ತು ನಿಮ್ಮ ವಾಹನದ ಗರಿಷ್ಠ ಶ್ರೇಣಿ
- ನಿಮ್ಮ ವಾಹನದ ಇಂಧನ ಬಳಕೆಯ ಕುರಿತಾದ ಡೇಟ
- ನೀವು ತಲುಪಬೇಕಾದ ಸ್ಥಳವನ್ನು ತಲುಪಲು ಪ್ರಯಾಣಿಸಬೇಕಾದ ನಿರೀಕ್ಷಿತ ಸಮಯವೂ ಸೇರಿದಂತೆ ನಿಮ್ಮ ಮಾರ್ಗದ ಕುರಿತಾದ ಮಾಹಿತಿ
ಇದು ನಿಮ್ಮ ಬ್ಯಾಟರಿ ಚಾರ್ಜ್ ಅಂದಾಜುಗಳ ನಿಖರತೆಯನ್ನು ಉತ್ತಮವಾಗಿ ಮೌಲ್ಯಮಾಪನ ಮಾಡಲು Apple ಅನ್ನು ಸಕ್ರಿಯಗೊಳಿಸುತ್ತದೆ. EV ರೂಟಿಂಗ್ ಮತ್ತು ಇತರ Apple ಸ್ಥಳ ಆಧಾರಿತ ಉತ್ಪನ್ನಗಳು ಮತ್ತು ಸೇವೆಗಳನ್ನು ಸುಧಾರಿಸಲು Apple ಈ ಡೇಟವನ್ನು ಅನಾಮಧೇಯ ರೂಪದಲ್ಲಿ ಮಾತ್ರ ಉಳಿಸಿಕೊಳ್ಳುತ್ತದೆ. ಸೆಟ್ಟಿಂಗ್ಸ್ > ಆ್ಯಪ್‌ಗಳು > ನಕ್ಷೆಗಳು > EV ರೂಟಿಂಗ್ ಅನ್ನು ಸುಧಾರಿಸಿ ಎಂಬಲ್ಲಿಗೆ ಹೋಗುವ ಮೂಲಕ ನೀವು ಯಾವುದೇ ಸಮಯದಲ್ಲಿ EV ರೂಟಿಂಗ್ ಅನ್ನು ಸುಧಾರಿಸಿ ಎನ್ನುವುದನ್ನು ಆಫ್ ಮಾಡಬಹುದು.
2025-12-12