Fitness+ ಸುಧಾರಿಸಿ ಮತ್ತು ಗೌಪ್ಯತೆ
ನಿಮ್ಮ ಮಾಹಿತಿಯನ್ನು ರಕ್ಷಿಸಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎಂಬುದನ್ನು ಆಯ್ಕೆ ಮಾಡಲು ನಿಮಗೆ ಅನುವು ಮಾಡಿಕೊಡಲು Fitness+ ಸುಧಾರಿಸಿ ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ.
ವರ್ಕ್ಔಟ್ ಶೀರ್ಷಿಕೆಗಳು ಮತ್ತು ತರಬೇತುದಾರರು ಸೇರಿದಂತೆ Apple Fitness+ ಫೀಚರ್‌ಗಳು ಮತ್ತು ವರ್ಕ್ಔಟ್‌ಗಳ ಪರಿಣಾಮಕಾರಿತ್ವವನ್ನು ಅಭಿವೃದ್ಧಿಪಡಿಸಲು, ಸುಧಾರಿಸಲು ಮತ್ತು ಅರ್ಥಮಾಡಿಕೊಳ್ಳಲು “Fitness+ ಸುಧಾರಿಸಿ” ಫೀಚರ್ ನಿಮ್ಮ ವರ್ಕ್ಔಟ್‌ಗಳ ಕುರಿತು ಹೆಚ್ಚುವರಿ ಮಾಹಿತಿಯನ್ನು Appleಗೆ ಕಳುಹಿಸುತ್ತದೆ. ನಿಮ್ಮ ಡೇಟವನ್ನು ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ. ಶೀರ್ಷಿಕೆ ಅಥವಾ ತರಬೇತುದಾರರಂತಹ ವರ್ಕ್ಔಟ್‌ನ ವಿವರಣೆಗಳು ನಿಮ್ಮ ವ್ಯಾಯಾಮದ ಕುರಿತಾದ ಸೂಕ್ಷ್ಮವಾದ ಮಾಹಿತಿಯನ್ನು ಬಹಿರಂಗಪಡಿಸಬಹುದು, ಉದಾಹರಣೆಗೆ ಅದು ಪ್ರಸವಪೂರ್ವ ವ್ಯಾಯಾಮವೇ ಅಥವಾ ಇಲ್ಲವೇ ಎಂಬ ಮಾಹಿತಿ. ಈ ಮಾಹಿತಿಯು ಆರೋಗ್ಯ ಮತ್ತು ಚಟುವಟಿಕೆ-ಸಂಬಂಧಿತ ಸೆನ್ಸರ್‌ಗಳಿಂದ ಪಡೆದ ಡೇಟವನ್ನು ಒಳಗೊಂಡಿಲ್ಲ (ಉದಾಹರಣೆಗೆ ನಿಮ್ಮ ಹೃದಯಬಡಿತ ದರ, ಕ್ಯಾಲರಿಗಳು ಅಥವಾ ಕಿಲೋಜೂಲ್‌ಗಳು). ನಿಮ್ಮ “Fitness+ ಸುಧಾರಿಸಿ” ಡೇಟವನ್ನು ನಿಮ್ಮ ಇತರ Fitness+ ಡೇಟದೊಂದಿಗೆ ಸಂಗ್ರಹಿಸಲಾಗುತ್ತದೆ, ಇದು Apple Fitness+ಗೆ ನಿರ್ದಿಷ್ಟವಾಗಿರುವ ಮತ್ತು ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿಲ್ಲದ ರ್‍ಯಾಂಡಮ್ ಐಡೆಂಟಿಫೈಯರ್ ವಿರುದ್ಧವಾಗಿರುತ್ತದೆ.
ನೀವು ಯಾವುದೇ ಸಮಯದಲ್ಲಿ “Fitness+ ಸುಧಾರಿಸಿ” ಎಂಬುದನ್ನು ನಿಷ್ಕ್ರಿಯಗೊಳಿಸುವ ಆಯ್ಕೆಯನ್ನು ಮಾಡಬಹುದು. ಹಾಗೆ ಮಾಡಲು, ಸೆಟ್ಟಿಂಗ್ಸ್ > ಗೌಪ್ಯತೆ & ಭದ್ರತೆ > ಅನಾಲಿಟಿಕ್ಸ್ ಮತ್ತು ಸುಧಾರಣೆಗಳಿಗೆ ಹೋಗಿ ಮತ್ತು “Fitness+ ಸುಧಾರಿಸಿ” ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡಿ.
“Fitness+ ಸುಧಾರಿಸಿ” ಎಂಬುದನ್ನು ಸಕ್ರಿಯಗೊಳಿಸುವ ಮೂಲಕ ನೀವು Apple ಮತ್ತು ಅದರ ಅಂಗಸಂಸ್ಥೆಗಳು ಹಾಗೂ ಏಜೆಂಟ್‌ಗಳು, ಮೇಲೆ ವಿವರಿಸಿದಂತೆ ಈ ಮಾಹಿತಿಯ ಪ್ರಸರಣ, ಸಂಗ್ರಹಣೆ, ನಿರ್ವಹಣೆ, ಪ್ರಕ್ರಿಯೆಗೊಳಿಸುವಿಕೆ ಮತ್ತು ಬಳಕೆಯಂತಹ ಕಾರ್ಯಗಳನ್ನು ಮಾಡುವುದನ್ನು ನೀವು ಒಪ್ಪುತ್ತೀರಿ ಮತ್ತು ಅದಕ್ಕೆ ಸಮ್ಮತಿಸುತ್ತೀರಿ. Apple ಈ ಮಾಹಿತಿಯನ್ನು ವಿಶ್ವಾಸಾರ್ಹ ಸೇವಾ ಪೂರೈಕೆದಾರರ ಜೊತೆಗೆ ಸಂಗ್ರಹಿಸಿಡಬಹುದು.
ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು
2025-12-12