ಆರೋಗ್ಯ ಹಾಗೂ ಚಟುವಟಿಕೆಯನ್ನು ಸುಧಾರಿಸಿ ಮತ್ತು ಗೌಪ್ಯತೆ

ನಿಮ್ಮ ಮಾಹಿತಿಯನ್ನು ಕಾಪಾಡಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವುದಕ್ಕೆ ಅನುವುಮಾಡಿಕೊಡಲು ಆರೋಗ್ಯ ಹಾಗೂ ಚಟುವಟಿಕೆಯನ್ನು ಸುಧಾರಿಸಿ ಎನ್ನುವುದನ್ನು ವಿನ್ಯಾಸಗೊಳಿಸಲಾಗಿದೆ.


ಆರೋಗ್ಯ, ಚಟುವಟಿಕೆ ಮತ್ತು ಫಿಟ್‌ನೆಸ್ ಫೀಚರ್‌ಗಳ ಪರಿಣಾಮಕಾರಿತ್ವವನ್ನು ಅಭಿವೃದ್ಧಿಪಡಿಸಲು, ಸುಧಾರಿಸಲು ಮತ್ತು ಅರ್ಥಮಾಡಿಕೊಳ್ಳಲು ”ಆರೋಗ್ಯ & ಚಟುವಟಿಕೆಯನ್ನು ಸುಧಾರಿಸಿ” ಫೀಚರ್ ನಿಮ್ಮ iPhone, iPad, Apple Vision Pro, AirPods ಮತ್ತು Apple Watchನಿಂದ ಚಟುವಟಿಕೆ, ವರ್ಕ್ಔಟ್ ಮತ್ತು ಆರೋಗ್ಯ ಸಂಬಂಧಿತ ಮಾಹಿತಿಯನ್ನು Appleಗೆ ಕಳುಹಿಸುತ್ತದೆ. ಇದು ಆರೋಗ್ಯ ಮತ್ತು ಚಟುವಟಿಕೆ-ಸಂಬಂಧಿತ ಸೆನ್ಸರ್‌ಗಳಿಂದ ಪಡೆದ ಕಚ್ಚಾ ಮತ್ತು ವಿಶ್ಲೇಷಿಸಿದ ಡೇಟವನ್ನು ಒಳಗೊಂಡಿರಬಹುದು (ಉದಾಹರಣೆಗೆ, Apple Watcನಲ್ಲಿನ ಫೋಟೋಪ್ಲೆಥಿಸ್ಮೊಗ್ರಫಿ (PPG) ಸೆನ್ಸರ್‌ನಿಂದ ಪಡೆದ ಡೇಟ). ನಿಮ್ಮ ಡೇಟವನ್ನು ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ ಮತ್ತು ವೈಯಕ್ತಿಕ ಡೇಟವನ್ನು ಒಳಗೊಂಡಿರುವುದಿಲ್ಲ.

ನಾವು ಸಂಗ್ರಹಿಸುವ ಮಾಹಿತಿ

ನೀವು ಆರೋಗ್ಯ ಆ್ಯಪ್‌ನಲ್ಲಿ ನಮೂದಿಸಿರುವ ಕೆಲವು ನಿರ್ದಿಷ್ಟ ಡೇಟ (ಉದಾಹರಣೆಗೆ ವಯಸ್ಸು, ಲಿಂಗ, ಎತ್ತರ, ತೂಕ ಮತ್ತು ವೀಲ್‌ಚೇರ್ ಮೋಡ್ ಸ್ಥಿತಿ), ನಿಮ್ಮ Apple Watch, iPhone, iPad ಮತ್ತು Apple Vision Proಗಳಲ್ಲಿನ ಆರೋಗ್ಯ ಮತ್ತು ಫಿಟ್‌ನೆಸ್ ಆ್ಯಪ್‌‌ಗಳು ತೋರಿಸುವ ಡೇಟ ಹಾಗೂ ಅವುಗಳೊಂದಿಗೆ ಬಳಸಿದ ಆರೋಗ್ಯ ಮತ್ತು ಫಿಟ್‌ನೆಸ್ ಸಂಬಂಧಿತ ಆ್ಯಪ್‌‌ಗಳಲ್ಲಿನ ಡೇಟ ಮತ್ತು AirPodsಗಳಿಂದ ಸಂಗ್ರಹಿಸಿದ ಕೆಲವು ನಿರ್ದಿಷ್ಟ ಡೇಟ ಇವುಗಳನ್ನು ಆರೋಗ್ಯ ಮತ್ತು ಚಟುವಟಿಕೆ ಸುಧಾರಿಸಿ ಎಂಬುದರ ಭಾಗವಾಗಿ Apple ಸಂಗ್ರಹಿಸಬಹುದಾದ ಮಾಹಿತಿಯು ಒಳಗೊಂಡಿರುತ್ತದೆ. ಉದಾಹರಣೆಗೆ, ಹಂಚಿಕೊಳ್ಳಲಾದ ಮಾಹಿತಿಯು ಇವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿರಬಹುದು:

ಹೃದಯದ ಆರೋಗ್ಯ

  • ನೀವು ECG ಆ್ಯಪ್ ಬಳಸುವ ಮಾಹಿತಿ, ಉದಾಹರಣೆಗೆ ತೆಗೆದುಕೊಂಡ ECG ರೆಕಾರ್ಡಿಂಗ್‌ಗಳ ಸಂಖ್ಯೆ, ಫಲಿತಾಂಶಗಳು ಮತ್ತು ಯಾವುದೇ ಸಂಬಂಧಿತ ರೋಗಲಕ್ಷಣಗಳು
  • ಹೃದಯದ ಲಯ, ಉದಾಹರಣೆಗೆ ಅಸಹಜ ಲಯದ ನೋಟಿಫಿಕೇಷನ್‌ಗಳು, ನೋಟಿಫಿಕೇಷನ್‌ಗಳ ಫ್ರೀಕ್ವನ್ಸಿ ಮತ್ತು ಪ್ರಕಾರ, ಹೃದಯ ಲಯದ ಮಾಪನಗಳ ಸಂಖ್ಯೆ ಮತ್ತು ಪ್ರಕಾರ, ಏಟ್ರಿಯಲ್ ಫೈಬ್ರಿಲೇಷನ್‌ನ ಕೆಲವು ಮೌಲ್ಯಗಳ ಶೇಕಡಾವಾರು ಪ್ರಮಾಣ, ವಿವಿಧ ಡೇಟ ಪ್ರಕಾರಗಳು ಮತ್ತು ಜೀವನಕ್ಕೆ ಸಂಬಂಧಿಸಿದ ಅಂಶಗಳೊಂದಿಗೆ ನೀವು ಮಾಡಿರುವ ಸಂವಹನಗಳು ಹಾಗೂ ಅನಿರ್ದಿಷ್ಟ ಮಾಪನಗಳ ಸಂಖ್ಯೆ ಮತ್ತು ಸಂಭವನೀಯ ಕಾರಣಗಳು
  • ಹೃದಯ ಸಂಬಂಧಿತ ಮಾಪನಗಳು ಮತ್ತು ದೃಶ್ಯರೂಪದ ನಿರೂಪಣೆಗಳು
  • ರಕ್ತದೊತ್ತಡ ಲಾಗ್ ಫೀಚರ್‌ಗೆ ಸಂಬಂಧಿದ ನಿಮ್ಮ ಬಳಕೆ, ಉದಾಹರಣೆಗೆ ನೀವು ರಕ್ತದೊತ್ತಡದ ರೀಡಿಂಗ್ ಅನ್ನು ಲಾಗ್ ಮಾಡಿದ್ದೀರೋ ಇಲ್ಲವೋ ಎಂಬ ಮಾಹಿತಿ, ನಿಮ್ಮ ಲಾಗ್ ಮಾಡಿದ ರೀಡಿಂಗ್‌ಗಳ ನಡುವಿನ ಅವಧಿ, ಲಾಗ್ ಮಾಡಲಾದ ರಕ್ತದೊತ್ತಡ ರೀಡಿಂಗ್‌ಗಳ ಒಟ್ಟು ಸಂಖ್ಯೆ ಹಾಗೂ ಅಧಿಕ ರಕ್ತದೊತ್ತಡ ನೋಟಿಫಿಕೇಷನ್ ಫೀಚರ್‌‌ಗೆ ಸಂಬಂಧಿಸಿದ ನಿಮ್ಮ ಬಳಕೆಯು ನಿಮ್ಮ ಲಾಗ್ ಮಾಡಲಾದ ರಕ್ತದೊತ್ತಡದ ರೀಡಿಂಗ್‌ಗಳಿಗೆ ಹೇಗೆ ಪರಸ್ಪರ ಸಂಬಂಧ ಹೊಂದಿದೆ ಎಂಬ ಮಾಹಿತಿ
  • ಅಧಿಕ ರಕ್ತದೊತ್ತಡ ಫೀಚರ್‌ಗೆ ಸಂಬಂಧಿಸಿದ ನಿಮ್ಮ ಬಳಕೆ, ಉದಾಹರಣೆಗೆ ಸ್ವೀಕರಿಸಿದ ಅಧಿಕ ರಕ್ತದೊತ್ತಡ ನೋಟಿಫಿಕೇಷನ್‌ಗಳ ಸಂಖ್ಯೆ ಮತ್ತು ಅಧಿಕ ರಕ್ತದೊತ್ತಡ ನೋಟಿಫಿಕೇಷನ್‌ಗಳನ್ನು ಸ್ವೀಕರಿಸಿದ ನಡುವಿನ ಅವಧಿ

ರಕ್ತದಲ್ಲಿನ ಆಮ್ಲಜನಕ

  • ರಕ್ತದಲ್ಲಿನ ಆಮ್ಲಜನಕ ಆ್ಯಪ್‌ಗೆ ಸಂಬಂಧಿಸಿದ ನಿಮ್ಮ ಬಳಕೆ, ಉದಾಹರಣೆಗೆ ಯಶಸ್ವಿ ಮಾಪನಗಳ ಫಲಿತಾಂಶಗಳು, ತೆಗೆದುಕೊಂಡ ಮಾಪನಗಳ ನಿರ್ದಿಷ್ಟ ಸಂಖ್ಯೆ, ಹಾಗೂ ಕೆಲವು ನಿರ್ದಿಷ್ಟ ಮಾಪನಗಳ ಗುಣಮಟ್ಟ

ಮಾನಸಿಕ ಯೋಗಕ್ಷೇಮ

  • ಮಾನಸಿಕ ಯೋಗಕ್ಷೇಮ ಫೀಚರ್‌ಗಳಿಗೆ ಸಂಬಂಧಿಸಿದ ನಿಮ್ಮ ಬಳಕೆ, ಉದಾಹರಣೆಗೆ ಫೀಚರ್‌ಗಳ ಜೊತೆಗಿನ ನಿಮ್ಮ ಸಂವಹನಗಳು, ನೀವು ಕ್ಲಿನಿಕಲ್ ಮೌಲ್ಯಮಾಪನವನ್ನು ಪೂರ್ಣಗೊಳಿಸಿರುವಿರೋ ಇಲ್ಲವೋ ಎಂಬ ಮಾಹಿತಿ ಹಾಗೂ ಪೂರ್ಣಗೊಳಿಸಿದ್ದರೆ ಯಾವಾಗ ಪೂರ್ಣಗೊಳಿಸಿದ್ದೀರಿ ಎಂಬ ಮಾಹಿತಿ, ನೀವು ಮಾನಸಿಕ ಸ್ಥಿತಿಯನ್ನು ಲಾಗ್ ಮಾಡುವ ಫ್ರೀಕ್ವನ್ಸಿ ಹಾಗೂ ಸಕ್ರಿಯಗೊಳಿಸಿರುವ ನೋಟಿಫಿಕೇಷನ್‌ಗಳ ಫ್ರೀಕ್ವನ್ಸಿ ಮತ್ತು ಪ್ರಕಾರ ಹಾಗೂ ನೋಟಿಫಿಕೇಷನ್‌ಗಳ ಜೊತೆಗಿನ ನಿಮ್ಮ ಸಂವಹನಗಳು
  • ಮೈಂಡ್‌ಫುಲ್‌ನೆಸ್ ಆ್ಯಪ್‌ಗೆ ಸಂಬಂಧಿಸಿದ ನಿಮ್ಮ ಬಳಕೆ, ಉದಾಹರಣೆಗೆ ನಿಮ್ಮ ಸರಾಸರಿ ಉಸಿರಾಟದ ದರ, ಸೆಶನ್ ಅವಧಿ ಮತ್ತು ಕೆಲವು ನಿರ್ದಿಷ್ಟ ಸೆಶನ್ ದೋಷದ ಡೇಟ ಸೇರಿದಂತೆ, ಮೈಂಡ್‌ಫುಲ್‌ನೆಸ್ ಸೆಶನ್ ಪ್ರಕಾರ, ಹೃದಯ ಬಡಿತದ ದರವನ್ನು ಲೆಕ್ಕ ಮಾಡಲಾಗಿತ್ತೋ ಇಲ್ಲವೋ ಎಂಬ ಮಾಹಿತಿ ಹಾಗೂ ಮೈಂಡ್‌ಫುಲ್‌ನೆಸ್‌ನ “ನಿಮ್ಮ ಉಸಿರಾಟವನ್ನು ಅನುಸರಿಸಿ” ಸೆಶನ್ ಸಮಯದಲ್ಲಿ ಕ್ಯಾಪ್ಚರ್ ಆದ ಉಸಿರಾಟ ಮಾಪನ ಡೇಟ

ಸೈಕಲ್ ಟ್ರ್ಯಾಕಿಂಗ್

  • ಋತುಚಕ್ರಗಳು, ಗರ್ಭಾವಸ್ಥೆ ಹಾಗೂ ಗರ್ಭನಿರೋಧಕಗಳ ಬಳಕೆ, ನಿರೀಕ್ಷಿತ ಅವಧಿಗಿಂತ ಹೆಚ್ಚು ಕಾಲ ಇರುವ ಮುಟ್ಟು, ಸರಿಯಾದ ಸಮಯಕ್ಕೆ ಅಥವಾ ಕೆಲವೊಮ್ಮೆ ಮುಟ್ಟಾಗದಿರುವ ಮಾಹಿತಿ, ನಿರಂತರವಾಗಿ ಕಲೆಯಾಗುವುದು, ಅಂಡೋತ್ಪತ್ತಿಯ ಅಂದಾಜುಗಳು, ಮುಟ್ಟು ಅಥವಾ ಫಲವತ್ತತೆಯ ಅವಧಿ ಮತ್ತು ಮನೆಯಲ್ಲೇ ಪಡೆದುಕೊಂಡ ಅಂಡೋತ್ಪತ್ತಿ ಪರೀಕ್ಷೆಯ ಫಲಿತಾಂಶಗಳನ್ನು ಒಳಗೊಂಡ ಋತುಚಕ್ರದ ಅಂಶಗಳು - ಇವುಗಳಿಗೆ ಸಂಬಂಧಿಸಿದ ಮತ್ತು ಇವುಗಳನ್ನು ಆಧರಿಸಿದ ದೈಹಿಕ ಲಕ್ಷಣಗಳು ಮತ್ತು ಫಲಿತಾಂಶಗಳು
  • ಗರ್ಭಾವಸ್ಥೆ ಫೀಚರ್‌ಗೆ ಸಂಬಂಧಿಸಿದ ನಿಮ್ಮ ಬಳಕೆ ಮತ್ತು ತೊಡಗಿಸಿಕೊಳ್ಳುವಿಕೆ, ನಿಮ್ಮ ಪ್ರಸ್ತುತ ಗರ್ಭಾವಸ್ಥೆಯ ಸ್ಟೇಟಸ್, ನಿಮ್ಮ ಗರ್ಭಾವಸ್ಥೆಗೆ ಸಂಬಂಧಿಸಿದ ಕೆಲವು ನಿರ್ದಿಷ್ಟ ಲೆಕ್ಕಹಾಕಿದ ದಿನಾಂಕಗಳು (ಉದಾಹರಣೆಗೆ ನೀವು ಹೆರಿಗೆಯ ದಿನಾಂಕವನ್ನು ಸೆಟ್ ಮಾಡಿದ್ದೀರೋ ಇಲ್ಲವೋ ಎಂಬ ಮಾಹಿತಿ), ನಿಮ್ಮ ಗರ್ಭಾವಧಿ ಹಾಗೂ ನಿಮ್ಮ ಮೆಡಿಕಲ್ IDಗೆ ನಿಮ್ಮ ಗರ್ಭಾವಸ್ಥೆಯನ್ನು ನೀವು ಸೇರಿಸಲು ಆಯ್ಕೆಮಾಡಿದ್ದೀರೋ ಇಲ್ಲವೋ ಎಂಬ ಮಾಹಿತಿಯನ್ನು ಒಳಗೊಂಡಂತೆ

ಔಷಧಗಳು

  • ಔಷಧೋಪಚಾರ ಫೀಚರ್‌ಗೆ ಸಂಬಂಧಿಸಿದ ನಿಮ್ಮ ಬಳಕೆ, ಉದಾಹರಣೆಗೆ ನೀವು ಔಷಧವನ್ನು ಲಾಗ್ ಮಾಡಿದ್ದೀರೋ ಇಲ್ಲವೋ ಮಾಹಿತಿ, ಔಷಧವನ್ನು ಲಾಗ್ ಮಾಡಲು ಬಳಸಿದ ವಿಧಾನ, ಔಷಧ ವೇಳಾಪಟ್ಟಿಯ ರಚನೆ, ಔಷಧಗಳ ವೇಳಾಪಟ್ಟಿಯ ಪ್ರಕಾರ, ಔಷಧೋಪಚಾರ ವೇಳಾಪಟ್ಟಿಗಳಿಗೆ ಸಂಬಂಧಿಸಿದಂತೆ ನೀವು ಕೈಗೊಂಡ ಕ್ರಮಗಳು ಹಾಗೂ ಔಷಧೋಪಚಾರ ಫೀಚರ್‌ನ ಸೆಟ್ಟಿಂಗ್ಸ್ ಮತ್ತು ನೋಟಿಫಿಕೇಷನ್‌ಗಳಿಗೆ ಸಂಬಂಧಿಸಿದ ನಿಮ್ಮ ಸಂವಹನಗಳು ಮತ್ತು ಬಳಕೆ

ನಿದ್ರೆ

  • Apple Watchನಲ್ಲಿನ ಸ್ಲೀಪ್ ಆ್ಯಪ್ ಮತ್ತು ಆರೋಗ್ಯ ಆ್ಯಪ್‌ನಲ್ಲಿನ ಸ್ಲೀಪ್ ಎಂಬುದರ ನಿಮ್ಮ ಬಳಕೆ, ಉದಾಹರಣೆಗೆ ನಿದ್ರೆಯಲ್ಲಿನ ಶ್ವಾಸ ಕ್ರಿಯೆಯ ದರಗಳು, ನಿದ್ರೆಯ ವೇಳಾಪಟ್ಟಿಗಳು ಮತ್ತು ಅವುಗಳು ದಾಖಲಾದ ನಿದ್ರೆಯ ಸಮಯಕ್ಕಿಂತ ಹೇಗೆ ಭಿನ್ನವಾಗಿವೆ, ಚಲನೆಯ ಡೇಟ ಮತ್ತು ನಿದ್ರೆಯ ಸಮಯವನ್ನು ನಿರ್ಧರಿಸಲು ಮತ್ತು ಊಹಿಸಲು ಬಳಸುವ ಇತರ ಸಾಧನ ಬಳಕೆಯ ಡೇಟ, ನಿದ್ರೆಯ ಹಂತಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಸ್ಲೀಪ್ ಸ್ಕೋರ್‌ನ ನಿಮ್ಮ ಬಳಕೆ ಮತ್ತು ಅದರ ಸಂವಹನಕ್ಕೆ ಸಂಬಂಧಿಸಿದ ಮಾಹಿತಿ, ಉದಾಹರಣೆಗೆ ನೀವು ಸ್ವೀಕರಿಸುವ ಸ್ಕೋರ್ ಮತ್ತು ನಿದ್ರೆಯ ಅವಧಿಯಲ್ಲಿ ಎಚ್ಚರವಾಗಿರುವ ಸೆಶನ್‌ಗಳ ಸಂಖ್ಯೆ
  • ನಿದ್ರೆಯಲ್ಲಿನ ಉಸಿರುಗಟ್ಟುವಿಕೆ ನೋಟಿಫಿಕೇಷನ್‌ಗಳು ಫೀಚರ್‌ಗೆ ಸಂಬಂಧಿಸಿದ ನಿಮ್ಮ ಬಳಕೆ ಮತ್ತು ಸಂವಹನ, ಇದರಲ್ಲಿ ನಿಮ್ಮ ಉಸಿರಾಟದಲ್ಲಿನ ತೊಂದರೆ ಮೌಲ್ಯಗಳು, ನಿಮ್ಮ ನಿದ್ರೆಯ ಅವಧಿ ಆರಂಭವಾಗುವ ಗಂಟೆ ಮತ್ತು ಅವಧಿ, ನಿಮ್ಮ ಉಸಿರಾಟದಲ್ಲಿನ ತೊಂದರೆಗಳ ಫ್ರೀಕ್ವನ್ಸಿ ಹಾಗೂ ಒಂದು ನಿದ್ರೆಯ ಅವಧಿಯಲ್ಲಿ ಉಂಟಾದ ಅತ್ಯಂತ ದೀರ್ಘಾವಧಿಯ ಉಸಿರಾಟದಲ್ಲಿನ ತೊಂದರೆಯನ್ನು ಒಳಗೊಂಡಿದೆ

ಶ್ರವಣ ಆರೋಗ್ಯ

  • ಶ್ರವಣಶಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಆಡಿಯೊ ಡೇಟ, ಉದಾಹರಣೆಗೆ ಹೆಡ್‌ಫೋನ್ ಆಡಿಯೊ ಮಟ್ಟಗಳು, ಸುತ್ತಮುತ್ತಲಿನ ಸೌಂಡ್‌ಗಳಿಗೆ ನೀವು ಒಡ್ಡಿಕೊಂಡಿರುವ ಮಟ್ಟಗಳು, ಸುತ್ತಮುತ್ತಲಿನ ಸೌಂಡ್ ಅನ್ನು ಎಷ್ಟು ಕಡಿಮೆ ಮಾಡಲಾಗಿದೆ ಎಂಬುದರ ಡೇಟ
  • AirPods Proನಲ್ಲಿನ ಶ್ರವಣ ಶಕ್ತಿ ಪರೀಕ್ಷೆ ಮತ್ತು ಹಿಯರಿಂಗ್ ಏಡ್ ಫೀಚರ್‌ಗಳು, ಉದಾಹರಣೆಗೆ ನೀವು ಶ್ರವಣ ಶಕ್ತಿ ಪರೀಕ್ಷೆಯನ್ನು ಪೂರ್ಣಗೊಳಿಸಿರುವಿರೋ ಇಲ್ಲವೋ ಎಂಬ ಮಾಹಿತಿ, ಶ್ರವಣ ಶಕ್ತಿ ಪರೀಕ್ಷೆಯ ಅವಧಿ, ನೀವು ಶ್ರವಣ ಶಕ್ತಿ ಪರೀಕ್ಷೆಯನ್ನು ಯಾವಾಗ ತೆಗೆದುಕೊಂಡಿದ್ದು ಎಂಬ ಮಾಹಿತಿ, ಪೂರ್ಣಗೊಳಿಸಿದ ಆಡಿಯೊಗ್ರಾಮ್‌‌ಗಳ ಸಂಖ್ಯೆ ಮತ್ತು ಆಡಿಯೊಗ್ರಾಮ್‌‌ ವರ್ಗೀಕರಣಗಳು ಹಾಗೂ ನಿಮ್ಮ ಸುತ್ತಲಿನ ಪರಿಸರಕ್ಕೆ ಸಂಬಂಧಿಸಿದ ಮಾಹಿತಿ

ಚಟುವಟಿಕೆ ಮತ್ತು ಚಲನೆ

  • ಚಟುವಟಿಕೆ ಮತ್ತು ಚಲನೆಯ ಡೇಟ, ಉದಾಹರಣೆಗೆ ಸ್ಟ್ಯಾಂಡ್ ಅವರ್ಸ್, ವ್ಯಾಯಾಮದ ನಿಮಿಷಗಳು, ಹತ್ತಿದ ಫ್ಲೈಟ್‌ಗಳು, ಎತ್ತರ ಮತ್ತು ಆಳ, ಮೂವ್ ರಿಂಗ್ ಪೂರ್ಣಗೊಳಿಸುವಿಕೆಯ ಶೇಕಡಾವಾರು ಪ್ರಮಾಣ, ದೈಹಿಕ ಚಟುವಟಿಕೆಯ ಮಟ್ಟ, ವರ್ಕ್‌ಔಟ್ ಡೇಟ (ಉದಾಹರಣೆಗೆ ಪ್ರಕಾರ, ಮೋಡ್, ಮೂಲ, ಅವಧಿ, ನೀವು ವರ್ಕ್ಔಟ್‌ಗಾಗಿ ಆಡಿಯೊವನ್ನು ಆರಿಸಿಕೊಳ್ಳುತ್ತೀರಾ ಅಥವಾ ಇಲ್ಲವೇ ಮತ್ತು ನೀವು ಹಂಚಿಕೊಳ್ಳುವ ವರ್ಕ್ಔಟ್‌ಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಚಟುವಟಿಕೆ ಹಂಚಿಕೆ ಎಂಬುದರಲ್ಲಿ ಸ್ನೇಹಿತರ ಚಟುವಟಿಕೆ ಕುರಿತ ನೋಟಿಫಿಕೇಷನ್‌ಗಳ ಜೊತೆಗಿನ ನಿಮ್ಮ ಸಂವಹನಗಳಿಗೆ ಸಂಬಂಧಿಸಿದ ಕೆಲವು ನಿರ್ದಿಷ್ಟ ಮಾಹಿತಿ), ಮೊಬಿಲಿಟಿ-ಸಂಬಂಧಿತ ಮಾಹಿತಿ, ಆ್ಯಕ್ಸೆಲೆರೊಮೀಟರ್, ಗೈರೋಸ್ಕೋಪ್, ಸಾಮಾನ್ಯವಾಗಿ ನೀವು ಮುಖಮಾಡಿರುವ ದಿಕ್ಕು ಮತ್ತು ಒತ್ತಡದ ಡೇಟ
  • Apple Fitness+ ಫೀಚರ್‌ಗಳು ಮತ್ತು ವರ್ಕ್‌ಔಟ್‌ಗಳ ನಿಮ್ಮ ಬಳಕೆ

ಆರೋಗ್ಯ ಹಂಚಿಕೊಳ್ಳುವಿಕೆ

  • ನಿಮ್ಮ ಆರೋಗ್ಯ ಡೇಟವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗಿಸುವ ಆರೋಗ್ಯ ಹಂಚಿಕೆ ಫೀಚರ್‌ಗೆ ಸಂಬಂಧಿಸಿದ ನಿಮ್ಮ ಬಳಕೆ, ಉದಾಹರಣೆಗೆ ಎಷ್ಟು ಜನರ ಜೊತೆಗೆ ನೀವು ಹಂಚಿಕೊಳ್ಳುತ್ತಿದ್ದೀರಿ, ಹಂಚಿಕೊಂಡ ಆರೋಗ್ಯ ವಿಷಯಗಳ ಸಂಖ್ಯೆ, ಹಂಚಿಕೊಳ್ಳಲಾದ ಆರೋಗ್ಯ ವಿಷಯಗಳಿಗೆ ಮಾಡಿದ ಮಾರ್ಪಾಡುಗಳು, ರಚನೆಯಾದ ಮತ್ತು ಹಂಚಿಕೊಂಡ ಆರೋಗ್ಯ ಟ್ರೆಂಡ್‌‌ಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಆರೋಗ್ಯ ಹಂಚಿಕೆ ನೋಟಿಫಿಕೇಷನ್‌ಗಳ ಜೊತೆಗಿನ ನಿಮ್ಮ ಸಂವಹನ
  • “ನಿಮ್ಮ ವೈದ್ಯರೊಂದಿಗೆ ಹಂಚಿಕೊಳ್ಳಿ” ಫೀಚರ್‌ಗೆ ಸಂಬಂಧಿಸಿದ ನಿಮ್ಮ ಬಳಕೆ, ಉದಾಹರಣೆಗೆ ಬಳಕೆಯ ಫ್ರೀಕ್ವನ್ಸಿ; ಹಂಚಿಕೊಂಡ ಆರೋಗ್ಯ ವಿಷಯಗಳ ಕನಿಷ್ಠ, ಗರಿಷ್ಠ ಮತ್ತು ಸರಾಸರಿ ಸಂಖ್ಯೆ ಹಾಗೂ ನೀವು ಆರೋಗ್ಯ ಡೇಟವನ್ನು ಹಂಚಿಕೊಳ್ಳುತ್ತಿರುವ ಆರೋಗ್ಯಾರೈಕೆ ಪೂರೈಕೆದಾರರ ಸಂಖ್ಯಾತ್ಮಕ ವ್ಯಾಪ್ತಿ

ಮೆಡಿಕಲ್ ID ಮತ್ತು ಸುರಕ್ಷತೆ

  • ನಿಮ್ಮ ಮೆಡಿಕಲ್ IDಯ ಬಳಕೆ, ಉದಾಹರಣೆಗೆ ಪೂರ್ಣಗೊಳಿಸಿದ ಫೀಲ್ಡ್‌ಗಳು ಮತ್ತು ಫೀಚರ್‌ನೊಂದಿಗಿನ ನಿಮ್ಮ ಸಂವಹನಗಳು
  • Apple Watchನಲ್ಲಿನ ಫಾಲ್ ಡಿಟೆಕ್ಷನ್ ಫೀಚರ್‌ಗೆ ಸಂಬಂಧಿಸಿದ ನಿಮ್ಮ ಬಳಕೆ ಮತ್ತು ಸಂವಹನಗಳು, ಉದಾಹರಣೆಗೆ ಬಿದ್ದಿರುವ ಒಟ್ಟು ಸಂಖ್ಯೆ ಹಾಗೂ ಬೀಳುವಿಕೆ ಮತ್ತು ಎಷ್ಟು ಬಲವಾಗಿ ಬಿದ್ದಿದ್ದೀರಿ ಎಂಬುದರ ಕುರಿತಾದ ಮಾಹಿತಿ

Siri ಮತ್ತು ಆರೋಗ್ಯ ಆ್ಯಪ್

  • ಆರೋಗ್ಯ ಆ್ಯಪ್ ಡೇಟವನ್ನು ಆ್ಯಕ್ಸೆಸ್ ಮಾಡಲು ನಿಮ್ಮ Siri ಬಳಕೆ, ಉದಾಹರಣೆಗೆ ನೀವು ಪ್ರಶ್ನಿಸಿದ ಆರೋಗ್ಯ ಆ್ಯಪ್ ಡೇಟ ಪ್ರಕಾರ ಹಾಗೂ ನೀವು ಆರೋಗ್ಯ ಆ್ಯಪ್‌ನಲ್ಲಿ ಮಾಹಿತಿಯನ್ನು ರೆಕಾರ್ಡ್ ಮಾಡಲು ವಿನಂತಿಸಿದ್ದೀರೋ ಅಥವಾ ಮಾಹಿತಿಯನ್ನು ಪಡೆಯಲು ವಿನಂತಿಸಿದ್ದೀರೋ ಎಂಬ ಮಾಹಿತಿಯನ್ನು ಒಳಗೊಂಡ ನಿಮ್ಮ ವಿನಂತಿಯ ಪ್ರಕಾರ

ಇತರ

  • ಮಣಿಕಟ್ಟಿನ ತಾಪಮಾನದ ಮಾಪನಗಳು, ಉದಾಹರಣೆಗೆ ಒಟ್ಟುಗೂಡಿಸಿದ ತಾಪಮಾನ ಮಾಪನಗಳು ಮತ್ತು ಇತರೆ ತಾಪಮಾನ ಆಧಾರಿತ ಮಾಹಿತಿ, ಮಣಿಕಟ್ಟಿನ ತಾಪಮಾನ ಮಾಪನ ಡೇಟವನ್ನು ಆಧರಿಸಿದ ಮಾಹಿತಿಯನ್ನು ಒಳಗೊಂಡಂತೆ
  • ಮಣಿಕಟ್ಟಿನ ಸ್ಥಿತಿ ಮತ್ತು ಓರಿಯೆಂಟೇಷನ್
  • ವಿಷನ್ ಪ್ರಿಸ್ಕ್ರಿಪ್ಷನ್ ಮತ್ತು ಸಂಬಂಧಿತ ಫೀಲ್ಡ್‌ಗಳು
  • ನೀವು ಯಾವಾಗ ಮತ್ತು ಹೇಗೆ ಕೆಲವು ದೃಢೀಕರಿಸಬಹುದಾದ ಆರೋಗ್ಯ ದಾಖಲೆಗಳ ಡೇಟವನ್ನು ಆರೋಗ್ಯ ಆ್ಯಪ್‌ಗೆ ಇಂಪೋರ್ಟ್ ಮಾಡಿಕೊಳ್ಳುತ್ತೀರಿ, ಹಾಗೆಯೇ ಆರೋಗ್ಯ ಆ್ಯಪ್‌ನಲ್ಲಿ ಪ್ರದರ್ಶಿಸಲಾದ ಸೂಕ್ತ ಡೇಟ, ಉದಾಹರಣೆಗೆ VO₂ max
  • Apple Watchನಲ್ಲಿನ ಜೀವಾಧಾರಗಳು ಆ್ಯಪ್ ಮತ್ತು ಆರೋಗ್ಯ ಆ್ಯಪ್‌ನಲ್ಲಿನ ಜೀವಾಧಾರಗಳು ಫೀಚರ್‌ಗೆ ಸಂಬಂಧಿಸಿದ ನಿಮ್ಮ ಬಳಕೆ ಮತ್ತು ಸಂವಹನ, ಉದಾಹರಣೆಗೆ, ಸಾಮಾನ್ಯ ಮಟ್ಟದಲ್ಲಿಲ್ಲದ ಆರೋಗ್ಯ ಮೆಟ್ರಿಕ್‌ಗಳ ಸಂಖ್ಯೆ, ಸ್ವೀಕರಿಸಿದ ನೋಟಿಫಿಕೇಷನ್ಸ್ ಸಂಖ್ಯೆ ಹಾಗೂ ಜೀವಾಧಾರಗಳು ಫೀಚರ್‌ ಅನ್ನು ಬೆಂಬಲಿಸಲು ಬಳಸುವ ಕೆಲವು ಆರೋಗ್ಯ ಫೀಚರ್‌ಗಳಿಗೆ ಸಂಬಂಧಿಸಿದ ನಿಮ್ಮ ಬಳಕೆಯ ಕುರಿತಾದ ಮಾಹಿತಿ
  • ಹಗಲುಬೆಳಕಿನಲ್ಲಿ ಕಳೆದ ಸಮಯ ಫೀಚರ್‌ಗೆ ಸಂಬಂಧಿಸಿದ ನಿಮ್ಮ ಬಳಕೆ ಮತ್ತು ಸಂವಹನ, ಉದಾಹರಣೆಗೆ ನೀವು ಹಗಲಿನ ಬೆಳಕಿನಲ್ಲಿ ಕಳೆದ ಅಂದಾಜು ಸಮಯ ಹಾಗೂ ಆ್ಯಂಬಿಯಂಟ್ ಲೈಟ್‌ ಮೌಲ್ಯಗಳ ಒಟ್ಟುಗೂಡಿಸಿದ ಅಂಕಿಅಂಶಗಳು
  • ಇತರ ಥರ್ಡ್-ಪಾರ್ಟಿ ಫಿಟ್‌ನೆಸ್ ಆ್ಯಪ್‌ಗಳು ಅಥವಾ ಸಾಧನಗಳನ್ನು ಹೇಗೆ ಇನ್‌ಸ್ಟಾಲ್ ಮಾಡಲಾಗಿದೆ, ಬಳಸಲಾಗಿದೆ ಅಥವಾ ಕನೆಕ್ಟ್ ಮಾಡಲಾಗಿದೆ; ನಿರ್ದಿಷ್ಟ Apple ಆರೋಗ್ಯ ಮತ್ತು ಫಿಟ್‌ನೆಸ್ ಫೀಚರ್‌ಗಳು ಅಥವಾ ಥರ್ಡ್-ಪಾರ್ಟಿ ಆ್ಯಪ್‌ಗಳಲ್ಲಿ ಬಳಸಲಾದ ಆಲ್ಗರಿದಮ್‌ಗಳೊಂದಿಗೆ ನಿಮ್ಮ ತೊಡಗಿಸಿಕೊಳ್ಳುವಿಕೆ (ಉದಾಹರಣೆಗೆ, HealthKit APIಗಳು); ನಿಮ್ಮ ಅಂದಾಜು ಸ್ಥಳ, ಆರೋಗ್ಯ ಆ್ಯಪ್ ಮತ್ತು ಫಿಟ್‌ನೆಸ್ ಆ್ಯಪ್‌ಗಳೊಂದಿಗಿನ ನಿಮ್ಮ ಸಂವಹನಗಳು; ನೀವು Apple Watch ಅನ್ನು ಎಷ್ಟು ಸಮಯದಿಂದ ಬಳಸುತ್ತಿದ್ದೀರಿ; ಮತ್ತು ನಿಮ್ಮ ಚಟುವಟಿಕೆ ಮತ್ತು ಆರೋಗ್ಯ ಸಂಬಂಧಿತ ಆ್ಯಪ್‌ಗಳ ಬಳಕೆ, ನೋಟಿಫಿಕೇಷನ್‌ಗಳು, ಸೆಟ್ಟಿಂಗ್ಸ್ ಮತ್ತು ಫೀಚರ್‌ಗಳು

ಮೇಲಿನ ಎಲ್ಲಾ ಡೇಟವನ್ನು ನೀವು ವೈಯಕ್ತಿಕವಾಗಿ ಗುರುತಿಸದ ರೂಪದಲ್ಲಿ ಒಟ್ಟುಗೂಡಿಸಬಹುದು ಅಥವಾ ಸಂಯೋಜಿಸಬಹುದು ಮತ್ತು Appleಗೆ ಕಳುಹಿಸುವ ಮೊದಲು ನಿಮ್ಮ iPhone, iPad, Apple Vision Pro, AirPods ಹಾಗೂ Apple Watchನಲ್ಲಿ ವಿಶ್ಲೇಷಿಸಲಾಗುತ್ತದೆ.

ಆರೋಗ್ಯ ಮತ್ತು ಚಟುವಟಿಕೆ ಸುಧಾರಿಸಿ ಡೇಟದ ಬಳಕೆ ಮತ್ತು ಪ್ರಕಟಣೆ

ಆರೋಗ್ಯ, ಚಟುವಟಿಕೆ ಮತ್ತು ಫಿಟ್‌ನೆಸ್ ಫೀಚರ್‌ಗಳನ್ನು ಅಭಿವೃದ್ಧಿಪಡಿಸಲು, ಸುಧಾರಿಸಲು ಮತ್ತು ಅವುಗಳ ಪರಿಣಾಮಕಾರಿತ್ವವನ್ನು ಅರ್ಥಮಾಡಿಕೊಳ್ಳಲು, “ಆರೋಗ್ಯ ಮತ್ತು ಚಟುವಟಿಕೆ ಸುಧಾರಿಸಿ” ಎಂಬುದರ ಅಡಿಯಲ್ಲಿ ಸಂಗ್ರಹಿಸಲಾದ ಡೇಟವನ್ನು Apple ಬಳಸಬಹುದು. ಟ್ರೆಂಡ್‌ಗಳನ್ನು ಗುರುತಿಸಲು ಮತ್ತು ಕೆಲವು ಚಟುವಟಿಕೆ ಹಾಗೂ ಆರೋಗ್ಯ-ಸಂಬಂಧಿತ ಫೀಚರ್‌ಗಳಿಗಾಗಿ ಮೆಟ್ರಿಕ್‌ಗಳನ್ನು ಅಂದಾಜು ಮಾಡಲು ಆರೋಗ್ಯ ಮತ್ತು ಚಟುವಟಿಕೆಯನ್ನು ಸುಧಾರಿಸಿ ಎಂಬಲ್ಲಿನ ಡೇಟವನ್ನು Apple ಬಳಸಬಹುದು. ಆರೋಗ್ಯ ಆ್ಯಪ್ ಫೀಚರ್‌ಗಳು ಕೆಲಸ ಮಾಡಲು ನೆರವಾಗುವ ಮಾಡಲ್‌ಗಳ ಅಭಿವೃದ್ಧಿ ಮತ್ತು ಸುಧಾರಣೆಗಾಗಿ, ಆರೋಗ್ಯ ಮತ್ತು ಚಟುವಟಿಕೆಯನ್ನು ಸುಧಾರಿಸಿ ಎಂಬುದರ ಅಡಿಯಲ್ಲಿ ಸಂಗ್ರಹಿಸಿದ ಆರೋಗ್ಯ ಆ್ಯಪ್ ಡೇಟವನ್ನು ಸಹ ಬಳಸಬಹುದು. ಉದಾಹರಣೆಗೆ, ಒಟ್ಟುಗೂಡಿಸಿದ ಆರೋಗ್ಯ ಆ್ಯಪ್‌ ಹುಡುಕಾಟ ಪ್ರಶ್ನೆಗಳನ್ನು ಆರೋಗ್ಯ ಆ್ಯಪ್‌ ಹುಡುಕಾಟ ಮಾಡಲ್‌ಗಳನ್ನು ಸುಧಾರಿಸಲು ಬಳಸಬಹುದು. ನಿಮ್ಮ ಡೇಟವನ್ನು ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ ಮತ್ತು ವೈಯಕ್ತಿಕ ಡೇಟವನ್ನು ಒಳಗೊಂಡಿರುವುದಿಲ್ಲ.

ಸೀಮಿತ ಸಂದರ್ಭಗಳಲ್ಲಿ, ನಿಯಂತ್ರಕ ಸಲ್ಲಿಕೆಗಳನ್ನು ಬೆಂಬಲಿಸಲು ಅಗತ್ಯವಿರುವಂತೆ ಸೂಕ್ತವಾದ ಆರೋಗ್ಯ ಮತ್ತು ವೈದ್ಯಕೀಯ ನಿಯಂತ್ರಕ ಅಧಿಕಾರಿಗಳೊಂದಿಗೆ Apple ಕೆಲವು ಸಂಯೋಜಿತ ಡೇಟವನ್ನು ಹಂಚಿಕೊಳ್ಳಬಹುದು. ಹಂಚಿಕೊಂಡ ಡೇಟ ಯಾವುದೇ ವೈಯಕ್ತಿಕ ಮಟ್ಟದ ಡೇಟ ಅಥವಾ ನಿಮ್ಮನ್ನು ಗುರುತಿಸಬಹುದಾದ ಡೇಟವನ್ನು ಒಳಗೊಂಡಿರುವುದಿಲ್ಲ.

ಆರೋಗ್ಯ ಮತ್ತು ಚಟುವಟಿಕೆಯನ್ನು ಸುಧಾರಿಸಿ ಎಂಬುದನ್ನು ಸಕ್ರಿಯಗೊಳಿಸುವ ಮೂಲಕ ನೀವು Apple ಮತ್ತು ಅದರ ಅಂಗಸಂಸ್ಥೆಗಳು ಹಾಗೂ ಏಜೆಂಟ್‌ಗಳು, ಮೇಲೆ ವಿವರಿಸಿದಂತೆ ಈ ಮಾಹಿತಿಯ ಪ್ರಸರಣ, ಸಂಗ್ರಹಣೆ, ನಿರ್ವಹಣೆ, ಪ್ರಕ್ರಿಯೆಗೊಳಿಸುವಿಕೆ ಮತ್ತು ಬಳಕೆಯಂತಹ ಕಾರ್ಯಗಳನ್ನು ಮಾಡುವುದನ್ನು ನೀವು ಒಪ್ಪುತ್ತೀರಿ ಮತ್ತು ಅದಕ್ಕೆ ಸಮ್ಮತಿಸುತ್ತೀರಿ. Apple ಈ ಮಾಹಿತಿಯನ್ನು ವಿಶ್ವಾಸಾರ್ಹ ಥರ್ಡ್-ಪಾರ್ಟಿ ಸೇವಾ ಪೂರೈಕೆದಾರರ ಜೊತೆಗೆ ಸಂಗ್ರಹಿಸಬಹುದು.

ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತೆ ನೀತಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ, ನೀವು ಅದನ್ನು www.apple.com/in/privacy ಎಂಬಲ್ಲಿ ನೋಡಬಹುದು.

2025-12-12