ಸುರಕ್ಷತಾ ಫೀಚರ್‌ಗಳನ್ನು ಸುಧಾರಿಸಿ ಮತ್ತು ಗೌಪ್ಯತೆ

ಸುರಕ್ಷತಾ ಫೀಚರ್‌ಗಳನ್ನು ಸುಧಾರಿಸಿ ಎನ್ನುವುದನ್ನು ನಿಮ್ಮ ಗೌಪ್ಯತೆಯನ್ನು ಕಾಪಾಡಲು ಮತ್ತು ನೀವು ಏನನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವುದಕ್ಕೆ ಅನುವುಮಾಡಿಕೊಡಲು ವಿನ್ಯಾಸಗೊಳಿಸಲಾಗಿದೆ.


ನಮ್ಮ ಸುರಕ್ಷೆಗೆ ಸಂಬಂಧಿತ ಫೀಚರ್ ಮೂಲಕ ನಿಮ್ಮ iOS ಸಾಧನ ಮತ್ತು Apple Watchನಿಂದ ಒಟ್ಟುಗೂಡಿಸಿದ ಮಾಹಿತಿಯನ್ನು “ಸುರಕ್ಷಾ ಫೀಚರ್‌ಗಳನ್ನು ಸುಧಾರಿಸಿ” Appleಗೆ ಕಳುಹಿಸುತ್ತದೆ. ಅಂದರೆ, ಅವುಗಳ ಬೆಂಬಲಿತ ಆಲ್ಗರಿದಮ್‌ಗಳ ಸಮೇತವಾಗಿ ಸುರಕ್ಷಾ ಫೀಚರ್‌ಗಳನ್ನು ಅಭಿವೃದ್ಧಿಪಡಿಸಲು, ಸುಧಾರಿಸಲು ಹಾಗೂ ಪರಿಣಾಮಕಾರಿತ್ವವನ್ನು ಅರ್ಥಮಾಡಿಕೊಳ್ಳಲು ಕಳುಹಿಸಲಾಗುತ್ತದೆ. ಇದು ಕಚ್ಚಾ ಸೆನ್ಸರ್ ಡೇಟ, ಸುರಕ್ಷಾ ಸಂಬಂಧಿತ ಸೆನ್ಸರ್‌ಗಳಿಂದ ತೆಗೆದ ಮಾಹಿತಿ ಹಾಗೂ ಈ ಫೀಚರ್‌ಗಳ ನಿಮ್ಮ ಬಳಕೆಗೆ ಸಂಬಂಧಿತ ಮಾಹಿತಿಯನ್ನು ಒಳಗೊಂಡಿರಬಹುದು. ನಿಮ್ಮ ಡೇಟವನ್ನು ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ ಮತ್ತು ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಒಳಗೊಂಡಿರುವುದಿಲ್ಲ.
 
ಸುರಕ್ಷಾ ಫೀಚರ್‌ಗಳನ್ನು ಸುಧಾರಿಸುವ ಭಾಗವಾಗಿ ಸಂಗ್ರಹಿಸಿದ ಮಾಹಿತಿಯಲ್ಲಿ ನಮ್ಮ ಸುರಕ್ಷೆಗೆ-ಸಂಬಂಧಿಸಿದ ಫೀಚರ್‌ಗಳು ಮತ್ತು ಸೆನ್ಸರ್‌ಗಳಿಂದ ಕೆಲವು ಡೇಟ ಒಳಗೊಂಡಿರಬಹುದು, ಅಂದರೆ ನಿಮ್ಮ ಸ್ಥಳದ ಮಾಹಿತಿ, ಸುರಕ್ಷಾ ಅಲರ್ಟ್‌ಗಳು ಹಾಗೂ ಈ ಫೀಚರ್‌ಗಳ ಜೊತೆಗೆ ನಿಮ್ಮ ಸಂವಾದಗಳು. ಉದಾಹರಣೆಗೆ, ಕ್ರ್ಯಾಶ್ ಅನ್ನು ಪತ್ತೆ ಮಾಡುವ ಸಂದರ್ಭದಲ್ಲಿ, ಗಂಭೀರವಾದ ಕ್ರ್ಯಾಶ್ ಸಂಭವಿಸಿದೆಯೇ ಎಂದು ಪತ್ತೆ ಮಾಡಲು ಬಳಸಬಹುದಾದ ಡೇಟ ಸೇರಿರಬಹುದು, ಅಂದರೆ, ಚಲನೆ (ಅಕ್ಸಲೆರೋಮೀಟರ್, ಗೈರೋಸ್ಕೋಪ್, ಬಾರೋಮೆಟ್ರಿಕ್ ಒತ್ತಡ ಹಾಗೂ ಮ್ಯಾಗ್ನೆಟೋಮೀಟರ್ ಸೆನ್ಸರ್ ಡೇಟದಂತಹ ಮಾಹಿತಿ), ಚಾಲನೆಯ ಮಾಹಿತಿ ಹಾಗೂ ಚಟುವಟಿಕೆ (ನಿಮ್ಮ ಪ್ರಯಾಣದ ಸಾಮಾನ್ಯ ದಿಕ್ಕು, ಚಾಲನೆಯಲ್ಲಿ ಕಳೆದ ಸಮಯ ಹಾಗೂ ವೇಗಕ್ಕೆ ಸಂಬಂಧಿಸಿದ ಡೇಟದಂತಹ ಮಾಹಿತಿ), ಮತ್ತು ಪತ್ತೆ ಮಾಡಲಾದ ಕ್ರ್ಯಾಶ್ ಕುರಿತ, ಸಂಬಂಧಿತ ಹಾಗೂ ಉತ್ಪನ್ನವಾದ ಮಾಹಿತಿ (ಘಟನೆಯ ಹೆಚ್ಚು ನಿಖರವಲ್ಲದ ಸ್ಥಳ ಮತ್ತು ಸಮಯ, ಸೂರ್ಯನ ದಿಕ್ಕು ಹಾಗೂ ಪರಿಸರದ ಧ್ವನಿ ಎಕ್ಸ್‌ಪೋಶರ್ ಮಟ್ಟಗಳು).
 
Apple ನೀವು ನಮೂದಿಸಿದ ಜನಸಂಖ್ಯೆಗೆ ಸಂಬಂಧಿಸಿದ ಮಾಹಿತಿ (ಅಂದರೆ ಲಿಂಗ ಮತ್ತು ಅಂದಾಜು ವಯಸ್ಸು) ಇವೆಂಟ್ ಸಮಯದಲ್ಲಿ ನಿಮ್ಮ ಸಾಧನದ ಸ್ಥಿತಿಗೆ ಸಂಬಂಧಿಸಿದ ಡೇಟವನ್ನು ಸಂಗ್ರಹಿಸಬಹುದು, ಅದರಲ್ಲಿ Wi-Fi ಅಥವಾ ಮೊಬೈಲ್ ಸೇವೆ, ಆವೃತ್ತಿ, ಸಾಫ್ಟ್‌ವೇರ್ ಆವೃತ್ತಿ, ಹಾಗೂ ನಿಮ್ಮ Watchನಂತಹ ಮತ್ತೊಂದು Apple ಸಾಧನದ ಜೊತೆಗೆ ಜೋಡಿಸಲಾಗಿದೆಯೇ ಎನ್ನುವ ಕೆಲವು ಡೇಟವನ್ನು ಸಂಗ್ರಹಿಸಬಹುದು.
 
Apple ನಿಮ್ಮ ಪರಿಸರ, ನಿಮ್ಮ ಸಾಧನಗಳ ನಡುವಿನ ಸಂವಾದ, ಯಾವುದೇ ಫೀಚರ್ ಅನ್ನು ಎಷ್ಟು ಧೀರ್ಘಕಾಲ ಬಳಸಲಾಗಿದೆ, ಥರ್ಟಿ ಪಾರ್ಟಿ ಮೂಲಕ ಸಕ್ರಿಯಗೊಳಿಸಲಾಗಿರುವವು ಸೇರಿದಂತೆ ಸುರಕ್ಷೆಗೆ ಸಂಬಂಧಿಸಿದ ನೋಟಿಫಿಕೇಷನ್‌ಗಳು, ಆ್ಯಪ್‌ಗಳು, ಸೆಟ್ಟಿಂಗ್ಸ್ ಹಾಗೂ ಫೀಚರ್‌ಗಳೊಂದಿಗೆ ನಿಮ್ಮ ತೊಡಗಿಸಿಕೊಳ್ಳುವಿಕೆ, ನಿರ್ದಿಷ್ಟ ಸುರಕ್ಷಾ ಫೀಚರ್ ಒಂದನ್ನು ಬಳಸಿದ ಫಲಿತಾಂಶವಾಗಿ ತುರ್ತು ಕರೆಯೊಂದನ್ನು ಮಾಡಿದಲ್ಲಿ ಮತ್ತು ಆ ಕರೆಯನ್ನು ಹೇಗೆ ಮಾಡಲಾಗಿದೆ ಎನ್ನುವ ಕುರಿತು ಸಹ ಮಾಹಿತಿಯನ್ನು ಸ್ವೀಕರಿಸಬಹುದು. ಮೇಲಿನ ಎಲ್ಲಾ ಡೇಟವನ್ನು ಒಟ್ಟುಗೂಡಿಸಬಹುದು ಮತ್ತು Appleಗೆ ಕಳುಹಿಸುವ ಮೊದಲು ನಿಮ್ಮ iOS ಸಾಧನ ಮತ್ತು Apple Watchನಲ್ಲಿ ವಿಶ್ಲೇಷಿಸಲಾಗುತ್ತದೆ.
 
ಸುರಕ್ಷತಾ ಫೀಚರ್‌ಗಳನ್ನು ಸುಧಾರಿಸಿ ಎಂಬುದನ್ನು ಸಕ್ರಿಯಗೊಳಿಸುವ ಮೂಲಕ, ನೀವು Apple ಮತ್ತು ಅದರ ಅಂಗಸಂಸ್ಥೆಗಳು ಹಾಗೂ ಏಜೆಂಟ್‌ಗಳು ಈ ಮಾಹಿತಿಯ ಪ್ರಸರಣ, ಸಂಗ್ರಹಣೆ, ನಿರ್ವಹಣೆ, ಪ್ರಕ್ರಿಯೆಗೊಳಿಸುವಿಕೆ, ಬಳಕೆ ಮತ್ತು ಬಹಿರಂಗಪಡಿಸುವಿಕೆಯಂತಹ ಕಾರ್ಯಗಳನ್ನು ಮಾಡುವುದನ್ನು ನೀವು ಒಪ್ಪುತ್ತೀರಿ ಮತ್ತು ಅದಕ್ಕೆ ಸಮ್ಮತಿಸುತ್ತೀರಿ. Apple ಈ ಮಾಹಿತಿಯನ್ನು ವಿಶ್ವಾಸಾರ್ಹ ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರೊಂದಿಗೆ ಪ್ರಕ್ರಿಯೆಗೊಳಿಸಬಹುದು ಮತ್ತು ಸಂಗ್ರಹಿಸಬಹುದು.
 
ನೀವು ಯಾವುದೇ ಸಮಯದಲ್ಲಿ “ಸುರಕ್ಷಾ ಫೀಚರ್‌ಗಳನ್ನು ಸುಧಾರಿಸಿ” ಅನ್ನು ನಿಷ್ಕ್ರಿಯಗೊಳಿಸುವ ಆಯ್ಕೆಯನ್ನು ಮಾಡಬಹುದು. ಹಾಗೆ ಮಾಡಲು, ಸೆಟ್ಟಿಂಗ್ಸ್ > ಗೌಪ್ಯತೆ & ಭದ್ರತೆ > ಅನಾಲಿಟಿಕ್ಸ್ ಮತ್ತು ಸುಧಾರಣೆಗಳಿಗೆ ಹೋಗಿ ಮತ್ತು ಸುರಕ್ಷತೆಯನ್ನು ಸುಧಾರಿಸಿ ಅನ್ನು ಆಫ್ ಮಾಡಲು ಟ್ಯಾಪ್ ಮಾಡಿ.
 
ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು

2025-12-12