Siri ಹಾಗೂ ಡಿಕ್ಟೇಷನ್ ಅನ್ನು ಸುಧಾರಿಸಿ ಮತ್ತು ಗೌಪ್ಯತೆ

Siri ಮತ್ತು ಡಿಕ್ಟೇಷನ್ ಅನ್ನು ಸುಧಾರಿಸಿ ಎಂಬುದು, Siri, ಡಿಕ್ಟೇಷನ್ ‌ಮತ್ತು ಅನುವಾದ ಅಥವಾ ವಾಯ್ಸ್ ಕಂಟ್ರೋಲ್‌ನಂತಹ ಸೀಮಿತ ಇತರ ಭಾಷೆಯ ಪ್ರೊಸೆಸಿಂಗ್ ಫೀಚರ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ಸುಧಾರಿಸುವುದಕ್ಕೆ Appleಗೆ ಸಹಾಯ ಮಾಡಲು, Siri ಹಾಗೂ ಡಿಕ್ಟೇಷನ್‌ನೊಂದಿಗಿನ ಆಡಿಯೊ ಸಂವಹನಗಳ ಸ್ಯಾಂಪಲ್ ಅನ್ನು ಸಂಗ್ರಹಿಸಲು ಮತ್ತು ಉದ್ಯೋಗಿಗಳ ಮೂಲಕ ಅದನ್ನು ಪರಿಶೀಲನೆಗೆ ಒಳಪಡಿಸಲು Appleಗೆ ಅನುವು ಮಾಡಿಕೊಡುತ್ತದೆ.
 

Siri ಮತ್ತು ಡಿಕ್ಟೇಷನ್ ಅನ್ನು ಸುಧಾರಿಸಿ ಎಂಬುದು, Siri, ಡಿಕ್ಟೇಷನ್ ‌ಹಾಗೂ ಅನುವಾದ ಅಥವಾ ವಾಯ್ಸ್ ಕಂಟ್ರೋಲ್‌ನಂತಹ ಸೀಮಿತ ಇತರ ಭಾಷೆಯ ಪ್ರಕ್ರಿಯೆಗೊಳಿಸುವ ಫೀಚರ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು Appleಗೆ ಸಹಾಯ ಮಾಡುತ್ತದೆ. ಮಾತ್ರವಲ್ಲದೆ Siri, ಡಿಕ್ಟೇಷನ್ ಹಾಗೂ ಅನುವಾದದ ಆಡಿಯೊ ಸಂವಾದಗಳ ಸ್ಯಾಂಪಲ್ ಅನ್ನು ಸಂಗ್ರಹಿಸಲು ಮತ್ತು ಉದ್ಯೋಗಿಗಳ ಮೂಲಕ ಅದನ್ನು ಪರಿಶೀಲನೆಗೆ ಒಳಪಡಿಸಲು Appleಗೆ ಅನುವು ಮಾಡಿಕೊಡುತ್ತದೆ.


Siri ಮತ್ತು ಡಿಕ್ಟೇಷನ್

ನೀವು Siri ಮತ್ತು ಡಿಕ್ಟೇಷನ್ ಅನ್ನು ಸುಧಾರಿಸುವ ಆಯ್ಕೆಯನ್ನು ಮಾಡಿದರೆ, Siri ಮತ್ತು ಡಿಕ್ಟೇಷನ್ ಜೊತೆಗಿನ ನಿಮ್ಮ ಸಂವಾದಗಳ ಆಡಿಯೊವನ್ನು Apple ಸಂಗ್ರಹಿಸಬಹುದು. ಆಡಿಯೊ ಡೇಟ, ಟ್ರಾನ್ಸ್‌ಕ್ರಿಪ್ಟ್‌ಗಳು ಮತ್ತು ನೀವು ಮಾಡಿದ ವಿನಂತಿಯ ವರ್ಗ, ಸಾಧನದ ನಿರ್ದಿಷ್ಟ ವಿಶೇಷತೆಗಳು, ಕಾರ್ಯಕ್ಷಮತೆಯ ಅಂಕಿಅಂಶಗಳು ಮತ್ತು ವಿನಂತಿಯನ್ನು ಮಾಡಿದ ಸಮಯದಲ್ಲಿ ನಿಮ್ಮ ಸಾಧನದ ಅಂದಾಜು ಸ್ಥಳದಂತಹ ಸಂಬಂಧಿತ ವಿನಂತಿಯ ಡೇಟವನ್ನು, Siri, ಡಿಕ್ಟೇಷನ್, ಹುಡುಕಾಟ ಮತ್ತು ಇತರ ಭಾಷಾ ಪ್ರಕ್ರಿಯೆಗೊಳಿಸುವಿಕೆಯ ಫಂಕ್ಷನಾಲಿಟಿಯನ್ನು ಅಭಿವೃದ್ಧಿಪಡಿಸಲು ಹಾಗೂ ಸುಧಾರಿಸಲು Apple ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಬಳಸಬಹುದು. ಉದಾಹರಣೆಗೆ, Siri, ಹುಡುಕಾಟ, ವಾಯ್ಸ್ ಕಂಟ್ರೋಲ್, ಅನುವಾದ ಮತ್ತು ಸ್ವಯಂಚಾಲಿತ ಮಾತಿನ ಗುರುತಿಸುವಿಕೆಯ ಮಾಡಲ್‌ಗಳನ್ನು ಪರಿಷ್ಕರಿಸಲು ಟ್ರಾನ್ಸ್‌ಕ್ರಿಪ್ಟ್‌ಗಳನ್ನು ಬಳಸಬಹುದು. Apple ಉದ್ಯೋಗಿಗಳು ಮಾತ್ರ ಕೈಗೊಳ್ಳುವ ಆಡಿಯೊ ಪರಿಶೀಲನೆಯ ಜೊತೆಗೆ ಈ ಡೇಟದ ಸಬ್‌ಸೆಟ್ ಅನ್ನು ಗ್ರೇಡರ್‌ಗಳು ಪರಿಶೀಲಿಸಬಹುದು.

ನಿಮ್ಮ ಆಡಿಯೊ ಡೇಟ, ಟ್ರಾನ್ಸ್‌ಕ್ರಿಪ್ಟ್‌ಗಳು ಮತ್ತು ಸಂಬಂಧಿತ ವಿನಂತಿಯ ಡೇಟವನ್ನು ಒಳಗೊಂಡಿರುವ ನಿಮ್ಮ ವಿನಂತಿ ಇತಿಹಾಸವು ರ್‍ಯಾಂಡಮ್, ಸಾಧನ ರಚಿತ ಐಡೆಂಟಿಫೈಯರ್‌ನೊಂದಿಗೆ ಸಂಯೋಜಿತವಾಗಿರುತ್ತವೆ, ಅದು ಪ್ರತಿ ಗಂಟೆಗೆ ಹಲವು ಬಾರಿ ಬದಲಾಗುತ್ತದೆ ಮತ್ತು ನಿಮ್ಮ Apple ಖಾತೆ ಅಥವಾ ಈಮೇಲ್ ವಿಳಾಸದೊಂದಿಗೆ ಸಂಯೋಜಿತವಾಗಿರುವುದಿಲ್ಲ. Apple ಈ ಡೇಟವನ್ನು ಎರಡು ವರ್ಷಗಳವರೆಗೆ ಇರಿಸಿಕೊಳ್ಳಬಹುದು ಮತ್ತು ಬಳಸಬಹುದು ಹಾಗೂ Siri, ಡಿಕ್ಟೇಷನ್, ಹುಡುಕಾಟ ಮತ್ತು ಇತರ ಸೀಮಿತ ಭಾಷೆ ಪ್ರಕ್ರಿಯೆಗೊಳಿಸುವ ಫೀಚರ್‌ಗಳನ್ನು ನಿರಂತರವಾಗಿ ಸುಧಾರಿಸಲು ಪರಿಶೀಲಿಸಿದ ಸಂವಹನಗಳ ಒಂದು ಸಣ್ಣ ಉಪವಿಭಾಗವನ್ನು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಇರಿಸಿಕೊಳ್ಳಬಹುದು.

ನಿಮ್ಮ Siri ಮತ್ತು ಡಿಕ್ಟೇಷನ್ ಸಂವಹನಗಳ ಇತಿಹಾಸವನ್ನು ನಿಮ್ಮ ಸಾಧನದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ನಿಮ್ಮ Siri ಅನುಭವವನ್ನು ವೈಯಕ್ತೀಕರಿಸಲು ಇದನ್ನು ಬಳಸಬಹುದು.

ನಿಮ್ಮ ವಿನಂತಿಯ ಇತಿಹಾಸವನ್ನು ಮಾರ್ಕೆಟಿಂಗ್ ಪ್ರೊಫೈಲ್ ನಿರ್ಮಿಸಲು ಬಳಸಲಾಗುವುದಿಲ್ಲ ಮತ್ತು ಯಾರಿಗೂ ಎಂದಿಗೂ ಮಾರಾಟ ಮಾಡಲಾಗುವುದಿಲ್ಲ.

ನಿಮ್ಮ Siri ಅಥವಾ ಡಿಕ್ಟೇಷನ್ ಸಂವಾದಗಳಲ್ಲೊಂದರ ಪರಿಶೀಲನೆಗಾಗಿ ಆಯ್ಕೆ ಮಾಡಿದರೆ, ವಿನಂತಿಯನ್ನು ಹಾಗೆಯೇ Siri ಒದಗಿಸಿದ ಪ್ರತಿಕ್ರಿಯೆಯನ್ನು, ನಿಖರತೆಯನ್ನು ನಿರ್ಧರಿಸಲು ಹಾಗೂ Apple ಉತ್ಪನ್ನಗಳು ಮತ್ತು ಸೇವೆಗಳಲ್ಲಿ Siri, ಡಿಕ್ಟೇಷನ್, ಹುಡುಕಾಟ ಮತ್ತು ಇತರ ಸೀಮಿತ ಭಾಷಾ ಪ್ರಕ್ರಿಯೆಗೊಳಿಸುವಿಕೆ ಫಂಕ್ಷನಾಲಿಟಿಯಲ್ಲಿ ಸಾಮಾನ್ಯವಾದ ಸುಧಾರಣೆಯನ್ನು ತರಲು ವಿಶ್ಲೇಷಿಸಲಾಗುತ್ತದೆ. ನಿಮ್ಮ ವಿನಂತಿಯ ಸಂದರ್ಭವನ್ನು ಆಧರಿಸಿ, Siriಯ ಪ್ರತಿಕ್ರಿಯೆಯ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲು ನಿಮ್ಮ ಸಂಪರ್ಕಗಳ ಹೆಸರುಗಳು ಅಥವಾ ನಿಮ್ಮ ಸಾಧನದಲ್ಲಿ ಇನ್‌ಸ್ಟಾಲ್ ಮಾಡಲಾಗಿರುವ ಆ್ಯಪ್‌ಗಳಂತಹ ವಿನಂತಿಗೆ ನೇರವಾಗಿ ಸಂಬಂಧಿಸಿದ ಹೆಚ್ಚುವರಿ ಸಂದರ್ಭೋಚಿತ ಡೇಟವನ್ನು ವಿಮರ್ಶಕರು ಆ್ಯಕ್ಸೆಸ್ ಮಾಡಬಹುದು. ಕಟ್ಟುನಿಟ್ಟಾದ ಗೌಪ್ಯತೆಯ ಬಾಧ್ಯತೆಗಳಿಗೆ ಒಳಪಟ್ಟಿರುವ Apple ಉದ್ಯೋಗಿಗಳು ಮಾತ್ರ Siri ಮತ್ತು ಡಿಕ್ಟೇಷನ್‌ನೊಂದಿಗೆ ಆಡಿಯೊ ಸಂವಾದಗಳನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಾಗುತ್ತದೆ. ನೀವು ಯಾವುದೇ ಸಮಯದಲ್ಲಿ Siri ಮತ್ತು ಡಿಕ್ಟೇಷನ್ ಅನ್ನು ಸುಧಾರಿಸಲು ನಿಮ್ಮ ಸೆಟ್ಟಿಂಗ್ ಅನ್ನು ಬದಲಾಯಿಸಬಹುದು. ಹಾಗೆ ಮಾಡಲು, ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > ಅನಾಲಿಟಿಕ್ಸ್ ಮತ್ತು ಸುಧಾರಣೆಗಳು ಎಂಬಲ್ಲಿಗೆ ಹೋಗಿ.

ಸೆಟ್ಟಿಂಗ್ಸ್ > Siri > Siri ಮತ್ತು ಡಿಕ್ಟೇಷನ್ ಇತಿಹಾಸ ಎಂಬಲ್ಲಿಗೆ ಹೋಗುವ ಮೂಲಕ ಹಾಗೂ “Siri ಮತ್ತು ಡಿಕ್ಟೇಷನ್ ಇತಿಹಾಸವನ್ನು ಡಿಲೀಟ್ ಮಾಡಿ” ಎಂಬುದನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ಸಾಧನದಲ್ಲಿ ಸಂಗ್ರಹವಾಗಿರುವ ನಿಮ್ಮ Siri ಮತ್ತು ಡಿಕ್ಟೇಷನ್ ವಿನಂತಿಗಳ ಟ್ರಾನ್ಸ್‌ಕ್ರಿಪ್ಟ್‌ಗಳನ್ನು ಸಹ ನೀವು ಡಿಲೀಟ್ ಮಾಡಬಹುದು.

ನೀವು ಸೆಟ್ಟಿಂಗ್ಸ್ > ಸಾಮಾನ್ಯ > ಕೀಬೋರ್ಡ್ ಎಂಬಲ್ಲಿಗೆ ಹೋಗುವ ಮೂಲಕ ಮತ್ತು “ಡಿಕ್ಟೇಷನ್ ಸಕ್ರಿಯಗೊಳಿಸಿ” ಅನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ Siri ಮತ್ತು ಡಿಕ್ಟೇಷನ್ ಅನ್ನು ನಿಷ್ಕ್ರಿಯಗೊಳಿಸಬಹುದು. ನಂತರ ಸೆಟ್ಟಿಂಗ್ಸ್ ಆ್ಯಪ್ > Siri > Siriಯೊಂದಿಗೆ ಮಾತನಾಡಿ ಎಂಬಲ್ಲಿಗೆ ಹೋಗಿ ಮತ್ತು ಆಫ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸೆಟ್ಟಿಂಗ್ಸ್ ಆ್ಯಪ್ > Siriಗೆ ಹೋಗಿ “Siriಗಾಗಿ ಹೋಮ್ ಒತ್ತಿರಿ” ಅಥವಾ “Siriಗಾಗಿ ಸೈಡ್ ಬಟನ್ ಒತ್ತಿರಿ” ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡಿ. ನೀವು Siri ಮತ್ತು ಡಿಕ್ಟೇಷನ್ ಅನ್ನು ನಿಷ್ಕ್ರಿಯಗೊಳಿಸಿದರೆ, ನಿಮ್ಮ ಸಾಧನದಲ್ಲಿ ಸಂಗ್ರಹವಾಗಿರುವ ಮತ್ತು ನಿಮ್ಮ ಅನುಭವವನ್ನು ವೈಯಕ್ತೀಕರಿಸಲು ಬಳಸಿರುವ ನಿಮ್ಮ Siri ಮತ್ತು ಡಿಕ್ಟೇಷನ್ ವಿನಂತಿಗಳ ಟ್ರಾನ್ಸ್‌ಕ್ರಿಪ್ಟ್‌ಗಳನ್ನು ಡಿಲೀಟ್ ಮಾಡಲಾಗುತ್ತದೆ.

ಅನುವಾದ

ನೀವು Siri ಮತ್ತು ಡಿಕ್ಟೇಷನ್ ಅನ್ನು ಸುಧಾರಿಸಲು ಆಯ್ಕೆಮಾಡಿದರೆ, ರ‍್ಯಾಂಡಮ್, ನಿರಂತರ ಬದಲಾಗುವ, ಸಾಧನ-ಜನರೇಟ್ ಮಾಡಿದ ಐಡೆಂಟಿಫೈಯರ್‌ಗಳಿಗೆ ಸಂಬಂಧಿಸಿದ ನಿಮ್ಮ ಅನುವಾದ ವಿನಂತಿಗಳ ಆಡಿಯೊ, ಪಠ್ಯ ಇನ್‌ಪುಟ್, ಹಾಗೂ ಟ್ರಾನ್ಸ್‌ಕ್ರಿಪ್ಟ್‌ಗಳನ್ನು Apple ಉತ್ಪನ್ನಗಳು ಮತ್ತು ಸೇವೆಗಳಲ್ಲಿ Siri, ಡಿಕ್ಟೇಷನ್, ಅನುವಾದ ಮತ್ತು ಸೀಮಿತ ಇತರ ಭಾಷಾ ಸಂಸ್ಕರಣಾ ಕಾರ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು ಸಂಗ್ರಹಿಸಬಹುದು ಮತ್ತು ಪರಿಶೀಲಿಸಬಹುದು.

ನಿಮ್ಮ ಅನುವಾದ ವಿನಂತಿಗಳನ್ನು Siri, ಡಿಕ್ಟೇಷನ್, ಅನುವಾದ ಮತ್ತು ಸೀಮಿತ ಇತರ ಭಾಷಾ ಸಂಸ್ಕರಣಾ ಫಂಕ್ಷನಾಲಿಟಿಯನ್ನು ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು Appleಗೆ ಸಹಾಯವಾಗಲು ಎರಡು ವರ್ಷಗಳವರೆಗೆ ಉಳಿಸಿಕೊಳ್ಳಬಹುದು. ಉದಾಹರಣೆಗೆ, Siri ಟ್ರಾನ್ಸ್‌ಕ್ರಿಪ್ಟ್‌ಗಳ ಬಳಕೆಯನ್ನು ಹುಡುಕಾಟ, ವಾಯ್ಸ್ ಕಂಟ್ರೋಲ್, ಅನುವಾದ ಹಾಗೂ ಸ್ವಯಂಚಾಲಿತ ಮಾತಿನ ಗುರುತಿಸುವಿಕೆಯ ಮಾಡಲ್‌ಗಳನ್ನು ಪರಿಷ್ಕರಿಸಲು ಮಾಡಬಹುದು. ನಿಮ್ಮ ಅನುವಾದ ಸಂವಹನಗಳಲ್ಲಿ ಒಂದನ್ನು ಪರಿಶೀಲನೆಗಾಗಿ ಆಯ್ಕೆ ಮಾಡಿದರೆ, ಅನುವಾದ ವಿನಂತಿಯ ಜೊತೆ ಜೊತೆಗೆ ಅನುವಾದಕ್ಕೆ ಒದಗಿಸಿದ ಪ್ರತಿಕ್ರಿಯೆಯನ್ನು ನಿಖರತೆಯನ್ನು ನಿರ್ಧರಿಸಲು ವಿಶ್ಲೇಷಿಸಲಾಗುತ್ತದೆ. ಕಟ್ಟುನಿಟ್ಟಾದ ಗೌಪ್ಯತೆಯ ಜವಾಬ್ದಾರಿಗಳಿಗೆ ಒಳಪಟ್ಟಿರುವ Apple ಉದ್ಯೋಗಿಗಳಿಗೆ ಮಾತ್ರ ನಿಮ್ಮ ಅನುವಾದ ಆಡಿಯೊವನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಾಗುತ್ತದೆ. ನೀವು ಪರಿಶೀಲಿಸಿದ ಅನುವಾದ ಸಂವಹನಗಳ ಸಣ್ಣ ಉಪವಿಭಾಗವನ್ನು Apple ಉತ್ಪನ್ನಗಳು ಮತ್ತು ಸೇವೆಗಳಲ್ಲಿ Siri, ಡಿಕ್ಟೇಷನ್, ಅನುವಾದ ಹಾಗೂ ಸೀಮಿತ ಇತರ ಭಾಷಾ ಸಂಸ್ಕರಣ ಫಂಕ್ಷನಾಲಿಟಿಗಾಗಿ ನಿರಂತರವಾಗಿ ಸುಧಾರಿಸಲು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಉಳಿಸಿಕೊಳ್ಳಬಹುದು.

ಸಾಮಾನ್ಯ

ನೀವು iPhone ಅಥವಾ iPad ಅನ್ನು ಸೆಟಪ್ ಮಾಡಿದಾಗ ನೀವು ಆಯ್ಕೆ ಮಾಡಿಕೊಳ್ಳುವ ಆದ್ಯತೆಗಳು ಯಾವುದೇ ಹೊಸದಾಗಿ Apple ಕನೆಕ್ಟ್ ಮಾಡಿರುವ ಸಾಧನಗಳಿಗೆ ಅಥವಾ Siri ಆನ್ ಮಾಡಿರುವ iPhone ಅಥವಾ iPadನೊಂದಿಗೆ ನೀವು ಸೆಟಪ್ ಮಾಡಿದ ಬೆಂಬಲಿತ HomeKit ಆ್ಯಕ್ಸೆಸರಿಗೆ ಅನ್ವಯಿಸುತ್ತದೆ. ಪ್ರತಿ ಸಾಧನದ ಸೆಟ್ಟಿಂಗ್ಸ್‌ನಲ್ಲಿ ನೀವು ಇದನ್ನು ನಂತರ ಬದಲಾಯಿಸಬಹುದು.

Siri ಮತ್ತು ಡಿಕ್ಟೇಷನ್ ಅನ್ನು ಸುಧಾರಿಸಿ ಎಂಬುದನ್ನು ಸಕ್ರಿಯಗೊಳಿಸುವ ಮೂಲಕ, ನೀವು Apple ಮತ್ತು ಅದರ ಅಂಗಸಂಸ್ಥೆಗಳು ಹಾಗೂ ಏಜೆಂಟ್‌ಗಳು, Siri, ಡಿಕ್ಟೇಷನ್, ಹುಡುಕಾಟ, ಅನುವಾದ ಮತ್ತು ಇತರ ಸೀಮಿತ ಭಾಷಾ ಪ್ರಕ್ರಿಯೆಗೊಳಿಸುವಿಕೆಯ ಫಂಕ್ಷನಾಲಿಟಿಯನ್ನು ಒದಗಿಸಲು ಮತ್ತು ಸುಧಾರಿಸಲು, ಮೇಲೆ ವಿವರಿಸಿದಂತೆ Apple ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಈ ಮಾಹಿತಿಯ ಪ್ರಸರಣ, ಸಂಗ್ರಹಣೆ, ನಿರ್ವಹಣೆ, ಪ್ರಕ್ರಿಯೆಗೊಳಿಸುವಿಕೆ ಮತ್ತು ಬಳಕೆಯಂತಹ ಕಾರ್ಯಗಳನ್ನು ಮಾಡುವುದನ್ನು ನೀವು ಒಪ್ಪುತ್ತೀರಿ ಮತ್ತು ಅದಕ್ಕೆ ಸಮ್ಮತಿಸುತ್ತೀರಿ. Apple ಈ ಮಾಹಿತಿಯನ್ನು ವಿಶ್ವಾಸಾರ್ಹ ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರೊಂದಿಗೆ ಪ್ರಕ್ರಿಯೆಗೊಳಿಸಬಹುದು ಮತ್ತು ಸಂಗ್ರಹಿಸಬಹುದು. ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ನಿಮ್ಮ Siri ಬಳಕೆಯ ಮಾಹಿತಿ, ಡಿಕ್ಟೇಷನ್, ಅಥವಾ ಅನುವಾದದಂತಹ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.

2026-02-11