iTunes Store ಹಾಗೂ ಗೌಪ್ಯತೆ
ನಿಮ್ಮ ಮಾಹಿತಿಯನ್ನು ಕಾಪಾಡಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸಲು iTunes Store ಅನ್ನು ವಿನ್ಯಾಸಗೊಳಿಸಲಾಗಿದೆ.
![]()
- ನಾವು ನಿಮ್ಮ ವೈಯಕ್ತಿಕ ಡೇಟವನ್ನು ಸಂಗ್ರಹಿಸುತ್ತೇವೆ, ಇದರಿಂದ App Store ಮತ್ತು Apple Books ಸೇರಿದಂತೆ iTunes Store ಮತ್ತು ಇತರ Apple ಆನ್‌ಲೈನ್ ಸ್ಟೋರ್‌ಗಳಲ್ಲಿ ನೀವು ಖರೀದಿಸಿದ, ಡೌನ್‌ಲೋಡ್ ಮಾಡಿದ ಅಥವಾ ಅಪ್‌ಡೇಟ್ ಮಾಡಲು ಬಯಸಿದ ಕಂಟೆಂಟ್ ಅನ್ನು ನಿಮಗೆ ಒದಗಿಸಲು ಸಾಧ್ಯವಾಗುತ್ತದೆ.
- ನಾವು ಸ್ಟೋರ್‌ನಲ್ಲಿ ನಿಮ್ಮ ಖಾತೆ, ಖರೀದಿಗಳು, ಹಾಗೂ ಡೌನ್‌ಲೋಡ್‌ಗಳ ಬಗೆಗಿನ ಮಾಹಿತಿಯನ್ನು App Store, Apple News ಹಾಗೂ ಸ್ಟಾಕ್ಸ್‌ನಲ್ಲಿ ಕಂಡುಬರುವ ಜಾಹೀರಾತುಗಳು ನಿಮಗೆ ಸೂಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬಳಸುತ್ತೇವೆ. ಕೆಳಗೆ ವಿವರಿಸಿದಂತೆ ನೀವು ಈ ಜಾಹೀರಾತಿಗೆ ಸಂಬಂಧಿಸಿದಂತೆ ಆಯ್ಕೆಗಳನ್ನು ಹೊಂದಿದ್ದೀರಿ.
- ಫೀಚರ್‌ಗಳನ್ನು ವಿಶೇಷ ಉದ್ದೇಶಗಳಿಗಾಗಿ ರಚಿಸಲು, ವೈಯಕ್ತೀಕರಿಸಿದ ಶಿಫಾರಸುಗಳನ್ನು ನೀಡಲು ಮತ್ತು Apple Marketing ಒಳಗೊಂಡಂತೆ ನೋಟಿಫಿಕೇಷನ್‌ಗಳನ್ನು ನಿಮಗೆ ಕಳುಹಿಸುವ ಸಲುವಾಗಿ ನಾವು ಸ್ಟೋರ್‌ನಲ್ಲಿನ ನಿಮ್ಮ ಖರೀದಿಗಳು, ಡೌನ್‌ಲೋಡ್‌ಗಳು ಮತ್ತು ಇತರ ಚಟುವಟಿಕೆಗಳ ಬಗೆಗಿನ ಮಾಹಿತಿಯನ್ನು ಬಳಸುತ್ತೇವೆ. ಕೆಳಗೆ ವಿವರಿಸಿದಂತೆ ನೀವು ಈ ಉದ್ದೇಶಕ್ಕಾಗಿ ಈ ಡೇಟ ಬಳಕೆಯಾಗುವುದರಿಂದ ಹೊರಗುಳಿಯುವುದನ್ನು ಆಯ್ದುಕೊಳ್ಳಬಹುದು.
- ವಂಚನೆಯನ್ನು ಗುರುತಿಸಲು ಮತ್ತು ತಡೆಯಲು ಸಹಾಯ ಮಾಡಲು, ನೀವು ಮಾಡುವ ಸಂಭಾವ್ಯ ಫೋನ್ ಕರೆಗಳು ಅಥವಾ ನೀವು ಕಳುಹಿಸುವ ಅಥವಾ ಸ್ವೀಕರಿಸುವ ಈಮೇಲ್‌ಗಳು ಸೇರಿದಂತೆ ನಿಮ್ಮ ಸಾಧನವನ್ನು ನೀವು ಹೇಗೆ ಬಳಸುತ್ತೀರಿ ಎಂಬುದರ ಕುರಿತು ಈ ಮಾಹಿತಿಯನ್ನು ನೀವು ಶಾಪಿಂಗ್ ಮಾಡುವಾಗ ಸಾಧನದ ವಿಶ್ವಾಸಾರ್ಹ ಸ್ಕೋರ್ ಅನ್ನು ಲೆಕ್ಕಾಚಾರ ಮಾಡಲು ಬಳಸಲಾಗುತ್ತದೆ. ನಿಮ್ಮ ಸಾಧನದಲ್ಲಿನ ನಿಜವಾದ ಮೌಲ್ಯಗಳನ್ನು ತಿಳಿದುಕೊಳ್ಳಲು Appleಗೆ ಸಾಧ್ಯವಾಗದ ರೀತಿಯಲ್ಲಿ ಸಲ್ಲಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ. ಸ್ಕೋರ್‌ಗಳನ್ನು ನಮ್ಮ ಸರ್ವರ್‌ಗಳಲ್ಲಿ ನಿಗದಿತ ಸಮಯದವರೆಗೆ ಸಂಗ್ರಹಿಸಲಾಗುತ್ತದೆ.
- ಸ್ಟೋರ್‌ಗಳನ್ನು ಹೇಗೆ ಸುಧಾರಿಸುವುದು ಎಂಬುದನ್ನು ತಿಳಿಯಲು ನಿಮ್ಮ ಬ್ರೌಸಿಂಗ್, ಖರೀದಿಗಳು, ಹುಡುಕಾಟಗಳು ಮತ್ತು ಡೌನ್‌ಲೋಡ್‌ಗಳ ಕುರಿತು ನಾವು ಮಾಹಿತಿಯನ್ನು ಬಳಸುತ್ತೇವೆ. ನೀವು App Store ಅಥವಾ ಇತರ Apple ಆನ್‌ಲೈನ್ ಸ್ಟೋರ್‌ಗಳಿಗೆ ಸೈನ್ ಇನ್ ಮಾಡಿದಾಗ ಈ ರೆಕಾರ್ಡ್‌ಗಳನ್ನು IP ವಿಳಾಸಗಳು ಎಂದು ಕರೆಯಲಾಗುವ ರ್‍ಯಾಂಡಮ್ ಅನನ್ಯ ಐಡೆಂಟಿಫೈಯರ್‌ಗಳು (ಅವುಗಳು ಬಂದಿರುವ ಮೂಲ ಅಥವಾ ವಿಧಾನ) ಮತ್ತು Apple ಖಾತೆಯೊಂದಿಗೆ ಸಂಗ್ರಹಿಸಲಾಗುತ್ತದೆ.
ಸ್ಟೋರ್‌ಗಳನ್ನು ಒದಗಿಸುವುದು
ನಾವು iTunes Storeನಲ್ಲಿ ಮತ್ತು ಇತರ Apple ಆನ್‌ಲೈನ್ ಸ್ಟೋರ್‌ಗಳಲ್ಲಿ ಸೇವೆಗಳು ಹಾಗೂ ಫೀಚರ್‌ಗಳನ್ನು ನೀಡಲು ನಿಮ್ಮ ವೈಯಕ್ತಿಕ ಡೇಟವನ್ನು ಬಳಸುತ್ತೇವೆ. ಈ ಮಾಹಿತಿಯು, ಉದಾಹರಣೆಗೆ ನಿಮ್ಮ ಖಾತೆ ಮತ್ತು ಪಾವತಿ ಮಾಹಿತಿಯನ್ನು ಒಳಗೊಂಡಿರುತ್ತದೆ, ಇದನ್ನು ನೀವು ಸೆಟ್ಟಿಂಗ್ಸ್‌ನಲ್ಲಿ ಮತ್ತು ನಿಮ್ಮ ಖರೀದಿ ಇತಿಹಾಸದಲ್ಲಿ ಆ್ಯಕ್ಸೆಸ್ ಮಾಡಬಹುದು ಮತ್ತು ಬದಲಾಯಿಸಬಹುದು.
ನೀವು iTunes Storeನಿಂದ ಕಂಟೆಂಟ್ ಅನ್ನು ಡೌನ್‌ಲೋಡ್ ಮಾಡಿದಾಗ, ನಿಮ್ಮ ಸಾಧನದ ಹಾರ್ಡ್‌ವೇರ್ ID ಮತ್ತು IP ವಿಳಾಸದಂತಹ ಐಡೆಂಟಿಫೈಯರ್‌ಗಳನ್ನು Apple ನಿಮ್ಮ Apple ಖಾತೆಯೊಂದಿಗೆ ಲಾಗ್ ಮಾಡುತ್ತದೆ.
Apple ನೀವು ಡೌನ್‌ಲೋಡ್ ಮಾಡಿದ iTunes ಕಂಟೆಂಟ್‌ನ ವಿಧವನ್ನು ಅನುಸರಿಸಿ Apple Music, Apple TV ಅಥವಾ Apple Books ಆ್ಯಪ್‌ಗಳ ಲೈಬ್ರರಿ ಟ್ಯಾಬ್ ಮೇಲೆ ನಿಮಗಾಗಿ ಸ್ವಯಂಚಾಲಿತವಾಗಿ ಲಭ್ಯವಿರುವಂತೆ ಮಾಡುತ್ತದೆ.
ಸ್ಟೋರ್‌ಗಳನ್ನು ಸುಧಾರಿಸುವುದು
iTunes Store ಮತ್ತು ಇತರ Apple ಆನ್‌ಲೈನ್ ಸ್ಟೋರ್‌ಗಳಲ್ಲಿನ ಅನುಭವವನ್ನು ಸುಧಾರಿಸಲು, iTunes Storeನ ನಿಮ್ಮ ಬಳಕೆಯ ಕುರಿತು ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ, ನೀವು ಸ್ಟೋರ್ ಅನ್ನು ತೆರೆದಾಗ ಅಥವಾ ಮುಚ್ಚಿದಾಗ, ನೀವು ಹುಡುಕುವ ವಿಷಯ, ನೀವು ವೀಕ್ಷಿಸುವ ಮತ್ತು ಡೌನ್‌ಲೋಡ್ ಮಾಡುವ ವಿಷಯ ಮತ್ತು ನೋಟಿಫಿಕೇಷನ್‌ಗಳೊಂದಿಗಿನ ನಿಮ್ಮ ಸಂವಾದಗಳು ಸೇರಿದಂತೆ. ನಿಮ್ಮ ಸಾಧನದ ಪ್ರಕಾರ, ನಿಮ್ಮ ಆಪರೇಟಿಂಗ್ ಸಿಸ್ಟಂನ ಆವೃತ್ತಿ ಮತ್ತು ನಿಮ್ಮ ಸಾಧನದಲ್ಲಿ ಲಭ್ಯವಿರುವ ಸ್ಥಳಾವಕಾಶದಂತಹ ಮಾಹಿತಿಯನ್ನು ಸಹ ನಾವು ಸಂಗ್ರಹಿಸುತ್ತೇವೆ. ವಿನಂತಿಸಿದ ವಿಷಯವನ್ನು ಡೌನ್‌ಲೋಡ್ ಮಾಡಬಹುದೇ ಎಂಬುದನ್ನು ನಿರ್ಣಯಿಸಲು, ಸಾಧನ ಸಂಗ್ರಹಣೆಯ ಬಳಕೆಯ ಸಾಮಾನ್ಯ ಟ್ರೆಂಡ್‌ಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿಮ್ಮ ಸಾಧನವನ್ನು Wi-Fi ಅಥವಾ ಮೊಬೈಲ್ ಸೇವೆಯ ಮೂಲಕ ಕನೆಕ್ಟ್ ಮಾಡಲಾಗಿದೆಯೇ ಎಂಬುದನ್ನು ನಿರ್ಣಯಿಸಲು ನಾವು ಈ ಮಾಹಿತಿಯನ್ನು ಬಳಸಬಹುದು. ಉದಾಹರಣೆಗೆ, ನಾವು ಈ ಮಾಹಿತಿಯನ್ನು ಈ ಕೆಳಗಿನ ವಿಧಾನಗಳಲ್ಲಿ ಬಳಸಬಹುದು:
- ನೀವು ಏನನ್ನು ಹುಡುಕುತ್ತೀರಿ ಎಂಬುದು ನಮಗೆ ಟ್ರೆಂಡಿಂಗ್ ಹುಡುಕಾಟಗಳನ್ನು ತೋರಿಸುವುದನ್ನೂ ಸಾಧ್ಯವಾಗಿಸುತ್ತದೆ.
- ನೀವು ಯಾವ ವಿಷಯವನ್ನು ವೀಕ್ಷಿಸುತ್ತೀರಿ ಅಥವಾ ಡೌನ್‌ಲೋಡ್ ಮಾಡುತ್ತೀರಿ ಎಂಬುದನ್ನು ತಿಳಿದುಕೊಳ್ಳುವುದರಿಂದ ವೈಯಕ್ತೀಕರಿಸಿದ ಫೀಚರ್‌ಗಳನ್ನು ನೀಡಲು ನಮಗೆ ಸಾಧ್ಯವಾಗುತ್ತದೆ.
- ನಿಮ್ಮ ಸಾಧನದಲ್ಲಿ ಖಾಲಿ ಸ್ಥಳವಿರುವ ಮಾಹಿತಿ ಇದ್ದರೆ, ನಿಮ್ಮ iPhoneನಲ್ಲಿ ಸಿನಿಮಾಗಳನ್ನು ಖರೀದಿಸುವ ಸಂದರ್ಭದಲ್ಲಿ ಡೌನ್‌ಲೋಡ್ ಮಾಡದೆ ಖರೀದಿಸಲು ಅವಕಾಶ ಕೊಡುವ ಫೀಚರ್ ರಚಿಸಲು ನಮಗೆ ಅನುಮತಿಸುತ್ತದೆ.
ಸ್ಟೋರ್‌ಗಳನ್ನು ವೈಯಕ್ತೀಕರಿಸುವುದು
ನಿಮಗೆ ಹೆಚ್ಚು ಸೂಕ್ತವಾದ ಕಂಟೆಂಟ್ ಅನ್ನು ಅನ್ವೇಷಿಸಲು ನಿಮಗೆ ಸಹಾಯ ಮಾಡುವುದಕ್ಕಾಗಿ iTunes Store ಮೂಲಕ ನಿಮ್ಮ ಸಂವಹನಗಳನ್ನು ಬಳಸುತ್ತೇವೆ. ಉದಾಹರಣೆಗೆ, iTunes Storeನಲ್ಲಿ ನೀವು ಈ ಹಿಂದೆ ಹುಡುಕಿರುವ, ವೀಕ್ಷಿಸಿದ, ಡೌನ್‌ಲೋಡ್ ಮಾಡಿದ, ಅಪ್‌ಡೇಟ್ ಮಾಡಿದ ಅಥವಾ ವಿಮರ್ಶಿಸಿದ ವಿಷಯಗಳ ಆಧಾರದ ಮೇಲೆ ನಿಮಗೆ ಆಸಕ್ತಿಯಿರುತ್ತದೆ ಎಂದು ನಾವು ಭಾವಿಸುವ ವಿಷಯವನ್ನು ನಾವು ಶಿಫಾರಸು ಮಾಡುತ್ತೇವೆ. ನಿಮ್ಮ Apple ಖಾತೆಯಿಂದ ಪಡೆದ ಖಾತೆಯ ಮಾಹಿತಿಯೊಂದಿಗೆ ಖರೀದಿಯ ಇತಿಹಾಸ ಹಾಗೂ ಪಾವತಿ ವಿಧಾನಗಳನ್ನು ಸಹ ಒಟ್ಟಾಗಿ ಬಳಸುತ್ತೇವೆ. ನಿಮ್ಮ Apple ಖಾತೆಗಾಗಿ ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಆಫ್ ಮಾಡುವ ಮೂಲಕ ನೀವು App Store, Apple Books, iTunes Store, Apple TV, ಪಾಡ್‌ಕಾಸ್ಟ್ಸ್ ಮತ್ತು Appleನಿಂದ ಸಬ್‌ಸ್ಕ್ರಿಪ್ಶನ್‌ಗಳನ್ನು ವೈಯಕ್ತೀಕರಿಸಿದ ಫೀಚರ್‌ಗಳನ್ನು ನೀವು ನಿಷ್ಕ್ರಿಯಗೊಳಿಸಬಹುದು. ನಿಮ್ಮ iOS ಅಥವಾ iPadOS ಸಾಧನದಲ್ಲಿ, ಸೆಟ್ಟಿಂಗ್ಸ್ > [ನಿಮ್ಮ ಹೆಸರು] > ಮೀಡಿಯಾ ಮತ್ತು ಖರೀದಿಗಳು, ಖಾತೆಯನ್ನು ನೋಡಿ ಎನ್ನುವುದನ್ನು ಟ್ಯಾಪ್ ಮಾಡಿ ಹಾಗೂ ನಂತರ ವೈಯಕ್ತೀಕರಿಸಿದ ಶಿಫಾರಸುಗಳನ್ನು ಆಫ್ ಮಾಡಲು ಟ್ಯಾಪ್ ಮಾಡಿ.
ನಿಮ್ಮೊಂದಿಗೆ ಸಂವಹನ ನಡೆಸುವುದು
iTunes Store ಹಾಗೂ ನಿಮಗೆ ಆಸಕ್ತಿಯಿರಬಹುದಾದ ಇತರ Apple ಉತ್ಪನ್ನಗಳು, ಸೇವೆಗಳು ಮತ್ತು ಆಫರ್‌ಗಳ ಕುರಿತು ನಿಮಗೆ ಸಂವಹನಗಳನ್ನು ಕಳುಹಿಸಲು, ನಿಮ್ಮ ಮಾಲೀಕತ್ವದಲ್ಲಿರುವ Apple ಉತ್ಪನ್ನಗಳು ಮತ್ತು ನೀವು Apple ಸೇವೆಗಳಿಗೆ ಮಾಡಿರುವ ಸಬ್‌ಸ್ಕ್ರಿಪ್ಶನ್‌ಗಳಂತಹ, ನಿಮ್ಮ ಖಾತೆಯ ಕುರಿತಾದ ಮಾಹಿತಿಯನ್ನು Apple ಬಳಸಬಹುದು. ಹೊಸ ವೈಶಿಷ್ಟ್ಯಗಳು, ಕಂಟೆಂಟ್ ಹಾಗೂ iTunes Storeನಲ್ಲಿ ಲಭ್ಯವಿರುವ ಆಫರ್‌ಗಳ ಕುರಿತು ನಿಮಗೆ ಸಂವಹನಗಳನ್ನು ಕಳುಹಿಸಲು iTunes Storeನಲ್ಲಿನ ನಿಮ್ಮ ಚಟುವಟಿಕೆಯ ಕುರಿತು ಮಾಹಿತಿಯನ್ನು ಸಹ Apple ಬಳಸಬಹುದು, ಮತ್ತು Apple Music, Apple TV, ಹಾಗೂ Apple Books ಮೊದಲಾದ ಆ್ಯಪ್‌ಗಳಲ್ಲಿ Apple ಲಭ್ಯವಿರುವಂತೆ ಮಾಡುವ ನಿಮ್ಮ iTunes ಕಂಟೆಂಟ್ ಬಗೆಗಿನ ಸಂವಹನಗಳನ್ನು ನಿಮಗೆ ಕಳುಹಿಸಬಹುದು.
ಈಮೇಲ್ ಮಾರ್ಕೆಟಿಂಗ್
ಈಮೇಲ್ ಮಾರ್ಕೆಟಿಂಗ್ ಸ್ವೀಕರಿಸಲು ನೀವು ಸಮ್ಮತಿಸಿದರೆ, ನೀವು ಈಮೇಲ್ ಮೂಲಕ ಈ ಸಂವಹನಗಳನ್ನು ಸ್ವೀಕರಿಸಬಹುದು. ನೀವು account.apple.com/in ಎಂಬಲ್ಲಿಗೆ ಹೋಗುವ ಮೂಲಕ ಅಥವಾ ನಿಮ್ಮ iOS ಅಥವಾ iPadOS ಸಾಧನದಲ್ಲಿ ಸೆಟ್ಟಿಂಗ್ಸ್ > [ನಿಮ್ಮ ಹೆಸರು] > ವೈಯಕ್ತಿಕ ಮಾಹಿತಿ ಎಂಬಲ್ಲಿಗೆ ಹೋಗುವ ಮೂಲಕ ನಿಮ್ಮ ಈಮೇಲ್ ಆದ್ಯತೆಗಳನ್ನು ನೀವು ಬದಲಾಯಿಸಬಹುದು ಮತ್ತು ಈ ಈಮೇಲ್‌ಗಳನ್ನು ಸ್ವೀಕರಿಸುವುದರಿಂದ ಹೊರಗುಳಿಯಬಹುದು.
ನೋಟಿಫಿಕೇಷನ್‌ಗಳು
ನೀವು ಈ ಸಂವಹನಗಳನ್ನು ಪುಶ್, ಬ್ಯಾನರ್ ಅಥವಾ ಬ್ಯಾಡ್ಜ್ ನೋಟಿಫಿಕೇಷನ್‌ಗಳ ಮೂಲಕವೂ ಸ್ವೀಕರಿಸಬಹುದು. ನಿಮ್ಮ ನೋಟಿಫಿಕೇಷನ್ ಆದ್ಯತೆಗಳನ್ನು ಅಪ್‌ಡೇಟ್ ಮಾಡಲು ಅಥವಾ ನಿಮ್ಮ iOS ಅಥವಾ iPadOS ಸಾಧನದಲ್ಲಿ ನೋಟಿಫಿಕೇಷನ್‌ಗಳಿಂದ ಹೊರಗುಳಿಯಲು, ಸೆಟ್ಟಿಂಗ್ಸ್ > ನೋಟಿಫಿಕೇಷನ್‌ಗಳು > iTunes Store ಎಂಬಲ್ಲಿಗೆ ಹೋಗಿ.
ಜಾಹೀರಾತು
Apple-ಡೆಲಿವರಿ ಮಾಡಿದ ಜಾಹೀರಾತುಗಳು App Store, Apple News ಮತ್ತು ಸ್ಟಾಕ್ಸ್‌ನಲ್ಲಿ ಆ್ಯಪ್‌ಗಳು, ಉತ್ಪನ್ನಗಳು ಮತ್ತು ಸೇವೆಗಳನ್ನು ಅನ್ವೇಷಿಸಲು ಜನರಿಗೆ ಸಹಾಯ ಮಾಡುತ್ತದೆ. ಆ್ಯಡ್‌ಗಳು ಸೂಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಸಾಧನ, ಖಾತೆ, ಖರೀದಿಗಳು, ಸಬ್‌ಸ್ಕ್ರಿಪ್ಶನ್‌ಗಳು ಮತ್ತು ಡೌನ್‌ಲೋಡ್‌ಗಳ ಕುರಿತ ಮಾಹಿತಿಯನ್ನು ನಾವು ಬಳಸುತ್ತೇವೆ. ನೀವು App Storeನಲ್ಲಿ ಹುಡುಕಿದಾಗ, ನಿಮ್ಮ ಹುಡುಕಾಟದ ಪದಗಳನ್ನು ಕೂಡ ಬಳಸುತ್ತೇವೆ. ಒಂದೇ ರೀತಿಯ ಗುಣಲಕ್ಷಣಗಳನ್ನು ಹಂಚಿಕೊಳ್ಳುವ, ವಿಭಾಗಗಳು ಎಂದು ಕರೆಯಲ್ಪಡುವ ಜನರ ಗುಂಪುಗಳನ್ನು ನಾವು ರಚಿಸುತ್ತೇವೆ ಮತ್ತು ಟಾರ್ಗೆಟ್ ಮಾಡಿದ ಆ್ಯಡ್‌ಗಳನ್ನು ನೀಡಲು ಈ ಗುಂಪುಗಳನ್ನು ಬಳಸುತ್ತೇವೆ. ನಿಮ್ಮನ್ನು ಯಾವ ವಿಭಾಗದಲ್ಲಿ ಇರಿಸಲಾಗುವುದು ಮತ್ತು ನೀವು ಯಾವ ಜಾಹೀರಾತುಗಳನ್ನು ಸ್ವೀಕರಿಸುತ್ತೀರಿ ಎಂಬುದನ್ನು ನಿರ್ಧರಿಸಲು ನಿಮ್ಮ ಬಗ್ಗೆ ಮಾಹಿತಿಯನ್ನು ಬಳಸಲಾಗುತ್ತದೆ. ನಿಮ್ಮ ಗೌಪ್ಯತೆಯನ್ನು ರಕ್ಷಿಸಲು, 5,000 ಕ್ಕಿಂತ ಹೆಚ್ಚು ಜನರು ಗುರಿಯ ಮಾನದಂಡಗಳನ್ನು ಪೂರೈಸಿದರೆ ಮಾತ್ರ ಉದ್ದೇಶಿತ ಜಾಹೀರಾತುಗಳನ್ನು ಡೆಲಿವರಿ ಮಾಡಲಾಗುತ್ತದೆ. ನಿಮಗೆ ಯಾವ ಆ್ಯಡ್‌ಗಳು ಸೂಕ್ತವಾಗಿವೆ ಎಂಬುದನ್ನು ನಿರ್ಧರಿಸಲು ಬಳಸಲಾಗುವ ಮಾಹಿತಿಯು ರ್‍ಯಾಂಡಮ್ ಐಡೆಂಟಿಫೈಯರ್‌ಗಳಿಗೆ ಒಳಪಟ್ಟಿರುತ್ತದೆಯೇ ಹೊರತು ನಿಮ್ಮ Apple ಖಾತೆಗಲ್ಲ.
ವೈಯಕ್ತೀಕರಿಸಿದ ಜಾಹೀರಾತುಗಳ ಸೆಟ್ಟಿಂಗ್ ಅನ್ನು ಆನ್ ಮಾಡಿದ್ದರೆ, Appleನ ಜಾಹೀರಾತು ಪ್ಲ್ಯಾಟ್‌ಫಾರ್ಮ್ ನಿಮಗೆ ಹೆಚ್ಚು ಸೂಕ್ತವಾದ ಜಾಹೀರಾತುಗಳನ್ನು ನೀಡಲು ನಿಮ್ಮ ಮಾಹಿತಿಯನ್ನು ಬಳಸಬಹುದು. Appleನ ಜಾಹೀರಾತು ಪ್ಲ್ಯಾಟ್‌ಫಾರ್ಮ್‌ನಿಂದ ನಿಮ್ಮ ಆಸಕ್ತಿಗಳಿಗೆ ಗುರಿಯಾಗಿರುವ ಜಾಹೀರಾತುಗಳನ್ನು ಸ್ವೀಕರಿಸಲು ನೀವು ಬಯಸದಿದ್ದರೆ, ನೀವು ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ಆಫ್ ಮಾಡಲು ಆಯ್ಕೆ ಮಾಡಬಹುದು. ವೈಯಕ್ತೀಕರಿಸಿದ ಜಾಹೀರಾತನ್ನು ಆಫ್ ಮಾಡುವುದರಿಂದ Apple ನಿಮ್ಮ ಮಾಹಿತಿಯನ್ನು ಜಾಹೀರಾತು ಟಾರ್ಗೆಟ್‌ಗಾಗಿ ಬಳಸದಂತೆ ತಡೆಯುತ್ತದೆ. ಇದು ನೀವು ಸ್ವೀಕರಿಸುವ ಜಾಹೀರಾತುಗಳ ಸಂಖ್ಯೆಯನ್ನು ಕಡಿಮೆ ಮಾಡದಿರಬಹುದು, ಆದರೆ ಜಾಹೀರಾತುಗಳು ನಿಮಗೆ ಕಡಿಮೆ ಸಂಬಂಧಿತವಾಗಿರಬಹುದು.
www.apple.com/in/legal/privacy/data/en/apple-advertising ಎಂಬಲ್ಲಿನ Apple ಜಾಹೀರಾತು ಮತ್ತು ಗೌಪ್ಯತೆಯ ಕುರಿತು ಇನ್ನಷ್ಟು ತಿಳಿಯಿರಿ.
App Store, Apple News ಮತ್ತು ಸ್ಟಾಕ್ಸ್‌ನಲ್ಲಿ ವೈಯಕ್ತೀಕರಿಸಿದ ಆ್ಯಡ್‌ಗಳಿಂದ ಹೊರಗುಳಿಯುವುದು ಹೇಗೆ ಎಂಬುದರ ಕುರಿತು support.apple.com/en-in/105131 ವೆಬ್‌ಪುಟದಲ್ಲಿ ತಿಳಿಯಿರಿ.
ಥರ್ಡ್ ಪಾರ್ಟಿಗಳ ಜೊತೆಗೆ ಹಂಚಿಕೊಳ್ಳುವುದು
ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು Appleನೊಂದಿಗೆ ಕೆಲಸ ಮಾಡುವ ಕಾರ್ಯತಂತ್ರದ ಪಾಲುದಾರರಿಗೆ ಕೆಲವು ವೈಯಕ್ತಿಕವಲ್ಲದ ಡೇಟವನ್ನು ಒದಗಿಸಲು, ಗ್ರಾಹಕರಿಗೆ Apple ಮಾರುಕಟ್ಟೆಗೆ ಸಹಾಯ ಮಾಡಲು ಮತ್ತು App Store ಮತ್ತು Apple News ಮತ್ತು ಸ್ಟಾಕ್ಸ್‌ನಲ್ಲಿ ಪ್ರದರ್ಶಿಸಲು Apple ಪರವಾಗಿ ಜಾಹೀರಾತುಗಳನ್ನು ಮಾರಾಟ ಮಾಡಲು ನಾವು ಬದ್ಧರಾಗಿದ್ದೇವೆ. ಉದಾಹರಣೆಗೆ, ನಿಮ್ಮ ಕಂಟೆಂಟ್ ಖರೀದಿಗಳಿಗೆ ಕುರಿತ ವೈಯಕ್ತಿಕವಲ್ಲದ ಡೇಟವನ್ನು ನಾವು ಕಂಟೆಂಟ್ ಮಾಲೀಕರ ಜೊತೆಗೆ ಹಂಚಿಕೊಳ್ಳಬಹುದು, ಇದರಿಂದ ಅವರು ತಮ್ಮ ಸೃಜನಾತ್ಮಕ ಕೆಲಸದ ಕಾರ್ಯಕ್ಷಮತೆಯನ್ನು ಅಳೆಯಬಹುದು, ರಾಯಧನ ಮತ್ತು ಲೆಕ್ಕಪತ್ರದ ಅಗತ್ಯತೆಗಳನ್ನು ಪೂರೈಸಬಹುದು ಹಾಗೂ ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಸುಧಾರಿಸಬಹುದು.
ವೈಯುಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುವುದಕ್ಕಾಗಿ ಅನ್ವಯವಾಗುವ ಕಾನೂನುಬದ್ಧ ಆಧಾರ
ಸೇವೆಯನ್ನು ಒದಗಿಸಲು ಮತ್ತು ನಮ್ಮ ಕಾನೂನು ಬಾಧ್ಯತೆಗಳನ್ನು ಅನುಸರಿಸಲು ಅಗತ್ಯವಿರುವಂತೆ Apple ಜೊತೆಗಿನ ನಿಮ್ಮ ಒಪ್ಪಂದದ ಕಾರ್ಯಕ್ಷಮತೆಗಾಗಿ ಸಾಮಾನ್ಯವಾಗಿ iTunes Storeನಲ್ಲಿ ನಿಮ್ಮ ವೈಯಕ್ತಿಕ ಡೇಟವನ್ನು ನಾವು ಪ್ರಕ್ರಿಯೆಗೊಳಿಸುತ್ತೇವೆ. ಸಮ್ಮತಿಯ ಸೂಕ್ತವಾದ ಕಾನೂನುಬದ್ಧ ಆಧಾರವಾಗಿದ್ದಲ್ಲಿ, ನಾವು ಅದನ್ನು ಅನ್ವಯವಾಗುವ ಸ್ಥಳೀಯ ಕಾನೂನುಗಳ ಪ್ರಕಾರ ಪಡೆಯುತ್ತೇವೆ.
ಅನ್ವಯವಾಗುವ ಸ್ಥಳೀಯ ಕಾನೂನಿಗೆ ಒಳಪಟ್ಟು, ನಮ್ಮ ಅಥವಾ ಥರ್ಡ್ ಪಾರ್ಟಿಯ ಕಾನೂನುಬದ್ಧ ಹಿತಾಸಕ್ತಿಗಳ ಉದ್ದೇಶಗಳಿಗಾಗಿ ಅಗತ್ಯವಿರುವಲ್ಲಿ ನಾವು ವೈಯಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುತ್ತೇವೆ:
- ಪ್ರಸ್ತುತವೆನಿಸಿದ ಕಂಟೆಂಟ್ ಅನ್ನು ಪ್ರದರ್ಶಿಸುವುದು ಮತ್ತು ವಿನಂತಿಸಿದ ವಿಷಯವನ್ನು ಡೌನ್‌ಲೋಡ್ ಮಾಡಲು ನಿಮ್ಮ ಸಾಧನವು ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದೆಯೇ ಅಥವಾ ಇಲ್ಲವೇ ಎಂದು ನಿರ್ಣಯಿಸುವುದು
- ನಿಮಗಾಗಿ ಮತ್ತು ಇತರರಿಗಾಗಿ iTunes Store ಅನ್ನು ಸುಧಾರಿಸಲು ಮತ್ತು ಆಪ್ಟಿಮೈಜ್ ಮಾಡಲು ಸಹಾಯ ಮಾಡುವುದು
- ನಿಮಗೆ ಆಸಕ್ತಿಯಿರುವ ಈಮೇಲ್ ಮತ್ತು push ನೋಟಿಫಿಕೇಷನ್ಸ್ ಮೂಲಕ ನಿಮಗೆ ಕೊಡುಗೆಗಳನ್ನು ಕಳುಹಿಸಲು ಮತ್ತು iTunes Storeಗಳಲ್ಲಿ ನಿಮಗೆ ಜಾಹೀರಾತುಗಳನ್ನು ನೀಡಲು ವಿಭಾಗಗಳನ್ನು ರಚಿಸಲು
- ಕಂಟೆಂಟ್ ಒದಗಿಸುವವರಿಗೆ ಅವರ ಕಂಟೆಂಟ್‌ಗಳಲ್ಲಿ ಮಾಡುವ ಖರೀದಿಗಳ ಕುರಿತು ವರದಿಯನ್ನು ಒದಗಿಸುವುದು
- ಮೋಸ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯುವುದು
ಬಳಸಲಾದ ಡೇಟ ಇದನ್ನು ಒಳಗೊಂಡಿರುತ್ತದೆ:
- ನೀವು ಹುಡುಕುವ, ನೋಡುವ, ಡೌನ್‌ಲೋಡ್ ಮಾಡುವ, ಹಾಗೂ ಖರೀದಿಸುವ ಕಂಟೆಂಟ್ ಜೊತೆಗಿನ ನಿಮ್ಮ ಸಂವಾದಗಳಂತಹ iTunes Store ಆ್ಯಪ್‌ನ ನಿಮ್ಮ ಬಳಕೆ ಹಾಗೂ iTunes Store ನೋಟಿಫಿಕೇಷನ್‌ಗಳು
- ನಿಮ್ಮ ಸಾಧನ ಹಾಗೂ ಖಾತೆಯ ಬಗೆಗಿನ ವಿವರಗಳು
- ನಿಮ್ಮ ಸ್ಥಳ ಮತ್ತು ನಿಮ್ಮ IP ವಿಳಾಸ
- ಸಾಧನದ ವಿಶ್ವಾಸದ ಸ್ಕೋರ್
ರಿಟೆನ್ಶನ್
iTunes Storeನಲ್ಲಿ ನಿಮ್ಮ ಖರೀದಿಗಳು ಮತ್ತು ಡೌನ್‌ಲೋಡ್‌ಗಳಿಗೆ ಸಂಬಂಧಿಸಿದ ವೈಯುಕ್ತಿಕ ಡೇಟವನ್ನು ಹಣಕಾಸಿನ ವರದಿ ಮಾಡುವಿಕೆಯ ಅನ್ವಯವಾಗುವ ಕಾನೂನುಗಳು ನಿರ್ದಿಷ್ಟಪಡಿಸುವ ಅವಧಿಗಳಿಗೆ ನಾವು ಇಟ್ಟುಕೊಳ್ಳುತ್ತಿದ್ದು, ಇದು ಪ್ರದೇಶಕ್ಕೆ ಅನುಗುಣವಾಗಿ ಬದಲಾಗಬಹುದು. ಅದಕ್ಕಾಗಿ ಬಹುತೇಕ ಗ್ರಾಹಕರಿಗೆ ಕನಿಷ್ಠ 10-ವರ್ಷಗಳ ಇರಿಸಿಕೊಳ್ಳುವಿಕೆಯ ಅವಧಿಯ ಅಗತ್ಯವಿರುತ್ತದೆ, ಆದರೆ ಚೀನಾದಂಥ ಪ್ರದೇಶಗಳಲ್ಲಿ ಆ ಅವಧಿ 30 ವರ್ಷಗಳಷ್ಟಿರಬಹುದು. ನಾವು ಖರೀದಿಗಳು ಹಾಗೂ ಕಂಟೆಂಟ್‌ಗಳ ಡೌನ್‌ಲೋಡ್ ದಾಖಲೆಗಳನ್ನು ನಿಮಗೆ ಆ ಕಂಟೆಂಟ್ ಅನ್ನು ಡೌನ್‌ಲೋಡ್ ಮಾಡಲು ಅನುಮತಿಸಲು ನೀವು ಕನಿಷ್ಠ ನಮ್ಮ ಬಳಿ ಖಾತೆಯನ್ನು ಹೊಂದಿರುವಷ್ಟು ಕಾಲ ಇಟ್ಟುಕೊಳ್ಳುತ್ತಿದ್ದು, ಇದು ಕೂಡ ನಮ್ಮ ಅನ್ವಯವಾಗುವ ನೀತಿಗಳ ಪ್ರಕಾರವಾಗಿರುತ್ತದೆ. ನಾವು ಬ್ರೌಸಿಂಗ್ ಚಟುವಟಿಕೆ ಹಾಗೂ ಹುಡುಕಾಟಗಳಂತ ಇತರ ಮಾಹಿತಿಯನ್ನು ಸ್ವಲ್ಪ ಕಾಲದವರೆಗೆ ಇಟ್ಟುಕೊಳ್ಳುತ್ತೇವೆ. ಆರಿಸಲಾದ ಅವಧಿಯು ಡೇಟ ಹಾಗೂ ನಿರ್ದಿಷ್ಟವಾದ ವ್ಯಾಪಾರ ಬಳಕೆಯ ಪ್ರಕರಣಗಳನ್ನು ಇಟ್ಟುಕೊಳ್ಳಲು ಅನ್ವಯವಾಗುವ ಕಾನೂನುಬದ್ಧ ಅಗತ್ಯಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಆದಾಗ್ಯೂ, ನೀವು ನಿಮ್ಮ ಖಾತೆಯನ್ನು ಮುಚ್ಚಿದ ನಂತರ ಅಥವಾ iTunes Store ಅಥವಾ ಇತರ Apple ಆನ್‌ಲೈನ್ ಸ್ಟೋರ್‌ಗಳನ್ನು ಬಳಸುವುದನ್ನು ನಿಲ್ಲಿಸಿದ ನಂತರವೂ ಖರೀದಿಗಳಂತಹ ಆದರೆ ನಿಮ್ಮ ಸಂಗ್ರಹಿಸಲಾದ ಕಾರ್ಡ್ ವಿವರಗಳಂತಹ ಕೆಲವು ಮಾಹಿತಿಯನ್ನು ವ್ಯಾಪಾರ ದಾಖಲೆಗಳಾಗಿ ಉಳಿಸಿಕೊಳ್ಳಬಹುದು.
ನೀವು ಒಂದು ಪಾವತಿ ಕಾರ್ಡ್ ಅನ್ನು ಬಳಸಿದಾಗ, Apple ಭವಿಷ್ಯದ ಖರೀದಿಗಳಿಗೆ, ಪುನರಾವರ್ತನೆಗೊಳ್ಳುವ ವಹಿವಾಟುಗಳಿಗೆ, ಅಥವಾ ನೀವು ಧೃಢೀಕರಿಸಿದ ಇತರ ಬಳಕೆಗಳಿಗೆ ನಿಮ್ಮ ಕಾರ್ಡ್ ಸಂಖ್ಯೆ ಹಾಗೂ ಬಿಲ್ಲಿಂಗ್ ಮಾಹಿತಿಯನ್ನು ಇಟ್ಟುಕೊಳ್ಳಬಹುದು ಹಾಗೂ ಸ್ವಯಂಚಾಲಿತವಾಗಿ ಅಪ್‌ಡೇಟ್ ಮಾಡಬಹುದು. Apple ಈ ಮಾಹಿತಿಯನ್ನು ನಿಮ್ಮ ಹಣಕಾಸು ಸಂಸ್ಥೆ ಅಥವಾ ಪಾವತಿಯ ನೆಟ್‌ವರ್ಕ್ ಮೂಲಕ ಪಡೆಯಬಹುದು, ಹಾಗೂ ಇದನ್ನು ವಂಚನೆ ತಡೆಗಟ್ಟುವಿಕೆ ಮತ್ತು ಧೃಢೀಕರಣಕ್ಕಾಗಿ ಸಹ ಬಳಸಬಹುದು.
ಮೋಸ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯುವುದು
ನಾವು iTunes Store ಮತ್ತು ಇತರ Apple ಆನ್‌ಲೈನ್ ಸ್ಟೋರ್‌ಗಳು ಹಾಗೂ ಇತರ Apple ಆ್ಯಪ್‌ಗಳು ಹಾಗೂ ಸೇವೆಗಳಲ್ಲಿ ವಂಚನೆ ಹಾಗೂ ಇತರ ದುರುದ್ದೇಶಪೂರಿತ ಚಟುಟಿಕೆಗಳನ್ನು ತಡೆಗಟ್ಟಲೂ ಕೂಡ ವೈಯಕ್ತಿಕ ಡೇಟವನ್ನು ಸಂಗ್ರಹಿಸುತ್ತೇವೆ. ಈ ಮಾಹಿತಿಯು ಸಾಧನದ ಪ್ರಕಾರ ಹಾಗೂ ಸಾಫ್ಟ್‌ವೇರ್ ಆವೃತ್ತಿಯಂತಹ ಸಾಧನ ಮಾಹಿತಿ, ಸ್ಥಳ ಮಾಹಿತಿ (ಲಭ್ಯವಿದ್ದಲ್ಲಿ ನಿಮ್ಮ ಇಂಟರ್ನೆಟ್ ಸಂಪರ್ಕದ IP ವಿಳಾಸವನ್ನು ಒಂದು ಭೌಗೋಳಿಕ ಪ್ರದೇಶಕ್ಕೆ ಹೋಲಿಸುವ ಮೂಲಕ ಅಂದಾಜಿಸಿರುವುದು), ಡೌನ್‌ಲೋಡ್ ಹಾಗೂ ಖರೀದಿಯ ಇತಿಹಾಸ, ಹಾಗೂ ಸ್ಟೋರ್‌ಗಳ ಜೊತೆಗಿನ ಇತರ ಸಂವಹನಗಳನ್ನು ಒಳಗೊಂಡಿರುತ್ತದೆ. ನೀವು ಒಂದು ಖರೀದಿಯನ್ನು ಪ್ರಾರಂಭಿಸಿದಾಗ Apple ತನ್ನ ಜೊತೆಗಿನ ನಿಮ್ಮ ಹಿಂದಿನ ವ್ಯಾಪಾರದ ಸಂಬಂಧವನ್ನು ವಿನಂತಿಯನ್ನು ಸಂಸ್ಕರಿಸಲು, ಹಾಗೂ ಪಾವತಿ ಪಾಲುದಾರರು ಪಾವತಿಯನ್ನು ದೃಢೀಕರಿಸುವ ಮೊದಲೇ ಉತ್ಪನ್ನ ಅಥವಾ ಸೇವೆಯನ್ನು ನೀಡಬೇಕೇ ಎಂದು ನಿರ್ಧರಿಸಲು ಬಳಸುತ್ತದೆ.
ನೀವು ಒಂದು ಖರೀದಿಯನ್ನು ಮಾಡಲು ಪ್ರಯತ್ನಿಸಿದಾಗ, ನೀವು ಕಳುಹಿಸುವ ಹಾಗೂ ಸ್ವೀಕರಿಸುವ ಫೋನ್ ಕರೆಗಳು ಅಥವಾ ಈಮೇಲ್‌ಗಳ ಅಂದಾಜು ಸಂಖ್ಯೆಯನ್ನೂ ಒಳಗೊಂಡಂತೆ ನೀವು ನಿಮ್ಮ ಸಾಧನವನ್ನು ಹೇಗೆ ಬಳಸುತ್ತೀರಿ ಎಂಬುದರ ಮಾಹಿತಿಯನ್ನು ಬಳಸಿಕೊಂಡು ನಿಮ್ಮ ಸಾಧನದಲ್ಲಿ ಒಂದು ಸಾಧನದ ವಿಶ್ವಸಾರ್ಹತೆಯ ಸ್ಕೋರ್ ಅನ್ನು ಸಹ ನಾವು ಲೆಕ್ಕ ಹಾಕುತ್ತೇವೆ. ನಿಮ್ಮ ಸಾಧನದಲ್ಲಿನ ನಿಜವಾದ ಮೌಲ್ಯಗಳನ್ನು ತಿಳಿದುಕೊಳ್ಳಲು Appleಗೆ ಸಾಧ್ಯವಾಗದ ರೀತಿಯಲ್ಲಿ ಸಲ್ಲಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ. ಸ್ಕೋರ್ ಅನ್ನು ನಮ್ಮ ಸರ್ವರ್‌ಗಳಲ್ಲಿ ನಿಗದಿತ ಸಮಯದವರೆಗೆ ಸಂಗ್ರಹಿಸಲಾಗುತ್ತದೆ.
ಎಲ್ಲಾ ಸಮಯದಲ್ಲೂ, Appleನಿಂದ ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಇದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.
2025-12-12