Mail ಗೌಪ್ಯತೆ ರಕ್ಷಣೆ ಮತ್ತು ಗೌಪ್ಯತೆ

Mail ಗೌಪ್ಯತೆ ಸುರಕ್ಷತೆ ಎನ್ನುವುದು ಈಮೇಲ್ ಕಳುಹಿಸುವವರಿಗೆ ನಿಮ್ಮ Mail ಚಟುವಟಿಕೆಯ ಬಗ್ಗೆ ಮಾಹಿತಿಯು ದೊರೆಯುವುದನ್ನು ತಡೆದು ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.


ನೀವು ಸ್ವೀಕರಿಸುವ ಈಮೇಲ್‌ಗಳು ರಿಮೋಟ್ ಕಂಟೆಂಟ್ ಅನ್ನು ಒಳಗೊಂಡಿರಬಹುದಾಗಿದ್ದು, ಈಮೇಲ್ ಕಳುಹಿಸುವವರಿಗೆ ನಿಮ್ಮ ಬಗೆಗಿನ ಮಾಹಿತಿಯನ್ನು ತಿಳಿಯಲು ಅವುಗಳು ಅನುವುಮಾಡಿಕೊಡಬಹುದು. ನೀವು ಈಮೇಲ್ ಅನ್ನು ತೆರೆದಾಗ, ಕಳುಹಿಸುವವರು ನಿಮಗೆ ಪಾರದರ್ಶಕತೆ ಮತ್ತು ಯಾವ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ನೀಡದೆ ನಿಮ್ಮ Mail ಚಟುವಟಿಕೆಯ ಕುರಿತಾದ ಮಾಹಿತಿಯನ್ನು ಸಂಗ್ರಹಿಸಬಲ್ಲರು. ಈಮೇಲ್ ಕಳುಹಿಸುವವರಿಗೆ ನೀವು ಅವರ ಈಮೇಲ್ ಅನ್ನು ಯಾವಾಗ ಮತ್ತು ಎಷ್ಟು ಬಾರಿ ತೆರೆದಿದ್ದೀರಿ, ನೀವು ಆ ಈಮೇಲ್ ಅನ್ನು ಫಾರ್ವರ್ಡ್ ಮಾಡಿರುವಿರೇ, ನಿಮ್ಮ ಇಂಟರ್ನೆಟ್ ಪ್ರೋಟೋಕಾಲ್ (IP) ವಿಳಾಸ ಹಾಗೂ ನಿಮ್ಮ ನಡವಳಿಕೆಯ ಪ್ರೊಫೈಲ್ ಅನ್ನು ನಿರ್ಮಿಸಲು ಮತ್ತು ನಿಮ್ಮ ಸ್ಥಳವನ್ನು ತಿಳಿಯಲು ಬಳಸಬಹುದಾದ ಇತರ ಡೇಟದ ಬಗ್ಗೆ ಮಾಹಿತಿ ದೊರೆಯಬಹುದು.

Mail ಚಟುವಟಿಕೆಯನ್ನು ರಕ್ಷಿಸಿ ಎನ್ನುವುದು Apple ಸೇರಿದಂತೆ ಈಮೇಲ್ ಕಳುಹಿಸುವವರಿಗೆ ನಿಮ್ಮ Mail ಚಟುವಟಿಕೆಯ ಬಗ್ಗೆ ಮಾಹಿತಿಯು ದೊರೆಯುವುದನ್ನು ತಡೆದು ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ನೀವು ಈಮೇಲ್ ಒಂದನ್ನು ತೆರೆದಾಗ ರಿಮೋಟ್ ಕಂಟೆಂಟ್ ಅನ್ನು ಡೌನ್‌ಲೋಡ್ ಮಾಡುವ ಬದಲು Mail ಆ್ಯಪ್‌ನಲ್ಲಿ ಅಥವಾ iCloud.comನಲ್ಲಿ ಒಂದು ಈಮೇಲ್ ಅನ್ನು ಸ್ವೀಕರಿಸಿದಾಗ, ನೀವು ಈಮೇಲ್ ಜೊತೆಗೆ ತೊಡಗಿಸಿಕೊಳ್ಳಲಿ ಅಥವಾ ಇಲ್ಲದಿರಲಿ, ‘Mail ಚಟುವಟಿಕೆಯನ್ನು ರಕ್ಷಿಸಿ’ ಎಂಬುದು ಹಿನ್ನೆಲೆಯಲ್ಲಿ ಡಿಫಾಲ್ಟ್ ಆಗಿ ರಿಮೋಟ್ ಕಂಟೆಂಟ್ ಅನ್ನು ಡೌನ್‌ಲೋಡ್ ಮಾಡುತ್ತದೆ. ಥರ್ಡ್-ಪಾರ್ಟಿ Mail ಕಂಟೆಂಟ್ ಕುರಿತು Apple ಯಾವುದೇ ಮಾಹಿತಿಯನ್ನು ಕಲಿಯುವುದಿಲ್ಲ.

ಇದಲ್ಲದೇ, Mail ಚಟುವಟಿಕೆಯನ್ನು ರಕ್ಷಿಸಿ ಎನ್ನುವುದು Mail ಮೂಲಕ ಡೌನ್‌ಲೋಡ್ ಆದ ಎಲ್ಲಾ ರಿಮೋಟ್ ಕಂಟೆಂಟ್ ಅನ್ನು ವಿಭಿನ್ನ ಅಸ್ತಿತ್ವಗಳು ನಿರ್ವಹಿಸುವ ಎರಡು ಪ್ರತ್ಯೇಕ ರಿಲೇಗಳಿಗೆ ಕಳುಹಿಸುತ್ತದೆ. ಮೊದಲನೆಯವರಿಗೆ ನಿಮ್ಮ IP ವಿಳಾಸ ತಿಳಿದಿರುತ್ತದೆ, ಆದರೆ ನೀವು ಸ್ವೀಕರಿಸುವ ಥರ್ಡ್ ಪಾರ್ಟಿ Mail‌ನ ಕಂಟೆಂಟ್ ಅವರಿಗೆ ತಿಳಿದಿರುವುದಿಲ್ಲ. ಎರಡನೆಯದಕ್ಕೆ ನೀವು ಸ್ವೀಕರಿಸುವ ರಿಮೋಟ್ Mail ಕಂಟೆಂಟ್ ತಿಳಿದಿರುತ್ತದೆಯೇ ಹೊರತು ನಿಮ್ಮ IP ವಿಳಾಸವಲ್ಲ, ಬದಲಿಗೆ ತಲುಪಬೇಕಾದ ವಿಳಾಸಕ್ಕೆ ಸಾರ್ವತ್ರೀಕರಿಸಿದ ಗುರುತೊಂದನ್ನು ನೀಡಲಾಗುತ್ತದೆ. ಈ ರೀತಿಯಾಗಿ, ಯಾವುದೇ ಒಂದು ಘಟಕಕ್ಕೆ ನಿಮ್ಮನ್ನು ಹಾಗೂ ನೀವು ಸ್ವೀಕರಿಸುವ ಥರ್ಡ್ ಪಾರ್ಟಿ Mail ಕಂಟೆಂಟ್‌, ಇವೆರಡನ್ನು ಗುರುತಿಸುವ ಮಾಹಿತಿ ಲಭ್ಯವಿರುವುದಿಲ್ಲ. ನಿಮ್ಮ ಕುರಿತಾದ ಒಂದು ಪ್ರೊಫೈಲ್ ಅನ್ನು ನಿರ್ಮಿಸಲು ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳಾದ್ಯಂತದ ನಿಮ್ಮ ಚಟುವಟಿಕೆಯನ್ನು ಕನೆಕ್ಟ್ ಮಾಡುವುದಕ್ಕಾಗಿ ನಿಮ್ಮ IP ವಿಳಾಸವನ್ನು ವಿಶಿಷ್ಟ ಐಡೆಂಟಿಫೈಯರ್‌ನಂತೆ ಬಳಸಲು ಕಳುಹಿಸುವವರಿಗೆ ಸಾಧ್ಯವಾಗುವುದಿಲ್ಲ.

ಸೆಟ್ಟಿಂಗ್ಸ್ > ಆ್ಯಪ್‌ಗಳು > Mail > ಗೌಪ್ಯತೆ ರಕ್ಷಣೆಗೆ ಹೋಗಿ, ನಂತರ Mail ಚಟುವಟಿಕೆಯನ್ನು ರಕ್ಷಿಸಿ ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ನೀವು ಯಾವುದೇ ಸಮಯದಲ್ಲಿ Mail ಚಟುವಟಿಕೆಯನ್ನು ರಕ್ಷಿಸಿ ಎಂಬುದನ್ನು ನಿಷ್ಕ್ರಿಯಗೊಳಿಸಬಹುದು. Macನಲ್ಲಿ, Mail > ಸೆಟ್ಟಿಂಗ್ಸ್ > ಗೌಪ್ಯತೆ ಎಂಬುದಕ್ಕೆ ಹೋಗಿ, ನಂತರ Mail ಚಟುವಟಿಕೆಯನ್ನು ರಕ್ಷಿಸಿ ಎನ್ನುವ ಆಯ್ಕೆಯನ್ನು ರದ್ದುಮಾಡಿ. Protect Mail ಚಟುವಟಿಕೆ iCloud.comನಲ್ಲಿ Mailಗಾಗಿ ತನ್ನದೇ ಆದ ಸೆಟ್ಟಿಂಗ್ಸ್ ಅನ್ನು ಹೊಂದಿದೆ. iCloud.comನಲ್ಲಿ, ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆಗೆ ಹೋಗಿ, ನಂತರ Mail ಚಟುವಟಿಕೆಯನ್ನು ರಕ್ಷಿಸಿ ಆಯ್ಕೆಯನ್ನು ರದ್ದುಮಾಡಿ.

ನೀವು Mail ಚಟುವಟಿಕೆಯ ರಕ್ಷಣೆಯನ್ನು ನಿಷ್ಕ್ರಿಯಗೊಳಿಸಲು ಆಯ್ಕೆ ಮಾಡಿಕೊಂಡಾಗಲೂ, IP ವಿಳಾಸವನ್ನು ಮರೆಮಾಡಿ ಎನ್ನುವ ಫೀಚರ್ ಒಂದೇ ‘ಎರಡು-ಪ್ರತ್ಯೇಕ-ಇಂಟರ್ನೆಟ್-ರಿಲೇಗಳ ವಿನ್ಯಾಸ’ವನ್ನು ಬಳಸಿಕೊಂಡು ನಿಮ್ಮ IP ವಿಳಾಸವನ್ನು ಮಾಸ್ಕ್ ಮಾಡುತ್ತದೆ. ನೀವು ಸೆಟ್ಟಿಂಗ್ಸ್ > ಆ್ಯಪ್‌ಗಳು > Mail > ಗೌಪ್ಯತೆ ರಕ್ಷಣೆ ಎಂಬಲ್ಲಿಗೆ ಹೋಗಿ, ನಂತರ IP ವಿಳಾಸವನ್ನು ಮರೆಮಾಡಿ ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ, ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ಯಾವಾಗ ಬೇಕಾದರೂ IP ವಿಳಾಸವನ್ನು ಮರೆಮಾಡಿ ಎಂಬುದನ್ನು ನಿಷ್ಕ್ರಿಯಗೊಳಿಸಬಹುದು. Macನಲ್ಲಿ, Mail > ಸೆಟ್ಟಿಂಗ್ಸ್ > ಗೌಪ್ಯತೆ ಎಂಬುದಕ್ಕೆ ಹೋಗಿ, ನಂತರ IP ವಿಳಾಸವನ್ನು ಮರೆಮಾಡಿ ಎನ್ನುವ ಆಯ್ಕೆಯನ್ನು ರದ್ದುಮಾಡಿ. iCloud.comನಲ್ಲಿ, ನೀವು ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ ಎಂಬಲ್ಲಿಗೆ ಹೋಗಿ > ನಂತರ IP ವಿಳಾಸವನ್ನು ಮರೆಮಾಡುವ ಆಯ್ಕೆಯನ್ನು ರದ್ದುಮಾಡುವ ಮೂಲಕ ನೀವು IP ವಿಳಾಸವನ್ನು ಮರೆಮಾಡಿ ಎಂಬ ಆಯ್ಕೆಯನ್ನು ನಿಷ್ಕ್ರಿಯಗೊಳಿಸಬಹುದು.

ಈ ಫೀಚರ್‌ಗಳನ್ನು ಬಳಸುವ ಮೂಲಕ, ನೀವು Apple ಮತ್ತು ಅದರ ಅಂಗಸಂಸ್ಥೆಗಳು ಮತ್ತು ಏಜೆಂಟ್‌ಗಳಿಗೆ ಈ ಮೇಲೆ ತಿಳಿಸಿದಂತೆ ಮಾಹಿತಿಯ ಪ್ರಸರಣ, ಸಂಗ್ರಹಣೆ, ನಿರ್ವಹಣೆ, ಸಂಸ್ಕರಿಸುವಿಕೆ ಮತ್ತು ಬಳಕೆಗಾಗಿ ಒಪ್ಪಿಗೆಯನ್ನು ನೀಡುತ್ತೀರಿ ಮತ್ತು ಅವುಗಳಿಗೆ ಸಮ್ಮತಿಸುತ್ತೀರಿ.

ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು

2025-12-12