NFC ಮತ್ತು SE ಪ್ಲ್ಯಾಟ್‌ಫಾರ್ಮ್ ಹಾಗೂ ಗೌಪ್ಯತೆ

NFC & SE ಪ್ಲ್ಯಾಟ್‌ಫಾರ್ಮ್ ಅನ್ನು ಬಳಸಿಕೊಂಡು ನಿಮ್ಮ ಸಾಧನದಲ್ಲಿ ರುಜುವಾತುಗಳನ್ನು ಸೆಟಪ್ ಮಾಡಲು Apple ನಿಮ್ಮ Apple ಖಾತೆ ಮತ್ತು ಸಾಧನದ ಐಡೆಂಟಿಫೈಯರ್‌ಗಳನ್ನು ಬಳಸುತ್ತದೆ. Apple ನಿಮ್ಮ ಸಾಧನದಿಂದ ನಿಮಗೆ ಸಂಬಂಧಿಸದ NFC ಮತ್ತು SE ಪ್ಲ್ಯಾಟ್‌ಫಾರ್ಮ್ ಡೇಟವನ್ನು ನಮ್ಮ NFC ಮತ್ತು SE ಪ್ಲ್ಯಾಟ್‌ಫಾರ್ಮ್ ಪಾಲುದಾರರಿಗೆ ಬಿಲ್ ಮಾಡಲು ಬಳಸುತ್ತದೆ.
 

NFC ಮತ್ತು SE ಪ್ಲ್ಯಾಟ್‌ಫಾರ್ಮ್ ಅನ್ನು ನಿಮ್ಮ ಮಾಹಿತಿಯನ್ನು ರಕ್ಷಿಸಲು ಮತ್ತು ಡಿಫಾಲ್ಟ್ ಸಂಪರ್ಕರಹಿತ ಆ್ಯಪ್ ಅನ್ನು ಆರಿಸಲು ನಿಮಗೆ ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.


Privacy Icon

  • ನಿಮ್ಮ ಪ್ರದೇಶದಲ್ಲಿನ NFC ಮತ್ತು SE ಪ್ಲ್ಯಾಟ್‌ಫಾರ್ಮ್‌ಗಳ ಲಭ್ಯತೆಯನ್ನು ನಿರ್ಧರಿಸಲು ನಿಮ್ಮ ಸಾಧನವು ನಿಮ್ಮ ಸ್ಥಳದ ಕುರಿತಾದ ಮಾಹಿತಿಯನ್ನು ಬಳಸುತ್ತದೆ.
  • ನೀವು NFC ಮತ್ತು SE ಪ್ಲ್ಯಾಟ್‌ಫಾರ್ಮ್ ಬಳಸಿ ನಿಮ್ಮ ಸಾಧನಕ್ಕೆ ರುಜುವಾತನ್ನು ಸೇರಿಸಿದಾಗ, ನಿಮ್ಮ ಸಾಧನದಲ್ಲಿ ರುಜುವಾತುಗಳನ್ನು ಸೆಟಪ್ ಮಾಡಲು Apple ನಿಮ್ಮ Apple ಖಾತೆ ಮತ್ತು ಸಾಧನದ ಐಡೆಂಟಿಫೈಯರ್‌ಗಳನ್ನು ಬಳಸುತ್ತದೆ.
  • Apple ನಿಮಗೆ ಸಂಬಂಧಿಸಲು ಸಾಧ್ಯವಿಲ್ಲದ NFC ಮತ್ತು SE ಪ್ಲ್ಯಾಟ್‌ಫಾರ್ಮ್ ಡೇಟವನ್ನು ಬಿಲ್ಲಿಂಗ್ ಉದ್ದೇಶಗಳಿಗಾಗಿ ಮಾತ್ರ ಬಳಸುತ್ತದೆ.

NFC ಮತ್ತು SE ಪ್ಲ್ಯಾಟ್‌ಫಾರ್ಮ್, ಸ್ಟೋರ್‌ಗಳಲ್ಲಿ ನಿಮ್ಮ ರುಜುವಾತುಗಳನ್ನು ಪ್ರಸ್ತುತಪಡಿಸುವುದಕ್ಕಾಗಿ ನಿಮ್ಮ ಆಯ್ಕೆಯ ಸಂಪರ್ಕರಹಿತ ಆ್ಯಪ್ ಅನ್ನು ಬಳಸಲು ನಿಮಗೆ ಅನುವುಮಾಡಿಕೊಡುತ್ತದೆ.

NFC ಮತ್ತು SE ಪ್ಲ್ಯಾಟ್‌ಫಾರ್ಮ್ ಅನ್ನು ಬಳಸುವುದು

ಲಭ್ಯತೆಯನ್ನು ನಿರ್ಧರಿಸುವುದು
NFC & SE ಪ್ಲ್ಯಾಟ್‌ಫಾರ್ಮ್ ಅನ್ನು ಬಳಸಿಕೊಂಡು ನಿಮ್ಮ ಆದ್ಯತೆಯ ಸಂಪರ್ಕರಹಿತ ಆ್ಯಪ್‌ಗೆ ರುಜುವಾತುಗಳನ್ನು ಒದಗಿಸಲು ನೀವು ಪ್ರಯತ್ನಿಸಿದಾಗ, ನಿಮ್ಮ ಸಾಧನವು Apple ಅಲ್ಲ, NFC & SE ಪ್ಲಾಟ್‌ಫಾರ್ಮ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಸ್ಥಳ ಮತ್ತು ಸಾಧನದ ಸೆಟ್ಟಿಂಗ್ಸ್ ಕುರಿತು ಮಾಹಿತಿಯನ್ನು ಬಳಸುತ್ತದೆ. ನಿಮ್ಮ ಸಾಧನಕ್ಕೆ ಲಭ್ಯತೆಯನ್ನು ನಿರ್ಧರಿಸಲು ಸಾಧ್ಯವಾಗದಿದ್ದರೆ, ನಿಮ್ಮ ಸಂಪರ್ಕರಹಿತ ಆ್ಯಪ್‌ಗೆ ರುಜುವಾತುಗಳನ್ನು ಸೇರಿಸಲು ನಿಮಗೆ ಸಾಧ್ಯವಾಗದಿರಬಹುದು. ಕೆಲವು ಡಿಫಾಲ್ಟ್ ಸಂಪರ್ಕರಹಿತ ಆ್ಯಪ್ ಆದ್ಯತೆಗಳನ್ನು ನಿರ್ಧರಿಸಲು ನಿಮ್ಮ ಸಾಧನವು ನಿಮ್ಮ ಸ್ಥಳ ಮಾಹಿತಿಯನ್ನು ಬಳಸುತ್ತದೆ ಮತ್ತು ಸೆಟ್ಟಿಂಗ್ಸ್ > ಆ್ಯಪ್‌ಗಳು > [ಆ್ಯಪ್‌ನ ಹೆಸರು] > ಡಿಫಾಲ್ಟ್ ಸಂಪರ್ಕರಹಿತ ಆ್ಯಪ್‌ ಎಂಬಲ್ಲಿ ಲಭ್ಯವಿರುವ ಆದ್ಯತೆಗಳನ್ನು ಪ್ರದರ್ಶಿಸುತ್ತದೆ. ನೀವು NFC & SE ಪ್ಲ್ಯಾಟ್‌ಫಾರ್ಮ್‌ಗಳನ್ನು ಬೆಂಬಲಿಸದ ಪ್ರದೇಶದಲ್ಲಿ ಇರುವಾಗ ನಿಮ್ಮ ಡಿಫಾಲ್ಟ್ ಸಂಪರ್ಕರಹಿತ ಆ್ಯಪ್ ಪ್ರಾಶಸ್ತ್ಯಗಳನ್ನು ಬದಲಾಯಿಸಿದರೆ, NFC ಮತ್ತು SE ಪ್ಲ್ಯಾಟ್‌ಫಾರ್ಮ್‌ಗಳು ಲಭ್ಯವಿಲ್ಲದಿರುವಾಗ ರುಜುವಾತನ್ನು ಪ್ರಸ್ತುತಪಡಿಸುವುದಕ್ಕಾಗಿ ನಿಮ್ಮ ಆದ್ಯತೆಯ ಸಂಪರ್ಕರಹಿತ ಆ್ಯಪ್ ಅನ್ನು ಬಳಸಲು ನಿಮಗೆ ಸಾಧ್ಯವಾಗದಿರಬಹುದು.

ನಿಮ್ಮ ಸಾಧನಕ್ಕೆ ರುಜುವಾತುಗಳನ್ನು ಸೇರಿಸುವುದು
ನಿಮ್ಮ ಆದ್ಯತೆಯ ಸಂಪರ್ಕರಹಿತ ಆ್ಯಪ್‌ಗೆ ನೀವು ರುಜುವಾತನ್ನು ಸೇರಿಸಿದಾಗ, ನಿಮ್ಮ ಸುರಕ್ಷಿತ ಎಲಿಮೆಂಟ್‌ಗೆ ರುಜುವಾತುಗಳನ್ನು ಸುರಕ್ಷಿತವಾಗಿ ಒದಗಿಸಲು Apple ನಿಮ್ಮ Apple ಖಾತೆ ಮತ್ತು ನಿಮ್ಮ ಸಾಧನದ ಹಾರ್ಡ್‌ವೇರ್ ಐಡೆಂಟಿಫೈಯರ್‌ಗಳನ್ನು ಬಳಸುತ್ತದೆ. ನೀವು ಸ್ವೀಕರಿಸಿದ ರುಜುವಾತನ್ನು ಅಪ್‌ಡೇಟ್ ಮಾಡುವುದು ಅಥವಾ ಡಿಲೀಟ್ ಮಾಡುವುದು ಸೇರಿದಂತೆ ಸಂಪರ್ಕರಹಿತ ಆ್ಯಪ್‌ನಲ್ಲಿ ರುಜುವಾತನ್ನು ನಿರ್ವಹಿಸಲು ನಿಮಗೆ ಸಂಪರ್ಕರಹಿತ ಆ್ಯಪ್ ಒದಗಿಸುವವರು ಮತ್ತು ನಿಮ್ಮ ರುಜುವಾತು ನೀಡುವವರಿಗೆ ಅನುಮತಿಸಲು Apple ಈ ಮಾಹಿತಿಯನ್ನು ಬಳಸುತ್ತದೆ ಮತ್ತು ಸಂಗ್ರಹಿಸುತ್ತದೆ. ನಿಮ್ಮ ರುಜುವಾತುಗಳ ಲೈಪ್‌ಸೈಕಲ್ ಅನ್ನು ನಿರ್ವಹಿಸಲು ಬಳಸುವ ಮಾಹಿತಿಯು ರುಜುವಾತು ನೀಡುವವರು ನಿಮ್ಮ ರುಜುವಾತನ್ನು ಹೇಗೆ ಕಾನ್ಫಿಗರ್ ಮಾಡಿದ್ದಾರೆ ಎಂಬುದರ ಡೇಟವನ್ನು ಮತ್ತು ಸಂಪರ್ಕರಹಿತ ಆ್ಯಪ್ ಒದಗಿಸುವವರ ಕುರಿತಾದ ಮಾಹಿತಿಯನ್ನು ಒಳಗೊಂಡಿರುತ್ತದೆ. ನಿಮ್ಮ ಆದ್ಯತೆಯ ಸಂಪರ್ಕರಹಿತ ಆ್ಯಪ್‌ನ ಜೊತೆಗೆ ನೀವು NFC ಮತ್ತು SE ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಸಿದಾಗ, Apple ನಿಮ್ಮ ರುಜುವಾತು ವಿವರಗಳನ್ನು ನೋಡುವುದಿಲ್ಲ ಅಥವಾ ಸಂಗ್ರಹಿಸುವುದಿಲ್ಲ.

ಬಿಲ್ಲಿಂಗ್ ಉದ್ದೇಶಗಳಿಗಾಗಿ Apple ಜೊತೆಗೆ ಹಂಚಿಕೊಳ್ಳಲಾದ ಮಾಹಿತಿ
NFC ಮತ್ತು SE ಪ್ಲ್ಯಾಟ್‌ಫಾರ್ಮ್ ಅನ್ನು ಬಳಸಿಕೊಂಡು ನಿಮ್ಮ ಸಂಪರ್ಕರಹಿತ ಆ್ಯಪ್‌ಗೆ ರುಜುವಾತನ್ನು ಒದಗಿಸಿದಾಗ ಅಥವಾ ಆ ರುಜುವಾತನ್ನು ಬಳಸಿದಾಗ, ಈ ಮಾಹಿತಿಯನ್ನು Apple ನಿಮಗೆ ಸಂಬಂಧಿಸಿರದಂತೆ ನಿಮ್ಮ ಸಂಪರ್ಕರಹಿತ ಆ್ಯಪ್‌ ಒದಗಿಸುವವರಿಗೆ ಬಿಲ್ ಮಾಡಲು ಮಾತ್ರವೇ ಬಳಸುತ್ತದೆ. ನಿಮ್ಮ ಸಂಪರ್ಕರಹಿತ ಆ್ಯಪ್‌ಗೆ ಸೇರಿಸಲಾದ ರುಜುವಾತುಗಳ ಪ್ರಮಾಣ ಮತ್ತು ಬಗೆ ಹಾಗೂ ಪ್ರತಿ ಬಾರಿ ನೀವು ನಿಮ್ಮ ರುಜುವಾತುಗಳನ್ನು ಪ್ರಸ್ತುತಪಡಿಸಿದ ವಿವರದ ಕುರಿತು ಸಾಧನವು ಸೀಮಿತ ಮಾಹಿತಿಯನ್ನು ಹಂಚಿಕೊಳ್ಳುತ್ತದೆ. ನಿಮ್ಮ ಸಾಧನವು ಈ ಮಾಹಿತಿಯನ್ನು Apple ಜೊತೆಗೆ ಹಂಚಿಕೊಳ್ಳುವಾಗ ನಿಮಗೆ.ಸಂಬಂಧಿಸಿರದಂತೆ, ಬಿಲ್ಲಿಂಗ್ ಉದ್ದೇಶಗಳಿಗಾಗಿ ಮಾತ್ರ ಬಳಸುವಂತೆ ನೀಡಿರುತ್ತದೆ. ನಿಮ್ಮ ಸಂಪರ್ಕರಹಿತ ಆ್ಯಪ್‌ನಿಂದ ನೀವು ರುಜುವಾತುಗಳನ್ನು ಪ್ರಸ್ತುತಪಡಿಸಿದಾಗ ನಿಮ್ಮ ವಹಿವಾಟಿನ ಮಾಹಿತಿಯನ್ನು Apple ನೋಡುವುದಿಲ್ಲ ಅಥವಾ ಸಂಗ್ರಹಿಸುವುದಿಲ್ಲ.

ವೈಯುಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುವುದಕ್ಕಾಗಿ ಅನ್ವಯವಾಗುವ ಕಾನೂನುಬದ್ಧ ಆಧಾರ

ಸೇವೆಯನ್ನು ಒದಗಿಸಲು ಮತ್ತು ನಮ್ಮ ಕಾನೂನು ಬಾಧ್ಯತೆಗಳನ್ನು ಅನುಸರಿಸಲು ಅಗತ್ಯವಿರುವಂತೆ ನಿಮ್ಮ NFC ಮತ್ತು SE ಪ್ಲ್ಯಾಟ್‌ಫಾರ್ಮ್‌ಗೆ ಸಂಬಂಧಿಸಿದ ನಿಮ್ಮ ವೈಯಕ್ತಿಕ ಡೇಟವನ್ನು ನಾವು ಪ್ರಕ್ರಿಯೆಗೊಳಿಸುತ್ತೇವೆ. ಸಮ್ಮತಿಯು ಸೂಕ್ತವಾದ ಕಾನೂನುಬದ್ಧ ಆಧಾರವಾಗಿದ್ದಲ್ಲಿ, ನಾವು ಅದನ್ನು ಅನ್ವಯವಾಗುವ ಸ್ಥಳೀಯ ಕಾನೂನುಗಳ ಪ್ರಕಾರ ಪಡೆಯುತ್ತೇವೆ.

ಅನ್ವಯವಾಗುವ ಸ್ಥಳೀಯ ಕಾನೂನು ಅನುಮತಿಸಿದಲ್ಲಿ, ನಾವು ನಮ್ಮ ಅಥವಾ ಯಾವುದಾದರೂ ಥರ್ಡ್ ಪಾರ್ಟಿ ಕಾನೂನುಬದ್ಧ ಆಸಕ್ತಿಯ ಉದ್ದೇಶಗಳಿಗೆ ಅಗತ್ಯವಾದ ಹಾಗೆ ಈ ಕೆಳಗಿನ ಪ್ರಕಾರದ ವೈಯುಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುತ್ತೇವೆ ಹಾಗೂ ಅದರಲ್ಲಿ ಇದರ ಕುರಿತ ಮಾಹಿತಿಯೂ ಸೇರಿದೆ:

  • ನಿಮ್ಮ ಸ್ಥಳ
  • ಸಾಧನದ ಬಗೆ, ಸಾಫ್ಟ್‌ವೇರ್ ಆವೃತ್ತಿ, ಹಾಗೂ ಸಾಧನದ ಸೀರಿಯಲ್ ನಂಬರ್‌ನಂತಹ ನಿಮ್ಮ ಸಾಧನ
  • ಈಮೇಲ್ ವಿಳಾಸದಂತಹ ನಿಮ್ಮ Apple ಖಾತೆ
  • ಪ್ರತಿಯೊಂದು ಸಂಪರ್ಕರಹಿತ ಆ್ಯಪ್‌ಗೆ ಒದಗಿಸಲಾಗಿರುವ ರುಜುವಾತುಗಳ ಮತ್ತು ಪ್ರತಿ ರುಜುವಾತಿನ ನಿಮ್ಮ ಬಳಕೆಯ ಕುರಿತ ಮಾಹಿತಿ ಮುಂತಾದ ನೀವು ಇನ್‌ಸ್ಟಾಲ್ ಮಾಡಿದ ಸಂಪರ್ಕರಹಿತ ಆ್ಯಪ್‌ಗಳಲ್ಲಿ NFC ಮತ್ತು SE ಪ್ಲ್ಯಾಟ್‌ಫಾರ್ಮ್‌ನ ನಿಮ್ಮ ಬಳಕೆ.

ಈ ಕಾನೂನುಬದ್ಧವಾದ ಆಸಕ್ತಿಗಳು ಇವುಗಳನ್ನು ಒಳಗೊಂಡಿರುತ್ತವೆ:

  • ನಿಮ್ಮ ಆದ್ಯತೆಯ ಸಂಪರ್ಕರಹಿತ ಆ್ಯಪ್‌ನಲ್ಲಿ ರುಜುವಾತುಗಳನ್ನು ಸೇರಿಸುವುದು ಮತ್ತು ನಿರ್ವಹಿಸುವುದು
  • NFC ಮತ್ತು SE ಪ್ಲ್ಯಾಟ್‌ಫಾರ್ಮ್ ಅನ್ನು ಆಪರೇಟ್ ಮಾಡುವುದು ಮತ್ತು ಸಂಪರ್ಕರಹಿತ ಆ್ಯಪ್ ಪೂರೈಕೆದಾರರು ಮತ್ತು ರುಜುವಾತು ವಿತರಕರಿಗಾಗಿ ಬಿಲ್ ಅನ್ನು ತಯಾರಿಸುವುದು
  • ಮೋಸ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯುವುದು

ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.

2025-12-12