ಸಮಸ್ಯೆಯೊಂದನ್ನು ವರದಿ ಮಾಡಿ ಮತ್ತು ಗೌಪ್ಯತೆ

Apple ಉತ್ಪನ್ನಗಳು ಮತ್ತು ಸೇವೆಗಳನ್ನು ಸುಧಾರಿಸಲು ಈ ವರದಿಯನ್ನು ಬಳಸಬಹುದು, ಉದಾಹರಣೆಗೆ ಮಾಡಲ್‌ಗಳಿಗೆ ತರಬೇತಿ ನೀಡುವುದು. ಇದನ್ನು ನಿಮ್ಮ Apple ಖಾತೆಗೆ ಲಿಂಕ್ ಮಾಡಲಾಗುತ್ತದೆ. ಸಲ್ಲಿಸುವ ಮೂಲಕ, ನೀವು ಕೃತಿಸ್ವಾಮ್ಯವಿರುವ, ವೈಯಕ್ತಿಕವಾದ ಅಥವಾ ಸೂಕ್ಷ್ಮ ಮಾಹಿತಿಯನ್ನು ಹೊಂದಿರಬಹುದಾದ ವರದಿಯ ಕಂಟೆಂಟ್‌ನ ಮಾಲೀಕತ್ವವನ್ನು ಹೊಂದಿದ್ದೀರಿ ಅಥವಾ ನಿಮ್ಮ ಬಳಿ ಇದನ್ನು ಅಪ್‌ಲೋಡ್ ಮಾಡಲು ಅನುಮತಿ ಇದೆ ಎನ್ನುವುದನ್ನು ಪ್ರತಿನಿಧಿಸುತ್ತೀರಿ.
 

ನಿಮ್ಮ ಮಾಹಿತಿಯನ್ನು ಕಾಪಾಡಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವುದಕ್ಕೆ ಅನುವುಮಾಡಿಕೊಡಲು “ಸಮಸ್ಯೆಯೊಂದನ್ನು ವರದಿ ಮಾಡಿ” ಎಂಬುದನ್ನು ವಿನ್ಯಾಸಗೊಳಿಸಲಾಗಿದೆ.


Privacy Icon

  • “ಸಮಸ್ಯೆಯನ್ನು ವರದಿ ಮಾಡಿ” ಎಂಬುದು ವರದಿ ಮಾಡಿದ ಸಮಸ್ಯೆಗಳನ್ನು ಪರಿಹರಿಸಲು ಮಾಹಿತಿಯನ್ನು ಸಂಗ್ರಹಿಸುತ್ತದೆ. Apple ಬೀಟಾ ಸಾಫ್ಟ್‌ವೇರ್ ಪ್ರೋಗ್ರಾಂನಲ್ಲಿ ಲಭ್ಯವಿರುವ ಕೆಲವು ಫೀಚರ್‌ಗಳಿಗೆ ಸಂಬಂಧಿಸಿದ ವರದಿಗಳಿಗಾಗಿ ಸಂಗ್ರಹಿಸಲಾದ ಮಾಹಿತಿಯನ್ನು ನಿಮ್ಮ Apple ಖಾತೆಯೊಂದಿಗೆ ಸಂಯೋಜಿಸಿ ಸಂಗ್ರಹಿಸಲಾಗುತ್ತದೆ. ನೀವು ಈ ವರದಿಗಳನ್ನು ಸಲ್ಲಿಸುವ ಮೊದಲು, ನಿಮ್ಮ Apple ಖಾತೆಯನ್ನು ಸ್ಕ್ರೀನ್ ಮೇಲೆ ತೋರಿಸಲಾಗುತ್ತದೆ. ಇತರೆ ಎಲ್ಲಾ ವರದಿಗಳು Apple ಖಾತೆಗೆ ಲಿಂಕ್ ಆಗಿರದ ರ್‍ಯಾಂಡಮ್ ವಿಶಿಷ್ಟ ಐಡೆಂಟಿಫೈಯರ್‌ನೊಂದಿಗೆ ಸಂಯೋಜಿತವಾಗಿರುತ್ತದೆ.
  • ಸಮಸ್ಯೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪರಿಹರಿಸಲು ಸಹಾಯವಾಗಲು ನಿಮ್ಮ ವರದಿಯ ಜೊತೆಗೆ ನೀವು ಹೆಚ್ಚುವರಿ ಮಾಹಿತಿಯನ್ನು ಸಲ್ಲಿಸಬಹುದು.
  • Apple ಮಾಡಲ್‌ಗಳಿಗೆ ತರಬೇತಿ ನೀಡುವುದನ್ನು ಒಳಗೊಂಡಂತೆ ಉತ್ಪನ್ನಗಳು ಮತ್ತು ಸೇವೆಗಳನ್ನು ಸುಧಾರಿಸಲು ನೀವು ಸಲ್ಲಿಸಿದ ಮಾಹಿತಿಯನ್ನು Apple ಬಳಸಬಹುದು.
  • ನೀವು ChatGPT ಸಂಬಂಧಿತ ಕಳವಳವನ್ನು ವರದಿ ಮಾಡಿದರೆ, ನಿಮ್ಮ ವರದಿಯನ್ನು OpenAIನೊಂದಿಗೆ ಹಂಚಿಕೊಳ್ಳಲು ಅನುಮತಿಸಲು ಆಯ್ಕೆಯನ್ನು ಮಾಡಬಹುದು.
  • ವಿಷುವಲ್ ಇಂಟೆಲಿಜೆನ್ಸ್ ಅನ್ನು ಬಳಸಿಕೊಂಡು Googleನಲ್ಲಿ ಹುಡುಕುವುದಕ್ಕೆ ಸಂಬಂಧಿತ ಕಳವಳವನ್ನು ವರದಿ ಮಾಡಿದರೆ, ನಿಮ್ಮ ವರದಿಯನ್ನು Googleನೊಂದಿಗೆ ಹಂಚಿಕೊಳ್ಳುವುದಕ್ಕೆ ಅನುಮತಿಸಲು ನೀವು ಆಯ್ಕೆಯನ್ನು ಮಾಡಬಹುದು.

“ಸಮಸ್ಯೆಯನ್ನು ವರದಿ ಮಾಡಿ” ಎಂಬುದು ನಿಮಗೆ ನಮ್ಮ ಉತ್ಪನ್ನಗಳು ಮತ್ತು ಸೇವೆಗಳ ಕುರಿತು Appleಗೆ ಪ್ರತಿಕ್ರಿಯೆ ನೀಡಲು ಅವಕಾಶ ಒದಗಿಸುತ್ತದೆ. ನೀವು ವರದಿಯೊಂದನ್ನು ಸಲ್ಲಿಸುವಾಗ ಪ್ರಶ್ನೆಗಳಿಗೆ ಉತ್ತರಗಳು, ವಿವರಣೆಗಳು, ಫೋಟೋಗಳೂ, ವೀಡಿಯೊಗಳು, ಸಂದೇಶಗಳು ಮತ್ತು ಈಮೇಲ್‌ಗಳಂತಹ ವರದಿಯಲ್ಲಿ ನೀವು ಒದಗಿಸುವ ಮಾಹಿತಿಯನ್ನು Apple ಸಂಗ್ರಹಿಸುತ್ತದೆ. ನೀವು ವರದಿಯನ್ನು ಸಲ್ಲಿಸುವ ಮೊದಲು ಅದನ್ನು ಪರಿಶೀಲಿಸಬಹುದು ಮತ್ತು ವರದಿಯಲ್ಲಿ ಸೇರಿಸಲು ಬಯಸದೆ ಇರುವ ಮಾಹಿತಿ ಮತ್ತು ಅಟ್ಯಾಚ್‌ಮೆಂಟ್‌ಗಳನ್ನು ತೆಗೆದುಹಾಕಬಹುದು.

ನಿಮ್ಮ ಸಾಧನದ ಮಾಡೆಲ್, ಆಪರೇಟಿಂಗ್ ಸಿಸ್ಟಂನ ಆವೃತ್ತಿ ಮತ್ತು ಭಾಷೆಗೆ ಸಂಬಂಧಿಸಿದ ಮಾಹಿತಿಯನ್ನು ಸಹ Apple ಸಂಗ್ರಹಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ನೀವು Apple Intelligenceಗೆ ಸಂಬಂಧಿಸಿದ ಕಳವಳವನ್ನು ವರದಿ ಮಾಡಿದಾಗ, Apple Intelligence ಮಾಡೆಲ್‌ನ ಆವೃತ್ತಿಯ ಕುರಿತ ಮಾಹಿತಿಯನ್ನು Apple ಸಂಗ್ರಹಿಸಬಹುದು.

ವರದಿ ಮಾಡಿದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಫೀಚರ್-ನಿರ್ದಿಷ್ಟ ಮಾಡಲ್‌ಗಳು ಒಳಗೊಂಡಂತೆ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು, ಸುಧಾರಿಸಲು ಮತ್ತು ಅವುಗಳಿಗೆ ತರಬೇತಿ ನೀಡಲು ಈ ಮಾಹಿತಿಯನ್ನು Apple ಬಳಸುತ್ತದೆ.

ಥರ್ಡ್ ಪಾರ್ಟಿಗೆ ಸಂಬಂಧಿಸಿದ ಕಳವಳವೊಂದನ್ನು ವರದಿ ಮಾಡುವುದು

ನೀವು ChatGPT ಎಕ್ಸ್‌ಟೆನ್ಶನ್ ಅನ್ನು ಬಳಸಿದರೆ ಮತ್ತು ಸಮಸ್ಯೆಯೊಂದನ್ನು ಅನುಭವಿಸಿದರೆ, ChatGPTಯನ್ನು ನಿರ್ವಹಿಸುವ OpenAI ಕುರಿತು ನೀವು ವರದಿ ಮಾಡಿರುವುದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರತ್ಯೇಕವಾಗಿ ಒದಗಿಸಲು ಆಯ್ಕೆ ಮಾಡಬಹುದು. Apple ನೀವು ಗುರುತಿಸಿದ ಸಮಸ್ಯೆಯನ್ನು ಸರಿಪಡಿಸಲು ನಿಮ್ಮ ವರದಿಯಿಂದ ಅಥವಾ ವರದಿಯ ಕುರಿತ ನಿರ್ದಿಷ್ಟ ಮಾಹಿತಿಯನ್ನು OpenAIಗೆ ಒದಗಿಸಬಹುದು. ಅದರಲ್ಲಿ ನಿಮ್ಮ ವಿನಂತಿ, (ವಿನಂತಿಯ ಜೊತೆಗೆ ನೀವು ಅಟ್ಯಾಚ್ ಮಾಡಿದ ಯಾವುದೇ ಮೆಟೀರಿಯಲ್‌ಗಳು), ಉತ್ತರ, ನಿಮ್ಮ ಸಾಧನದ ವಿಧ ಮತ್ತು ಸಾಮಾನ್ಯ ಸ್ಥಳದಂತಹ ನಿಮ್ಮ ಸಾಧನದ ಮತ್ತು ನಿಮ್ಮ ಸಾಧನದ ಸೆಟ್ಟಿಂಗ್ಸ್ ಕುರಿತ ಮಾಹಿತಿ ಹಾಗೂ ಅನುಭವಿಸಿದ ಸಮಸ್ಯೆಯ ವಿಧವನ್ನು ಒಳಗೊಂಡಿರುತ್ತದೆ. OpenAIಗೆ ಮಾಹಿತಿಯನ್ನು ಒದಗಿಸಲು ನೀವು ಪ್ರತ್ಯೇಕವಾಗಿ ಆಯ್ಕೆ ಮಾಡಿದಾಗ ಮಾತ್ರವೇ OpenAI ಜೊತೆಗೆ Apple ವರದಿಗಳನ್ನು ಹಂಚಿಕೊಳ್ಳುತ್ತದೆ, ಮತ್ತು OpenAI ಈ ಮಾಹಿತಿಯನ್ನು ಸೀಮಿತ ಅವಧಿಯವರೆಗೆ ಮಾತ್ರವೇ ಉಳಿಸಿಕೊಳ್ಳಬೇಕಾಗುತ್ತದೆ. ವರದಿ ಮಾಡಿದ ಸಮಸ್ಯೆ ಮತ್ತು ಸಂಬಂಧಿತ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು ಮಾತ್ರವೇ OpenAI ಮಾಹಿತಿಯನ್ನು ಬಳಸಿಕೊಳ್ಳುವ ಅಗತ್ಯವಿರುತ್ತದೆ. ನಿಮ್ಮ ಫೀಡ್‌ಬ್ಯಾಕ್ ಅನ್ನು OpenAIಗೆ ಒದಗಿಸುವಾಗ ನಿಮ್ಮ Apple ಖಾತೆಗೆ ಅದನ್ನು ಸಂಯೋಜಿಸಲಾಗುವುದಿಲ್ಲ ಮತ್ತು ವರದಿಯನ್ನು ಹಂಚಿಕೊಳ್ಳುವ ಮೊದಲು Apple ನಿಮ್ಮ ಹೆಸರು ಮತ್ತು ಈಮೇಲ್ ವಿಳಾಸವನ್ನು ತೆಗೆದುಹಾಕುತ್ತದೆ.

ನೀವು ವಿಷುವಲ್ ಇಂಟೆಲಿಜೆನ್ಸ್ ಅನ್ನು ಬಳಸಿಕೊಂಡು Googleನಲ್ಲಿ ಹುಡುಕಲು ಆಯ್ಕೆ ಮಾಡಿದರೆ ಮತ್ತು ನಿಮಗೆ ಸಮಸ್ಯೆಯುಂಟಾದರೆ, ನೀವು ವರದಿ ಮಾಡಿದ ಕಳವಳಕ್ಕೆ ಸಂಬಂಧಿಸಿದ ಮಾಹಿತಿಯನ್ನು Googleಗೆ ನೀವು ಪ್ರತ್ಯೇಕವಾಗಿ ಒದಗಿಸಲು ಆಯ್ಕೆಮಾಡಬಹುದು. ನೀವು ಗುರುತಿಸಿದ ಸಮಸ್ಯೆಯನ್ನು ಸರಿಪಡಿಸುವುದಕ್ಕೆ ಸಹಾಯ ಮಾಡಲು Apple ನಿಮ್ಮ ವರದಿಯಿಂದ ಅಥವಾ ವರದಿಯ ಕುರಿತ ನಿರ್ದಿಷ್ಟ ಮಾಹಿತಿಯನ್ನು Googleಗೆ ಒದಗಿಸಬಹುದು, ಅದರಲ್ಲಿ ನಿಮ್ಮ ವಿನಂತಿ (ಮತ್ತು ನೀವು ಸೇರಿಸಿದ ಯಾವುದೇ ಚಿತ್ರ), ಹುಡುಕಾಟದ ಫಲಿತಾಂಶಗಳು, ನಿಮ್ಮ ಆಪರೇಟಿಂಗ್ ಸಿಸ್ಟಂ ಪ್ರಕಾರ ಮತ್ತು ಭಾಷೆ ಹಾಗೂ ಅನುಭವಿಸಿದ ಸಮಸ್ಯೆಯ ಪ್ರಕಾರ ಸೇರಿವೆ. Googleಗೆ ಮಾಹಿತಿಯನ್ನು ಒದಗಿಸಲು ನೀವು ಪ್ರತ್ಯೇಕವಾಗಿ ಆಯ್ಕೆ ಮಾಡಿದಾಗ ಮಾತ್ರವೇ Google ಜೊತೆಗೆ Apple ವರದಿಗಳನ್ನು ಹಂಚಿಕೊಳ್ಳುತ್ತದೆ. ನೀವು Google ಜೊತೆಗೆ ಹಂಚಿಕೊಳ್ಳುವ ಮಾಹಿತಿಯನ್ನು Googleನ ಗೌಪ್ಯತೆ ನೀತಿಗೆ ಅನುಗುಣವಾಗಿ ನಿಯಂತ್ರಿಸಲಾಗುತ್ತದೆ. Googleನ ಗೌಪ್ಯತೆ ಅಭ್ಯಾಸಗಳ ಬಗ್ಗೆ ಇನ್ನಷ್ಟು ತಿಳಿಯಲು, https://policies.google.com/privacy?hl=en-US ಎಂಬಲ್ಲಿಗೆ ಭೇಟಿ ನೀಡಿ. ನಿಮ್ಮ ಫೀಡ್‌ಬ್ಯಾಕ್ ಅನ್ನು Googleಗೆ ಒದಗಿಸುವಾಗ ನಿಮ್ಮ Apple ಖಾತೆಗೆ ಅದನ್ನು ಸಂಯೋಜಿಸಲಾಗುವುದಿಲ್ಲ ಮತ್ತು ವರದಿಯನ್ನು ಹಂಚಿಕೊಳ್ಳುವ ಮೊದಲು Apple ನಿಮ್ಮ ಹೆಸರು ಮತ್ತು ಈಮೇಲ್ ವಿಳಾಸವನ್ನು ತೆಗೆದುಹಾಕುತ್ತದೆ.

ವೈಯುಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುವುದಕ್ಕಾಗಿ ಅನ್ವಯವಾಗುವ ಕಾನೂನುಬದ್ಧ ಆಧಾರ

ನಿಮ್ಮ “ಸಮಸ್ಯೆಯನ್ನು ವರದಿ ಮಾಡಿ” ಎಂಬುದರ ವೈಯಕ್ತಿಕ ಡೇಟವನ್ನು ನಾವು ಸಾಮಾನ್ಯವಾಗಿ ನಮ್ಮ ಸೇವೆಗಳನ್ನು ಒದಗಿಸಲು ಮತ್ತು ನಮ್ಮ ಕಾನೂನು ಬಾಧ್ಯತೆಗಳನ್ನು ಅನುಸರಿಸಲು ಅಗತ್ಯವಿರುವಂತೆ ಪ್ರಕ್ರಿಯೆಗೊಳಿಸುತ್ತೇವೆ. ಸಮ್ಮತಿಯ ಸೂಕ್ತವಾದ ಕಾನೂನುಬದ್ಧ ಆಧಾರವಾಗಿದ್ದಲ್ಲಿ, ನಾವು ಅದನ್ನು ಅನ್ವಯವಾಗುವ ಸ್ಥಳೀಯ ಕಾನೂನುಗಳ ಪ್ರಕಾರ ಪಡೆಯುತ್ತೇವೆ. ಅನ್ವಯವಾಗುವ ಸ್ಥಳೀಯ ಕಾನೂನುಗಳ ಅಗತ್ಯವಿರುವಲ್ಲಿ, ನೀವು ಪ್ರಶ್ನೆಗಳಿಗೆ ನೀಡಿದ ಉತ್ತರಗಳು, ವಿವರಣೆಗಳು, ಫೋಟೋಗಳು, ವೀಡಿಯೊಗಳು, ಸಂದೇಶಗಳು ಮತ್ತು ಈಮೇಲ್‌ಗಳ ಜೊತೆಗೆ ನಿಮ್ಮ ಸಾಧನದ ಮಾಡಲ್, ಆಪರೇಟಿಂಗ್ ಸಿಸ್ಟಂನ ಆವೃತ್ತಿ, ಭಾಷೆ ಹಾಗೂ Apple Intelligence ಮಾಡಲ್‌ನ ಪ್ರಸ್ತುತವಾದ ಆವೃತ್ತಿ (ಏನಾದರೂ ಇದ್ದಲ್ಲಿ) ಹೀಗೆ ವರದಿಯಲ್ಲಿ ಒದಗಿಸುವ ಮುಂತಾದ ಮಾಹಿತಿಯನ್ನು ನಮ್ಮ ಕಾನೂನುಬದ್ಧ ಹಿತಾಸಕ್ತಿಗಳ ಉದ್ದೇಶಗಳಿಗಾಗಿ ಪ್ರಕ್ರಿಯೆಗೊಳಿಸುತ್ತೇವೆ. ಇದರಿಂದ ನಾವು ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸಿಕೊಳ್ಳಬಹುದು, ಸ್ಥಾಪಿಸಬಹುದು ಮತ್ತು ಚಲಾಯಿಸಬಹುದು.

ರಿಟೆನ್ಷನ್

Apple ಸಂಗ್ರಹಿಸಿದ ಡೇಟವನ್ನು ವಿಶ್ವಾಸಾರ್ಹ ಪಾಲುದಾರರು ಪ್ರಕ್ರಿಯೆಗೊಳಿಸಬಹುದು ಮತ್ತು ಸಂಗ್ರಹಿಸಬಹುದು. ನೀವು ವರದಿ ಮಾಡುವ ಮಾಹಿತಿಯನ್ನು ಒಂದು ವರ್ಷಗಳವರೆಗೆ ಅಥವಾ ಕಾನೂನಿನ ಅಗತ್ಯವಿರುವಂತೆ ನಿಮ್ಮೊಂದಿಗೆ ಸಂಯೋಜಿತಗೊಂಡ ರೀತಿಯಲ್ಲಿ ಸಂಗ್ರಹಿಸಿ ಇರಿಸಿಕೊಳ್ಳಬಹುದು.

ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.

2025-12-12