Safari ಮತ್ತು ಗೌಪ್ಯತೆ

ನಿಮ್ಮ ಮಾಹಿತಿಯನ್ನು ಕಾಪಾಡಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವುದಕ್ಕೆ ಅನುವುಮಾಡಿಕೊಡಲು Safariಯನ್ನು ವಿನ್ಯಾಸಗೊಳಿಸಲಾಗಿದೆ.


Safariನಲ್ಲಿ ನಿಮ್ಮನ್ನು ಟ್ರ್ಯಾಕ್ ಮಾಡಲು ವೆಬ್‌ಸೈಟ್‌ಗಳು ಬಳಸಬಹುದಾದ ಡೇಟವನ್ನು ತೆಗೆದುಹಾಕಲು ಮತ್ತು ಬ್ಲಾಕ್ ಮಾಡಲು Safari ಸೆಟ್ಟಿಂಗ್ಸ್ ಅನ್ನು ಬಳಸಿ. ಈ ಆದ್ಯತೆಗಳನ್ನು ನೋಡಲು, ಸೆಟ್ಟಿಂಗ್ಸ್ > ಆ್ಯಪ್‌ಗಳು > Safari ಎಂಬಲ್ಲಿಗೆ ಹೋಗಿ.

ಕ್ರಾಸ್-ಸೈಟ್ ಟ್ರ್ಯಾಕಿಂಗ್ ತಡೆಗಟ್ಟುವುದು

ಕೆಲವು ವೆಬ್‌ಸೈಟ್‌ಗಳು ಥರ್ಡ್ ಪಾರ್ಟಿ ಕಂಟೆಂಟ್ ಪೂರೈಕೆದಾರರನ್ನು ಬಳಸುತ್ತವೆ. ಉತ್ಪನ್ನಗಳು ಮತ್ತು ಸೇವೆಗಳನ್ನು ಜಾಹೀರಾತು ಮಾಡಲು ಥರ್ಡ್-ಪಾರ್ಟಿಯ ಕಂಟೆಂಟ್ ಪೂರೈಕೆದಾರರು ನಿಮ್ಮನ್ನು ವೆಬ್‌ಸೈಟ್‌ಗಳಾದ್ಯಂತ ಟ್ರ್ಯಾಕ್ ಮಾಡಬಹುದು.

ಈ ಆಯ್ಕೆಯನ್ನು ಆನ್ ಮಾಡಿದಾಗ, ನೀವು ಥರ್ಡ್ ಪಾರ್ಟಿ ಕಂಟೆಂಟ್ ಪೂರೈಕೆದಾರರನ್ನು ಭೇಟಿ ಮಾಡದ ಹೊರತು ಟ್ರ್ಯಾಕಿಂಗ್ ಡೇಟವನ್ನು ನಿಯತಕಾಲಿಕವಾಗಿ ಡಿಲೀಟ್ ಮಾಡಲಾಗುತ್ತದೆ.

IP ವಿಳಾಸವನ್ನು ಮರೆಮಾಡುವುದು

ಇಂಟೆಲಿಜೆಂಟ್ ಟ್ರ್ಯಾಕಿಂಗ್ ತಡೆಗಟ್ಟುವಿಕೆಯು, ಟ್ರ್ಯಾಕರ್‌ಗಳನ್ನು ತಡೆಯಲು ಸಾಧನದಲ್ಲಿನ ಮಷೀನ್ ಲರ್ನಿಂಗ್ ಬಳಸಿ ಅನಗತ್ಯ ಟ್ರ್ಯಾಕಿಂಗ್‌ನಿಂದ ನಿಮ್ಮನ್ನು ರಕ್ಷಿಸಲು ನೆರವಾಗುತ್ತದೆ, ಅದೇ ವೇಳೆ ವೆಬ್‌ಸೈಟ್‌ಗಳಿಗೆ ಸಾಮಾನ್ಯವಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತವೆ. “IP ವಿಳಾಸವನ್ನು ಮರೆಮಾಡಿ” ಎಂಬುದು ವಿಭಿನ್ನ ಘಟಕಗಳು ನಿರ್ವಹಿಸುವ ಎರಡು ಪ್ರತ್ಯೇಕ ರಿಲೇಗಳ ಮೂಲಕ ನಿಮ್ಮ ಕೆಲವು ವೆಬ್ ಟ್ರಾಫಿಕ್ ಅನ್ನು ಕಳುಹಿಸುವ ಮೂಲಕ ಇಂಟೆಲಿಜೆಂಟ್ ಟ್ರ್ಯಾಕಿಂಗ್ ತಡೆಗಟ್ಟುವಿಕೆಯನ್ನು ವೃದ್ಧಿಸುತ್ತದೆ. ಮೊದಲ ಘಟಕಕ್ಕೆ ನಿಮ್ಮ ಇಂಟರ್ನೆಟ್ ಪ್ರೋಟೋಕಾಲ್ (IP) ವಿಳಾಸ ತಿಳಿದಿರುತ್ತದೆ, ಆದರೆ ನೀವು ಭೇಟಿ ನೀಡುತ್ತಿರುವ ವೆಬ್‌ಸೈಟ್ ತಿಳಿದಿರುವುದಿಲ್ಲ. ಎರಡನೇ ಘಟಕಕ್ಕೆ ನೀವು ಭೇಟಿ ನೀಡುವ ವೆಬ್‌ಸೈಟ್ ಯಾವುದೆಂದು ತಿಳಿದಿರುತ್ತದೆ, ಆದರೆ ನಿಮ್ಮ IP ವಿಳಾಸ ತಿಳಿದಿರುವುದಿಲ್ಲ, ಬದಲಿಗೆ ಡೆಸ್ಟಿನೇಶನ್ ವೆಬ್‌ಸೈಟ್‌ನ ಸಾಮಾನ್ಯ ಗುರುತು ಮತ್ತು ಸ್ಥಳದ ಮಾಹಿತಿಯನ್ನು ಅದಕ್ಕೆ ಒದಗಿಸಲಾಗುತ್ತದೆ. ಈ ರೀತಿಯಾಗಿ, ಯಾವುದೇ ಘಟಕವು ನಿಮ್ಮನ್ನು ಅಥವಾ ನೀವು ಭೇಟಿ ನೀಡಿದ ಸೈಟ್‌ಗಳನ್ನು ಅನ್ನು ಗುರುತಿಸುವ ಮಾಹಿತಿಯನ್ನು ಹೊಂದಿರುವುದಿಲ್ಲ.

ರಿಲೇ ಆರ್ಕಿಟೆಕ್ಚರ್ ಮೂಲಕ ನಿರ್ದಿಷ್ಟ ಟ್ರಾಫಿಕ್ ಅನ್ನು ಕಳುಹಿಸಲು ನೀವು ಆಯ್ಕೆ ಮಾಡಬಹುದು. ಪ್ರೈವೇಟ್ ರಿಲೇ ಸಬ್‌ಸ್ಕ್ರೈಬರ್‌ಗಳು ಸೆಟ್ಟಿಂಗ್ಸ್ > ಆ್ಯಪ್‌ಗಳು > Safari > IP ವಿಳಾಸವನ್ನು ಮರೆಮಾಡಿ ಎಂಬಲ್ಲಿಗೆ ಹೋಗುವ ಮೂಲಕ ಹಾಗೂ ಟ್ರ್ಯಾಕರ್‌ಗಳು ಮತ್ತು ವೆಬ್‌ಸೈಟ್‌ಗಳು ಎಂಬುದನ್ನು ಟ್ಯಾಪ್ ಮಾಡಿದರೆ ಪ್ರೈವೇಟ್ ರಿಲೇ ಮೂಲಕ ಎಲ್ಲಾ ಟ್ರಾಫಿಕ್ ಅನ್ನು ಕಳುಹಿಸಲು ಆಯ್ಕೆ ಮಾಡಬಹುದು. ಪರ್ಯಾಯವಾಗಿ, ಸೆಟ್ಟಿಂಗ್ಸ್ > ಆ್ಯಪ್‌ಗಳು > Safari > IP ವಿಳಾಸವನ್ನು ಮರೆಮಾಡಿ ಎಂಬಲ್ಲಿಗೆ ಹೋಗುವ ಮೂಲಕ ಮತ್ತು ‘ಟ್ರ್ಯಾಕರ್‌ಗಳು ಮಾತ್ರ’ ಎಂಬುದನ್ನು ಟ್ಯಾಪ್ ಮಾಡುವ ಮೂಲಕ ಎಲ್ಲಾ ಬಳಕೆದಾರರು ರಿಲೇ ಆರ್ಕಿಟೆಕ್ಚರ್ ಮೂಲಕ ತಿಳಿದಿರುವ ಟ್ರ್ಯಾಕರ್‌ಗಳೊಂದಿಗೆ ಟ್ರಾಫಿಕ್ ಅನ್ನು ಕಳುಹಿಸಲು ಆಯ್ಕೆ ಮಾಡಬಹುದು. ಸೆಟ್ಟಿಂಗ್ಸ್ > ಆ್ಯಪ್‌ಗಳು > Safari > IP ವಿಳಾಸವನ್ನು ಮರೆಮಾಡಿ ಎಂಬಲ್ಲಿಗೆ ಹೋಗುವ ಮೂಲಕ ಹಾಗೂ ಆಫ್ ಅನ್ನು ಟ್ಯಾಪ್ ಮಾಡುವ ಮೂಲಕ ನೀವು ಯಾವುದೇ ಸಮಯದಲ್ಲಿ IP ವಿಳಾಸವನ್ನು ನಿಷ್ಕ್ರಿಯಗೊಳಿಸಬಹುದು.

ವಂಚಿಸುವ ವೆಬ್‌ಸೈಟ್ ಎಚ್ಚರಿಕೆ

‘ವಂಚನಾತ್ಮಕ ವೆಬ್‌ಸೈಟ್ ಎಚ್ಚರಿಕೆ’ಯನ್ನು ಸಕ್ರಿಯಗೊಳಿಸಿದಾಗ, ನೀವು ಭೇಟಿ ನೀಡುತ್ತಿರುವ ವೆಬ್‌ಸೈಟ್ ಅನುಮಾನಾಸ್ಪದ ಫಿಶಿಂಗ್ ಅಥವಾ ಮಾಲ್‌ವೇರ್ ವೆಬ್‌ಸೈಟ್ ಆಗಿದ್ದರೆ, Safari ಎಚ್ಚರಿಕೆಯನ್ನು ಪ್ರದರ್ಶಿಸುತ್ತದೆ. ಫಿಶಿಂಗ್ ಎಂಬುದು ಬಳಕೆದಾರರ ಹೆಸರುಗಳು, ಪಾಸ್‌ವರ್ಡ್‌ಗಳು ಮತ್ತು ಖಾತೆಯ ಇತರೆ ಮಾಹಿತಿಯಂತಹ ನಿಮ್ಮ ವೈಯಕ್ತಿಕ ಡೇಟವನ್ನು ಕದಿಯಲು ಮಾಡುವ ಒಂದು ವಂಚನೆಯ ಪ್ರಯತ್ನವಾಗಿದೆ. ವಂಚನೆಯ ವೆಬ್‌ಸೈಟ್ ಎಂದರೆ ಬ್ಯಾಂಕ್, ಹಣಕಾಸು ಸಂಸ್ಥೆ ಅಥವಾ ಈಮೇಲ್ ಸೇವಾ ಪೂರೈಕೆದಾರರ ರೀತಿ ಕಾನೂನುಬದ್ಧ ವೆಬ್‌ಸೈಟ್‌ನಂತೆ ಸೋಗುಹಾಕುವ ವೆಬ್‌ಸೈಟ್ ಆಗಿರುತ್ತದೆ. ಮಾಲ್‌ವೇರ್ ವೆಬ್‌ಸೈಟ್‌ಗಳು ನಿಮ್ಮ ಕಂಪ್ಯೂಟರ್‌ಗೆ ಹಾನಿ ಮಾಡಬಲ್ಲ ಅಥವಾ ನಿಮ್ಮ ವೈಯಕ್ತಿಕ ಡೇಟ ಕದಿಯಬಲ್ಲ ಅಪಾಯಕಾರಿ ಸಾಫ್ಟ್‌ವೇರ್ ಅನ್ನು ಇನ್‌ಸ್ಟಾಲ್ ಮಾಡಲು ಪ್ರಯತ್ನಿಸಬಹುದು. ವೆಬ್‌ಸೈಟ್‌ಗೆ ಭೇಟಿ ನೀಡುವ ಮೊದಲು, ವೆಬ್‌ಸೈಟ್ ವಂಚನಾತ್ಮಕವಾಗಿದೆಯೇ ಅಥವಾ ಮಾಲ್‌ವೇರ್ ಅನ್ನು ಪತ್ತೆಹಚ್ಚಲಾಗಿದೆಯೇ ಎಂಬುದನ್ನು ಪರಿಶೀಲಿಸಲು ವೆಬ್‌ಸೈಟ್ ವಿಳಾಸದಿಂದ ಕ್ಯಾಲ್‌ಕ್ಯುಲೇಟ್ ಮಾಡಲಾದ ಮಾಹಿತಿಯನ್ನು Safariಯು Google ಸುರಕ್ಷಿತ ಬ್ರೌಸಿಂಗ್ ಮತ್ತು Appleಗೆ ಕಳುಹಿಸುತ್ತದೆ. ಸೆಟ್ಟಿಂಗ್ಸ್ > ಸಾಮಾನ್ಯ > ಭಾಷೆ ಮತ್ತು ಪ್ರದೇಶ ಎಂಬುದರಲ್ಲಿ ತಮ್ಮ ಪ್ರದೇಶವನ್ನು ಚೀನಾ ಮೇನ್‌ಲ್ಯಾಂಡ್ ಅಥವಾ ಹಾಂಗ್ ಕಾಂಗ್ ಎಂದು ಸೆಟ್ ಮಾಡಿರುವ ಬಳಕೆದಾರರಿಗೆ, ಈ ಪರಿಶೀಲನೆಯನ್ನು ಮಾಡಲು Safariಯು Tencent Safe Browsing ಅನ್ನು ಸಹ ಬಳಸಬಹುದು. ನಿಜವಾದ ವೆಬ್‌ಸೈಟ್ ವಿಳಾಸವನ್ನು ಸುರಕ್ಷಿತ ಬ್ರೌಸಿಂಗ್ ಪೂರೈಕೆದಾರರೊಂದಿಗೆ ಎಂದಿಗೂ ಹಂಚಿಕೊಳ್ಳಲಾಗುವುದಿಲ್ಲ. ಅವರಿಗೆ ಮಾಹಿತಿಯನ್ನು ಕಳುಹಿಸಿದಾಗ Google (ಮತ್ತು ಚೀನಾ ಮೇನ್‌ಲ್ಯಾಂಡ್ ಅಥವಾ ಹಾಂಗ್ ಕಾಂಗ್ ಅನ್ನು ಅವರ ಪ್ರದೇಶ ಎಂದು ಸೆಟ್ ಮಾಡಿರುವ ಬಳಕೆದಾರರಿಗೆ, Tencent) ನಿಮ್ಮ IP ವಿಳಾಸವನ್ನು ಸಹ ಲಾಗ್ ಮಾಡಬಹುದು. ಸೆಟ್ಟಿಂಗ್ಸ್ > ಆ್ಯಪ್‌ಗಳು > Safari ಎಂಬಲ್ಲಿಗೆ ಹೋಗುವ ಮೂಲಕ ಮತ್ತು ‘ವಂಚನಾತ್ಮಕ ವೆಬ್‌ಸೈಟ್ ಎಚ್ಚರಿಕೆ’ಯನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ನೀವು Safariಯಲ್ಲಿ ‘ವಂಚನಾತ್ಮಕ ವೆಬ್‌ಸೈಟ್ ಎಚ್ಚರಿಕೆಗಳನ್ನು’ ನಿಷ್ಕ್ರಿಯಗೊಳಿಸಬಹುದು.

ಗೌಪ್ಯತೆಯನ್ನು ರಕ್ಷಿಸುವ ಜಾಹೀರಾತು ಮಾಪನ

‘ಗೌಪ್ಯತೆ ರಕ್ಷಿಸುವ ಆ್ಯಡ್ ಮಾಪನ’ ಎಂಬುದನ್ನು ಸಕ್ರಿಯಗೊಳಿಸಿದಾಗ, ನಿಮ್ಮ ಗೌಪ್ಯತೆಯನ್ನು ರಕ್ಷಿಸುವ ಜೊತೆಗೆ ಆ್ಯಡ್‌ಗಳ ವೀಕ್ಷಣೆ ಮತ್ತು ಅವುಗಳನ್ನು ಕ್ಲಿಕ್ ಮಾಡುವುದರ ಕುರಿತು ಆ್ಯಟ್ರಿಬ್ಯೂಟ್ ಮಾಡುವುದಕ್ಕೆ ವೆಬ್‌ಸೈಟ್‌ಗಳು ಮತ್ತು ಜಾಹೀರಾತುದಾರರಿಗೆ ಸಹಾಯ ಮಾಡಲು Safariಯು ವೆಬ್‌ಸೈಟ್‌ಗಳಿಗೆ ಆ್ಯಟ್ರಿಬ್ಯೂಶನ್ ವರದಿಗಳನ್ನು ಒದಗಿಸುತ್ತದೆ. IP ವಿಳಾಸದ ರಕ್ಷಣೆಯನ್ನು ಬಳಸಿಕೊಂಡು, ಯಾವುದೇ ಡೇಟ ಸಂಗ್ರಹಣೆಯಿಲ್ಲದೆ, ಯಾವುದೇ ಕುಕೀಗಳಿಲ್ಲದೆ ಮತ್ತು 24ರಿಂದ 48 ಗಂಟೆಗಳ ನಡುವೆ ಯಾದೃಚ್ಛಿಕವಾಗಿ ವಿಳಂಬಗೊಳಿಸಿ, ಸಮರ್ಪಿತ ವಿಧಾನದಲ್ಲಿ ಸೀಮಿತ ಡೇಟದೊಂದಿಗೆ Safari ಆ್ಯಟ್ರಿಬ್ಯೂಶನ್ ವರದಿಗಳನ್ನು ಕಳುಹಿಸುತ್ತದೆ. ಆ್ಯಟ್ರಿಬ್ಯೂಶನ್ ವರದಿಗಳು ಯಾವುದೇ ವೈಯಕ್ತಿಕ ಡೇಟವನ್ನು ಒಳಗೊಂಡಿರುವುದಿಲ್ಲ.

ಸೆಟ್ಟಿಂಗ್ಸ್ > ಆ್ಯಪ್‌ಗಳು > Safari > ಸುಧಾರಿತ ಎಂಬಲ್ಲಿಗೆ ಹೋಗುವ ಮೂಲಕ ಮತ್ತು ‘ಗೌಪ್ಯತೆ ರಕ್ಷಿಸುವ ಆ್ಯಡ್ ಮಾಪನ'ವನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ನೀವು ಯಾವುದೇ ಸಮಯದಲ್ಲಿ ‘ಗೌಪ್ಯತೆ ರಕ್ಷಿಸುವ ಆ್ಯಡ್ ಮಾಪನ'ವನ್ನು ನಿಷ್ಕ್ರಿಯಗೊಳಿಸಬಹುದು.

Apple Payಗೆ ಪರಿಶೀಲಿಸುವುದು

ನೀವು iPhone, iPad, Apple Vision Pro ಅಥವಾ Apple Watchನಲ್ಲಿ Apple Payಯನ್ನು ಬಳಸುವ ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿದ್ದಾಗ, ಆ ಸಾಧನದಲ್ಲಿ ನೀವು Apple Pay ಸಕ್ರಿಯಗೊಳಿಸಿದ್ದೀರಾ ಎಂಬುದನ್ನು ಅವುಗಳು ಪರಿಶೀಲಿಸಬಹುದು. ಸೆಟ್ಟಿಂಗ್ಸ್ > ಆ್ಯಪ್‌ಗಳು > Safari > ಸುಧಾರಿತ ಎಂಬಲ್ಲಿಗೆ ಹೋಗುವ ಮೂಲಕ ಹಾಗೂ Apple Payಗಾಗಿ ಪರಿಶೀಲಿಸಿ ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ನೀವು ಭೇಟಿ ನೀಡುವ ವೆಬ್‌ಸೈಟ್‌ಗಳು ನಿಮ್ಮ iOS, iPadOS, ಅಥವಾ visionOS ಸಾಧನದಲ್ಲಿ Apple Payಯನ್ನು ಸಕ್ರಿಯಗೊಳಿಸಲಾಗಿದೆಯೇ ಎಂಬುದನ್ನು ಪರೀಕ್ಷಿಸುವುದನ್ನು ನೀವು ನಿಷ್ಕ್ರಿಯಗೊಳಿಸಬಹುದು.

ಖಾಸಗಿ ಬ್ರೌಸಿಂಗ್

ಖಾಸಗಿ ಬ್ರೌಸಿಂಗ್ ಅನ್ನು ಸಕ್ರಿಯಗೊಳಿಸಿದಾಗ, ನೀವು ಭೇಟಿ ನೀಡುವ ಪುಟಗಳನ್ನು, ಸ್ವಯಂಭರ್ತಿ ಮಾಹಿತಿಯನ್ನು Safari ನೆನಪಿಟ್ಟುಕೊಳ್ಳುವುದಿಲ್ಲ ಮತ್ತು ನಿಮ್ಮ ತೆರೆದ ಟ್ಯಾಬ್‌ಗಳನ್ನು iCloudನಲ್ಲಿ ಸಂಗ್ರಹಿಸಲಾಗುವುದಿಲ್ಲ ಅಥವಾ ನಿಮ್ಮ ಸಾಧನಗಳಾದ್ಯಂತ ಸಿಂಕ್ ಮಾಡಲಾಗುವುದಿಲ್ಲ. ನಿಮ್ಮ ಸಾಧನದಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು ವೆಬ್‌ಸೈಟ್‌ಗಳು ಮಾರ್ಪಾಡು ಮಾಡಲು ಸಾಧ್ಯವಾಗುವುದಿಲ್ಲ, ಹಾಗಾಗಿ ನೀವು ಖಾಸಗಿ ಬ್ರೌಸಿಂಗ್ ಅನ್ನು ಆಫ್ ಮಾಡುವವರೆಗೂ ಅಂತಹ ವೆಬ್‌ಸೈಟ್‌ಗಳಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಸೇವೆಗಳು ಭಿನ್ನವಾಗಿ ಕಾರ್ಯನಿರ್ವಹಿಸಬಹುದು.

ಟಿಪ್ಪಣಿ: ಖಾಸಗಿ ಬ್ರೌಸಿಂಗ್ ಅನ್ನು ಸಕ್ರಿಯಗೊಳಿಸಿರುವಾಗ, ವಿಳಾಸದ ಬಾರ್ ತಿಳಿಬಣ್ಣದ ಬದಲಾಗಿ ಬದಲಾಗಿ ಗಾಢಬಣ್ಣದಲ್ಲಿ ಕಾಣಿಸುತ್ತದೆ.

ವೆಬ್‌ಪುಟದ ಅನುವಾದ

ನೀವು ಭೇಟಿ ನೀಡುವ ಪ್ರತಿಯೊಂದು ವೆಬ್‌ಪುಟದ ಭಾಷೆಯನ್ನು ನಿರ್ಧರಿಸಲು Safari ಅವುಗಳನ್ನು ವಿಶ್ಲೇಷಿಸುತ್ತದೆ. ಈ ನಿರ್ಧಾರವನ್ನು ಸಂಪೂರ್ಣವಾಗಿ ನಿಮ್ಮ ಸಾಧನದಲ್ಲಿ ಮಾಡಲಾಗುತ್ತದೆ. ವೆಬ್‌ಪುಟವು ನಿಮ್ಮ ಆದ್ಯತೆಯ ಭಾಷೆಗಳಲ್ಲಿ ಯಾವ ಭಾಷೆಗೂ ಅನುವಾದಗೊಳ್ಳದಿದ್ದರೆ, ಅದನ್ನು ಅನುವಾದ ಮಾಡುವುದನ್ನು ನೀವು ಆಯ್ಕೆಮಾಡಬಹುದು. ನೀವು ಅನುವಾದ ಮಾಡಿದರೆ, Safariಯು ವೆಬ್‌ಪುಟದ ಕಂಟೆಂಟ್‌ಗಳನ್ನು (ಪೂರ್ಣ ಪಠ್ಯ ಸೇರಿದಂತೆ) ಅನುವಾದಕ್ಕಾಗಿ Appleನ ಸರ್ವರ್‌ಗಳಿಗೆ ಕಳುಹಿಸುತ್ತದೆ. ಅನುವಾದವು ಪೂರ್ಣಗೊಂಡಾಗ, ವೆಬ್‌ಪುಟದ ಕಂಟೆಂಟ್‌ಗಳನ್ನು Apple ತೆಗೆದುಹಾಕುತ್ತದೆ.

ವೆಬ್‌ಪುಟವನ್ನು ಖಾಸಗಿ ಬ್ರೌಸಿಂಗ್ ಮೋಡ್‌ನಲ್ಲಿ ವೀಕ್ಷಿಸದಿದ್ದರೆ, ಆಗ Safariಯು ವೆಬ್‌ಪುಟದ ವಿಳಾಸವನ್ನು ಸಹ Appleಗೆ ಕಳುಹಿಸುತ್ತದೆ. Appleನ ಉತ್ಪನ್ನಗಳು, ಸೇವೆಗಳು ಮತ್ತು ತಂತ್ರಜ್ಞಾನಗಳನ್ನು ಸುಧಾರಿಸಲು Apple ಆ ವಿಳಾಸವನ್ನು ಐದು ವರ್ಷಗಳವರೆಗೆ ಸಂಗ್ರಹಿಸುತ್ತದೆ. ನೀವು ಅನುವಾದಿಸುವ ವೆಬ್‌ಪುಟಗಳ ಕಂಟೆಂಟ್‌ಗಳನ್ನು Apple ಸಂಗ್ರಹಿಸದಿರುವುದರಿಂದ, Appleನ ಉತ್ಪನ್ನಗಳು, ಸೇವೆಗಳು ಮತ್ತು ತಂತ್ರಜ್ಞಾನಗಳನ್ನು ಸುಧಾರಿಸಲು ಸಾರ್ವಜನಿಕವಾಗಿ ಆ್ಯಕ್ಸೆಸ್ ಮಾಡಬಹುದಾದ ವೆಬ್‌ಪುಟಗಳನ್ನು ಮಾತ್ರ ಬಳಸಲಾಗುತ್ತದೆ.

Appleಗೆ ಕಳುಹಿಸುವ ವೆಬ್‌ಪುಟದ ಕಂಟೆಂಟ್‌ಗಳು ಮತ್ತು ವಿಳಾಸಗಳು ನಿಮ್ಮ Apple ಖಾತೆ, ಈಮೇಲ್ ವಿಳಾಸ ಅಥವಾ ನೀವು Apple ಸೇವೆಗಳನ್ನು ಬಳಸಿದಾಗ Apple ಪಡೆದಿರಬಹುದಾದ ಇತರೆ ಡೇಟದೊಂದಿಗೆ ಸಂಯೋಜನೆಗೊಂಡಿರುವುದಿಲ್ಲ.

ನಿಮಗೆ ಉತ್ತಮ ಬ್ರೌಸಿಂಗ್ ಅನುಭವವನ್ನು ಒದಗಿಸುವುದಕ್ಕಾಗಿ, ಒಂದು ನಿರ್ದಿಷ್ಟ ವೆಬ್‌ಪುಟವನ್ನು ಅನುವಾದ ಮಾಡಿದ ನಂತರ, ಒಂದೇ ಟ್ಯಾಬ್‌ನ ಒಳಗೆ ನೀವು ಭೇಟಿ ನೀಡುವ ಒಂದೇ ಡೊಮೇನ್‌ನಲ್ಲಿ ನೀವು ಭೇಟಿ ನೀಡುವ ಇತರೆ ವೆಬ್‌ಪುಟಗಳನ್ನು ಸಹ ಅನುವಾದ ಮಾಡಬಹುದು. ಭಿನ್ನವಾದ ಮೂಲ ಭಾಷೆಯಲ್ಲಿರುವ ವೆಬ್‌ಪುಟ ಅಥವಾ ಬೇರೆ ಡೊಮೇನ್‌ನಲ್ಲಿನ ವೆಬ್‌ಪುಟಕ್ಕೆ ನೀವು ಭೇಟಿ ನೀಡಿದಾಗ ಅನುವಾದ ಮಾಡುವುದನ್ನು Safari ಸ್ವಯಂಚಾಲಿತವಾಗಿ ನಿಲ್ಲಿಸುತ್ತದೆ.

ಹೈಲೈಟ್‌ಗಳು

ನೀವು ಹೈಲೈಟ್‌ಗಳನ್ನು ಸಕ್ರಿಯಗೊಳಿಸಿದಾಗ, ವೆಬ್‌ಪುಟದಲ್ಲಿ ಸಂಬಂಧಿಸಿದ ಮಾಹಿತಿಯನ್ನು Safari ಸ್ವಯಚಾಲಿತವಾಗಿ ಪತ್ತೆಮಾಡುತ್ತದೆ ಮತ್ತು ನೀವು ಬ್ರೌಸ್ ಮಾಡಿದಂತೆಲ್ಲ ಅದನ್ನು ಹೈಲೈಟ್ ಮಾಡುತ್ತದೆ. ವೆಬ್‌ಪುಟಕ್ಕೆ ಭೇಟಿ ನೀಡುವಾಗ, ಸಂಬಂಧಿಸಿದ ಹೈಲೈಟ್‌ಗಳು ಲಭ್ಯವಿವೆಯೇ ಎಂಬುದನ್ನು ನಿರ್ಧರಿಸಲು ವೆಬ್‌ಪುಟದ ವಿಳಾಸದಿಂದ ಲೆಕ್ಕಮಾಡಲಾದ ಮಾಹಿತಿಯನ್ನು Safariಯು OHTTP ಮೂಲಕ Appleಗೆ ಕಳುಹಿಸಬಹುದು. ಪುಟದಲ್ಲಿ ನಿಮಗೆ ಪ್ರಸ್ತುತವಾದ ಹೈಲೈಟ್‌ಗಳನ್ನು ನೋಡಲು ನೀವು ಪುಟದ ಮೆನು ಐಕಾನ್ ಅನ್ನು ಆಯ್ಕೆಮಾಡಿದಾಗ, ಹೈಲೈಟ್‌ಗಳನ್ನು ಒದಗಿಸುವುದಕ್ಕಾಗಿ Safariಯು ವೆಬ್‌ಪುಟದ ವಿಳಾಸವನ್ನು Appleಗೆ ಕಳುಹಿಸಬಹುದು. Appleಗೆ ಕಳುಹಿಸುವ ಎಲ್ಲಾ ಮಾಹಿತಿಯು ನಿಮ್ಮ Apple ಖಾತೆ, ಈಮೇಲ್ ವಿಳಾಸ ಅಥವಾ ಇತರೆ Apple ಸೇವೆಗಳ ನಿಮ್ಮ ಬಳಕೆಯಿಂದ Apple ಪಡೆದಿರಬಹುದಾದ ಇತರೆ ಡೇಟದೊಂದಿಗೆ ಸಂಯೋಜನೆಗೊಂಡಿರುವುದಿಲ್ಲ. ಸೆಟ್ಟಿಂಗ್ಸ್ > ಆ್ಯಪ್‌ಗಳು > Safari ಎಂಬಲ್ಲಿಗೆ ಹೋಗುವ ಮೂಲಕ ಹಾಗೂ ಹೈಲೈಟ್‌ಗಳನ್ನು ಆನ್ ಮಾಡಲು ಟ್ಯಾಪ್ ಮಾಡುವ ಮೂಲಕ ನೀವು ಹೈಲೈಟ್‌ಗಳನ್ನು ಸಕ್ರಿಯಗೊಳಿಸಬಹುದು.

ವೆಬ್ ಎಕ್ಸ್‌ಟೆನ್ಶನ್‌ಗಳು

ನೀವು App Storeನಿಂದ Safari ಎಕ್ಸ್‌ಟೆನ್ಶನ್‌ಗಳನ್ನು ಡೌನ್‌ಲೋಡ್ ಮಾಡಬಹುದು. ನಿಮ್ಮ ಸಾಧನವನ್ನು ನಿರ್ವಹಿಸುತ್ತಿದ್ದರೆ, ನಿಮ್ಮ ಉದ್ಯೋಗದಾತರು ಅಥವಾ ಶಿಕ್ಷಣ ಸಂಸ್ಥೆಯು Safari ಎಕ್ಸ್‌ಟೆನ್ಶನ್‌ಗಳನ್ನು ಒಳಗೊಂಡಿರುವ ಆ್ಯಪ್ ಅನ್ನು ನಿಮಗೆ ಒದಗಿಸಬಹುದು. Safari ಎಕ್ಸ್‌ಟೆನ್ಶನ್ ಅನ್ನು ಬಳಸುವ ಮೊದಲು, ನೀವು Safariಯಲ್ಲಿ ಅಥವಾ ಸೆಟ್ಟಿಂಗ್ಸ್ > Safari > ಎಕ್ಸ್‌ಟೆನ್ಶನ್‌ಗಳು ಎಂಬಲ್ಲಿ ಅದನ್ನು ಆನ್ ಮಾಡಬೇಕು. ಆನ್ ಮಾಡಿದ ನಂತರ, ನೀವು ಭೇಟಿ ನೀಡುವ ವೆಬ್‌ಪುಟಗಳನ್ನು ರೀಡ್ ಮಾಡಲು ಅಥವಾ ಮಾರ್ಪಡಿಸಲು ನೀವು ಎಕ್ಸ್‌ಟೆನ್ಶನ್‌ಗೆ ಅನುಮತಿಯನ್ನು ನೀಡಬೇಕು. ಸೆಟ್ಟಿಂಗ್ಸ್ > ಆ್ಯಪ್‌ಗಳು > Safari > ಎಕ್ಸ್‌ಟೆನ್ಶನ್‌ಗಳು ಎಂಬಲ್ಲಿಗೆ ಹೋಗುವ ಮೂಲಕ ಒಂದು ಎಕ್ಸ್‌ಟೆನ್ಷನ್ ಯಾವ ವೆಬ್‌ಸೈಟ್‌ಗಳನ್ನು ರೀಡ್ ಮಾಡಬಹುದು ಮತ್ತು ಮಾರ್ಪಾಡು ಮಾಡಬಹುದು ಎಂಬುದನ್ನು ನೀವು ಬದಲಾಯಿಸಬಹುದು.

ನೀವು ಥರ್ಡ್-ಪಾರ್ಟಿ ವೆಬ್ ಎಕ್ಸ್‌ಟೆನ್ಶನ್‌ಗಳನ್ನು ಬಳಸಿದಾಗ, ನೀವು ಆ ಥರ್ಡ್ ಪಾರ್ಟಿಗಳ ನಿಯಮಗಳು ಹಾಗೂ ಗೌಪ್ಯತೆ ನೀತಿ ಮತ್ತು ಅಭ್ಯಾಸಗಳಿಗೆ ಒಳಪಡುತ್ತೀರಿ. ಅಂತಹ ಎಕ್ಸ್‌ಟೆನ್ಷನ್‌ಗಳು ನಿಮ್ಮ ಮಾಹಿತಿಯನ್ನು ಹೇಗೆ ಬಳಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನೀವು ನಿಯಮಗಳು, ಗೌಪ್ಯತೆ ನೀತಿಗಳು ಮತ್ತು ಅಭ್ಯಾಸಗಳನ್ನು ಪರಿಶೀಲಿಸಬೇಕು.

iCloud ಸಿಂಕ್ ಮಾಡುವಿಕೆ

ನಿಮ್ಮ ತೆರೆದ ಟ್ಯಾಬ್‌ಗಳು, ಟ್ಯಾಬ್ ಗುಂಪುಗಳು, ಸ್ವಯಂಭರ್ತಿ ಮಾಹಿತಿ, ಬುಕ್‌ಮಾರ್ಕ್‌ಗಳು, ಓದುವಿಕೆ ಪಟ್ಟಿ ಮತ್ತು ಇತಿಹಾಸ ಒಳಗೊಂಡ Safari ಬಳಕೆಯ ಮಾಹಿತಿಯನ್ನು ನಿಮ್ಮ ಎಲ್ಲಾ ಸಾಧನಗಳಲ್ಲಿ ಸಿಂಕ್ ಮಾಡಲು ನೀವು iCloud ಅನ್ನು ಬಳಸಬಹುದು. ನೀವು ಸೆಟ್ಟಿಂಗ್ಸ್ > [ನಿಮ್ಮ ಹೆಸರು] > iCloud > iCloudನಲ್ಲಿ ಸೇವ್ ಮಾಡಿರುವುದು > ಎಲ್ಲವನ್ನೂ ನೋಡಿ ಎಂಬಲ್ಲಿಗೆ ಹೋಗಿ Safariಯನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ಯಾವುದೇ ಸಮಯದಲ್ಲಿ ಈ ಫೀಚರ್ ಅನ್ನು ನಿಷ್ಕ್ರಿಯಗೊಳಿಸಬಹುದು.

ಈ ಫೀಚರ್‌ಗಳನ್ನು ಬಳಸುವ ಮೂಲಕ, ನೀವು Apple ಮತ್ತು ಅದರ ಅಂಗಸಂಸ್ಥೆಗಳು ಮತ್ತು ಏಜೆಂಟ್‌ಗಳಿಗೆ ಈ ಮೇಲೆ ತಿಳಿಸಿದಂತೆ ಮಾಹಿತಿಯ ಪ್ರಸರಣ, ಸಂಗ್ರಹಣೆ, ನಿರ್ವಹಣೆ, ಪ್ರಕ್ರಿಯೆಗೊಳಿಸುವಿಕೆ ಮತ್ತು ಬಳಕೆಗಾಗಿ ಒಪ್ಪಿಗೆಯನ್ನು ನೀಡುತ್ತೀರಿ ಮತ್ತು ಅವುಗಳಿಗೆ ಸಮ್ಮತಿಸುತ್ತೀರಿ.

ರಿಟೆನ್ಶನ್

ವೈಯಕ್ತಿಕ ಡೇಟವನ್ನು ಸಂಗ್ರಹಿಸಿದ ಉದ್ದೇಶ ಈಡೇರುವವರೆಗೆ ಮಾತ್ರವೇ Apple ಅದನ್ನು ಉಳಿಸಿಕೊಳ್ಳುತ್ತದೆ, ಈ ಉದ್ದೇಶಗಳಲ್ಲಿ Appleನ ಗೌಪ್ಯತೆ ನೀತಿಯಲ್ಲಿ ಅಥವಾ ನಮ್ಮ ಸೇವಾ-ನಿರ್ದಿಷ್ಟ ಗೌಪ್ಯತೆ ನೋಟಿಸ್‌ಗಳಲ್ಲಿ ವಿವರಿಸಿರುವ, ಅಥವಾ ಕಾನೂನಿನ ಪ್ರಕಾರ ಅಗತ್ಯವಿರುವ ಉದ್ದೇಶಗಳು ಸೇರಿವೆ. ರಿಟೆನ್ಷನ್ ಅವಧಿಯನ್ನು ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಮೊದಲಿಗೆ ಸಂಗ್ರಹಿಸಿದ ವೈಯಕ್ತಿಕ ಡೇಟವನ್ನು ಉಳಿಸಿಕೊಳ್ಳುವುದು ಅಗತ್ಯವೇ ಎಂದು ಜಾಗರೂಕವಾಗಿ ಪರೀಕ್ಷಿಸುತ್ತೇವೆ, ನಂತರ ರಿಟೆನ್ಷನ್ ಅಗತ್ಯವಿದ್ದಲ್ಲಿ, ಕಾನೂನಿನ ಅಡಿಯಲ್ಲಿ ಅವಕಾಶ ನೀಡಲಾಗಿರುವ ಅತಿ ಕಡಿಮೆ ಅವಧಿಗೆ ವೈಯಕ್ತಿಕ ಡೇಟವನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇವೆ.

ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.

2025-12-12