ಸುರಕ್ಷತಾ ಫೀಚರ್‌ಗಳು ಮತ್ತು ಗೌಪ್ಯತೆ

ನಿಮ್ಮ ಸಾಧನವು ಕರೆ ಮಾಡಿದಾಗ ಅಥವಾ ನೀವು ತುರ್ತು ಸೇವೆಗಳಿಗೆ ಸಂದೇಶ ಕಳುಹಿಸಿದಾಗ ಸುರಕ್ಷತೆಗೆ ಸಂಬಂಧಿಸಿದ ಫೀಚರ್‌ಗಳು ನಿಮ್ಮ ಸ್ಥಳವನ್ನು ಹಂಚಿಕೊಳ್ಳಬಹುದು. ನಿಮ್ಮ ತುರ್ತು ಸಂಪರ್ಕಗಳನ್ನು ಸಹ ನಂತರ ಸಂಪರ್ಕಿಸಬಹುದು ಮತ್ತು ನಿಮ್ಮ ಸ್ಥಳದ ಕುರಿತು ಅವರಿಗೆ ತಿಳಿಸಬಹುದು.
 

ನಿಮ್ಮ ಮಾಹಿತಿಯನ್ನು ಕಾಪಾಡಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವುದಕ್ಕೆ ಅನುವುಮಾಡಿಕೊಡಲು ಸುರಕ್ಷತಾ ಫೀಚರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.


Privacy Icon

  • ತುರ್ತು ಸೇವೆಗಳಿಗೆ ಕರೆ ಮಾಡಲು ಭದ್ರತಾ ಫೀಚರ್‌ಗಳನ್ನು ಬಳಸುವಾಗ, ಕರೆ ಅಥವಾ ಪಠ್ಯ ಸೆಶನ್ ಅನ್ನು ಪ್ರಾರಂಭಿಸಿದರೆ, ನೀವು ಸ್ಥಳ ಸೇವೆಗಳನ್ನು ಸಕ್ರಿಯಗೊಳಿಸಿದ್ದರೂ ಅಥವಾ ಇಲ್ಲದಿದ್ದರೂ ಸಹ, ಪ್ರತಿಕ್ರಿಯೆ ನೀಡುವ ಪ್ರಯತ್ನಗಳಲ್ಲಿ ಸಹಾಯ ಮಾಡಲು ನಿಮ್ಮ ಸಾಧನದ ಸ್ಥಳವನ್ನು ಇದು ಒಳಗೊಂಡಿರಬಹುದು.
  • ಕರೆ ಕೊನೆಗೊಂಡಾಗ, ನಿಮ್ಮ ಸಾಧನವು ನಿಮ್ಮ ತುರ್ತು ಸಂಪರ್ಕಗಳಿಗೆ ನಿಮ್ಮ ಸ್ಥಳದ ಮಾಹಿತಿ ಜೊತೆಗೆ ಸಂದೇಶವನ್ನು ಕಳುಹಿಸಬಹುದು, ಅದು ತುರ್ತು SOS ಅನ್ನು ಸಕ್ರಿಯಗೊಳಿಸಲಾಗಿದೆ ಎಂದು ಅವರಿಗೆ ತಿಳಿಸುತ್ತದೆ.
  • ಕೆಲವು ಸುರಕ್ಷತಾ ಫೀಚರ್‌ಗಳನ್ನು ಸ್ವಯಂಚಾಲಿತವಾಗಿ ಸಕ್ರಿಯಗೊಳಿಸಬಹುದು.

ತುರ್ತು SOS

ತುರ್ತು ಕರೆಯನ್ನು ಪ್ರಾರಂಭಿಸುವ ತುರ್ತು SOS ಫೀಚರ್ ಅನ್ನು ಬಳಸುವಾಗ, ನಿಮಗೆ ಸಹಾಯ ಮಾಡಲು ಸೇವಾ ರವಾನೆದಾರರಿಗೆ ಸಾಧ್ಯವಾಗುವಂತೆ ಆ ಕರೆಯು ನಿಮ್ಮ ಸ್ಥಳವನ್ನು (ನೀವು ಸ್ಥಳ ಸೇವೆಗಳನ್ನು ಸಕ್ರಿಯಗೊಳಿಸಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸದೆಯೇ) ಮತ್ತು ಮೆಡಿಕಲ್ ID (ಸಕ್ರಿಯಗೊಳಿಸಿದ್ದರೆ) ಒಳಗೊಂಡಿರಬಹುದು. ನಿಮ್ಮ ಸ್ಥಳ ಡೇಟ ಮತ್ತು ಎನ್‌ಕ್ರಿಪ್ಟ್ ಮಾಡಿದ ಮೆಡಿಕಲ್ ID ಮಾಹಿತಿಯನ್ನು Appleಗೆ ಕಳುಹಿಸಲಾಗುತ್ತದೆ. ಇದರಿಂದ Appleಗೆ ನಿಮ್ಮ ಪ್ರದೇಶದಲ್ಲಿ ವರ್ಧಿತ ತುರ್ತು ಡೇಟ ಸೇವೆ ಬೆಂಬಲಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಮತ್ತು ತುರ್ತು ಸೇವೆಗಳಿಗೆ ಡೇಟವನ್ನು ಒದಗಿಸಲು ಸಾಧ್ಯವಾಗುತ್ತದೆ. ನಿಮ್ಮ ಪ್ರದೇಶದಲ್ಲಿ ಬೆಂಬಲತವಾಗಿದ್ದರೆ, ತುರ್ತು ಸೇವೆಗಳಿಗೆ ತಲುಪಿಸಲು ಪಾಲುದಾರರು Appleನಿಂದ ನಿಮ್ಮ ಮಾಹಿತಿಯನ್ನು ಹಿಂಪಡೆಯಬಹುದು. Apple ನಿಮ್ಮ ಮೆಡಿಕಲ್ ID ಮಾಹಿತಿಯನ್ನು ಓದಲು ಸಾಧ್ಯವಿಲ್ಲ. ಕರೆ ಮುಗಿದ ನಂತರ ಮತ್ತು ನೀವು ಸಂದೇಶ ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿರದೆ ಇದ್ದಲ್ಲಿ, ನೀವು ಸಂದೇಶವನ್ನು ರದ್ದುಗೊಳಿಸದ ಹೊರತು, ನೀವು ತುರ್ತು ಸೇವೆಗಳಿಗೆ ಕರೆ ಮಾಡಿದ್ದೀರಿ ಎಂದು ಹೇಳುವ ಸಂದೇಶವು ನಿಮ್ಮ ತುರ್ತು ಸಂಪರ್ಕ ಮತ್ತು ಚೆಕ್ ಇನ್ ಸಂಪರ್ಕಕ್ಕೆ (ಚೆಕ್ ಇನ್ ಸೆಷನ್ ಸಕ್ರಿಯವಾಗಿದ್ದರೆ) ಸ್ವಯಂಚಾಲಿತವಾಗಿ ಹೋಗುತ್ತದೆ. ಈ ಸಂದೇಶವು ನಿಮ್ಮ ಪ್ರಸ್ತುತ ಸ್ಥಳವನ್ನು ಸಹ ಒಳಗೊಂಡಿದೆ ಮತ್ತು ಸೀಮಿತ ಸಮಯದವರೆಗೆ ನಿಮ್ಮ ಸ್ಥಳ ಬದಲಾದಾಗ ನಿಮ್ಮ ಸಾಧನವು ನಿಮ್ಮ ತುರ್ತು ಸಂಪರ್ಕಗಳು ಮತ್ತು ಸಕ್ರಿಯ ಚೆಕ್ ಇನ್ ಸಂಪರ್ಕಗಳಿಗೆ ಅಪ್‌ಡೇಟ್‌ಗಳನ್ನು ಕಳುಹಿಸುತ್ತದೆ. ನಿಮ್ಮ ತುರ್ತು ಸಂಪರ್ಕಗಳಿಗೆ ಮತ್ತು ಸಕ್ರಿಯ ಚೆಕ್ ಇನ್ ಸಂಪರ್ಕಕ್ಕೆ ನಿಮ್ಮ ಸ್ಥಳವನ್ನು ಕಳುಹಿಸಲು ಬಯಸದಿದ್ದರೆ, ನಿಮ್ಮ iPhoneನಲ್ಲಿ ಅಥವಾ Apple Vision Proನಲ್ಲಿ ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು > ಸಿಸ್ಟಂ ಸೇವೆಗಳು ಎಂಬಲ್ಲಿಗೆ ಹೋಗಿ ಮತ್ತು ತುರ್ತು ಕರೆಗಳು ಮತ್ತು SOS ಅನ್ನು ಆಫ್ ಮಾಡಲು ಟ್ಯಾಪ್ ಮಾಡಿ.

ತುರ್ತು SOS ಮತ್ತು ಗೌಪ್ಯತೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, www.apple.com/legal/privacy/data/en/emergency-sos ಎಂಬುದಕ್ಕೆ ಭೇಟಿ ನೀಡಿ.

ಮೆಡಿಕಲ್ ID ಬಗ್ಗೆ ಇನ್ನಷ್ಟು ತಿಳಿಯಲು, ಸೆಟ್ಟಿಂಗ್ಸ್ > ಆರೋಗ್ಯ ಆ್ಯಪ್ > ಮೆಡಿಕಲ್ ID > ತುರ್ತು ಆ್ಯಕ್ಸೆಸ್ ಎಂಬಲ್ಲಿಗೆ ಹೋಗಿ ಮತ್ತು ಇನ್ನಷ್ಟು ತಿಳಿಯಿರಿ ಎಂಬುದನ್ನು ಟ್ಯಾಪ್ ಮಾಡಿ.

ಸ್ಥಳ ಸೇವೆಗಳ ಕುರಿತು ಇನ್ನಷ್ಟು ತಿಳಿಯಲು, www.apple.com/legal/privacy/data/en/location-services ಎಂಬುದಕ್ಕೆ ಭೇಟಿ ನೀಡಿ.

ಸ್ಯಾಟಲೈಟ್ ಮೂಲಕ ತುರ್ತು SOS

‘ಸ್ಯಾಟಲೈಟ್ ಮೂಲಕ ತುರ್ತು SOS’ ಎಂಬುದು ನಿಮಗೆ ತುರ್ತು ಸೇವೆಗಳನ್ನು ತಲುಪಲು ಬೇರೆ ಯಾವುದೇ ಮಾರ್ಗಗಳು ಲಭ್ಯವಿಲ್ಲದ ಅನಿವಾರ್ಯ ಸಂದರ್ಭಗಳಲ್ಲಿ ತುರ್ತು ಸೇವೆಗಳಿಗೆ ಕನೆಕ್ಟ್ ಆಗಲು ಸಹಾಯ ಮಾಡುತ್ತದೆ. ಈ ಸೇವೆಗೆ ಸಂದೇಶ ಆ್ಯಪ್‌ನ ಅಗತ್ಯವಿದೆ ಮತ್ತು ಎಲ್ಲಾ ಸ್ಥಳಗಳು ಅಥವಾ ಸಂದರ್ಭಗಳಲ್ಲಿ ಇದು ಲಭ್ಯವಿಲ್ಲದಿರಬಹುದು.

ತುರ್ತು ಸೇವೆಗಳಿಗೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು, ಅಡೆತಡೆಯಿಲ್ಲದ ಆಕಾಶದ ನೋಟ ಮತ್ತು ನಿಮ್ಮ ಸಾಧನ ಮತ್ತು ಸ್ಯಾಟಲೈಟ್ ನಡುವೆ ಪರಸ್ಪರ ಅಲೈನ್‌ಮೆಂಟ್ ಅಗತ್ಯವಿದೆ. ಸ್ಯಾಟಲೈಟ್ ಕನೆಕ್ಷನ್ ನಿಮ್ಮ ಸಾಧಾರಣ ನೆಟ್‌ವರ್ಕ್‌ಗಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಪರಿಣಾಮವಾಗಿ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಂಪ್ರದಾಯಿಕ ಪಠ್ಯ ಸಂದೇಶಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಹಾಗೂ ನಿಮಗೆ ಅವುಗಳ ಲಭ್ಯತೆಯಲ್ಲಿ ಅಂತರಗಳು ಕಂಡುಬರಬಹುದು.

ಕೆಲವು ಸ್ಥಳಗಳಲ್ಲಿ, ನಿಮಗೆ ತುರ್ತು ಸೇವೆಗಳ ಕೇಂದ್ರದೊಂದಿಗೆ ನೇರವಾಗಿ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಬಹುದು. ನಿಮ್ಮ ಸ್ಥಳದಲ್ಲಿ ಸೇವೆ ಸಲ್ಲಿಸುವ ತುರ್ತು ಸೇವೆಗಳ ಕೇಂದ್ರಕ್ಕೆ ಪಠ್ಯ ಸಂದೇಶಗಳನ್ನು ಸ್ವೀಕರಿಸಲು ಸಾಧ್ಯವಾಗದಿದ್ದರೆ, ಥರ್ಡ್ ಪಾರ್ಟಿ ರಿಲೇ ಪೂರೈಕೆದಾರರು ನಿಮ್ಮ ಜೊತೆ ಪಠ್ಯ ಸಂದೇಶ ಸಂವಹನವನ್ನು ನಡೆಸುತ್ತಾರೆ ಮತ್ತು ನಿಮ್ಮ ಪರವಾಗಿ ತುರ್ತು ಸೇವೆಗಳಿಗೆ ಕರೆ ಮಾಡುತ್ತಾರೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ, ತುರ್ತು ಸೇವೆಗಳಿಗೆ ನೇರವಾಗಿ ಕಳುಹಿಸಲಾಗುವ ಪಠ್ಯವು ಲ್ಯಾಟಿನ್ ವರ್ಣಮಾಲೆಯನ್ನು ಮಾತ್ರ ಬೆಂಬಲಿಸುತ್ತದೆ.

ಮೊಬೈಲ್ ಸೇವೆ ಅಥವಾ Wi-Fi ವಾಯ್ಸ್ ಕನೆಕ್ಷನ್ ಲಭ್ಯವಾದರೆ, ನೀವು ಫೋನ್ ಮೂಲಕ ತುರ್ತು ಸೇವೆಗಳನ್ನು ಸಂಪರ್ಕಿಸಬೇಕು. ಆದಾಗ್ಯೂ, ನೀವು ಹಾಗೆ ಮಾಡಿದರೆ, ನಿಮ್ಮ ಸ್ಯಾಟಲೈಟ್ ಸೆಷನ್ ಅನ್ನು ನಿರ್ವಹಿಸುವ ಅದೇ ತುರ್ತು ಸೇವಾ ಪೂರೈಕೆದಾರರೊಂದಿಗೆ ನೀವು ಸಂಪರ್ಕ ಸಾಧಿಸಬೇಕಾಗಿಲ್ಲ.

ಸ್ಯಾಟಲೈಟ್ ಮೂಲಕ ತುರ್ತು SOS, ಸ್ಯಾಟಲೈಟ್ ಲಭ್ಯತೆಗೆ ಒಳಪಟ್ಟಿರುತ್ತದೆ ಮತ್ತು ಅದು ನಿರಂತರವಾಗಿ ಕೆಲಸ ಮಾಡಲು ಸಾಫ್ಟ್‌ವೇರ್ ಅಪ್‌ಡೇಟ್‌ನ ಅಗತ್ಯ ಬೀಳಬಹುದು.

ನೀವು ಸ್ಯಾಟಲೈಟ್ ಮೂಲಕ SOS ಅನ್ನು ಬಳಸಿ ಸಂದೇಶವನ್ನು ಕಳುಹಿಸಿದಾಗ, ನಿಮ್ಮ ಸಂದೇಶಗಳನ್ನು ಎನ್‌ಕ್ರಿಪ್ಟ್ ಮಾಡಿದ ರೂಪದಲ್ಲಿ ಕಳುಹಿಸಲಾಗುತ್ತದೆ ಮತ್ತು ಸಂಬಂಧಿತ ತುರ್ತು ಸೇವೆಗಳ ಪೂರೈಕೆದಾರರಿಗೆ ಅಥವಾ ಥರ್ಡ್-ಪಾರ್ಟಿ ರಿಲೇ ಪೂರೈಕೆದಾರರಿಗೆ ರವಾನಿಸಲು Apple ಅದನ್ನು ಡಿಕ್ರಿಪ್ಟ್ ಮಾಡುತ್ತದೆ. ತುರ್ತು ಸೇವಾ ಕೇಂದ್ರಗಳು ಮತ್ತು ರಿಲೇ ಪೂರೈಕೆದಾರರು ನಿಮಗೆ ಒದಗಿಸುವ ತಮ್ಮ ಸೇವೆಗಳನ್ನು ಸುಧಾರಿಸಲು ಮತ್ತು ಅನ್ವಯವಾಗುವ ಕಾನೂನನ್ನು ಅನುಸರಿಸಲು ನಿಮ್ಮ ಸಂದೇಶಗಳನ್ನು ಉಳಿಸಿಕೊಳ್ಳಬಹುದು.

ನಿಮ್ಮ ಪಠ್ಯ ಸಂದೇಶಗಳನ್ನು ಸ್ಥಳೀಯ ತುರ್ತು ಸೇವೆಗಳ ಸಂಸ್ಥೆಗೆ ರವಾನಿಸಲು ಮತ್ತು ನಿಮ್ಮನ್ನು ತಲುಪುವುದಕ್ಕಾಗಿ ಪ್ರತಿಸ್ಪಂದಕರಿಗೆ ಸಹಾಯ ಮಾಡಲು, ನೀವು ಸ್ಯಾಟಲೈಟ್ ಮೂಲಕ ತುರ್ತು SOS ಎಂಬುದನ್ನು ಬಳಸುವಾಗ ನಿಮ್ಮ ಸ್ಥಳವನ್ನು Apple, ತುರ್ತು ಸೇವೆಗಳ ಪಠ್ಯ ರೂಟಿಂಗ್ ಪೂರೈಕೆದಾರರು ಮತ್ತು ಥರ್ಡ್-ಪಾರ್ಟಿ ರಿಲೇ ಪೂರೈಕೆದಾರರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಹುಡುಕಿ ಆ್ಯಪ್‌ನಲ್ಲಿ ಸ್ಯಾಟಲೈಟ್ ಮೂಲಕ ಹಂಚಿಕೊಳ್ಳಲಾದ ಸ್ಥಳಗಳನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ರೂಪದಲ್ಲಿ ಕಳುಹಿಸಲಾಗುತ್ತದೆ ಮತ್ತು Appleನಿಂದಲೂ ಅದನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಿಲ್ಲ.

ತುರ್ತು ಸೆಷನ್ ಸಮಯದಲ್ಲಿ, ತುರ್ತು ಸೇವೆಗಳೊಂದಿಗಿನ ನಿಮ್ಮ ಸಂವಹನದ ಟ್ರಾನ್ಸ್‌ಕ್ರಿಪ್ಟ್ ಅನ್ನು ನಿಮ್ಮ ಸ್ಥಳ ಮತ್ತು ನಿಮ್ಮ ತುರ್ತುಸ್ಥಿತಿಯ ಸ್ವರೂಪದ ಕುರಿತ ಮಾಹಿತಿಯೊಂದಿಗೆ ಮೊದಲೇ ಆಯ್ಕೆಮಾಡಿದ ನಿಮ್ಮ ತುರ್ತು ಸಂಪರ್ಕಗಳೊಂದಿಗೆ ಹಂಚಿಕೊಳ್ಳುವುದನ್ನು ನೀವು ಆಯ್ಕೆ ಮಾಡಬಹುದು. ಸ್ಕ್ರೀನ್‌ನ ಮೇಲ್ಭಾಗದಲ್ಲಿ ‘ಹಂಚಿಕೊಳ್ಳುವುದನ್ನು ನಿಲ್ಲಿಸಿ’ ಎಂಬುದನ್ನು ಟ್ಯಾಪ್ ಮಾಡುವ ಮೂಲಕ ನೀವು ಯಾವುದೇ ಸಮಯದಲ್ಲಿ ನಿಮ್ಮ ಸೆಷನ್‌ನ ಟ್ರಾನ್ಸ್‌ಕ್ರಿಪ್ಟ್ ಅನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಬಹುದು.

ತುರ್ತು SOS ಲೈವ್ ವೀಡಿಯೊ

ತುರ್ತು ಕರೆ ಸಮಯದಲ್ಲಿ, ತುರ್ತು ಸೇವೆಗಳ ಕೋರಿಕೆಯ ಮೇರೆಗೆ ನೀವು ತುರ್ತು ಸೇವೆಗಳೊಂದಿಗೆ ಲೈವ್ ವೀಡಿಯೊವನ್ನು ಹಂಚಿಕೊಳ್ಳಲು ಅಥವಾ ಮೀಡಿಯಾವನ್ನು ಅಪ್‌ಲೋಡ್ ಮಾಡುವುದನ್ನು ಆಯ್ಕೆ ಮಾಡಬಹುದು. ಕರೆ ಕೊನೆಗೊಳಿಸಿ ಎಂಬುದನ್ನು ಟ್ಯಾಪ್ ಮಾಡಿದ ನಂತರ “ಕ್ಯಾಮರಾ ಹಂಚಿಕೊಳ್ಳುವುದನ್ನು ನಿಲ್ಲಿಸಿ” ಅಥವಾ “ಕರೆ ಕೊನೆಗೊಳಿಸಿ” ಎಂಬುದನ್ನು ಟ್ಯಾಪ್ ಮಾಡಿ ಮೂಲಕ ನೀವು ಯಾವುದೇ ಸಮಯದಲ್ಲಿ ನಿಮ್ಮ ಲೈವ್ ವೀಡಿಯೊವನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಬಹುದು. ನೀವು ಮೀಡಿಯಾ ಕಂಟೆಂಟ್ ಅಪ್‌ಲೋಡ್ ಮಾಡುವುದನ್ನು ಆಯ್ಕೆ ಮಾಡಿದರೆ, ನೀವು ತುರ್ತು ಕರೆಯನ್ನು ಕೊನೆಗೊಳಿಸಿದರೂ ನಿಮ್ಮ ಕಂಟೆಂಟ್ ಅಪ್‌ಲೋಡ್ ಆಗುವುದನ್ನು ಮುಂದುವರಿಸುತ್ತದೆ. ತುರ್ತು ಸೇವೆಗಳು ಹಂಚಿಕೊಳ್ಳಲಾದ ಮೀಡಿಯಾ ಕಂಟೆಂಟ್ ಅನ್ನು ರೆಕಾರ್ಡ್ ಮಾಡಬಹುದು ಅಥವಾ ಸೇವ್ ಮಾಡಬಹುದು. ಲೈವ್ ವೀಡಿಯೊ ಮತ್ತು ಅಪ್‌ಲೋಡ್ ಮಾಡಲಾದ ಮೀಡಿಯಾವನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಲಾಗಿದೆ ಹಾಗೂ Appleಗೆ ಇದನ್ನು ನೋಡಲು ಅಥವಾ ಆ್ಯಕ್ಸೆಸ್ ಮಾಡಲು ಸಾಧ್ಯವಿಲ್ಲ.

ಈ ಫೀಚರ್ ಅನ್ನು ಬಳಸಲು, ನೀವು ತುರ್ತು ಕರೆಗಳು ಮತ್ತು SOS ಅನ್ನು ಆನ್ ಮಾಡಿರಬೇಕು. ಇದನ್ನು ಮಾಡಲು, ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು > ಸಿಸ್ಟಂ ಸೇವೆಗಳು ಎಂಬಲ್ಲಿಗೆ ಹೋಗಿ ಮತ್ತು ತುರ್ತು ಕರೆಗಳು ಮತ್ತು SOS ಅನ್ನು ಆನ್ ಮಾಡಲು ಟ್ಯಾಪ್ ಮಾಡಿ.

ತುರ್ತು SOS ಲೈವ್ ವೀಡಿಯೊ, ಎಲ್ಲಾ ಸ್ಥಳಗಳು ಅಥವಾ ಸಂದರ್ಭಗಳಲ್ಲಿ ಇದು ಲಭ್ಯವಿಲ್ಲದಿರಬಹುದು.

ಫಾಲ್ ಡಿಟೆಕ್ಷನ್

Apple Watch SE ಅಥವಾ Apple Watch Series 4 ಅಥವಾ ನಂತರದ ಆವೃತ್ತಿಗಳನ್ನು ಹೊಂದಿರುವ ವಾಚ್ ಅನ್ನು ನೀವು ಧರಿಸಿದ್ದರೆ, ಜೋರಾಗಿ ಬಿದ್ದಿರುವುದನ್ನು ಪತ್ತೆಹಚ್ಚಿದರೆ, ಫಾಲ್ ಡಿಟೆಕ್ಷನ್ ಅಲರ್ಟ್, ಅಗತ್ಯವಿದ್ದರೆ ನಿಮ್ಮನ್ನು ತುರ್ತು ಸೇವೆಗಳಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ. ನೀವು ತುರ್ತು ಸೇವೆಗಳನ್ನು ಸಂಪರ್ಕಿಸಲು ಅಥವಾ ಅಲರ್ಟ್ ಅನ್ನು ವಜಾಗೊಳಿಸಲು ಆಯ್ಕೆ ಮಾಡಬಹುದು. ನೀವು ಚಲಿಸುತ್ತಿದ್ದೀರಿ ಎಂಬುದನ್ನು ನಿಮ್ಮ Apple Watch ಪತ್ತೆಹಚ್ಚಿದರೆ, ನೀವು ಅಲರ್ಟ್‌ಗೆ ಪ್ರತಿಕ್ರಿಯಿಸುವವರೆಗೆ ಅದು ಕಾಯುತ್ತದೆ ಮತ್ತು ತುರ್ತು ಸೇವೆಗಳಿಗೆ ಸ್ವಯಂಚಾಲಿತವಾಗಿ ಕರೆ ಮಾಡುವುದಿಲ್ಲ. ನಿಮ್ಮ Apple Watch ನೀವು ಸುಮಾರು ಒಂದು ನಿಮಿಷ ಚಲನರಹಿತರಾಗಿರುವುದನ್ನು ಪತ್ತೆಹಚ್ಚಿದರೆ, ಅದು ನಿಮ್ಮ ಮಣಿಕಟ್ಟಿನ ಮೇಲೆ ಟ್ಯಾಪ್ ಮಾಡಿ ಅಲರ್ಟ್ ಅನ್ನು ನೀಡುವಾಗ 30 ಸೆಕೆಂಡ್‌ಗಳ ಕೌಂಟ್‌ಡೌನ್ ಅನ್ನು ಪ್ರಾರಂಭಿಸುತ್ತದೆ. ಕೌಂಟ್‌ಡೌನ್ ಕೊನೆಗೊಂಡಾಗ, ನಿಮ್ಮ Apple Watch ಸ್ವಯಂಚಾಲಿತವಾಗಿ ತುರ್ತು ಸೇವೆಗಳನ್ನು, ಹಾಗೆಯೇ ನಿಮ್ಮ ತುರ್ತು ಸಂಪರ್ಕಗಳನ್ನು ಸಂಪರ್ಕಿಸುತ್ತದೆ.

ಸ್ವಯಂಚಾಲಿತವಾಗಿ ಡಯಲ್ ಆದ ಕರೆ ಕನೆಕ್ಟ್ ಆದಾಗ ನಿಮ್ಮ Apple Watch ಆಡಿಯೊ ಸಂದೇಶವೊಂದನ್ನು ಪ್ಲೇ ಮಾಡುತ್ತದೆ. ಮತ್ತು ಜೋರಾಗಿ ಬಿದ್ದಿರುವುದನ್ನು ನಿಮ್ಮ Apple Watch ಪತ್ತೆಹಚ್ಚಿದೆ ಎಂಬುದನ್ನು ಆ ಸಂದೇಶವು ತುರ್ತು ಸೇವೆಗಳಿಗೆ ತಿಳಿಸುತ್ತದೆ, ನಂತರ ನಿಮ್ಮ ಪ್ರಸ್ತುತ ಸ್ಥಳವನ್ನು ಅಕ್ಷಾಂಶ ಮತ್ತು ರೇಖಾಂಶ ನಿರ್ದೇಶಾಂಕಗಳಾಗಿ ಹಂಚಿಕೊಳ್ಳುತ್ತದೆ. ನೀವು ಸ್ಥಳ ಸೇವೆಗಳನ್ನು ಸಕ್ರಿಯಗೊಳಿಸಿರಲಿ ಅಥವಾ ಇಲ್ಲದಿರಲಿ, ಕರೆಯು ನಿಮ್ಮ ಸ್ಥಳವನ್ನು ಹಂಚಿಕೊಳ್ಳುತ್ತದೆ. ತುರ್ತು ಕರೆ ಸಮಯದಲ್ಲಿ ಮೆಡಿಕಲ್ ID ಹಂಚಿಕೊಳ್ಳುವುದನ್ನು ನೀವು ಈ ಹಿಂದೆ ಸಕ್ರಿಯಗೊಳಿಸಿದ್ದರೆ, ನಿಮ್ಮ ಮೆಡಿಕಲ್ IDಯನ್ನು ಸಹ ತುರ್ತು ಸೇವೆಗಳೊಂದಿಗೆ ಸ್ವಯಂಚಾಲಿತವಾಗಿ ಹಂಚಿಕೊಳ್ಳಲಾಗುತ್ತದೆ (U.S. ಮತ್ತು ಕೆನಡಾದಲ್ಲಿ ಮಾತ್ರ). ಕರೆ ಮುಗಿದ ಬಳಿಕ ಮತ್ತು ನೀವು ಸಂದೇಶ ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿರದಿದ್ದರೆ, ನಿಮ್ಮ ವಾಚ್ ಜೋರಾಗಿ ಬಿದ್ದಿರುವುದನ್ನು ಪತ್ತೆಹಚ್ಚಿದೆ ಮತ್ತು ತುರ್ತು ಸೇವೆಗಳನ್ನು ಡಯಲ್ ಮಾಡಲಾಗಿದೆ ಎಂಬ ಸಂದೇಶವನ್ನು ನಿಮ್ಮ ಸ್ಥಳದ ಮಾಹಿತಿಯೊಂದಿಗೆ ನಿಮ್ಮ ತುರ್ತು ಸಂಪರ್ಕಗಳಿಗೆ ಮತ್ತು ಚೆಕ್ ಇನ್ ಸಂಪರ್ಕಕ್ಕೆ (ಚೆಕ್ ಇನ್ ಸೆಷನ್ ಸಕ್ರಿಯವಾಗಿದ್ದರೆ) ಕಳುಹಿಸುವ ಮೊದಲು ನಿಮ್ಮ Apple Watch 10 ಸೆಕೆಂಡುಗಳ ಕೌಂಟ್‌ಡೌನ್ ಅನ್ನು ಪ್ರಾರಂಭಿಸುತ್ತದೆ. 10 ಸೆಕೆಂಡ್‌ಗಳ ಕೌಂಟ್‌ಡೌನ್‌ನೊಳಗೆ ನಿಮ್ಮ ತುರ್ತು ಸಂಪರ್ಕಗಳಿಗೆ ಮತ್ತು ಸಕ್ರಿಯ ಚೆಕ್ ಇನ್ ಸಂಪರ್ಕಕ್ಕೆ ಸಂದೇಶವನ್ನು ರದ್ದುಗೊಳಿಸುವುದನ್ನು ನೀವು ಆಯ್ಕೆ ಮಾಡಬಹುದು. ನಿಮ್ಮ Apple Watch ನಿಮ್ಮ ಮೆಡಿಕಲ್ IDಯಿಂದ ನಿಮ್ಮ ತುರ್ತು ಸಂಪರ್ಕಗಳನ್ನು ಪಡೆಯುತ್ತದೆ.

ಬೀಳುವಿಕೆ ಪತ್ತೆಯಾದರೆ, ಸ್ವಯಂಚಾಲಿತ ಕರೆಯನ್ನು ತುರ್ತು ಸೇವೆಗಳಿಗೆ ಸಂಪರ್ಕಿಸಲು ಸಾಧ್ಯವಿಲ್ಲ ಮತ್ತು ನೀವು ನಿಶ್ಚಲವಾಗಿದ್ದರೆ, ಸಂದೇಶ ಆ್ಯಪ್ ಅನ್ನು ಬಳಸಿ ಸೀಮಿತ ಮಾಹಿತಿಯನ್ನು ತುರ್ತು ಸೇವೆಗಳಿಗೆ (ಉದಾಹರಣೆಗೆ, ನಿಮ್ಮ ಸ್ಥಳ, ಬ್ಯಾಟರಿ ಬಾಳಿಕೆ ಮತ್ತು ತುರ್ತುಸ್ಥಿತಿಯ ಸ್ವರೂಪ) ಸ್ವಯಂಚಾಲಿತವಾಗಿ ಸಂದೇಶವನ್ನು ಕಳುಹಿಸಲು ಸ್ಯಾಟಲೈಟ್ ಸಂಪರ್ಕದ ಮೂಲಕ ತುರ್ತು SOS ಅನ್ನು ಬಳಸಲು ನಿಮ್ಮ iPhone ಪ್ರಯತ್ನಿಸಬಹುದು. ನೀವು ಸಂದೇಶ ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿರದಿದ್ದರೆ, ಸೀಮಿತ ಮಾಹಿತಿಯನ್ನು (ಉದಾಹರಣೆಗೆ, ನಿಮ್ಮ ಸ್ಥಳ, ತುರ್ತು ಪರಿಸ್ಥಿತಿಯ ಸ್ವರೂಪ) ನಿಮ್ಮ ಪರವಾಗಿ ನಿಮ್ಮ ತುರ್ತು ಸಂಪರ್ಕಗಳಿಗೆ ಮತ್ತು ಸಕ್ರಿಯ ಚೆಕ್ ಇನ್ ಸಂಪರ್ಕಕ್ಕೂ ಕಳುಹಿಸಲಾಗುತ್ತದೆ.

ನಿಮ್ಮ Apple Watch ಕೇಳಿದಾಗ ನೀವು ಬೀಳಲಿಲ್ಲ ಎಂದು ಉತ್ತರಿಸದಿದ್ದರೆ ನಿಮ್ಮ ಎಲ್ಲಾ ಬೀಳುವಿಕೆಗಳನ್ನು ಆರೋಗ್ಯ ಆ್ಯಪ್‌ನಲ್ಲಿ ಸ್ವಯಂಚಾಲಿತವಾಗಿ ದಾಖಲಿಸಲಾಗುತ್ತದೆ. ನಿಮ್ಮ ಬೀಳುವಿಕೆಯ ಇತಿಹಾಸವನ್ನು ನೋಡಲು, ನಿಮ್ಮ iPhoneನಲ್ಲಿ ಆರೋಗ್ಯ ಆ್ಯಪ್ ಅನ್ನು ತೆರೆಯಿರಿ ಮತ್ತು ಬ್ರೌಸ್ ಮಾಡಿ > ಇತರೆ ಡೇಟ > ಬಿದ್ದ ಸಂಖ್ಯೆ ಎಂಬಲ್ಲಿಗೆ ಹೋಗಿ.

ನನ್ನ ವಾಚ್ > ತುರ್ತು SOS ಎಂಬಲ್ಲಿಗೆ ಹೋಗಿ, ಫಾಲ್ ಡಿಟೆಕ್ಷನ್ ಅನ್ನು ಆನ್ ಅಥವಾ ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ನಿಮ್ಮ iPhoneನಲ್ಲಿ Apple Watch ಆ್ಯಪ್‌ನಿಂದ ಫಾಲ್ ಡಿಟೆಕ್ಷನ್ ಅನ್ನು ಸಕ್ರಿಯಗೊಳಿಸಬಹುದು ಫಾಲ್ ಡಿಟೆಕ್ಷನ್ ಆನ್ ಆಗಿದ್ದರೆ, “ಯಾವಾಗಲೂ ಆನ್” ಅಥವಾ “ವರ್ಕ್‌ಔಟ್ ಸಮಯದಲ್ಲಿ ಮಾತ್ರ ಆನ್ ಮಾಡಿ” ಎಂಬುದನ್ನು ಟ್ಯಾಪ್ ಮಾಡಬಹುದು. ನಿಮ್ಮ Apple Watch ಅಥವಾ ಆರೋಗ್ಯ ಆ್ಯಪ್ ಅನ್ನು ನೀವು ಸೆಟಪ್ ಮಾಡುವಾಗ ನಿಮ್ಮ ವಯಸ್ಸನ್ನು ನಮೂದಿಸಿದರೆ ಮತ್ತು ನೀವು 55 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ, ಫಾಲ್ ಡಿಟೆಕ್ಷನ್ ಸ್ವಯಂಚಾಲಿತವಾಗಿ ಆನ್ ಆಗುತ್ತದೆ. ನೀವು 18ರಿಂದ 55 ವರ್ಷ ವಯಸ್ಸಿನವರಾಗಿದ್ದರೆ, ವರ್ಕ್‌ಔಟ್ ಸಮಯದಲ್ಲಿ ಮಾತ್ರ ಫಾಲ್ ಡಿಟೆಕ್ಷನ್ ಸ್ವಯಂಚಾಲಿತವಾಗಿ ಆನ್ ಆಗುತ್ತದೆ. ತುರ್ತು ಸೇವೆಗಳಿಗೆ ಸ್ವಯಂಚಾಲಿತವಾಗಿ ಕರೆ ಮಾಡಲು ನಿಮ್ಮ ವಾಚ್‌ಗಾಗಿ ಮಣಿಕಟ್ಟಿನ ಮೂಲಕ ಪತ್ತೆಹಚ್ಚುವಿಕೆಯನ್ನು ಸಕ್ರಿಯಗೊಳಿಸಬೇಕು. Apple Watchನಲ್ಲಿ ಇದನ್ನು ಮಾಡಲು, ಸೆಟ್ಟಿಂಗ್ಸ್ ಆ್ಯಪ್ > ಪಾಸ್ ಕೋಡ್ ಎಂಬಲ್ಲಿಗೆ ಹೋಗಿ ಮತ್ತು ಮಣಿಕಟ್ಟಿನ ಮೂಲಕ ಪತ್ತೆಹಚ್ಚುವಿಕೆಯನ್ನು ಆನ್ ಮಾಡಲು ಟ್ಯಾಪ್ ಮಾಡಿ. 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮಾತ್ರ ಫಾಲ್ ಡಿಟೆಕ್ಷನ್ ಫೀಚರ್ ಲಭ್ಯವಿದೆ. Apple Watch ಎಲ್ಲಾ ಬೀಳುವಿಕೆಗಳನ್ನು ಪತ್ತೆಹಚ್ಚುವುದಿಲ್ಲ.

ಕ್ರ್ಯಾಶ್ ಪತ್ತೆಮಾಡುವಿಕೆ

iOS 16 ಅಥವಾ ನಂತರದ ಆವೃತ್ತಿ‌ಗಳನ್ನು ಹೊಂದಿರುವ ನಿಮ್ಮ iPhone 14 ಅಥವಾ ನಂತರದ ಮಾಡಲ್‌ಗಳು (ಎಲ್ಲಾ ಮಾಡಲ್‌ಗಳು), Apple Watch Series 8 ಅಥವಾ ನಂತರದ ಮಾಡಲ್‌ಗಳು, Apple Watch SE (2ನೇ ಜನರೇಶನ್) ಮತ್ತು watchOS 9 ಅಥವಾ ನಂತರದ ಆವೃತ್ತಿಯನ್ನು ಹೊಂದಿರುವ Apple Watch Ultra ಅಥವಾ ನಂತರದ ಆವೃತ್ತಿಯು ತೀವ್ರ ಸ್ವರೂಪದ ಕಾರ್ ಕ್ರ್ಯಾಷ್ ಅನ್ನು ಪತ್ತೆಹಚ್ಚಿದರೆ ತುರ್ತು ಸೇವೆಗಳಿಗೆ ಕರೆ ಮಾಡುವಂತೆ ಅಲರ್ಟ್ ಟ್ರಿಗರ್ ಆಗುತ್ತದೆ. ನೀವು ಅಲರ್ಟ್ ಅನ್ನು ವಜಾಗೊಳಿಸಲು ಅಥವಾ ತುರ್ತು ಸೇವೆಗಳನ್ನು ಸಂಪರ್ಕಿಸುವುದನ್ನು ಮುಂದುವರಿಸಲು ಆಯ್ಕೆಮಾಡಬಹುದು. ನಿಮ್ಮ ಸಾಧನವು ಅಲಾರಂ ಸೌಂಡ್ ಮಾಡುತ್ತದೆ ಮತ್ತು ವಜಾಗೊಳಿಸದ ಹೊರತು 10 ಸೆಕೆಂಡ್‌ಗಳ ಕಾಲ ಅಲರ್ಟ್ ಅನ್ನು ಪ್ರದರ್ಶಿಸುತ್ತದೆ. ನೀವು 30 ಸೆಕೆಂಡ್‌ಗಳ ಕೌಂಟ್‌ಡೌನ್ ನಂತರವೂ ಪ್ರತಿಕ್ರಿಯಿಸದಿದ್ದರೆ, ನಿಮ್ಮ ಸಾಧನವು ತುರ್ತು ಸೇವೆಗಳಿಗೆ ಕರೆ ಮಾಡುತ್ತದೆ.

ಸ್ವಯಂಚಾಲಿತವಾಗಿ ಡಯಲ್ ಆದ ಕರೆ ಕನೆಕ್ಟ್ ಆದಾಗ ನಿಮ್ಮ ಸಾಧನವು ಆಡಿಯೊ ಸಂದೇಶವೊಂದನ್ನು ಪ್ಲೇ ಮಾಡುತ್ತದೆ. ಮತ್ತು ಆ ನಿಮ್ಮ ಸಾಧನವು ಕಾರ್ ಕ್ರ್ಯಾಷ್ ಅನ್ನು ಪತ್ತೆಹಚ್ಚಿದೆ ಎಂಬುದನ್ನು ಆ ಸಂದೇಶವು ತುರ್ತು ಸೇವೆಗಳಿಗೆ ತಿಳಿಸುತ್ತದೆ, ನಂತರ ನಿಮ್ಮ ಪ್ರಸ್ತುತ ಸ್ಥಳವನ್ನು ಅಕ್ಷಾಂಶ ಮತ್ತು ರೇಖಾಂಶ ನಿರ್ದೇಶಾಂಕಗಳಾಗಿ ಹಂಚಿಕೊಳ್ಳುತ್ತದೆ. ನೀವು ಸ್ಥಳ ಸೇವೆಗಳನ್ನು ಸಕ್ರಿಯಗೊಳಿಸಿರಲಿ ಅಥವಾ ಇಲ್ಲದಿರಲಿ, ಕರೆಯು ನಿಮ್ಮ ಸ್ಥಳವನ್ನು ಹಂಚಿಕೊಳ್ಳುತ್ತದೆ. ತುರ್ತು ಕರೆ ಸಮಯದಲ್ಲಿ ಮೆಡಿಕಲ್ ID ಹಂಚಿಕೊಳ್ಳುವುದನ್ನು ನೀವು ಈ ಹಿಂದೆ ಸಕ್ರಿಯಗೊಳಿಸಿದ್ದರೆ, ನಿಮ್ಮ ಮೆಡಿಕಲ್ IDಯನ್ನು ಸಹ ತುರ್ತು ಸೇವೆಗಳೊಂದಿಗೆ ಸ್ವಯಂಚಾಲಿತವಾಗಿ ಹಂಚಿಕೊಳ್ಳಲಾಗುತ್ತದೆ (U.S. ಮತ್ತು ಕೆನಡಾದಲ್ಲಿ ಮಾತ್ರ). ಕರೆ ಮುಗಿದ ಬಳಿಕ ಮತ್ತು ನೀವು ಸಂದೇಶ ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿರದಿದ್ದರೆ, ನಿಮ್ಮ ಸಾಧನವು ಕಾರ್ ಕ್ರ್ಯಾಷ್ ಅನ್ನು ಪತ್ತೆಹಚ್ಚಿದೆ ಮತ್ತು ತುರ್ತು ಸೇವೆಗಳನ್ನು ಡಯಲ್ ಮಾಡಲಾಗಿದೆ ಎಂಬ ಸಂದೇಶವನ್ನು ನಿಮ್ಮ ಸ್ಥಳದ ಮಾಹಿತಿಯೊಂದಿಗೆ ನಿಮ್ಮ ತುರ್ತು ಸಂಪರ್ಕಗಳಿಗೆ ಮತ್ತು ಚೆಕ್ ಇನ್ ಸಂಪರ್ಕಕ್ಕೆ (ಚೆಕ್ ಇನ್ ಸೆಷನ್ ಸಕ್ರಿಯವಾಗಿದ್ದರೆ) ಕಳುಹಿಸುವ ಮೊದಲು ನಿಮ್ಮ ಸಾಧನವು 10 ಸೆಕೆಂಡುಗಳ ಕೌಂಟ್‌ಡೌನ್ ಅನ್ನು ಪ್ರಾರಂಭಿಸುತ್ತದೆ. 10 ಸೆಕೆಂಡ್‌ಗಳ ಕೌಂಟ್‌ಡೌನ್‌ನೊಳಗೆ ನಿಮ್ಮ ತುರ್ತು ಸಂಪರ್ಕಗಳಿಗೆ ಮತ್ತು ಸಕ್ರಿಯ ಚೆಕ್ ಇನ್ ಸಂಪರ್ಕಕ್ಕೆ ಸಂದೇಶವನ್ನು ರದ್ದುಗೊಳಿಸುವುದನ್ನು ನೀವು ಆಯ್ಕೆ ಮಾಡಬಹುದು. ನಿಮ್ಮ ಸಾಧನವು ನಿಮ್ಮ ಮೆಡಿಕಲ್ IDಯಿಂದ ನಿಮ್ಮ ತುರ್ತು ಸಂಪರ್ಕಗಳನ್ನು ಪಡೆಯುತ್ತದೆ. ತುರ್ತು ಸಂಪರ್ಕಗಳಿಗೆ ಮತ್ತು ಸಕ್ರಿಯ ಚೆಕ್ ಇನ್ ಸಂಪರ್ಕಕ್ಕೆ ನೋಟಿಫಿಕೇಷನ್ ಅನ್ನು ಕಳುಹಿಸಿದ ನಂತರ, ನಿಮ್ಮ ಸಾಧನವು ತುರ್ತು ಸೇವೆಗಳನ್ನು ಸಂಪರ್ಕಿಸಲು, ಮೆಡಿಕಲ್ ID ಮಾಹಿತಿಯನ್ನು ತೆರೆಯಲು ಅಥವಾ ಅಲರ್ಟ್ ಅನ್ನು ವಜಾಗೊಳಿಸಲು ಆಯ್ಕೆಗಳನ್ನು ತೋರಿಸುವುದನ್ನು ಮುಂದುವರಿಸುತ್ತದೆ. iPhone ಮತ್ತು Apple Watch ಎಲ್ಲಾ ಕಾರ್ ಕ್ರ್ಯಾಷ್‌ಗಳನ್ನು ಪತ್ತೆಹಚ್ಚುವುದಿಲ್ಲ. ಕ್ರ್ಯಾಷ್ ಸಂಭವಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಸ್ಥಳದ ಮಾಹಿತಿಯನ್ನು ಬಳಸಬಹುದು.

ತೀವ್ರ ಸ್ವರೂಪದ ಕಾರ್ ಕ್ರ್ಯಾಷ್ ಪತ್ತೆಯಾದರೆ, ಸ್ವಯಂಚಾಲಿತ ಕರೆಯನ್ನು ತುರ್ತು ಸೇವೆಗಳಿಗೆ ಸಂಪರ್ಕಿಸಲು ಸಾಧ್ಯವಾಗದಿದ್ದರೆ ಮತ್ತು ನೀವು ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ, ಸಂದೇಶ ಆ್ಯಪ್ ಬಳಸಿ ತುರ್ತು ಸೇವೆಗಳಿಗೆ ಸೀಮಿತ ಮಾಹಿತಿಯನ್ನು (ಉದಾಹರಣೆಗೆ, ನಿಮ್ಮ ಸ್ಥಳ, ಬ್ಯಾಟರಿ ಬಾಳಿಕೆ ಮತ್ತು ತುರ್ತುಸ್ಥಿತಿಯ ಸ್ವರೂಪ) ಸ್ವಯಂಚಾಲಿತವಾಗಿ ಪಠ್ಯ ಸಂದೇಶದಲ್ಲಿ ಕಳುಹಿಸುವುದಕ್ಕಾಗಿ ನಿಮ್ಮ iPhone ಸ್ಯಾಟಲೈಟ್ ಸಂಪರ್ಕದ ಮೂಲಕ ತುರ್ತು SOS ಅನ್ನು ಬಳಸಲು ಪ್ರಯತ್ನಿಸಬಹುದು. ನೀವು ಸಂದೇಶ ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿರದಿದ್ದರೆ, ಸೀಮಿತ ಮಾಹಿತಿಯನ್ನು (ಉದಾಹರಣೆಗೆ, ನಿಮ್ಮ ಸ್ಥಳ, ತುರ್ತು ಪರಿಸ್ಥಿತಿಯ ಸ್ವರೂಪ) ನಿಮ್ಮ ಪರವಾಗಿ ನಿಮ್ಮ ತುರ್ತು ಸಂಪರ್ಕಗಳಿಗೆ ಮತ್ತು ಸಕ್ರಿಯ ಚೆಕ್ ಇನ್ ಸಂಪರ್ಕಕ್ಕೂ ಕಳುಹಿಸಲಾಗುತ್ತದೆ.

ಸೆಟ್ಟಿಂಗ್ಸ್ > ತುರ್ತು SOS ಎಂಬಲ್ಲಿಗೆ ಹೋಗಿ > ನಂತರ ‘ತೀವ್ರ ಸ್ವರೂಪದ ಕ್ರ್ಯಾಷ್ ನಂತರ ಕರೆ ಮಾಡಿ’ ಎಂಬುದನ್ನು ಆನ್ ಅಥವಾ ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ಅಥವಾ ನಿಮ್ಮ iPhoneನಲ್ಲಿರುವ Apple Watch ಆ್ಯಪ್‌ನಲ್ಲಿ ನನ್ನ ವಾಚ್ > ತುರ್ತು SOSಗೆ ಹೋಗಿ, ನಂತರ ‘ತೀವ್ರ ಸ್ವರೂಪದ ಕ್ರ್ಯಾಷ್ ನಂತರ ಕರೆ ಮಾಡಿ’ ಎಂಬುದನ್ನು ಆನ್ ಅಥವಾ ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ, ನೀವು ಕ್ರ್ಯಾಷ್ ಪತ್ತೆಹಚ್ಚುವಿಕೆಯನ್ನು ನಿಷ್ಕ್ರಿಯಗೊಳಿಸಬಹುದು ಅಥವಾ ಪುನಃ ಸಕ್ರಿಯಗೊಳಿಸಬಹುದು.

ನಿಮ್ಮ iPhoneನಲ್ಲಿ ಇನ್‌ಸ್ಟಾಲ್ ಮಾಡಲಾದ ಥರ್ಡ್ ಪಾರ್ಟಿ ಆ್ಯಪ್‌ನೊಂದಿಗೆ ಕ್ರ್ಯಾಶ್ ಪತ್ತೆಹಚ್ಚುವಿಕೆಯ ಡೇಟವನ್ನು ಹಂಚಿಕೊಳ್ಳುವುದನ್ನು ಸಹ ನೀವು ಆಯ್ಕೆ ಮಾಡಬಹುದು. ನೀವು ಡೇಟಗೆ ಆ್ಯಕ್ಸೆಸ್ ಅನ್ನು ಅನುಮತಿಸಿದರೆ ಮತ್ತು ಕಾರ್ ಕ್ರ್ಯಾಷ್ ಸಂಭವಿಸಿದರೆ, ಕ್ರ್ಯಾಷ್ ಬಗ್ಗೆ ಥರ್ಡ್ ಪಾರ್ಟಿಗೆ ಸ್ವಯಂಚಾಲಿತವಾಗಿ ತಿಳಿಸಲಾಗುತ್ತದೆ, ಇದು ಸ್ಥಳದ ಡೇಟವನ್ನು ಒಳಗೊಂಡಿರಬಹುದು.

ಕಾರು ಕ್ರ್ಯಾಷ್ ಅನ್ನು ಪತ್ತೆಹಚ್ಚಿದ ನಂತರ ನಿಮ್ಮ iPhone ತುರ್ತು ಸೇವೆಗಳಿಗೆ ಕರೆ ಮಾಡಲು ನೀವು ಅನುಮತಿಸಿದರೆ, ಕ್ರ್ಯಾಷ್ ಬಗ್ಗೆ ಥರ್ಡ್ ಪಾರ್ಟಿಗೆ ತಿಳಿಸುವ ಮೊದಲು ತುರ್ತು ಸೇವೆಗಳಿಗೆ ಕರೆ ಮಾಡಲಾಗುತ್ತದೆ. ಕಾರ್ ಕ್ರ್ಯಾಷ್ ಅನ್ನು ಪತ್ತೆಹಚ್ಚಿದ ನಂತರ ತುರ್ತು ಸೇವೆಗಳಿಗೆ ಕರೆ ಮಾಡಲು ನಿಮ್ಮ iPhoneಗೆ ನೀವು ಅನುಮತಿ ನೀಡದಿದ್ದರೆ, ಮತ್ತು ಕ್ರ್ಯಾಷ್ ಪತ್ತೆಯಾದರೆ ಹಾಗೂ ಥರ್ಡ್ ಪಾರ್ಟಿ ಜೊತೆಗೆ ಹಂಚಿಕೊಳ್ಳುವುದನ್ನು ಆನ್ ಮಾಡಿದ್ದರೆ, ನಿಮ್ಮ ಸಾಧನವು, ಕ್ರ್ಯಾಷ್ ಪತ್ತೆಯಾಗಿದೆ, ಡೇಟವನ್ನು ಥರ್ಡ್ ಪಾರ್ಟಿಯೊಂದಿಗೆ ಹಂಚಿಕೊಳ್ಳಲಾಗಿದೆ ಮತ್ತು ಸಾಧ್ಯವಾದರೆ ನೀವು ಥರ್ಡ್ ಪಾರ್ಟಿ ಆ್ಯಪ್‌ನೊಂದಿಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ನಿಮಗೆ ತಿಳಿಸಲು ಅಲರ್ಟ್ ಅನ್ನು ಕಳುಹಿಸುತ್ತದೆ.

ಕ್ರ್ಯಾಷ್ ಪತ್ತೆ ಹಚ್ಚುವಿಕೆಯ ಡೇಟವನ್ನು ಥರ್ಡ್ ಪಾರ್ಟಿಯೊಂದಿಗೆ ಹಂಚಿಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ನೀವು ಆಯ್ಕೆ ಮಾಡಬಹುದು. iPhoneನಲ್ಲಿ ಹಾಗೆ ಮಾಡಲು, ಸೆಟ್ಟಿಂಗ್ಸ್ > ತುರ್ತು SOS ಎಂಬಲ್ಲಿಗೆ ಹೋಗಿ ಮತ್ತು ಆ್ಯಪ್‌ನೊಂದಿಗೆ ಕ್ರ್ಯಾಷ್ ಡೇಟವನ್ನು ಹಂಚಿಕೊಳ್ಳಿ ಎಂಬುದನ್ನು ಆನ್ ಮಾಡಲು ಟ್ಯಾಪ್ ಮಾಡಿ.

ಸುಧಾರಿತ ಅಲರ್ಟ್‌ಗಳು

ಭೂಕಂಪ ಅಥವಾ ಪ್ರವಾಹದಂತಹ ತುರ್ತು ಘಟನೆಯ ಕುರಿತು ನಿಮಗೆ ತಿಳಿಸಲು ಸುಧಾರಿತ ಸುರಕ್ಷತಾ ಅಲರ್ಟ್‌ಗಳು ನಿಮ್ಮ iPhone ಮತ್ತು Watchನಲ್ಲಿ ಸುರಕ್ಷತಾ ಅಲರ್ಟ್‌ಗಳನ್ನು ಒದಗಿಸಬಹುದು. ಈ ಅಲರ್ಟ್‌ಗಳನ್ನು ಲಭ್ಯವಿರುವ ಕನೆಕ್ಟಿವಿಟಿಯ ಮೂಲಕ ಕಳುಹಿಸಲಾಗುತ್ತದೆ, ಉದಾಹರಣೆಗೆ Wi-Fi ಅಥವಾ Bluetooth ಮತ್ತು ಲಭ್ಯವಿದ್ದಾಗ, ಮೊಬೈಲ್ ಸೇವೆ. ನಿಮ್ಮ ಸಾಧನದ ಸ್ಥಳವನ್ನು ಬಳಸಿಕೊಂಡು ನಿರ್ಧರಿಸಲಾದ ನಿಮ್ಮ ಪ್ರಸ್ತುತ ಪ್ರದೇಶಕ್ಕೆ Apple ಸುಧಾರಿತ ಸುರಕ್ಷತಾ ಅಲರ್ಟ್‌ಗಳನ್ನು ನೀಡಬಹುದು. ಒಂದು ಪ್ರದೇಶವು ದೇಶವಾಗಿರಬಹುದು ಅಥವಾ ಕೆಲವು ದೇಶಗಳಿಗೆ (ಉದಾಹರಣೆಗೆ, ಯು.ಎಸ್.) ಪ್ರದೇಶ ಎಂದರೆ ಅನೇಕ ರಾಜ್ಯಗಳ ಒಕ್ಕೂಟವಾಗಿರಬಹುದು. ನಿಮ್ಮ Apple ಸಾಧನವನ್ನು ಈ ಪ್ರದೇಶದೊಂದಿಗೆ ಸಂಯೋಜಿಸಬಹುದು. ಪ್ರದೇಶವೊಂದರಲ್ಲಿರುವ ನಿಮ್ಮ ಸಾಧನದ ಸ್ಥಳದ ಕುರಿತ ಮಾಹಿತಿಯನ್ನು Apple ಸಂಗ್ರಹಿಸುವುದಿಲ್ಲ.

ಸುಧಾರಿತ ಸುರಕ್ಷತಾ ಅಲರ್ಟ್‌ಗಳನ್ನು ಡಿಫಾಲ್ಟ್ ಆಗಿ ಆನ್ ಮಾಡಲಾಗಿದೆ. ಸೆಟ್ಟಿಂಗ್ಸ್ > ನೋಟಿಫಿಕೇಷನ್‌ಗಳು > ಸುಧಾರಿತ ಅಲರ್ಟ್‌ಗಳು > ಸುಧಾರಿತ ಸುರಕ್ಷತಾ ಅಲರ್ಟ್‌ಗಳಿಗೆ ಹೋಗಿ, ನಂತರ ಒಂದು ಅಥವಾ ಹೆಚ್ಚಿನ ರೀತಿಯ ಸುಧಾರಿತ ಸುರಕ್ಷತಾ ಅಲರ್ಟ್‌ಗಳನ್ನು ಆನ್ ಅಥವಾ ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ನೀವು ಸುಧಾರಿತ ಸುರಕ್ಷತಾ ಅಲರ್ಟ್‌ಗಳನ್ನು ನಿಷ್ಕ್ರಿಯಗೊಳಿಸಬಹುದು ಅಥವಾ ಮರುಸಕ್ರಿಯಗೊಳಿಸಬಹುದು. ಸುಧಾರಿತ ಸುರಕ್ಷತಾ ಅಲರ್ಟ್‌ಗಳನ್ನು Apple ಮೂಲಕ ಡೆಲಿವರ್ ಮಾಡಲಾಗುತ್ತದೆ ಮತ್ತು ನಿಮ್ಮ ಸ್ಥಳೀಯ ಸರ್ಕಾರದಿಂದ ಕಳುಹಿಸಲಾದ ಸರ್ಕಾರಿ ಅಲರ್ಟ್‌ಗಿಂತ ಭಿನ್ನವಾಗಿ ಕಾಣಿಸುತ್ತದೆ ಮತ್ತು ಕೇಳಿಸುತ್ತದೆ.

ಅಲರ್ಟ್‌ಗಳ ಡೆಲಿವರಿಯನ್ನು ಸುಧಾರಿಸಿ ಎಂಬುದು ನಿಮ್ಮ ಅಂದಾಜು ಸ್ಥಳವನ್ನು ಬಳಸಿ, ಸುಧಾರಿತ ಸುರಕ್ಷತಾ ಅಲರ್ಟ್‌ಗಳ ಸಮಯೋಚಿತತೆ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸುತ್ತದೆ. ಉದಾಹರಣೆಗೆ, “ಅಲರ್ಟ್ ಡೆಲಿವರಿಯನ್ನು ಸುಧಾರಿಸಿ” ಎಂಬುದು ಆನ್ ಆಗಿರುವಾಗ ಭೂಕಂಪದ ಅಲರ್ಟ್‌ಗಳನ್ನು ತ್ವರಿತವಾಗಿ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿ ಡೆಲಿವರಿ ಮಾಡಬಹುದು. Apple ನಿಮ್ಮ ಅಂದಾಜು ಸ್ಥಳವನ್ನು ಸಂಗ್ರಹಿಸುವುದಿಲ್ಲ. ಸೆಟ್ಟಿಂಗ್ಸ್ > ನೋಟಿಫಿಕೇಷನ್‌ಗಳು > ಸುಧಾರಿತ ಅಲರ್ಟ್‌ಗಳು > ಸುಧಾರಿತ ಸುರಕ್ಷತಾ ಅಲರ್ಟ್‌ಗಳು > ಅಲರ್ಟ್ ಡೆಲಿವರಿಯನ್ನು ಸುಧಾರಿಸಿ ಎಂಬಲ್ಲಿ ನೀವು “ಅಲರ್ಟ್ ಡೆಲಿವರಿಯನ್ನು ಸುಧಾರಿಸಿ” ಎಂಬುದನ್ನು ಸಕ್ರಿಯಗೊಳಿಸಬಹುದು.

ಸುಧಾರಿತ ಅಲರ್ಟ್‌ಗಳನ್ನು ಸ್ವೀಕರಿಸಲು, ನೀವು ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು > ಸಿಸ್ಟಂ ಸೇವೆಗಳು > ಅಲರ್ಟ್‌ಗಳು ಮತ್ತು ಶಾರ್ಟ್‌ಕಟ್ಸ್ ಆಟೊಮೇಷನ್ ಅನ್ನು ಸಕ್ರಿಯಗೊಳಿಸಿರಬೇಕು.

ದಿಕ್ಸೂಚಿ ವೇಪಾಯಿಂಟ್‌ಗಳು

ನಿಮ್ಮ ಪ್ರಸ್ತುತ ಸ್ಥಳವನ್ನು ವೇಪಾಯಿಂಟ್ ಆಗಿ ಸೇರಿಸಲು ನೀವು ದಿಕ್ಸೂಚಿ ಆ್ಯಪ್ ಅನ್ನು ಬಳಸಬಹುದು, ಇದು ನೀವು ರಚಿಸುವ ಪ್ರತಿ ದಿಕ್ಸೂಚಿಯ ವೇಪಾಯಿಂಟ್‌ಗೆ ಇರುವ ದೂರ ಮತ್ತು ದಿಕ್ಕನ್ನು ನೋಡಲು ನಿಮಗೆ ಅನುಮತಿಸುತ್ತದೆ. ಇದಲ್ಲದೆ, ದಿಕ್ಸೂಚಿ ಆ್ಯಪ್ ಸ್ವಯಂಚಾಲಿತವಾಗಿ ಎರಡು ವೇಪಾಯಿಂಟ್‌ಗಳನ್ನು ಜನರೇಟ್ ಮಾಡಬಹುದು, ಇದರಲ್ಲಿ ಕನೆಕ್ಟಿವಿಟಿಗಾಗಿ ಮೊಬೈಲ್ ಸೇವೆಯ ರಿಸೆಪ್ಶನ್‌ನೊಂದಿಗೆ ಕೊನೆಯ ಸ್ಥಳವನ್ನು ಅಂದಾಜು ಮಾಡುವ, ‘ಮೊಬೈಲ್ ಸೇವೆಯ ಕೊನೆಯ ಕನೆಕ್ಷನ್ ವೇಪಾಯಿಂಟ್’ ಮತ್ತು ನಿಮ್ಮ ಲಭ್ಯವಿರುವ ಯಾವುದೇ ನೆಟ್‌ವರ್ಕ್ ಪೂರೈಕೆದಾರರ ನೆಟ್‌ವರ್ಕ್‌ಗೆ ನಿಮ್ಮ iPhone ಅಥವಾ Apple Watch, ಯಾವ ಸ್ಥಳದಲ್ಲಿ ಕೊನೆಯ ಬಾರಿಗೆ ನೆಟ್‌ವರ್ಕ್ ಪೂರೈಕೆದಾರರ ನೆಟ್‌ವರ್ಕ್‌ಗೆ ಕನೆಕ್ಷನ್ ಹೊಂದಿದೆ ಎಂಬುದನ್ನು ಅಂದಾಜು ಮಾಡುವ ‘ತುರ್ತು ಕರೆಯ ಕೊನೆಯ ವೇಪಾಯಿಂಟ್’ ಅನ್ನು ಇದು ಒಳಗೊಂಡಿದೆ, ಇದರಿಂದ ತುರ್ತು ಕರೆಯನ್ನು ಮಾಡಬಹುದು. ಕೊನೆಯ ಮೊಬೈಲ್ ಕನೆಕ್ಷನ್ ವೇಪಾಯಿಂಟ್ ಅಥವಾ ಕೊನೆಯ ತುರ್ತು ಕರೆ ವೇಪಾಯಿಂಟ್ ಅನ್ನು ರಚಿಸಲು, ನಿಮ್ಮ ಸಾಧನದಲ್ಲಿ ನೀವು ಪ್ರಮುಖ ಸ್ಥಳಗಳನ್ನು ಸಕ್ರಿಯಗೊಳಿಸಿರಬೇಕು, ದಿಕ್ಸೂಚಿ ಆ್ಯಪ್‌ಗಾಗಿ ನಿಖರವಾದ ಸ್ಥಳವನ್ನು ಆನ್ ಮಾಡಬೇಕು. ದಿಕ್ಸೂಚಿ ಆ್ಯಪ್‌ನಲ್ಲಿ ವೇಪಾಯಿಂಟ್ ಅನ್ನು ಆಯ್ಕೆಮಾಡುವ ಮೂಲಕ ಮತ್ತು ಸ್ಕ್ರೀನ್‌ನ ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ, “ದಿಕ್ಸೂಚಿ ವೇಪಾಯಿಂಟ್ ಅನ್ನು ಡಿಲೀಟ್ ಮಾಡಿ” ಎಂಬುದನ್ನು ಆಯ್ಕೆಮಾಡುವ ಮೂಲಕ ದಿಕ್ಸೂಚಿ ಆ್ಯಪ್‌ನಲ್ಲಿ ನೀವು ರಚಿಸುವ ದಿಕ್ಸೂಚಿ ವೇಪಾಯಿಂಟ್‌ಗಳನ್ನು ಡಿಲೀಟ್ ಮಾಡಬಹುದು.

ಬ್ಯಾಕ್‌ಟ್ರ್ಯಾಕ್

ನಿಮ್ಮ ಹೆಜ್ಜೆಗಳನ್ನು ಪತ್ತೆಹಚ್ಚುವುದಕ್ಕೆ ನಿಮಗೆ ಸಹಾಯ ಅಗತ್ಯವಿರುವ ಕೆಲವು ಪ್ರದೇಶಗಳಲ್ಲಿ, ದಿಕ್ಸೂಚಿ ಆ್ಯಪ್ ಮತ್ತು Apple Watchನಲ್ಲಿ ಲಭ್ಯವಿರುವ ಕೆಲವು ಥರ್ಡ್-ಪಾರ್ಟಿ ಆ್ಯಪ್‌ಗಳು, ಸುರಕ್ಷತಾ ಉದ್ದೇಶಗಳಿಗಾಗಿ ನಿಮ್ಮ ಇತ್ತೀಚಿನ ಸ್ಥಳಗಳಿಗೆ ಒಂದು ಬಾರಿ ಆ್ಯಕ್ಸೆಸ್ ಅನ್ನು ಕೇಳಬಹುದು. ಈ ಸ್ಥಳಗಳು ಯಾವಾಗಲೂ ಲಭ್ಯವಿಲ್ಲದಿರಬಹುದು, ಉದಾಹರಣೆಗೆ, ನೀವು ನಿಮ್ಮ ಮನೆ ಅಥವಾ ನಗರ ಪ್ರದೇಶಗಳಂತಹ ಪರಿಚಿತ ಸ್ಥಳಗಳಿಗೆ ಹತ್ತಿರದಲ್ಲಿದ್ದರೆ. ಈ ಫೀಚರ್‌ಗಳನ್ನು ಬಳಸಲು, ನೀವು ಸಾಧನಕ್ಕಾಗಿ ಪ್ರಮುಖ ಸ್ಥಳಗಳು ಎಂಬುದನ್ನು ಸಕ್ರಿಯಗೊಳಿಸಿರಬೇಕು ಮತ್ತು ಆ್ಯಪ್‌ಗಾಗಿ ನಿಖರವಾದ ಸ್ಥಳವನ್ನು ಆನ್ ಮಾಡಿರಬೇಕು.

ಇತರ ಮಾಹಿತಿ

ಕೆಲವು ಸುರಕ್ಷತಾ ಫೀಚರ್‌ಗಳು ಎಲ್ಲಾ ಸಾಧನಗಳಿಗೆ ಅಥವಾ ಎಲ್ಲಾ ಪ್ರದೇಶ ಅಥವಾ ಭಾಷೆಯಲ್ಲಿ ಲಭ್ಯವಿಲ್ಲದಿರಬಹುದು. ಕೆಲವು ಪ್ರದೇಶಗಳು ಮತ್ತು ದೇಶಗಳು ಅನೇಕ ತುರ್ತು ಸೇವಾ ಸಂಖ್ಯೆಗಳನ್ನು ಹೊಂದಿರುತ್ತವೆ. ಈ ಸ್ಥಳಗಳಲ್ಲಿ, ಫಾಲ್ ಡಿಟೆಕ್ಷನ್ ಅಲರ್ಟ್‌ಗಳು ಬಂದಾಗ Apple Watch ಆಂಬ್ಯುಲೆನ್ಸ್ ಸೇವೆಗಳಿಗೆ ಸಂಬಂಧಿಸಿದ ಸಂಖ್ಯೆಗೆ ಕರೆ ಮಾಡುತ್ತದೆ.

ವೈಯುಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುವುದಕ್ಕಾಗಿ ಅನ್ವಯವಾಗುವ ಕಾನೂನುಬದ್ಧ ಆಧಾರ

ಸೇವೆಯನ್ನು ಒದಗಿಸಲು ಮತ್ತು ನಮ್ಮ ಕಾನೂನು ಬಾಧ್ಯತೆಗಳನ್ನು ಅನುಸರಿಸಲು ಅಗತ್ಯವಿರುವಂತೆ ನಾವು ನಿಮ್ಮ ವೈಯಕ್ತಿಕ ಡೇಟವನ್ನು ತುರ್ತು SOSನಲ್ಲಿ ಮತ್ತು ಸ್ಯಾಟಲೈಟ್ ಮೂಲಕ ತುರ್ತು SOSನಲ್ಲಿ ಪ್ರಕ್ರಿಯೆಗೊಳಿಸುತ್ತೇವೆ. ಸಮ್ಮತಿಯು ಸೂಕ್ತವಾದ ಕಾನೂನುಬದ್ಧ ಆಧಾರವಾಗಿದ್ದಲ್ಲಿ, ನಾವು ಅದನ್ನು ಅನ್ವಯವಾಗುವ ಸ್ಥಳೀಯ ಕಾನೂನುಗಳ ಪ್ರಕಾರ ಪಡೆಯುತ್ತೇವೆ. ಅನ್ವಯವಾಗುವ ಸ್ಥಳೀಯ ಕಾನೂನುಗಳು ಅನುಮತಿಸಿದಲ್ಲಿ, ತುರ್ತು ಸೇವೆಗಳನ್ನು ನೀಡುವ ನಮ್ಮ ನ್ಯಾಯಬದ್ಧ ಹಿತಾಸಕ್ತಿಗಳಿಗೆ, ವಂಚನೆ ಅಥವಾ ಕ್ರಿಮಿನಲ್ ಚಟುವಟಿಕೆಯನ್ನು ತಡೆಯಲು, ಸೇವೆಗಳನ್ನು ಸುಧಾರಿಸಲು ಹಾಗೂ ಸ್ಯಾಟಲೈಟ್ ಸಿಸ್ಟಂಗಳು ಮತ್ತು ವ್ಯವಸ್ಥೆಗಳ ಮೂಲಕ ತುರ್ತು SOS ಮತ್ತು ತುರ್ತು SOS ಅನ್ನು ನಿರ್ವಹಣೆ ಮಾಡಲು ಸಹಾಯ ಮಾಡಲು ಈ ಕೆಳಗಿನ ಪ್ರಕಾರದ ವೈಯಕ್ತಿಕ ಡೇಟವನ್ನು ನಾವು ಪ್ರಕ್ರಿಯೆಗೊಳಿಸುತ್ತೇವೆ:

  • ನಿಮ್ಮ ಸ್ಥಳ
  • ತುರ್ತು ಸೇವೆಗಳೊಂದಿಗೆ ಸಂವಹನ ನಡೆಸಿದ ಅವಧಿ ಮತ್ತು ಹಂಚಿಕೊಂಡ ವಿಷಯದಂತಹ ನಿಮ್ಮ ಸೆಶನ್‌ಗಳ ಮಾಹಿತಿ
  • ನೀವು ಆಯ್ಕೆ ಮಾಡಿದ ತುರ್ತು ಸಂಪರ್ಕಗಳು

ರಿಟೆನ್ಶನ್

ವೈಯಕ್ತಿಕ ಡೇಟವನ್ನು ಸಂಗ್ರಹಿಸಿದ ಉದ್ದೇಶ ಈಡೇರುವವರೆಗೆ ಮಾತ್ರವೇ Apple ಅದನ್ನು ಉಳಿಸಿಕೊಳ್ಳುತ್ತದೆ, ಈ ಉದ್ದೇಶಗಳಲ್ಲಿ Appleನ ಗೌಪ್ಯತೆ ನೀತಿಯಲ್ಲಿ ಅಥವಾ ನಮ್ಮ ಸೇವಾ-ನಿರ್ದಿಷ್ಟ ಗೌಪ್ಯತೆ ನೋಟಿಸ್‌ಗಳಲ್ಲಿ ವಿವರಿಸಿರುವ, ಅಥವಾ ಕಾನೂನಿನ ಪ್ರಕಾರ ಅಗತ್ಯವಿರುವ ಉದ್ದೇಶಗಳು ಸೇರಿವೆ. ರಿಟೆನ್ಷನ್ ಅವಧಿಯನ್ನು ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಮೊದಲಿಗೆ ಸಂಗ್ರಹಿಸಿದ ವೈಯಕ್ತಿಕ ಡೇಟವನ್ನು ಉಳಿಸಿಕೊಳ್ಳುವುದು ಅಗತ್ಯವೇ ಎಂದು ಜಾಗರೂಕವಾಗಿ ಪರೀಕ್ಷಿಸುತ್ತೇವೆ, ನಂತರ ರಿಟೆನ್ಷನ್ ಅಗತ್ಯವಿದ್ದಲ್ಲಿ, ಕಾನೂನಿನ ಅಡಿಯಲ್ಲಿ ಅವಕಾಶ ನೀಡಲಾಗಿರುವ ಅತಿ ಕಡಿಮೆ ಅವಧಿಗೆ ವೈಯಕ್ತಿಕ ಡೇಟವನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇವೆ.

ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.

2025-12-12