ಹುಡುಕಿ ಮತ್ತು ಗೌಪ್ಯತೆ
ನಿಮ್ಮ ಮಾಹಿತಿಯನ್ನು ಕಾಪಾಡಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವುದಕ್ಕೆ ಅನುವುಮಾಡಿಕೊಡಲು ‘ಹುಡುಕಿ’ಯನ್ನು ವಿನ್ಯಾಸಗೊಳಿಸಲಾಗಿದೆ.
ಹುಡುಕಾಟ ಫಲಿತಾಂಶಗಳನ್ನು ಹೆಚ್ಚು ಪ್ರಸ್ತುತವಾಗುವಂತೆ ಮಾಡಲು, ಕೆಲವು ಮಾಹಿತಿಯನ್ನು Appleಗೆ ಕಳುಹಿಸಲಾಗುತ್ತದೆ ಮತ್ತು ಅದು ನಿಮ್ಮೊಂದಿಗೆ ಸಂಯೋಜಿತವಾಗಿರುವುದಿಲ್ಲ
ನೀವು ಲುಕ್ ಅಪ್ ಅಥವಾ ವಿಷುವಲ್ ಲುಕ್ ಅಪ್ ಅನ್ನು ಬಳಸಿದಾಗ, ನೀವು ಹುಡುಕಾಟ, Safari ಹುಡುಕಾಟ, ಸಂದೇಶ ಆ್ಯಪ್‌ನಲ್ಲಿನ #images ಹುಡುಕಾಟದಲ್ಲಿ ಟೈಪ್ ಮಾಡಿದಾಗ ಅಥವಾ ನೀವು Spotlight ಅನ್ನು ಉಪಯೋಗಿಸಿದಾಗ, ಅಪ್-ಟು-ಡೇಟ್ ಸಲಹೆಗಳನ್ನು ಒದಗಿಸುವುದಕ್ಕಾಗಿ Appleಗೆ ಸೀಮಿತ ಮಾಹಿತಿಯನ್ನು ಕಳುಹಿಸಲಾಗುತ್ತದೆ. Appleಗೆ ಕಳುಹಿಸಲಾದ ಯಾವುದೇ ಮಾಹಿತಿಯು ನಿಮ್ಮನ್ನು ಗುರುತಿಸುವುದಿಲ್ಲ ಮತ್ತು 15-ನಿಮಿಷದ ರ್‍ಯಾಂಡಮ್, ಬದಲಾಗುವ ಸಾಧನ-ಜನರೇಟ್ ಮಾಡಿದ ಐಡೆಂಟಿಫೈಯರ್ ಜೊತೆಗೆ ಸಂಯೋಜಿತವಾಗಿರುತ್ತದೆ. ಈ ಮಾಹಿತಿಯು ಸ್ಥಳ, ಆಸಕ್ತಿಯ ವಿಷಯಗಳು (ಉದಾಹರಣೆಗೆ, ಅಡುಗೆ ಅಥವಾ ಬಾಸ್ಕೆಟ್‌ಬಾಲ್), ವಿಷುವಲ್ ಹುಡುಕಾಟದ ಪ್ರಶ್ನೆಗಳೂ ಸೇರಿದಂತೆ ನಿಮ್ಮ ಹುಡುಕಾಟ ಪ್ರಶ್ನೆಗಳು, ಆ ಹುಡುಕಾಟ ಪ್ರಶ್ನೆಗಳಿಗೆ ಸಂಬಂಧಿಸಿದ ಸಂದರ್ಭೋಚಿತ ಮಾಹಿತಿ, ನೀವು ಆಯ್ಕೆ ಮಾಡಿದ ಸಲಹೆಗಳು, ನೀವು ಬಳಸುವ ಆ್ಯಪ್‌ಗಳು ಮತ್ತು ಸಂಬಂಧಿತ ಸಾಧನ ಬಳಕೆಯ ಡೇಟಗಳನ್ನು ಒಳಗೊಂಡಿರುತ್ತದೆ. ಈ ಮಾಹಿತಿಯು ನಿಮ್ಮ ಸಾಧನದಲ್ಲಿನ ಫೈಲ್‌ಗಳು ಅಥವಾ ಕಂಟೆಂಟ್ ಅನ್ನು ತೋರಿಸುವ ಹುಡುಕಾಟದ ಫಲಿತಾಂಶಗಳನ್ನು ಒಳಗೊಂಡಿಲ್ಲ. ನೀವು ಸಂಗೀತ ಅಥವಾ ವೀಡಿಯೊ ಸಬ್‌ಸ್ಕ್ರಿಪ್ಶನ್ ಸೇವೆಗಳಿಗೆ ಸಬ್‌ಸ್ಕ್ರೈಬ್ ಮಾಡಿದ್ದರೆ, ಈ ಸೇವೆಗಳ ಹೆಸರುಗಳು ಮತ್ತು ಸಬ್‌ಸ್ಕ್ರಿಪ್ಶನ್ ಪ್ರಕಾರವನ್ನು Appleಗೆ ಕಳುಹಿಸಬಹುದು. ನಿಮ್ಮ ಖಾತೆಯ ಹೆಸರು, ಸಂಖ್ಯೆ, ಮತ್ತು ಪಾಸ್‌ವರ್ಡ್ ಅನ್ನು Appleಗೆ ಕಳುಹಿಸಲಾಗುವುದಿಲ್ಲ.
ಸಾಮಾನ್ಯ ಜ್ಞಾನದ ವಿಷಯಗಳನ್ನು ಹುಡುಕುವಂತಹ ಅಥವಾ ನಿರ್ದೇಶನಗಳನ್ನು ಪಡೆಯುವಂತಹ ಮುಂತಾದ ವಿಷಯಗಳನ್ನು Siriಗೆ ಕೇಳುವ ಮೂಲಕವೂ ನೀವೂ Siriಯನ್ನು ಬಳಸಿಕೊಂಡು ಹುಡುಕಬಹುದು. ನೀವು Siriಯನ್ನು ಬಳಸುವಾಗ, ನಿಮ್ಮ ವಿನಂತಿಯನ್ನು ಪ್ರಕ್ರಿಯೆಗೊಳಿಸಲು ನಿಮ್ಮ ವಿನಂತಿಯ ಟ್ರಾನ್ಸ್‌ಕ್ರಿಪ್ಟ್ ಮತ್ತು ಇತರೆ ಡೇಟವನ್ನು Appleಗೆ ಕಳುಹಿಸಬಹುದು ಮತ್ತು ಅದನ್ನು ಸಂಗ್ರಹಿಸಬಹುದು. ಸೆಟ್ಟಿಂಗ್ಸ್ > Siri ಎಂಬಲ್ಲಿಗೆ ಹೋಗುವ ಮೂಲಕ Siri ನಿಮ್ಮ ಡೇಟವನ್ನು ಹೇಗೆ ನಿಭಾಯಿಸುತ್ತದೆ ಎನ್ನುವ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು.
Appleಗೆ ಕಳುಹಿಸುವ ನಿಮ್ಮ ಹುಡುಕಾಟಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನಿಮ್ಮ ವಿನಂತಿಯನ್ನು ಪ್ರಕ್ರಿಯೆಗೊಳಿಸಲು ಬಳಸಲಾಗುತ್ತದೆ ಹಾಗೂ ಹುಡುಕಾಟದ ಮಾಡೆಲ್ ಅನ್ನು ಉತ್ತಮಗೊಳಿಸಲು ನಿಮ್ಮ ಹುಡುಕಾಟದ ಪ್ರಶ್ನೆಗಳನ್ನು ಬಳಸಿಕೊಳ್ಳುವಂತಹ ಪ್ರಕ್ರಿಯೆಗಳ ಮೂಲಕ ಹುಡುಕಾಟದ ಫಲಿತಾಂಶಗಳನ್ನು ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು ಬಳಸಲಾಗುತ್ತದೆ. ಇದನ್ನು ನಿಮ್ಮ Apple ಖಾತೆ ಅಥವಾ ಈಮೇಲ್ ವಿಳಾಸಕ್ಕೆ ಲಿಂಕ್ ಮಾಡಲಾಗಿಲ್ಲ.
ಇತರೆ Apple ಉತ್ಪನ್ನಗಳು ಮತ್ತು ಸೇವೆಗಳನ್ನು ಸುಧಾರಿಸಲು ಸಂಗ್ರಹಿತ ಮಾಹಿತಿಯನ್ನು ಬಳಸಬಹುದು. Apple ‘ಹುಡುಕಾಟ’ ಫೀಚರ್‌ನ ಕಾರ್ಯಕ್ಷಮತೆ ಮತ್ತು ಗುಣಮಟ್ಟದ ಮೌಲ್ಯಮಾಪನ ಮಾಡಲು ಮತ್ತು ಅದರಲ್ಲಿ ಸುಧಾರಣೆಗಳನ್ನು ತರುವ ಉದ್ದೇಶದಿಂದ ಹುಡುಕಾಟದ ಪ್ರಶ್ನೆಗಳ ಒಂದು ಸೀಮಿತ, ರ್‍ಯಾಂಡಮ್ ಆಗಿ ಆಯ್ದ ಸ್ಯಾಂಪಲ್ ಅನ್ನು ಹುಡುಕಾಟದ ಟೂಲ್‌ಗಳಿಗೆ ಕಳುಹಿಸಬಹುದು.
Safariಯಲ್ಲಿ ಸರ್ಚ್ ಎಂಜಿನ್ ಸಲಹೆಗಳು
ನೀವು ಅನುಕೂಲಕರವಾದ ಒಂದೇ ಕಡೆಯಿಂದ ವೆಬ್ ಅನ್ನು ಬ್ರೌಸ್ ಮಾಡಬಹುದಾದ ರೀತಿಯಲ್ಲಿ Safariಯಲ್ಲಿ ಹುಡುಕಾಟಗಳು ಮತ್ತು ವೆಬ್ ವಿಳಾಸಗಳಿಗೆ ಒಂದೇ ಫೀಲ್ಡ್ ಇರುತ್ತದೆ. ಸರ್ಚ್ ಎಂಜಿನ್ ಸಲಹೆಗಳನ್ನು ಸಕ್ರಿಯಗೊಳಿಸಿದಾಗ, ನೀವು ಏನು ಟೈಪ್ ಮಾಡಿದ್ದೀರಿ ಎನ್ನುವುದನ್ನು ಆಧರಿಸಿ Safari ನೀವು ಆಯ್ಕೆ ಮಾಡಿದ ಸರ್ಚ್ ಎಂಜಿನ್‌ಗಳಿಗೆ ಸಲಹೆಗಳನ್ನು ಕೇಳುತ್ತದೆ.
Safariಯಲ್ಲಿ ಟಾಪ್ ಹಿಟ್ ಅನ್ನು ಪ್ರಿಲೋಡ್ ಮಾಡುವುದು
“ಟಾಪ್ ಹಿಟ್ ಪ್ರಿಲೋಡ್ ಮಾಡಿ” ಎಂಬುದನ್ನು ಸಕ್ರಿಯಗೊಳಿಸಿದ್ದರೆ, ನಿಮ್ಮ ಬುಕ್‌ಮಾರ್ಕ್‌ಗಳನ್ನು ಮತ್ತು ಬ್ರೌಸಿಂಗ್ ಇತಿಹಾಸವನ್ನು ಆಧರಿಸಿ Safari ಟಾಪ್ ಹಿಟ್ ಅನ್ನು ನಿರ್ಧರಿಸಿದ ತಕ್ಷಣ, Safari ಹಿನ್ನೆಲೆಯಲ್ಲಿ ವೆಬ್‌ಪುಟವನ್ನು ಲೋಡ್ ಮಾಡಲು ಆರಂಭಿಸುತ್ತದೆ. ನೀವು ಈ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದರೆ, ಪುಟವು ಸಾಮಾನ್ಯ ರೂಪದಲ್ಲಿ ಲೋಡ್ ಆಗುತ್ತದೆ.
ಆಯ್ಕೆ ಮತ್ತು ಕಂಟ್ರೋಲ್ ನಿಮ್ಮದೆ
ನಿಮ್ಮ ಹುಡುಕಾಟದ ಪ್ರಶ್ನೆಗಳನ್ನು Apple ಸಂಗ್ರಹಿಸುವುದು ಮತ್ತು ಹುಡುಕಾಟವನ್ನು ಸುಧಾರಿಸಲು ಅವುಗಳನ್ನು ಬಳಸಿಕೊಳ್ಳುವುದನ್ನು ನೀವು ಬಯಸದಿದ್ದರೆ, ನೀವು ಸೆಟ್ಟಿಂಗ್ಸ್ > ಹುಡುಕಾಟ ಎಂಬಲ್ಲಿಗೆ ಹೋಗಿ “ಹುಡುಕಾಟ ಸುಧಾರಿಸಲು Appleಗೆ ಸಹಾಯ ಮಾಡಿ” ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ “ಹುಡುಕಾಟ ಸುಧಾರಿಸಿ” ಅನ್ನು ನಿಷ್ಕ್ರಿಯಗೊಳಿಸಬಹುದು. ನೀವು “Siri ಮತ್ತು ಡಿಕ್ಟೇಷನ್ ಅನ್ನು ಸುಧಾರಿಸಿ” ಎಂಬುದನ್ನು ಸಕ್ರಿಯಗೊಳಿಸಿದ್ದರೆ, Siri ಮೂಲಕ ನೀವು ಮಾಡುವ ಹುಡುಕಾಟಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು Siriಯನ್ನು ಸುಧಾರಿಸಲು ಅವುಗಳನ್ನು ಬಳಸಲಾಗುತ್ತದೆ. ನೀವು ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > ಅನಾಲಿಟಿಕ್ಸ್ ಮತ್ತು ಸುಧಾರಣೆಗಳು ಎಂಬಲ್ಲಿ “Siri ಮತ್ತು ಡಿಕ್ಟೇಷನ್ ಅನ್ನು ಸುಧಾರಿಸಿ” ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ “Siri ಮತ್ತು ಡಿಕ್ಟೇಷನ್ ಅನ್ನು ಸುಧಾರಿಸಿ” ಎಂಬುದನ್ನು ನಿಷ್ಕ್ರಿಯಗೊಳಿಸಬಹುದು.
ನೀವು ವೆಬ್ ಆಧಾರಿತ ಕಂಟೆಂಟ್ ಮತ್ತು ಹುಡುಕಾಟದ ಫಲಿತಾಂಶಗಳನ್ನು ಬಯಸದಿದ್ದರೆ, ಸೆಟ್ಟಿಂಗ್ಸ್> ಹುಡುಕಾಟ ಎಂಬಲ್ಲಿ “ಇತ್ತೀಚಿನ ಹುಡುಕಾಟಗಳನ್ನು ತೋರಿಸಿ” ಮತ್ತು “ಸಂಬಂಧಿತ ಕಂಟೆಂಟ್ ತೋರಿಸಿ” ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ಈ ಫೀಚರ್‌ಗಳನ್ನು ನಿಷ್ಕ್ರಿಯಗೊಳಿಸಬಹುದು.
ನೀವು ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು > ಸಿಸ್ಟಂ ಸೇವೆಗಳು ಎಂಬಲ್ಲಿ ‘ಸಲಹೆಗಳು & ಹುಡುಕಾಟ’ ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ನೀವು ‘ಹುಡುಕಿ’ ಆ್ಯಪ್‌ಗೆ ಸ್ಥಳ ಸೇವೆಗಳನ್ನು ನಿಷ್ಕ್ರಿಯಗೊಳಿಸಬಹುದು. ನಿಮ್ಮ ಸಾಧನದಲ್ಲಿ ಸ್ಥಳ ಸೇವೆಗಳನ್ನು ನೀವು ಆಫ್ ಮಾಡಿದರೆ, ನಿಮ್ಮ ಸ್ಥಳವನ್ನು Appleಗೆ ಕಳುಹಿಸಲಾಗುವುದಿಲ್ಲ.
Appleಗೆ ಕಳುಹಿಸಲಾದ ಈ ಮಾಹಿತಿಯನ್ನು Apple ವಿಶ್ವಾಸಾರ್ಹ ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರೊಂದಿಗೆ ಪ್ರಕ್ರಿಯೆಗೊಳಿಸಬಹುದು ಮತ್ತು ಸಂಗ್ರಹಿಸಬಹುದು.
ನೀವು ಹುಡುಕಾಟವನ್ನು ಬಳಸುವ ಮೂಲಕ, Apple ಮತ್ತು ಅದರ ಅಂಗ ಸಂಸ್ಥೆಗಳು ಹಾಗೂ ಏಜೆಂಟರಿಗೆ ಈ ಮಾಹಿತಿಯನ್ನು ಪ್ರಸರಣ ಮಾಡಲು, ಸಂಗ್ರಹಿಸಲು, ನಿರ್ವಹಿಸಲು, ಪ್ರಕ್ರಿಯೆಗೊಳಿಸಲು ಮತ್ತು ಬಳಸಿಕೊಳ್ಳಲು ನೀವು ಒಪ್ಪಿಗೆ ನೀಡುತ್ತೀರಿ ಮತ್ತು ಸಮ್ಮತಿಸುತ್ತೀರಿ. ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.
2026-03-30