ಸ್ಟಾಕ್ಸ್ ಮತ್ತು ಗೌಪ್ಯತೆ

ಸ್ಟಾಕ್ ಆ್ಯಪ್ ಅನ್ನು ಸುಧಾರಿಸಲು ಮತ್ತು ವೈಯಕ್ತೀಕರಿಸಲು ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿರದ, ಸ್ಟಾಕ್ ‌ಆ್ಯಪ್‌ನಲ್ಲಿನ ನಿಮ್ಮ ಚಟುವಟಿಕೆಯನ್ನು Apple ಸಂಗ್ರಹಿಸುತ್ತದೆ. ನಿಮ್ಮ Apple ಖಾತೆಯನ್ನು, ಲಭ್ಯವಿರುವಲ್ಲಿ ಸುದ್ದಿ ಸಬ್‌ಸ್ಕ್ರಿಪ್ಶನ್‌ಗಳನ್ನು ಪರಿಶೀಲಿಸಲು ಬಳಸಬಹುದು, ಇದರಿಂದಾಗಿ ನೀವು ಅವುಗಳನ್ನು ಸ್ಟಾಕ್ ಆ್ಯಪ್‌ನಲ್ಲಿ ಆ್ಯಕ್ಸೆಸ್ ಮಾಡಬಹುದು.
 

ನಿಮ್ಮ ಮಾಹಿತಿಯನ್ನು ರಕ್ಷಿಸಲು ಸ್ಟಾಕ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.


Privacy Icon

  • Newsನಲ್ಲಿ ನಿಮ್ಮ ಓದುವ ಮತ್ತು ಆಲಿಸುವ ಚಟುವಟಿಕೆ, ಲಭ್ಯವಿರುವಲ್ಲಿ, ಮತ್ತು ಸ್ಟಾಕ್ಸ್, ಹಾಗೆಯೇ ಸ್ಟಾಕ್ಸ್‌ನಲ್ಲಿ ನಿಮ್ಮ ಬಳಕೆಯ ಚಟುವಟಿಕೆ, News ಮತ್ತು ಸ್ಟಾಕ್ಸ್ ಆ್ಯಪ್‌ನೊಂದಿಗೆ ಅನನ್ಯವಾಗಿ ಸಂಯೋಜಿತವಾಗಿರುವ ಐಡೆಂಟಿಫೈಯರ್‌ಗೆ ಲಿಂಕ್ ಮಾಡಲಾಗಿದೆ ಮತ್ತು ನಿಮ್ಮ Apple ಖಾತೆ ಅಥವಾ ಇತರ Apple ಸೇವೆಗಳೊಂದಿಗೆ ಸಂಯೋಜಿತವಾಗಿಲ್ಲ.
  • News ಹಾಗೂ ಸ್ಟಾಕ್ಸ್ ಆ್ಯಪ್‌ಗಳಲ್ಲಿನ ಜಾಹೀರಾತುಗಳು ನಿಮಗೆ ಸೂಕ್ತವಾಗಿದೆಯೆಂದು ಖಚಿತಪಡಿಸಿಕೊಳ್ಳಲು ನಾವು ನಿಮ್ಮ ಖಾತೆ, ನೀವು ಓದುವ ಲೇಖನಗಳ ವರ್ಗಗಳು ಹಾಗೂ ನೀವು ಸಬ್‌ಸ್ಕ್ರೈಬ್ ಮಾಡುವ ಪ್ರಕಾಶನಗಳ ಬಗೆಗಿನ ಮಾಹಿತಿಯನ್ನು ಬಳಸಬಹುದು. ನಾವು App Storeನಲ್ಲಿ ನಿಮ್ಮ ಜಾಹೀರಾತುಗಳನ್ನು ವೈಯಕ್ತೀಕರಿಸಲು ಕೂಡ ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳ ಬಗೆಗಿನ ಮಾಹಿತಿಯನ್ನು ಬಳಸಬಹುದು. ಕೆಳಗೆ ವಿವರಿಸಿದಂತೆ ನೀವು ಈ ಜಾಹೀರಾತಿಗೆ ಸಂಬಂಧಿಸಿದಂತೆ ಆಯ್ಕೆಗಳನ್ನು ಹೊಂದಿದ್ದೀರಿ.
  • ನೀವು ಸ್ಟಾಕ್ ಆ್ಯಪ್‌ನಲ್ಲಿ ಸಬ್‌ಸ್ಕ್ರಿಪ್ಶನ್ ಮಾಡಿದ ಕಂಟೆಂಟ್ ಲಭ್ಯವಿದ್ದಾಗ ಅದನ್ನು ಆ್ಯಕ್ಸೆಸ್ ಮಾಡಲು ನಿಮಗೆ ಸಾಧ್ಯವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ನಿಮ್ಮ Apple ಖಾತೆಯನ್ನು Apple Newsನಲ್ಲಿ ವ್ಯಾಪಾರದ ಕಂಟೆಂಟ್‌ನ ಸಕ್ರಿಯ ಸಬ್‌ಸ್ಕ್ರಿಪ್ಶನ್‌ಗಳಿಗಾಗಿ ಪರಿಶೀಲಿಸುತ್ತೇವೆ.

ನಿಮ್ಮ ಮಾಹಿತಿಯ ಗೌಪ್ಯತೆ ಮತ್ತು ಭದ್ರತೆಯನ್ನು ರಕ್ಷಿಸುವುದು Appleನಲ್ಲಿರುವ ಪ್ರತಿಯೊಬ್ಬರ ಆದ್ಯತೆಯಾಗಿದೆ. ನಿಮ್ಮ ಅನುಭವವನ್ನು ಉತ್ತಮಗೊಳಿಸಲು ನಮಗೆ ಅಗತ್ಯವಿರುವ ಡೇಟವನ್ನು ಮಾತ್ರ ಸಂಗ್ರಹಿಸಲು ನಾವು ಶ್ರಮಿಸುತ್ತೇವೆ. ನಾವು ಡೇಟವನ್ನು ಸಂಗ್ರಹಿಸಿದಾಗ, ನಾವು ಏನನ್ನು ಸಂಗ್ರಹಿಸುತ್ತೇವೆ ಮತ್ತು ನಮಗೆ ಅದು ಏಕೆ ಬೇಕು ಎಂಬುದನ್ನು ನೀವು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ನಾವು ಭಾವಿಸುತ್ತೇವೆ, ಇದರಿಂದ ನೀವು ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಬಹುದು. ಪ್ರತಿಯೊಂದು Apple ಉತ್ಪನ್ನ ಮತ್ತು ಸೇವೆಯಂತೆ, ಈ ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಸ್ಟಾಕ್ ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಸ್ಟಾಕ್ಸ್ ಆ್ಯಪ್ ಸುಧಾರಿಸಲು, ಆ್ಯಪ್‌ನ ಕಾರ್ಯಕ್ಷಮತೆ ಮತ್ತು ನಿಮ್ಮ ಸಂವಹನದ ಕುರಿತು ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿರುವ ಬಳಕೆದಾರರಿಗೆ, ನೀವು ಸ್ಟಾಕ್ಸ್‌ನಲ್ಲಿ Apple News ಅನ್ನು ಹೇಗೆ ಬಳಸುತ್ತೀರಿ ಎಂಬ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ. ಡೇಟವು ಸ್ಟಾಕ್ಸ್ ಮತ್ತು Apple Newsಗಳಿಗೆ ನಿರ್ದಿಷ್ಟವಾದ ಐಡೆಂಟಿಫೈಯರ್‌ನೊಂದಿಗೆ ಸಂಯೋಜಿತವಾಗಿದೆ (ಲಭ್ಯವಿರುವಲ್ಲಿ) ಮತ್ತು ಇತರ Apple ಸೇವೆಗಳಿಗೆ ಲಿಂಕ್ ಮಾಡಲಾಗಿಲ್ಲ. ನೀವು ಸೆಟ್ಟಿಂಗ್ಸ್ > ಆ್ಯಪ್‌ಗಳು > ಸ್ಟಾಕ್ಸ್ ಎಂಬಲ್ಲಿಗೆ ಹೋಗಿ, ನಂತರ ಐಡೆಂಟಿಫೈಯರ್ ರೀಸೆಟ್ ಮಾಡಿ ಎನ್ನುವುದನ್ನು ಆನ್ ಮಾಡಿ ಟ್ಯಾಪ್ ಮಾಡುವ ಮೂಲಕ ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ ಐಡೆಂಟಿಫೈಯರ್ ಅನ್ನು ರೀಸೆಟ್ ಮಾಡಬಹುದು. Macನಲ್ಲಿ, ಸ್ಟಾಕ್ ಆ್ಯಪ್ ಅನ್ನು ತೆರೆಯಿರಿ, ನಂತರ ಸ್ಟಾಕ್‌ಗಳು > ಐಡೆಂಟಿಫೈಯರ್ ಅನ್ನು ರೀಸೆಟ್ ಮಾಡಿ ಎಂಬಲ್ಲಿಗೆ ಹೋಗಿ ಮತ್ತು ಐಡೆಂಟಿಫೈಯರ್ ಅನ್ನು ರೀಸೆಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ. Apple News ಬಗ್ಗೆ ನಾವು ಸಂಗ್ರಹಿಸುವ ಮಾಹಿತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ, www.apple.com/in/legal/privacy/data/en/apple-news ಎಂಬುದಕ್ಕೆ ಭೇಟಿ ನೀಡಿ.

Apple News

ಸ್ಟಾಕ್ಸ್ ಆ್ಯಪ್‌ನಲ್ಲಿನ Apple News ಶಿಫಾರಸುಗಳು ನಿಮಗೆ ಸ್ಟಾಕ್ಸ್ ಆ್ಯಪ್‌ನಲ್ಲಿ ಲಭ್ಯವಿರುವಲ್ಲಿ ನೀವು ಓದುವ Apple News ಲೇಖನಗಳನ್ನು ಆಧರಿಸಿವೆ. ನಿಮ್ಮ iOS ಅಥವಾ iPadOS ಸಾಧನದಲ್ಲಿನ ಸ್ಟಾಕ್ಸ್ ಆ್ಯಪ್‌ನಲ್ಲಿ ಶಿಫಾರಸುಗಳಿಗಾಗಿ ಬಳಸಲಾದ ಡೇಟವನ್ನು ತೆರವುಗೊಳಿಸಲು, ಮೇಲಿನ ಬಲ ಮೂಲೆಯಲ್ಲಿರುವ ಇನ್ನಷ್ಟು ಎಂಬುದನ್ನು ಟ್ಯಾಪ್ ಮಾಡಿ, ನಂತರ ಶಿಫಾರಸುಗಳ ಡೇಟವನ್ನು ತೆರವುಗೊಳಿಸಿ ಎಂಬುದನ್ನು ಟ್ಯಾಪ್ ಮಾಡಿ. ನಿಮ್ಮ Macನಲ್ಲಿನ ಸ್ಟಾಕ್ಸ್ ಆ್ಯಪ್‌ನಲ್ಲಿ, ಸ್ಟಾಕ್ಸ್ > ಶಿಫಾರಸುಗಳ ಡೇಟವನ್ನು ತೆರವುಗೊಳಿಸಿ ಎಂಬಲ್ಲಿಗೆ ಹೋಗಿ.

ನಿಮ್ಮ Apple ಖಾತೆಯನ್ನು ಬಳಸಿ ನೀವು ಖರೀದಿಸುವ ಸುದ್ದಿ ಸಬ್‌ಸ್ಕ್ರಿಪ್ಶನ್‌ಗಳ ಕುರಿತಾದ ಮಾಹಿತಿಯನ್ನು, Apple Newsನಲ್ಲಿ ಲಭ್ಯವಿರುವಲ್ಲಿ, ನೀವು ಸ್ಟಾಕ್ ಆ್ಯಪ್‌ನಲ್ಲಿ ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳನ್ನು ಆ್ಯಕ್ಸೆಸ್ ಮಾಡಬಹುದೆಂದು ಖಚಿತಪಡಿಸಿಕೊಳ್ಳಲು ಬಳಸಲಾಗುತ್ತದೆ.

ನಿಮ್ಮೊಂದಿಗೆ ಸಂವಹನ ನಡೆಸುವುದು

Apple News+ ಮತ್ತು ನಿಮಗೆ ಆಸಕ್ತಿಯಿರಬಹುದಾದ, Apple One ಅನ್ನೂ ಒಳಗೊಂಡ ಇತರ Apple ಉತ್ಪನ್ನಗಳು, ಸೇವೆಗಳು ಮತ್ತು ಆಫರ್‌ಗಳ ಕುರಿತು ನಿಮಗೆ ಸಂವಹನಗಳನ್ನು ಕಳುಹಿಸಲು, ನಿಮ್ಮ ಮಾಲೀಕತ್ವದಲ್ಲಿರುವ Apple ಉತ್ಪನ್ನಗಳು, ನೀವು Apple ಸೇವೆಗಳಿಗೆ ಮಾಡಿರುವ ಸಬ್‌ಸ್ಕ್ರಿಪ್ಶನ್‌ಗಳು ಮತ್ತು ನೀವು ಡೌನ್‌ಲೋಡ್ ಮಾಡುವ Apple ಆ್ಯಪ್‌ಗಳಂತಹ, ನಿಮ್ಮ ಖಾತೆಯ ಕುರಿತಾದ ಮಾಹಿತಿಯನ್ನು Apple ಬಳಸಬಹುದು. Apple ಆಫರ್‌ಗಳಿಗೆ ಅರ್ಹತೆಯನ್ನು ಪರಿಶೀಲಿಸಲು ನಿಮ್ಮ ಸಾಧನದ ಕ್ರಮ ಸಂಖ್ಯೆ ಅಥವಾ ನಿಮ್ಮ Apple News+ ಸಬ್‌ಕ್ರಿಪ್ಶನ್‌ನ ವಿವರಗಳನ್ನು ಬಳಸಬಹುದು. ನೀವು ಕುಟುಂಬ ಹಂಚಿಕೆ ಗುಂಪಿನಲ್ಲಿದ್ದರೆ, ಕುಟುಂಬ ಹಂಚಿಕೆಯ ಮೂಲಕ ನಿಮಗೆ ಲಭ್ಯವಿರುವ ಉತ್ಪನ್ನಗಳು, ಸೇವೆಗಳು ಮತ್ತು ಆಫರ್‌ಗಳ ಕುರಿತಾದ ಸಂವಹನಗಳನ್ನು Apple ಕಳುಹಿಸಬಹುದು. ನೀವು Apple One ಸಬ್‌ಸ್ಕ್ರಿಪ್ಶನ್ ಅನ್ನು ಖರೀದಿಸಿದರೆ, ನೀವು ಸಬ್‌ಸ್ಕ್ರೈಬ್ ಮಾಡಿರುವ ಪ್ರತಿಯೊಂದು ಸೇವೆಗಳ ಫೀಚರ್‌ಗಳ ಕುರಿತು ನಾವು ನಿಮಗೆ ಈಮೇಲ್‌ಗಳು ಹಾಗೂ push ನೋಟಿಫಿಕೇಷನ್ಸ್ ಅನ್ನು ಕಳುಹಿಸಬಹುದು. ನಮ್ಮ ಸೇವೆಗಳನ್ನು ಸುಧಾರಿಸಲು, ನಮ್ಮ ಸಂವಹನಗಳ ಜೊತೆಗೆ ನೀವು ಮಾಡುವ ಸಂವಾದಗಳ ಕುರಿತ ಮಾಹಿತಿಯನ್ನು Apple ಬಳಸುತ್ತದೆ.

ಜಾಹೀರಾತು

ಅದ್ಭುತವಾದ ಕಂಟೆಂಟ್ ಅನ್ನು ಡೆಲಿವರ್ ಮಾಡಲು, ಸ್ಟಾಕ್ ‌ಆ್ಯಪ್ ಜಾಹೀರಾತು-ಬೆಂಬಲಿತವಾಗಿರುತ್ತದೆ. ವೈಯಕ್ತೀಕರಿಸಿದ ಜಾಹೀರಾತುಗಳ ಸೆಟ್ಟಿಂಗ್ ಅನ್ನು ಆನ್ ಮಾಡಿದ್ದರೆ, Appleನ ಜಾಹೀರಾತು ಪ್ಲ್ಯಾಟ್‌ಫಾರ್ಮ್ ನಿಮಗೆ ಹೆಚ್ಚು ಸೂಕ್ತವಾದ ಜಾಹೀರಾತುಗಳನ್ನು ನೀಡಲು ನಿಮ್ಮ ಮಾಹಿತಿಯನ್ನು ಬಳಸಬಹುದು. ವೈಯಕ್ತೀಕರಿಸಿದ ಜಾಹೀರಾತುಗಳನ್ನು ಆಫ್ ಮಾಡುವುದರಿಂದ Apple ಈ ಮಾಹಿತಿಯನ್ನು ಜಾಹೀರಾತು ಟಾರ್ಗೆಟಿಂಗ್‌ಗಾಗಿ ಬಳಸದಂತೆ ತಡೆಯುತ್ತದೆ. ಇದು ನೀವು ಸ್ವೀಕರಿಸುವ ಆ್ಯ‌ಡ್‌ಗಳ ಸಂಖ್ಯೆಯನ್ನು ಕಡಿಮೆ ಮಾಡದಿರಬಹುದು, ಆದರೆ ಆ್ಯ‌ಡ್‌ಗಳು ನಿಮಗೆ ಕಡಿಮೆ ಸೂಕ್ತವೆನಿಸಬಹುದು. ನಿಮ್ಮ iOS, iPadOS ಅಥವಾ visionOS ಸಾಧನದಲ್ಲಿ, ಸೆಟ್ಟಿಂಗ್ > ಗೌಪ್ಯತೆ ಮತ್ತು ಭದ್ರತೆ> Apple ಜಾಹೀರಾತು ಎಂಬಲ್ಲಿಗೆ ಹೋಗುವ ಮೂಲಕ, ನಂತರ ವೈಯಕ್ತೀಕರಿಸಿದ ಆ್ಯ‌ಡ್‌ಗಳನ್ನು ಆಫ್ ಮಾಡಿಯನ್ನು ಟ್ಯಾಪ್ ಮಾಡುವ ಮೂಲಕ ವೈಯಕ್ತೀಕರಿಸಿದ ಆ್ಯ‌ಡ್‌ಗಳನ್ನು ನೀವು ಆಫ್ ಮಾಡಬಹುದು. ನಿಮ್ಮ Macನಲ್ಲಿ, ಸಿಸ್ಟಂ ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > Apple ಜಾಹೀರಾತು ಎಂಬಲ್ಲಿಗೆ ಹೋಗಿ ಮತ್ತು ವೈಯಕ್ತೀಕರಿಸಿದ ಜಾಹೀರಾತುಗಳ ಆಯ್ಕೆಯನ್ನು ರದ್ದುಮಾಡಿ. Apple Newsನಲ್ಲಿ ಮತ್ತು ಸ್ಟಾಕ್ಸ್ ಆ್ಯಪ್‌ಗಳಲ್ಲಿ ನೀವು ಓದುವ ಮತ್ತು ಆಲಿಸುವ ಸ್ಟೋರಿಗಳನ್ನು ನೀವು Apple News ಅಥವಾ ಸ್ಟಾಕ್ಸ್ ಆ್ಯಪ್‌ಗಳನ್ನು ಬಳಸುವಾಗ ನಿಮಗೆ ಜಾಹೀರಾತುಗಳನ್ನು ಕಳುಹಿಸಲು ಮಾತ್ರ ಬಳಸುತ್ತೇವೆ.

ಸ್ಟಾಕ್ಸ್‌ನ ವಾಖ್ಯೆಗಳು ಮತ್ತು ಡೇಟವನ್ನು (ಮತ್ತು ಅಮೆರಿಕ, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ ಹಾಗೈ ಕೆನಡಾದ ಹೊರಗಿನ ಬಳಕೆದಾರರು ಅನುಸರಿಸುವ ಸ್ಟಾಕ್ಸ್‌ಗೆ ಕುರಿತ ಸುದ್ದಿಯ ಸ್ಟೋರಿಗಳು) Appleನ ಅಗತ್ಯಗಳಿಗೆ ತಕ್ಕಂತೆ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವ ಅಗತ್ಯವಿರುವ ಸಹಭಾಗಿಗಳು ಒದಗಿಸುತ್ತಾರೆ.

ವೈಯುಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುವುದಕ್ಕಾಗಿ ಅನ್ವಯವಾಗುವ ಕಾನೂನುಬದ್ಧ ಆಧಾರ

ಅನ್ವಯವಾಗುವ ಸ್ಥಳೀಯ ಕಾನೂನು ಅನ್ವಯವಾಗುವಲ್ಲಿ, ನಮ್ಮ ಕಾನೂನುಬದ್ಧ ಹಿತಾಸಕ್ತಿಗಳ ಉದ್ದೇಶಗಳಿಗಾಗಿ ಅಗತ್ಯವಿರುವಂತೆ ನಾವು ಸ್ಟಾಕ್ಸ್ ಆ್ಯಪ್‌ನಲ್ಲಿ ಈ ಕೆಳಗಿನ ವರ್ಗದ ವೈಯಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುತ್ತೇವೆ:

  • Apple News+ಗೆ ನಿಮ್ಮ ಸಬ್‌ಸ್ಕ್ರಿಪ್ಷನ್‌ಗಳಂತಹ ನಿಮ್ಮ ಖಾತೆಯ ಮಾಹಿತಿ

ಈ ಕಾನೂನುಬದ್ಧವಾದ ಆಸಕ್ತಿಗಳು ಇವುಗಳನ್ನು ಒಳಗೊಂಡಿರುತ್ತವೆ:

  • ನಿಮಗೆ ಹಾಗೂ ಇತರರಿಗೆ ಸೇವೆಯನ್ನು ಗರಿಷ್ಠಗೊಳಿಸುವುದು ಹಾಗೂ ಸುಧಾರಿಸುವುದು
  • ನಿಮಗೆ ಲಭ್ಯವಿರುವ ಕಂಟೆಂಟ್ ಅನ್ನು ಡಿಸ್‌ಪ್ಲೇ ಮಾಡುತ್ತದೆ
  • ಆಫರ್‌ಗಳಿಗೆ ಅರ್ಹತೆಯನ್ನು ಪರಿಶೀಲಿಸಿ ಮತ್ತು Apple News ಹಾಗೂ Apple One ಕುರಿತು ನಿಮ್ಮೊಂದಿಗೆ ಸಂವಹನ ನಡೆಸಿ

ರಿಟೆನ್ಶನ್

ನಾವು ಸ್ಟಾಕ್‌ಗೆ ಸಂಬಂಧಿಸಿದ ವೈಯಕ್ತಿಕ ಡೇಟವನ್ನು ನಮಗೆ ಉದ್ಯಮದ ಅಗತ್ಯವಿರುವವರೆಗೆ, ಒಪ್ಪಂದಗಳ ಬಾಧ್ಯತೆಗಳು, ಅಥವಾ ಕಾನೂನು ಅಗತ್ಯವಿರುವವರೆಗೆ ಮಾತ್ರವೇ ಉಳಿಸಿಕೊಳ್ಳುತ್ತೇವೆ. ರಿಟೆನ್ಷನ್ ಅವಧಿಯನ್ನು ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಮೊದಲಿಗೆ ಸಂಗ್ರಹಿಸಿದ ವೈಯಕ್ತಿಕ ಡೇಟವನ್ನು ಉಳಿಸಿಕೊಳ್ಳುವುದು ಅಗತ್ಯವೇ ಎಂದು ಜಾಗರೂಕವಾಗಿ ಪರೀಕ್ಷಿಸುತ್ತೇವೆ, ನಂತರ ರಿಟೆನ್ಷನ್ ಅಗತ್ಯವಿದ್ದಲ್ಲಿ, ಕಾನೂನಿನ ಅಡಿಯಲ್ಲಿ ಅವಕಾಶ ನೀಡಲಾಗಿರುವ ಅತಿ ಕಡಿಮೆ ಅವಧಿಗೆ ವೈಯಕ್ತಿಕ ಡೇಟವನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇವೆ.

ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.

2025-12-12