ಪಠ್ಯ ಸಂದೇಶ ಫಿಲ್ಟರಿಂಗ್ ಮತ್ತು ಗೌಪ್ಯತೆ
ಅಪರಿಚಿತ RCS ಮತ್ತು MMS ಸಂದೇಶಗಳನ್ನು ಪತ್ತೆಮಾಡಲು ಮತ್ತು ಫಿಲ್ಟರ್ ಮಾಡಲು ಪಠ್ಯ ಸಂದೇಶದ ಫಿಲ್ಟರ್‌ಗಳು ವಿಧಾನವನ್ನು ಒದಗಿಸುತ್ತವೆ.
ನೀವು ಥರ್ಡ್ ಪಾರ್ಟಿ ಪಠ್ಯ ಸಂದೇಶ ಫಿಲ್ಟರ್‌ಗಳನ್ನು ಇನ್‌ಸ್ಟಾಲ್ ಮಾಡಬಹುದು ಮತ್ತು ಬಳಸಬಹುದು. ನೀವು ಇದನ್ನು ಮಾಡಿದರೆ, ಥರ್ಡ್-ಪಾರ್ಟಿ ಫಿಲ್ಟರ್ ಪೂರೈಕೆದಾರರು ಅಪರಿಚಿತ ಕಳುಹಿಸುವವರಿಂದ ನೀವು ಸ್ವೀಕರಿಸುವ ಒಳಬರುವ RCS, SMS ಮತ್ತು MMS ಸಂದೇಶಗಳಲ್ಲಿ ಎಲ್ಲಾ ಪಠ್ಯ ಮತ್ತು ಕಂಟೆಂಟ್ ಅನ್ನು ಆಕ್ಸೆಸ್ ಮಾಡಬಹುದು. ಈ ಸಂದೇಶಗಳು ಬ್ಯಾಂಕ್‌ಗಳು ಅಥವಾ ಇತರ ಸಂಸ್ಥೆಗಳಿಂದ ಪರಿಶೀಲನೆ ಕೋಡ್‌ಗಳನ್ನು ಒಳಗೊಂಡಿರಬಹುದು, ಹಾಗೆಯೇ RCS, SMS ಮತ್ತು MMS ಸಂದೇಶಗಳಲ್ಲಿರಬಹುದಾದ ಇತರ ವೈಯಕ್ತಿಕ ಅಥವಾ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿರಬಹುದು. ನೀವು ಥರ್ಡ್-ಪಾರ್ಟಿ ಪೂರೈಕೆದಾರರ ಪಠ್ಯ ಸ್ಪ್ಯಾಮ್ ಫಿಲ್ಟರ್ ಅನ್ನು ಬಳಸಿದಾಗ, ನೀವು ಫಿಲ್ಟರ್ ಪೂರೈಕೆದಾರರ ನಿಯಮಗಳು, ಗೌಪ್ಯತೆ ನೀತಿ ಮತ್ತು ಅಭ್ಯಾಸಗಳಿಗೆ ಒಳಪಟ್ಟಿರುತ್ತೀರಿ. ಆ ಥರ್ಡ್ ಪಾರ್ಟಿಗಳ ನಿಯಮಗಳು, ಗೌಪ್ಯತೆ ನೀತಿಗಳು ಮತ್ತು ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಥರ್ಡ್-ಪಾರ್ಟಿಯ ಪಠ್ಯ ಸಂದೇಶ ಸ್ಪ್ಯಾಮ್ ಫಿಲ್ಟರ್ ಅನ್ನು ತೆಗೆದುಹಾಕಲು, ಸೆಟ್ಟಿಂಗ್ಸ್ > ಆ್ಯಪ್‌ಗಳು > ಸಂದೇಶ ಆ್ಯಪ್ > ಅಜ್ಞಾತ ಮತ್ತು ಸ್ಪ್ಯಾಮ್ ಎಂಬುದಕ್ಕೆ ಹೋಗಿ ಮತ್ತು ಪಟ್ಟಿಯಿಂದ ಫಿಲ್ಟರ್ ಅನ್ನು ತೆಗೆದುಹಾಕಿ.
ನೀವು ಪಠ್ಯ ಸಂದೇಶಕ್ಕೆ ಮೂರು ಬಾರಿ ಪ್ರತಿಕ್ರಿಯಿಸಿದ ನಂತರ ಅಥವಾ ಕಳುಹಿಸುವವರನ್ನು ನಿಮ್ಮ ಸಂಪರ್ಕಗಳಿಗೆ ಸೇರಿಸಿದ ನಂತರ, ಆ ಕಳುಹಿಸುವವರಿಂದ ಬರುವ ಪಠ್ಯ ಸಂದೇಶಗಳನ್ನು ಅಪರಿಚಿತ ಕಳುಹಿಸುವವರು ಎಂದು ಫಿಲ್ಟರ್ ಮಾಡಲಾಗುವುದಿಲ್ಲ.
ಬ್ರೆಜಿಲ್ ಮತ್ತು ಭಾರತದಲ್ಲಿನ ಸಂದೇಶ ಆ್ಯಪ್‌ನ ಬಳಕೆದಾರರಿಗಾಗಿ
ಬಳಕೆದಾರರಿಗೆ ಅವರ ಸಂದೇಶಗಳನ್ನು ವ್ಯವಸ್ಥಿತಗೊಳಿಸಲು ಸಹಾಯ ಮಾಡುವುದಕ್ಕಾಗಿ ಪಠ್ಯ ಸಂದೇಶದ ಫಿಲ್ಟರ್ ಅನ್ನು ಡಿಫಾಲ್ಟ್ ಆಗಿ ಸಕ್ರಿಯಗೊಳಿಸಲಾಗಿದೆ. ಸಾಧನದಲ್ಲಿನ ಮಷೀನ್ ಲರ್ನಿಂಗ್ ಅನ್ನು ಬಳಸಿಕೊಂಡು, ಅಪರಿಚಿತ ಕಳುಹಿಸುವವರಿಂದ ಬರುವ ಸಂದೇಶಗಳನ್ನು ಎರಡು ಉಪವರ್ಗಗಳಾಗಿ ವಿಂಗಡಿಸಬಹುದು: ವಹಿವಾಟುಗಳು ಅಥವಾ ಪ್ರೋಮೋಷನ್‌ಗಳು. ಪಠ್ಯ ಸಂದೇಶದ ಫಿಲ್ಟರ್, ಸಂದೇಶ ಆ್ಯಪ್‌ನಿಂದ Appleಗೆ ಯಾವುದೇ ಕಂಟೆಂಟ್ ಅಥವಾ ಡೇಟವನ್ನು ಕಳುಹಿಸುವುದಿಲ್ಲ. ಸೆಟ್ಟಿಂಗ್ಸ್ > ಆ್ಯಪ್‌ಗಳು > ಸಂದೇಶ > ಅಜ್ಞಾತ ಮತ್ತು ಸ್ಪ್ಯಾಮ್ ಎಂಬುದಕ್ಕೆ ಹೋಗುವ ಮೂಲಕ ಮತ್ತು ಪಟ್ಟಿಯಿಂದ "ಯಾವುದೂ ಬೇಡ” ಎಂಬುದನ್ನು ಆಯ್ಕೆ ಮಾಡುವ ಮೂಲಕ ನೀವು ಯಾವುದೇ ಸಮಯದಲ್ಲಿ ಪಠ್ಯ ಸಂದೇಶದ ಫಿಲ್ಟರ್ ಅನ್ನು ನಿಷ್ಕ್ರಿಯಗೊಳಿಸಬಹುದು.
2025-12-12