ಅನುವಾದ ಮತ್ತು ಗೌಪ್ಯತೆ

ನಿಮ್ಮ ಮಾಹಿತಿಯನ್ನು ಕಾಪಾಡಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವುದಕ್ಕೆ ಅನುವುಮಾಡಿಕೊಡಲು ಅನುವಾದ ಆ್ಯಪ್ ಮತ್ತು ಸಿಸ್ಟಂನೆಲ್ಲೆಡೆ ದೊರೆಯುವ ಅನುವಾದವನ್ನು ವಿನ್ಯಾಸಗೊಳಿಸಲಾಗಿದೆ.


ನೀವು ಅನುವಾದಿಸಲು ಆಯ್ಕೆಮಾಡಿದ ಆಡಿಯೊ ಮತ್ತು ಪಠ್ಯವನ್ನು (ಚಿತ್ರಗಳಲ್ಲಿ ಗುರುತಿಸಲಾದ ಪಠ್ಯವನ್ನು ಒಳಗೊಂಡಂತೆ) ನಿಮ್ಮ ವಿನಂತಿಗಳನ್ನು ಪ್ರಕ್ರಿಯೆಗೊಳಿಸಲು Appleಗೆ ಕಳುಹಿಸಬಹುದು. ನಿಮ್ಮ ವಿನಂತಿಗಳು ಒಂದು ಯಾದೃಚ್ಛಿಕವಾದ ರೋಟೆಟಿಂಗ್ ಐಡೆಂಟಿಫೈಯರ್ ಜೊತೆಗೆ ಸಂಯೋಜಿಸಲ್ಪಟ್ಟಿವೆಯೇ ಹೊರತು ನಿಮ್ಮ Apple ಖಾತೆ, ಈಮೇಲ್ ವಿಳಾಸ ಅಥವಾ ನೀವು ಬಳಕೆ ಮಾಡುವ ಇತರ Apple ಸೇವೆಗಳಿಂದ Apple ಪಡೆದುಕೊಂಡಿರಬಹುದಾದ ಇತರ ಡೇಟದೊಂದಿಗೆ ಸಂಯೋಜಿತವಾಗಿಲ್ಲ. ಡಿಫಾಲ್ಟ್ ಆಗಿ, Apple ಎರಡು ವರ್ಷಗಳವರೆಗೆ ನಿಮ್ಮ ಆಡಿಯೊ ಸಂವಹನಗಳ ಟ್ರಾನ್ಸ್‌ಕ್ರಿಪ್ಟ್‌ಗಳನ್ನು ಮತ್ತು ನಿಮ್ಮ ಪಠ್ಯ ಇನ್‌ಪುಟ್‌ಗಳನ್ನು ಸಂಗ್ರಹಿಸುತ್ತದೆ ಮತ್ತು ಈ ಪ್ರತಿಗಳ ಉಪವಿಭಾಗವನ್ನು ಪರಿಶೀಲಿಸಬಹುದು. ಅನುವಾದ, ಸಿಸ್ಟಂನೆಲ್ಲೆಡೆ ದೊರೆಯುವ ಅನುವಾದ ಮತ್ತು Siriಯಂತಹ ಇತರ ನೈಸರ್ಗಿಕ ಭಾಷಾ ಸಂಸ್ಕರಣಾ ಫೀಚರ್‌ಗಳನ್ನು ನಿರಂತರವಾಗಿ ಸುಧಾರಿಸಲು ಪರಿಶೀಲಿಸಲಾದ ವಿನಂತಿಗಳ ಉಪವಿಭಾಗವನ್ನು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಉಳಿಸಿಕೊಳ್ಳಬಹುದು.

ನಿಮ್ಮ ಸಾಧನಕ್ಕೆ ನೀವು ಭಾಷೆಗಳನ್ನು ಡೌನ್‌ಲೋಡ್ ಮಾಡಬಹುದು. ನೀವು ಅನುವಾದಿಸುತ್ತಿರುವ ಭಾಷೆಗಳೆರಡನ್ನೂ ಡೌನ್‌ಲೋಡ್ ಮಾಡಿದಾಗ, ನಿಮ್ಮ ಸಾಧನದಲ್ಲಿ ಪ್ರಕ್ರಿಯೆ ನಡೆಯುತ್ತದೆ.

ನ್ಯಾವಿಗೇಷನ್‌ಗಾಗಿ ಅಥವಾ ಯಾವುದೇ ವೈದ್ಯಕೀಯ ಸ್ಥಿತಿಯ ಡಯಾಗ್ನಸಿಸ್ ಅಥವಾ ಚಿಕಿತ್ಸೆಗಾಗಿ ನೀವು ಅನುವಾದವನ್ನು ಅವಲಂಬಿಸಬಾರದು, ನೀವು ಗಾಯಗೊಂಡ ಅಥವಾ ಹಾನಿಗೊಳಗಾಗಬಹುದಾದ ಹೆಚ್ಚಿನ ಅಪಾಯದ ಸಂದರ್ಭಗಳಲ್ಲಿ ಸೇರಿದಂತೆ.

Siri & ಡಿಕ್ಟೇಷನ್ ಅನ್ನು ಸುಧಾರಿಸಲು ಆಯ್ಕೆ ಮಾಡುವ ಮೂಲಕ ನಿಮ್ಮ ಆಡಿಯೊ ಸಂವಹನಗಳನ್ನು ಸಂಗ್ರಹಿಸಲು ಮತ್ತು ಪರಿಶೀಲಿಸಲು Appleಗೆ ಅನುಮತಿಸುವ ಮೂಲಕ ಅನುವಾದದ ಧ್ವನಿ ಅನುವಾದವನ್ನು ಸುಧಾರಿಸಲು ನೀವು ಸಹಾಯ ಮಾಡಬಹುದು. ಹಾಗೆ ಮಾಡಲು, ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > ಅನಾಲಿಟಿಕ್ಸ್ ಮತ್ತು ಸುಧಾರಣೆಗಳಿಗೆ ಹೋಗಿ ಮತ್ತು “Siri ಮತ್ತು ಡಿಕ್ಟೇಷನ್ ಅನ್ನು ಸುಧಾರಿಸಿ” ಎಂಬುದನ್ನು ಆನ್ ಮಾಡಲು ಟ್ಯಾಪ್ ಮಾಡಿ.

2026-02-11