ಹಂತ-ಹಂತದ ಸಹಾಯ ಮತ್ತು ಗೌಪ್ಯತೆ

ನೀವು ಹಂತ-ಹಂತದ ಸಹಾಯವನ್ನು ಬಳಸುವಾಗ, ಸಾಮಾನ್ಯ ಸಾಧನ ಸಮಸ್ಯೆಗಳನ್ನು ನೀವಾಗಿಯೇ ಪತ್ತೆಹಚ್ಚಲು ಮತ್ತು ಪರಿಹರಿಸಲು ಸಹಾಯ ಮಾಡುವುದಕ್ಕಾಗಿ Apple ನಿಮ್ಮ ಸಾಧನದ ಕುರಿತು ಮಾಹಿತಿಯನ್ನು ಸಂಗ್ರಹಿಸುತ್ತದೆ. ನೀವು ಹಂತ-ಹಂತದ ಸಹಾಯದ ಮೂಲಕ Apple ಬೆಂಬಲವನ್ನು ಸಂಪರ್ಕಿಸಲು ಆರಿಸಿದರೆ, ನಿಮಗೆ ಸಹಾಯ ಮಾಡಲು Apple ಸಲಹೆಗಾರರಿಗೆ ನೀವು ಹೆಚ್ಚುವರಿ ಮಾಹಿತಿಯನ್ನು ಹಂಚಿಕೊಳ್ಳಬಹುದು.
 

ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಹಂತ-ಹಂತದ ಸಹಾಯವನ್ನು ವಿನ್ಯಾಸಗೊಳಿಸಲಾಗಿದೆ.


Privacy Icon

  • ನೀವು ಹಂತ-ಹಂತದ ಸಹಾಯವನ್ನು ಬಳಸುವಾಗ, Apple ನಿಮ್ಮ ಸಾಧನದ ಮಾಡಲ್, ಕ್ರಮ ಸಂಖ್ಯೆ, ಆಪರೇಟಿಂಗ್ ಸಿಸ್ಟಂ ಹಾಗೂ ದೇಶ ಮತ್ತು ಭಾಷೆಯ ಸೆಟ್ಟಿಂಗ್ಸ್ ಅನ್ನು ಸಂಗ್ರಹಿಸುತ್ತದೆ ಮತ್ತು ಸಾಮಾನ್ಯ ಸಾಧನದ ಸಮಸ್ಯೆಗಳನ್ನು ನೀವಾಗಿಯೇ ಪತ್ತೆಹಚ್ಚಲು ಮತ್ತು ಪರಿಹರಿಸುವುದಕ್ಕೆ ನಿಮಗೆ ಸಹಾಯ ಮಾಡಲು ಶಿಫಾರಸುಗಳನ್ನು ಒದಗಿಸುತ್ತದೆ.
  • ನೀವು ಹಂತ-ಹಂತದ ಸಹಾಯದ ಮೂಲಕ Apple ಬೆಂಬಲವನ್ನು ಸಂಪರ್ಕಿಸಿದರೆ, Apple ಸಲಹೆಗಾರರಿಗೆ ನಿಮಗೆ ಸಹಾಯ ಮಾಡಲು ಹಂತ-ಹಂತದ ಸಹಾಯದ ನಿಮ್ಮ ಬಳಕೆಗೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿಯನ್ನು ನೀವು Appleನೊಂದಿಗೆ ಹಂಚಿಕೊಳ್ಳಲು ಆಯ್ಕೆಮಾಡಬಹುದು. ಈ ಮಾಹಿತಿಯನ್ನು ನಿಮ್ಮ Apple ಖಾತೆಯೊಂದಿಗೆ ಸಂಯೋಜಿಸಲಾಗುತ್ತದೆ ಮತ್ತು ಬೆಂಬಲ ಪ್ರಕರಣವನ್ನು ತೆರೆಯಲು ಬಳಸಲಾಗುತ್ತದೆ.

ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಹಂತ-ಹಂತದ ಸಹಾಯವನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅನುಭವವನ್ನು ಉತ್ತಮಗೊಳಿಸಲು ನಮಗೆ ಅಗತ್ಯವಿರುವ ಡೇಟವನ್ನು ಮಾತ್ರ ಸಂಗ್ರಹಿಸಲು ನಾವು ಶ್ರಮಿಸುತ್ತೇವೆ. ನಾವು ಡೇಟವನ್ನು ಸಂಗ್ರಹಿಸಿದಾಗ, ನಾವು ಏನನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ನಮಗೆ ಅದರ ಅಗತ್ಯ ಏಕಿದೆ ಎಂಬುದು ನಿಮಗೆ ತಿಳಿದಿದ್ದರೆ ನೀವು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಅದು ನೆರವಾಗುತ್ತದೆ ಎಂದು ನಾವು ಭಾವಿಸುತ್ತೇವೆ.

ಸ್ವಯಂ-ಸೇವೆಯ ಬೆಂಬಲ

ಹಂತ-ಹಂತದ ಸಹಾಯ ಸಾಮಾನ್ಯ ಪ್ರಶ್ನೆಗಳಿಗೆ ಮತ್ತು ಟ್ರಬಲ್‌ಶೂಟಿಂಗ್ ಅಗತ್ಯತೆಗಳ ಕುರಿತು ಸಹಾಯವನ್ನು ಒದಗಿಸುತ್ತದೆ. ನಿಮ್ಮ ಸಾಧನದ ಕೀಪ್ಯಾಡ್‌ನಲ್ಲಿ Apple ಬೆಂಬಲದ ಫೋನ್ ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ಮತ್ತು ಹಂತ-ಹಂತದ ಸಹಾಯ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ, ನಿಮ್ಮ ಸಾಧನದಲ್ಲಿನ ಸಮಸ್ಯೆಯನ್ನು ಪರಿಹರಿಸಲು Siriಯ ಸಹಾಯ ಕೇಳುವ ಮೂಲಕ ಅಥವಾ ಸಲಹೆ ಆ್ಯಪ್‌ಗೆ ನ್ಯಾವಿಗೇಟ್ ಮಾಡುವ ಮೂಲಕ ನೀವು ಯಾವುದೇ ಸಮಯದಲ್ಲಿ ಹಂತ-ಹಂತದ ಸಹಾಯವನ್ನು ಆ್ಯಕ್ಸೆಸ್ ಮಾಡಬಹುದು. ನೀವು ಹಂತ-ಹಂತದ ಸಹಾಯವನ್ನು ಬಳಸುವಾಗ, ಸಾಮಾನ್ಯ ಸಾಧನ ಸಮಸ್ಯೆಗಳನ್ನು ಪತ್ತೆಹಚ್ಚಲು ಮತ್ತು ಪರಿಹರಿಸಲು ನಿಮಗೆ ಸಹಾಯ ಮಾಡುವ ಕಂಟೆಂಟ್ ಅನ್ನು ಶಿಫಾರಸು ಮಾಡಲು Apple ನಿಮ್ಮ ಸಾಧನದ ಮಾಡಲ್, ಕ್ರಮ ಸಂಖ್ಯೆ, ಆಪರೇಟಿಂಗ್ ಸಿಸ್ಟಂ ಹಾಗೂ ದೇಶ ಮತ್ತು ಭಾಷೆಯ ಸೆಟ್ಟಿಂಗ್ಸ್ ಸೇರಿದಂತೆ ನಿಮ್ಮ ಸಾಧನದ ಮಾಹಿತಿಯನ್ನು ಸಂಗ್ರಹಿಸುತ್ತದೆ.

Apple ಬೆಂಬಲವನ್ನು ಸಂಪರ್ಕಿಸಲಾಗುತ್ತಿದೆ
ಹಂತ-ಹಂತದ ಸಹಾಯವನ್ನು ಬಳಸಿಕೊಂಡು ನಿಮ್ಮ ಸಾಧನದ ಸಮಸ್ಯೆಗಳನ್ನು ನಿಮ್ಮಷ್ಟಕ್ಕೆ ಪರಿಹರಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಹೆಚ್ಚುವರಿ ಬೆಂಬಲವನ್ನು ಪಡೆಯಲು ನೀವು ಹಂತ-ಹಂತದ ಸಹಾಯದ ಮೂಲಕ ನೇರವಾಗಿ Apple ಸಲಹೆಗಾರರನ್ನು ಸಂಪರ್ಕಿಸಲು ಆಯ್ಕೆ ಮಾಡಬಹುದು. ಹಂತ-ಹಂತದ ಸಹಾಯದಿಂದ Apple ಬೆಂಬಲಕ್ಕೆ ಸುವ್ಯವಸ್ಥಿತ ಹಸ್ತಾಂತರವನ್ನು ಸುಗಮಗೊಳಿಸಲು, ನೀವು ಹಂತ-ಹಂತದ ಸಹಾಯದ ಬಳಕೆಗೆ ಸಂಬಂಧಿಸಿದ ಮಾಹಿತಿ ಮತ್ತು ನೀವು ಪರಿಹರಿಸಲು ಪ್ರಯತ್ನಿಸುತ್ತಿರುವ ನಿರ್ದಿಷ್ಟ ಸಮಸ್ಯೆಯ ಕುರಿತಾದ ಮಾಹಿತಿಯನ್ನು ಹಂಚಿಕೊಳ್ಳಲು ಆಯ್ಕೆ ಮಾಡಬಹುದು. ನೀವು Apple ಬೆಂಬಲದೊಂದಿಗೆ ಹಂಚಿಕೊಳ್ಳಲು ಆಯ್ಕೆ ಮಾಡಿಕೊಂಡ ಮಾಹಿತಿಯನ್ನು ವಂಚನೆ ಪತ್ತೆಹಚ್ಚುವಿಕೆ ಉದ್ದೇಶಗಳಿಗಾಗಿಯೂ ಬಳಸಬಹುದು. ನೀವು ಹಂಚಿಕೊಳ್ಳಬಹುದಾದ ಮಾಹಿತಿಯು ಇವುಗಳನ್ನು ಒಳಗೊಂಡಿರುತ್ತದೆ:

  • ನೀವು Apple ಖಾತೆಯನ್ನು ಸೆಟಪ್ ಮಾಡಿದ್ದೀರಾ ಮತ್ತು ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿರುವ ಹೆಸರು, ಈಮೇಲ್ ವಿಳಾಸ, ಫೋನ್ ಸಂಖ್ಯೆ ಮತ್ತು ಅನನ್ಯ ಗುರುತಿಸುವಿಕೆಯಂತಹ Apple ಖಾತೆ ಡೇಟ
  • iMessage ಅನ್ನು ಆನ್ ಮಾಡಲಾಗಿದೆಯೇ ಎಂಬಂತಹ ಸಂದೇಶ ಸೆಟ್ಟಿಂಗ್ಸ್
  • ನಿಮ್ಮ Wi-Fi ಆನ್ ಆಗಿದೆಯೇ ಮತ್ತು ಕನೆಕ್ಟ್ ಆಗಿದೆಯೇ ಎಂಬಂತಹ Wi-Fi ಸ್ಟೇಟಸ್
  • Bluetooth ಆನ್ ಆಗಿದೆಯೇ ಮತ್ತು ವೈರ್‌ಲೆಸ್ ಇಯರ್‌ಬಡ್ಸ್ ಕನೆಕ್ಟ್ ಆಗಿವೆಯೇ ಎಂಬಂತಹ Bluetooth ಸೆಟ್ಟಿಂಗ್ಸ್ ಮತ್ತು ಕನೆಕ್ಟ್ ಆಗಿರುವ ಸಾಧನಗಳು
  • ನಿಮ್ಮ ಬಳಿ ಈಮೇಲ್ ಖಾತೆ ಸೆಟಪ್ ಇದೆಯೇ ಎಂಬಂತಹ Mail ಖಾತೆ ಸೆಟ್ಟಿಂಗ್ಸ್
  • ನೀವು ಸ್ವಯಂಚಾಲಿತ ಅಪ್‌ಡೇಟ್‌ಗಳನ್ನು ಆನ್ ಮಾಡಿದ್ದೀರಾ ಎಂಬಂತಹ ಸ್ವಯಂಚಾಲಿತ ಅಪ್‌ಡೇಟ್‌ಗಳ ಸೆಟ್ಟಿಂಗ್ಸ್
  • ನಿಮ್ಮ VPN ಆನ್ ಆಗಿದೆಯೇ ಮತ್ತು ಕನೆಕ್ಟ್ ಆಗಿದೆಯೇ ಎಂಬಂತಹ VPN ಸೆಟ್ಟಿಂಗ್ಸ್
  • ಸಾಫ್ಟ್‌ವೇರ್ ಆವೃತ್ತಿ ಮತ್ತು ನಿಮ್ಮ ಸಾಧನಕ್ಕಾಗಿ ಸಾಫ್ಟ್‌ವೇರ್ ಅಪ್‌ಡೇಟ್ ಇದೆಯೋ ಅಥವಾ ಇಲ್ಲವೋ ಎಂಬ ಮಾಹಿತಿ
  • ನಿಮ್ಮ ಹಂತ-ಹಂತದ ಸಹಾಯದ ಸೆಶನ್‌ನಲ್ಲಿನ ನಿಮ್ಮ ಸಂವಹನಗಳು, ಟ್ರಬಲ್‌ಶೂಟಿಂಗ್ ಪ್ರಶ್ನೆಗಳಿಗೆ ಸಂಬಂಧಿಸಿದ ನಿಮ್ಮ ಪ್ರತಿಕ್ರಿಯೆಗಳು ಮತ್ತು ಹಂತ-ಹಂತದ ಸಹಾಯದಲ್ಲಿ ನೀವು ಟೈಪ್ ಮಾಡುವ ಹುಡುಕಾಟಗಳು, ಶಿಫಾರಸು ಮಾಡಲಾದ ಸಾಧನದ ಸೆಟ್ಟಿಂಗ್ಸ್ ಅನ್ನು ತೆರೆಯುವಂತಹ ಹಂತ-ಹಂತದ ಸಹಾಯ ಕುರಿತಾದ ಸಲಹೆಗಳ ಆಧಾರದ ಮೇಲೆ ನೀವು ತೆಗೆದುಕೊಂಡ ಕ್ರಮಗಳು ಮತ್ತು ನಿಮಗೆ ಸೂಚಿಸಲಾದ ಹಾಗೂ ನೀವು ತೆರೆದಿರುವ ಹಂತ-ಹಂತದ ಸಹಾಯದ ಲೇಖನಗಳನ್ನು ಒಳಗೊಂಡಿವೆ

Appleಗೆ ಕಳುಹಿಸಲಾದ ಡೇಟವನ್ನು ವಿಶ್ವಾಸಾರ್ಹ ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರು ಪ್ರಕ್ರಿಯೆಗೊಳಿಸಬಹುದು ಮತ್ತು ಸಂಗ್ರಹಿಸಬಹುದು.

ರಿಟೆನ್ಶನ್

ವೈಯಕ್ತಿಕ ಡೇಟವನ್ನು ಸಂಗ್ರಹಿಸಿದ ಉದ್ದೇಶಗಳು ಈಡೇರುವವರೆಗೆ ಮಾತ್ರವೇ ನಾವು ಅದನ್ನು ಇರಿಸಿಕೊಳ್ಳುತ್ತೇವೆ, ಈ ಉದ್ದೇಶಗಳಲ್ಲಿ Appleನ ಗೌಪ್ಯತೆ ನೀತಿಯಲ್ಲಿ ಅಥವಾ ನಮ್ಮ ಸೇವಾ-ನಿರ್ದಿಷ್ಟ ಗೌಪ್ಯತೆ ನೋಟಿಸ್‌ಗಳಲ್ಲಿ ವಿವರಿಸಿರುವ ಅಥವಾ ಕಾನೂನಿನ ಪ್ರಕಾರ ಅಗತ್ಯವಿರುವ ಉದ್ದೇಶಗಳೂ ಸೇರಿವೆ. ರಿಟೆನ್ಷನ್ ಅವಧಿಯನ್ನು ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಮೊದಲಿಗೆ ಸಂಗ್ರಹಿಸಿದ ವೈಯಕ್ತಿಕ ಡೇಟವನ್ನು ಉಳಿಸಿಕೊಳ್ಳುವುದು ಅಗತ್ಯವೇ ಎಂದು ಜಾಗರೂಕವಾಗಿ ಪರೀಕ್ಷಿಸುತ್ತೇವೆ, ನಂತರ ರಿಟೆನ್ಷನ್ ಅಗತ್ಯವಿದ್ದಲ್ಲಿ, ಕಾನೂನಿನ ಅಡಿಯಲ್ಲಿ ಅವಕಾಶ ನೀಡಲಾಗಿರುವ ಅತಿ ಕಡಿಮೆ ಅವಧಿಗೆ ವೈಯಕ್ತಿಕ ಡೇಟವನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇವೆ. ನೀವು ಹಂತ-ಹಂತದ ಸಹಾಯದ ಮೂಲಕ Apple ಬೆಂಬಲ ಬಳಸಿಕೊಂಡು ಬೆಂಬಲಕ್ಕಾಗಿ ಕೇಸ್‌ವೊಂದನ್ನು ತೆರೆದರೆ, ನಿಮ್ಮ ಬೆಂಬಲ ಕೇಸ್‌ಗೆ ಸಂಬಂಧಿಸಿದ ವೈಯಕ್ತಿಕ ಡೇಟವನ್ನು ಕನಿಷ್ಠ ಎಂಟು ವರ್ಷಗಳವರೆಗೆ ಅಥವಾ ನಿಮ್ಮ ನ್ಯಾಯವ್ಯಾಪ್ತಿಯಲ್ಲಿನ ಕಾನೂನಿನ ಪ್ರಕಾರ ಉಳಿಸಿಕೊಳ್ಳಲಾಗುತ್ತದೆ. ಹೆಚ್ಚುವರಿಯಾಗಿ, ನೀವು ಬೆಂಬಲಕ್ಕಾಗಿ ಕೇಸ್‌ವೊಂದನ್ನು ತೆರೆದಾಗ, ವಂಚನೆಯನ್ನು ಪತ್ತೆಹಚ್ಚುವ ಉದ್ದೇಶಗಳಿಗಾಗಿ ನಿಮ್ಮ ಕೆಲವು ವೈಯಕ್ತಿಕ ಡೇಟವನ್ನು ನಾವು ಉಳಿಸಿಕೊಳ್ಳಬಹುದು. ನೀವು privacy.apple.com ಎಂಬಲ್ಲಿ Appleನ ಡೇಟ ಮತ್ತು ಗೌಪ್ಯತೆ ಪುಟದ ಮೂಲಕ ಖಾತೆ ಡಿಲೀಟ್ ಮಾಡುವಿಕೆಯ ವಿನಂತಿಯನ್ನು ಸಲ್ಲಿಸಬಹುದು. ಹಂತ-ಹಂತದ ಸಹಾಯಕ್ಕೆ ಸಂಬಂಧಿಸಿದಂತೆ ನಿಮ್ಮ ವೈಯಕ್ತಿಕ ಡೇಟವನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಕುರಿತು ನೀವು ಪ್ರಶ್ನೆಗಳನ್ನು ಹೊಂದಿದ್ದರೆ ಅಥವಾ ನಮ್ಮ ಡೇಟ ರಕ್ಷಣಾ ಅಧಿಕಾರಿಯನ್ನು ಸಂಪರ್ಕಿಸಲು ಬಯಸಿದರೆ, ನೀವು www.apple.com/legal/privacy/contact ಎಂಬಲ್ಲಿ ನಮ್ಮನ್ನು ಸಂಪರ್ಕಿಸಬಹುದು.

ವೈಯುಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುವುದಕ್ಕಾಗಿ ಅನ್ವಯವಾಗುವ ಕಾನೂನುಬದ್ಧ ಆಧಾರ

ನೀವು ಹಂತ-ಹಂತದ ಸಹಾಯವನ್ನು ಬಳಸುವಾಗ ಅಥವಾ ಹಂತ-ಹಂತದ ಸಹಾಯದ ಮೂಲಕ Apple ಸಲಹೆಗಾರರೊಂದಿಗೆ ನೇರವಾಗಿ ಸಂಪರ್ಕಿಸಿದಾಗ, ಸಾಧನ-ನಿರ್ದಿಷ್ಟ ಟ್ರಬಲ್‌ಶೂಟಿಂಗ್ ಬೆಂಬಲಕ್ಕಾಗಿ ಶಿಫಾರಸುಗಳನ್ನು ಒದಗಿಸಲು ಮತ್ತು ನಮ್ಮ ಕಾನೂನು ಬಾಧ್ಯತೆಗಳನ್ನು ಅನುಸರಿಸಲು Apple ನಿಮ್ಮ ವೈಯಕ್ತಿಕ ಡೇಟವನ್ನು ಅಗತ್ಯವಿರುವಂತೆ ಪ್ರಕ್ರಿಯೆಗೊಳಿಸುತ್ತದೆ. ಸಮ್ಮತಿಯು ಸೂಕ್ತವಾದ ಕಾನೂನು ಆಧಾರವಾಗಿದ್ದರೆ, ಅನ್ವಯಿಸುವ ಕಾನೂನಿಗೆ ಅನುಸಾರವಾಗಿ ನಾವು ಅದನ್ನು ಹುಡುಕುತ್ತೇವೆ.

ಅನ್ವಯವಾಗುವ ಕಾನೂನುನಿಗೆ ಅನುಗುಣವಾಗಿ ವಂಚನೆ ಮತ್ತು ಇತರ ದುರುದ್ದೇಶಪೂರಿತ ಚಟುವಟಿಕೆಯನ್ನು ತಡೆಗಟ್ಟಲು ಹಾಗೂ ಭದ್ರತೆ ಉದ್ದೇಶಗಳಿಗಾಗಿ, ನಮ್ಮ ಕಾನೂನುಬದ್ಧ ಹಿತಾಸಕ್ತಿಗಳ ಉದ್ದೇಶಗಳಿಗಾಗಿ ಅಥವಾ ಥರ್ಡ್ ಪಾರ್ಟಿ ಹಿತಾಸಕ್ತಿಗಳಿಗಾಗಿ ನಾವು ವೈಯಕ್ತಿಕ ಡೇಟವನ್ನು ಅಗತ್ಯವೆಂದು ಪರಿಗಣಿಸಿ ಪ್ರಕ್ರಿಯೆಗೊಳಿಸುತ್ತೇವೆ.

ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.

2025-12-12