TV ಪೂರೈಕೆದಾರರು ಮತ್ತು ಗೌಪ್ಯತೆ
ನಿಮ್ಮ ಮಾಹಿತಿಯನ್ನು ಕಾಪಾಡಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವುದಕ್ಕೆ ಅನುವು ಮಾಡಿಕೊಡಲು TV ಪೂರೈಕೆದಾರರನ್ನು ವಿನ್ಯಾಸಗೊಳಿಸಲಾಗಿದೆ.
ಟಿವಿ ಪೂರೈಕೆದಾರರು ಎಂಬ ಫೀಚರ್ ನಿಮ್ಮ ಟಿವಿ ಪೂರೈಕೆದಾರಿಗೆ ಮತ್ತು ಥರ್ಡ್-ಪಾರ್ಟಿ ಆ್ಯಪ್‌ಗಳಿಗೆ ನಿಮ್ಮ ಟಿವಿ ಸಬ್‌ಸ್ಕ್ರಿಪ್ಶನ್ ಖಾತೆಯ ಕುರಿತಾದ ಮಾಹಿತಿಯನ್ನು ಆ್ಯಕ್ಸೆಸ್ ಮಾಡಲು ಮತ್ತು ವಿನಿಮಯ ಮಾಡಿಕೊಳ್ಳಲು ಅನುಮತಿಸುತ್ತದೆ. ಇದರಿಂದ ನೀವು ನಿಮ್ಮ ಟಿವಿ ಪೂರೈಕೆದಾರರ ಖಾತೆಗೆ ಪ್ರತಿ ಬಾರಿ ಸೈನ್-ಇನ್ ಮಾಡುವ ಅಗತ್ಯವಿಲ್ಲದೆ ಒಂದೇ ಬಾರಿ ಸೈನ್-ಇನ್ ಮಾಡಿ ಶೋಗಳು, ಚಲನಚಿತ್ರಗಳು ಮತ್ತು ನಿಮ್ಮ ಟಿವಿ ಪೂರೈಕೆದಾರರ ಸಬ್‌ಸ್ಕ್ರಿಪ್ಶನ್‌ನ ಭಾಗವಾಗಿರುವ ಥರ್ಡ್-ಪಾರ್ಟಿ ಆ್ಯಪ್‌ಗಳಲ್ಲಿನ ಇತರೆ ಕಂಟೆಂಟ್‌ಗೆ ಸ್ವಯಂಚಾಲಿತವಾಗಿ ಆ್ಯಕ್ಸೆಸ್ ಪಡೆಯಬಹುದು.
ನಿಮ್ಮ ಟಿವಿ ಪೂರೈಕೆದಾರರ ಖಾತೆಗೆ ನೀವು ಸೈನ್-ಇನ್ ಮಾಡಿದಾಗ, ನಿಮ್ಮ ಖಾತೆಯನ್ನು ಬಳಸುವಂತೆ ನಿಮ್ಮ ಟಿವಿ ಪೂರೈಕೆದಾರ ಖಾತೆಯನ್ನು ಬೆಂಬಲಿಸುವ ಆ್ಯಪ್‌ಗಳನ್ನು ಸಕ್ರಿಯಗೊಳಿಸಲಾಗುತ್ತದೆ. ನಿಮ್ಮ TV ಪೂರೈಕೆದಾರ ಖಾತೆಗೆ ನೀವು ಸೈನ್-ಇನ್ ಮಾಡಿದ ನಂತರ, ಇತರೆ ಆ್ಯಪ್‌ಗಳು ನಿಮ್ಮ ಟಿವಿ ಪೂರೈಕೆದಾರ ಖಾತೆಯ ಆ್ಯಕ್ಸೆಸ್‌ಗಾಗಿ ನಿಮ್ಮನ್ನು ಕೇಳಬಹುದು.
ನಿಮ್ಮ ಟಿವಿ ಪೂರೈಕೆದಾರ ಖಾತೆಗೆ ನೀವು ಸೈನ್-ಇನ್ ಮಾಡಿದಾಗ, ನಿಮ್ಮ ಸಾಧನವು ಟಿವಿ ಪೂರೈಕೆದಾರರ ಹೆಸರು ಮತ್ತು ನಿಮ್ಮ ಬಳಕೆದಾರರ ಡಿಸ್‌ಪ್ಲೇ ಹೆಸರಿನ ರೀತಿಯ, ನಿಮ್ಮ ಟಿವಿ ಸಬ್‌ಸ್ಕ್ರಿಪ್ಶನ್ ಖಾತೆಯ ಕುರಿತ ಕೆಲವು ಮಾಹಿತಿಯನ್ನು ಸಾಧನದಲ್ಲಿ ಸಂಗ್ರಹಿಸುತ್ತದೆ. ಫೀಚರ್ ಅನ್ನು ಸಕ್ರಿಯಗೊಳಿಸಲು ಮತ್ತು ಸಬ್‌ಸ್ಕ್ರಿಪ್ಶನ್ ಮಾಹಿತಿಯನ್ನು ನಿಮ್ಮ ಟಿವಿ ಪೂರೈಕೆದಾರರು ಮತ್ತು ಥರ್ಡ್-ಪಾರ್ಟಿ ಆ್ಯಪ್‌ಗಳ ನಡುವೆ ವಿನಿಮಯ ಮಾಡಲು ಈ ಮಾಹಿತಿಯನ್ನು ಬಳಸಲಾಗುತ್ತದೆ. ಯಾವುದೇ ಆ್ಯಪ್‌ಗಳ ಕೆಲವು ಸಬ್‌ಸ್ಕ್ರಿಪ್ಶನ್ ಅಥವಾ ಕಂಟೆಂಟ್ ಆಫರಿಂಗ್‌ಗಳಿಗಾಗಿ ನಿಮ್ಮ ಆ್ಯಕ್ಸೆಸ್ ಅನ್ನು ದೃಢೀಕರಿಸಲು ನೀವು ಸಕ್ರಿಯಗೊಳಿಸಿದ ಯಾವುದೇ ಆ್ಯಪ್‌ನೊಂದಿಗೆ ನಿಮ್ಮ ಟಿವಿ ಪೂರೈಕೆದಾರರು ನಿಮ್ಮ ಸಬ್‌ಸ್ಕ್ರಿಪ್ಶನ್ ಖಾತೆಯ ಮಾಹಿತಿಯನ್ನು ಹಂಚಿಕೊಳ್ಳಬಹುದು. ಈ ಮಾಹಿತಿಯು ಸಬ್‌ಸ್ಕ್ರಿಪ್ಶನ್ ಪ್ಯಾಕೇಜ್ ವಿವರಗಳ ಜೊತೆಗೆ ಸಬ್‌ಸ್ಕ್ರಿಪ್ಶನ್ ಬಳಕೆದಾರರ ID, ಹೌಸ್‌ಹೋಲ್ಡ್ ID ಮತ್ತು ಖಾತೆಯ ಪಿನ್ ಕೋಡ್ ಅನ್ನು ಒಳಗೊಂಡಿರಬಹುದು.
ನಿಮ್ಮ ಟಿವಿ ಪೂರೈಕೆದಾರ ಖಾತೆಗೆ ನೀವು ಸೈನ್-ಮಾಡಿದ ನಂತರ, ನಿಮ್ಮ ಸಬ್‌ಸ್ಕ್ರಿಪ್ಶನ್ ಮೂಲಕ ಲಭ್ಯವಿರುವ ಕಂಟೆಂಟ್ ಅನ್ನು ಹೊಂದಿರುವ, Apple TV ಆ್ಯಪ್‌ಗೆ ಕನೆಕ್ಟ್ ಆಗಲು ಅರ್ಹವಾಗಿರುವ ಥರ್ಡ್-ಪಾರ್ಟಿ ಆ್ಯಪ್‌ಗಳನ್ನು ಹುಡುಕಲು ನಾವು ನಿಮ್ಮ ಸಬ್‌ಸ್ಕ್ರಿಪ್ಶನ್ ಮಾಹಿತಿಯನ್ನು ಬಳಸುತ್ತೇವೆ.
ನೀವು ಯಾವುದೇ ಸಮಯದಲ್ಲಿ ಟಿವಿ ಪೂರೈಕೆದಾರರ ಫೀಚರ್ ಅನ್ನು ನಿಷ್ಕ್ರಿಯಗೊಳಿಸುವ ಆಯ್ಕೆಯನ್ನು ಮಾಡಬಹುದು. ನಿಮ್ಮ iOS ಸಾಧನದಲ್ಲಿ ಹಾಗೆ ಮಾಡಲು, ಸೆಟ್ಟಿಂಗ್ಸ್ ಆ್ಯಪ್ > TV ಪೂರೈಕೆದಾರರು > TV ಪೂರೈಕೆದಾರರನ್ನು ತೆಗೆದುಹಾಕಿ ಎಂಬಲ್ಲಿಗೆ ಹೋಗಿ. ನಿಮ್ಮ visionOS ಸಾಧನದಲ್ಲಿ, ಸೆಟ್ಟಿಂಗ್ಸ್ ಆ್ಯಪ್ > TV ಪೂರೈಕೆದಾರರು > TV ಪೂರೈಕೆದಾರರನ್ನು ತೆಗೆದುಹಾಕಿ ಎಂಬಲ್ಲಿಗೆ ಹೋಗಿ. tvOSನಲ್ಲಿ, ಸೆಟ್ಟಿಂಗ್ಸ್ ಆ್ಯಪ್ > ಬಳಕೆದಾರರು ಮತ್ತು ಖಾತೆಗಳು > ಟಿವಿ ಪೂರೈಕೆದಾರರು > ಟಿವಿ ಪೂರೈಕೆದಾರರನ್ನು ತೆಗೆದುಹಾಕಿ ಎಂಬಲ್ಲಿಗೆ ಹೋಗಿ. ಇದು ನಿಮ್ಮ TV ಪೂರೈಕೆದಾರರ ಖಾತೆಯಿಂದ ನಿಮ್ಮನ್ನು ಸೈನ್-ಔಟ್ ಮಾಡುತ್ತದೆ. ಆ್ಯಪ್‌ಗಳನ್ನು ಒಂದೊಂದಾಗಿ ನಿಷ್ಕ್ರಿಯಗೊಳಿಸುವುದನ್ನು ಸಹ ನೀವು ಆಯ್ಕೆಮಾಡಬಹುದು.
ಟಿವಿ ಪೂರೈಕೆದಾರರ ಫೀಚರ್ ಅನ್ನು ಸಕ್ರಿಯಗೊಳಿಸುವ ಮೂಲಕ, ನೀವು ನಿಮ್ಮ ಟಿವಿ ಪೂರೈಕೆದಾರಿಗೆ ಮತ್ತು ನೀವು ಸಕ್ರಿಯಗೊಳಿಸಿರುವ ಎಲ್ಲಾ ಥರ್ಡ್-ಪಾರ್ಟಿ ಆ್ಯಪ್‌ಗಳಿಗೆ ನಿಮ್ಮ ಟಿವಿ ಸಬ್‌ಸ್ಕ್ರಿಪ್ಶನ್ ಖಾತೆಯ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಹಾಗೂ ಬಳಸಲು ಅವಕಾಶ ನೀಡುತ್ತಿದ್ದೀರಿ. ಆ ಮಾಹಿತಿಯನ್ನು ಅವರು ಹಂಚಿಕೊಳ್ಳುವುದು ಮತ್ತು ಬಳಸುವುದು ಅವರ ನಿಯಮಗಳು, ಗೌಪ್ಯತೆ ನೀತಿಗಳು ಮತ್ತು ಅಭ್ಯಾಸಗಳಿಗೆ ಒಳಪಟ್ಟಿರುತ್ತದೆ. ನಿಮ್ಮ ಟಿವಿ ಸಬ್‌ಸ್ಕ್ರಿಪ್ಶನ್ ಖಾತೆಯ ಮಾಹಿತಿಯನ್ನು ಮತ್ತು ಸಂಬಂಧಿಸಿದ ಮಾಹಿತಿಯನ್ನು ನಿಮ್ಮ ಟಿವಿ ಪೂರೈಕೆದಾರರು ಮತ್ತು ಅಂತಹ ಯಾವುದೇ ಥರ್ಡ್-ಪಾರ್ಟಿ ಆ್ಯಪ್‌ಗಳ ಜೊತೆಗೆ ಹಂಚಿಕೊಳ್ಳುವ ಮೊದಲು ಅವುಗಳು ಆ ಮಾಹಿತಿಯನ್ನು ಹೇಗೆ ಬಳಸುತ್ತವೆ ಮತ್ತು ಹಂಚಿಕೊಳ್ಳುತ್ತವೆ ಎಂಬುದನ್ನು ತಿಳಿದುಕೊಳ್ಳಲು ಅವುಗಳ ನಿಯಮಗಳು, ಗೌಪ್ಯತೆ ನೀತಿಗಳು ಹಾಗೂ ಅಭ್ಯಾಸಗಳನ್ನು ಪರಿಶೀಲಿಸಬೇಕು.
ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು
2025-12-12