VPNಗಳು ಮತ್ತು ಗೌಪ್ಯತೆ
ಕೆಲವು ನೆಟ್‌ವರ್ಕ್ ಟ್ರಾಫಿಕ್‌ನ ರೌಟಿಂಗ್ ಅನ್ನು ನಿಯಂತ್ರಿಸಲು VPNಗಳನ್ನು ಸೆಟಪ್ ಮಾಡಬಹುದು.
ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (VPN) ಎನ್ನುವುದು ನಿಮ್ಮ ಸಾಧನದಿಂದ ನಿರ್ದಿಷ್ಟ ನೆಟ್‌ವರ್ಕ್ ಟ್ರಾಫಿಕ್ ಅನ್ನು ಎನ್‌ಕ್ರಿಪ್ಟ್ ಮಾಡುವ ಮತ್ತು ರೂಟ್ ಮಾಡುವ ಸೇವೆಯಾಗಿದ್ದು, ಆ ಮೂಲಕ ನೀವು ಭೇಟಿ ನೀಡುವ ಮತ್ತು ಸಂವಹನ ನಡೆಸುವ ವೆಬ್‌ಸೈಟ್‌ಗಳು ಮತ್ತು ಸೇವೆಗಳಿಂದ ನಿಮ್ಮ IP ವಿಳಾಸವನ್ನು ಮರೆಮಾಡುತ್ತದೆ. VPN ಸಕ್ರಿಯವಾಗಿದ್ದರೂ ಸಹ, ನಿಮ್ಮ ಸಾಧನವು ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಕೆಲವು ಅವಶ್ಯಕ ಸಿಸ್ಟಂ ಸೇವೆಗಳಿಗೆ ಅಗತ್ಯವಿರುವ ಟ್ರಾಫಿಕ್ VPNನ ಹೊರಗೆ ನಡೆಯುತ್ತದೆ.
ನಿಮ್ಮ ಆದ್ಯತೆಯ VPN ಕಾನ್ಫಿಗರೇಶನ್ ಅನ್ನು ನೀವು App Storeನಿಂದ ಡೌನ್‌ಲೋಡ್ ಮಾಡಬಹುದು ಮತ್ತು ಅದನ್ನು ನಿಮ್ಮ ಸಾಧನದಲ್ಲಿ ಇನ್‌ಸ್ಟಾಲ್ ಮಾಡಬಹುದು. ನಿಮ್ಮ ಉದ್ಯೋಗದಾತರು ಅಥವಾ ಶಾಲೆಯಂತಹ ಸಂಸ್ಥೆಗಳು, Apple Watch ಅಥವಾ Apple TV ಸೇರಿದಂತೆ ತಾವು ನಿರ್ವಹಿಸುವ ಸಾಧನಗಳಲ್ಲಿ VPN ಕಾನ್ಫಿಗರೇಶನ್‌ಗಳನ್ನು ಸಹ ಸೆಟಪ್ ಮಾಡಬಹುದು. ಸೆಟ್ಟಿಂಗ್ಸ್ > ಸಾಮಾನ್ಯ > VPN & ಸಾಧನ ನಿರ್ವಹಣೆ > VPNಗೆ ಹೋಗುವ ಮೂಲಕ ನೀವು iOS, iPadOS, ಅಥವಾ visionOS ಸಾಧನಗಳಲ್ಲಿ VPN ಅನ್ನು ಹಸ್ತಚಾಲಿತವಾಗಿ ಸೇರಿಸಬಹುದು, ನಂತರ VPN ಕಾನ್ಫಿಗರೇಶನ್ ಸೇರಿಸಿ ಅನ್ನು ಟ್ಯಾಪ್ ಮಾಡಿ ಮತ್ತು ಸಂಬಂಧಿತ ಮಾಹಿತಿಯನ್ನು ನಮೂದಿಸಿ. Macನಲ್ಲಿ, ಸಿಸ್ಟಂ ಸೆಟ್ಟಿಂಗ್ಸ್ > ನೆಟ್‌ವರ್ಕ್‌ಗೆ ಹೋಗಿ, ಇನ್ನಷ್ಟು ಬಟನ್ ಕ್ಲಿಕ್ ಮಾಡಿ, ನಂತರ VPN ಕಾನ್ಫಿಗರೇಶನ್ ಸೇರಿಸಿ ಅನ್ನು ಆಯ್ಕೆಮಾಡಿ ಮತ್ತು ಸಂಬಂಧಿತ ಮಾಹಿತಿಯನ್ನು ನಮೂದಿಸಿ.
ನೀವು ನಂಬುವ VPN ಸೇವೆಯನ್ನು ಮಾತ್ರ ಬಳಸುವುದು ಮುಖ್ಯ. VPN ಕಾನ್ಫಿಗರೇಶನ್ ಅನ್ನು ಇನ್‌ಸ್ಟಾಲ್ ಮಾಡಿದ್ದಾಗ ಮತ್ತು ಅದು ಸಕ್ರಿಯವಾಗಿದ್ದಾಗಿ, ನಿಮ್ಮ VPN ಪೂರೈಕೆದಾರರಿಗೆ ನಿಮ್ಮ ಆನ್‌ಲೈನ್ ಚಟುವಟಿಕೆಯನ್ನು ವೀಕ್ಷಿಸಲು, ಇಂಟರ್‌ಸೆಪ್ಟ್ ಮಾಡಲು ಮತ್ತು ಮಾರ್ಪಡಿಸಲು ಸಾಧ್ಯವಾಗಬಹುದು. ನಿಮ್ಮ VPN ಪೂರೈಕೆದಾರರ ಸೇವೆಗಳ ಕುರಿತು ಮತ್ತು ಅವರು ನಿಮ್ಮ ಡೇಟವನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಅವರ ಗೌಪ್ಯತೆಯ ಅಭ್ಯಾಸಗಳನ್ನು ನೀವು ಪರಿಶೀಲಿಸಬೇಕು. ನೀವು ಥರ್ಡ್-ಪಾರ್ಟಿ ಆ್ಯಪ್ ಅನ್ನು ಬಳಸುತ್ತಿರುವಾಗ ಅಥವಾ Apple ನಿರ್ವಹಿಸದ ವೆಬ್‌ಸೈಟ್‌ಗಳಲ್ಲಿ ಬ್ರೌಸಿಂಗ್ ಮಾಡುತ್ತಿರುವಾಗ, ನಿಮ್ಮನ್ನು ಗುರುತಿಸುವ ರೀತಿಯಲ್ಲಿ ನಿಮ್ಮ ಸಾಧನದಲ್ಲಿನ ನಿಮ್ಮ VPN ಸೇವೆಯ ಬಳಕೆಯ ಕುರಿತಾದ ಮಾಹಿತಿಯನ್ನು Apple ಸಂಗ್ರಹಿಸುವುದಿಲ್ಲ.
ನಿಮ್ಮ VPN ಕಾನ್ಫಿಗರೇಶನ್ ಹೇಗೆ ಕಾರ್ಯನಿರ್ವಹಿಸಬೇಕು, ಇದರಲ್ಲಿ ನಿಮ್ಮ ಸಾಧನವನ್ನು ತೊರೆದಾಗ ಟ್ರಾಫಿಕ್ ಅನ್ನು ಹೇಗೆ ರೂಟ್ ಮಾಡಲಾಗುತ್ತದೆ, ಅದನ್ನು ಎನ್‌ಕ್ರಿಪ್ಟ್ ಮಾಡಲಾಗಿದೆಯೇ ಅಥವಾ ಇಲ್ಲವೇ ಮತ್ತು ನೀವು ಕನೆಕ್ಟ್ ಆಗಿರುವ ವೆಬ್‌ಸೈಟ್‌ಗಳಿಂದ ಯಾವ ಡೇಟವನ್ನು ಬಳಸಬಹುದು ಎಂಬುದನ್ನು VPN ಪೂರೈಕೆದಾರರು ನಿಯಂತ್ರಿಸುತ್ತಾರೆ.
iCloud ಪ್ರೈವೇಟ್ ರಿಲೇ ಅನ್ನು ಸಕ್ರಿಯಗೊಳಿಸಿರುವ ಸಾಧನದಲ್ಲಿ VPN ಕಾನ್ಫಿಗರೇಶನ್ ಅನ್ನು ಇನ್‌ಸ್ಟಾಲ್ ಮಾಡಿದರೆ ಮತ್ತು ಸಕ್ರಿಯವಾಗಿದ್ದರೆ, VPN ಕಾನ್ಫಿಗರೇಶನ್ ಖಾಸಗಿ ರಿಲೇಯಿಂದ ರಕ್ಷಿಸಲ್ಪಡುವ ಇಂಟರ್ನೆಟ್ ಕನೆಕ್ಷನ್‌ಗಳ ರೂಟಿಂಗ್ ಅನ್ನು ನಿರ್ಧರಿಸುತ್ತದೆ.
ನಿಮ್ಮ ಸಾಧನದ ಎಲ್ಲಾ ನೆಟ್‌ವರ್ಕ್ ಟ್ರಾಫಿಕ್ ಅನ್ನು ಸಕ್ರಿಯ VPN ಮೂಲಕ ರೂಟ್ ಮಾಡಲಾಗುವುದಿಲ್ಲ. ಆ್ಯಪ್ ಡೆವಲಪರ್ ತಮ್ಮ ಆ್ಯಪ್‌ಗೆ ಅಗತ್ಯವಿರುವ ಸಂಪರ್ಕ ಪ್ರಕಾರವನ್ನು ನಿರ್ದಿಷ್ಟಪಡಿಸಿದರೆ, ಉದಾಹರಣೆಗೆ ಮೊಬೈಲ್ ಡೇಟ ಮಾತ್ರ, ಆ ಆ್ಯಪ್‌ನಿಂದ ನೆಟ್‌ವರ್ಕ್ ಟ್ರಾಫಿಕ್ ಅನ್ನು ಸಕ್ರಿಯ VPN ಕಾನ್ಫಿಗರೇಶನ್‌ನಲ್ಲಿ ಸೇರಿಸಲಾಗುವುದಿಲ್ಲ. iOS, iPadOS, ಹಾಗೂ visionOS ಸಾಧನಗಳ ಮೇಲೆ, ನಿಮ್ಮ VPN ಒದಗಿಸುವವರು ಈ ಆಯ್ಕೆಯನ್ನು ಓವರ್‌ರೈಡ್ ಮಾಡಲು ಆರಿಸಿಕೊಳ್ಳಬಹುದು, ಮತ್ತು ಬಹುತೇಕ ಆ್ಯಪ್‌ಗಳು, ಸೇವೆಗಳು ಹಾಗೂ ಸಿಸ್ಟಂ ಫಂಕ್ಷನ್‌ಗಳು ಒಂದು ಸಕ್ರಿಯ VPN ಕಾನ್ಫಿಗರೇಶನ್‌ನ ಹೊರಗೆ ನೆಟ್‌ವರ್ಕ್ ಟ್ರಾಫಿಕ್ ರೌಟಿಂಗ್ ಮಾಡುವುದನ್ನು ತಪ್ಪಿಸಬಹುದು.
ಅಗತ್ಯವಿರುವ ಸಿಸ್ಟಂ ಸೇವೆಗಳಿಗೆ ಅವಶ್ಯಕವಿರುವ ಕೆಲವು ಟ್ರಾಫಿಕ್‌ಗಳನ್ನು ಯಾವುದೇ ಸಕ್ರಿಯ VPN ಕಾನ್ಫಿಗರೇಶನ್ ಮೂಲಕ ರೌಟ್ ಮಾಡಲಾಗುವುದಿಲ್ಲ, ಅಂದರೆ ನಿಮ್ಮ ಸ್ಥಳೀಯ ನೆಟ್‌ವರ್ಕ್‌ನ ರೌಟ್‌ನ ಜೊತೆಗೆ ನೇರವಾಗಿ ಕನೆಕ್ಷನ್‌ಗಳು(ಅವು ನೆಟ್‌ವರ್ಕ್ ಕನೆಕ್ಷನ್ ಸ್ಥಾಪಿಸಲು ಮತ್ತು ಕಾರ್ಯನಿರ್ವಹಿಸಲಯ ಅವಶ್ಯಕವಾಗಿರುತ್ತವೆ), ಮತ್ತು ಮೊಬೈಲ್ ಡೇಟದ ಮೇಲೆ ಮಾತ್ರ ಕೆಲಸ ಮಾಡುವ ಕೆಲವು ಮೊಬೈಲ್ ಸೇವೆಗಳು (ಅದರಲ್ಲಿ ವಿಷುವಲ್ ವಾಯ್ಸ್‌ಲೆಸ್ ಕೂಡ ಲಭ್ಯವಿರುವೆಡೆ ಸೇರಿಕೊಂಡಿರಬಹುದು).
2025-12-12