ವಾಲೆಟ್ ಹಾಗೂ ಗೌಪ್ಯತೆ
ವಾಲೆಟ್ ಅನ್ನು ನಿಮ್ಮ ಕಾರ್ಡ್‌ಗಳು ಹಾಗೂ ಪಾಸ್‌ಗಳನ್ನು ಹೆಚ್ಚು ಸುರಕ್ಷಿತವಾದ ಹಾಗೂ ಗೌಪ್ಯವಾದ ವಿಧಾನದಲ್ಲಿ ಸಂಗ್ರಹಿಸಲು ಹಾಗೂ ನಿರ್ವಹಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.
![]()
- ನೀವು ಪಾಸ್ ಅನ್ನು ಸೇರಿಸಿದಾಗ, ಅದು ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿರುತ್ತದೆ ಮತ್ತು ನಿಮ್ಮ ಪಾಸ್‌ಗಳನ್ನು ಪ್ರದರ್ಶಿಸಲು ಮತ್ತು ನಿರ್ವಹಿಸಲು ಸಹಾಯ ಮಾಡಲು ಪಾಸ್‌ನ ಕೆಲವು ಮಾಹಿತಿಯನ್ನು Appleನೊಂದಿಗೆ ಹಂಚಿಕೊಳ್ಳಬಹುದು.
- ನಿಮ್ಮ ಸಾಧನವು ಸೆಟಪ್ ಮತ್ತು ನಿರ್ವಹಣೆಗಾಗಿ ಪಾಸ್ ಪೂರೈಕೆದಾರರೊಂದಿಗೆ ವಿಶಿಷ್ಟವಾದ ಸಾಧನದ ಐಡೆಂಟಿಫೈಯರ್ ಅನ್ನು ಹಂಚಿಕೊಳ್ಳಬಹುದು.
- Apple ಇಲ್ಲಿ ವಿವರಿಸಿದಂತೆ ನಿಮ್ಮ ಪಾಸ್ ಮಾಹಿತಿಯನ್ನು ಬಳಸುತ್ತದೆ. ನಿಮ್ಮ ಪಾಸ್ ಪೂರೈಕೆದಾರರು ತಮ್ಮ ಗೌಪ್ಯತೆಯ ನೀತಿಯಲ್ಲಿ ವಿವರಿಸಿದಂತೆ ನಿಮ್ಮ ಪಾಸ್ ಮಾಹಿತಿಯನ್ನು ಬಳಸಬಹುದು.
- ಕ್ರೆಡಿಟ್ ಹಾಗೂ ಡೆಬಿಟ್, ಪ್ರಿಪೇಯ್ಡ್ ಹಾಗೂ ಸಾರಿಗೆ ಕಾರ್ಡ್‌ಗಳಂತಹ ಕಾಂಟ್ಯಾಕ್ಟ್‌ಲೆಸ್ ಪಾವತಿ ಪಾಸ್‌ಗಳಿಗಾಗಿ ಮಾಹಿತಿಯನ್ನು Apple Payಯಲ್ಲಿ ಹಾಗೂ www.apple.com/legal/privacy/data/en/apple-pay ಎಂಬಲ್ಲಿನ ಗೌಪ್ಯತೆಯ ವಿಭಾಗದಲ್ಲಿ ವಿವರಿಸಲಾಗಿದೆ.
ಸುಲಭ ಆ್ಯಕ್ಸೆಸ್‌ಗಾಗಿ ಒಂದೇ ಸ್ಥಳದಲ್ಲಿ ಡಿಜಿಟಲ್ ಟಿಕೆಟ್‌ಗಳು, ಬೋರ್ಡಿಂಗ್ ಪಾಸ್‌ಗಳು, ಕೀಗಳು ಮತ್ತು ಹೆಚ್ಚಿನದನ್ನು ಸುರಕ್ಷಿತವಾಗಿ ಸಂಗ್ರಹಿಸಲು ವಾಲೆಟ್ ನಿಮಗೆ ಅನುಮತಿಸುತ್ತದೆ.
ವಾಲೆಟ್‌ನಲ್ಲಿ ಪಾಸ್‌ಗಳನ್ನು ಸೇರಿಸುವುದು ಮತ್ತು ನಿರ್ವಹಿಸುವುದು
ನಿಮ್ಮ ಪಾಸ್ ಪೂರೈಕೆದಾರರು ಒದಗಿಸಿದ Apple ವಾಲೆಟ್ ಲಿಂಕ್ ಅನ್ನು ಟ್ಯಾಪ್ ಮಾಡುವ ಮೂಲಕ ಅಥವಾ ವಾಲೆಟ್‌ನ ಕೆಳಭಾಗದಲ್ಲಿ ‘ಪಾಸ್‌ಗಳನ್ನು ಎಡಿಟ್ ಮಾಡಿ’ ಅನ್ನು ಟ್ಯಾಪ್ ಮಾಡುವ ಮೂಲಕ, ಸ್ಕ್ಯಾನ್ ಕೋಡ್ ಅನ್ನು ಆಯ್ಕೆ ಮಾಡುವ ಮೂಲಕ ಮತ್ತು ನಿಮ್ಮ ಪಾಸ್‌ಗಾಗಿ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನೀವು ವಾಲೆಟ್‌ಗೆ ಪಾಸ್ ಅನ್ನು ಸೇರಿಸಬಹುದು. ನೀವು ಕೆಲವು ಥರ್ಡ್ ಪಾರ್ಟಿ ಆ್ಯಪ್‌ಗಳ ಮೂಲಕ ನೇರವಾಗಿ ವಾಲೆಟ್‌ಗೆ ಪಾಸ್ ಅನ್ನು ಕೂಡ ಸೇರಿಸಬಹುದು. ನೀವು ವಾಲೆಟ್‌ಗೆ ಪಾಸ್ ಅನ್ನು ಸೇರಿಸಿದಾಗ, ನಿಮ್ಮ ಸಾಧನವು Appleಗೆ ಪಾಸ್ ಅನ್ನು ವಾಲೆಟ್‌ನಲ್ಲಿ ಡಿಸ್‌ಪ್ಲೇ ಮಾಡಲು ಅಗತ್ಯವಿರುವ ಮಾಹಿತಿಯನ್ನು ಕಳುಹಿಸುತ್ತದೆ, ಅದರಲ್ಲಿ ಸ್ವಯಂಚಾಲಿತವಾಗಿ ಪಾಸ್‌ನಲ್ಲಿ ಗೋಚರಿಸುವ ಮಾಹಿತಿ, ಉದಾಹರಣೆಗೆ ಟಿಕೆಟ್ ಸಂಖ್ಯೆ ಮತ್ತು ಹೆಸರು. ಪಾಸ್ ಮತ್ತು ಪಾಸ್ ಮಾಹಿತಿಯನ್ನು ನಿಮ್ಮ Apple ಖಾತೆಯೊಂದಿಗೆ Apple ಸಂಯೋಜಿಸುತ್ತದೆ, ಪಾಸ್ ವಾಲೆಟ್‌ನಲ್ಲಿ ಇರುವವರೆಗೂ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ಪಾಸ್ ಅನ್ನು ಡಿಸ್‌ಪ್ಲೇ ಮಾಡಲು ಮತ್ತು ನಿರ್ವಹಿಸಲು ಮಾಹಿತಿಯನ್ನು ಬಳಸುತ್ತದೆ. ಬಿಲ್ ಪಾಸ್ ಪೂರೈಕೆದಾರರಿಗೆ ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸದ ನಿಮ್ಮ ಪಾಸ್ ಕುರಿತ ಮಾಹಿತಿಯನ್ನು ಸಹ Apple ಒಟ್ಟುಗೂಡಿಸಬಹುದು.
ವಾಲೆಟ್‌ಗೆ ಪಾಸ್ ಅನ್ನು ಸೇರಿಸಿದಾಗ, ನಿಮ್ಮ ಸಾಧನವು ಪಾಸ್ ಪೂರೈಕೆದಾರರೊಂದಿಗೆ ಅನನ್ಯ ಐಡೆಂಟಿಫೈಯರ್ ಅನ್ನು ಸಹ ರಚಿಸಬಹುದು ಮತ್ತು ಹಂಚಿಕೊಳ್ಳಬಹುದು. ಪಾಸ್ ಅನ್ನು ಸೆಟಪ್ ಮಾಡಲು ಮತ್ತು ನಿರ್ವಹಿಸಲು ನೆರವಾಗುವುದಕ್ಕಾಗಿ ಪಾಸ್ ಪೂರೈಕೆದಾರರು ಈ ಅನನ್ಯ ಸಾಧನದ ಐಡೆಂಟಿಫೈಯರ್ ಅನ್ನು ಬಳಸಬಹುದು, ಉದಾಹರಣೆಗೆ, ಶೋ ಪ್ರಾರಂಭವಾಗುವ ಸಮಯ ಅಥವಾ ಬೋರ್ಡಿಂಗ್ ಗೇಟ್‌ನ ವಿವರದಂತಹ ಪಾಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಅಪ್‌ಡೇಟ್ ಮಾಡುವುದು. ಸಾಧನದ ಅನನ್ಯ ಐಡೆಂಟಿಫೈಯರ್ ನಿಮ್ಮ ಅಥವಾ ನಿಮ್ಮ ಸಾಧನದ ಕುರಿತಾದ ಯಾವುದೇ ಮಾಹಿತಿಯನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಪ್ರತಿಯೊಬ್ಬ ಪಾಸ್ ಪೂರೈಕೆದಾರರಿಗೆ ವಿಭಿನ್ನವಾಗಿರುತ್ತದೆ. ಪಾಸ್‌ನ ಹಿಂಭಾಗದಲ್ಲಿ ಸ್ವಯಂಚಾಲಿತ ಅಪ್‌ಡೇಟ್‌ಗಳನ್ನು ಸಕ್ರಿಯಗೊಳಿಸುವ ಅಥವಾ ನಿಷ್ಕ್ರಿಯಗೊಳಿಸುವ ಮೂಲಕ ಪಾಸ್ ಅನ್ನು ನಿರ್ವಹಿಸುವ ಪಾಸ್ ಒದಗಿಸುವವರ ಸಾಮರ್ಥ್ಯವನ್ನು ನಿಯಂತ್ರಿಸಲು ಕೆಲವು ಪಾಸ್‌ಗಳು ನಿಮಗೆ ಅವಕಾಶ ನೀಡಬಹುದು.
ಪಾಸ್ ಅನ್ನು ತೆಗೆದುಹಾಕಲು, ಪಾಸ್‌ನ ಹಿಂಭಾಗದಲ್ಲಿರುವ ಪಾಸ್ ಅನ್ನು ತೆಗೆದುಹಾಕಿ ಅನ್ನು ಟ್ಯಾಪ್ ಮಾಡಿ ಅಥವಾ ನಿಮ್ಮ ವಾಲೆಟ್‌ನ ಕೆಳಭಾಗದಲ್ಲಿರುವ ಪಾಸ್‌ಗಳನ್ನು ಎಡಿಟ್ ಮಾಡಿ ಅನ್ನು ಟ್ಯಾಪ್ ಮಾಡಿ. ಸಂಪರ್ಕರಹಿತ ಪಾವತಿಗಳಿಗೆ ಬಳಸದ ಪಾಸ್ ಅನ್ನು ನೀವು ತೆಗೆದುಹಾಕಿದಾಗ, ನಿಮ್ಮ ಸಾಧನವು ಪಾಸ್ ಅನ್ನು ಡಿಲೀಟ್ ಮಾಡುತ್ತದೆ ಮತ್ತು Apple ಎಲ್ಲಾ ಸಂಬಂಧಿತ ಪಾಸ್ ಮಾಹಿತಿಯನ್ನು ಡಿಲೀಟ್ ಮಾಡಲು ಕಾರಣವಾಗುತ್ತದೆ. ನಿಮ್ಮ ಪಾಸ್ ಒದಗಿಸುವವರು ಪಾಸ್ ಮಾಹಿತಿ ಮತ್ತು ಅನನ್ಯ ಸಾಧನದ ಐಡೆಂಟಿಫೈಯರ್ ಅನ್ನು ನಂತರವೂ ಉಳಿಸಿಕೊಳ್ಳಬಹುದು.
ಪಾಸ್‌ಗಳ ಹಂಚಿಕೆ
ವಾಲೆಟ್ ನಿಮಗೆ ಪಾಸ್‌ಗಳನ್ನು AirDrop, iMessage, Mail, ಅಥವಾ ಥರ್ಡ್ ಪಾರ್ಟಿ ಮೇಲ್, ಮೆಸೇಜಿಂಗ್ ಅಥವಾ ಇತರೆ ಸಂವಹನ ಆ್ಯಪ್‌ಗಳ ಜೊತೆಗೆ ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ಒಂದು ಪಾಸ್ ಅನ್ನು ಹಂಚಿಕೊಳ್ಳಲು ನೀವು ಥರ್ಡ್ ಪಾರ್ಟಿ ಆ್ಯಪ್ ಅನ್ನು ಬಳಸಿದಲ್ಲಿ, ಹಂಚಿಕೊಳ್ಳುವಿಕೆಯನ್ನು ಅವರ ಗೌಪ್ಯತಾ ನೀತಿಗಳು ನಿಯಂತ್ರಿಸುತ್ತವೆ. ಸ್ವೀಕೃತದಾರರು ಪಾಸ್ ಅನ್ನು ಒಪ್ಪಿಕೊಂಡರೆ, ಅವರು ಪಾಸ್‌ನ ಒಂದು ಕಾಪಿಯನ್ನು ಮತ್ತು ಪಾಸ್‌ನಲ್ಲಿ ತೋರಿಸಲಾದ ಎಲ್ಲಾ ಮಾಹಿತಿಯನ್ನು ಪಡೆಯುತ್ತಾರೆ. ಕುಟುಂಬ ಹಂಚಿಕೆಯನ್ನು ಸಕ್ರಿಯಗೊಳಿಸಿದ್ದಾಗ, ಕುಟುಂಬದ ವ್ಯವಸ್ಥಾಪಕರು ಅಥವಾ ಪೋಷಕರು ಅಥವಾ ಮಕ್ಕಳ ಖಾತೆಯೊಂದನ್ನು ಹೊಂದಿರುವ ಕಾನೂನುಬದ್ಧ ಪಾಲಕರು ಹಂಚಿಕೊಂಡ ಪಾಸ್‌ಗಳನ್ನು ಸ್ವಯಂಚಾಲಿತವಾಗಿ ಒಪ್ಪಿಕೊಳ್ಳಬಹುದು.
ನೀವು ಪಾಸ್ ಪೂರೈಕೆದಾರರು ನಿರ್ವಹಿಸುತ್ತಿರುವ ಪಾಸ್ ಅನ್ನು ಹಂಚಿಕೊಳ್ಳುತ್ತಿದ್ದಲ್ಲಿ ನಿಮ್ಮ ಸಾಧನವು ಪಾಸ್ ಅನ್ನು ಹಂಚಿಕೊಳ್ಳಲಾಗಿದೆ ಎಂದು ಪಾಸ್ ಪೂರೈಕೆದಾರರಿಗೆ ತಿಳಿಸಬಹುದು. ಉದಾಹರಣೆಗೆ, ಒಂದು ಪಾಸ್ ಗರಿಷ್ಠ ನಾಲ್ಕು ಅತಿಥಿಗಳಿಗೆ ಮಾನ್ಯವಾಗಿದ್ದಲ್ಲಿ, ಪಾಸ್ ಪೂರೈಕೆದಾರರಿಗೆ ಪಾಸ್ ಮಿತಿಯನ್ನು ಹೇರುವುದಕ್ಕೆ ಸಹಾಯ ಮಾಡಲು ನಿಮ್ಮ ಸಾಧನವು ಪಾಸ್ ಅನ್ನು ಎಷ್ಟು ಬಾರಿ ಹಂಚಿಕೊಳ್ಳಲಾಗಿದೆ ಎಂದು ಪಾಸ್ ಪೂರೈಕೆದಾರರಿಗೆ ತಿಳಿಸಬಹುದು. ಪಾಸ್ ಅನ್ನು ನಿರ್ವಹಿಸಲು Apple ಸಹಾಯ ಮಾಡಿದಲ್ಲಿ, ಪಾಸ್ ಅನ್ನು ಹಂಚಿಕೊಳ್ಳಲಾಗಿದೆ ಮತ್ತು ಅದನ್ನು ಯಾರ ಜೊತೆಗೆ ಹಂಚಿಕೊಳ್ಳಲಾಗಿದೆ ಎಂದು ನಿಮ್ಮ ಸಾಧನವು Appleಗೆ ತಿಳಿಸುತ್ತದೆ. ಪಾಸ್‌ನ ನಿರ್ವಹಣೆಗಾಗಿ ಸಹಾಯ ಮಾಡಲು ಮಾತ್ರವೇ Apple ಈ ಮಾಹಿತಿಯನ್ನು ಬಳಸುತ್ತದೆ ಹಾಗೂ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ.
ಸಾರಿಗೆ ಕಾರ್ಡ್‌ಗಳನ್ನು ಸೇರಿಸುವುದು ಮತ್ತು ನಿರ್ವಹಿಸುವುದು
ವಾಲೆಟ್‌ಗೆ ಸಾರಿಗೆ ಕಾರ್ಡ್ ಅನ್ನು ಸೇರಿಸುವ ಮೂಲಕ, ಸಾರಿಗೆ ಕಾರ್ಡ್ ಬಗೆಗಿನ ಮಾಹಿತಿಯನ್ನು ನಿಮ್ಮ Apple ಖಾತೆಯ ಜೊತೆಗೆ ಸಂಯೋಜಿಸಲಾಗುತ್ತದೆ. ನಿಮ್ಮ ಸಾರಿಗೆ ಕಾರ್ಡ್‌ನಲ್ಲಿ ಧನಾತ್ಮಕ ಬ್ಯಾಲೆನ್ಸ್ ಇರುವಷ್ಟು ಸಮಯವೂ, ನೀವು ಬ್ಯಾಲೆನ್ಸ್ ಅನ್ನು ರಿಕವರ್ ಮಾಡಲು ಸಾಧ್ಯವಾಗುತ್ತದೆ ಎಂಬುದರ ಖಚಿತತೆಗಾಗಿ, ಕಾರ್ಡ್ ನಿಮ್ಮ Apple ಖಾತೆಯೊಂದಿಗೆ ಸಂಯೋಜಿತವಾಗಿರುತ್ತದೆ. ನೀವು ಒಂದಕ್ಕಿಂತ ಹೆಚ್ಚು ಸಾರಿಗೆ ಕಾರ್ಡ್‌ಗಳನ್ನು ವಾಲೆಟ್‌ಗೆ ಸೇರಿಸಿದರೆ, Apple ಅಥವಾ ಅದರ ಪಾಲುದಾರರಿಗೆ ಕಾರ್ಡ್‌ಗಳ ನಡುವೆ ಸಂಬಂಧ ಹೊಂದಿದ ವೈಯಕ್ತಿಕ ಮಾಹಿತಿ ಮತ್ತು ಖಾತೆಯ ಮಾಹಿತಿಯನ್ನು ಲಿಂಕ್ ಮಾಡಲು ಸಾಧ್ಯವಾಗಬಹುದು. ಉದಾಹರಣೆಗೆ, ವೈಯಕ್ತಿಕಗೊಳಿಸಿದ ಟ್ರಾವೆಲ್ ಕಾರ್ಡ್‌ಗಳನ್ನು ವೈಯಕ್ತಿಕಗೊಳಿಸಿರದ ಸಾರಿಗೆ ಕಾರ್ಡ್‌ಗಳಿಗೆ ಲಿಂಕ್ ಮಾಡಬಹುದು. ಜಪಾನ್‌ನಲ್ಲಿ ಒಟ್ಟಾರೆ, ವೈಯಕ್ತಿಕವಾಗಿ ಗುರುತಿಸಲಾಗದ, ವಾಲೆಟ್‌ನಲ್ಲಿ ಸಾರಿಗೆ ಕಾರ್ಡ್‌ಗಳನ್ನು ಸೆಟ್ ಮಾಡುವ ಕುರಿತ ಮಾಹಿತಿಯನ್ನು ಮೊಬೈಲ್ ಸಾಧನದ ನೆಟ್‌ವರ್ಕ್ ಪೂರೈಕೆದಾರರ ಜೊತೆಗೆ ಆಗಾಗ ಹಂಚಿಕೊಳ್ಳಬಹುದು.
ನೀವು ಸಾರಿಗೆ ಕಾರ್ಡ್ ಅನ್ನು ಬಳಸಿದಾಗ, ಇತ್ತೀಚಿಗೆ ಭೇಟಿ ನೀಡಿದ ಸ್ಟೇಷನ್‌ಗಳು, ವಹಿವಾಟಿನ ಇತಿಹಾಸ ಹಾಗೂ ಹೆಚ್ಚುವರಿ ಟಿಕೆಟ್‌ಗಳಂತಹ ಮಾಹಿತಿಯನ್ನು ಕಾಂಟ್ಯಾಕ್ಟ್‌ಲೆಸ್ ಕಾರ್ಡ್ ರೀಡರ್ ಆ್ಯಕ್ಸೆಸ್ ಮಾಡಬಹುದು. ಕಾರ್ಡ್ ಅನ್ನು ನಿಮ್ಮ ಎಕ್ಸ್‌ಪ್ರೆಸ್ ಸಾರಿಗೆ ಕಾರ್ಡ್ (Touch ID, Face ID ಅಥವಾ ಪಾಸ್‌ಕೋಡ್‌ಗಳಿಲ್ಲದಯೇ ನಿಮಗೆ ವಹಿವಾಟುಗಳನ್ನು ಪೂರ್ಣಗೊಳಿಸಲು ಅನುಮತಿಸುವ ಸೆಟ್ಟಿಂಗ್) ಎಂದು ಸೆಟ್ ಮಾಡಿದ್ದರೆ, ಈ ಮಾಹಿತಿಯನ್ನು ಸಮೀಪದಲ್ಲಿರುವ ಯಾವುದೇ ಕಾಂಟ್ಯಾಕ್ಟ್‌ಲೆಸ್ ಕಾರ್ಡ್ ರೀಡರ್ ಆ್ಯಕ್ಸೆಸ್ ಮಾಡಬಹುದು. ನೀವು ನಿಮ್ಮ iOS ಸಾಧನದಲ್ಲಿ ಸೆಟ್ಟಿಂಗ್ಸ್ > ವಾಲೆಟ್ & Apple Payಗೆ ಹೋಗುವ ಮೂಲಕ ಅಥವಾ Apple Watchನಲ್ಲಿ ವಾಲೆಟ್ & Apple Pay > ಎಕ್ಸ್‌ಪ್ರೆಸ್ ಸಾರಿಗೆ ಕಾರ್ಡ್ ಎನ್ನುವಲ್ಲಿ ಹೋಗಿ ಪಾವತಿ ಕಾರ್ಡ್ ಎನ್ನುವುದನ್ನು ಟ್ಯಾಪ್ ಮಾಡುವ ಮೂಲಕ ಎಕ್ಸ್‌ಪ್ರೆಸ್ ಸಾರಿಗೆಯನ್ನು ನಿರ್ವಹಿಸಬಹುದು.
ರಿವಾರ್ಡ್‌ಗಳು ಹಾಗೂ ಗಿಫ್ಟ್ ಕಾರ್ಡ್‌ಗಳನ್ನು ಸೇರಿಸುವುದು ಮತ್ತು ನಿರ್ವಹಿಸುವುದು
ನೀವು ನಿಮ್ಮ ಅರ್ಹ ರಿವಾರ್ಡ್‌ಗಳು ಹಾಗೂ ವಾಲೆಟ್‌ನಲ್ಲಿ ಸಂಗ್ರಹಿಸಲಾದ ಗಿಫ್ಟ್ ಕಾರ್ಡ್‌ಗಳನ್ನು ಆಯ್ದ ಸ್ಟೋರ್‌ಗಳಲ್ಲಿ ಕಾಂಟ್ಯಾಕ್ಟ್‌ಲೆಸ್ ರಿವಾರ್ಡ್‌ಗಳು ಹಾಗೂ ಗಿಫ್ಟ್ ಕಾರ್ಡ್ ವಹಿವಾಟುಗಳನ್ನು ನಡೆಸಲು ಬಳಸಬಹುದು. ನೀವು ವಾಲೆಟ್‌ಗೆ ರಿವಾರ್ಡ್‌ಗಳು ಅಥವಾ ಗಿಫ್ಟ್ ಕಾರ್ಡ್ ಅನ್ನು ಸೇರಿಸಿದರೆ, ನಿಮ್ಮ ಖಾತೆ ಅಥವಾ ಕಾರ್ಡ್ ಕುರಿತ ಮಾಹಿತಿಯನ್ನು (ಐಡೆಂಟಿಫೈಯರ್ ಅನ್ನು ಒಳಗೊಂಡಂತೆ) ನಿಮ್ಮ ಸಾಧನದಲ್ಲಿ ಸಂಗ್ರಹಿಸಲಾಗುತ್ತದೆ ಹಾಗೂ iCloud ಮೂಲಕ ಸಿಂಕ್ ಮಾಡಲಾಗುತ್ತದೆ. ನೀವು ಸೆಟ್ಟಿಂಗ್ಸ್ > [ನಿಮ್ಮ ಹೆಸರು] > iCloud > iCloud ಅನ್ನು ಬಳಸುತ್ತಿರುವ ಆ್ಯಪ್‌ಗಳು > ಎಲ್ಲವನ್ನೂ ತೋರಿಸಿ ಎನ್ನುವಲ್ಲಿ ಹೋಗಿ ವಾಲೆಟ್ ಅನ್ನು ಆಫ್ ಮಾಡಿ ಎನ್ನುವುದನ್ನು ಟ್ಯಾಪ್ ಮಾಡುವ ಮೂಲಕ iCloud ಸಿಂಕ್ ಮಾಡುವಿಕೆಯನ್ನು ನಿಷ್ಕ್ರಿಯಗೊಳಿಸಬಹುದು.
Apple Gift Card ಅನ್ನು ರಿಡೀಮ್ ಮಾಡಿದ ನಂತರ ಅಥವಾ ನಿಮ್ಮ Apple ಖಾತೆಯ ಬ್ಯಾಲೆನ್ಸ್‌ಗೆ ಮೌಲ್ಯವನ್ನು ಸೇರಿಸಿದ ನಂತರ, ನಿಮ್ಮ ಇತ್ತೀಚಿನ ವಹಿವಾಟುಗಳನ್ನು ನೀವು ಸುಲಭವಾಗಿ ನೋಡಲು ಸಾಧ್ಯವಾಗುವ ಹಾಗೆ ಹಾಗೂ Apple Storesನಲ್ಲಿ ನಿಮ್ಮ Apple Account ಬ್ಯಾಲೆನ್ಸ್ ಅನ್ನು ಬಳಸಲು ಸಾಧ್ಯವಾಗುವ ಹಾಗೆ ನಿಮ್ಮ Apple Account ಕಾರ್ಡ್ ಅನ್ನು ವಾಲೆಟ್‌ಗೆ ಸೇರಿಸಲಾಗುತ್ತದೆ.
ನೀವು ಸ್ಟೋರ್‌ಗಳಲ್ಲಿ ನಿಮ್ಮ ರಿವಾರ್ಡ್‌ಗಳ ಕಾರ್ಡ್ ಅಥವಾ ಗಿಫ್ಟ್ ಕಾರ್ಡ್ ಅನ್ನು ಬಳಸಿದಾಗ, ಪಾವತಿ ಟರ್ಮಿನಲ್ ವಹಿವಾಟಿನ ಭಾಗವಾಗಿ ನಿಮ್ಮ ಸಾಧನದಲ್ಲಿ ಅದರ ಸಹಯೋಗಿ ರಿವಾರ್ಡ್‌ಗಳ ಅಥವಾ ಗಿಫ್ಟ್ ಕಾರ್ಡ್‌ನಿಂದ ರಿವಾರ್ಡ್‌ಗಳ ಅಥವಾ ಗಿಫ್ಟ್ ಕಾರ್ಡ್ ಐಡೆಂಟಿಫೈಯರ್‌ಗಾಗಿ ಕೇಳಬಹುದು. ನೀವು ವಾಲೆಟ್‌ನಲ್ಲಿ ಈ ಕಾರ್ಡ್ ಅನ್ನು ಆಯ್ಕೆ ಮಾಡಿ ಕಾರ್ಡ್ ವಿವರಗಳಲ್ಲಿ ಸ್ವಯಂಚಾಲಿತ ಆಯ್ಕೆಯನ್ನು ನಿಷ್ಕ್ರಿಯಗೊಳಿಸುವ ಮೂಲಕ ಈ ಕಾರ್ಯವನ್ನು ನಿಷ್ಕ್ರಿಯಗೊಳಿಸಬಹುದು. ಆಯ್ದ ಸ್ಟೋರ್‌ಗಳಲ್ಲಿ, ಪಾವತಿ ಟರ್ಮಿನಲ್ ನಿಮ್ಮ ಸಾಧನದಿಂದ ರಿವಾರ್ಡ್ಸ್ ಕಾರ್ಡ್ ಐಡೆಂಟಿಫೈಯರ್ ಅನ್ನು ಪಡೆಯದಿದ್ದರೆ, ಅದು ನಿಮ್ಮ ರಿವಾರ್ಡ್‌ಗಳ ಕಾರ್ಡ್ ಅನ್ನು ವಾಲೆಟ್‌ಗೆ ಸೇರಿಸಲು ಬಯಸುತ್ತೀರಾ ಅಥವಾ ನೀವು ಸದಸ್ಯರಲ್ಲದಿದ್ದಲ್ಲಿ ವ್ಯಾಪಾರಿಯ ರಿವಾರ್ಡ್‌ಗಳ ಪ್ರೋಗ್ರಾಂಗೆ ಸೇರಿಕೊಳ್ಳಲು ಬಯಸುತ್ತೀರಾ ಎಂದು ಕೇಳುವ ಒಂದು ನೋಟಿಫಿಕೇಷನ್ ಅನ್ನು ಕಳುಹಿಸಬಹುದು. ರಿವಾರ್ಡ್‌ಗಳಿಗೆ ಸೈನ್ ಅಪ್ ಮಾಡುವುದಕ್ಕೆ ಸಂಬಂಧಿಸಿದಂತೆ ವ್ಯಾಪಾರಿಯು ನೀವು ಅವರಿಗೆ ನಿಮ್ಮ ಹೆಸರು, ಪೋಸ್ಟಲ್ ಕೋಡ್, ಈಮೇಲ್ ವಿಳಾಸ ಹಾಗೂ ದೂರವಾಣಿ ಸಂಖ್ಯೆಯಂತಹ ಮಾಹಿತಿಯನ್ನು ನೀಡಬೇಕೆಂದು ವಿನಂತಿಸಬಹುದು. ನೀವು ಒಂದು ವ್ಯಾಪಾರಿಯ ರಿವಾರ್ಡ್‌ಗಳ ಕಾರ್ಡ್ ಅನ್ನು ವೈಯಕ್ತಿಕಗೊಳಿಸಿದಾಗ Apple ಅದರ ಸೂಚನೆಯನ್ನು ಪಡೆದರೂ ನೀವು ಹಂಚಿಕೊಳ್ಳುವ ಮಾಹಿತಿಯನ್ನು ನಿಮ್ಮ ಸಾಧನದಿಂದ ನೇರವಾಗಿ ವ್ಯಾಪಾರಿಗೆ ಕಳುಹಿಸಲಾಗುತ್ತದೆ ಹಾಗೂ ವ್ಯಾಪಾರಿಯ ಗೌಪ್ಯತಾ ನೀತಿಗೆ ಅನುಗುಣವಾಗಿ ಅದನ್ನು ನೋಡಿಕೊಳ್ಳಲಾಗುತ್ತದೆ.
ವಿದ್ಯಾರ್ಥಿ ID ಕಾರ್ಡ್‌ಗಳನ್ನು ಸೇರಿಸುವುದು ಮತ್ತು ನಿರ್ವಹಿಸುವುದು
ನೀವು ವಾಲೆಟ್‌ಗೆ ಬೆಂಬಲಿತ ವಿದ್ಯಾರ್ಥಿ ID ಕಾರ್ಡ್ ಅನ್ನು ಸೇರಿಸಲು ಆಯ್ಕೆ ಮಾಡಿದರೆ, ನಿಮ್ಮ ವಿದ್ಯಾರ್ಥಿ ID ಕಾರ್ಡ್ ಕುರಿತ ಹಾಗೂ ಕೆಲವು ಸಾಧನದ ಸೆಟ್ಟಿಂಗ್ಸ್ ಅನ್ನು ಸಕ್ರಿಯಗೊಳಿಸಲಾಗಿದೆಯೇ ಎನ್ನುವ ಮಾಹಿತಿಯನ್ನು Appleಗೆ ನೀಡಬಹುದು. Apple ನಿಮ್ಮ ಶಾಲೆಗೂ ಹಾಗೂ ನಿಮ್ಮ ಶಾಲೆಯು ಅಧಿಕಾರ ನೀಡಿದ ಪೂರೈಕೆದಾರರಿಗೂ ನಿಮ್ಮ ID ಕಾರ್ಡ್ ಅನ್ನು ಸಕ್ರಿಯಗೊಳಿಸಲು, ಅರ್ಹತೆಯನ್ನು ನಿರ್ಧರಿಸಲು, ನಿಮ್ಮ ಕಾರ್ಡ್ ಅನ್ನು ಸೆಟಪ್ ಮಾಡಲು, ಮೋಸವನ್ನು ತಡೆಗಟ್ಟಲು ಮಾಹಿತಿ ನೀಡಬಹುದಾಗಿದ್ದು ಅದು ಈ ಕೆಳಗಿನವುಗಳನ್ನು ಒಳಗೊಂಡಿರಬಹುದು:
- ನಿಮ್ಮ ವಿದ್ಯಾರ್ಥಿ ID ಕಾರ್ಡ್ ಸಂಖ್ಯೆ
- ನಿಮ್ಮ Apple ಖಾತೆಗೆ ಸಂಬಂಧಿಸಿದ ಹೆಸರು ಮತ್ತು ಬಿಲ್ಲಿಂಗ್ ವಿಳಾಸ
- ನಿಮ್ಮ ಸಾಧನದ ಕುರಿತಾದ ಮಾಹಿತಿ ಹಾಗೂ Apple Watch ಬಳಸುತ್ತಿದ್ದಲ್ಲಿ, ಪೇರ್ ಮಾಡಿದ iOS ಸಾಧನ (ಉದಾಹರಣೆಗೆ, ಸಾಧನದ ಐಡೆಂಟಿಫೈಯರ್ ಮತ್ತು ನಿಮ್ಮ ಸಾಧನದ ಮಾಡಲ್)
Apple ನಿಮ್ಮ ವಿದ್ಯಾರ್ಥಿ ID ಫೋಟೋವನ್ನು ಪಡೆಯುತ್ತದೆ ಹಾಗೂ ಅದನ್ನು ನಿಮ್ಮ Apple ಖಾತೆಯ ಜೊತೆಗೆ ಸಂಗ್ರಹಿಸುತ್ತದೆ. ನೀವು ಒಂದು ವಿದ್ಯಾರ್ಥಿ ID ಕಾರ್ಡ್ ಅನ್ನು ಬಳಸಿದಾಗ, ಕಾರ್ಡ್ ಅನ್ನು ಎಕ್ಸ್‌ಪ್ರೆಸ್ ಮೋಡ್‌ನಲ್ಲಿ (Touch ID, Face ID ಅಥವಾ ಪಾಸ್‌ಕೋಡ್‌ಗಳಿಲ್ಲದೇ ನಿಮಗೆ ವಹಿವಾಟುಗಳನ್ನು ಪೂರ್ಣಗೊಳಿಸಲು ಅನುಮತಿಸುವ ಸೆಟ್ಟಿಂಗ್) ಕೆಲಸ ಮಾಡುವಂತೆ ಸೆಟ್ ಮಾಡಿದ್ದರೆ, ಕಾಂಟ್ಯಾಕ್ಟ್‌ಲೆಸ್ ಕಾರ್ಡ್ ರೀಡರ್‌ಗಳು ನಿಮ್ಮ ID ಕಾರ್ಡ್ ಸಂಖ್ಯೆಯನ್ನು ಆ್ಯಕ್ಸೆಸ್ ಮಾಡಬಹುದು. ನೀವು ನಿಮ್ಮ iPhoneನಲ್ಲಿ ಎಕ್ಸ್‌ಪ್ರೆಸ್ ಮೋಡ್ ಅನ್ನು ಸೆಟ್ಟಿಂಗ್ಸ್ > ವಾಲೆಟ್ & Apple Payಯಲ್ಲಿ ಅಥವಾ Apple Watch ಆ್ಯಪ್‌ನಲ್ಲಿ ವಾಲೆಟ್ & Apple Payಯನ್ನು ಟ್ಯಾಪ್ ಮಾಡುವ ಮೂಲಕ ನಿರ್ವಹಿಸಬಹುದು.
ಕಾರ್ ಕೀಗಳನ್ನು ಸೇರಿಸುವುದು ಮತ್ತು ನಿರ್ವಹಿಸುವುದು
ವಾಲೆಟ್ ನಿಮಗೆ ಕೆಲವು ವಾಹನಗಳಿಗೆ ಕಾರ್ ಕೀಗಳನ್ನು ಸೇರಿಸಲು ಹಾಗೂ ಹಂಚಿಕೊಳ್ಳಲು ಅನುಮತಿಸುತ್ತದೆ. ನೀವು ವಾಹನವನ್ನು ನಿಮ್ಮದೇ ಎಂದು ಸಾಬೀತುಪಡಿಸಲು ಒಂದು ಪೇರಿಂಗ್ ಕೋಡ್ ಅನ್ನು ನಮೂದಿಸಿ ನಿಮ್ಮ ವಾಹನವನ್ನು ನಿಮ್ಮ ಸಾಧನದ ಜೊತೆಗೆ ಪೇರ್ ಮಾಡುವ ಮೂಲಕ ವಾಲೆಟ್‌ನಲ್ಲಿ ಒಂದು ಕಾರ್ ಕೀಲಿಯನ್ನು ಸೇರಿಸಬಹುದು. ಯಶಸ್ವಿಯಾದಲ್ಲಿ, ನಿಮ್ಮ ಸಾಧನವು ನೋಂದಣಿಯ ನೈಜತೆಯನ್ನು ದೃಢೀಕರಿಸಲು Appleಗೆ ಮಾಹಿತಿಯನ್ನು ಕಳುಹಿಸುತ್ತದೆ ಹಾಗೂ ಇದನ್ನು Apple ವಾಹನದ ತಯಾರಕರಿಗೆ ಕಳುಹಿಸುತ್ತದೆ; ಈ ಮಾಹಿತಿಯನ್ನು ಕೇವಲ ವಾಹನದ ತಯಾರಕರಷ್ಟೇ ನೋಡಬಹುದು ಹೊರತು Apple ಅಲ್ಲ.
ನಿಮ್ಮ ಕಾರ್ ಕೀಯನ್ನು ಸೆಟಪ್ ಮಾಡಲು, Apple ನಿಮ್ಮ ವಾಹನದ ತಯಾರಕರ ಜೊತೆಗೆ ಐಡೆಂಟಿಫೈಯರ್ ಅನ್ನು ಹಂಚಿಕೊಳ್ಳುತ್ತದೆ. ಈ ಸಾಧನದ ಐಡೆಂಟಿಫೈಯರ್ ಪ್ರತಿ ವಾಹನ ತಯಾರಕರಿಗೂ ವಿಭಿನ್ನವಾಗಿರುತ್ತದೆ ಹಾಗೂ ಸೆಟ್ಟಿಂಗ್ಸ್ > ಸಾಮಾನ್ಯ > ರೀಸೆಟ್ > ಎಲ್ಲ ಕಂಟೆಂಟ್ ಹಾಗೂ ಸೆಟ್ಟಿಂಗ್ಸ್ ಅನ್ನು ಅಳಿಸಿ ಎನ್ನುವಲ್ಲಿ ಹೋಗುವ ಮೂಲಕ ಅದನ್ನು ರೀಸೆಟ್ ಮಾಡಬಹುದು. ನಿಮ್ಮ ವಾಹನದ ತಯಾರಕರು ನಿಮ್ಮ ಬಗ್ಗೆ ಹೊಂದಿರುವ ಇತರ ಮಾಹಿತಿಯೊಂದಿಗೆ ಈ ಸಾಧನದ ಐಡೆಂಟಿಫೈಯರ್ ಅನ್ನು ಕನೆಕ್ಟ್ ಮಾಡಬಹುದು ಹಾಗೂ ತನ್ನ ಗೌಪ್ಯತಾ ನೀತಿಯ ಪ್ರಕಾರ ಅವರು ನಿಮ್ಮ ಬಗ್ಗೆ ಹೊಂದಿರುವ ಮಾಹಿತಿಯನ್ನು ಪ್ರಕ್ರಿಯೆಗೊಳಿಸಬಹುದು.
ನೀವು ನಿಮ್ಮ ಕಾರ್ ಕೀ ಪಾಸ್ ಹಿಂಭಾಗದಲ್ಲಿರುವ ಆಹ್ವಾನವನ್ನು ಟ್ಯಾಪ್ ಮಾಡಿ, ನೀವು ನೀಡಲು ಬಯಸುವ ಆ್ಯಕ್ಸೆಸ್ ಪ್ರಕಾರವನ್ನು ಆಯ್ಕೆ ಮಾಡಿ, iMessage ಅನ್ನು ಬಳಸಿ ಕಾರ್ ಕೀ ಪಾಸ್ ಅನ್ನು ಹಂಚಿಕೊಳ್ಳುವ ಮೂಲಕ ಕಾರ್ ಕೀಗಳನ್ನು ಹಂಚಿಕೊಳ್ಳಬಹುದು ಕಾರ್ ಕೀ ಪಾಸ್‌ಗಳನ್ನು ಸೆಟಪ್ ಮಾಡುವುದಕ್ಕೆ ಸಹಾಯ ಮಾಡಲು ಹಾಗೂ ನಿರ್ವಹಿಸಲು, Apple ಪಾಸ್ ಅನ್ನು ಹಂಚಿಕೊಂಡಿರುವವರ ಕುರಿತು ಹಾಗೂ ಯಾವ ಮಟ್ಟದ ಆ್ಯಕ್ಸೆಸ್ ಅನ್ನು ನೀಡಲಾಗಿದೆ ಎನ್ನುವ ಮಾಹಿತಿಯನ್ನು ವಾಹನ ತಯಾರಕರಿಗೆ ಕಳುಹಿಸುತ್ತದೆ. Apple ವಾಹನ ತಯಾರಕರು ನಿಮ್ಮ ಪಾಸ್ ಅನ್ನು ನಿರ್ವಹಿಸಲು ಸಾಧ್ಯವಾಗುವ ಹಾಗೆ ಅವರ ಜೊತೆಗೆ ಪಾಸ್ ಅನ್ನು ಪಡೆದವರ ಒಂದು ಐಡೆಂಟಿಫೈಯರ್ ಅನ್ನೂ ಹಂಚಿಕೊಳ್ಳುತ್ತದೆ. ಪಾಸ್ ಅನ್ನು ಪಡೆದವರಿಗೆ, ಮಾಲೀಕರ ಜೊತೆಗೆ ಇರುವಂತೆ, ವಾಹನ ತಯಾರಕರು ಸ್ವೀಕರಿಸುವವರ ಕುರಿತು ಅವರು ಹೊಂದಿರಬಹುದಾದ ಇತರ ಮಾಹಿತಿಯನ್ನು ಸಾಧನದ ಐಡೆಂಟಿಫೈಯರ್ ಜೊತೆಗೆ ಕನೆಕ್ಟ್ ಮಾಡಬಹುದು ಹಾಗೂ ತಮ್ಮ ಗೌಪ್ಯತೆ ನೀತಿಗೆ ಅನುಗುಣವಾಗಿ ಅಂತಹ ಮಾಹಿತಿಯನ್ನು ಪ್ರಕ್ರಿಯೆಗೊಳಿಸಬಹುದು.
Apple ನೀವು ವಾಹನವನ್ನು ಲಾಕ್ ಮಾಡಲು ಅಥವಾ ಅನ್‌ಲಾಕ್ ಮಾಡಲು ಯಾವಾಗ ನಿಮ್ಮ ಕಾರ್ ಕೀ ಪಾಸ್ ಅನ್ನು ಬಳಸುತ್ತೀರಿ ಎನ್ನುವಂತಹ ವಾಹನದ ಬಳಕೆಯ ಬಗೆಗಿನ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಅಥವಾ ಇರಿಸಿಕೊಳ್ಳುವುದಿಲ್ಲ. ನಿಮ್ಮ ವಾಹನ ತಯಾರಕರು ನೀವು ಅವರ ಜೊತೆಗೆ ಹೊಂದಿರುವ ಒಪ್ಪಂದದ ಪ್ರಕಾರ ವಾಹನದ ಬಳಕೆಯ ಮಾಹಿತಿಯನ್ನು ಸಂಗ್ರಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ವಾಹನ ತಯಾರಕರ ಗೌಪ್ಯತಾ ನೀತಿಯನ್ನು ಪರಿಶೀಲಿಸುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.
ಮನೆಯ ಕೀಗಳನ್ನು ಸೇರಿಸುವುದು ಮತ್ತು ನಿರ್ವಹಿಸುವುದು
ಮನೆ ಆ್ಯಪ್ ಜೊತೆಗಿನ ಒಂದು ಬೀಗವನ್ನು ಸೇರಿಸುವಂಥ ಒಂದು HomeKit-ಸಕ್ರಿಯಗೊಳಿಸಿದ ಬೀಗವನ್ನು ನಿಮ್ಮ ಮನೆಗೆ ಸೇರಿಸಿದಾಗ ಮನೆಯ ಕೀಲಿಯನ್ನು ಸ್ವಯಂಚಾಲಿತವಾಗಿ ವಾಲೆಟ್‌ಗೆ ಸೇರಿಸಲಾಗುತ್ತದೆ. ಪ್ರತೀ ಮನೆಗೂ ಒಂದು ಮನೆಯ ಕೀಲಿ ಇರುತ್ತದೆ; ನಿಮ್ಮ ಮನೆಗೆ ಅನೇಕ ಕೀಲಿಗಳಿದ್ದಲ್ಲಿ, ನೀವು ಮನೆ ಆ್ಯಪ್ ಒಳಗಡೆ ಅಥವಾ HomeKit-ಸಕ್ರಿಯಗೊಳಿಸಿದ ಬೀಗಗಳನ್ನು ನಿರ್ವಹಿಸಲು ನೀವು ಬಳಸುವ ಯಾವುದೇ ಆ್ಯಪ್‌ನಲ್ಲಿ ಬೀಗಗಳನ್ನು ನೋಡಬಹುದು ಹಾಗೂ ನಿರ್ವಹಿಸಬಹುದು. ನೀವು ಮನೆಯ ಸದಸ್ಯರಲ್ಲದಿದ್ದಾಗ ಅಥವಾ ಎಲ್ಲಾ HomeKit-ಸಕ್ರಿಯಗೊಳಿಸಿದ ಲಾಕ್‌ಗಳನ್ನು ನಿಮ್ಮ ಮನೆಯಿಂದ ತೆಗೆದುಹಾಕಿದಾಗ ನಿಮ್ಮ ಮನೆ ಕೀಯನ್ನು ಸ್ವಯಂಚಾಲಿತವಾಗಿ ವಾಲೆಟ್‌ನಿಂದ ಡಿಲೀಟ್ ಮಾಡಲಾಗುತ್ತದೆ.
ಆರೋಗ್ಯ ಆ್ಯಪ್‌ನಲ್ಲಿ ಲಸಿಕೆಯ ಕಾರ್ಡ್‌ಗಳನ್ನು ಸೇರಿಸುವುದು ಹಾಗೂ ನಿರ್ವಹಿಸುವುದು
ನಿಮ್ಮ ಲಸಿಕೆಯ ಕಾರ್ಡ್ ಅನ್ನು ಶೀಘ್ರವಾಗಿ ಆ್ಯಕ್ಸೆಸ್ ಮಾಡಲು ನೀವು ನಿಮ್ಮ ಲಸಿಕೆಯ ಕಾರ್ಡ್ ಅನ್ನು ಆರೋಗ್ಯ ಆ್ಯಪ್‌ಗೆ ಸೇರಿಸಲು ಒಂದು QR ಕೋಡ್ ಅನ್ನು ಬಳಸಿದಾಗ ಅಥವಾ ಒಂದು ಲಿಂಕ್ ಡೌನ್‌ಲೋಡ್ ಮಾಡಿದಾಗ, ನಿಮ್ಮ ಲಸಿಕೆಯ ಕಾರ್ಡ್ ಅನ್ನೂ ಕೂಡ ವಾಲೆಟ್‌ಗೆ ಸೇರಿಸಲಾಗುತ್ತದೆ. ಒಂದು ಲಸಿಕೆಯ ಕಾರ್ಡ್ ಅನ್ನು ವಾಲೆಟ್‌ಗೆ ಸೇರಿಸಿದಾಗ ವಾಲೆಟ್ ನಿಮ್ಮ ಲಸಿಕೆಯ ದಾಖಲೆಯ ಒಂದು ಕಾಪಿಯನ್ನು ನೀವು ಲಸಿಕೆಯ ಕಾರ್ಡ್ ಅನ್ನು ಸೇರಿಸಿದ ಸಾಧನದಲ್ಲಿ ಉಳಿಸಿಕೊಳ್ಳುತ್ತದೆ. ನಿಮ್ಮ ಲಸಿಕೆಯ ಕಾರ್ಡ್ ನಿಮ್ಮ ಹೆಸರು, ಜನ್ಮದಿನಾಂಕ, ಲಸಿಕೆಯ ಪ್ರಕಾರ ಹಾಗೂ ಲಸಿಕೆಯ ದಿನಾಂಕದಂಥ(ಗಳಂತಹ) ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಮಾಹಿತಿಯನ್ನು ನಿಮ್ಮ ಸಾಧನವು ನಿಮ್ಮ ಲಸಿಕೆಯ ಕಾರ್ಡ್ ಅನ್ನು ಡಿಸ್‌ಪ್ಲೇ ಮಾಡಲು ಬಳಸುತ್ತದೆ. ವಾಲೆಟ್‌ನಲ್ಲಿ ಸ್ಟೋರ್ ಮಾಡಲಾದ ಲಸಿಕೆಯ ಕಾರ್ಡ್ ಅನ್ನು ನಿಮ್ಮ ಸಾಧನಗಳಲ್ಲಿ ಸಿಂಕ್ ಮಾಡಲಾಗಿರುವುದಿಲ್ಲ ಹಾಗೂ ಇದನ್ನು iCloudಗೆ ಬ್ಯಾಕಪ್ ಮಾಡಲಾಗಿರುವುದಿಲ್ಲ. Appleಗೆ ನಿಮ್ಮ ಲಸಿಕೆಯ ಕಾರ್ಡ್ ಮೇಲಿರುವ ಅಥವಾ ಲಸಿಕೆಯ ಕಾರ್ಡ್ ಬಳಕೆಯ ಕುರಿತ ಮಾಹಿತಿಯನ್ನು ನೋಡಲು ಸಾಧ್ಯವಿಲ್ಲ.
ನೀವು Face ID, Touch ID ಅಥವಾ ಪಾಸ್‌ಕೋಡ್ ಮೂಲಕ ದೃಢೀಕರಿಸದ ಹೊರತು ನಿಮ್ಮ ಲಸಿಕೆಯ ಕಾರ್ಡ್‌ನ ಸಂಪೂರ್ಣ ವಿವರಗಳು ಲಾಕ್ ಸ್ಕ್ರೀನ್‌ನಲ್ಲಿ ಗೋಚರಿಸುವುದಿಲ್ಲ. ನಿಮ್ಮ ಲಸಿಕೆಯ ಕಾರ್ಡ್ ವಿವರಗಳನ್ನು ಪ್ರಸ್ತುತಪಡಿಸಲು ನೀವು ಮೊದಲು ದೃಢೀಕರಿಸಬೇಕು. ದೃಢೀಕರಿಸಿದ ನಂತರ, ನಿಮ್ಮ ಸಾಧನಕ್ಕೆ ಆ್ಯಕ್ಸೆಸ್ ಹೊಂದಿರುವ ಯಾರಾದರೂ ನಿಮ್ಮ ಸಾಧನದ ಸ್ಕ್ರೀನ್‌ನಲ್ಲಿ ಡಿಸ್‌ಪ್ಲೇ ಮಾಡಿದಾಗ ನಿಮ್ಮ ಲಸಿಕೆಯ ಕಾರ್ಡ್ ಅನ್ನು ನೋಡಲು ಸಾಧ್ಯವಾಗುತ್ತದೆ, ಇದರಿಂದ ನಿಮ್ಮ ಸಾಧನವನ್ನು ಸುರಕ್ಷಿತವಾಗಿರಿಸಲು ನೀವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ನೀವು ಯಾವುದೇ ಸಮಯದಲ್ಲೂ ವಾಲೆಟ್‌ನಲ್ಲಿ ನಿಮ್ಮ ಲಸಿಕೆಯ ದಾಖಲೆಯನ್ನು ತೆಗೆಯಬಹುದು. ವಾಲೆಟ್‌ನಿಂದ ನಿಮ್ಮ ಲಸಿಕೆಯ ಕಾರ್ಡ್ ಅನ್ನು ತೆಗೆದುಹಾಕುವುದು ಆರೋಗ್ಯ ಆ್ಯಪ್‌ನಲ್ಲಿ ಸ್ಟೋರ್ ಮಾಡಲಾದ ನಿಮ್ಮ ಲಸಿಕೆಯ ಕಾರ್ಡ್‌ನ ಕಾಪಿಯನ್ನು ಡಿಲೀಟ್ ಮಾಡುವುದಿಲ್ಲ. ನೀವು ಯಾವುದೇ ಸಮಯದಲ್ಲೂ ಆರೋಗ್ಯ ಆ್ಯಪ್‌ನಲ್ಲಿ ನಿಮ್ಮ ಲಸಿಕೆಯ ದಾಖಲೆಯನ್ನು ಡಿಲೀಟ್ ಮಾಡಬಹುದು. ನೀವು ಆರೋಗ್ಯ ಆ್ಯಪ್‌ನಿಂದ ನಿಮ್ಮ ಲಸಿಕೆಯ ಡೇಟವನ್ನು ಡಿಲೀಟ್ ಮಾಡಿದರೆ, ವಾಲೆಟ್‌ನಲ್ಲಿರುವ ಸಂಬಂಧಿತ ಲಸಿಕೆಯ ಕಾರ್ಡ್ ಅನ್ನು ಕೂಡ ಡಿಲೀಟ್ ಮಾಡಲಾಗುತ್ತದೆ.
ಸ್ವಯಂಭರ್ತಿ ಕಾರ್ಡ್‌ಗಳು
ನಿಮ್ಮ ಅನುಕೂಲತೆಗಾಗಿ, ಸೆಟ್ಟಿಂಗ್ಸ್ > ವಾಲೆಟ್ ಮತ್ತು Apple Pay ಎಂಬುದರಲ್ಲಿ ಈಗ ನಿಮ್ಮ ಸೇವ್ ಮಾಡಲಾದ ಸ್ವಯಂಭರ್ತಿ ಕಾರ್ಡ್‌ಗಳನ್ನು ನಿರ್ವಹಿಸಬಹುದು. ಸ್ವಯಂಭರ್ತಿ ಕಾರ್ಡ್‌ಗಳು ನಿಮ್ಮ iCloud ಕೀಚೇನ್‌ನಲ್ಲಿ ಸಂಗ್ರಹವಾಗುತ್ತವೆಯೇ ಹೊರತು Apple ವಾಲೆಟ್‌ನಲ್ಲಿ ಸಂಗ್ರಹವಾಗುವುದಿಲ್ಲ. ಸೆಟ್ಟಿಂಗ್ಸ್ > ವಾಲೆಟ್ ಮತ್ತು Apple Pay ಎಂಬಲ್ಲಿಗೆ ಹೋಗಿ “ಈ ಕಾರ್ಡ್‌ಗಳನ್ನು Apple Pay ಜೊತೆಗೆ ಬಳಸಿ” ಎಂಬುದನ್ನು ಆನ್ ಮಾಡುವ ಮೂಲಕ, ನೀವು ಸ್ವಯಂಭರ್ತಿ ಕಾರ್ಡ್‌ಗಳನ್ನು Apple Pay ಜೊತೆಗೆ ಬಳಸಲು ಆಯ್ಕೆಮಾಡಬಹುದು. ಸಕ್ರಿಯಗೊಳಿಸಿದಾಗ, Apple Pay ಅರ್ಹತೆಯನ್ನು ನಿರ್ಧರಿಸಲು ನಿಮ್ಮ iCloud ಕೀಚೇನ್‌ನಲ್ಲಿನ ನಿಮ್ಮ ಸ್ವಯಂಭರ್ತಿ ಕಾರ್ಡ್ ಸಂಖ್ಯೆಗಳನ್ನು ನಿಮ್ಮ ಸಾಧನವು ನಿಮ್ಮ ಕಾರ್ಡ್‌ಗಳ ಪಾವತಿ ನೆಟ್‌ವರ್ಕ್‌ಗಳೊಂದಿಗೆ ಹಂಚಿಕೊಳ್ಳುತ್ತದೆ. ಅರ್ಹರಾಗಿದ್ದರೆ, ಹೆಚ್ಚು ಸುರಕ್ಷಿತ ವಹಿವಾಟುಗಳನ್ನು ಸಾಧ್ಯವಾಗಿಸುವುದಕ್ಕಾಗಿ ನಿಮ್ಮ ಸೇವ್ ಮಾಡಲಾದ ಸ್ವಯಂಭರ್ತಿ ಕಾರ್ಡ್‌ಗಳನ್ನು Apple Payಗೆ ಸೇರಿಸಲು ನೀವು ಮುಂದುವರಿಯಬಹುದು.
ನಿಮ್ಮೊಂದಿಗೆ ಸಂವಹನ ನಡೆಸುವುದು
Apple ವಾಲೆಟ್ ಮತ್ತು ನಿಮಗೆ ಆಸಕ್ತಿಯಿರುವ ಇತರ Apple ಉತ್ಪನ್ನಗಳು, ಸೇವೆಗಳು ಮತ್ತು ಆಫರ್‌ಗಳ ಕುರಿತಾದ ಸಂವಹನಗಳನ್ನು ನಿಮಗೆ ಕಳುಹಿಸಲು, ನೀವು ವಾಲೆಟ್ ಆ್ಯಪ್‌ಗೆ ಸೇರಿಸಿರುವ ಪಾಸ್‌ಗಳ ಪ್ರಕಾರಗಳು ಮತ್ತು ನಿಮ್ಮ iCloud ಕುಟುಂಬದ ಸ್ಟೇಟಸ್‌ನ ಮಾಹಿತಿಯೂ ಸೇರಿದಂತೆ, ನಿಮ್ಮ ಖಾತೆಯ ಕುರಿತಾದ ಮಾಹಿತಿಯನ್ನು Apple ಬಳಸಬಹುದು. ಸೂಕ್ತವಾದ ಸಂವಹನಗಳನ್ನು ಗುರುತಿಸಲು ನಿಮ್ಮ ಸಾಧನವು Apple ವಾಲೆಟ್‌ನಲ್ಲಿನ ನಿಮ್ಮ ಚಟುವಟಿಕೆ ಮತ್ತು ನಿಮ್ಮ ಅಂದಾಜು ಸ್ಥಳದ (ಸ್ಥಳ ಸೇವೆಗಳನ್ನು ಸಕ್ರಿಯಗೊಳಿಸಿರುವಲ್ಲಿ) ಕುರಿತಾದ ಮಾಹಿತಿಯನ್ನು ಸಹ ಬಳಸಬಹುದು. ಉದಾಹರಣೆಗೆ, ನಿಮ್ಮ ಮೆಟ್ರೊಪಾಲಿಟನ್ ಪ್ರದೇಶದಲ್ಲಿ Apple Wallet ಸಾರಿಗೆ ಪಾಸ್ ಲಭ್ಯವಿದೆ ಎಂಬುದನ್ನು ನಿಮ್ಮ ಸಾಧನ ಹಂಚಿಕೊಳ್ಳಬಹುದು. ನಿಮ್ಮ Apple ವಾಲೆಟ್ ಚಟುವಟಿಕೆ ಅಥವಾ ಅಂದಾಜು ಸ್ಥಳ ಮಾಹಿತಿಗಳು ನಿಮ್ಮ ಸಾಧನಕ್ಕೆ ತಿಳಿದಿರುತ್ತವೆಯೇ ಹೊರತು Appleಗೆ ತಿಳಿದಿರುವುದಿಲ್ಲ. ಸೆಟ್ಟಿಂಗ್ಸ್ > ವಾಲೆಟ್ ಮತ್ತು Apple Pay ಎಂಬಲ್ಲಿಗೆ ಹೋಗುವ ಮೂಲಕ ನೀವು ಸಂವಹನದ ಆದ್ಯತೆಗಳನ್ನು ಬದಲಾಯಿಸಬಹುದು.
ವೈಯುಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸಲು ಅನ್ವಯವಾಗುವ ಕಾನೂನುಬದ್ಧ ಆಧಾರ
ಸೇವೆಯನ್ನು ಒದಗಿಸಲು ಮತ್ತು ನಮ್ಮ ಕಾನೂನು ಬಾಧ್ಯತೆಗಳನ್ನು ಅನುಸರಿಸಲು ಅಗತ್ಯವಿರುವಂತೆ Apple ಜೊತೆಗಿನ ನಿಮ್ಮ ಒಪ್ಪಂದದ ಕಾರ್ಯಕ್ಷಮತೆಗಾಗಿ ನಾವು ಸಾಮಾನ್ಯವಾಗಿ ನಿಮ್ಮ ವಾಲೆಟ್ ವೈಯಕ್ತಿಕ ಡೇಟವನ್ನು ಪ್ರಕ್ರಿಯೆಗೊಳಿಸುತ್ತೇವೆ. ಸಮ್ಮತಿಯು ಸೂಕ್ತವಾದ ಕಾನೂನುಬದ್ಧ ಆಧಾರವಾಗಿದ್ದಲ್ಲಿ, ನಾವು ಅದನ್ನು ಅನ್ವಯವಾಗುವ ಸ್ಥಳೀಯ ಕಾನೂನುಗಳ ಪ್ರಕಾರ ಪಡೆಯುತ್ತೇವೆ.
ಅನ್ವಯವಾಗುವ ಸ್ಥಳೀಯ ಕಾನೂನುಗಳು ಅನುಮತಿಸಿದಲ್ಲಿ, ನಾವು ಈ ಕೆಳಗಿನ ಮಾಹಿತಿಯನ್ನು ಒಳಗೊಂಡಂತೆ, ಅವುಗಳ ವರ್ಗಗಳನ್ನು ಪ್ರಕ್ರಿಯೆಗೊಳಿಸಲು ನಮ್ಮ ಅಥವಾ ಯಾವುದಾದರೂ ಥರ್ಡ್ ಪಾರ್ಟಿಯ ಕಾನೂನುಬದ್ಧ ಆಸಕ್ತಿಯ ಉದ್ದೇಶಗಳಿಗೆ ಅಗತ್ಯವಾದ ಹಾಗೆ ಈ ಕೆಳಗಿನ ಪ್ರಕಾರದ ವೈಯುಕ್ತಿಕ ಡೇಟವನ್ನು ಸಂಸ್ಕರಿಸುತ್ತೇವೆ:
- ನಿಮ್ಮ ಖಾತೆ, ಉದಾರಹಣೆಗೆ ನಿಮ್ಮ ಖಾತೆ ಸಕ್ರಿಯವಾಗಿದೆಯೇ ಇಲ್ಲವೇ ಇತ್ಯಾದಿ
- ಸಾಧನದ ಬಗೆ, ಸಾಫ್ಟ್‌ವೇರ್ ಆವೃತ್ತಿ, ಹಾಗೂ ಸಾಧನದ ಸೀರಿಯಲ್ ನಂಬರ್‌ನಂತಹ ನಿಮ್ಮ ಸಾಧನ
- ನಿಮ್ಮ ಪಾಸ್ ಮೇಲೆ ತೋರಿಸಲಾದ ಮಾಹಿತಿಯಂತಹ ನಿಮ್ಮ ಪಾಸ್‌ನ ಮಾಹಿತಿ
- ಪಾಸ್‌ಗೆ ಅಪ್‌ಡೇಟ್ ಅನ್ನು ಒದಗಿಸುವ ಅಧಿಕಾರ ಹೊಂದಿರುವ ಥರ್ಡ್ ಪಾರ್ಟಿಯಂತಹ ನಿಮ್ಮ ಪಾಸ್ ವಿತರಕರು
- ವಾಲೆಟ್‌ನ ನಿಮ್ಮ ಬಳಕೆಯು, ಉದಾಹರಣೆಗೆ ನೀವು ಸೇರಿಸಿದ ಪಾಸ್‌ಗಳ ಸಂಖ್ಯೆ ಹಾಗೂ ಪ್ರಕಾರ (ಉದಾಹರಣೆಗೆ, ಹೋಟೆಲ್, ಕಾರ್ಪೊರೇಟ್), ನೀವು ಪಾಸ್ ಅನ್ನು ಸೇರಿಸಿದ್ದೀರೇ ಇಲ್ಲವೇ
- ನಿಮ್ಮ ಸ್ಥಳ
ಈ ಕಾನೂನುಬದ್ಧವಾದ ಆಸಕ್ತಿಗಳು ಇವುಗಳನ್ನು ಒಳಗೊಂಡಿರುತ್ತವೆ:
- ಪಾಸ್‌ಗಳನ್ನು ಸೇರಿಸುವುದು ಮತ್ತು ನಿರ್ವಹಿಸುವುದು
- ನಿಮಗಾಗಿ ಮತ್ತು ಇತರರಿಗಾಗಿ ಸೇವೆಯನ್ನು ಸುಧಾರಿಸಲು ಮತ್ತು ಆಪ್ಟಿಮೈಜ್ ಮಾಡಲು ಸಹಾಯ ಮಾಡುವುದು
- ನಿಮಗೆ ಹೆಚ್ಚು ಸೂಕ್ತವಾಗಿರುವ ಫೀಚರ್‌ಗಳನ್ನು ಕಂಡುಕೊಳ್ಳಲು ನಿಮಗೆ ಸಹಾಯ ಮಾಡುವುದು
- ಆಫರ್‌ಗಳಿಗಾಗಿ ಅರ್ಹತೆಯನ್ನು ಪರಿಶೀಲಿಸುವುದು
- ನಿಮಗೆ ವಾಲೆಟ್ ಹಾಗೂ ಇತರ Apple ಉತ್ಪನ್ನಗಳು, ಸೇವೆಗಳು, ಹಾಗೂ ನಿಮಗೆ ಆಸಕ್ತಿಯಿರಬಹುದಾದ ಆಫರ್‌ಗಳ ಕುರಿತ ಸಂವಹನಗಳನ್ನು ಕಳುಹಿಸುವುದು
- ಮೋಸ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಯುವುದು
ಇತರ ಮಾಹಿತಿ
ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳಂತ ಕಾಂಟ್ಯಾಕ್ಟ್‌ಲೆಸ್ ಪಾವತಿ ಪಾಸ್‌ಗಳ ಬಗೆಗಿನ ಮಾಹಿತಿಯನ್ನು Apple Payಯಲ್ಲಿ ಹಾಗೂ www.apple.com/legal/privacy/data/en/apple-pay ಎಂಬಲ್ಲಿನ ಗೌಪ್ಯತೆಯ ವಿಭಾಗದಲ್ಲಿ ವಿವರಿಸಲಾಗಿದೆ.
ಸಾಮಾನ್ಯವಾಗಿ ವಾಲೆಟ್ ಮತ್ತು ಇತರ Apple ಉತ್ಪನ್ನಗಳು ಹಾಗೂ ಸೇವೆಗಳನ್ನು ಸುಧಾರಿಸಲು ನೋಟಿಫಿಕೇಷನ್‌ಗಳು ಸೇರಿದಂತೆ ವಾಲೆಟ್ ಫೀಚರ್‌ಗಳೊಂದಿಗೆ ನೀವು ಹೇಗೆ ಸಂವಹನ ನಡೆಸುತ್ತೀರಿ ಎಂಬಂತಹ ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸದ ವಾಲೆಟ್ ಡೇಟವನ್ನು ಸೀಮಿತ ಅವಧಿಯವರೆಗೆ ಉಳಿಸಿಕೊಳ್ಳಬಹುದು.
ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.
2025-12-12