ಹವಾಮಾನ ಮತ್ತು ಗೌಪ್ಯತೆ
ನಿಮ್ಮ ಮಾಹಿತಿಯನ್ನು ರಕ್ಷಿಸಲು ಹವಾಮಾನವನ್ನು ವಿನ್ಯಾಸಗೊಳಿಸಲಾಗಿದೆ.
![]()
- ನಿಮ್ಮ ಸ್ಥಳವನ್ನು ಆ್ಯಕ್ಸೆಸ್ ಮಾಡಲು ನೀವು ಹವಾಮಾನ ಆ್ಯಪ್‌ಗೆ ಅನುಮತಿಸಿದರೆ, ಸಂಬಂಧಿತ ಹವಾಮಾನ ಮುನ್ಸೂಚನೆಗಳನ್ನು ಒದಗಿಸಲು ನಿಮ್ಮ ಸ್ಥಳವನ್ನು Appleಗೆ ಕಳುಹಿಸಲಾಗುತ್ತದೆ. ನಿಮ್ಮ ಸ್ಥಳವನ್ನು ನಿಮ್ಮ ಗುರುತಿನೊಂದಿಗೆ ಸಂಯೋಜಿಸಲಾಗುವುದಿಲ್ಲ.
- ನೀವು ಫಾಲೋ ಮಾಡುವ ಸ್ಥಳಕ್ಕೆ ಸಂಬಂಧಿಸಿದ ಮುನ್ಸೂಚನೆಯನ್ನು ನೀವು ವಿನಂತಿಸಿದರೆ, ಆ ಸ್ಥಳಕ್ಕಾಗಿ ಮುನ್ಸೂಚನೆಯನ್ನು ಒದಗಿಸಲು ಆ ಮಾಹಿತಿಯನ್ನು Appleಗೆ ಕಳುಹಿಸಲಾಗುತ್ತದೆ. ಇದನ್ನು ನಿಮ್ಮ ಗುರುತಿನೊಂದಿಗೆ ಸಂಯೋಜಿಸಲಾಗುವುದಿಲ್ಲ.
- ನೀವು ಪ್ರತಿಕೂಲ ಹವಾಮಾನಕ್ಕೆ ಸಂಬಂಧಿಸಿದ ನೋಟಿಫಿಕೇಷನ್‌ಗಳನ್ನು ಸಕ್ರಿಯಗೊಳಿಸಿದರೆ, Apple ಅಂತಹ ನೋಟಿಫಿಕೇಷನ್‌ಗಳ ಪ್ರದೇಶವನ್ನು ನಿಮ್ಮ Apple ಖಾತೆಯೊಂದಿಗೆ ಸಂಯೋಜಿಸಬಹುದು.
ನಿಮ್ಮ ಮಾಹಿತಿಯ ಗೌಪ್ಯತೆ ಮತ್ತು ಭದ್ರತೆಯನ್ನು ರಕ್ಷಿಸುವುದು Appleನಲ್ಲಿರುವ ಪ್ರತಿಯೊಬ್ಬರ ಆದ್ಯತೆಯಾಗಿದೆ. ನಿಮ್ಮ ಅನುಭವವನ್ನು ಉತ್ತಮಗೊಳಿಸಲು ನಮಗೆ ಅಗತ್ಯವಿರುವ ಡೇಟವನ್ನು ಮಾತ್ರ ಸಂಗ್ರಹಿಸಲು ನಾವು ಶ್ರಮಿಸುತ್ತೇವೆ. ನಾವು ಡೇಟವನ್ನು ಸಂಗ್ರಹಿಸಿದಾಗ, ನಾವು ಏನನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ನಮಗೆ ಅದರ ಅಗತ್ಯ ಏಕಿದೆ ಎಂಬುದು ನಿಮಗೆ ತಿಳಿದಿದ್ದರೆ ನೀವು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಅದು ನೆರವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಪ್ರತಿಯೊಂದು Apple ಉತ್ಪನ್ನ ಮತ್ತು ಸೇವೆಯಂತೆ, ಈ ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಹವಾಮಾನ ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಹವಾಮಾನ ಆ್ಯಪ್ ಅನ್ನು ಅರ್ಥಮಾಡಿಕೊಳ್ಳಲು ಮತ್ತು ಸುಧಾರಿಸಲು, ಒಂದು ದಿನದಲ್ಲಿ ನೀವು ಮೊದಲ ಬಾರಿಗೆ ಆ್ಯಪ್ ಅನ್ನು ಬಿಡುಗಡೆ ಮಾಡಿದಾಗ Apple ಸೀಮಿತ ಮಾಹಿತಿಯನ್ನು ಸಂಗ್ರಹಿಸುತ್ತದೆ. ಈ ಮಾಹಿತಿಯು ನಿಮ್ಮ ಗುರುತಿಗೆ ಲಿಂಕ್ ಆಗಿಲ್ಲ.
ನಿಮ್ಮ ಸ್ಥಳವನ್ನು ಆ್ಯಕ್ಸೆಸ್ ಮಾಡಲು ನೀವು ಹವಾಮಾನ ಆ್ಯಪ್‌ಗೆ ಅನುಮತಿಸಿದರೆ, ಸಮಂಜಸವಾಜದ ಹವಾಮಾನ ಮುನ್ಸೂಚನೆಗಳನ್ನು ಒದಗಿಸಲು ನಿಮ್ಮ ಸ್ಥಳವನ್ನು Appleಗೆ ಕಳುಹಿಸಲಾಗುತ್ತದೆ. ನೀವು ಫಾಲೀ ಮಾಡುವ ಸ್ಥಳಕ್ಕೆ ಸಂಬಂಧಿಸಿದ ಮುನ್ಸೂಚನೆಯನ್ನು ನೀವು ವಿನಂತಿಸಿದರೆ, ಆ ಸ್ಥಳಕ್ಕಾಗಿ ಮುನ್ಸೂಚನೆಯನ್ನು ಒದಗಿಸಲು ಆ ಮಾಹಿತಿಯನ್ನು Appleಗೆ ಕಳುಹಿಸಲಾಗುತ್ತದೆ. ಹೆಚ್ಚುವರಿಯಾಗಿ, ಆ್ಯಪ್‌ನಲ್ಲಿ ಈ ಸ್ಥಳಗಳನ್ನು ಲೇಬಲ್ ಮಾಡಲು ಹವಾಮಾನ ಆ್ಯಪ್ ನಿಮ್ಮ ಮನೆ ಮತ್ತು ಕೆಲಸದ ಸ್ಥಳಗಳನ್ನು ಆ್ಯಕ್ಸೆಸ್ ಮಾಡುತ್ತದೆ. ನಿಮ್ಮ ಮನೆ ಹಾಗೂ ಕೆಲಸದ ಸ್ಥಳದ ವಿಳಾಸಗಳನ್ನು ಅಪ್‌ಡೇಟ್ ಮಾಡಲು ನೀವು ಸಂಪರ್ಕ ಆ್ಯಪ್‌ನಲ್ಲಿರುವ ನನ್ನ ಕಾರ್ಡ್ ಅನ್ನು ಬಳಸಬಹುದು. ನೀವು ಯಾವುದೇ ಸಮಯದಲ್ಲಿ ಈ ಲೇಬಲ್‌ಗಳನ್ನು ಆಫ್ ಮಾಡಬಹುದು. ನಿಮ್ಮ iOS ಅಥವಾ iPadOS ಸಾಧನದಲ್ಲಿ, ಸೆಟ್ಟಿಂಗ್ಸ್ > ಆ್ಯಪ್‌ಗಳು > ಹವಾಮಾನ ಎಂಬಲ್ಲಿಗೆ ಹೋಗಿ, ನಂತರ ಮನೆ ಮತ್ತು ಕೆಲಸದ ಸ್ಥಳವನ್ನು ಆಫ್ ಮಾಡಲು ಟ್ಯಾಪ್ ಮಾಡಿ. Macನಲ್ಲಿ, ಹವಾಮಾನ > ಸೆಟ್ಟಿಂಗ್ಸ್ > ಸಾಮಾನ್ಯ ಎಂಬಲ್ಲಿಗೆ ಹೋಗಿ ಹಾಗೂ ಮನೆ ಮತ್ತು ಕೆಲಸದ ಆಯ್ಕೆಯನ್ನು ರದ್ದುಮಾಡಿ. ಮುನ್ಸೂಚನೆಗಳನ್ನು ಒದಗಿಸಲು Apple ಸಂಗ್ರಹಿಸುವ ಮಾಹಿತಿಯು ನಿಮ್ಮ ಗುರುತಿಗೆ ಲಿಂಕ್ ಆಗಿರುವುದಿಲ್ಲ.
ನೀವು ಪ್ರತಿಕೂಲ ಹವಾಮಾನ ಪರಿಸ್ಥಿತಿಯನ್ನು ಸಕ್ರಿಯಗೊಳಿಸಲು ಆರಿಸಿದರೆ, ಲಭ್ಯವಿರುವಾಗ, ಈ ನೋಟಿಫಿಕೇಷನ್‌ಗಳನ್ನು ಪ್ರದೇಶದೊಂದಿಗೆ ಸಕ್ರಿಯಗೊಳಿಸಿದ ಪ್ರತಿಯೊಂದು ಸ್ಥಳಕ್ಕೆ ಅನುಗುಣವಾಗಿ ಹವಾಮಾನ ಆ್ಯಪ್ ಪ್ರತಿಕ್ರಿಯಿಸುತ್ತದೆ. ಪ್ರದೇಶವು ಒಂದು ದೇಶ ಆಗಿರಬಹುದು ಅಥವಾ ಕೆಲವು ದೇಶಗಳು ಆಗಿರಬಹುದು (ಅಂದರೆ ಅಮೆರಿಕ ಮತ್ತು ಕೆನಡಾ), ಪ್ರದೇಶವೆಂದರೆ ಕನಿಷ್ಠ 500,000 ನಿವಾಸಿಗಳು ನೆಲೆಸಿರುವ ಜಾಗವಾಗಿರಬಹುದು. ನೀವು ಅಂತಹ ನೋಟಿಫಿಕೇಷನ್‌ಗಳನ್ನು ಸಕ್ರಿಯಗೊಳಿಸಿರುವ ಪ್ರದೇಶಗಳ ಪಟ್ಟಿಯನ್ನು Appleಗೆ ಕಳುಹಿಸಲಾಗುತ್ತದೆ ಮತ್ತು ನಿಮ್ಮ Apple ಖಾತೆಯೊಂದಿಗೆ ಸಂಯೋಜಿಸಲಾಗುತ್ತದೆ. ಈ ಫೀಚರ್ ಅನ್ನು ಸಕ್ರಿಯಗೊಳಿಸಲು ಮತ್ತು ನಿಮ್ಮ ಸಾಧನಕ್ಕೆ ನೋಟಿಫಿಕೇಷನ್‌ಗಳನ್ನು ಒದಗಿಸಲು Apple ಪ್ರದೇಶಗಳ ಪಟ್ಟಿಯನ್ನು ಬಳಸುತ್ತದೆ. ನಿಮಗೆ ಪ್ರಸ್ತುತವೆನಿಸುವ ನೋಟಿಫಿಕೇಷನ್‌ಗಳನ್ನು ಒದಗಿಸಲು ಹವಾಮಾನ ಆ್ಯಪ್ ನಿಮ್ಮ ಸಾಧನದಲ್ಲಿ ನೀವು ಪ್ರತಿಕೂಲ ಹವಾಮಾನದ ನೋಟಿಫಿಕೇಷನ್‌ಗಳನ್ನು ಸಕ್ರಿಯಗೊಳಿಸಿರುವ ನಿರ್ದಿಷ್ಟ ಸ್ಥಳಗಳನ್ನು ಆಧರಿಸಿ ಪ್ರಾದೇಶಿಕ ನೋಟಿಫಿಕೇಷನ್‌ಗಳನ್ನು ಫಿಲ್ಟರ್ ಮಾಡುತ್ತದೆ.
ಲಭ್ಯವಿರುವಲ್ಲಿ, ನಿಮ್ಮ ಸಂಭಾವ್ಯ ಪ್ರವಾಸದ ತಾಣಗಳಿಗಾಗಿ ತೀವ್ರ ಹವಾಮಾನದ ನೋಟಿಫಿಕೇಷನ್‌ಗಳನ್ನು ಸಕ್ರಿಯಗೊಳಿಸಲು ಸಹ ನೀವು ಆಯ್ಕೆಮಾಡಬಹುದು. ಪ್ರಮುಖ ಸ್ಥಳಗಳು ಮತ್ತು ದಾರಿಗಳನ್ನು ಸಕ್ರಿಯಗೊಳಿಸಿದ್ದರೆ, ನೀವು ಮುಂದಿನ ದಿನಗಳಲ್ಲಿ ಎಲ್ಲಿಗೆ ಪ್ರಯಾಣಿಸಬಹುದು ಎಂಬುದನ್ನು ಊಹಿಸಲು ನಿಮ್ಮ ಸಾಧನವು ಆನ್-ಡಿವೈಸ್ ಪ್ರೊಸೆಸಿಂಗ್ ಅನ್ನು ಬಳಸಬಹುದು. ಹವಾಮಾನ ಆ್ಯಪ್‌ಗೆ ನಿಮ್ಮ ಸ್ಥಳ ಅನುಮತಿಯನ್ನು”ಯಾವಾಗಲೂ” ಎಂಬುದಕ್ಕೆ ಸೆಟ್ ಮಾಡಿದ್ದರೆ ಮತ್ತು ಹವಾಮಾನ ಆ್ಯಪ್ ಸೆಟ್ಟಿಂಗ್ಸ್‌ನಲ್ಲಿ ಸೂಚಿಸಲಾದ ಸ್ಥಳಗಳಿಗಾಗಿ ತೀವ್ರ ಹವಾಮಾನದ ಕುರಿತ ನೋಟಿಫಿಕೇಷನ್‌ಗಳನ್ನು ಸಕ್ರಿಯಗೊಳಿಸಿದ್ದರೆ, ಹವಾಮಾನ ಆ್ಯಪ್ ನಿಮಗೆ ಸೂಕ್ತವಾದ ತೀವ್ರ ಹವಾಮಾನದ ಕುರಿತ ನೋಟಿಫಿಕೇಷನ್‌ಗಳನ್ನು ನೀಡಲು ಆ ಊಹಿಸಲಾದ ಪ್ರವಾಸಿ ತಾಣಗಳನ್ನು ಆ್ಯಕ್ಸೆಸ್ ಮಾಡಬಹುದು ಮತ್ತು ಬಳಸಬಹುದು. ನಿಮ್ಮ ಪ್ರಸ್ತುತ ಸ್ಥಳಗಳಿಗೆ ಪ್ರತಿಕೂಲ ಹವಾಮಾನ ನೋಟಿಫಿಕೇಷನ್‌ಗಳಂತೆ, Apple ನಿಮ್ಮ ಸಂಭಾವ್ಯ ಪ್ರವಾಸಿ ತಾಣಗಳ ಪ್ರದೇಶವನ್ನು ನಿಮ್ಮ Apple ಖಾತೆಯೊಂದಿಗೆ ಸಂಯೋಜಿಸಬಹುದು.
ನಿಮ್ಮ iOS ಮತ್ತು iPadOS ಸಾಧನಗಳಲ್ಲಿ ಇನ್ನಷ್ಟು > ನೋಟಿಫಿಕೇಷನ್‌ಗಳು ಎಂಬುದನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ಪ್ರಸ್ತುತ ಮತ್ತು ಊಹಿಸಲಾದ ಸ್ಥಳಗಳಿಗೆ ಪ್ರತಿಕೂಲ ಹವಾಮಾನದ ಕುರಿತ ನೋಟಿಫಿಕೇಷನ್‌ಗಳನ್ನು ಒಳಗೊಂಡಂತೆ, ಹವಾಮಾನ ಆ್ಯಪ್‌ಗೆ ಸಂಬಂಧಿಸಿದ ನೋಟಿಫಿಕೇಷನ್‌ಗಳನ್ನು ನೀವು ನಿರ್ವಹಿಸಬಹುದು. Macನಲ್ಲಿ, ಹವಾಮಾನ > ಸೆಟ್ಟಿಂಗ್ಸ್ > ನೋಟಿಫಿಕೇಷನ್‌ಗಳು ಎಂಬಲ್ಲಿಗೆ ಹೋಗಿ.
ಹೆಚ್ಚುವರಿಯಾಗಿ, ನೀವು ವಿಜೆಟ್ ಸ್ಮಾರ್ಟ್ ಸ್ಟ್ಯಾಕ್‌ಗಳನ್ನು ಬಳಸುತ್ತಿದ್ದರೆ ಮತ್ತು ವಿಜೆಟ್ ಸಲಹೆಗಳನ್ನು ಸಕ್ರಿಯಗೊಳಿಸಿದ್ದರೆ, ಹವಾಮಾನ ಆ್ಯಪ್ ನಿಮ್ಮ ಸಂಭಾವ್ಯ ಪ್ರವಾಸಿ ತಾಣಗಳನ್ನು ನಿಮ್ಮ ಹೋಮ್ ಸ್ಕ್ರೀನ್‌ನಲ್ಲಿ ಮತ್ತು ಇಂದಿನ ವ್ಯೂನಲ್ಲಿ ಡಿಸ್‌ಪ್ಲೇ ಮಾಡಲು ಹವಾಮಾನ ವಿಜೆಟ್ ಅನ್ನು ಕೊಡುಗೆ ನೀಡಬಹುದು. ಹವಾಮಾನ ಆ್ಯಪ್ ಸ್ಥಳ ಅನುಮತಿಯನ್ನು “ಯಾವಾಗಲೂ” ಎಂಬುದಕ್ಕೆ ಸೆಟ್ ಮಾಡಿದಾಗ ಮತ್ತು ಸ್ಥಳ ಸೇವೆಗಳ ಸೆಟ್ಟಿಂಗ್ಸ್‌ನಲ್ಲಿ ಪ್ರಮುಖ ಸ್ಥಳಗಳು ಮತ್ತು ದಾರಿಗಳನ್ನು ಸಕ್ರಿಯಗೊಳಿಸಿದಾಗ ಇದು ಸಂಭವಿಸಬಹುದು. ನಿಮ್ಮ ಸಾಧನವು ನಿಮಗೆ ವಿಜೆಟ್ ಅನ್ನು ಡಿಸ್‌ಪ್ಲೇ ಮಾಡಬೇಕೆ ಅಥವಾ ಬೇಡವೆ ಎಂಬುದನ್ನು ನಿರ್ಧರಿಸುತ್ತದೆ.
ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತಾ ನೀತಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.
2025-12-12