Wi-Fi ಕರೆ ಮಾಡುವಿಕೆ & ಗೌಪ್ಯತೆ

ನಿಮ್ಮ ಮಾಹಿತಿಯನ್ನು ರಕ್ಷಿಸಲು ಮತ್ತು ನೀವು ಯಾವುದನ್ನು ಹಂಚಿಕೊಳ್ಳಬೇಕು ಎಂಬುದನ್ನು ಆಯ್ಕೆ ಮಾಡಲು ನಿಮಗೆ ಅನುವು ಮಾಡಿಕೊಡಲು Wi-Fi ಕರೆ ಮಾಡುವಿಕೆಯನ್ನು ವಿನ್ಯಾಸಗೊಳಿಸಲಾಗಿದೆ.


ನಿರ್ದಿಷ್ಟ ನೆಟ್‌ವರ್ಕ್ ಪೂರೈಕೆದಾರರು ನಿಮ್ಮ iOS ಅಥವಾ watchOS ಸಾಧನಗಳು ಹಾಗೂ ನಿಮ್ಮ Mac ಕಂಪ್ಯೂಟರ್‌ಗಳಲ್ಲಿ Wi-Fi (ಮತ್ತು/ ಅಥವಾ Wi-Fi ಸಂಕೇತವು ದುರ್ಬಲವಾಗಿದ್ದಾಗ ಅಥವಾ ಲಭ್ಯವಿಲ್ಲದೆ ಇದ್ದಾಗ iPadನ Wi-Fi + Cellular ಮಾಡಲ್‌ಗಳಲ್ಲಿ ಮೊಬೈಲ್ ಸೇವೆ) ಮೂಲಕ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಅನುಮತಿಸುತ್ತಾರೆ.

ನೀವು Wi-Fi ಕರೆಯನ್ನು ಸಕ್ರಿಯಗೊಳಿಸಿದರೆ ಮತ್ತು Wi-Fi ಕರೆಯನ್ನು ಸಕ್ರಿಯಗೊಳಿಸಿರುವ ಸಾಧನದಿಂದ Wi-Fi ನೆಟ್‌ವರ್ಕ್‌ಗೆ ಕನೆಕ್ಟ್ ಮಾಡಿದರೆ, ನಿಮ್ಮ IP ವಿಳಾಸವನ್ನು ಆಧರಿಸಿ (ಅಥವಾ ಅನ್ವಯಿಸಿದಲ್ಲಿ ಮೊಬೈಲ್ ಸೇವೆ ನೆಟ್‌ವರ್ಕ್) ನಿಮ್ಮ ನೆಟ್‌ವರ್ಕ್ ಕನೆಕ್ಟ್ ಆಗಿರುವ ದೇಶದ ಮಾಹಿತಿಯನ್ನು ನಿಮ್ಮ ನೆಟ್‌ವರ್ಕ್ ಪೂರೈಕೆದಾರರಿಗೆ ಬಿಲ್ಲಿಂಗ್ ಅಥವಾ ಸೇವಾ ಲಭ್ಯತೆಯ ಉದ್ದೇಶಗಳಿಗಾಗಿ ಕಳುಹಿಸಬಹುದು. ನೀವು ಈ ಮಾಹಿತಿಯನ್ನು ನಿಮ್ಮ ನೆಟ್‌ವರ್ಕ್ ಪೂರೈಕೆದಾರರೊಂದಿಗೆ ಹಂಚಿಕೊಳ್ಳಲು ಬಯಸದಿದ್ದರೆ, ಸೆಟ್ಟಿಂಗ್ಸ್ > ಆ್ಯಪ್‌ಗಳು > ಫೋನ್ ಎಂಬುದಕ್ಕೆ ಹೋಗಿ, “ಈ iPhoneನಲ್ಲಿ Wi-Fi ಕರೆಗಳು” ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ ಮತ್ತು “ಇತರೆ ಸಾಧನಗಳಿಗೆ Wi-Fi ಕರೆಗಳನ್ನು ಸೇರಿಸಿ” ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡುವ ಮೂಲಕ, ನಿಮ್ಮ iPhone ಮತ್ತು ನಿಮ್ಮ ಪೇರ್ ಮಾಡಲಾದ Apple Watch ಸೇರಿದಂತೆ ನಿಮ್ಮ ಇತರೆ ಸಾಧನಗಳಿಗೆ ನೀವು Wi-Fi ಕರೆಗಳನ್ನು ಆಫ್ ಮಾಡಬಹುದು. Wi-Fi ಕರೆಗಳನ್ನು ಸಕ್ರಿಯಗೊಳಿಸಿರುವ ನಿಮ್ಮ ಇತರೆ ಸಾಧನಗಳಲ್ಲಿ Wi-Fi ಕರೆಗಳನ್ನು ಆಫ್ ಮಾಡಲು, ನಿಮ್ಮ iPhoneನಲ್ಲಿ ಸೆಟ್ಟಿಂಗ್ಸ್ > ಆ್ಯಪ್‌ಗಳು > ಫೋನ್ > ಇತರೆ ಸಾಧನಗಳಲ್ಲಿ ಕರೆಗಳು ಎಂಬುದಕ್ಕೆ ಹೋಗಿ, ಮತ್ತು “ಇತರೆ ಸಾಧನಗಳಲ್ಲಿ ಕರೆಗಳನ್ನು ಅನುಮತಿಸಿ” ಎಂಬುದನ್ನು ಆಫ್ ಮಾಡಲು ಟ್ಯಾಪ್ ಮಾಡಿ, ನಂತರ ಸಾಧನಗಳ ಪಟ್ಟಿಯಲ್ಲಿ, ಸಾಧನಗಳನ್ನು ಪ್ರತ್ಯೇಕವಾಗಿ ಆಫ್ ಮಾಡಲು ಟ್ಯಾಪ್ ಮಾಡಿ.

Wi-Fi ಅಥವಾ ಮೊಬೈಲ್ ಸೇವೆಯ ಮೂಲಕ ನಿಮ್ಮ ನೆಟ್‌ವರ್ಕ್ ಪೂರೈಕೆದಾರರು ಸಣ್ಣ ಕೋಡ್ ಕರೆಗಳನ್ನು ಪೂರ್ಣಗೊಳಿಸಲು (ಸಾರ್ವಜನಿಕ ಸೇವೆಗಳಿಗೆ ಆ್ಯಕ್ಸೆಸ್ ಒದಗಿಸುವ ಸಂಕ್ಷಿಪ್ತ ಸಂಖ್ಯೆಗಳಿಗೆ ಕರೆಗಳು), ಕರೆಯನ್ನು ಸೂಕ್ತವಾಗಿ ರೂಟ್ ಮಾಡಲು ನಿಮ್ಮ ನೆಟ್‌ವರ್ಕ್ ಪೂರೈಕೆದಾರರಿಗೆ ಕರೆಯನ್ನು ಮಾಡಿದ ನಗರವನ್ನು Apple ಒದಗಿಸಬೇಕು ಸಣ್ಣ ಕೋಡ್ ಕರೆಗಳನ್ನು ಮಾಡುವಾಗ ನೀವು ಕರೆ ಮಾಡುವ ನಗರವನ್ನು ನಿಮ್ಮ ನೆಟ್‌ವರ್ಕ್ ಪೂರೈಕೆದಾರರ ಜೊತೆಗೆ ಹಂಚಿಕೊಳ್ಳಲು ಇಷ್ಟಪಡದೆ ಇದ್ದಾಗ, ನೀವು ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು > ಸಿಸ್ಟಂ ಸೇವೆಗಳು ಎಂಬಲ್ಲಿಗೆ ಹೋಗುವ ಮೂಲಕ Wi-Fi ಕರೆಯನ್ನು ಆಫ್ ಮಾಡಲು ಟ್ಯಾಪ್ ಮಾಡಿ iOS ಅಥವಾ watchOS ಸಾಧನದಲ್ಲಿ Wi-Fi ಕರೆಗಳಿಗೆ ಸ್ಥಳ ಸೇವೆಗಳನ್ನು ನೀವು ಆಫ್ ಮಾಡಬಹುದು. ಸಿಸ್ಟಂ ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು ಎಂಬುದಕ್ಕೆ ಹೋಗಿ, ಸಿಸ್ಟಂ ಸೇವೆಗಳ ಪಕ್ಕದಲ್ಲಿನ ‘ವಿವರಗಳು’ ಎಂಬುದನ್ನು ಕ್ಲಿಕ್ ಮಾಡಿದ ನಂತರ, Wi-Fi ಕರೆಯನ್ನು ಆಫ್ ಮಾಡುವ ಮೂಲಕ ನಿಮ್ಮ Macನಲ್ಲಿ Wi-Fi ಕರೆಗೆ ಸ್ಥಳ ಸೇವೆಗಳನ್ನು ನೀವು ಆಫ್ ಮಾಡಬಹುದು. ನೀವು Wi-Fi ಕರೆಗೆ ಸ್ಥಳ ಸೇವೆಗಳನ್ನು ಆಫ್ ಮಾಡಿದರೆ, ನೀವು Wi-Fi ಕರೆಗಾಗಿ ಶಾರ್ಟ್ ಕೋಡ್ ಸಂಖ್ಯೆಯನ್ನು ಡಯಲ್ ಮಾಡಿದಾಗ, ನಿಮ್ಮ ಸಾಧನಕ್ಕೆ ನೀವಿರುವ ನಗರವನ್ನು ನಿರ್ಧರಿಸಲು ಅಥವಾ ನಿಮ್ಮ ನೆಟ್‌ವರ್ಕ್ ಪೂರೈಕೆದಾರರಿಗೆ ಕಳುಹಿಸಲು ಸಾಧ್ಯವಾಗುವುದಿಲ್ಲ, ಇದರ ಪರಿಣಾಮವಾಗಿ ನಿಮ್ಮ ನೆಟ್‌ವರ್ಕ್ ಪೂರೈಕೆದಾರಿಗೆ ನಿಮ್ಮ ಕರೆಯನ್ನು ಸರಿಯಾಗಿ ರೂಟ್ ಮಾಡಲು ಅಥವಾ ಕನೆಕ್ಟ್ ಮಾಡಲು ಸಾಧ್ಯವಾಗದಿರಬಹುದು.

ನಿಮ್ಮ iPhoneನಲ್ಲಿ ತುರ್ತು ಕರೆಗಳನ್ನು ಲಭ್ಯವಿದ್ದರೆ ಮೊಬೈಲ್ ಸೇವೆಯ ಮೂಲಕ ರೂಟ್ ಮಾಡಲಾಗುತ್ತದೆ. ಮೊಬೈಲ್ ಸೇವೆ ಲಭ್ಯವಿಲ್ಲದ ಸಂದರ್ಭದಲ್ಲಿ, ನೀವು Wi-Fi ಕರೆಯನ್ನು ಸಕ್ರಿಯಗೊಳಿಸಿದಾಗ, ತುರ್ತು ಕರೆಗಳನ್ನು Wi-Fi ಮೂಲಕ ಮಾಡಬಹುದು, ನೀವು ಸ್ಥಳ ಸೇವೆಗಳನ್ನು ಸಕ್ರಿಯಗೊಳಿಸಿದ್ದರೂ, ಇಲ್ಲದಿದ್ದರೂ ಪ್ರತಿಕ್ರಿಯೆಯ ಪ್ರಯತ್ನಗಳಿಗೆ ಸಹಾಯ ಮಾಡಲು ತುರ್ತು ಕರೆ ಮಾಡಿದಾಗ ನಿಮ್ಮ ಸಾಧನದ ಸ್ಥಳ ಮಾಹಿತಿಯನ್ನು ಬಳಸಿಕೊಳ್ಳಬಹುದು. ಆದರೂ, ತುರ್ತು ಸೇವೆಗಳನ್ನು ರೂಟ್ ಮಾಡುವ ಉದ್ದೇಶಕ್ಕಾಗಿ ನಿಮ್ಮ ನೆಟ್‌ವರ್ಕ್ ಪೂರೈಕೆದಾರರಿಗೆ ನೀವು ಒದಗಿಸುವ ನಿಮ್ಮ ಬಿಲ್ಲಿಂಗ್ ವಿಳಾಸ ಅಥವಾ ಇತರ ವಿಳಾಸಗಳನ್ನು ನಿಮ್ಮ ನೆಟ್‌ವರ್ಕ್ ಪೂರೈಕೆದಾರರು ಆರಿಸಿಕೊಳ್ಳಬಹುದು. ನಿಮ್ಮ iOS ಸಾಧನಗಳ ಸೆಟ್ಟಿಂಗ್ಸ್‌ನಲ್ಲಿ ಮತ್ತು ನಿಮ್ಮ Macನಲ್ಲಿ FaceTime ಸೆಟ್ಟಿಂಗ್ಸ್‌ನಲ್ಲಿ ನೆಟ್‌ವರ್ಕ್ ಪೂರೈಕೆದಾರರು ನಿಮ್ಮ ವಿಳಾಸದ ಮಾಹಿತಿಯನ್ನು ನೀವು ಅಪ್‌ಡೇಟ್ ಮಾಡಬಹುದು. ನೀವು ಈ ಮಾಹಿತಿಯನ್ನು ಸಕಾಲಿಕವಾಗಿ ಇಡಬೇಕಾಗುತ್ತದೆ. ಹಾಗೆ ಮಾಡಲು ಸಾಧ್ಯವಾಗದೆ ಇದ್ದಲ್ಲಿ, ತುರ್ತು ಸೇವೆಗಳನ್ನು ಸೂಕ್ತವಾಗಿ ನಿಮ್ಮ ಭೌತಿಕ ಸ್ಥಳಕ್ಕೆ ರೂಟ್ ಮಾಡಲು ಅಡ್ಡಿಯಾಗಬಹುದು. ಸ್ಥಳದ ವಿಶ್ವಾಸಾರ್ಹತೆ ಕಾರಣಗಳಿಗಾಗಿ, ತುರ್ತು ಕರೆಗಳನ್ನು ಸಾಂಪ್ರದಾಯಿಕ ಮೊಬೈಲ್ ಸೇವೆ ಅಥವಾ ಸ್ಥಿರ ದೂರವಾಣಿ ಸೇವೆಗಳನ್ನು ಮಾಡುವುದು ಆದ್ಯತೆಯಾಗಬೇಕು, ಅಂತಹ ಕರೆಗಳಿಗೆ Wi-Fi ಕರೆಗಳ ಪೀಚರ್‌ಗಳನ್ನು ಕೊನೆಯ ಆಯ್ಕೆಯಾಗಿ ಮಾತ್ರ ಬಳಸಿಕೊಳ್ಳಿ.

Wi-Fi ಕರೆಯ ಕುರಿತು ಹೆಚ್ಚಿನ ಮಾಹಿತಿಗೆ, ನಿಮ್ಮ ನೆಟ್‌ವರ್ಕ್ ಪೂರೈಕೆದಾರರ ನಿಯಮಗಳು, ಗೌಪ್ಯತೆಯ ನೀತಿ ಮತ್ತು ಅಭ್ಯಾಸಗಳನ್ನು ಓದಿ. ಎಲ್ಲಾ ಸಮಯದಲ್ಲೂ, Apple ಸಂಗ್ರಹಿಸಿದ ಮಾಹಿತಿಯನ್ನು Appleನ ಗೌಪ್ಯತೆ ನೀತಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ, ಅದನ್ನು ನೀವು www.apple.com/in/privacy ಎಂಬಲ್ಲಿ ನೋಡಬಹುದು.

2025-12-12